Author: admin

ತುಮಕೂರು:  ತುಮಕೂರು ಜಿಲ್ಲೆಯಲ್ಲಿ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ವಿವಿಧೆಡೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ವ್ಯಕ್ತಿ ಹಾಗೂ ಒಂದು ಹಸು ಸಾವನ್ನಪ್ಪಿದೆ. ಯೋಗೀಶ್(55) ಮೃತ ದುರ್ದೈವಿಯಾಗಿದ್ದಾರೆ.  ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಸುವನ್ನ ಹಿಡಿದುಕೊಂಡು ಜಮೀನಿಗೆ ಹೋಗುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಹಸು ಸಮೇತವಾಗಿ ಯೋಗೀಶ್ ಸಾವನ್ನಪ್ಪಿದ್ದಾರೆ. ವಿದ್ಯುತ್ ತಂತಿಗಳನ್ನ ಸರಿಪಡಿಸುವಂತೆ ಹಲವು ಬಾರಿ ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ರು ಸರಿಪಡಿಸದ ಅಧಿಕಾರಿಗಳು ಈ ಸಾವಿಗೆ ನೇರಹೊಣೆಗಾರರಾಗಿದ್ದಾರೆ ಎಂದು ಸ್ಥಳೀಯರು ಸಾವಿಗೆ ಬೆಸ್ಕಾಂ ಇಲಾಖೆ ನಿರ್ಲಕ್ಷ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ಸರಗೂರು.:  ನಮ್ಮ ಸಂವಿಧಾನದ ಬಗ್ಗೆ ನಮಗೆ ಎಷ್ಟು ಅರಿವು ಇದೆ ಎಂಬುದರ ಮೌಲ್ಯ ಮಾಪನವಾಗಿತ್ತು. ಆದರೆ ಪ್ರಶ್ನೆಗಳಿಗೆ ಉತ್ತರಿಸುವಾಗ ವ್ಯಕ್ತವಾದ ಅವರ ಅಜ್ಞಾನ ಮಾತ್ರ ಬೆಚ್ಚಿ ಬೀಳಿಸುವಂತಿತ್ತು. ಈ ಹಿನ್ನೆಲೆಯಲ್ಲಿ ಇಂಥದೊಂದು ದಿನದ ಆಚರಣೆಯ ಮಹತ್ವ ನಮಗೆ ಮನವರಿಕೆಯಾಗಬೇಕು. ನಮ್ಮ ರಾಷ್ಟ್ರದಲ್ಲಿ ಜಾರಿಯಲ್ಲಿರುವ ಆಡಳಿತ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ ಮತ್ತು ಎಲ್ಲ ಕಾನೂನುಗಳ ಮೂಲ ಸ್ತ್ರೋತ್ರ ನಮ್ಮ ಸಂವಿಧಾನ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹಾಗೂ ಬೆಟ್ಟಯ್ಯ ಕೋಟೆ ತಿಳಿಸಿದರು. ತಾಲೂಕಿನ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರದಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜನ್ಮದಿನದ ಅಂಗವಾಗಿ ಸ್ವಾತಂತ್ರ್ಯ ನಂತರ ಭಾರತದ 77 ನಡೆಯಲ್ಲಿ ಸಂಕಿರಣಗೊಂಡ ಸಂವಿಧಾನ ಆಶಯಗಳು ಕುರಿತು ಜನಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ದಲಿತ ಸಂಘರ್ಷ ಸಮಿತಿ ಸರಗೂರು ತಾಲೂಕು ವತಿಯಿಂದ ಹಮ್ಮಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಅವರ ಪೋಟೋ ದೀಪ ಬೆಳಗಿಸುವ ಮೂಲಕ ಪೋಟೋ ಗೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದರು. ಸಂವಿಧಾನದಲ್ಲಿ ಇರುವ ಅನೇಕ ಅಂಶಗಳನ್ನು…

Read More

ತುಮಕೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಾವತಿಯನ್ನಾಗಿಸಿದ ಅಪರಾಧಿಗೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿ ಎಸ್ ಸಿ ಪೋಕ್ಸೋ ನ್ಯಾಯಾಲಯ 40 ವರ್ಷಗಳ ಜೈಲು ಶಿಕ್ಷೆ ಹಾಗೂ 2 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಕುಮಾರ್ ಅಲಿಯಾಸ್ ಕುಮಾರಸ್ವಾಮಿ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ. ತುಮಕೂರು ಮಹಿಳಾ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈ ಘಟನೆ ನಡೆದಿತ್ತು.  ನೊಂದ ಬಾಲಕಿ ಒಬ್ಬಳೇ ಇದ್ದ ವೇಳೆ ಆಕೆಯ ಮನೆಗೆ ತೆರಳಿದ್ದ ಈತ ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ವಿಚಾರ ಯಾರಿಗಾದರೂ ತಿಳಿಸಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದ. ಜನವರಿ 3, 2023ರಂದು ಬಾಲಕಿ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಈ ಸಂಬಂಧ ದಾಖಲಾದ ದೂರಿನಂತೆ  ಡಾ.ನವೀನ್ ಕುಮಾರ್ ಅವರು ಪ್ರಕರಣದ ತನಿಖೆ ನಡೆಸಿದ್ದು, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದರು. ನ್ಯಾಯಾಲಯದ ವಿಚಾರಣೆಯಲ್ಲಿ ಅಭಿಯೋಜನೆಯ ಪರವಾಗಿ ಮಾಡಲಾದ ಸಾಕ್ಷಿಗಳು ಮತ್ತು ದಾಖಲೆಗಳಿಂದ ಕುಮಾರಸ್ವಾಮಿಯ ಮೇಲಿನ…

Read More

ಕೊರಟಗೆರೆ: ಪಟ್ಟಣದ 15 ನೇ ವಾರ್ಡಿನ ವಾಲ್ಮೀಕಿ ನಗರಕ್ಕೆ ಎರಡು ಕರಡಿಗಳು ಆಹಾರ ಹರಸಿ ಬಂದಿದ್ದು,  ಕರಡಿಗಳನ್ನು ಕಂಡು ಜನರು ಆತಂಕ ವ್ಯಕ್ತಪಡಿಸಿದ್ದಾರೆ.  ವಾಲ್ಮೀಕಿ ನಗರದ ರಸ್ತೆಯನ್ನು ಕರಡಿ ದಾಟುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕರಡಿಗಳ ದೃಶ್ಯ ನೋಡಿದ ಕೊರಟಗೆರೆ ಪಟ್ಟಣದ ಜನತೆ ಬೆಚ್ಚಿ ಬಿದ್ದಿದ್ದಾರೆ.  ಕರಡಿ ದಾಳಿಯ ಭೀತಿಯಿಂದ ಮನೆಯಿಂದ ಹೊರಗಡೆ ಬರಲು ಜನ ಭಯಪಡುವಂತಾಗಿದೆ. ಕರಡಿಗಳು ಪಟ್ಟಣಕ್ಕೆ ಬರದಂತೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಈ ನಡುವೆ ಅರಣ್ಯ ಇಲಾಖೆ ಅಧಿಕಾರಿಗಳು ಸುರಕ್ಷಿತವಾಗಿ ಕರಡಿಗಳನ್ನು ಹಿಡಿಯಲು ಮುಂದಾಗಿದೆ. ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ತುಮಕೂರು:  ಪಹಲ್ಗಾಮ್ ಘಟನೆಯನ್ನು ಒಂದು ಲಾಜಿಕಲ್ ಎಂಡ್ ಗೆ ತರುವ ನಿಟ್ಟಿನಲ್ಲಿ ದೇಶದ ಸ್ಥಿರತೆ, ಅಭ್ಯುದಯ, ಒಗ್ಗಟ್ಟು, ಇಂತಹ ಕೆಟ್ಟ ಸಂದರ್ಭದಲ್ಲಿ ದೇಶದ ಜನತೆ ಒಗ್ಗಟ್ಟಾಗಿ ನಿಲ್ಲುವುದಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಭಾರತದ ಅಭಿವೃದ್ದಿ ಸಹಿಸಲು ಪಾಕಿಸ್ತಾನಕ್ಕೆ ಆಗುತ್ತಿಲ್ಲ. ಇಂತಹ ಅಸ್ಥಿರತೆ ಉಂಟು ಮಾಡಲು ಯತ್ನಿಸುತ್ತಿದ್ದಾರೆ ಎಂದು ಮೋದಿ ಅವರ ಭಾಷೆಯಲ್ಲಿಯೇ ಹೇಳಿದ್ದಾರೆ ಎಂದರು. ಈಗಾಗಲೇ ಪಹಲ್ಗಾಮ್ ಬಗ್ಗೆ, ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ ದೇಶ ಇದ್ದರೆ ನಾವು ಎಂಬುದನ್ನು ನೋಡುತ್ತಿದ್ದೇವೆ. ಕೆಲ ಹೇಳಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅದಕ್ಕೆ ಬೆಲೆ ತೆತ್ತಬೇಕು. ದೇಶಕ್ಕಿಂತ ದೊಡ್ಡವರು ಸಿದ್ದರಾಮಯ್ಯ ಅಲ್ಲ. ಪ್ರಧಾನಿ ತೀರ್ಮಾನ ಅಂತಿಮವಾದುದಾಗಿದೆ ಅದರಂತೆ ಹೋಗುತ್ತದೆ ಎಂದರು. ಮನ್ ಕಿ ಬಾತ್ ನಿಂದ ಬದುಕು ಅರ್ಥ ಪೂರ್ಣ! ಮನ್ ಕಿ ಬಾತ್ ಸಾಮಾನ್ಯರಿಗೂ ಹೃಯದ ಸ್ಪರ್ಶಿ ಆಗಿ ಅರ್ಥವಾಗುತ್ತದೆ.…

Read More

ತುಮಕೂರು:  ತುಮಕೂರು ನಗರ ಸೇರಿದಂತೆ ಸುತ್ತಮುತ್ತಲಿ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿದೆ. ಗುಡುಗು ಸಿಡಿಲು ಹಾಗೂ ಗಾಳಿ ಬೀಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತುಮಕೂರು ನಗರದ ಜಿಲ್ಲಾಸ್ಪತ್ರೆ ಬಳಿ ಬದಿಯಲ್ಲಿ ನಿಂತಿದ್ದ ಕಾರಿನ ಮೇಲೆ  ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಅದೃಷ್ಟವಶಾತ್ ಯಾವುದು ಪ್ರಾಣಾಪಾಯವಿಲ್ಲ. ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿಗಳು ಭೇಟಿ ನೀಡಿ ಕಂಬಗಳನ್ನ ತೆರವುಗೊಳಿಸುವ ಕೆಲಸ ಶುರು ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ನೇಮಕಾತಿಗಾಗಿ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆ ವೇಳೆ ಜನಿವಾರ, ಮಾಂಗಲ್ಯ ಇತ್ಯಾದಿ ಸಂಸ್ಕೃತಿಯನ್ನು ಬಿಂಬಿಸುವ ಯಾವುದೇ ವಸ್ತುವನ್ನು ಧರಿಸಿ ಬಂದಲ್ಲಿ ಅಭ್ಯರ್ಥಿಗಳಿಗೆ ತೊಂದರೆ ನೀಡಬಾರದೆಂದು ವಿ.ಸೋಮಣ್ಣ ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು,  28, 29 ಮತ್ತು 30 ಏಪ್ರಿಲ್ 2025ರಂದು ರೈಲ್ವೆ ಇಲಾಖೆಯಲ್ಲಿ ನೇಮಕಾತಿಗಾಗಿ ಪರೀಕ್ಷೆ ನಡೆಯುತ್ತಿದೆ. ಅಭ್ಯರ್ಥಿಗಳು ಜನಿವಾರ, ಮಾಂಗಲ್ಯ ಸೂತ್ರ ತೆಗೆದಿಟ್ಟು ಪರೀಕ್ಷೆ ಬರೆಯಬೇಕೆಂಬ ವಿಷಯವನ್ನು ಪರೀಕ್ಷಾ ನಿಯಮದಲ್ಲಿ ಉಲ್ಲೇಖಿಸಲಾಗಿದೆಯೆಂಬ ದೂರುಗಳು ನನಗೆ ಬಂದಿದೆ.  ಈ ಬಗ್ಗೆ, ಸಂಸದರು, ಶಾಸಕರು ಇದನ್ನು ಸರಿಪಡಿಸುವಂತೆ ಮನವಿ ಮಾಡಿರುತ್ತಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ವಿವಿಧ ಸಂಘಟನೆಗಳು ಈ ಬಗ್ಗೆ ನನ್ನ ಗಮನವನ್ನು ಸೆಳೆದಿರುತ್ತಾರೆ.  ಈ ವಿಷಯದ ಬಗ್ಗೆ ಇಂದು ನಾನು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರೊಂದಿಗೆ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಗೊಂದಲ ನಿವಾರಿಸಲಾಗಿದೆ. ಜನಿವಾರ, ಮಾಂಗಲ್ಯ ಇತ್ಯಾದಿ ಸಂಸ್ಕೃತಿಯನ್ನು ಬಿಂಬಿಸುವ…

Read More

ಉ.ಕ/ಸಿದ್ದಾಪುರ : ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ರಣಧೀರರ ವೇದಿಕೆಯ ಸಿದ್ದಾಪುರ ತಾಲೂಕು ನೂತನ ಘಟಕದ ಉದ್ಘಾಟನೆ ಮತ್ತು ಕಾರ್ಯಕರ್ತರ ಪದಗ್ರಹಣ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಭೆಯ ಉದ್ಘಾಟನೆಯನ್ನು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ಆರ್.ಶಂಕರ್ ಗೌಡ್ರು ನೆರವೇರಿಸಿದರು. ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಸಿದ್ದಾಪುರ ತಾಲೂಕು ಘಟಕ ನೂತನ ಅಧ್ಯಕ್ಷರಾಗಿ ಮೋಹನ್ ಪಾಂಡುರಂಗ ನಾಯ್ಕ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಸಂತೋಷ್ ಜಿನ್ ನಾಡರ್ ಅಧಿಕಾರ ಸ್ವೀಕರಿಸಿದರು. ಇನ್ನು ತಾಲ್ಲೂಕು ಘಟಕದ ಸದಸ್ಯರಾಗಿ ಹೊನ್ನಪ್ಪ ದ್ಯಾವಾ ಬಡಗಿ, ಅಜಿತ್ ಮಾರ್ಕಾಂಡ ಕೋನಾರ, ಗಣೇಶ ಈಶ್ವರ ಭೋವಿ, ಲೋಕೇಶ್ ರಾಮಾ ಬಡಗಿ, ನಾಗರಾಜ ರಾಮಾ ಬಡಗಿ, ಸರೇಶ ಚೌಡಾ ಗೊಂಡ, ಅಶೋಕ ನೀಲಪ್ಪ ಕುರುಬರ, ರವಿಚಂದ್ರ ಕರಿಯ ಗೊಂಡ, ಪುರುಷೋತ್ತಮ ಮಂಜುನಾಥ ನಾಯ್ಕ, ಮಂಜುನಾಥ ಮಾರ್ಯಾ ಗೊಂಡ ಸೇರಿದಂತೆ ಇತರರು ಸಂಘಟನೆಯ ತತ್ವ ಸಿದ್ಧಾಂತಗಳನ್ನು ಒಪ್ಪಿ ಸೇರ್ಪಡೆಯಾಗಿದ್ದಾರೆ. ಈ ಕಾರ್ಯಕ್ರಮದ ಉಸ್ತುವಾರಿಯನ್ನು ಸಮಾಜ ಸೇವಕರಾದ ದಿನೇಶ್ ನಾಯ್ಕ ವಹಿಸಿಕೊಂಡಿದ್ದರು. ಕನ್ನಡನಾಡಿನಲ್ಲಿ…

Read More

ಸರಗೂರು: ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದನೂರು ಗ್ರಾಮದಲ್ಲಿ ಗ್ರಾಮದ ಯಜಮಾನರು ಮತ್ತು ಗ್ರಾಮಸ್ಥರು ಹಾಗೂ ಅಂಬೇಡ್ಕರ್ ಸಂಘ ಎಲ್ಲಾ ಸಂಘಗಳ ಜೊತೆಗೂಡಿ ಏ.27 ಮತ್ತು 28 ರಂದು ಅಂಬೇಡ್ಕರ್ 134 ನೇ ಜಯಂತಿ ಅಂಗವಾಗಿ ಭೀಮೋತ್ಸವ ಹಾಗೂ ಅಂಬೇಡ್ಕರ್ ಹಬ್ಬ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮದ ಯಜಮಾನರಾದ ರಾಜೇಶ್ ಮತ್ತು ಪ್ರಕಾಶ್ ಸಿದ್ದರಾಜು ತಿಳಿಸಿದರು. ಇಡೀ ಗ್ರಾಮದಲ್ಲಿ ವಿಶೇಷ ದೀಪಾಲಂಕಾರ ಹಾಗೂ ಹಸಿರು ತೊರಣ ವ್ಯವಸ್ಥೆ ಮಾಡಲಾಗಿದ್ದು. ಏ.27ರಂದು ಸಂಜೆ ಚಾಲನೆ ನೀಡಲಾಗುತ್ತದೆ. ಬುದ್ದ ಬಸವ ಅಂಬೇಡ್ಕರ್ ರವರ ಗ್ರಾಮದ ಎಲ್ಲಾ ಬೀದಿಗಳಲ್ಲಿ ದೊಡ್ಡ ಕಟೌಟ್ ಗಳನ್ನು ಅಳವಡಿಸಲಾಗಿದೆ. ಭಾನುವಾರ ಸಂಜೆ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೈದಾನದಲ್ಲಿ ಧ್ವನಿ ಮತ್ತು ಬೆಳಕು ಲೇಸರ್ ಶೋ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತಗಾಗಿ ಚಿತ್ರ ಪ್ರದರ್ಶನ ಮಾಡಲಾಗಿದೆ. ಏ.28ರಂದು  ಮಧ್ಯಾಹ್ನ 12 ಗಂಟೆಗೆ ಭೀಮೋತ್ಸವದ ಸಂದರ್ಭದಲ್ಲಿ ಒಂದು ನವಜೊಡಿ ಸಾಮೂಹಿಕ ವಿವಾಹ  ನಡೆಯಲಿದೆ. ಅಂಬೇಡ್ಕರ್ ಹಬ್ಬವನ್ನು…

Read More

ತುಮಕೂರು: ಜಿಲ್ಲೆಯ ಪಾವಗಡ ಪಟ್ಟಣದ ಶ್ರೀಮತಿ ಮತ್ತು ಶ್ರೀ ವೈ.ಈ. ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಾನಪದ ಉತ್ಸವಕ್ಕೆ ಮೆರುಗು ನೀಡಿದೆ. ಶುಕ್ರವಾರ ನಡೆದ ಜಾನಪದ ಉತ್ಸವವು ಗ್ರಾಮೀಣ ಸಂಸ್ಕೃತಿಯ ಸಡಗರದಿಂದ ಉಳುಮೆಯ ಹಬ್ಬದಂತೆಯೇ ನಡೆಯಿತು. ಮುಖ್ಯ ಅತಿಥಿಗಳಾದ ಜಾನಪದ ವಿದ್ವಾಂಸ ಸಣ್ಣ ನಾಗಪ್ಪ ಹಾಗೂ ಪ್ರಾಂಶುಪಾಲ ಡಾ.ಎನ್.ಶ್ರೀಧರ್ ಅವರನ್ನು ಎತ್ತಿನಗಾಡಿಯಲ್ಲಿ ಚಳ್ಳಕೆರೆ ಕ್ರಾಸ್ ನಿಂದ ಮೆರವಣಿಗೆ ಮೂಲಕ ಕಾಲೇಜಿಗೆ ಕರೆತರಲಾಯಿತು. ಡೋಲು, ತಮಟೆ, ನಾದಸ್ವರ, ಉರಿಮೆ ಸದ್ದಿಗೆ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಹೆಜ್ಜೆ ಹಾಕಿದರು. ಕಾಲೇಜಿನ ಆವರಣದಲ್ಲಿ ರಾಗಿ, ಭತ್ತ, ಗೋದಿ ಸೇರಿದಂತೆ ವಿವಿಧ ಸಿರಿಧಾನ್ಯಗಳನ್ನು ಅಲಂಕಾರಗೊಳಿಸಿ ಧಾನ್ಯ ಪೂಜೆಯೊಂದಿಗೆ ಹಬ್ಬದ ಆರಂಬವಾಯಿತು. ಗ್ರಾಮೀಣ ಸಂಪ್ರದಾಯದಂತೆ ಹಾಲೋಯ್ಯುವ ಹಬ್ಬ, ಮಾರಮ್ಮನ ಉತ್ಸವ, ಗೌರಿ ಪೂಜೆ ಮುಂತಾದ ಆಚರಣೆಗಳು ದಿನವಿಡೀ ಕಾಲೇಜು ಆವರಣವನ್ನು ಹಬ್ಬದಮಯವಾಗಿಸಿತು. ವೇದಿಕೆ ಕಾರ್ಯಕ್ರಮವನ್ನು “ರಾಗಿ ಕಲ್ಲು ಬೀಸುವ” ಮೂಲಕ ಉದ್ಘಾಟಿಸಲಾಯಿತು. ಪ್ರಮುಖ ಭಾಷಣಕಾರರಾಗಿ ಸಣ್ಣ ನಾಗಪ್ಪ ಗ್ರಾಮೀಣ ಜಾನಪದ ಸಂಸ್ಕೃತಿ ಮತ್ತು ಪಾವಗಡದ ಜಾನಪದ…

Read More