Subscribe to Updates
Get the latest creative news from FooBar about art, design and business.
- ರಾಹುಲ್ ಗಾಂಧಿ ಅವರಿಗೆ ಕಾಮನ್ ಸೆನ್ಸ್ ಇಲ್ಲ: ಆರ್.ಅಶೋಕ್ ವಾಗ್ದಾಳಿ
- ಅಪ್ರಾಪ್ತ ಬಾಲಕಿ ಸಹಿತ 8 ಮಂದಿ ಮಹಿಳೆಯರ ಮೇಲೆ ಅತ್ಯಾಚಾರ: ಯೋಗ ಗುರು ಬಂಧನ
- ಮೈಸೂರು ದಸರಾ: ಪ್ರತಿಭಟನೆ, ಗೊಂದಲ ನಡೆಯದಂತೆ ಕಟ್ಟೆಚ್ಚರ ವಹಿಸಲು ಸೂಚನೆ
- ಕಮಲನಗರ, ತೋರಣ ಗ್ರಾಮದ ಸಂಪರ್ಕ ರಸ್ತೆ ದುರಸ್ತಿಗೆ ಹರಿದೇವ ಸಂಗನಾಳ ಆಗ್ರಹ
- ಬೀದರ್ ನಲ್ಲಿ ತಲೆಕೆಳಗಾಗಿ ಹಾರಿದ ರಾಷ್ಟ್ರಧ್ವಜ
- ವಿಶ್ವಕರ್ಮ ಸಮಾಜವು ಸಂಘಟಿತರಾದಾಗ ಯೋಜನೆಗಳ ಸದ್ಬಳಕೆಗೆ ಸಹಕಾರಿ: ತಹಶೀಲ್ದಾರ್ ಮೋಹನಕುಮಾರಿ ಸಲಹೆ
- ಎಂ.ಎನ್.ಭೀಮರಾಜ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ
- ದನಗಳ ಅವಶೇಷ ಅರಣ್ಯ ಭೂಮಿಯಲ್ಲಿ ಎಸೆದ ಆರೋಪ: ಇಬ್ಬರ ಬಂಧನ
Author: admin
ಜನವರಿ 23 ರಿಂದ ಭಾನುವಾರದಂದು ಸಂಪೂರ್ಣ ಲಾಕ್ ಡೌನ್ ಅನ್ನು ತಮಿಳುನಾಡು ಮುಖ್ಯಮಂತ್ರಿ ಶುಕ್ರವಾರ ಘೋಷಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಲಾಕ್‌ಡೌನ್ ಶನಿವಾರ ರಾತ್ರಿ 10 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಲಾಕ್ ಡೌನ್ ಸಮಯದಲ್ಲಿ ಅಗತ್ಯ ಸೇವೆಗಳನ್ನು ಮಾತ್ರ ಕಾರ್ಯನಿರ್ವಹಿಸಲು ಅನುಮತಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ. ರಾಜ್ಯದಲ್ಲಿ ಕೊರೊನಾವೈರಸ್ ಸೋಂಕುಗಳು ವೇಗವಾಗಿ ಏರಿಕೆಯಾಗಲು ಪ್ರಾರಂಭಿಸಿದಾಗಿನಿಂದ ತಮಿಳುನಾಡು ಸರ್ಕಾರ ಜನವರಿ 9 ರಿಂದ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಅನ್ನು ವಿಧಿಸಿದೆ. ಎಲ್ಲಾ ದಿನಗಳಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಇತ್ತೀಚಿನ ಆರೋಗ್ಯ ಬುಲೆಟಿನ್ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ತಮಿಳುನಾಡಿನಲ್ಲಿ 28,561 ಹೊಸ ಪ್ರಕರಣಗಳು ಮತ್ತು 39 ಸಾವುಗಳು ದಾಖಲಾಗಿವೆ. ರಾಜ್ಯದ ಸಕ್ರಿಯ ಕೋವಿಡ್ ಸಂಖ್ಯೆ 1,79,205 ಕ್ಕೆ ತಲುಪಿದೆ, ಆದರೆ ಒಟ್ಟು ಪ್ರಕರಣಗಳು 30 ಲಕ್ಷದ…
ಮುಂಬೈ: ಸ್ವಚ್ಚತಾ ಸಿಬ್ಬಂದಿ 2 ವರ್ಷದ ಮಗುವಿಗೆ ಬದಲಿ ಚುಚ್ಚು ಮದ್ದು ನೀಡಿದ ಪರಿಣಾಮ ಮಗು ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಗೋವಂಡಿಯ ನೂರ್ ಆಸ್ಪತ್ರೆಯಲ್ಲಿ ನಡೆದಿದೆ. ಭೇದಿಯಿಂದ ಬಳಲುತ್ತಿದ್ದ ಮಗುವನ್ನು ಜನವರಿ 8 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗು ದಾಲಾಗಿದ್ದ ವಾರ್ಡಿನಲ್ಲಿ ಮಲೇರಿಯಾ ರೋಗಿ ದಾಖಲಾಗಿದ್ದ. ಜನವರಿ 13 ರಂದು ಈ ಮಲೇರಿಯಾ ರೋಗಿಗೆ ನೀಡಬೇಕಿದ್ದ ಚುಚ್ಚು ಮದ್ದನ್ನು, 18 ವರ್ಷದ ಸ್ವಚ್ಚತಾ ಸಿಬ್ಬಂದಿ ಮಗುವಿಗೆ ನೀಡಿದ್ದಾಳೆ. ಇದರಿಂದ ಮಗು ಸಾವನ್ನಪ್ಪಿದೆ. ವಿಷಯವನ್ನು ತಿಳಿದ ಮಗುವಿನ ಕುಟುಂಬಸ್ಥರು ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಾರೆ.ಮಗುವನ್ನು ಕಳೆದುಕೊಂಡ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆಸ್ಪತ್ರೆ ಮಾಲೀಕ ನಾಸಿರುದ್ದೀನ್ ಸೈಯದ್(63), ಡಾ. ಅಲ್ತಫ್ ಖಾನ್, ನರ್ಸ್ ಸಲೀಮುನ್ನಿಸಾ ಖಾನ್(21) ಹಾಗೂ ಸ್ವಚ್ಛತಾ ಸಿಬ್ಬಂದಿ ನರ್ಗೀಸ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕೆ ಸತ್ಯ ಹೊರ ಬೀಳಲಿದೆ. ಪೊಲೀಸರು ಹೆಚ್ಚಿನ ತನಿಕೆ ನಡೆಸುತ್ತಿದ್ದಾರೆ.…
ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಸಿನಿಮಾಗಾಗಿ ಅಪ್ಪು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಪ್ಪು ಹುಟ್ಟು ಹಬ್ಬದಂದೆ ಸಿನಿಮಾ ನೊಡಬೇಕು ಎಂದು ಎದುರುನೋಡುತ್ತಿದ್ದಾರೆ. ಇದಕ್ಕಾಗಿ ಚೇತನ್ ಸಿನಿಮಾಗೆ ಸಂಪೂರ್ಣ ಶ್ರಮ ಹಾಕಿ ಆದಷ್ಟು ಬೇಗ ಸಿನಿಮಾವನ್ನ ಮುಗಿಸುವ ಯೋಜನೆಯಲ್ಲಿದ್ದಾರೆ. ಈ ಮಧ್ಯೆ ಸಿನಿ ತಂಡ ಅಪ್ಪು ಅಭಿಮಾನಿಗಳಿಗಾಗಿ ಖುಷಿ ಸುದ್ದಿಯೊಂದನ್ನ ನೀಡಿದೆ. ಜೇಮ್ಸ್ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ಮತ್ತು ರಾಘವೇಂದ್ರ ರಾಜ್ ಕುಮಾರ್ ನಟಿಸಿಲಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳಿಂದ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ. ಜೇಮ್ಸ್ ಶೂಟಿಂಗ್ ಶುರುವಾಗಿದ್ದು ಶಿವಣ್ಣ ಮತ್ತು ರಾಘಣ್ಣ ಇಬ್ಬರು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಇದನ್ನ ಕೇಳಿ ಅಪ್ಪು ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಇನ್ನೊಂದೆಡೆ ಅಪ್ಪು ಅವರ ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ಶುರುವಾಗಿದ್ದ ಚಿತ್ರಗಳನ್ನ ಕಂಪ್ಲೀಟ್ ಮಾಡಲು ದೊಡ್ಮನೆ ಮುಂದಾಗಿದೆ. ಅಪ್ಪು ಕನಸಿನ ಯೋಜನೆಗಳನ್ನ ಶೀಘ್ರವೆ ನಿಮ್ಮ ಮುಂದೆ ಪ್ರಸ್ತುತಪಡಿಸಲಿದ್ದೇವೆ ಎಂದು ರಾಘವೇಂದ್ರ ರಾಜ್ ಕುಮಾರ್…
ಸರಗೂರು: ತನ್ನ ಪತ್ನಿಯಿಂದಲೇ ವ್ಯಕ್ತಿಯೊಬ್ಬ ಹತ್ಯೆಯಾಗಿರುವ ಘಟನೆ ಸರಗೂರು ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ತಾಲ್ಲೂಕಿನ ಮುಳ್ಳೂರು ಗ್ರಾಮದ ನಿವಾಸಿ ಬಸವರಾಜು(41) ಮೃತ ದುರ್ದೈವಿ. ಈತನ ಪತ್ನಿ ನೇತ್ರಾವತಿ(26) ಎಂಬವವರು ತನ್ನ ಪತಿ ಮನೆಯ ಖರ್ಚಿಗೆ ಸರಿಯಾಗಿ ಹಣ ನೀಡುತ್ತಿಲ್ಲ ಮತ್ತು ತನ್ನ ಗಂಡನಿಗೆ ಬೇರೆ ಕಡೆ ಅಕ್ರಮ ಸಂಬಂಧವಿದೆ ಎಂಬ ಅನುಮಾನದಿಂದ ಹಾಗಾಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ಶುಕ್ರವಾರ ರಾತ್ರಿ ಬಸವರಾಜ್ ಮನೆಗೆ ಬಂದ ವೇಳೆ ಪತಿ ಪತ್ನಿಯರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಹೆಂಡತಿ ತನ್ನ ಗಂಡನ ಗುಪ್ತಾಂಗಕ್ಕೆ ಹೊಡೆದಿದ್ದು, ಪರಿಣಾಮವಾಗಿ ಬಸವರಾಜು ಸಾವನ್ನಪ್ಪಿದ್ದಾನೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಈ ದಂಪತಿಗಳಿಗೆ 5 ವರ್ಷದ ಮಗು ಕೂಡ ಇದೆ ಎನ್ನಲಾಗಿದೆ. ಈ ಬಗ್ಗೆ ಬಸವರಾಜು ಅವರ ಅಣ್ಣ ಗುರುಸ್ವಾಮಿ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನೇತ್ರಾವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಆರಂಭಿಸಿದ್ದಾರೆ. ವರದಿ: ಚಂದ್ರ ಹಾದನೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ತುಮಕೂರು: ಪ್ರತಿಯೊಬ್ಬ ಮನುಷ್ಯನಿಗೂ ತಾವು ಸುಖೀ ಜೀವನ ನಡೆಸಲು ಒಂದು ಮನೆ, ಒಂದು ಕಾರು, ಪುಟ್ಟ ಸಂಸಾರ ದೊಂದಿಗೆ ಜೀವನ ನಡೆಸುವ ಆಸೆಯನ್ನ ಪ್ರತಿಯೊಬ್ಬರು ಕಾಣುತ್ತಾರೆ. ಅದರಂತೆ ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ರಾಮನ ಪಾಳ್ಯದ ಕೆಂಪೇಗೌಡ ಎನ್ನುವ ಯುವಕನೊಬ್ಬ ತುಮಕೂರಿನ ಮಹೇಂದ್ರ ಕಾರ್ ಶೋರೂಮ್ ಗೆ ಕಾರು ತೆಗೆದುಕೊಳ್ಳಲು ಬರುತ್ತಾನೆ ಆದರೆ ಯುವಕನ ವೇಷಭೂಷಣ ನೋಡಿ ಶೋರೂಂನಲ್ಲಿ ಕೆಲಸ ಮಾಡುವ ಸೇಲ್ಸ್ ಏಜೆಂಟ್ ಒಬ್ಬನು ಗ್ರಾಹಕರಾದ ಕೆಂಪೇಗೌಡನಿಗೆ ಹತ್ತು ರೂಪಾಯಿ ದುಡ್ಡು ಕೊಡುವ ಯೋಗ್ಯತೆ ಇಲ್ಲ ಕಾರು ತೆಗೆದುಕೊಳ್ಳಲು ಬಂದಿದೆಯೆಂದು ಗುರುವಾರ ಸಂಜೆ 6ಗಂಟೆ ವೇಳೆಯಲಿ ಅವಮಾನಿಸುತ್ತಾನೆ . ಅರೆರೆ ………ಇದೇನಿದು ……ಈ ಸುದ್ದಿ ದಿಗ್ಗಜರು ಚಿತ್ರದ ಹಾಗೆ ಇದೆಯಲ್ಲ ಎಂದು ಅಂದುಕೊಳ್ಳಬೇಡಿ ಈ ಘಟನೆ ತುಮಕೂರಿನಲ್ಲಿ ವರದಿಯಾಗಿದೆ . ಇನ್ನು ಕಾರ್ ಶೋರೂಮ್ ನ ಸೇಲ್ಸ್ ಏಜೆಂಟ್ ಒಬ್ಬ ಅವಮಾನಿಸಿದ ಅದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ಕೆಂಪೇಗೌಡ ಹಾಗೂ ಆತನ ಸ್ನೇಹಿತರು ಒಂದು ಗಂಟೆಯಲ್ಲಿ ದುಡ್ಡು ತರುವೆ ಕಾರನ್ನು …
ಪಾವಗಡ: ತಾಲ್ಲೂಕು ಕಚೇರಿ ಆವರಣದಲ್ಲಿರುವ ಪಾವನ ಗಂಗಾ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದ್ದು ಪರಿಣಾಮವಾಗಿ ತಾಲ್ಲೂಕು ಕಚೇರಿಗಳಿಗೆ ಕೆಲಸದ ನಿಮಿತ್ತ ಆಗಮಿಸುವ ಜನರಿಗೆ ಕನಿಷ್ಠ ಪಕ್ಷ ಕುಡಿಯುವ ನೀರಿಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ. ಈ ಕೂಡಲೇ ಪಾವನ ಗಂಗಾ ನೀರಿನ ಘಟಕ ದುರಸ್ತಿಗೊಳಿಸುವಂತೆ ಪಾವಗಡ ಗ್ರೇಡ್ 2 ತಹಸೀಲ್ದಾರ್ ರವರಿಗೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡ ಕನ್ನಮೇಡಿ ಕೃಷ್ಣಮೂರ್ತಿ, ಪ್ರತಿಷ್ಠಿತ ಇನ್ಫೋಸಿಸ್ ಫೌಂಡೇಶನ್ ಪಟ್ಟಣದ ಹಲವು ಕಡೆಗಳಲ್ಲಿ ಪಾವನ ಗಂಗಾ ಹೆಸರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಿರುವುದು ಸ್ವಾಗತರ್ಹ. ಆದರೆ ಲಕ್ಷಾಂತರ ರೂ.ಗಳು ವ್ಯಹಿಸಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿ, ಕೆಲವು ತಿಂಗಳುಗಳು ಮಾತ್ರ ಇದು ಕಾರ್ಯ ನಿರ್ವಹಿಸಿವೆ. ನೀರಿನ ಘಟಕ ಕೆಟ್ಟು ನಿಂತು ಬಹಳ ದಿನಗಳು ಕಳೆದರೂ, ಇದರ ಸಂಪೂರ್ಣ ಉಸ್ತುವಾರಿ ವಹಿಸಿರುವ ಪಾವಗಡ ಖಾಸಗಿ ಸಂಸ್ಥೆಯಾಗಲಿ, ಸಂಬಂಧ ಪಟ್ಟ ಇಲಾಖೆಯಾಗಲಿ, ನೀರಿನ…
ಗುಬ್ಬಿ: ಮನೆ ಹಾಗೂ ರಸ್ತೆ ಸೌಕರ್ಯ ನೀಡಲು ಗ್ರಾಮ ಪಂಚಾಯತ್ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದ ಇದರಿಂದ ನೊಂದ ವ್ಯಕ್ತಿಯೊಬ್ಬರು 4000 ಕೆವಿ ವಿದ್ಯುತ್ ಹೈಟೆನ್ಷನ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಗುಬ್ಬಿ ಕಸಬಾ ಹೋಬಳಿ ಹಳೇಗುಬ್ಬಿ ಗ್ರಾಮದ ವಾಸಿ ರಾಮು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾರೆ. ಪಿಡಿಓ ಮತ್ತು ತಹಶೀಲ್ದಾರ್ ರವರಿಗೆ ಹಲವು ಬಾರಿ, ತನಗೆ ಮನೆ ಹಾಗೂ ರಸ್ತೆ ಮಂಜೂರು ಮಾಡಿ ಕೊಡಲು ಅರ್ಜಿ ಸಲ್ಲಿಸಿದ್ದರೂ ಈವರೆಗೆ ಯಾರು ಸ್ಪಂದಿಸುತ್ತಿಲ್ಲ ಎಂದು ರಾಮು ದೂರಿದ್ದಾರೆ. ಹಳೇಗುಬ್ಬಿ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ನಮ್ಮದೇ ಗ್ರಾಮದ ಬೇರೆ ಬೇರೆ ವ್ಯಕ್ತಿಗಳು ವಾಸದ ಮನೆಗಳನ್ನು ಕಟ್ಟಿಕೊಂಡಿದ್ದು, ತನಗೂ ಕೂಡ ಅದೇ ರೀತಿ ವಾಸದ ಮನೆ ಕಟ್ಟಿಕೊಳ್ಳಲು ಜಾಗ ಮಂಜೂರು ಮಾಡಲು ಅವಕಾಶವನ್ನು ನೀಡಿ ಎಂದು ಕೇಳಿದರೆ, ಅಡಗೂರು ಗ್ರಾಮ ಪಂಚಾಯಿತಿ ಪಿಡಿಓ ಅವರು, ನಾನು ಮನೆ ನಿರ್ಮಾಣ ಮಾಡುವ ಜಾಗದ ಬಳಿ ಬಂದು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಮ್ಮ ಗ್ರಾಮದ…
ಮಧುಗಿರಿ : ವಾಸವಿಕ್ಲಬ್ ಮಹಿಳೆಯರ ಬಳಗ ಸದಸ್ಯರು ವರ್ಷದ ಮೊದಲ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ನಗರದ ಮಹಿಳಾ ಸಮಾಜದಲ್ಲಿ ಸಂಕ್ರಾಂತಿ ಹಬ್ಬವನ್ನು ಆಯೋಜಿಸಿದ್ದು, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ವಾಸವಿ ಕ್ಲಬ್ ಅಧ್ಯಕ್ಷರಾದ ಲಕ್ಷ್ಮಿಮೂರ್ತಿ, ಸೂರ್ಯನು ಈ ದಿನ ತನ್ನ ಪಥ ಬದಲಾಯಿಸುವಂತೆ ಎಲ್ಲರ ಬಾಳಿನ ಪಥ ಬದಲಾಗಲಿ ಸುಖ ಸಂತೋಷ ಸಮೃದ್ಧಿ ಆರೋಗ್ಯದ ಸಂಭ್ರಮ ಪಸರಿಸಲಿ ಎಂದು ಹಾರೈಸಿದರು. ಹಬ್ಬದಲ್ಲಿ ನಾವು ನದಿಗಳಲ್ಲಿ ಸ್ನಾನವನ್ನು ಮಾಡಿ ಸೂರ್ಯ ದೇವರ ಆರಾಧಿಸುತ್ತೇವೆ. ನಮ್ಮಲ್ಲಿನ ಪಾಪಗಳು ತೊಳೆಯುತ್ತದೆ ಎಂಬ ನಂಬಿಕೆ ಇದೆ. ಸಂಕ್ರಾಂತಿ ಎಂದರೆ ಪರ್ವಕಾಲ ಪುಣ್ಯಕಾಲ ಸೂರ್ಯ ತನ್ನ ಪತನವನ್ನು ಬದಲಿಸುವ ಕಾಲ ಉತ್ತರಾಯಣ ಪುಣ್ಯಕಾಲ ಎಂದು ಕರೆಯುತ್ತೇವೆ ಎಂದು ಲಕ್ಷ್ಮಿ ಮೂರ್ತಿ ವಿವರಿಸಿದರು. ಈ ಸಂದರ್ಭದಲ್ಲಿ ಕ್ಲಬ್ಬಿನ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಆಶಾ ಮಲ್ಲಿಕಾರ್ಜುನ್, ಅರುಣ ಸತೀಶ್, ಕಲ್ಪನಾ ಗೋವಿಂದರಾಜ್, ಲಲಿತಾ ನವೀನ್, ಸುಮಾ ಸುದರ್ಶನ್, ಭಾರತಿ ಲಕ್ಷ್ಮಿಕಾಂತ್, ಸುಷ್ಮಾ ರಮೇಶ್, ಪ್ರತಿಭಾ ಧನಪಾಲ್, ನಾಗ ಸ್ಮಿತಾ ಲಕ್ಷ್ಮಿ ಶ್ರೀನಾಥ್, ವೀಣಾ ಹನುಮಂತರಾಜು,…
ಚಿತ್ರದುರ್ಗ: ಗರ್ಭಿಣಿ ಪತ್ನಿಯನ್ನು ನೋಡಲು ತನ್ನ ತಾಯಿಯ ಜೊತೆಗೆ ಹೋಗುತ್ತಿದ್ದ ಪತಿ ಅಪಘಾತದಲ್ಲಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಐಮಂಗಲ ಹೋಬಳಿ ಯರಬಳ್ಳಿ ಗ್ರಾಮದ ಗೊಲ್ಲಹಳ್ಳಿ ಸಮೀಪ ನಡೆದಿದೆ. ಬೆಂಗಳೂರಿನ ಬಿ ಎಸ್ ಎಫ್ ನಲ್ಲಿ ಎಲೆಕ್ಟ್ರಿಕಲ್ ಆಗಿ ಕೆಲಸ ನಿರ್ವಹಿಸುತ್ತಿದ್ದಂತಹ ರಾಮಾಚಾರಿ ಮೃತಪಟ್ಟವರಾಗಿದ್ದು, ಇವರ ತಾಯಿ ಪೆದ್ದಕ್ಕನವರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಐಮಂಗಲ ಹೋಬಳಿ ಯರಬಳ್ಳಿ ಗ್ರಾಮದ ಗೊಲ್ಲಹಳ್ಳಿ ಸಮೀಪ ಅಪರಿಚಿತ ಲಾರಿಯೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಪರಿಣಾಮವಾಗಿ ರಾಮಾಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಬ್ಯಾಡರಹಳ್ಳಿ ಮಜರೆ ಆರ್.ಎಸ್.ಉಪ್ಪಾರಹಟ್ಟಿ ಗ್ರಾಮ ನಿವಾಸಿ ರಾಮಾಚಾರಿ ಅವರು ತಮ್ಮ ಗರ್ಭಿಣಿ ಪತ್ನಿ ಚಂದ್ರಕಲಾ ಅವರನ್ನು ನೋಡಲು ರಾತ್ರಿ ಸುಮಾರು 8 ಗಂಟೆಯ ವೇಳೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಹಿರಿಯೂರು ತಾಲ್ಲೂಕಿನ ವೇದಾವತಿ ನಗರದಿಂದ ಹಿಡಿದು ಚಳ್ಳಕೆರೆ ಹೋಗುವ ಈ ಮಾರ್ಗವನ್ನು ಆ್ಯಕ್ಸಿಡೆಂಟ್ ಜೋನ್ ಎಂದೇ ತಾಲ್ಲೂಕಿನ ಸಾರ್ವಜನಿಕರು ಕರೆಯುತ್ತಾರೆ.…
ಬೆಂಗಳೂರು : ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಿಮಾ ಪರಿಹಾರ ಕಂಪೆನಿಗಳ ವಿಷಯದಲ್ಲಾಗಲೀ ಬೇರೆ ಯಾವುದೇ ವಿಚಾರದಲ್ಲಾಗಲೀ ಯಾರಿಂದಲೂ ಯಾವುದೇ ರೀತಿಯ ರಾಜೀಯೂ ಇಲ್ಲ ಮುಲಾಜೂ ಇಲ್ಲ.ರೈತರ ಕಾಳಜಿಯೇ ಮುಖ್ಯವಾದ ಗುರಿಯಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕರ್ನಾಟಕ ರಾಜ್ಯದ ಕೃಷಿ ಸಚಿವರು ಇಲಾಖಾಧಿಕಾರಿಗಳೊಂದಿಗೆ ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆ ಸೇರಿದಂತೆ ಮತ್ತಿತ್ತರ ವಿಚಾರಗಳ ಬಗ್ಗೆ ಕೇಂದ್ರ ಸಚಿವರು ಅವಲೋಕನಾ ಸಭೆ ನಡೆಸಿ,ಸರ್ಕಾರಿ ಇನ್ಸೂರೆನ್ಸ್ ಕಂಪೆನಿಗಳು ಸರಿಯಾದ ಸಮಯಕ್ಕೆ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಬೇಕೆಂಬ ನಿಟ್ಟಿನಲ್ಲಿ ಚರ್ಚಿಸಿದರು. ಅವಲೋಕನಾ ಸಭೆಯಲ್ಲಿ ಸರ್ಕಾರಿ ವಿಮಾ ಕಂಪೆನಿಗಗಳಿಂದ ಸರಿಯಾದ ಸಮಯಕ್ಕೆ ಸರಿಯಾಗಿ ರೈತರಿಗೆ ಬೆಳೆ ವಿಮೆ ನೀಡಲು ಸಾಧ್ಯವಾಗುತ್ತದೆ ಎಂದ ಮೇಲೆ ಖಾಸಗಿ ವಿಮಾ ಕಂಪೆನಿಗಳಿಗೆ ಸರಿಯಾಗಿ ರೈತರಿಗೆ ವಿಮೆ ಪಾವತಿಸಲು ಸಾಧ್ಯವಾಗದೇ ಇರುವುದನ್ನು ಗಮನಿಸಿದ ಸಚಿವದ್ವಯರು ಸಭೆಯಲ್ಲಿ ಖಾಸಗಿ ವಿಮಾ ಕಂಪೆನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.…