Author: admin

ಖಾಸಗಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ದಾ ರುಣವಾಗಿ ಮೃತಪಟ್ಟಿದ್ದಾರೆ  ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದ ಬಳಿ ಅವಘಡ ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಬೈಕ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟಿದ್ದಾರೆ . ಮೃತರನ್ನು 43 ವರ್ಷದ ನಾಗರಾಜ್, 37 ವರ್ಷದ ಶೈಲಜ, 9 ವರ್ಷದ ವೀರೇಶ್, 7 ವರ್ಷದ ಸಂತೋಷ್ ಎಂದು ಗುರುತಿಸಲಾಗಿದೆ. ಮೃತರು ಚನ್ನಗಿರಿ ತಾಲೂಕಿನ ಹೆಬ್ಬಳಗೆರೆ ಗ್ರಾಮದ ಬಂಧುಗಳ ಮನೆಯಲ್ಲಿ ಊಟ ಮುಗಿಸಿಕೊಂಡು ರಾತ್ರಿ ಹನ್ನೊಂದುವರೆ ಸಮಯದಲ್ಲಿ ಸ್ವ ಗ್ರಾಮ ಬಿದುರ್ಗ ಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ . ಚಿತ್ರದುರ್ಗದ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬಸ್ ಒವರ್ ಟೇಕ್ ಮಾಡಿ ಮುನ್ನುಗ್ಗುತ್ತಿದ್ದ ವೇಳೆ, ಎದುರಿಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ…

Read More

ಸರಗೂರು: ಸಂಸದರ ನಿಧಿಯಿಂದ 50ಲಕ್ಷ ರೂ. ವೆಚ್ಚದಲ್ಲಿ ಅತ್ಯಾವಶ್ಯಕತೆ ಇರುವ ಆಂಬ್ಯುಲೆನ್ಸ್ ಗಳನ್ನು ನೀಡಲಾಗುತ್ತಿದ್ದು, ಕಾಡಂಚಿನ ಭಾಗದ ವಾಹನ ಸಮಸ್ಯೆಗಳನ್ನು ಗಮನಿಸಿ ಬಿ.ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇಲ್ಲಿನ ಎನ್.ಬೇಗೂರು ಭಾಗಕ್ಕೂ ಪ್ರತ್ಯೇಕ ಆಂಬ್ಯುಲೆನ್ಸ್  ನೀಡಲಾಗುವುದು ಎಂದು ಸಂಸದ ವಿ.ಶ್ರೀನಿವಾಸ್‍ಪ್ರಸಾದ್ ಭರವಸೆ ನೀಡಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ಸರಗೂರು ತಾಲ್ಲೂಕಿನ ಬಿ.ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಸದರ ನಿಧಿಯಿಂದ ನೀಡಲಾದ ಆಂಬ್ಯುಲೆನ್ಸ್‍ ಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಈ ಭಾಗದಲ್ಲಿ ವೈದ್ಯರು, ವಿಶೇಷವಾಗಿ ಹೆರಿಗೆ ವೈದ್ಯರು, ತಜ್ಞರುಗಳ ಕೊರತೆ ಇದೆ ಎಂಬುದರ ಬಗ್ಗೆ ಮಾಹಿತಿ ಇದೆ.  ಇದರ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದರು. ನಾನು ಕಂದಾಯ ಮಂತ್ರಿಯಾಗಿದ್ದಾಗ ಸರಗೂರು ನೂತನ ತಾಲ್ಲೂಕ್ಕಾಗಿ ಮಾಡಲು ನೀಡಿದ ಸಲಹೆಯೇ ಬೇರೆ , ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಾನು ಬಿಟ್ಟು ಹೋದಮೇಲೆ ಮಾಡಿದ ತಾಲ್ಲೂಕೇ ಬೇರೆ. ಸರಗೂರು ತಾಲ್ಲೂಕು…

Read More

ಪಾವಗಡ: ವಿಧಾನ ಪರಿಷತ್ ಸದಸ್ಯರಾದ ಆರ್.ರಾಜೇಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ಇತ್ತೀಚಿಗೆ ಪಾವಗಡ ತಾಲ್ಲೂಕಿನ ಪಳವಳ್ಳಿ ಕಟ್ಟೆ ಮೇಲೆ ನಡೆದ ಖಾಸಗಿ ಬಸ್ ಅಪಘಾತ ದುರಂತಕ್ಕೆ ತುತ್ತಾಗಿರುವ ಗಾಯಾಳುಗಳು ಹಾಗೂ ಮೃತಪಟ್ಟಿರುವ ಕುಟುಂಬಗಳಿಗೆ ಸಹಾಯ ಧನ ನೀಡಲಾಯಿತು. ಹಾಗೆ ಮೃತರ ಭಾವ ಚಿತ್ರ ಅಥವಾ ಫೋಟೊಗಳು ಅವರವರ  ಮನೆಗೆ ನೀಡಲಾಯಿತು.  ಈ ಸಂದರ್ಭದಲ್ಲಿ ಮೈಲಾರರೆಡ್ಡಿ, KNR ಅಭಿಮಾನಿ ಬಳಗದ ಅಧ್ಯಕ್ಷರಾದ ಶ್ರೀನಿವಾಸ್, PLD ಬ್ಯಾಂಕ್ ಮಾಜಿ ಅಧ್ಯಕ್ಷರಾದ  ಸೀತಾರಾಮಪ್ಪ,  ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅನಿಲ್ ಯಾದವ್ ಮತ್ತಿತರರಿದ್ದರು. ವರದಿ: ನಾಗರಾಜ ದೇವರಹಟ್ಟಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ತಿಪಟೂರು:  ಇಲ್ಲಿನ  ಕುಪ್ಪೂರು ತಮ್ಮಡಿಹಳ್ಳಿಯ ವಿರಕ್ತ ಮಠದ ಶಾಖಾಮಠ ಭಕ್ತರ ಅಪೇಕ್ಷೆಯ ಮೇರೆಗೆ ಮಾರ್ಚ್ 27ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ತಮ್ಮಡಿಹಳ್ಳಿ ವಿರಕ್ತ ಮಠದ ಡಾ. ಅಭಿನವ ಮಲ್ಲಿಕಾರ್ಜುನ ದೇಶಿಯ ಕೇಂದ್ರ ಮಹಾಸ್ವಾಮಿಗಳು ತಿಳಿಸಿದರು. ತಿಪಟೂರಿನಲ್ಲಿ ಸುದ್ದಿಗೋಷ್ಠಿಯ ಲಿ ಮಾತನಾಡಿದ ಶ್ರೀಗಳು,  ಶಾಖಾ ಮಠವನ್ನು ಕೆರೆಗೋಡಿ ರಂಗಾಪುರ ಗುರುಪರದೇಶಿಕೇಂದ್ರ ಸ್ವಾಮೀಜಿ ಅಮೃತ ಹಸ್ತದಿಂದ ಲೋಕಾರ್ಪಣೆಗೊಳ್ಳುತ್ತಿದೆ. ಅಭಿನವ ಸದನ ಕಟ್ಟಡದ ಉದ್ಘಾಟನೆಯು ನಡೆಯಲಿದ್ದು, ಕಾರ್ಯಕ್ರಮದಲ್ಲಿ ಸಚಿವರುಗಳಾದ ಜೆ.ಸಿ. ಮಧುಸ್ವಾಮಿ ಬಿ.ಸಿ. ನಾಗೇಶ್ ಸಂಸದ ಜಿ.ಎಸ್. ಬಸವರಾಜು ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ  ಎಂದರು. ತಿಪಟೂರಿನಲ್ಲಿ ಹತ್ತು ವರ್ಷದ ಹಿಂದೆ ಸಹಕಾರಿ ಬ್ಯಾಂಕ್ ಪ್ರಾರಂಭಿಸಿದ್ದು,  ಭಕ್ತರ ಒತ್ತಾಸೆಯ ಮೇರೆಗೆ ಶಾಖಾ ಮಠವನ್ನು ಪ್ರಾರಂಭಿಸಬೇಕೆಂದು ಪ್ರೇರಣೆ ಯಾಗಿದ್ದರಿಂದ ಶಾಖಾ ಮಠವನ್ನು ಪ್ರಾರಂಭಿಸುತ್ತಿದ್ದು, ಪ್ರತಿ ತಿಂಗಳು ಹುಣ್ಣಿಮೆಯ ದಿನ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು ಅಂದು ಮತ್ತು ಪ್ರತಿ ಭಾನುವಾರ ಸದನದಲ್ಲಿ ಉಪಸ್ಥಿತರಿದ್ದರು ಆಶೀರ್ವಾದ ನೀಡಲಿದ್ದಾರೆ ಎಂದು ತಿಳಿಸಿದರು. ಈ ಸಭೆಯಲ್ಲಿ ಸದಾಶಿವಯ್ಯ ಹಾಗೂ ಮುಖಂಡರು ಭಾಗವಹಿಸಿದ್ದರು. ವರದಿ: ಆನಂದ ತಿಪಟೂರು…

Read More

ಹಿಜಾಬ್ ವಿವಾದದಿಂದ ಹೊತ್ತಿಕೊಂಡ ಕಿಚ್ಚು ಮಲೆನಾಡು, ಕರಾವಳಿ, ದಕ್ಷಿಣ ಕನ್ನಡ ಭಾಗಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಸುವ ಹಂತ ತಲುಪಿದ್ದು, ಈಗ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿದೆ. ಮುಸ್ಲಿಮರ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿ ಮಾಡಲು ನಿಷೇಧ ಹೇರಬೇಕು. ಹಲಾಲ್ ವಸ್ತುಗಳ ಖರೀದಿಗೆ ಬ್ರೇಕ್ ಹಾಕಲು ಹಿಂದೂಪರ ಸಂಘಟನೆಗಳು ಚಿಂತನೆ ನಡೆಸಿವೆ ಎಂದು ತಿಳಿದುಬಂದಿದೆ. ಈಗಾಗಲೇ ರಾಜ್ಯದ ಹಲವು ಅಂಗಡಿಗಳಲ್ಲಿ ಖರೀದಿಗೆ ನಿಷೇಧ ಹೇರಲಾಗಿದ್ದು, ರಾಜಧಾನಿಯಲ್ಲೂ ಕೂಡ ನಿಷೇಧ ಹೇರಬೇಕೆಂಬ ಮಾತುಗಳು ಕೇಳಿಬಂದಿವೆ. ಜಾತ್ರೆ, ಮಹೋತ್ಸವ ರಥೋತ್ಸವ ಸಮಾರಂಭಗಳಲ್ಲಿ ಮುಸ್ಲಿಂ ಅಂಗಡಿಗಳಿಗೆ ನಿಷೇಧ ಹೇರಲಾಗಿದೆ. ಅದೇ ರೀತಿ ಯಾವುದೇ ಕಾರಣಕ್ಕೂ ವಸ್ತುಗಳನ್ನು ಖರೀದಿ ಮಾಡಬಾರದು ಎಂದು ಹಿಂದೂಪರ ಸಂಘಟನೆಗಳು ಕರೆ ನೀಡಲು ಮುಂದಾಗಿವೆ.ಬೆಂಗಳೂರಿನ ಬಹುತೇಕ ಮಾಲ್, ಅಂಗಡಿ, ಮಳಿಗೆಗಳಲ್ಲಿ ಈ ವರ್ಗದ ಸಿಂಬಲ್ ಇರುವ ವಸ್ತುಗಳ ಖರೀದಿ ಮಾಡಬಾರದು ಎಂದು ನಿರ್ಧರಿಸಲಾಗಿದೆ. ಈಗ ಮುಸ್ಲಿಮರು ಹಲಾಲ್ ಅಂತ ಹೊಟೇಲ್ ಮುಂದೆ ಬೋರ್ಡ್ ಇದ್ದರೆ ಮಾತ್ರ ಹೊಟೇಲ್‍ಗಳಿಗೆ ಹೋಗುತ್ತಾರೆ, ಇಲ್ಲದಿದ್ದರೆ ಹೋಗುವುದಿಲ್ಲ. ಅಂತಹ ಹೊಟೇಲ್‍ಗಳಿಗೆ ಹಿಂದೂಗಳು…

Read More

ಧಾರ್ಮಿಕ ಕೇಂದ್ರಗಳಲ್ಲಿ ಕೆಲವು ವರ್ಗದವರು ವ್ಯಾಪಾರ ಮಾಡಬಾರದು ಎಂಬ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಬಿಜೆಪಿ ಮತ್ತು ಕಾಂಗ್ರೆಸ್ ಸದ್ಯಸರ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆದ ಪ್ರಸಂಗ ಜರುಗಿತು. ಶೂನ್ಯವೇಳೆಯಲ್ಲಿ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ವಿಷಯ ಪ್ರಸ್ತಾಪಿಸಿ, ಸಾಮರಸ್ಯ, ಸಹೋದರತ್ವ ಮೂಡಿಸಬೇಕೆ ಹೊರತು ಕದಡುವಂತಹ ಕೆಲಸವಾಗಬಾರದು. ಬೀದಿಬದಿ ವ್ಯಾಪಾರಸ್ಥರು ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ.ಅಂಥವರಿಗೆ ಧಾರ್ಮಿಕ ಕೇಂದ್ರಗಳಲ್ಲಿ ವ್ಯಾಪಾರ ಮಾಡಬಾರದು ಎಂಬ ನಿರ್ಬಂಧದ ಫಲಕ ಹಾಕಲಾಗಿದೆ ಎಂದು ಹೇಳಿದರು. ಆ ಸಂದರ್ಭದಲ್ಲಿ ಖಾದರ್ ಅವರು ಬಳಸಿದ ಪದಕ್ಕೆ ಶಾಸಕ ಕೆ.ಜಿ.ಬೋಪಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಆಗ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆದು ಸದನದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.ಸಭಾಧ್ಯಕ್ಷ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರು ಸಮಾಧಾನಪಡಿಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಆಡಳಿತ ಪಕ್ಷದ ರಘುಪತಿ ಭಟ್, ಸೋಮಶೇಖರ್, ಸಿದ್ದು ಸವದಿ, ರೇಣುಕಾಚಾರ್ಯ ಎದ್ದು ನಿಂತು ಮಾತನಾಡುತ್ತಿದ್ದರು. ಹಾಗೆಯೇ ಕಾಂಗ್ರೆಸ್‍ನ ಜಮೀರ್ ಅಹಮ್ಮದ್ ಖಾನ್, ಅಜಯ್ ಧರ್ಮಸಿಂಗ್, ರಿಜ್ವಾನ್…

Read More

ಪಾವಗಡ: ಪಟ್ಟಣದ ಶ್ರೀನಿವಾಸ ನಗರದ  ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ  ಬೀಳ್ಕೊಡುಗೆ ಸಮಾರಂಭವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಕಾರ್ಯದರ್ಶಿಗಳಾದ ಡಾ.ವೆಂಕಟರಾಮಯ್ಯ ಮಾತಾಡಿ,  ನಮ್ಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯಾದ ಸುರಕ್ಷತೆಯನ್ನು ನಾವೇ ಒದಗಿಸಿ ಕೊಡುತ್ತೇವೆ.  ನಮ್ಮ ಕಾಲೇಜು ಪಾವಗಡ ತಾಲ್ಲೂಕಿಗೆ ಹೆಸರುವಾಸಿಯಾಗಿದೆ ಎಂದರು. ಇದೇ ಸಮಯದಲ್ಲಿ ಕಾಲೇಜಿನ ಪ್ರಾಂಶುಪಾಲ ನಾಗೇಂದ್ರಕುಮಾರ್, ಉಪ ಪ್ರಾಂಶುಪಾಲರಾದ  ನಾಗರಾಜು, ಕನ್ನಡ ಉಪನ್ಯಾಸಕರಾದ ಸುರೇಶ್, ಅರ್ಥಶಾಸ್ತ್ರ ಉಪನ್ಯಾಸಕರಾದ ಶಿವಕುಮಾರ್, ಎಲ್ಲ ಉಪನ್ಯಾಸಕರು, ಎಲ್ಲಾ ವಿದ್ಯಾರ್ಥಿಗಳು, ಎಲ್ಲಾ ಪೋಷಕ ವರ್ಗದವರು ಹಾಗೂ ಪತ್ರಕರ್ತ,  ವಿದ್ಯಾರ್ಥಿ ನಂದೀಶ್ ನಾಯ್ಕ ಪಿ. ಹಾಜರಿದ್ದರು. ವರದಿ: ನಂದೀಶ್ ನಾಯ್ಕ ಪಿ., ಪಾವಗಡ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಪಾವಗಡ: ವಿಶ್ವ ಅರಣ್ಯ ದಿನಾಚರಣೆ ಅಂಗವಾಗಿ ಪಟ್ಟಣದ ಸಾಯಿ ಲೇ ಔಟ್ ನಲ್ಲಿ ಗಿಡವನ್ನು ನೆಟ್ಟು ನೀರು ಹರಿಸುವುದರ ಮೂಲಕ ಅರಣ್ಯ ಬೆಳೆಸಿ ಉಳಿಸಿ ಎಂದು ದೈಹಿಕ ಶಿಕ್ಷರ ಸಂಘದ ರಾಜ್ಯಾಧ್ಯಕ್ಷ ಹನುಮಂತರಾಯಪ್ಪ ಕರೆ ನೀಡಿದರು. ಹೆಲ್ಪ್ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಅರಣ್ಯ ದಿನಾಚರಣೆಯ ಅಂಗವಾಗಿ ಗಿಡ ವನ್ನು ನೆಡುವುದರ ಮೂಲಕ ಅರಣ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ್, ಶಿಕ್ಷಕ ರಮೇಶ್, ಎಸ್ ಎಲ್ ಎನ್ ಗ್ರಾನೈಟ್ ಮಾಲೀಕ ರವಿ, ಶ್ರೀಕಾಂತ್, ನರೇಶ್ ಉಪಸ್ಥಿತರಿದ್ದರು. ವರದಿ: ನಂದೀಶ್ ನಾಯ್ಕ ಪಿ., ಪಾವಗಡ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ರಾಜ್ಯಾದ್ಯಂತ ಜೇಮ್ಸ್ ಚಿತ್ರವನ್ನು ತೆಗೆದು ರಾಜ್ಯಾದ್ಯಂತ ಬೇರೆ ಚಿತ್ರ ಹಾಕುವ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದು ಪ್ರತಿಭನೆ ನಡೆಸಿ ಯಾವುದೇ ಕಾರಣಕ್ಕೂ ಈ ಚಿತ್ರವನ್ನು ತೆಗೆಯಬಾರದು ಎಂದು ಆಗ್ರಹಿಸಿದರು. ಪರಭಾಷಾ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರಗಳಿಗೆ ಧಕ್ಕೆಯಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಅಗ್ರಸ್ಥಾನ. ಉತ್ತಮ ಚಿತ್ರವಾಗಿ ಮೂಡಿ ಬಂದಿರುವ ಪುನೀತ್ ರಾಜ್‍ಕುಮರ್ ಅಭಿನಯದ ಜೇಮ್ಸ್ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಅದನ್ನು ಬಲವಂತವಾಗಿ ತೆಗೆದು ಹಾಕುವ ಪಿತೂರಿ ಮಾಡುತ್ತಿರುವ ಕ್ರಮ ಖಂಡನೀಯ ಎಂದು ಹೇಳಿದರು.ಕಳೆದ ಐದು ದಶಕಗಳ ಹಿಂದೆ ಡಾ.ರಾಜ್‍ಕುಮಾರ್ ಅಭಿನಯಿಸಿದ್ದ ರಣೀರ ಕಂಠೀರವ ಚಿತ್ರಕ್ಕೂ ಹೋರಾಟ ಮಾಡಿ ಚಿತ್ರಮಂದಿರ ಕೊಡಿಸಬೇಕಾಯಿತು. ಬಂಗಾರದ ಮನುಷ್ಯ ಚಿತ್ರವನ್ನು ತೆಗೆಯದಂತೆಯೂ ಕೂಡ ನಾವು ಹೋರಾಟ ಮಾಡಿದ್ದೆವು ಎಂದು ಹೇಳಿದರು.ನಮ್ಮ ರಾಜ್ಯದಲ್ಲಿ ನಿರಂತರವಾಗಿ ಪರಭಾಷಿಗರ ದೌರ್ಜನ್ಯ ನಡೆಯುತ್ತಲೇ ಇದೆ. ಯಾವುದೋ ಕಾರಣಕ್ಕೆ ನಮ್ಮ ಚಿತ್ರರಂಗ ಸೊರಗುತ್ತಿದೆ. ಉತ್ತಮ ಪ್ರದರ್ಶನ ಕಾಣುತ್ತಿದ್ದರೂ ಕೂಡ ಅದನ್ನು ತೆಗೆದು…

Read More

ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಅಂತಾರಾಜ್ಯ ಆರೋಪಿ ಸೇರಿದಂತೆ ಮೂವರನ್ನು ವೈಟ್‍ಫೀಲ್ಡ್ ಠಾಣೆ ಪೊಲೀಸರು ಬಂಧಿಸಿ 50 ಲಕ್ಷ ರೂ. ಬೆಲೆ ಬಾಳುವ 39 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಆನಂದ್(29), ತುಮಕೂರು ಜಿಲ್ಲೆ ಪಾವಗಡದ ಮಹಾಲಿಂಗಯ್ಯ(27) ಮತ್ತು ಚಿತ್ತಯ್ಯ(26) ಬಂಧಿತ ಆರೋಪಿಗಳು. ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಹಾಗೂ ನಕಲಿ ಕೀ ಬಳಸಿ ಆರೋಪಿಗಳು ಕಳ್ಳತನ ಮಾಡುತ್ತಿದ್ದರು. ಈ ಬಗ್ಗೆ ವೈಟ್‍ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು. ಈ ಪ್ರಕರಣದಲ್ಲಿ ಕಳುವಾದ ವಾಹನಗಳು ಮತ್ತು ಆರೋಪಿಗಳನ್ನು ಪತ್ತೆ ಮಾಡಲು ರಚಿಸಲಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ತನಿಖೆ ಕೈಗೊಂಡು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಆರೋಪಿಗಳಿಂದ 50 ಲಕ್ಷ ರೂ. ಬೆಲೆ ಬಾಳುವ 5 ರಾಯಲ್ ಎನ್‍ಫೀಲ್ಡ್ ಬೈಕ್, 7 ಯಮಹಾ ಆರ್‍ಎಕ್ಸ್, 14 ಹೀರೋ ಹೊಂಡಾ, 2 ಹೊಂಡಾ ಆಕ್ಟಿವಾ, 5 ಹೊಂಡಾಡಿಯೋ, 2 ಹೊಂಡಾ ಶೈನ್, ಬಜಾಜ್ ಪಲ್ಸಾರ್, ಯಮಹಾ ಎಫ್‍ಜಡ್, ಟಿವಿಎಸ್…

Read More