Author: admin

ತುಮಕೂರು:   ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ ಎಂದು ಎಐಡಿಎಸ್ ಓ ತುಮಕೂರು ಜಿಲ್ಲಾ ಸಮಿತಿ ಆರೋಪಿಸಿದೆ. ಈ ಸಂಬಂಧ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಗ್ರಾಮ ಪಂಚಾಯಿತಿಗೆ ಒಂದರಂತೆ ರಾಜ್ಯದಲ್ಲಿ 6,000 ಕೆಪಿಎಸ್ ಮ್ಯಾಗ್ನೆಟ್ ಶಾಲೆಯನ್ನು ಸ್ಥಾಪಿಸುವ ಗುರಿಯನ್ನು ಸರ್ಕಾರವು ಹೊಂದಿದೆ. ಮೊದಲ ಹಂತದಲ್ಲಿ ರಾಜ್ಯದ 800 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳೆಂದು ಗುರುತಿಸಲಾಗಿದೆ.( ಗಣಿಬಾಧಿತ ಜಿಲ್ಲೆಗಳಲ್ಲಿ 100, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 200 ಹಾಗೂ ಇತರೆ ಭಾಗದಲ್ಲಿ 500) ದಿ. 15/10/2025ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಈ ಕುರಿತು ಆದೇಶಿಸಲಾಗಿದೆ ಎಂದು ಅವರು ಹೇಳಿದರು. ಈ ಯೋಜನೆಯನ್ನು Pilot Project ಅಡಿ ಜಾರಿಗೊಳಿಸಲು ರಾಮನಗರದ ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಯೆಂದು ಗುರುತಿಸಲಾಗಿದೆ. ಹೊಂಗನೂರಿನಿಂದ 6 ಕಿಮೀ ವ್ಯಾಪ್ತಿಯೊಳಗಿರುವ, 77 ವಿದ್ಯಾರ್ಥಿಗಳಿರುವ ಹೊಡಿಕೆ ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ, 82 ವಿದ್ಯಾರ್ಥಿಗಳಿರುವ ಕನ್ನಿ…

Read More

ಸರಗೂರು:  ಈ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸುದೀರ್ಘವಾಗಿ ಎಲ್ಲ ದೇಶದ ಸಂವಿಧಾನ ಅಧ್ಯಯನ ಮಾಡಿ ಭಾರತ ದೇಶಕ್ಕೆ ಬೇಕಾದಂತಹ ಎಲ್ಲಾ ಧರ್ಮ ಜಾತಿ ಮತಕ್ಕೆ ಬೇಕಾಗುವಂತ ಸಂವಿಧಾನವನ್ನು ರಚನೆ ಮಾಡದಿದ್ದರೆ,  ನಾವು ಸ್ವತಂತ್ರರಾಗಿ ಸಮಾನರಾಗಿ ಅರ್ಥಪೂರ್ಣವಾದ ಬದುಕನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಂಬೇಡ್ಕರ್ ಭವನ ಟ್ರಸ್ಟ್ ಅಧ್ಯಕ್ಷ ಎಸ್.ಡಿ.ಸಣ್ಣಸ್ವಾಮಿ ಎಂದರು. ಪಟ್ಟಣದ ನಾಲ್ಕನೇ ವಾರ್ಡಿನ ಅಂಬೇಡ್ಕರ್ ಭವನದಲ್ಲಿ ಬುಧವಾರದಂದು ಸಂವಿಧಾನ ಸಮರ್ಪಣಾ ದಿನವನ್ನು ಸಂವಿಧಾನ ಪೀಠಿಕೆ ಹಾಗೂ ಅಂಬೇಡ್ಕರ್ ರವರ ಪೋಟೋ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಭಾರತ ಸಂವಿಧಾನ ನವೆಂಬರ್ 26– 1949 ನೇ ದಿನದಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತ ಸರ್ಕಾರಕ್ಕೆ ಅರ್ಪಣೆ ಮಾಡಿದ ದಿನದ ಅಂಗವಾಗಿ ನಾವು ಸಂವಿಧಾನ ಸಮರ್ಪಣ ದಿನ ಎಂದು ಆಚರಿಸುತ್ತೇವೆ ಎಂದರು. ಈ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡಿದರೆ, ಇಂದು ಭಾರತೀಯರೆಲ್ಲರೂ ಶ್ರೀಮಂತಿಕೆಯಿಂದ ಉತ್ತಮ ಜೀವನವನ್ನು ಮಾಡಬಹುದಿತ್ತು. ಆದರೆ ಅಂಬೇಡ್ಕರ್ ಅವರ ಸಂವಿಧಾನವನ್ನು ಸಂಪೂರ್ಣ ಜಾರಿ ಮಾಡಲು ಅಂದಿನ ಮತ್ತು ಇಂದಿನ ಸರಕಾರಗಳು ವಿಫಲವಾಗಿವೆ. ಹಾಗಾಗಿ…

Read More

ತುಮಕೂರು: ತಾಲ್ಲೂಕಿನ ಬೆಳ್ಳಾವಿಯಲ್ಲಿ ನ.27 ರಂದು ಸಂಜೆ 4 ಗಂಟೆಗೆ ಬಸ್ ನಿಲ್ದಾಣ, ಬೆಳ್ಳಾವಿ ಇಲ್ಲಿ 538ನೇ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಮತ್ತು 70ನೇ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ. ಕನಕ ಯುವಕ ಸಂಘ ಹಾಗೂ ಹಾಲು ಮತ ಮಹಾಸಭಾ ತುಮಕೂರು ಗ್ರಾಮಾಂತರ ಘಟಕ ಇವರ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಾಗಿನೆಲೆ ಮಹಾ ಸಂಸ್ಥಾನ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮಿಗಳು, ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮಿಗಳು, ಶ್ರೀ ರೇವಣಸಿದ್ದೇಶ್ವರ ಮಠದ ಶ್ರೀ ಬಿಂದುಶೇಖರ ಒಡೆಯರ್, ಕಾರದೇಶ್ವರ ಮಠದ ಶ್ರೀ ಕಾರದವೀರಬಸವ ಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಮಾಜಿ ವಿ.ಪ.ಸದಸ್ಯರಾದ ಡಾ.ಎಂ.ಆರ್.ಹುಲಿನಾಯ್ಕರ್ ವಹಿಸಲಿದ್ದು, ಉದ್ಘಾಟನೆಯನ್ನು ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್‌.ಟಿ. ಶ್ರೀನಿವಾಸ್ ನೆರವೇರಿಸುವರು. ಬಿಎಂಟಿಸಿ ವಕ್ತಾರ ನಿಖಿತಾಜ್ ಮಾರ್ಯ ಭಾಷಣಕಾರರಾಗಿ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಡಾ.ಎಸ್.ನಾಗಣ್ಣ, ಲಕ್ಷ್ಮೀನರಸಿಂಹರಾಜು, ಟಿ.ಆರ್. ಸುರೇಶ್‌, ಮೈಲಪ್ಪ, ಸತೀಶ್, ರಘುರಾಂ, ಪುಟ್ಟರಾಜು, ಅನಿಲ್‌ಕುಮಾರ್, ಬಿ.ಸಿ.ಉಮೇಶ್, ಇಂದ್ರಣ್ಣ, ಬಿ.ಎಸ್.ಮಂಜುನಾಥ್, ಗರುಡಪ್ಪ, ಮೂರ್ತಪ್ಪ…

Read More

ತಿಪಟೂರು: ನಗರದಲ್ಲಿ ನಡೆದ 96ನೇ ವರ್ಷದ ಸತ್ಯ ಗಣಪತಿ ಮಹೋತ್ಸವ ಹಾಗೂ ಕಲ್ಪೋತ್ಸವ ಕಾರ್ಯಕ್ರವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಿದ್ದರು. ಕಳೆದ ಐದು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನ ಆಗಮಿಸಿದ್ದರು. ಮಹೋತ್ಸವದ ಮೆರವಣಿಗೆ, ಧಾರ್ಮಿಕ ಕಾರ್ಯಕ್ರಮಗಳು, ಮನರಂಜನಾ ಹಾಗೂ ಅನ್ನಸಂತರ್ಪಣೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಹೋತ್ಸವದ ಸಂದರ್ಭದಲ್ಲಿ ನಗರದಾದ್ಯಂತ ಅನ್ನಪ್ರಸಾದ ವಿತರಣೆ, ಆಟಿಕೆ ಮತ್ತು ಭಕ್ತಸಾಮಗ್ರಿಗಳ ಖರೀದಿ ಜೋರಾಗಿದ್ದು, ಅದರ ಪರಿಣಾಮವಾಗಿ ರಸ್ತೆಗಳಲ್ಲಿ ಬಿಸಾಡಿದ ಪ್ಲಾಸ್ಟಿಕ್ ತಟ್ಟೆಗಳು, ಆಟಿಕೆಗಳ ಪ್ಲಾಸ್ಟಿಕ್ ಕವರ್‌ಗಳು, ಮಸುಕಿದ ಹೂವಿನ ಹಾರಗಳು, ಹರಿದುಬಿದ್ದ ಪ್ಲೆಕ್ಸ್ ಬೋರ್ಡ್‌ಗಳು ಮತ್ತು ಇತರೆ ಕಸದ ರಾಶಿ ಕಂಡುಬಂದಿದ್ದವು. ನಗರಸಭೆಯ ಪೌರಕಾರ್ಮಿಕರು ನಿನ್ನೆ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಕಾರ್ಯಪ್ರವೃತ್ತರಾಗಿ ಸಂಜೆವರೆಗೂ ನಿರಂತರವಾಗಿ ಶ್ರಮಿಸಿ, ಸಂಪೂರ್ಣವಾಗಿ ನಗರವನ್ನು ಸ್ವಚ್ಛಗೊಳಿಸಿದರು. ಪ್ರತಿಯೊಂದು ಉತ್ಸವಗಳು ಜಾತ್ರೆಗಳು ನಡೆದ ನಂತರ ನಗರವನ್ನು ಸ್ವಚ್ಛವಾಗಿಡಲು, ನಗರದ ನೈರ್ಮಲ್ಯ ಕಾಪಾಡಲು ರಸ್ತೆಗಿಳಿಯುವ ಪೌರಕಾರ್ಮಿಕರು ಸ್ವಚ್ಛತಾ ಸೈನಿಕರಾಗಿ ಕೆಲಸ ಮಾಡುತ್ತಾರೆ. ಅವರಿಗೆ ಸಮಾಜದಲ್ಲಿ ಗೌರವ ನೀಡಬೇಕಿರುವುದು…

Read More

ಸರಗೂರು:  ಪಟ್ಟಣದ ಒಂದನೇ ಮುಖ್ಯ ರಸ್ತೆಯ ಎಸ್‌ ಬಿಐ ಬ್ಯಾಂಕ್  ಪಕ್ಕದಲ್ಲಿರುವ ಅಂಚೆ ಕಚೇರಿ ಮುಂಭಾಗದಲ್ಲಿ ಖಾತೆದಾರರು ಹಾಗೂ ಪ್ರಗತಿಪರ ಸಂಘಟನೆಗಳು ಅಂಚೆ ಇಲಾಖೆ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು. ಆರ್ಯ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎನ್.ನಾಗರಾಜು ಮಾತನಾಡಿ, ಖಾತೆದಾರರ ಹಣವನ್ನು ಲೂಟಿ ಮಾಡಿರುವ ವ್ಯಕ್ತಿ ಯಾವುದೇ ಕ್ರಮ ಕೈಗೊಳ್ಳದೇ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಇಲಾಖೆ ತನಿಖಾಧಿಕಾರಿಗಳು, ಆರು ತಿಂಗಳು ಕಳೆದರೂ ಇವರ ಮೇಲೆ ದೂರು ದಾಖಲಿಸಿಲ್ಲ, ಇವರು ಅಂಚೆ ಇಲಾಖೆ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ದೂರಿದರು. ಖಾತೆದಾರಿಗೆ ಹಣವನ್ನು ವರ್ಗಾವಣೆ ಮಾಡಿಲ್ಲ ಎಂದಾದರೆ ಪಟ್ಟಣವನ್ನು ಬಂದ್ ಮಾಡಿಸಿ ನಂತರ ಅಂಚೆ ಕಚೇರಿಗೆ ಬೀಗ ಜಡಿದು ಮುತ್ತಿಗೆ ಹಾಕುವ ಮೂಲಕ ನಿರಂತರವಾಗಿ ಪ್ರತಿಭಟನೆ ನಡೆಸಲಾಗುವುದು.  ಖಾತೆದಾರರು ಎಲ್ಲಾ ವಯಸ್ಸಾದವರಿಗೆ ಏನಾದರೂ ಸಮಸ್ಯೆಯಾದರೆ ಅಂಚೆ ಇಲಾಖೆ ಅಧಿಕಾರಿಗಳೇ ನೇರ ಹೊಣೆ ಎಂದು ಕಿಡಿಕಾರಿದ್ದರು. ವಯಸ್ಸಾರು ತಮ್ಮ ಜೀವನಕ್ಕೆ ಇಟ್ಟುಕೊಂಡಿದ್ದ ಹಣವನ್ನು ಅಂಚೆ ಕಚೇರಿ…

Read More

ಸರಗೂರು: ತಾಲೂಕಿನ ಹಂಚೀಪುರ ಹಾಗೂ ಹೆಗ್ಗನೂರು ಸಮೀಪ ಆಗಾಗ್ಗೆ ಕಾಣಿಸಿಕೊಂಡು, ಜಾನುವಾರುಗಳನ್ನು ಬಲಿಪಡೆಯುವ ಮೂಲಕ ಅಕ್ಕಪಕ್ಕದ ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದ್ದ ಹುಲಿಯನ್ನು ಮಂಗಳವಾರ ಬೆಳಗಿನ ಜಾವ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಮಂಗಳವಾರ ಬೆಳಗ್ಗಿನ ಜಾವ 3 ಗಂಟೆ ಸಮಯದಲ್ಲಿ ಹೆಗ್ಗನೂರು ಸಮೀಪದ ದೇವಲಾಪುರದ ಪುರದಶೆಡ್ಡು ಬಳಿಯ ಅಳಗಂಚಿ ವಲಯದ ಕಾಡಂಚಿನ ಭಾಗದ ಜಮೀನೊಂದರಲ್ಲಿ ಹುಲಿ ಇರುವ ಖಚಿತ ಮಾಹಿತಿ ಮೇರಿಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಸುಮಾರು 6–7 ವರ್ಷದ ಗಂಡು ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಹಂಚೀಪುರ ಹಾಗೂ ಹೆಗ್ಗನೂರು ವ್ಯಾಪ್ತಿಯ ಗ್ರಾಮಗಳಲ್ಲಿ ಜಾನುವಾರುಗಳನ್ನು ಈ ಹುಲಿ ಬಲಿ ಪಡೆಯುತ್ತಿತ್ತು ಎನ್ನಲಾಗಿದೆ. ಅಲ್ಲದೇ ವಾರದ ಹಿಂದಷ್ಟೇ ಈ ಹುಲಿ ಸಂಚಾರ ಮಾಡಿದ ಫೋಟೋಗಳು ಅರಣ್ಯ ಇಲಾಖೆಯ ಕ್ಯಾಮೆರಾಗೆ ಸೆರೆಯಾಗಿತ್ತು. ಹುಲಿ ಚಿತ್ರ ನೋಡಿ ಆತಂಕಗೊಂಡ ಗ್ರಾಮಸ್ಥರು ಹುಲಿಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು. ಹಂಚೀಪುರದಲ್ಲಿ ರಸ್ತೆ ತಡೆದು ಪ್ರತಿಭಟನೆಯನ್ನೂ ನಡೆಸಿದ್ದರು. ಸ್ಥಳೀಯರ ಒತ್ತಾಯಕ್ಕೆ…

Read More

ಕೊರಟಗೆರೆ: ತಾಲ್ಲೂಕಿನ ದಾಸಾಲುಕುಂಟೆ ಸಮೀಪದ ಬೆಟ್ಟದ ಶಂಭೋನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಡಿ.1, 2 ರಂದು ಶ್ರೀ ಹನುಮ ಜಯಂತಿ ಹಾಗೂ ದೇವಾಲಯದ 17 ನೇ ವರ್ಷದ ವಾರ್ಷಿಕೋತ್ಸವ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಸ್ವಾಮಿಯ ಉತ್ಸವ ಹಾಗೂ 2ನೇ ವರ್ಷದ ಸೀತಾರಾಮ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿದ್ದು, ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತುಮಕೂರು: ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷರು (ಗೈಡ್), ಹಾಗೂ ಜಿಲ್ಲಾ ಮುಖ್ಯ ಆಯುಕ್ತರಾದ ಆಶಾ ಪ್ರಸನ್ನ ಕುಮಾರ್ ರವರು ಸ್ಕೌಟ್ ಸಂಸ್ಥೆಯಲ್ಲಿ ಸಕ್ರಿಯವಾಗಿ ಸತತ 35 ವರ್ಷಗಳಿಂದ ವಿವಿಧ  ಹುದ್ದೆಗಳನ್ನು  ಅಲಂಕರಿಸಿ ಸ್ಕೌಟ್ಸ್ ಸಂಸ್ಥೆಯ ಕಾರ್ಯ ಚಟುವಟಿಕೆಗಳು, ಬೆಳವಣಿಗೆಗಳು  ಮತ್ತು ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದ ಕಾರ್ಯಕ್ರಮಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ  ರಾಷ್ಟ್ರ ಸಂಸ್ಥೆಯವರು ರಾಷ್ಟ್ರಮಟ್ಟದ ಸಿಲ್ವರ್ ಸ್ಟಾರ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯುವ 75 ರಾಷ್ಟ್ರೀಯ ಜಾಂಬೂರಿಯಲ್ಲಿ ನ.26ರಂದು ರಾಜ್ಯಭವನದಲ್ಲಿ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್‌ ರವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಈ ವೇಳೆ ಆಶಾ ಪ್ರಸನ್ನ ಕುಮಾರ್ ಅವರನ್ನು ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯಾ ಅಭಿನಂದಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಕನ್ನಡಿಗರು ಕಾನೂನನ್ನು ರೂಪಿಸಿ ನೀತಿ ಯೋಜನೆ ಜಾರಿಗೆ ತರಬೇಕು : ಚೇತನ್ ಅಹಿಂಸಾ ನೆಲಮಂಗಲ : ಪಟ್ಟಣದ ಶ್ರೀ ಪವಾಡ ಬಸವಣ್ಣ ದೇವರ ಮಠದ ಆವರಣದಲ್ಲಿ ಕರ್ನಾಟಕ ರಣಧೀರರ ವೇದಿಕೆಯ 6ನೇ ವರ್ಷದ ವೈಭವ ಕನ್ನಡ ರಾಜ್ಯೋತ್ಸವ ಹಾಗೂ ತಾಯಿ ಭುವನೇಶ್ವರಿಯ ಹಬ್ಬ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ 2025 ರ ಹೊಯ್ಸಳ ವಿಶಿಷ್ಟ ಸೇವಾ ಪ್ರಶಸ್ತಿ ಸಮಾರಂಭವು ನಡೆಯಿತು. ತಾಯಿ ಭುವನೇಶ್ವರಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕೂರಿಸಿ ಪಟ್ಟಣದ ರಾಜ ಬೀದಿಗಳಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ನಂತರ ಶ್ರೀ ಪವಾಡ ಬಸವಣ್ಣ ದೇವರ ಮಠದ ಆವರಣದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅದ್ದೂರಿ ಕಾರ್ಯಕ್ರಮವನ್ನು ಶ್ರೀ ಪವಾಡ ಬಸವಣ್ಣ ದೇವರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸಿದ್ದಲಿಂಗ ಮಹಾ ಸ್ವಾಮಿಜಿ, ಕುಂಚಿಟಿಗರ ಮಹಾಸಂಸ್ಥಾನ ಎಲೆರಾಂಪುರ ಮಠದ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ, ವನಕಲ್ಲು ಮಹಾಸಂಸ್ಥಾನ ಮಠದ ಶ್ರೀ ಶ್ರೀ ಬಸವ ರಮಾನಂದ ಸ್ವಾಮೀಜಿಗಳು ದೀಪ ಬೆಳಗುವ ಮೂಲಕ…

Read More

ತುಮಕೂರು: ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆಯ ಧರ್ತಿ ಆಭಾ ಜನ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಹಾಗೂ ಜೀವಂತ ಮೀನು ಮಾರಾಟ ಮಳಿಗೆಗಾಗಿ ಸಹಾಯಧನ ಸೌಲಭ್ಯ ಕಲ್ಪಿಸಲು ಮೀನುಗಾರಿಕೆಯಲ್ಲಿ ತೊಡಗಿರುವ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ದೊಡ್ಡ ಎಣ್ಣೆಗೆರೆ ಗ್ರಾಮ ಪಂಚಾಯತಿಯ ದೊಡ್ಡಹುಲ್ಲೇನಹಳ್ಳಿ, ಮತ್ತಿಘಟ್ಟ ಗ್ರಾಪಂ, ಮಾದಾಪುರ, ಬರಕನಾಳು ಗ್ರಾಪಂ, ಹಂದಿಗನಾಡು ಹಾಗೂ ರಾಮನಹಳ್ಳಿ ಗ್ರಾಪಂ, ಜಾಣೇಹಾ‌, ಶಿರಾ ತಾಲ್ಲೂಕು ರಾಮಲಿಂಗಪುರ ಗ್ರಾಪಂ, ಕುಂಬಾರಹಳ್ಳಿ, ಮಾರಗೊಂಡನಹಳ್ಳಿ, ಗೋಪಾಲದೇವರಹಳ್ಳಿ ಗ್ರಾಪಂ, ಬಟ್ಟಿಗಾನಹಳ್ಳಿ ಸಿದ್ಧಕೋಣ, ಚಿನ್ನೇನಹಳ್ಳಿ ಗ್ರಾಪಂ, ಜೋಡಿದೇವರಹಳ್ಳಿ, ಸಲುಪರಹಳ್ಳಿ: ಪಾವಗಡ ತಾಲ್ಲೂಕು ಪೋತಗಾನಹಳ್ಳಿ ಗ್ರಾಪಂ. ದಳವಾಯಿಹಳ್ಳಿ, ಹೊಸದುರ್ಗ, ಚಿಕ್ಕನಹಳ್ಳಿ ಗ್ರಾಪಂ, ಹನುಮನಬೆಟ್ಟ, ರಂಗಸಮುದ್ರ ಗ್ರಾ.ಪಂ. ರಂಗಸಮುದ್ರ, ಬೆಳ್ಳಿಬಟ್ಟು, ಮರಿದಾಸನಹಳ್ಳಿ ಗ್ರಾಪಂ. ಹನುಮಂತನಹಳ್ಳಿ, ನ್ಯಾಯದಗುಂಟೆ ಗ್ರಾಪಂ. ಹೊಟ್ಟೆಬೊಮ್ಮನಹಳ್ಳಿ, ಮಧುಗಿರಿ ತಾಲ್ಲೂಕು ಹೊಸಕೆರೆ ಗ್ರಾಪಂ, ಬಸವನಹಳ್ಳಿ, ಚಿಕ್ಕದಾಳವಟ್ಟ ಗ್ರಾ.ಪಂ. ವಿಟ್ಲಾಪುರ, ಕೊಡಿಗೇನಹಳ್ಳಿ ಗ್ರಾಪಂ, ಗುಟ್ಟೆ, ಸಿಂಗನಹಳ್ಳಿ ಗ್ರಾ.ಪಂ.…

Read More