Subscribe to Updates
Get the latest creative news from FooBar about art, design and business.
- ಅಪ್ರಾಪ್ತ ಬಾಲಕಿ ಸಹಿತ 8 ಮಂದಿ ಮಹಿಳೆಯರ ಮೇಲೆ ಅತ್ಯಾಚಾರ: ಯೋಗ ಗುರು ಬಂಧನ
- ಮೈಸೂರು ದಸರಾ: ಪ್ರತಿಭಟನೆ, ಗೊಂದಲ ನಡೆಯದಂತೆ ಕಟ್ಟೆಚ್ಚರ ವಹಿಸಲು ಸೂಚನೆ
- ಕಮಲನಗರ, ತೋರಣ ಗ್ರಾಮದ ಸಂಪರ್ಕ ರಸ್ತೆ ದುರಸ್ತಿಗೆ ಹರಿದೇವ ಸಂಗನಾಳ ಆಗ್ರಹ
- ಬೀದರ್ ನಲ್ಲಿ ತಲೆಕೆಳಗಾಗಿ ಹಾರಿದ ರಾಷ್ಟ್ರಧ್ವಜ
- ವಿಶ್ವಕರ್ಮ ಸಮಾಜವು ಸಂಘಟಿತರಾದಾಗ ಯೋಜನೆಗಳ ಸದ್ಬಳಕೆಗೆ ಸಹಕಾರಿ: ತಹಶೀಲ್ದಾರ್ ಮೋಹನಕುಮಾರಿ ಸಲಹೆ
- ಎಂ.ಎನ್.ಭೀಮರಾಜ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ
- ದನಗಳ ಅವಶೇಷ ಅರಣ್ಯ ಭೂಮಿಯಲ್ಲಿ ಎಸೆದ ಆರೋಪ: ಇಬ್ಬರ ಬಂಧನ
- ಡಿಸೆಂಬರ್ 31 ರ ಮುನ್ನ ಹೊಸ ಚಿಕ್ಕೋಡಿ ಜಿಲ್ಲೆ ರಚನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Author: admin
ತುಮಕೂರು: ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ತುಮಕೂರು ನಗರದ 34ನೇ ವಾರ್ಡ್ ನ ಎಳ್ಳರಬಂಡೆ ಸ್ಲಂನಲ್ಲಿ ನೂತನ ಶಾಖಾಸಮಿತಿಯ ನಾಮಫಲಕ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸೈಯದ್ ಮುಜೀಬ್, ದೀಪಿಕಾ, ರಮೇಶ್, ಯಾಸ್ಮಿನ್ ತಾಜ್ ಹಾಗೂ ನೂತನ ಶಾಖಾ ಸಮಿತಿಯ ಅಧ್ಯಕ್ಷರಾದ ಜಾಬಿರ್ ಖಾನ್, ಕಾರ್ಯದರ್ಶಿ ನರಸಮ್ಮ, ಮುನೀರ್ ಅಹ್ಮದ್, ರಫೀಕ್, ಕೃಷ್ಣಪ್ಪ, ಗೌರಮ್ಮ, ಮೊಹಮದ್ ಅತಿಕ್, ಮುಬಿನ್ ತಾಜ್, ನಗೀನ ಹಾಗೂ ತುಮಕೂರು ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್, ತಿರುಮಲಯ್ಯ, ಶಂಕ್ರಯ್ಯ, ಹಯಾತ್ ಸಾಬ್ ಮುಂತಾದವರು. ವರದಿ: ಉದಯ್ ಕುಮಾರ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ತುಮಕೂರು: ಗಣರಾಜ್ಯೋತ್ಸವದ ವೇಳೆ ಅಂಬೇಡ್ಕರ್ ಫೋಟೋ ತೆಗೆಸಿ, ಉದ್ಧಟತನದ ವರ್ತನೆ ತೋರಿದ ರಾಯಚೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸಲು ಒತ್ತಾಯಿಸಿ ಸೋಮವಾರ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಫೆ.7ರಂದು ಬೆಳಗ್ಗೆ 10:30ಕ್ಕೆ ತುಮಕೂರು ನಗರದ ಟೌನ್ ಹಾಲ್ ವೃತ್ತದಿಂದ ಎಂ.ಜಿ. ರಸ್ತೆಯ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಸಂವಿಧಾನ ಪರ ಸಂಘಟನೆಗಳ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಬೃಹತ್ ಪ್ರತಿಭಟನೆಯಲ್ಲಿ ಸಂವಿಧಾನ ಆಶಯಗಳನ್ನು ಒಪ್ಪಿರುವ ಭವಿಷ್ಯದ ಪ್ರಜೆಗಳಾಗಿ ರೊಪುಗೂಳ್ಳುತ್ತಿರುವ ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖಂಡರು ಇದೇ ವೇಳೆ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನ ಅಲೆಮಾರಿ ಮತ್ತು ಅರೆ ಅಲೆಮಾರಿಗಳಗೆ ಸರ್ಕಾರದಿಂದ ಸಿಗಬೇಕಾದಂತಹ ಮೂಲ ಸೂಕ್ತ ಸೌಲಭ್ಯಗಳು ಇತ್ತೀಚಿನ ದಿನಗಳಲ್ಲಿ ಸಿಗುತ್ತಿಲ್ಲ. ತಕ್ಷಣವೇ ಸೌಲಭ್ಯಗಳನ್ನು ಒದಗಿಸಬೇಕು ಎಂದು ದೊಂಬಿದಾಸರ ಯುವ ಸೇನೆ ರಾಜ್ಯ ಮಹಿಳಾ ಕಾರ್ಯಾಧ್ಯಕ್ಷರಾದ ಎಸ್.ಆರ್. ಇಂದಿರಾಗುರುಸ್ವಾಮಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ. ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ, ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಕಲ್ಪಿಸಬೇಕು ವಸತಿ ರಹಿತ ಕುಟುಂಬಗಳಿಗೆ ವಸತಿ ಕಲ್ಪಿಸಬೇಕು. ಅಲೆಮಾರಿ ಜನಾಂಗದವರಿಗೆ ಮೂರು ವರ್ಷದಿಂದ ಸಾಲ ನೀಡಿರುವುದಿಲ್ಲ, ಈ ಕೂಡಲೇ ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಸಾಲ ನೀಡಬೇಕು. ಈಗಾಗಲೇ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಸಾಲ ಮತ್ತು ಸಹಾಯಧನವನ್ನು ನೀಡಬೇಕು. ಗುಡಾರ ಮತ್ತು ಗುಡಿಸಲು ಮುಕ್ತ ಅಲೆಮಾರಿ ಕಾಲೋನಿಗಳನ್ನು ಮಾಡಬೇಕು. ಅಲೆಮಾರಿಗಳಿಗೆ ಗಂಗಾಕಲ್ಯಾಣ ಅಡಿಯಲ್ಲಿ ಬೋರ್ವೆಲ್ ಕೋರೆಸಿಕೊಡಬೇಕು. ಅಲೆಮಾರಿ, ಅರೆ ಅಲೆಮಾರಿ ಮಹಿಳಾ ಸಂಘಗಳಿಗೆ ಗುಂಪು ಸಾಲಗಳನ್ನು ನೀಡಬೇಕು ಹಾಗೂ ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕಲು ಕೌಶಲ್ಯ ಅಭಿವೃದ್ಧಿಯಲ್ಲಿ ಬರುವ…
ಕೊರಟಗೆರೆ: ತಾಲ್ಲೂಕಿನ ಕಸಬಾ ಹೋಬಳಿಗಳಿಗೆ ಸಂಬಂಧಿಸಿದಂತೆ ಅನೇಕ ಗ್ರಾಮಗಳಿಂದ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ತಾಲ್ಲೂಕು ಕಚೇರಿಗಳಿಗೆ ಅಲೆದಾಡುತ್ತಿರುವುದು ಸಹಜವಾಗಿದೆ. ಈ ಹಿನ್ನೆಲೆಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಹೋನ್ನತ ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಅದು ಏನು ಅಂತೀರಾ? ಅದುವೇ ‘ಗ್ರಾಮ ಒನ್ ಸೇವಾ ಸಿಂಧು ಕೇಂದ್ರ’. ಈ ಕೇಂದ್ರದ ಅಡಿಯಲ್ಲಿ ಸುಮಾರು 790 ಕ್ಕೂ ಹೆಚ್ಚು ಸೇವೆಗಳು ಸಾರ್ವಜನಿಕರಿಗೆ ಸಿಗಲಿದೆ. ಈಗಾಗಲೇ ಈ ಸೇವೆಗಳು ಕೆಲವು ಗ್ರಾಮ ಪಂಚಾಯಿತಿ ಭಾಗಗಳಲ್ಲಿ ಪ್ರಾರಂಭವಾಗಿವೆ. ಜನರ ಅನೇಕ ಕೆಲಸ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಆದ್ದರಿಂದ ಇನ್ನೂ ಕೆಲವು ಗ್ರಾಮ ಪಂಚಾಯಿತಿಗಳ ಭಾಗಗಳಲ್ಲಿ ಈ .ಗ್ರಾಮ ಒನ್. ಸೇವಾ ಕೇಂದ್ರ ಪ್ರಾರಂಭವಾಗಬೇಕು. ಅದರಂತೆಯೇ ಈ ಕೆಳಕಂಡ ಗ್ರಾಮ ಪಂಚಾಯ್ತಿ ಹಳ್ಳಿಗಳಲ್ಲಿ ಈ ಸೇವಾ ಕೇಂದ್ರ ಪ್ರಾರಂಭಿಸಲು ಸೂಚಿಸಲಾಗಿದೆ . ನೆನಪಿರಲಿ, ಒಂದು ಗ್ರಾಮ ಪಂಚಾಯಿತಿಗೆ ಒಂದೇ ಸೇವಾ ಕೇಂದ್ರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ತಹಶೀಲ್ದಾರ್ ನಹಿದಾ ಜಮ್ ಜಮ್ ತಿಳಿಸಿದ್ದಾರೆ. ಗ್ರಾಮ ಪಂಚಾಯ್ತಿಗಳ…
ಮುಂಬೈ : ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (92) ಅವರು ಇಂದು ನಿಧನರಾಗಿದ್ದಾರೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಲತಾ ಮಂಗೇಶ್ಕರ್ ಅವರಿಗೆ ಜನವರಿ 8ರಂದು ಕೊವಿಡ್ ಕಾಣಿಸಿಕೊಂಡಿತ್ತು. ನಂತರ ಅವರಿಗೆ ನ್ಯುಮೋನಿಯಾ ಕೂಡ ಕಾಣಿಸಿಕೊಂಡಿತ್ತು. ಅನಾರೋಗ್ಯ ಹಿನ್ನೆಲೆಯಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ತುರುವೇಕರೆ: ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛವಾಗಿಲ್ಲದ ಕಾರಣ ನಲ್ಲಿಯಲ್ಲಿ ನೀರಿನ ಬದಲು ಕಪ್ಪೆಯ ಕಾಲು ಬಂದಿರುವ ಘಟನೆ ತಾಳ್ಕೆರೆ ಪಂಚಾಯ್ತಿಯ ಪುಟ್ಟಮಾದಿಹಳ್ಳಿಯ ಟಿಪ್ಪು ನಗರದಲ್ಲಿ ನಡೆದಿದೆ. ಇಲ್ಲಿನ ನೀರಿನ ಟ್ಯಾಂಕ್ ನ್ನು ವರ್ಷಗಳಿಂದ ಸ್ವಚ್ಛ ಮಾಡದ ಕಾರಣ, ಇಲ್ಲಿನ ಟ್ಯಾಂಕ್ ಗಳು ಗಲೀಜಾಗಿ ಕಪ್ಪೆ ಕ್ರಿಮಿ ಕೀಟಗಳ ವಾಸಸ್ಥಾನವಾಗಿದೆ. ಇಲ್ಲಿನ ಜನರು ವಿಧಿಯಿಲ್ಲದೇ ಇದೇ ನೀರನ್ನು ಕುಡಿಯಲು ಬಳಸುತ್ತಿರುವ ಕಾರಣ , ಪದೇ ಪದೇ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎನ್ನುವ ಆಕ್ರೋಶದ ಮಾತುಗಳು ಘಟನೆಯ ಬೆನ್ನಲ್ಲೇ ಕೇಳಿ ಬಂದಿದೆ. ಆದರೆ ತಲೆ ಕೆಡಿಸಿಕೊಳ್ಳದ ಗ್ರಾಮ ಪಂಚಾಯ್ತಿ ಕಾರ್ಯಾಲಯ ಜಾಣ ಕುರುಡು ತೋರಿಸುತ್ತಿದೆ. ಇಲ್ಲಿನ ಜನರಿಗೆ ಖಾಯಿಲೆ ಬಂದು ಸಾವು ನೋವು ಸಂಭವಿಸಿದರೆ, ಅದಕ್ಕೆ ಪಂಚಾಯ್ತಿಯೇ ನೇರ ಹೊಣೆ ಎಂದು ಇಲ್ಲಿನ ಗ್ರಾಮಸ್ಥರು ಎಚ್ಚರಿಸಿದ್ದಾರೆ. ವರದಿ: ವೆಂಕಟೇಶ ಜೆ.ಎಸ್.( ವಿಕ್ಕಿ ) ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…
ಪಾವಗಡ: ಪಾವಗಡ ಗಡಿ ಭಾಗವಾದ ವೆಂಕಟಮ್ಮನಹಳ್ಳಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹೆಲ್ಪ್ ಸೊಸೈಟಿ ವತಿಯಿಂದ ಶಾಲಾ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಮಕ್ಕಳಿಗೆ ಬ್ಯಾಗ್ ವಿತರಿಸಿ ಮಾತನಾಡಿದ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್, ಮಕ್ಕಳ ಭವಿಷ್ಯದ ಬುನಾದಿಯೇ ಅಂಗನವಾಡಿ, ಇಂತಹ ಕೇಂದ್ರದಲ್ಲಿ ಒಳ್ಳೆ ವಾತಾವರಣ ಮೂಲಕ ಮಕ್ಕಳು ಬೆಳೆದು ವಿದ್ಯಾವಂತರಾಗಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೆಲ್ಪ್ ಸೊಸೈಟಿ ತಂಡ ತಾಲ್ಲೂಕಿನ ಹಲವಾರು ಅಂಗನವಾಡಿಗಳ ಶಾಲಾ ಮಕ್ಕಳ ಬಗ್ಗೆ ಹೆಚ್ಚಿನ ಒಲವು ತೋರಿ ಬ್ಯಾಗ್, ಲೇಖನ ಸಾಮಗ್ರಿಗಳನ್ನು ಹಾಗೂ ಕೆಲ ಪರಿಕರಗಳನ್ನು ವಿತರಿಸುತ್ತಿದೆ ಎಂದರು ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ವೆಂಕಟಸುಬ್ಬಯ್ಯ, ತಿರುಮಣಿ ಸಮುದಾಯ ಆರೋಗ್ಯ ಕೇಂದ್ರದ ಅರೋಗ್ಯ ನಿರೀಕ್ಷಣ ಅಧಿಕಾರಿಗಳಾದ ರಮೇಶ್, ಅಂಗನವಾಡಿ ಶಿಕ್ಷಕಿ ಈಶ್ವರಮ್ಮ, ಗೋವಿಂದಮ್ಮ, ಸಹಾಯಕಿಯರಾದ ಲಕ್ಷ್ಮೀದೇವಿ, ಕೃಷ್ಣವೇಣಿ, ಹೆಲ್ಪ್ ಸೊಸೈಟಿ ಪದಾಧಿಕಾರಿಗಳಾದ ಲತೀಶ್ ನಾಯ್ಡು, ಅಧಿಕೇಶವ, ಸಾಗರ್ ಹಾಗೂ ಗ್ರಾಮದ ಮುಖಂಡರು, ಪೋಷಕರು ಇದ್ದರು. ವರದಿ: ರಾಮಪ್ಪ ಸಿ.ಕೆ.ಪುರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…
ಪಾವಗಡ: ತಾಲೂಕು ಚನ್ನಕೇಶವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ದೇವರಹಟ್ಟಿಯಲ್ಲಿ, ಪಾವಗಡ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಕ್ಕೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಉಪನ್ಯಾಸಕರುಗಳಾದ ದೊಡ್ಡಯ್ಯ ಮತ್ತು ಬೊಮ್ಮಣ್ಣ , ಶಿಕ್ಷಣ, ಮೂಢನಂಬಿಕೆ, ಆಚಾರ, ವಿಚಾರಗಳ ಬಗ್ಗೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಬಗ್ಗೆ ತಿಳುವಳಿಕೆ ನೀಡಿದರು. ಹೆಣ್ಣು ಮಕ್ಕಳು ಮುಟ್ಟು ಆದ ನಂತರ ಅವರನ್ನು ಮೂರು ಅಥವಾ ನಾಲ್ಕು ದಿನಗಳ ಕಾಲ ಮನೆಯಿಂದ ಹೊರಗೆ ಹಾಕುವ ಸಂಪ್ರದಾಯವನ್ನು ಬಿಟ್ಟು ಬಿಡಬೇಕು ಎಂದು ಅವರು ಇದೇ ವೇಳೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಿದರು ಶಿಕ್ಷಕರಾದ ಸಣ್ಣ ಚಿತ್ತಪ್ಪ ಮಾತನಾಡುತ್ತಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಗ್ರಾಮಸ್ಥರಿಗೆ ಸಿಗುವಂತೆ ಅನುಕೂಲ ಮಾಡಿಕೊಡಬೇಕೆಂದು ಇಲಾಖೆಯ ಅಧಿಕಾರಿಗಳಲ್ಲಿ ಒತ್ತಾಯಿಸಿದರು. ಇದೇ ವೇಳೆ ಮಾತನಾಡಿದ ಉಪನ್ಯಾಸಕರಾದ ನಾಗೇಂದ್ರಪ್ಪ, ಸಮುದಾಯದ ಜನರು ದುಶ್ಚಟಗಳಿಂದ ದೂರವಿದ್ದು, ಮುಂದಿನ ಉತ್ತಮ ಭವಿಷ್ಯಕ್ಕೆ ತಳಪಾಯ ಹಾಕುವಂತೆ ಸಾರ್ವಜನಿಕರಿಗೆ…
ತಿಪಟೂರು: ಇಲ್ಲಿನ ಗುರುಭವನದಲ್ಲಿ ಕಿಬ್ಬನಹಳ್ಳಿ ಹೋಬಳಿ ಮತ್ತು ನೊಣವಿನಕೆರೆ ಹೋಬಳಿ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ನಡೆದ ಗುರು ಸ್ಪಂದನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಜೆ .ಪ್ರಭುಸ್ವಾಮಿ ಅವರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಸಂಘದ ತಾಲ್ಲೂಕು ಶಾಖೆ ಅಧ್ಯಕ್ಷರಾದ ಜಿ.ಆರ್. ಜಯರಾಮ್, ಪ್ರಧಾನ ಕಾರ್ಯದರ್ಶಿಗಳಾದ ಟಿ.ಕೆ. ಪಟ್ಟಾಭಿರಾಮು, ಗೌರವಾಧ್ಯಕ್ಷರಾದ ಹೆಚ್.ಸಿ. ಓಂಕಾರಮೂರ್ತಿ, ಉಪಾಧ್ಯಕ್ಷರುಗಳಾದ ಹೆಚ್.ಎಸ್. ಸೋಮಶೇಖರ್, ಸಿ.ಎಂ.ಸುಮಾ, ಸಹ ಕಾರ್ಯದರ್ಶಿಗಳಾದ ಸಿ.ಎಸ್. ನಾಗರಾಜು, ಆರ್. ಸಾವಿತ್ರಮ್ಮ ಖಜಾಂಚಿ ಎಸ್.ಎಸ್. ಮಮತಾ, ಸಂಘಟನಾ ಕಾರ್ಯದರ್ಶಿ ಅನಿತಾ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯವಸ್ಥಾಪಕರಾದ ರಮೇಶ್, ಅಧೀಕ್ಷಕರಾದ ಚನ್ನಬಸವಣ್ಣ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಎಚ್.ಎಸ್.ವೆಂಕಟೇಶ್, ಪ್ರಥಮ ದರ್ಜೆ ಸಹಾಯಕರಾದ ಆರ್.ಪರಶಿವಮೂರ್ತಿ, ದ್ವಿತೀಯ ದರ್ಜೆ ಸಹಾಯಕ ಚಂದ್ರಶೇಖರ ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ನಿರ್ದೇಶಕರು ಹಾಗೂ ಸಮಸ್ತ ಶಿಕ್ಷಕರು ಭಾಗವಹಿಸಿದ್ದರು. ವರದಿ: ಆನಂದ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…
ಹಿರಿಯೂರು: ವ್ಯಕ್ತಿಯೊಬ್ಬರ ಬೈಕ್ ನಿಂದ ಕಳ್ಳರು ಹಣ ಕದ್ದು ಪರಾರಿಯಾಗಿರುವ ಘಟನೆ ಹಿರಿಯೂರು ನಗರದ ಸಂಜೀವಿನಿ ಆಸ್ಪತ್ರೆ ರಸ್ತೆಯಲ್ಲಿರುವ ಸಿದ್ದಗಂಗಾ ಬೇಕರಿ ಬಳಿಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ನರಸಿಂಹ ಬಡಾವಣೆ ವಾಸಿ ನಿವೃತ್ತ ಶಿಕ್ಷಕರಾದ ಅಶ್ವಥ್ ನಾರಾಯಣ್ ಶುಕ್ರವಾರ ಬೆಳಿಗ್ಗೆ ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆಯಲ್ಲಿರುವ ಹಿರಿಯೂರು ನಗರದ ಅಂಚೆ ಕಚೇರಿಯಲ್ಲಿ ಹಣ ಡ್ರಾ ಮಾಡಿಕೊಂಡು, ಪಿ.ಬಿ.ರೋಡ್ ಶಾಖೆಯ ಎಸ್ ಬಿ ಐ ಬ್ಯಾಂಕಿನಲ್ಲಿ ರೂ. ಎರಡು ಲಕ್ಷ ಹಣವನ್ನು ಬದಲಾವಣೆ ಮಾಡಿಕೊಂಡು, ಹಿರಿಯೂರು ಖಾಸಗಿ ಬಸ್ ನಿಲ್ದಾಣದ ಸಂಜೀವಿನಿ ಆಸ್ಪತ್ರೆಯ ರಸ್ತೆಯಲ್ಲಿರುವ ಸಿದ್ದಗಂಗಾ ಬೇಕರಿ ಬಳಿ ಬೈಕ್ ನಿಲ್ಲಿಸಿ ನೀರಿನ ಬಾಟಲಿ ತೆಗೆದುಕೊಳ್ಳಲು ಬೇಕರಿ ಬಳಿಗೆ ಹೋಗಿದ್ದಾರೆ. ಇತ್ತ, ಅಶ್ವಥ್ ನಾರಾಯಣ್ ಅವರು ಹಣ ಡ್ರಾ ಮಾಡಿರುವುದನ್ನು ಕಂಡು ಫಾಲೋ ಮಾಡಿಕೊಂಡು ಬಂದಿದ್ದ ಕಳ್ಳರು ಬೈಕ್ ನಲ್ಲಿದ್ದ ಹಣವನ್ನು ಎಗರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯ ದೃಶ್ಯ ಬೇಕರಿಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಹಿರಿಯೂರು ನಗರ…