Subscribe to Updates
Get the latest creative news from FooBar about art, design and business.
- ಸರಗೂರು: ಕೊನೆಗೂ ಜಯಲಕ್ಷ್ಮೀಪುರ ಗ್ರಾಮಕ್ಕೆ ಬಂತು ಸರ್ಕಾರಿ ಬಸ್: ಗ್ರಾಮಸ್ಥರಿಂದ ಹರ್ಷ
- ಪ.ಜಾತಿ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳ ಆಧಾರ್ ಇ–ದೃಢೀಕರಣ ಕಡ್ಡಾಯ: ವಿ.ಕೆ.ಬಡಿಗೇರ
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಸ್ಪರ್ಧಾ ಕಾರ್ಯಕ್ರಮ ಮುಂದೂಡಿಕೆ
- ನ.10: ಶ್ರೀ ಗುರುಸಂಗಮೇಶ್ವರಸ್ವಾಮಿ ಅವರ ಲಕ್ಷದೀಪೋತ್ಸವ ಆಚರಣೆ
- ವಿದ್ಯಾರ್ಥಿ ವೇತನ: ಬಯೋಮೆಟ್ರಿಕ್ ಇ–ದೃಢೀಕರಣ ಕಡ್ಡಾಯ
- ನವೆಂಬರ್ 7: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ತುಮಕೂರು ಜಿಲ್ಲಾ ಪ್ರವಾಸ
- ತುಮಕೂರು | SSLC ಫಲಿತಾಂಶ ಸೇರಿದಂತೆ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿತು ಜಿಲ್ಲೆಯ ಹಲವು ಸಮಸ್ಯೆಗಳು!
- ಜಮೀನಿನ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ: ಗ್ರಾಮ ಆಡಳಿತಾಧಿಕಾರಿ ಮಂಜುನಾಥ ಲೋಕಾಯುಕ್ತ ಬಲೆಗೆ
Author: admin
ತುಮಕೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕೆ ಬಿ ಕ್ರಾಸ್ ನಿಂದ ಒಂದುವರೆ ಕಿ.ಮೀ. ದೂರದ ರಸ್ತೆ ಪಕ್ಕದಲ್ಲಿರುವ ಹೆದ್ದಾರಿ ರಸ್ತೆ ನಿರ್ಮಾಣಕ್ಕೆ ಅಕ್ಕಪಕ್ಕದ ಮನೆಗಳನ್ನು ಬಿಡಿಸಿಕೊಂಡು ರಸ್ತೆ ನಿರ್ಮಾಣ ಮಾಡಿರುತ್ತಾರೆ 2013ರ ನಿಯಮದಂತೆ ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಜಾಗ ಬಿಟ್ಟು ಕೊಟ್ಟವರಿಗೆ ಹಣ ಕೊಡಿ ಎಂದು ಆಗ್ರಹಿಸಿದರು. ಕೆ ಬಿ ಕ್ರಾಸ ಭಾಗದ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ಜಾಗ ಬಿಟ್ಟುಕೊಟ್ಟಿದ್ದು ತಮ್ಮ ಮನೆಗಳನ್ನು ಕಳೆದುಕೊಂಡಿರುತ್ತಾರೆ ಹಾಗೂ ಭೂಮಿಯನ್ನು ನೀಡಿರುತ್ತಾರೆ. ಇವರು ಮುಂದೆ ಮನೆ ಕಟ್ಟಲು ಆಗದೇ, ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳಲು ಆಗದ ಸ್ಥಿತಿಯಲ್ಲಿದ್ದಾರೆ. ತಮ್ಮ ಮನೆ ಜಾಗವನ್ನು ಬಿಟ್ಟು ಕೊಟ್ಟ ಮಾಲೀಕರಿಗೆ ಸರ್ಕಾರದಿಂದ ಇದುವರೆಗೂ ಒಂದು ನಯಾಪೈಸೆ ಬಂದಿಲ್ಲ. ಇವರು ಪರಿಹಾರದ ಹಣಕ್ಕೋಸ್ಕರ ಆರು ವರ್ಷಗಳಿಂದಲೂ ಪರಿತಪಿಸುತ್ತಿದ್ದಾರೆ. ಅವರ ಕಷ್ಟಗಳಿಗೆ ಶಾಸಕರಾಗಲಿ, ಜನ ಪ್ರತಿನಿಧಿಯಾಗಲಿ, ಜಿಲ್ಲಾಡಳಿತವಾಗಲಿ, ಈ ಕಡೆ ಗಮನಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲವು ತಿಂಗಳ ಹಿಂದೆ ಕೆಬಿ ಕ್ರಾಸ್ ಬಳಿ ನೂರಾರು ಸಂತ್ರಸ್ತರು ಉಪವಾಸ ಸತ್ಯಾಗ್ರಹ ಮಾಡಿದರು. ಇಷ್ಟಾದರೂ…
ಚಿತ್ರದುರ್ಗ: : ಅಂಗವಿಕಲರಿಗೆ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ನೀಡಿದರೆ ಅನುಕೂಲವಾಗಲಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಸಲಹೆ ನೀಡಿದರು. ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಅಂಗವಿಕಲರ ಸಬಲೀಕರಣ ಮತ್ತು ಹಿರಿಯ ನಾಗರಿಕರ ಇಲಾಖೆ, ಆರ್ಟಿಫಿಶಿಯಲ್ ಲಿಂಬ್ಸ್ ಮ್ಯಾನಿಫ್ಯಕ್ಚರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಸಂಯಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಅಂಗವಿಕಲರಿಗೆ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ನೀಡಿದರೆ ಅನುಕೂಲವಾಗಲಿದೆ. ಉದ್ಯೋಗದಾತರು ಈ ಬಗ್ಗೆ ಆಲೋಚನೆ ಮಾಡುವುದು ಒಳಿತು ಎಂದು ಸಲಹೆ ನೀಡಿದರು. ‘ಅಂಗವಿಕಲರಲ್ಲಿ ಬಹುತೇಕರಿಗೆ ಸ್ವಾವಲಂಭಿಯಾಗುವ ಹಂಬಲವಿದೆ. ಉದ್ಯೋಗ ಅರಸಿ ಜನಪ್ರತಿನಿಧಿಗಳ ಬಳಿ ಬರುತ್ತಾರೆ. ಸರ್ಕಾರಿ ವ್ಯವಸ್ಥೆಯಲ್ಲಿ ಅಂಗವಿಕಲರಿಗೆ ಮೀಸಲಾತಿ ಸೌಲಭ್ಯವಿದೆ. ಇದೇ ಮಾದರಿಯಲ್ಲಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ನವದೆಹಲಿ: ದೆಹಲಿ ಭೇಟಿ ಫಲ ನೀಡಿದ್ದು, . ಜಲಶಕ್ತಿ, ಇಂಧನ, ಪರಿಸರ , ಹಣಕಾಸು, ರಕ್ಷಣಾ ಸಚಿವರನ್ನು ಭೇಟಿ ಮಾಡಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಸ್ಥಾಪನಾ ದಿನದಲ್ಲಿ ನನಗೆ ಭಾಗವಹಿಸಲು ಅವಕಾಶ ನೀಡಿರುವುದು ಸಂತಸ ತಂದಿದೆ ಎಂದರು. ಏಪ್ರಿಲ್ 16 ಮತ್ತು 17 ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ, ಏಪ್ರಿಲ್ 16 ಮತ್ತು 17 ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಚುನಾವಣೆಗೆ ಯಾವ ರೀತಿಯಲ್ಲಿ ಪೂರ್ವಭಾವಿ ತಯಾರಿಗಳನ್ನು ಮಾಡುಕೊಳ್ಳಬೇಕೆಂದು ಪಕ್ಷಕ್ಕೆ ಹಾಗೂ ನನಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆಯನ್ನು ನೀಡಿದ್ದಾರೆ ಎಂದು ಇದೇ ವೇಳೆ ಅವರು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಪಾವಗಡ: ಪಾವಗಡ ನೂತನ ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡ ವರದರಾಜ್ ರವರಿಗೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಹಾಗೂ ತಂಡ ಶುಭ ಕೋರಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ನೂತನ ತಹಸೀಲ್ದಾರ್ ರವರಿಗೆ ಪಾವಗಡ ತಾಲ್ಲೂಕಿನ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಹೆಲ್ಪ್ ಸೊಸೈಟಿ ತಂಡ ಚರ್ಚಿಸಲಾಯಿತು. ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ, ಹೆಲ್ಪ್ ಸೊಸೈಟಿ ಪದಾಧಿಕಾರಿಗಳಾದ ಗೌತಮ್, ಇನಾಯತ್ ಈ ವೇಳೆ ಹಾಜರಿದ್ದರು ವರದಿ: ನಂದೀಶ್ ನಾಯ್ಕ ಪಿ., ಪಾವಗಡ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ತುಮಕೂರು: ಜಿಲ್ಲೆಯ ತಿಪಟೂರು ತಾಲ್ಲೂಕಿನ ಪವಾಡ ಕ್ಷೇತ್ರ ಕೆರಗೋಡಿರಂಗಾಪುರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮಿಗಳ ಜನ್ಮವರ್ಧಂತಿ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಶ್ರೀಗಳ ವರ್ಧಂತಿ ಮಹೋತ್ಸವದ ಅಂಗವಾಗಿ ಶ್ರೀಶಂಕರೇಶ್ವರಸ್ವಾಮಿ ಶ್ರೀರಂಗನಾಥಸ್ವಾಮಿ, ಲಿಂಗೈಕ್ಯ ಹಿರಿಯ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆಸಲ್ಲಿಸಲಾಯಿತು. ಶ್ರೀಮಠದ ಸಮುದಾಯ ಭವನದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಕ್ತಾಧಿಗಳು ಪಾದಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು. ಭಕ್ತರಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿದ ಶ್ರೀಗುರುಪರದೇಶಿಕೇಂದ್ರ ಮಹಾಸ್ವಾಮೀಜಿ, ದೇಶ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಹಾಗೂ ಜಾತಿ ರಾಜಕಾರಣ ಆತಂಕ ಉಂಟುಮಾಡಿದೆ ಎಲ್ಲಾರೂ ಶಾಂತಿ ಸಹಭಾಳ್ವೆಯಿಂದ ಬಾಳ ಬೇಕಿರುವಾಗ ಜಾತಿ ಧರ್ಮಗಳ ಹೆಸರಿನಲ್ಲಿ ಪರಸ್ಪರ ದ್ವೇಷ ಭಿತ್ತುತ್ತಿರುವುದು ನೋವುಂಟು ಮಾಡಿದೆ. ಕೆರಗೋಡಿ ರಂಗಾಪುರ ಮಠ ಜಾತ್ಯಾತೀತ ಪರಂಪರೆ ಹೊಂದಿದ್ದು, ಟಿಪ್ಪು ಸುಲ್ತಾನ್ ಹೈದರಾಲಿ ಕಾಲದಿಂದಲೂ ಮುಸ್ಲೀಂಮರು ಮಠದೊಂದಿಗೆ ಭಕ್ತಿ ಗೌರವ ಭಾವದಿಂದ ಉತ್ತಮ ಸಂಬಂದ ಹೊಂದಿದ್ದಾರೆ. ಇಂದು ಹಿಂದೂ ಮುಸ್ಲಿಂ ಕ್ರೈಸ್ತ ಬಂಧುಗಳು ಮಠಕ್ಕೆ ಆಗಮಿಸಿ ಭಕ್ತಿ ಸಮರ್ಪಿಸಿರುವುದು ತುಂಬ ಸಂತೋಷ…
ಪಾವಗಡ: ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತೋತ್ಸವ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆ ಇಂದು ನಡೆಯಿತು. ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿ, ವೈಭವದಿಂದ ಆಚರಣೆ ಮಾಡಬೇಕೆಂದು ಲಿಂಗದಹಳ್ಳಿ ಗ್ರಾಮದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಪೂರ್ವಭಾವಿ ಸಭೆಯಲ್ಲಿ ಸಮಾಜಸೇವಕರಾದ ನೇರಲಗುಂಟೆ ನಾಗೇಂದ್ರಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಪದಾಧಿಕಾರಿಗಳು, ಊರಿನ ಗ್ರಾಮಸ್ಥರು, ಹಾಗೂ ಯುವಕರು ಹಾಜರಿದ್ದರು. ವರದಿ: ನಂದೀಶ್ ನಾಯ್ಕ ಪಿ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ತುಮಕೂರು: ಕಳೆದ 17 ದಿನಗಳಿಂದ ಭೂಮಿ ಹಾಗೂ ವಸತಿ ರಹಿತರು ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಆಹೋರಾತ್ರಿ ನಡೆಸುತ್ತಿದ್ದು, ಇಂದು ಧರಣಿ ಸ್ಥಳಕ್ಕೆ ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಭೇಟಿ ನೀಡಿದರು. ಧರಣಿ ನಿರತರ ಸಮಸ್ಯೆ ಆಲಿಸಿದ ಆರ್. ರಾಜೇಂದ್ರ, ಧರಣಿ ನಿರತರ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಬಳಿಯಲ್ಲಿ ಮಾತನಾಡಿ ತುರ್ತಾಗಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ಭೂಮಿ, ವಸತಿ ರಹಿತರ ಧರಣಿಗೆ ತಾನು ಪಕ್ಷಾತೀತನಾಗಿ ಬೆಂಬಲ ಸೂಚಿಸುತ್ತೇನೆ ಎಂದು ಹೇಳಿದರು. ಇದೇ ವೇಳೆ ಧರಣಿ ನಿರತರು ತಮ್ಮ ಬೇಡಿಕೆಗಳ ಮನವಿಯನ್ನು ಆರ್. ರಾಜೇಂದ್ರ ಅವರಿಗೆ ನೀಡಿದರು. ವರದಿ: ಎ.ಎನ್. ಪೀರ್, ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ತಿಪಟೂರು: ತಾಲೂಕಿನ ಸರ್ಕಾರಿ ನೌಕರರ ಭವನದಲ್ಲಿ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಹಿಂದುಳಿದ ಸಮುದಾಯಗಳ ಏಳಿಗೆಗೆ ಶ್ರಮಿಸಿದ ನಾಯಕ ಡಾ ಬಾಬು ಜಗಜೀವನರಾಂ ಅವರ ಜಯಂತಿಯನ್ನು ತಾಲೂಕು ಆಡಳಿತ ವತಿಯಿಂದ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿಗಳಾದ ರಂಗಧಾಮಯ್ಯ, ಬಾಬು ಜಗಜೀವನ ರಾಂ ಅವರು ಉತ್ತರ ಭಾರತದಲ್ಲಿ ದಲಿತ ಸಮುದಾಯದಲ್ಲಿ ಜನಿಸಿ ಜಾತಿವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ ನಾಯಕರು ಇವರು ಜಗಜೀವನ್ ರಾಮ್ ಓದುತ್ತಿರುವ ಶಾಲೆಯಲಿ ಕುಡಿಯಲು ನೀರನ್ನು ಮೇಲು ವರ್ಗದ ಜನಾಂಗಕ್ಕೆ ಬೇರೆ ಮಡಿಕೆ ತಳಸಮುದಾಯದಕೆ ಬೇರೆ ಕಡೆ ನೀರಿನ ಮಡಿಕೆ ಇಟ್ಟಿದರು ಇದರ ಬಗ್ಗೆ ಹೆಚ್ಚಿನ ಹೋರಾಟ ಮಾಡಿ ಜೊತೆಜೊತೆಗೆ ವಿದ್ಯಾಭ್ಯಾಸ ಮಾಡುತ್ತಿದ್ದ ರು ಶಾಲೆಗೆ ರಾಂಕ್ ಸ್ಟುಡೆಂಟ್ ಆಗಿದ್ದರು ಈ ದೇಶಕ್ಕೆ ಇವರ ಕೊಡುಗೆ ತುಂಬಾ ಅಪಾರವಾಗಿದೆ ಎಂದು ತಿಳಿಸಿದರು ಮತ್ತು ನಗರಸಭಾ ಸದಸ್ಯರ ರಾಮ್ಮೋಹನ್ ಮಾತನಾಡಿ ನಮ್ಮ ಸಮಾಜಕ್ಕೆ ನಾವೆಲ್ಲರೂ ಹೇಗೆ ಸಮಾನತೆಯಿಂದ ಬಾಳಬೇಕು ಅನ್ನೋದನ್ನ ಅಭಿ ಸ್ವಾರವಾಗಿ ಹೋರಾಟ ಮಾಡಿದ…
ಹಿರಿಯೂರು: ಕಾಂಗ್ರೆಸ್ ನಾಯಕರಲ್ಲಿ ಒಗ್ಗಟ್ಟಿಲ್ಲ ಎನ್ನುವ ಚರ್ಚೆಗಳ ನಡುವೆಯೇ, ಇದೀಗ ಕಾಂಗ್ರೆಸ್ ಕಾರ್ಯಕರ್ತರಿಗೆ, ಕಾಂಗ್ರೆಸ್ ಕಾರ್ಯಕರ್ತರೇ ಹಲ್ಲೆ ನಡೆಸಿರುವ ಘಟನೆ ಹಿರಿಯೂರಿನಲ್ಲಿ ನಡೆದಿದೆ. ಭಾರತದ ಮೊದಲ ಉಪ ಪ್ರಧಾನಿ ಮಂತ್ರಿಯಾದ ಜಗನ್ ಜೀವನ್ ರಾಂ ರವರ ಜಯಂತಿ ಕಾರ್ಯಕ್ರಮ ಈ ಬಾರಿ ಹಿರಿಯೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ನಾಯಕರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಫ್ಲೆಕ್ಸ್ ಕಟ್ಟುವ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಕಾರ್ಯಕರ್ತರೇ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಇದೀಗ ಘಟನೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೋಮಶೇಖರ್ ಬಿ ಅವರ ಬ್ಯಾನರ್ ಹಾಗೂ ಫ್ಲೆಕ್ಸ್ ಕಟ್ಟಲಾಗಿದ್ದು, ಇದನ್ನು ವಿರೋಧಿಸಿದ ಮಾಜಿ ಸಚಿವ ಡಿ.ಸುಧಾಕರ್ ಬೆಂಬಲಿಗರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ಜೆ.ರಮೇಶ್, ಕಂದಿಕೆರೆ ಸುರೇಶ್ ಬಾಬು , ಗಿಡ್ಡೋಬನಹಳ್ಳಿ ಅಶೋಕ್ , ಸೋಮಶೇಖರ್ ಅವರ ಬ್ಯಾನರ್ ಹಾಗೂ ಫ್ಲಕ್ಸ್ ಕಟ್ಟುತ್ತಿದ್ದ ಅಸ್ಲಂಬಾಷ , ಅಬುಜಾರ್ ಗಫಾರ್, ಸೈಯದ್ ಅಕ್ರಂ ಭಾಷ ಇವರನ್ನು…
ತಿಪಟೂರು: ಜೆಡಿಎಸ್ ಮುಖಂಡ ಬಂಡೆ ರವಿ ತಿಪಟೂರು ತಾಲ್ಲೂಕಿನ ಯಾವ ಜೆಡಿಎಸ್ ಮುಖಂಡರಿಗೂ ಮಾಹಿತಿ ನೀಡದೆ ಜೆಡಿಎಸ್ ಮುಖಂಡ ಎಂದು ಪ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಸಿಕೊಂಡು ಪತ್ರಿಕಾಗೋಷ್ಠಿ ಕರೆದಿದ್ದು, ಇದನ್ನು ವಿರೋಧಿಸಿ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರ ನಡುವೆಯೇ ಪರಸ್ಪರ ಮಾತಿನ ಚಕಮಕಿ ನಡೆಯಿತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಮಾಜಿ ಅಧ್ಯಕ್ಷ ತಡಸೂರು ಗುರುಮೂರ್ತಿ ಬಂಡೆರವಿ, ನಮ್ಮ ತಾಲ್ಲೂಕಿನ ವ್ಯಕ್ತಿಯಲ್ಲ, ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿಲ್ಲ. ಆದರೂ ಸಹ ಜಿಲ್ಲಾ ಸಮಿತಿ ತಾಲ್ಲೂಕು ಸಮಿತಿಗಳ ಗಮನಕ್ಕೆ ಬಾರದೇ ಏಕಾಏಕಿಯಾಗಿ ಜೆಡಿಎಸ್ ಪಕ್ಷದ ಮುಖಂಡ ಎಂದು ಬ್ಯಾನರ್ ಅಳವಡಿಸಿರುವುದು ಖಂಡನೀಯ ಎಂದರು. ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ಪ್ರಬಲವಾಗಿದೆ. ಸಾವಿರಾರು ಜನ ನಿಷ್ಠಾವಂತ ಕಾರ್ಯಕರ್ತರಿದ್ದಾರೆ ಆದರೇ ಬೆಂಗಳೂರು ಮೂಲದ ವ್ಯಕ್ತಿ ಜೆಡಿಎಸ್ ಮುಖಂಡ ಎಂದು ಬಂದಿರುವುದು ಪ್ರಾಮಾಣಿಕವಾಗಿ ಕೆಲಸ ಮಾಡಿರುವ ವ್ಯಕ್ತಿಗಳಿಗೆ ನೋವಾಗಬಾರದು. ಪಕ್ಷದ ವರಿಷ್ಠರು ತಾಲ್ಲೂಕು ಘಟಕದ ಅಭಿಪ್ರಾಯ ಪಡೆದು ಮುನ್ನಡೆಯ ಬೇಕು ಎಂದು ತಿಳಿಸಿದರು . ಪತ್ರಿಕಾಗೋಷ್ಠಿ ನಡುವೆಯೇ ಕೆಲ ಮುಖಂಡರು ಆಕ್ಷೇಪ…