Author: admin

ಕೊರಟಗೆರೆ: ಅದೊಂದು ಆಕಸ್ಮಿಕ  ಸಾವು ಅಂತ ಎಲ್ರು ಅಂದುಕೊಂಡಿದ್ರು… ಆದ್ರೆ ಪೊಲೀಸರ ತನಿಖೆಯಲ್ಲಿ ಅಣ್ಣ- ತಂಗಿಯ ಅಸಲಿ ಕಳ್ಳಾಟ ಬಯಲಾಗಿದೆ… ಅಷ್ಟಕ್ಕೂ ಆ ಸ್ಟೋರಿ ನೋಡಿದ್ರೆ  ಛೇ ಇವರೆಂತಾ ಅಣ್ಣ ತಂಗಿ ಅಂತ ಬಾಯಿಗೆ ಬಂದಾಗೆ ನೀವು ಕೂಡಾ ಬೈತಿರಾ…ಅದರ ಡಿಟೈಲ್ಸ್ ಸ್ಟೋರಿ ಇಲ್ಲಿದೆ. ಅವತ್ತು ಜನವರಿ 30 ಬೆಳ್ಳಂಬೆಳಗ್ಗೆ ಕಲ್ಪತರು ನಾಡು ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಸಜ್ಜನರಾವ್  ಬೀದಿಯ ನಿವಾಸಿ 43 ವರ್ಷದ ಸುಮಿತ್ರಮ್ಮ ಸಾವನ್ನಪ್ಪಿದ್ರು… ಏರಿಯಾ ಜನರೆಲ್ಲಾ ಸಾವಿತ್ರಮ್ಮ ಮನೆಯಲ್ಲಿದ್ದ ಸಂಪ್ ಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಅಂದು ಕೊಂಡಿದ್ರು… ಈ ಸಂಬಂಧ ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ರು… ಸುಮಿತ್ರಮ್ಮನ ತಿಥಿ ಕಾರ್ಯವು ಸಹ ಮುಗಿದು ಹೋಗಿತ್ತು.. ಆದರೆ ದಿನ ಕಳೆದಂತೆ ಸುಮಿತ್ರಮ್ಮನ ಸಾವಿನ ಬಗ್ಗೆ ಪೊಲೀಸರಿಗೆ ಅನುಮಾನ ಬರೋಕೆ ಶುರುವಾಗಿತ್ತು.. ಅನುಮಾನದ ಬೆನ್ನತ್ತಿದ ಪೊಲೀಸರಿಗೆ ಸಾವಿತ್ರಮ್ಮ ನದು ಆಕಸ್ಮಿಕ ಸಾವಲ್ಲ ಕೊಲೆ ಅನ್ನೋದು ತನಿಖೆ ವೇಳೆ ಕನ್ಪಮ್ ಆಗಿತ್ತು.. ಅಣ್ಣ ತಂಗಿಯಂತಿದ್ದ ಇಬ್ಬರನ್ನ…

Read More

ಬೆಂಗಳೂರು: ಜನವರಿ 26ರಂದು ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ  ಬಾಬಾ ಸಾಹೇಬ್ ಅಂಬೇಡ್ಕರರ ಭಾವಚಿತ್ರಕ್ಕೆ ಅಪಮಾನ ಮಾಡಿದ ಜಿಲ್ಲಾ ನ್ಯಾಯಧೀಶ ಮಲ್ಲಿಕಾರ್ಜುನ್ ಗೌಡ ನನ್ನು ಕೂಡಲೇ ಕರ್ತವ್ಯ ದಿಂದ ವಜಾಗೊಳಿಸಿ , ಕಾನೂನು ಕ್ರಮ ಕ್ರಮಕ್ಕೆ ಒತ್ತಾಯಿಸಿ, ಜನಾಂದೋಲನ ಜಾಥಾ ನಡೆಸಲಾಯಿತು. ದಲಿತಪರ ಸಂಘಟನೆಗಳು ಹಾಗೂ ಬಹುಜನ ಸಮಾಜ ಪಾರ್ಟಿ ಸೇರಿದಂತೆ ಹಲವು ಸಂವಿಧಾನ ಪರ ಸಂಘಟನೆಗಳು, ಬೆಂಗಳೂರು ನಗರದ ಕೆಂಪೇಗೌಡ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ನಡೆದ ಜನಾಂದೋಲನ ಜಾಥಾದಲ್ಲಿ ಪಾಲ್ಗೊಂಡರು.  ವರದಿ: ರಾಮಪ್ಪ ಸಿ.ಕೆ.ಪುರ., ಪಾವಗಡ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪಾವಗಡ:  ಪಾವಗಡ ಪಟ್ಟಣದ ಸರಿಹದ್ದುಗಳಲ್ಲಿ ಶ್ರೀ ಶನಿಮಹಾತ್ಮಾ ಶ್ರೀ ಕ್ಷೇತ್ರ ಸುಸ್ವಾಗತ ಎಂಬ ಸ್ವಾಗತ ಕಮಾನುಗಳನ್ನು ನಿರ್ಮಿಸುವಂತೆ ಎಸ್.ಎಸ್. ಕೆ. ಆಡಳಿತ ಮಂಡಳಿ ಅಧ್ಯಕ್ಷರಾದ ಕೆ.ವಿ. ಶ್ರೀನಿವಾಸ್ ಹಾಗೂ ಕಾರ್ಯದರ್ಶಿ ಸುಬ್ಬ ನರಸಿಂಹ ರವರಿಗೆ ಹೆಲ್ಪ್ ಸೊಸೈಟಿ ಮನವಿ ಪತ್ರ ವನ್ನು ಸಲ್ಲಿಸಿತು. ಕಲ್ಪತರು ನಾಡು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಸುಪ್ರಸಿದ್ದ ಶ್ರೀ ಶನಿಮಹಾತ್ಮಾ ಶ್ರೀ ಕ್ಷೇತ್ರಕ್ಕೆ ಪ್ರತಿನಿತ್ಯ ಹಾಗೂ ಶ್ರಾವಣ ಮಾಸಗಳಲ್ಲಿ ಲಕ್ಷಾಂತರ ಭಕ್ತಾ ದಿಗಳು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದೂ ಪುಣ್ಯ ಕ್ಷೇತ್ರವಾಗಿ ಪ್ರಸಿದ್ದಿ ಹೊಂದಲಾಗಿದ್ದು,  ಶನಿಮಹಾತ್ಮಾ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳನ್ನು ಸ್ವಾಗತಿಸುವ ಕೆಲಸ ತಾಲ್ಲೂಕಿನ ಸಮಸ್ತ ಜನತೆಯ ಒತ್ತಾಸೆ ಹಾಗೂ ಶಿಷ್ಯಚಾರ ಆಗಿರುವುದರಿಂದ ಪಟ್ಟಣದ ಸರಹದ್ದಿನ ಹೊರವಲಯದ ನಾಲ್ಕು ದಿಕ್ಕುಗಳಲ್ಲಿ ಶನಿಮಹಾತ್ಮಾ ಶ್ರೀ ಕ್ಷೇತ್ರ ಪಾವಗಡ ಸುಸ್ವಾಗತ ಎಂಬ ಕಮಾನುಗಳನ್ನು ನಿರ್ಮಿಸುವಂತೆ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ನೇತೃತ್ವದಲ್ಲಿ ಮನವಿ ಮಾಡಲಾಯಿತು ಮನವಿ ಪತ್ರ ಸ್ವೀಕರಿಸಿದ ಎಸ್ ಎಸ್. ಕೆ ಆಡಳಿತ ಮಂಡಳಿ…

Read More

ತುರುವೇಕೆರೆ:  ತಾಲ್ಲೂಕಿನಲ್ಲಿ ಅತಿ ಹೆಚ್ಚು ರಿವಿನ್ಯೂ ಇರುವ ಪಂಚಾಯ್ತಿ ಎಂದರೆ ಅದು ಮಾಯಸಂದ್ರ ಗ್ರಾಮ ಪಂಚಾಯ್ತಿ. ಈ ಪಂಚಾಯ್ತಿಗೆ ಹೋಟೆಲ್, ಸಂತೆ, ಆಟೋರೀಕ್ಷಾ, ಬೀದಿ ವ್ಯಾಪಾರಿಗಳು ಮುಂತಾದ ಕಡೆಯಿಂದ ಆದಾಯ ಹರಿದು ಬಂದರೂ , ಮಾಯಸಂದ್ರದ ಬಸ್ಟ್ಯಾಂಡ್ ಮಾತ್ರ ಅಭಿವೃದ್ಧಿ ಆಗಿಲ್ಲ. ಕಳೆದ ವರ್ಷ ಬಸ್ಟ್ಯಾಂಡ್’ ಗೆ ಅಂಟಿಕೊಂಡಿರುವ 5 ಅಡಿ ಅಳವಾದ ಹಳೆಯ ಮೋರಿಯೊಂದನ್ನು ಸ್ವಚ್ಚ ಮಾಡಲು ತೆರೆದು ಹಾಗೆಯೇ ಬಿಟ್ಟಿರುವ ಕಾರಣ ರಾತ್ರಿ ಬಸ್ ಹತ್ತಲು ಬರುವ ಪ್ರಯಾಣಿಕರಿಗೆ ಪ್ರಾಣ ಕಂಟಕವಾಗಿದೆ. ಇದರಿಂದ ಮುಂದೆ ಏನಾದರೂ ಸಾವು ಸಂಭವಿಸಿದರೆ ಅದಕ್ಕೆ ಪಂಚಾಯ್ತಿಯೇ ಕಾರಣ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಇನ್ನಾದರೂ ಗ್ರಾಮ ಪಂಚಾಯ್ತಿಯ ಸದಸ್ಯರು,ಅಧ್ಯಕ್ಷರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಪರಿಹಾರ ನೀಡಬೇಕು  ಎನ್ನುವ ಒತ್ತಾಯಗಳು ಕೇಳಿ ಬಂದಿದೆ. ವರದಿ: ವೆಂಕಟೇಶ ಜೆ.ಎಸ್. ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಸರಗೂರು: ತಾಲ್ಲೂಕಿನ ಬಿ ಮಟಕೇರಿ ಗ್ರಾಪಂ ವ್ಯಾಪ್ತಿಯ ಬರುವ ಹೊಸಕೋಟೆ ಗ್ರಾಮದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ರೈತರು ಅರಣ್ಯ ಇಲಾಖೆ ಮತ್ತು ಕೆಇಬಿ ಅಧಿಕಾರಿಗಳು ಹಾಜರಾಗದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಚಲುವರಾಜು ಅವರನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡರು. ಬಿ ಮಟಕೇರಿ ಗ್ರಾಪಂ ಸದಸ್ಯ ಬೆಟ್ಟಸ್ವಾಮಿ ಮಾತನಾಡಿ, ಬಿ ಮಟಕೇರಿ ಗ್ರಾಪಂಗೆ ಒಳಪಡುವ ಗ್ರಾಮಗಳಲ್ಲಿ ಹಾಡಿ, ಗ್ರಾಮಗಳು ಹೆಚ್ಚು ಆದರೆ ಇವರಿಗೆ ಸ್ಮಶಾನ ಮಾಳ, ಸಾಗುವಳಿ ಪತ್ರ, ಹಕ್ಕುಪತ್ರ, ಇನ್ನೂ ಇತರೆ ಸೌಲಭ್ಯಗಳನ್ನು ನೀಡುತ್ತಿಲ್ಲ. ಇದರ ಬಗ್ಗೆ ಅಧಿಕಾರಿಗಳು ಇದರ ಕ್ರಮವಹಿಸಬೇಕು ಎಂದರು. ದಸಂಸ ತಾಲ್ಲೂಕು ಸಂಘಟನೆ ಸಂಚಾಲಕರಾದ ಗೋವಿಂದರಾಜು ಮಾತನಾಡಿ, ಈ ಭಾಗದ ಜನರಿಗೆ ಸ್ಮಶಾನ ಮಾಳಗಳು ಇಲ್ಲ, ಸ್ಮಶಾನ ಜಾಗವನ್ನು ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಹಾದನೂರು ಗ್ರಾಪಂ ಸದಸ್ಯ ಶಿವಲಿಂಗಯ್ಯ ಮಾತನಾಡಿ, ಕಾಡಾಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿ ಗಳು ಹಾವಳಿ ಜಾಸ್ತಿಯಾಗಿದೆ. ಇದರ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.…

Read More

ತಿಪಟೂರು: ಕರ್ನಾಟಕ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಆಯೋಜಿಸಿದ್ದ ವಿಧಾನಸೌಧ-ಹೈಕೋರ್ಟ್  ಚಲೋ ಬೃಹತ್ ಪ್ರತಿಭಟನೆಯಲ್ಲಿ ತಿಪಟೂರಿನ ದಲಿತಪರ ಸಂಘಟನೆಗಳ ಒಕ್ಕೂಟ ಭಾಗಿಯಾಯಿತು. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನಿಸಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡನನ್ನು ವಜಾಗೊಳಿಸಿ, ಬಂಧನಕ್ಕೆ ಆಗ್ರಹಿಸಿ ಸಂವಿಧಾನ ಪರ ಸಂಘಟನೆಗಳು ಈ ಬೃಹತ್ ಪ್ರತಿಭಟನೆ ಆಯೋಜಿಸಿದ್ದವು. ತಿಪಟೂರಿನ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಎಪಿಎಂಸಿ ಸದಸ್ಯ ಬಜಗೂರು ಮಂಜುನಾಥ್, ಬೆಸ್ಕಾಂ  ಸೋಮಶೇಖರ್ ಮತ್ತು ಕಂಚಾಘಟ್ಟ ಕುಮಾರ್ ಸೇರಿದಂತೆ ದಲಿತ ಮುಖಂಡರುಗಳು ಮತ್ತು  ಬೆಸ್ಕಾಂ ಸಿಬ್ಬಂದಿ  ಪ್ರತಿಭಟನೆಯಲ್ಲಿ ಭಾಗವಹಿಸಿದರು. ವರದಿ: ಆನಂದ, ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಭಾರತ ಸರ್ಕಾರ (Government Of India) ಮತ್ತು ವಿಶ್ವಬ್ಯಾಂಕ್ ನಡುವೆ $ 115 ಮಿಲಿಯನ್ ಮಹತ್ವದ ಮಹತ್ವದ ಒಪ್ಪಂದಕ್ಕೆ ಇಂದು ಸಹಿ ಹಾಕಲಾಗಿದೆ. ಇದರಡಿ ಈ ಮೊತ್ತವನ್ನು ವಿಶ್ವಬ್ಯಾಂಕ್ ಸರ್ಕಾರಕ್ಕೆ ಸಾಲವಾಗಿ ನೀಡಿದೆ. ಈ ಹಣವನ್ನು ಕೃಷಿ ಮತ್ತು ಜಲಾನಯನ ಯೋಜನೆಗಳನ್ನು ಸುಧಾರಿಸಲು ಬಳಸಲಾಗುತ್ತದೆ. Rejuvenating Watersheds for Agricultural Resilience through Innovative Development” (Project REWARD) Project ಅಡಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಏನಿದು ಪ್ರಾಜೆಕ್ಟ್ ರಿವಾರ್ಡ್? ಕಳೆದ ಕೆಲವು ದಶಕಗಳಲ್ಲಿ ಹವಾಮಾನ ಬದಲಾವಣೆಯಿಂದಾಗಿ ಸಾಂಪ್ರದಾಯಿಕ ಕೃಷಿ ವಿಧಾನಗಳು ಸವಾಲುಗಳನ್ನು ಎದುರಿಸುತ್ತಿವೆ. ಸಾಂಪ್ರದಾಯಿಕ ನೀರಿನ ಮೂಲಗಳೂ ಬಿಕ್ಕಟ್ಟಿಗೆ ಸಿಲುಕಿವೆ. ಇಂತಹ ಪರಿಸ್ಥಿತಿಯಲ್ಲಿ, ಜಲಾನಯನ ಅಥವಾ ಜಲಾಶಯಗಳನ್ನು ನವೀಕರಿಸಲು, ಅಭಿವೃದ್ಧಿಪಡಿಸಲು ಮತ್ತು ದುರಸ್ತಿ ಮಾಡಲು ಹೊಸ ತಂತ್ರಜ್ಞಾನಗಳನ್ನು ಬಳಸುವುದು ಅವಶ್ಯಕ. ಅಲ್ಲದೆ, ಆ ತಂತ್ರಗಳನ್ನು ಕೃಷಿಗೂ ಬಳಸಬೇಕಾಗುತ್ತದೆ. ಈ ಸವಾಲುಗಳನ್ನು ಎದುರಿಸಲು ಈ ಯೋಜನೆಯನ್ನು ಆರಂಭಿಸಲಾಗಿದೆ.ಹವಾಮಾನ ಬದಲಾವಣೆಯಿಂದಾಗಿ ವಿಶ್ವಾದ್ಯಂತ ಪ್ರಭಾವ ಹವಾಮಾನ ಬದಲಾವಣೆಯಿಂದಾಗಿ, ಕೃಷಿ ಬಿಕ್ಕಟ್ಟು ಭಾರತ ಮಾತ್ರವಲ್ಲದೆ…

Read More

ತುರುವೇಕೆರೆ: ನಮ್ಮ ಗ್ರಾಮ ನಮ್ಮ ಹೆಮ್ಮೆ, ಎಲ್ಲಾ ಗ್ರಾಮಗಳ ಅಭಿವೃದ್ಧಿಯೇ ನಮ್ಮ ಮೂಲ ಗುರಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸುವ ಮೂಲಕ ಒಂದು ವರ್ಷದ ಸಂಪೂರ್ಣ ಆಡಳಿತ ಅವಧಿಯನ್ನು ಸರ್ವ ಸದಸ್ಯರ ಹಾಗೂ ಗ್ರಾಮಸ್ಥರ ಸಹಕಾರದಿಂದ ಪೂರೈಸಿದ್ದೇವೆ ಎಂದು ಮಾಯಸಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಗಳ ಗೌರಮ್ಮ ಹೊನ್ನಪ್ಪ ಅವರು ತಿಳಿಸಿದರು. ಮಾಯಸಂದ್ರ ಗ್ರಾಮದ ರಾಜೀಮಾತೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸಂತೋಷಕೂಟ ಸಮಾರಂಭದಲ್ಲಿ ಮಾತನಾಡಿದ ಅವರು, ಬಹುಮುಖ್ಯವಾಗಿ ಹಿರಿಯ ಸದಸ್ಯರಾದ ಅಜಿತ್ ರವರ ಮಾರ್ಗದರ್ಶನದಂತೆ, ಸರ್ವ ಸದಸ್ಯರ ಬೆಂಬಲ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಒಂದು ವರ್ಷದ ಸಂಪೂರ್ಣ ಅಧಿಕಾರ ಅವಧಿಯನ್ನು ಉತ್ತಮವಾಗಿ ಪೂರೈಸಿದ್ದೇವೆ. ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿಯು ಎಲ್ಲಾ ಸದಸ್ಯರುಗಳು ಸಹಾ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ, ಅಭಿವೃದ್ಧಿ ಕಾರ್ಯಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಹೆಮ್ಮೆ ಇರುವುದಾಗಿ ಸಂತಸ ವ್ಯಕ್ತಪಡಿಸಿದರು. ಸಾಕಷ್ಟು ಲಕ್ಷಗಳಿಗೂ ಅಧಿಕವಾಗಿ ಸರ್ಕಾರದ…

Read More

ಗುಬ್ಬಿ:  ತಾಲ್ಲೂಕಿನಲ್ಲಿ ಮಿತಿ ಮೀರಿದ ಅಕ್ರಮ ಮಧ್ಯ ಮಾರಾಟ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದರೂ, ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ನಮಗೆ ತಿಳಿದಿಲ್ಲವೆಂಬತೆ ವರ್ತಿಸುತ್ತಿದ್ದಾರೆ ಎಂದು ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ತಾಳೇಕೊಪ್ಪ ಗ್ರಾಮಸ್ಥರು ಅಬಕಾರಿ ಇಲಾಖೆ ಅಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈಕುರಿತು ಪ್ರತಿಕ್ರಿಯೆ ನೀಡಿದ ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್,  ನಮ್ಮ ಗ್ರಾಮದಲ್ಲಿ ಸುಮಾರು 15 ಕಡೆಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದಾರೆ .ನಾವು ಹಲವು ಬಾರಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಿಲ್ಲ. ನೆಪ ಮಾತ್ರಕ್ಕೆ ಗ್ರಾಮಕ್ಕೆ ಬೇಟಿ ನೀಡುವ ಅಬಕಾರಿ ಅಧಿಕಾರಿಗಳು ಮಧ್ಯ ಮಾರಾಟ ಮಾಡುವವರನ್ನು ಹಿಡಿಯುವಂತೆ ನಾಟಕ ವಾಡಿ ನಂತರ ಗ್ರಾಮದ ಹೊರ ಭಾಗದಲ್ಲಿ ಮಾರಾಟ ಗಾರರಿಂದ ಹಣ ಪಡೆದು ಬಿಟ್ಟು ಹೋಗುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದ್ದಾರೆ. ತಾಳೇಕೊಪ್ಪ ನಿವಾಸಿ ಮಹಿಳೆಯರು ಮಾತನಾಡಿ, ನಮ್ಮ ಗಂಡದಿರು ನಿತ್ಯ ವು ಕುಡಿದು ಬರುತ್ತಿದ್ದು ಮದ್ಯ ಕುಡಿಯುವ ಆಸೆಯಿಂದ ಮನೆಯಲ್ಲಿ ಇರುವ ದಿನಸಿ ಸಾಮಾಗ್ರಿ…

Read More

ತುಮಕೂರು: ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್  ಅವರ ಭಾವ ಚಿತ್ರವನ್ನು ತೆರವುಗೊಳಿಸಿ ಅವಮಾನಿಸಿದ ನ್ಯಾಯಾಧೀಶ್ ಮಲ್ಲಿಕಾರ್ಜುನ ಗೌಡ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿಧಾನ ಸೌಧ ಚಲೋ, ಬೆಂಗಳೂರು ಚಲೋ  ಬೃಹತ್ ಪ್ರತಿಭಟನೆ ನಡೆಯಿತು. ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ರಾಯಚೂರು ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಪಾಟೀಲ್ ರಾಯಚೂರು ನ್ಯಾಯಾಲಯದ ಆವರಣದಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿ ಅವಮಾನ ಮಾಡಿದ್ದಾರೆ. ಈ ಪ್ರಕರಣ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ತೀರ್ವ ಗೊಂಡಿದ್ದು ಇದನ್ನು ರಾಜ್ಯ ಸರ್ಕಾರವಾಗಲಿ ಅಥವಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಲಿ ಗಂಭೀರವಾಗಿ ಪರಿಗಣಿಸದೆ ಆರೋಪಿ ನ್ಯಾಯಾಧೀಶರ ಮೇಲೆ ದೂರು ದಾಖಲಿಸದೆ ಇರುವುದರಿಂದ ರಾಜ್ಯದ ಅಂಬೇಡ್ಕರ್ ಅನುಯಾಯಿಗಳಲ್ಲಿ ಮತ್ತಷ್ಟು ಆಕ್ರೋಶ ಭುಗಿಲೆದ್ದಿದೆ  ಎಂದರು. ರಾಜ್ಯದಲ್ಲಿನ ಎಲ್ಲ ದಲಿತ ಸಂಘಟನೆಗಳು ಒಟ್ಟಿಗೆ ಸೇರಿ ಸಂವಿಧಾನ ಸಂರಕ್ಷಣೆ ಮಹಾ ಒಕ್ಕೂಟ ವೆಂಬ ಐಕ್ಯ ವೇದಿಕೆಯನ್ನು ಹುಟ್ಟಿಹಾಕಿ, ಈ…

Read More