Subscribe to Updates
Get the latest creative news from FooBar about art, design and business.
- ಚಿಪ್ಸ್ ಖರೀದಿಸಲು ಬಂದಿದ್ದ ಬಾಲಕಿಗೆ ಅಂಗಡಿ ಮಾಲಿಕನಿಂದ ಲೈಂಗಿಕ ಕಿರುಕುಳ!
- ಭೂಸ್ವಾಧೀನ ವಿರುದ್ಧದ ಪ್ರತಿಭಟನೆಗೆ ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು
- ಪತಿಯಿಂದಲೇ ಮಹಿಳಾ ಕೌನ್ಸಿಲರ್ ಬರ್ಬರ ಹತ್ಯೆ!
- ತಿಪಟೂರು: ಆರ್ಥಿಕ ಸಂಕಷ್ಟದಲ್ಲಿದ್ದ ಬಡ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳ ವಿತರಣೆ
- ಜುಲೈ 6ರಂದು ರೋಟರಿ ಸಂಸ್ಥೆಯ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ
- ವೈ.ಎನ್.ಹೊಸಕೋಟೆ ಪಟ್ಟಣದಲ್ಲಿ ಕರಡಿ ಸಂಚಾರ: ಜನರಲ್ಲಿ ಆತಂಕ
- ತುಮಕೂರು: ಬುಕ್ಕಪಟ್ಟಣ ಅಭಯಾರಣ್ಯದಲ್ಲಿ ಅತಿಕ್ರಮಣಗೊಂಡಿದ್ದ 300 ಎಕರೆ ಭೂಮಿ ವಶಕ್ಕೆ
- ಜು.7ರಂದು ಶ್ರೀ ವಡ್ಡುಗಲ್ಲು ರಂಗನಾಥಸ್ವಾಮಿ ಬ್ರಹ್ಮರಥೋತ್ಸವ
Author: admin
ತುಮಕೂರು: ನಾಡಿನ ಸಂಸ್ಕೃತಿಯನ್ನು ಭವ್ಯ ಇತಿಹಾಸವನ್ನು ಎತ್ತಿ ಹಿಡಿಯುವಂತಹ ಕೆಲಸವನ್ನು ಮಾಡುತ್ತಿರುವ ಕಲಾವಿದರ ಬದುಕು ಸಂಕಷ್ಟದಲ್ಲಿದೆ. ಕಲಾವಿದರನ್ನು ಗುರುತಿಸಿ ಕಲೆಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂಬುದಾಗಿ ಮಾಜಿ ಸಚಿವರಾದ ಡಿ.ಸುಧಾಕರ್ ಹೇಳಿದರು. ನಗರದ ರೋಟರಿ ಭವನ ನೆಹರು ಮೈದಾನದಲ್ಲಿ ನಡೆದ ದಿ.ಶಂಕರ್ ನಾಗ್ ಅಭಿಮಾನಿಗಳ ಕಲಾವೇದಿಕೆ ಆಯೋಜಿಸಿದ್ದ 66ನೇ ಕನ್ನಡ ರಾಜ್ಯೋತ್ಸವ ಹಾಗೂ ನಟ ಶಂಕರ್ ನಾಗ್ ರವರ 67ನೇ ಹುಟ್ಟುಹಬ್ಬ ಹಾಗೂ ನಟ ಹಿನ್ನಲೆ ಗಾಯಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಸವಿನೆನಪಿನ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯೂರು ತಾಲ್ಲೂಕಿನ ಮಾಜಿ ಶಾಸಕರಾದ ಡಿ.ಸುಧಾಕರ್ ರವರು ಮಾತನಾಡಿದರು. ಕಲಾವಿದರಾದ ದಿವು ಶಂಕರ್ ರವರು, ಶಂಕರ್ ನಾಗ್ ರೂಪದಲ್ಲಿ ನಾಡಿನ ಉದ್ದಗಲಕ್ಕೂ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಭಿನಯ ಮಾಡುವುದರ ಮೂಲಕ ಹೆಸರು ಪಡೆದಿದ್ದಾರೆ. ಕಲಾವಿದರ ಬದುಕು ಹಸನಾಗಬೇಕಾದರೆ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದು ಸುಧಾಕರ್ ತಿಳಿಸಿದರು.
ತಿಪಟೂರು: 2022ನೇ ವರ್ಷದಲ್ಲಿ ಯಾವುದೇ ವೈರಾಣು ದೇಶವನ್ನು ಬಾಧಿಸದಿರಲಿ ಎಂದು ಕಾಂಗ್ರೆಸ್ ಮುಖಂಡ ಕೆ.ಟಿ. ಶಾಂತಕುಮಾರ್ ಹಾರೈಸಿದರು. ತಿಪಟೂರಿನಲ್ಲಿ 2022ರ ಹೊಸ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, 2021ರಲ್ಲಿ ದೇಶವನ್ನು ಕೊರೊನಾ ಡೆಲ್ಟಾ ವೈರಸ್ ತೀವ್ರವಾಗಿ ಬಾಧಿಸಿತ್ತು. ಇದೀಗ 2022 ಸಮೀಪಿಸುತ್ತಿರುವ ಸಂದರ್ಭದಲ್ಲಿ ಒಮಿಕ್ರಾನ್ ವೈರಾಣು ಬಂದಿದೆ. ಈ ವೈರಾಣು ದೇಶವನ್ನು ಬಾಧಿಸದಿರಲಿ ಎಂದು ಹಾರೈಸಿದರು. ಕ್ಯಾಲೆಂಡರ್ ಬಿಡುಗಡೆಯ ಸಂದರ್ಭದಲ್ಲಿ ಗೊರಗೊಂಡನಹಳ್ಳಿ ಸಹಕಾರ ಸಂಘದ ಸುದರ್ಶನ್, ಪಕ್ಷದ ಮುಖಂಡರು, ಯುವ ಮಿತ್ರರು ಮೊದಲಾದವರಿದ್ದರು.
ಮಧುಗಿರಿ: ಹಾಲು ಉತ್ಪಾದಕರ ಸಹಕಾರ ಸಂಘ ನಿ. ಬೇಡತ್ತೂರು ಇದರ 2020-21ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಕಚೇರಿಯಲ್ಲಿ ಬುಧವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು MPCS ಅಧ್ಯಕ್ಷ B.A.ರಾಜೇಂದ್ರ ಪ್ರಸಾದ್ ವಹಿಸಿದ್ದರು. ಕೊಂಡವಾಡಿ ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯದರ್ಶಿ ತಿಮ್ಮಾರೆಡ್ಡಿ 2020-21ನೇ ಸಾಲಿನ ಆಡಿಟ್ ಆದ ಜಮಾಖರ್ಚುನ್ನು ಸಭೆಯಲ್ಲಿ ಓದಿದರು. ಸಭೆಯಲ್ಲಿ ವಿಸ್ತರಣಾಧಿಕಾರಿ ಗಿರೀಶ್, ದರ್ಶನ್ ಕೆ.ಟಿ., ವಿಸ್ತರಣಾ ಸಮಾಲೋಚಕ ಧರ್ಮವೀರ, MPCS ಕಾರ್ಯಕಾರಿ ಮಂಡಳಿ ಸದಸ್ಯರಾದ ಬಿ.ವಿ.ರಾಮಕೃಷ್ಣಪ್ಪ, ಅಂಜನ ರೆಡ್ಡಿ, ಶ್ರೀರಾಮರೆಡ್ಡಿ, ಮಂಜುನಾಥ್, ಗೋಪಾಲಯ್ಯ, ಶ್ರೀರಂಗಪ್ಪ, ಭಾಗ್ಯಮ್ಮ ಅರುಣ್, ಅಂಜಿನಮ್ಮ, ಚಿಕ್ಕಓಬಳಯ್ಯ, ನೌಕರರ ಸಿಬ್ಬಂದಿ ತಿಮ್ಮರೆಡ್ಡಿ, ಈಶ್ವರಯ್ಯ, ರವೀಂದ್ರ ರೆಡ್ಡಿ ಉಪಸ್ಥಿತರಿದ್ದರು. ಬಿ.ಎನ್.ಮಲ್ಲಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವರದಿ: ದೊಡ್ಡೇರಿ ಮಹಾಲಿಂಗಯ್ಯ
ಹಿರಿಯೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದ ತರಗತಿಗಳು ನಡೆಸಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಕೊರೊನಾ 2ನೇ ಅಲೆಗೆ ತತ್ತರಿಸಿದ ಕರ್ನಾಟಕ ಹಂತ ಹಂತವಾಗಿ ಇದೀಗ ಸಹಜ ಸ್ಥಿತಿಗೆ ಮರಳಿದೆ. ಈಗ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಈಗಾಗಲೇ ಪದವಿ ಸ್ನಾತಕೋತ್ತರ ತರಗತಿಗಳೆಲ್ಲವೂ ಸಹಜ ಸ್ಥಿತಿಗಳಲ್ಲಿ ನಡೆಯುತ್ತಿದ್ದು, ಶಾಲಾ, ಕಾಲೇಜುಗಳು ಮರು ಪ್ರಾರಂಭವಾಗಿವೆ. ಆದರ, ಭೌತಿಕ ತರಗತಿಗಳು ಆರಂಭಗೊಂಡರೂ ಸಹ ಇನ್ನೂ ರಾಜ್ಯದ ಪ್ರಥಮ ದರ್ಜೆ – ಕಾಲೇಜುಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಪೂರ್ಣ – ಪ್ರಮಾಣದ ಪಾಠಗಳು ನಡೆಯದಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ರಾಜ್ಯ-ಸರ್ಕಾರವು ಸರ್ಕಾರಿ ಪ್ರಥಮ ದರ್ಜೆ – ಕಾಲೇಜುಗಳಿಗೆ ಅತಿಥಿ-ಉಪಾನ್ಯಾಸಕರನ್ನು ಸರ್ಕಾರ ಒಂದು ತಿಂಗಳು ತಡವಾಗಿ ನೇಮಿಸಿಕೊಂಡಿದ್ದು, ಅದು ಅವಶ್ಯಕತೆಗಿಂತ ಕಡಿಮೆ ಎಂದರೇ 80 ಪ್ರತಿಶತ ಉಪಾನ್ಯಾಸಕರನ್ನು ನೇಮಿಸಿಕೊಂಡಿದೆ . ಆದರೆ ಕಳೆದ ಅಕ್ಟೋಬರ್ 28 ರಿಂದ…
ವಿಜಯಪುರ: ಟಿಪ್ಪರ್ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನಗದು ಸೇರಿದಂತೆ 8.85 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇಲ್ಲಿನ ರಹಿಂನಗರದ ರವಿ ಗುರುಬಸಪ್ಪ ಜಾಮಗೊಂಡ (27), ಶಿವಾನಂದ ಲಿಂಗಪ್ಪ ಕಾಲೇಬಾಗ (36), ಶ್ರೀಶೈಲ ಉರ್ಫ್ ಪಪ್ಪು ದುಂಡಪ್ಪ ಗಾಂಜಿ (31), ಮಹಾರಾಷ್ಟ್ರ ಸೊಲ್ಲಾಪುರದ ಗೌರಿಶಂಕರ ರಾಮಚಂದ್ರ ಚೌಗಲೆ (43) ಹಾಗೂ ಇಕ್ರಾರ್ ಜಾಕೀರ್ ನಾಯ್ಕೋಡಿ (28) ಬಂಧಿತ ಆರೋಪಿಗಳು. ಈ ಆರೋಪಿಗಳು ಇಲ್ಲಿನ ಆದರ್ಶ ನಗರ ಠಾಣೆ ವ್ಯಾಪ್ತಿಯಲ್ಲಿ 2 ಟಿಪ್ಪರ್‌ಅನ್ನು ಕಳ್ಳತನ ಮಾಡಿದ್ದು, ವಿಶೇಷ ತಂಡ ಈ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ 2 ಟಿಪ್ಪರ್ ಗಳ ಬಿಡಿ ಭಾಗ, 1.50 ಲಕ್ಷ ರೂ.ಗಳ ನಗದು ಹಾಗೂ ಕೃತ್ಯಕ್ಕೆ ಬಳಸಿದ 1 ಟಾಟಾ ಸುಮೋ ವಾಹನ ಸೇರಿ 8.85 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ…
ವಿಜಯಪುರ: ಕಾರು ಮಗುಚಿ ಬಿದ್ದು, ಅಪ್ರಾಪ್ತ ವಯಸ್ಸಿನ ಬಾಲಕ ಸೇರಿದಂತೆ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗಂಗೂರು ಗ್ರಾಮದ ಬಳಿಯಲ್ಲಿ ನಡೆದಿದೆ. ಸಲೀಂ ಟಕ್ಕಳಕಿ (20) ಸೈಫನ್ ತಾಂಬೋಳೆ (17) ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಗಾಯಾಳುಗಳ ಪೈಕಿ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದರೆ, ಸೈಫನ್ ಆಸ್ಪತ್ರೆಗೆ ಸಾಗಿಸುತ್ತಿದ್ದ ದಾರಿ ಮಧ್ಯೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಿಂದ ದೇವರಹಿಪ್ಪರಗಿ ಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ಹಾಗೂ ಗಾಯಾಳು ದೇವರಹಿಪ್ಪರಗಿ ಪಟ್ಟಣದ ವಾಸಿಗಳಾಗಿದ್ದು, ಘಟನೆ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ಬೆಳೆ ಹಾನಿ ಕುರಿತು ಚಾರಿತ್ರಿಕ ಮಹತ್ವಪೂರ್ಣ ನಿರ್ಣಯ ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ರೈತ ಪರವೆಂದು ಮತ್ತೊಮ್ಮೆ ಸಾಬೀತಾಗಿದೆ. ಈ ಮೂಲಕ ದೇಶದ ರೈತರ ಬೆಂಬಲಕ್ಕೆ ಬಿಜೆಪಿ ಸರ್ಕಾರ ನಿಂತಿದೆ ಎಂದು ಬಿಜೆಪಿ ಮಾಜಿ ವಿಧಾನ ಪರಿಷತ್ ಸದಸ್ಯ ಎಂ ಆರ್ ಹುಲಿನಾಯ್ಕರ್ ತಿಳಿಸಿದರು. ತುಮಕೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ರೈತರಿಗಾಗಿ ಅತ್ಯಂತ ಮಹತ್ವಪೂರ್ಣ ನಿರ್ಧಾರಗಳನ್ನು ಪ್ರಕಟಿಸಿದೆ. ಇದು ಕರ್ನಾಟಕದಲ್ಲಿ ಈವರೆಗೆ ಕಂಡಿರುವ ಒಬ್ಬ ಧೀಮಂತ ಮುಖ್ಯಮಂತ್ರಿ ಎಂಬುದು ಸಾಬೀತಾಗಿದೆ ಎಂದರು. ಹಿಂದಿನ ಸರ್ಕಾರಗಳು ಕೇವಲ ಘೋಷಣೆಗಳಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದರು. ಆದರೆ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ರೈತರ ಪರ ಎಂಬುದು ಜನರ ಅರಿವಿಗೆ ಬರುವಂತಾಗಿದೆ. ರಾಜ್ಯದಲ್ಲಿ ಒಟ್ಟು 10 ಲಕ್ಷ ಹೆಕ್ಟೇರ್ ಪ್ರದೇಶದ ರೈತರಿಗೆ 969 ಕೋಟಿ ರೂಪಾಯಿ ಪರಿಹಾರ ವಿತರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರದ ಇತಿಹಾಸದಲ್ಲಿ ಮೊಟ್ಟ ಮೊದಲಬಾರಿಗೆ ಐತಿಹಾಸಿಕ ನಿರ್ಧಾರ ಇದಾಗಿದೆ . ಬೆಳೆ…
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಿ.ಟಿ.ರವಿಯನ್ನು ಲೂಟಿ ರವಿ ಎಂದು ಹೇಳುತ್ತಾರೆ. ಅವರು 4 ಬಾರಿ ಶಾಸಕ, 2 ಬಾರಿ ಸಚಿವರಾಗಿದ್ದರೂ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿದರು. ಚಿಕ್ಕಮಗಳೂರು ಕ್ಷೇತ್ರ ಮೂಲಸೌಕರ್ಯಗಳಿಂದಲೂ ವಂಚಿತವಾಗಿದೆ. ಧರ್ಮ, ವ್ಯಕ್ತಿಗಳನ್ನು ಗುರಿಯಾಗಿಸಿ ಹೇಳಿಕೆ ನೀಡುವುದೇ ರವಿ ಕಾಯಕ. ಸಿ.ಟಿ.ರವಿ ಒಬ್ಬ ವಿಕೃತ ಮನಸ್ಸುಳ್ಳಂತಹ ವ್ಯಕ್ತಿ ಎಂದು ಸಿಟಿ ರವಿ ವಿರುದ್ಧ ಧ್ರುವನಾರಾಯಣ್ ವಾಗ್ದಾಳಿ ನಡೆಸಿದರು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ 4 ತಿಂಗಳೊಳಗೆ 43 ಕೇಸ್ ಹಿಂಪಡೆದಿದ್ದರು. ಆ 43 ಕೇಸ್ಗಳ ಪೈಕಿ ಮೊದಲ ಪ್ರಕರಣವೇ ಸಿ.ಟಿ. ರವಿ ಅವರದು. ಬಿಜೆಪಿ ಶಾಸಕರ ಬೆಂಕಿ, ದೌರ್ಜನ್ಯ ಪ್ರಕರಣಗಳನ್ನು ಹಿಂಪಡೆದಿದ್ದರು. ಇದರಲ್ಲೇ ಗೊತ್ತಾಗುತ್ತೆ ಯಾರು ಕೇಸ್ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಯಾರು, ಯಾವ ಕೇಸ್ ಹಿಂಪಡೆದರು ಎಂದು ಜನರಿಗೆ ಗೊತ್ತಿದೆ ಎಂದು ಧ್ರುವನಾರಾಯಣ ಕಿಡಿಕಾರಿದರು.
ಬೆಳಗಾವಿ: ಲ್ಯಾಪ್ ಟಾಪ್ ವಿತರಣೆ ಮಾಡುವಂತೆ ಒತ್ತಾಯಿಸಿ ಆರ್ ಸಿಯು ವಿದ್ಯಾರ್ಥಿಗಳು ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಾಲ್ಲೂಕಿನ ಹಿರೇಬಾಗೇವಾಡಿಯ ಮಲ್ಲಪ್ಪನಗುಡ್ಡದಲ್ಲಿ ಆರ್ ಸಿಯು ಕ್ಯಾಂಪಸ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ಮುಖ್ಯಮಂತ್ರಿಗೆ ವಿದ್ಯಾರ್ಥಿಗಳು ಮುತ್ತಿಗೆ ಹಾಕಿದ್ದಾರೆ. ಪರಿಶಿಷ್ಟ ಜಾತಿ, ಪಂಗಡದವರಾದ, ನಾಲ್ಕನೇ ಸೆಮಿಸ್ಟರ್ ನಲ್ಲಿರುವ ನಮಗೆ ಲ್ಯಾಪ್ ಟಾಪ್ ನೀಡಿಲ್ಲ. ನಾವು 316 ಮಂದಿ ಇದ್ದೇವೆ. ಕುಲಪತಿ, ಕುಲಸಚಿವರನ್ನು ಕೇಳಿದರೆ ಎಸ್ ಸಿಪಿ ಮತ್ತು ಟಿಎಸ್‌ಪಿ ಅನುದಾನ ಬಂದಿಲ್ಲ ಎನ್ನುತ್ತಿದ್ದಾರೆ. ಅವರಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಆರೋಪಿಸಿದರು. ಈ ವೇಳೆ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಸಿಎಂ ಶೀಘ್ರವೇ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಬೆಂಗಳೂರು: ಬಿಜೆಪಿ ಸರಕಾರ ನಾಡಿನ ಸಮಸ್ಯೆಗಳನ್ನು ʼವಿಷಯಾಂತರʼ ಮಾಡಲು ʼಮತಾಂತರʼ ಗುಮ್ಮವನ್ನು ತಂದು ನಿಲ್ಲಿಸಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುವರ್ಣಸೌಧಕ್ಕೆ ಮಾಧ್ಯಮಗಳನ್ನು ನಿರ್ಬಂಧ ಮಾಡಿರುವ ಕ್ರಮ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ ಎಂದ , ಅವರು, ನಾಡಿನ ಜನರು ಮತ್ತು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ರಾಜಕೀಯದ ಲಾಭದ ದುರಾಸೆಗೆ ರಾಜ್ಯದ ಸಾಮರಸ್ಯಕ್ಕೆ ಬೆಂಕಿ ಇಡುವ ಮತಾಂತರ ನಿಷೇಧ ಮಸೂದೆಯ ನಿಜ ಬಣ್ಣ ಎಲ್ಲಿ ಬಯಲಾಗುತ್ತದೋ ಎಂದು ಅಂಜಿ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ ಎಂಬ ಸಂಶಯ ಇದೆ ಎಂದು ಅವರು ಹೇಳಿದ್ದಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಮಾಧ್ಯಮ ರಂಗವು ಸಂವಿಧಾನದ ಒಂದು ಅಂಗ. ಈಗ ಮಾಧ್ಯಮ ಪ್ರವೇಶಕ್ಕೆ ನಿರ್ಬಂಧ ಹೇರುವ ಮೂಲಕ ಸಂವಿಧಾನದ ಒಂದು ಕಾಲು ಮುರಿಯುವ ಪ್ರಯತ್ನ ಮಾಡಲಾಗುತ್ತಿದೆ.ಇದು ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎನ್ನುವವರ ದರ್ಪದ ಹೆಜ್ಜೆಯಷ್ಟೇ. ಅವರ ದುರುದ್ದೇಶ ಸ್ಪಷ್ಟ’ ಎಂದು ಟ್ವೀಟ್ ಮಾಡಿದ್ದಾರೆ. ಈ ಮಧ್ಯೆ ಮಾನ್ಯ ಸ್ಪೀಕರ್ ಅವರು…