nammatumakuru

    Subscribe to Updates

    Get the latest creative news from FooBar about art, design and business.

    What's Hot

    ನಾಡಪ್ರಭು ಕೆಂಪೇಗೌಡರದು ಜಾತ್ಯತೀತ ಆಡಳಿತ: ಶಾಸಕ ಎಂ.ಟಿ.ಕೃಷ್ಣಪ್ಪ

    June 29, 2026

    ಸಾರ್ವಜನಿಕ ದೂರು ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಕರ್ತವ್ಯಲೋಪ | ಹೆಗ್ಗರೆ ಗ್ರಾ.ಪಂ. ಪಿಡಿಒ ಅಮಾನತು

    June 29, 2026

    ತುಮಕೂರು: ಜಿಲ್ಲಾ ಪತ್ರಕರ್ತರ ಸಂಘದಿಂದ ಶ್ರವಣ ತಪಾಸಣಾ ಶಿಬಿರ

    June 29, 2026
    Facebook Twitter Instagram
    ಟ್ರೆಂಡಿಂಗ್
    • ನಾಡಪ್ರಭು ಕೆಂಪೇಗೌಡರದು ಜಾತ್ಯತೀತ ಆಡಳಿತ: ಶಾಸಕ ಎಂ.ಟಿ.ಕೃಷ್ಣಪ್ಪ
    • ಸಾರ್ವಜನಿಕ ದೂರು ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಕರ್ತವ್ಯಲೋಪ | ಹೆಗ್ಗರೆ ಗ್ರಾ.ಪಂ. ಪಿಡಿಒ ಅಮಾನತು
    • ತುಮಕೂರು: ಜಿಲ್ಲಾ ಪತ್ರಕರ್ತರ ಸಂಘದಿಂದ ಶ್ರವಣ ತಪಾಸಣಾ ಶಿಬಿರ
    • ಕೊರಟಗೆರೆ: 10,016 ಮಕ್ಕಳಿಗೆ ಪೋಲಿಯೋ ಲಸಿಕಾ ಗುರಿ: ಡಾ.ಜ್ಯೋತ್ಸ್ನಾ ರೆಡ್ಡಿ ಕರೆ
    • ಜುಲೈ 3ರಂದು ‘ದಲಿತ ಜನಾಗ್ರಹ ಸಮಾವೇಶ’: ಸರಗೂರು ಪ್ರವಾಸಿ ಮಂದಿರದಲ್ಲಿ ಪೋಸ್ಟರ್ ಬಿಡುಗಡೆ
    • ಮಧುಗಿರಿ: ಸಿದ್ಧಾರ್ಥ ವಸತಿ ಪ್ರೌಢಶಾಲೆಯಲ್ಲಿ 2006ರ ಬ್ಯಾಚ್ ಹಳೆಯ ವಿದ್ಯಾರ್ಥಿಗಳಿಂದ ಉಚಿತ ಸಮವಸ್ತ್ರ ವಿತರಣೆ
    • SIR: ಅರ್ಹ ನಾಗರಿಕರ ಮತದಾನದ ಹಕ್ಕು ಕಸಿದುಕೊಳ್ಳುವ ಅಪಾಯ: ಹೆಚ್.ವಿ. ವಾಸು ಆತಂಕ
    • ರೈತರು ಭೂಮಿ ಹೊಂದುವುದಷ್ಟೇ ಅಲ್ಲ, ಕಾನೂನು ಅರಿವು ಬೆಳೆಸಿಕೊಳ್ಳುವುದು ಮುಖ್ಯ: ನಿವೃತ್ತ ಕೆಎಎಸ್‌ ಅಧಿಕಾರಿ ಕೆ.ಎನ್.ಲಿಂಗಪ್ಪ ಪ್ರತಿಪಾದನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೋಮುಪ್ರಚೋದನೆ ವಿರುದ್ಧ ಬೃಹತ್ ಸಮಾವೇಶ: “ಬಿಜೆಪಿ ಕೋಮುಪ್ರಚೋದನೆ ನಿಲ್ಲಿಸಬೇಕು”
    ಗುಬ್ಬಿ May 19, 2022

    ಕೋಮುಪ್ರಚೋದನೆ ವಿರುದ್ಧ ಬೃಹತ್ ಸಮಾವೇಶ: “ಬಿಜೆಪಿ ಕೋಮುಪ್ರಚೋದನೆ ನಿಲ್ಲಿಸಬೇಕು”

    By adminMay 19, 2022No Comments3 Mins Read
    tumakuru congress

    Provided by
    Provided by

    ಗುಬ್ಬಿ: ಬಿಜೆಪಿ ಪಕ್ಷ ಕೋಮುಪ್ರಚೋದನೆ ಸೃಷ್ಟಿಸುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಅತೀಕ್ ಅಹಮದ್  ಒತ್ತಾಯಿಸಿದ್ದಾರೆ.

    ರಾಜ್ಯ ಮತ್ತು ಕೇಂದ್ರ ದಲ್ಲಿರುವ ಬಿಜೆಪಿ ಸರ್ಕಾರ ನಿತ್ಯ ವು ಕೋಮುಪ್ರಚೋದನೆ ನೀಡುವ ಮೂಲಕ ಗಲಭೆ ಸೃಷ್ಟಿಸುವುದು ನಿಲ್ಲಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.  

    ಗುಬ್ಬಿ ನಗರದ ಪ್ರವಾಸಿ ಮಂದಿರದಲ್ಲಿ ದಿ.22ರಂದು ತುಮಕೂರಿನ ಗಾಜಿನಮನೆಯಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಸಮಾವೇಶ ದ ಕುರಿತು ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುಪ್ರಚೋದನೆ ನೀಡುವ ಮೂಲಕ ರಾಜ್ಯದಲ್ಲಿ ಶಾಂತಿ ಗಲಭೆ ಉಂಟು ಮಾಡುವ ಬದಲು ರಾಜ್ಯ ದ ಅಭಿವೃದ್ಧಿ ಗೆ ಹೆಚ್ಚಿನ ಒತ್ತು ನೀಡುವ ಕಡೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಮನಹರಿಸಲಿ  ಎಂದರು.

    ಕೇವಲ ಒಂದು ಸಮುದಾಯವನ್ನು ರಾಜ್ಯದ ಲ್ಲಿ ಶೋಷಣೆಗೆ ಒಳಗಾಗುವಂತೆ ಮಾಡಿದರೆ, ಅದು ರಾಜ್ಯದ ಅಭಿವೃದ್ಧಿ ಗೆ ಮಾರಕವಾಗುತ್ತದೆ. ಇಂದು ನಿತ್ಯವೂ  ಒಂದಲ್ಲ ಒಂದು ರೀತಿಯಲ್ಲಿ ಮುಸ್ಲಿಂ. ದಲಿತ. ಕ್ರೈಸ್ತ. ಹಾಗೂ ಇತರೆ ಹಿಂದುಳಿದವರು ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವ ಬಹಳ ದುರಾದೃಷ್ಟಕರ ಸಂಗತಿಯಾಗಿದೆ ಎಂದರು.


    Provided by
    Provided by

    ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ದಿ.22ರಂದು ತುಮಕೂರು ಡಿ.ಸಿ.ಕಚೇರಿಯ ಸಮೀಪದ ಗಾಜೀನ ಮನೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಾವೇಶ ಆಯೋಜನೆ ಮಾಡಿರುವುದರಿಂದ ಈ ಸಮಾವೇಶಕ್ಕೆ. ರಾಜ್ಯದ ನಾಯಕರಾದ ಸಿದ್ದರಾಮಯ್ಯ. ಡಿ.ಕೆ.ಶಿವಕುಮಾರ್. ಡಾ.ಜಿ.ಪರಮೇಶ್ವರ್. ಕೆ.ಎನ್.ರಾಜಣ್ಣ ಹಾಗೂ ಹಿರಿಯ ನಾಯಕರು. ಪಕ್ಷದ ಶಾಸಕರು.ವಿಧಾನ ಪರಿಷತ್ ಸದಸ್ಯರು. ಇನ್ನೂ ಅನೇಕ ಗಣ್ಯರು ಭಾಗವಹಿಸುತ್ತಿದ್ದು, ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಅಲ್ಪಸಂಖ್ಯಾತ ಬಂಧುಗಳು  ಸೇರಿ ಸುಮಾರು ಈ ಸಮಾವೇಶಕ್ಕೆ  20 ಸಾವಿರಕ್ಕೂ  ಹೆಚ್ಚಿನ ಸಂಖ್ಯೆಯಲ್ಲಿ  ಜನತೆ ಭಾಗವಹಿಸುವ ನಿರೀಕ್ಷೆ ಇದೆ. ಈ ಮೂಲಕ ಸಮಾವೇಶ ದ ಯಶಸ್ವಿ ಗೆ ಗುಬ್ಬಿ ತಾಲ್ಲೂಕಿನ ಅಲ್ಪಸಂಖ್ಯಾತ ಬಂಧುಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

     ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಯ್ಯ ಮಾತನಾಡಿ, ಈ ಸಮಾವೇಶವು ಅಲ್ಪಸಂಖ್ಯಾತರ ಅಭಿವೃದ್ಧಿ ಗೆ ಹೆಚ್ಚಿನ ಒತ್ತುನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಲಿ ಈ ಸಮಾವೇಶಕ್ಕೆ ಜಿಲ್ಲಾ ಎಲ್ಲಾ ಗ್ರಾಮಗಳ ಅಲ್ಪಸಂಖ್ಯಾತ ಸಮುದಾಯದವರು ಭಾಗಿಯಾಗಲಿ ಎಂದು ತಿಳಿಸಿದರು.

    ಮುಖಂಡ ಸಲೀಂ ಪಾಷ ಮಾತನಾಡಿ, ಇಂದು ರಾಜ್ಯ ದಲ್ಲಿ ಮುಸ್ಲಿಂ ಸಮುದಾಯವನ್ನು ಸರ್ಕಾರ ಕಡೆಗಣಿಸುತ್ತಿದೆ. ನಮಗೆ ಸರಿಯಾಗಿ ರಾಜಕೀಯ ಪ್ರತಿನಿಧ್ಯ ವಿಲ್ಲ. ಮುಸ್ಲಿಂ ಸಮಾಜದಲ್ಲಿ ಸಂಘಟನೆ ಕೊರತೆ ಕಾಣುತ್ತಿರುವುದೇ  ಇಂದು ನಡೆಯುತ್ತಿರುವ ದೌರ್ಜನ್ಯಗಳ ನೈಜ ಉದಾಹರಣೆ ಯಾಗಿವೆ. ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ 30 ಕೋಟಿ ಇದ್ದರೂ ಸಹ ನಮಗೆ ರಾಜಕೀಯವಾಗಿ. ಸಾಮಾಜಿಕವಾಗಿ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ವಾಗದಿರುವುದು ನಮ್ಮ ದೌರ್ಭಾಗ್ಯ ವಾಗಿದೆ. ರಾಜ್ಯ ದಲ್ಲಿ ವೀರಶೈವ ಸಂಘಟನೆ ಇರುವಂತೆ   ನಮ್ಮರಾಜ್ಯದಲ್ಲಿ  ಮುಸ್ಲಿಂ ಸಂಘಟನೆ ಇಲ್ಲ ನಮ್ಮನ್ನು ಅಲ್ಪಸಂಖ್ಯಾತ ರೆಂದು ಗುರುತಿಸಿದ್ದು ನಾವು ಎಲ್ಲಾ ರೀತಿಯಲ್ಲೂ ಸಹ ಹಿಂದುಳಿದ ಸಮುದಾಯವಾಗಿದ್ದೇವೆ ಎಂದರು.

    ಸರ್ಕಾರ ಸ್ವಚ್ಛ ಭಾರತವೆಂಬ ಧ್ಯೇಯ ವಾಕ್ಯದಂತೆ ಭೂಮಿ ಮೇಲಿರುವ ಕಸ ತೆಗೆದರೆ ಸಾಲದು ಮನಸ್ಸಿನಲ್ಲಿರು ಕಸ ಸ್ವಚ್ಛ ಮಾಡಿದರೆ ಮಾತ್ರ  ಅದರಿಂದ ಸಾರ್ಥಕತೆ ಹೊಂದಲು ಸಾಧ್ಯ ವಿದೆ ಎಂದು ಅವರು ಅಭಿಪ್ರಾಯ ಪಟ್ಟರು.

    ಕಾಂಗ್ರೆಸ್ ಮುಖಂಡ ಹೊನ್ನಗಿರಿ ಗೌಡ ಮಾತನಾಡಿ, ಅಲ್ಪಸಂಖ್ಯಾತರ ಮೇಲೆ  ದೌರ್ಜನ್ಯ ಗಳು ನಡೆದಾಗ ಕಾಂಗ್ರೆಸ್ ಮುಖಂಡರು ಧಾವಿಸುವ ಮೂಲಕ ಅಲ್ಪಸಂಖ್ಯಾತ ಜೊತೆಗೆ ನಾವೀದ್ದೇವೆ ಎಂಬ ಸಂದೇಶ ಸಾರುವ  ಸಮಾವೇಶವಾಗಬೇಕು ಪ್ರತಿ ಜಿಲ್ಲೆ ಗೆ ಒಬ್ಬ ನಾಯಕರನ್ನು ನೇಮಿಸುವ ಮೂಲಕ ಪ್ರತಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮೇಲೆ ಯಾವುದೇ ಗಲಾಟೆಗಳು ನಡೆದರೆ ಕಾಂಗ್ರೆಸ್ ನಾಯಕರು ತಕ್ಷಣವೇ ಸ್ಪಂದಿಸುವ ನಿಟ್ಟಿನಲ್ಲಿ ಮುಂದಾಗುವಂತೆ ಈ ಸಮಾವೇಶದಲ್ಲಿ ರಾಜ್ಯದ ನಾಯಕರು ಬಹಿರಂಗವಾಗಿ ತಿಳಿಸಬೇಕಿದೆ.

    ಕಾಂಗ್ರೆಸ್ ಸರ್ಕಾರ ದಲ್ಲಿ ಮಾತ್ರವೇ ಅಲ್ಪಸಂಖ್ಯಾತರಿಗೆ ರಾಜಕೀಯ ಪ್ರತಿನಿಧ್ಯ   ದೊರೆಯಲು ಸಾಧ್ಯ. ಜೆಡಿಎಸ್ ಪಕ್ಷ ಒಬ್ಬ ರಿಗೆ ಮಾತ್ರ ಸಚಿವ ಸ್ಥಾನ ನೀಡಿದರೆ, ಬಿಜೆಪಿ ಪಕ್ಷ ಯಾರಿಗೂ ಸಹ ರಾಜಕೀಯ ಸ್ಥಾನ ಮಾನ ನೀಡುವುದಿಲ್ಲ ಕಾಂಗ್ರೆಸ್ ಪಕ್ಷ ಮಾತ್ರ ಅಲ್ಪಸಂಖ್ಯಾತರ ಪರ ಹೋರಾಟ ಮಾಡುವ ಪಕ್ಷ ವಾಗಿದೆ ಎಂದರು.

    ರಾಜ್ಯ ದಲ್ಲಿ ನಡೆಯುವ ಕೋಮುಗಲಭೆಗಳನ್ನು ತಡೆಯುವಲ್ಲಿ ಸರ್ಕಾರ ಮುಂದಾಗಬೇಕು ಜೊತೆಗೆ ಮುಸ್ಲಿಂ ಸಮಾಜದಲ್ಲಿ ಕೆಲವು ಯುವಕರು ಯಾವುದೇ ಪ್ರಚೋದನೆ ನೀಡುವ ವಿಡಿಯೋ ಗಳನ್ನು ಮೊಬೈಲ್ ನಲ್ಲಿ ಚಿತ್ರಿಕರಣ ಮಾಡುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದನ್ನು ತಡೆಯುವಲ್ಲಿ ಮುಸ್ಲಿಂ ಮುಖಂಡರು ಹೆಚ್ಚಿನ ನಿಗಾವಹಿಸಬೇಕು ಎಂದು ಸಲಹೆ ನೀಡಿದರು. ಇನ್ನೂ ಈ ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ಭಾಗಗಳಿಂದ ಹೆಚ್ಚಿನ ರೀತಿಯಲ್ಲಿ ಜನತೆ ಭಾಗವಹಿಸುವಂತೆ ಕರೆ ನೀಡಿದರು.

    ಈ ವೇಳೆಯಲ್ಲಿ ಪ.ಪಂ.ಸದಸ್ಯ ಸಾದಿಕ್, ಗುಬ್ಬಿ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹಮದ್ ರಫಿ, ನಗರ ಅಧ್ಯಕ್ಷ ಶಿವನಂದ್, ಜಿ.ವಿ.ಮಂಜುನಾಥ್, ಸೌದ್ ಕುನ್ನಾಲ.ರಾಜಣ್ಣ ಹಾಗೂ ಇತರ ಮುಖಂಡರು ಹಾಜರಿದ್ದರು.

    ವರದಿ: ಮಂಜುನಾಥ್, ಗುಬ್ಬಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ಬಿಡದಿಯಲ್ಲಿ ಟೌನ್ ಶಿಪ್ ನಿರ್ಮಾಣದಲ್ಲಿ ಕಾಂಗ್ರೆಸ್ ಪಾಲುದಾರಿಕೆ: ಶಾಸಕರ ಎಂ.ಟಿ.ಕೃಷ್ಣಪ್ಪ ಆರೋಪ

    June 25, 2026

    ಗುಬ್ಬಿ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಾ.ವಿ.ಜಿ.ಕುಮಾರ್

    June 19, 2026

    ಚಿಲ್ಲರೆಗಳಿಗೆ ನಾನು ಹೆದರುವ ಮಗನೇ ಅಲ್ಲ ಕೀಳುಮಟ್ಟದ ರಾಜಕಾರಣ ನನಗೆ ಗೊತ್ತಿಲ್ಲ: ಶಾಸಕ ಎಸ್. ಆರ್.ಶ್ರೀನಿವಾಸ್ ತಿರುಗೇಟು

    May 24, 2026

    Leave A Reply Cancel Reply

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುರುವೇಕೆರೆ

    ನಾಡಪ್ರಭು ಕೆಂಪೇಗೌಡರದು ಜಾತ್ಯತೀತ ಆಡಳಿತ: ಶಾಸಕ ಎಂ.ಟಿ.ಕೃಷ್ಣಪ್ಪ

    June 29, 2026

    ತುರುವೇಕೆರೆ: ನಾಡಪ್ರಭು ಕೆಂಪೇಗೌಡರು ಒಂದೇ ಜಾತಿಗೆ ಅಥವಾ ಸಮುದಾಯದ ಒಂದೇ ಸಮಾಜಕ್ಕೆ ಸೀಮಿತರಾಗದೆ ಜಾತ್ಯತೀತವಾಗಿ ಆಡಳಿತ ನಡೆಸಿದ್ದರು ಎಂದು ಶಾಸಕ…

    ಸಾರ್ವಜನಿಕ ದೂರು ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಕರ್ತವ್ಯಲೋಪ | ಹೆಗ್ಗರೆ ಗ್ರಾ.ಪಂ. ಪಿಡಿಒ ಅಮಾನತು

    June 29, 2026

    ತುಮಕೂರು: ಜಿಲ್ಲಾ ಪತ್ರಕರ್ತರ ಸಂಘದಿಂದ ಶ್ರವಣ ತಪಾಸಣಾ ಶಿಬಿರ

    June 29, 2026

    ಕೊರಟಗೆರೆ: 10,016 ಮಕ್ಕಳಿಗೆ ಪೋಲಿಯೋ ಲಸಿಕಾ ಗುರಿ: ಡಾ.ಜ್ಯೋತ್ಸ್ನಾ ರೆಡ್ಡಿ ಕರೆ

    June 29, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.