Author: admin

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷದ ಅಮೃತ ಮಹೋತ್ಸವದ ಆಚರಣೆಗೆ ಸಿದ್ಧವಾಗುತ್ತಿರುವ ಭಾರತೀಯರು , ಈ 75 ವರ್ಷದ ರಾಜಕೀಯ ಇತಿಹಾಸದಲ್ಲಿ ಚುನಾವಣೆಗಳು ಕೇವಲ ಜಾತಿ, ಧರ್ಮ, ಹಣ, ಹೆಂಡ ಮತ್ತು ಅಭಿಮಾನದ ಆಧಾರದ ಮೇಲೆ ನಡೆಯುತ್ತಿದ್ದವು. ಹೆಸರಿಗಷ್ಟೆ ” ಪ್ರಜಾ ಪ್ರಭುತ್ವ ” ಎಂಬಂತೆ, ಗೆದ್ದು ಬಂದಂತಹ ಜನಪ್ರತಿನಿಧಿಗಳು ರಾಜ ಪ್ರಭುತ್ವದ ವ್ಯವಸ್ಥೆಯನ್ನೇ ಮುಂದುವರಿಸಿ ಕೊಂಡು ಬರುತ್ತಿದ್ದರು. ಯಾವೊಬ್ಬ ಜನಪ್ರತಿನಿದಿಯೂ ಪ್ರಜೆಗಳ ಸಮಸ್ಯೆಗಳನ್ನು ಕೇಳುವುದಾಗಲಿ,ಪಾರದರ್ಶಕ ಆಡಳಿತ ನೀಡುವುದಾಗಲೀ ಮಾಡುತ್ತಿರಲಿಲ್ಲ. ಯಥಾ ರಾಜ , ತಥಾ ಪ್ರಜೆಯಂತೆ ಚುನಾವಣಾ ಸಂದರ್ಭಗಳಲ್ಲಿ ಹಣ. ಹೆಂಡ, ಜಾತಿ, ಧರ್ಮ ಮತ್ತು ಅಭಿಮಾನದ ಆಮಿಷಕ್ಕೆ ಬಲಿಯಾಗಿ ಭವ್ಯ ಭಾರತದ ಪ್ರಜೆಯು ತನ್ನ ಹಕ್ಕನ್ನು ಮಾರಿಕೊಳ್ಳುತ್ತಿದ್ದರು. ಈ ದೇಶ ಇಷ್ಟೇ, ಈ ಭ್ರಷ್ಟಾಚಾರ ತಡೆಯೋಕೆ ಇನ್ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಿದ್ದಂತೆ , ಪ್ರಜ್ಞಾವಂತ ಜನರಿಗೆ ಆಶಾಕಿರಣದಂತೆ ಗೋಚರಿಸಿದ್ದು ” ಪ್ರಜಾಕೀಯ ” ವೆಂಬ ಕ್ಯಾಶ್ಲೆಸ್ ಪಕ್ಷದ ಸಿದ್ಧಾಂತಗಳು. ಆಯ್ಕೆಯಾದ ಜನಪ್ರತಿನಿಧಿ “ಸೇವಕ” ನಲ್ಲ ಬದಲಾಗಿ ಆತ ನಮ್ಮೆಲ್ಲರ ತೆರಿಗೆಯಿಂದ…

Read More

ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿನೆಲ್ಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲರಟ್ಟಿ ಗ್ರಾಮದ ಗ್ರಾಮ ದೇವರುಗಳ ಜಾತ್ರಾಮಹೋತ್ಸವವನ್ನು ಹಮ್ಮಿಕೊಳ್ಳಲಾಯಿತು. ಜಾತ್ರೆ ಹಿನ್ನೆಲೆಯಲ್ಲಿ ಗೊಲ್ಲರಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಅಸಂಘಟಿತ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಾಂತಕುಮಾರ್, ತಿಪಟೂರು ತಾಲ್ಲೂಕಿನಲ್ಲಿ ಎಲ್ಲೆಲ್ಲಿ ಗ್ರಾಮಗಳಲ್ಲಿ ದೇವರುಗಳ ಕಾರ್ಯಕ್ರಮ ನಡೆಯುತ್ತದೆಯೋ, ಅಲ್ಲಿಗೆ ನನ್ನನ್ನು ಆಹ್ವಾನಿಸಿ ನನ್ನ ಮೇಲೆ ಇಟ್ಟಿರುವ ಅಭಿಮಾನ ಪ್ರೀತಿಗೆ ನಾನೆಂದು ನಿಮ್ಮಲ್ಲಿ ಚಿರಋಣಿಯಾಗಿರುತ್ತೇನೆ ಎಂದರು. ಈ ಸಂದರ್ಭದಲ್ಲಿ ಗೊರಗೊಂಡನಹಳ್ಳಿ ಸುದರ್ಶನ್ ಗ್ರಾಮದ ಮುಖಂಡರು ಗ್ರಾಮಸ್ಥರು ಭಾಗಿಯಾಗಿದ್ದರು. ವರದಿ: ಮಂಜು ಗುರುಗದಹಳ್ಳಿ ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಶಿಕಾರಿಪುರ:  ವಿಧಾನ ಪರಿಷತ್ ಚುನಾವಣೆಯಲ್ಲಿ 15 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿರುವ ಮತಗಟ್ಟೆ ಕೇಂದ್ರದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಮತದಾನ ಮಾಡಿ ಮಾತನಾಡಿದ ಅವರು, ವಿಧಾನ ಪರಿಷತ್ತಿನ ಈ ಕ್ಷೇತ್ರದಲ್ಲಿ 9ಶಾಸಕರು ಹಾಗೂ ಇಬ್ಬರು ಸಂಸದರು ನಮ್ಮ ಪಕ್ಷದವರೇ ಇದ್ದಾರೆ. ಶಾಸಕರು ಹಾಗೂ ಮಂತ್ರಿಗಳು ಉತ್ಸಾಹದಿಂದ ಚುನಾವಣೆ ಕೆಲಸ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಡಿ.ಎಸ್. ಅರುಣ್ 400 ಮತಗಳ ಅಂತರದಿಂದ ಮೊದಲ ಸುತ್ತಿನಲ್ಲಿಯೇ ಗೆಲುವು ಸಾಧಿಸುತ್ತಾರೆ. ವಿಧಾನ ಪರಿಷತ್ತಿನಲ್ಲಿ ನಮಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದರು. ವೈಯಕ್ತಿಕ ಟೀಕೆ ನಡೆಸುತ್ತಿರುವ ವಿರೋಧ ಪಕ್ಷ ಮುಖಂಡರಿಗೆ ಈ ಚುನಾವಣೆ ಫಲಿತಾಂಶ ಉತ್ತರ ಸಿಗುತ್ತದೆ. ಸ್ಥಳೀಯ ಸಂಸ್ಥೆಗಳ ಈ ಚುನಾವಣೆಯಲ್ಲಿ ಜನರು 15ಕ್ಷೇತ್ರಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಿಸಿ ಕೊಟ್ಟರೇ ಅದರ ಅರ್ಥ ಗ್ರಾಮೀಣಾ ಪ್ರದೇಶದಲ್ಲಿ ಕಾಂಗ್ರೆಸ್ ದೂಳಿಪಟವಾಗಿ ಬಿಜೆಪಿ ಪರ ಅಲೆ ಇದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು…

Read More

ತಿಪಟೂರು: ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ತಮ್ಮ ಸೇವೆಸಲ್ಲಿಸುವ ಹಿನ್ನೆಲೆ ಕಾಯಂ ಸೇವಾ ಭದ್ರತೆ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ತರಗತಿ ಬಹಿಷ್ಕರಿಸಿ ಶುಕ್ರವಾರ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದರು. ಸುಮಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ನಮಗೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯ ದೊರೆತಿಲ್ಲ. ಕೇವಲ ಮಾಸಿಕ ಭತ್ಯೆ ಪಡೆಯುತ್ತಿದ್ದೇವೆ. ಪ್ರಾಮಾಣಿಕವಾಗಿ ಕೆಲಸ ಕಾರ್ಯಗಳನ್ನು ನಿರ್ಮಿಸುತ್ತಿರುವ ನಮಗೆ ರಾಜ್ಯ ಸರ್ಕಾರ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಅತಿಥಿ ಉಪನ್ಯಾಸಕರಿಗೆ ಖಾಯಂ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಹಿಂದೆ ಸರ್ಕಾರಿ ಕಾಲೇಜಿನಲ್ಲಿ ಹಂಗಾಮಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಪದನಾಮ ಬದಲಾದ ಸ್ಥಳೀಯ ಅಭ್ಯರ್ಥಿ ಸಾಫ್ಟ್ ಗ್ಯಾಪ್ ಗುತ್ತಿಗೆ ಆಧಾರಿತ ಅರೆಕಾಲಿಕ ಉಪನ್ಯಾಸಕರನ್ನು ಸರ್ಕಾರ ಮಾನವೀಯತೆ ಆಧಾರದ ಮೇಲೆ ಸೂಕ್ತ ಕಾಯ್ದೆ ತಿದ್ದುಪಡಿ ಮಾಡಿ ಪದನಾಮ ಹೊಂದಿರುವವರನ್ನು 1982.1992.2003 ರಲ್ಲಿ ಕಾಯಂ ಮಾಡಿರುವ ನಿದರ್ಶನಗಳಿವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಳಲ್ಲಿರುವ ಕಾರ್ಯನಿರತ ಹುದ್ದೆಗಳಿಗೆ ವಿರುದ್ಧವಾಗಿ…

Read More

ತುಮಕೂರು: ಬೇರೆಯವರ ಋಣ ನಮ್ಮ ಮೇಲಿದೆ ಎಂದು ಪಕ್ಷಕ್ಕೆ ದ್ರೋಹ ಬಗೆಯಲು ಸಾಧ್ಯವೇ? ಎಂದು ತುಮಕೂರು ಬಿಜೆಪಿ ಸಂಸದ ಜಿ ಎಸ್ ಬಸವರಾಜು ಪ್ರಶ್ನಿಸಿದರು. ಸ್ಥಳೀಯ ಸಂಸ್ಥೆ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಇಂದು ತುಮಕೂರು ಮಹಾನಗರ ಪಾಲಿಕೆ ಆವರಣಕ್ಕೆ ಆಗಮಿಸಿದ ಅವರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ ಬಳಿಕ ಪತ್ರಕರ್ತರ ಜೊತೆಗೆ ಮಾತನಾಡಿದರು. ವಿಧಾನ ಪರಿಷತ್ ಚುನಾವಣೆ ಪ್ರಾಶಸ್ತ್ಯದ ಮತದಾನದ ಮೇಲೆ ಅವಲಂಬಿತವಾಗಿದೆ. ಈಗ ಚುನಾಯಿತರಾಗಿರುವ ಪ್ರತಿನಿಧಿಗಳು ಮತದಾರರು ಸಾಕಷ್ಟು ವಿದ್ಯಾವಂತರಿದ್ದಾರೆ. ಹಾಗಾಗಿ ಮತದಾರರು ಯಾರಿಗೆ ಮತ ಚಲಾವಣೆ ಮಾಡುತ್ತಾರೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಬಿಜೆಪಿ ಪಕ್ಷದ ಅಭ್ಯರ್ಥಿ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಅವರು  ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ನಾನು 40 ವರ್ಷದ ರಾಜಕಾರಣದಲ್ಲಿ ಸ್ನೇಹಿತರಾಗಿದ್ದೇವೆ. ಹಾಗೆಂದ ಮಾತ್ರಕ್ಕೆ ನಾವು ಪಕ್ಷದ ಚಿನ್ಹೆಯ ಅಡಿಯಲ್ಲಿ ನಿಂತಿರುವ ಅಭ್ಯರ್ಥಿ ಬಿಟ್ಟು ಬೇರೆಯವರಿಗೆ ಮತದಾನ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಇನ್ನು ಕಳೆದ ಒಂದು ವಾರದಿಂದ…

Read More

ತಿಪಟೂರು: ತಾಲೂಕಿನ ಹೊನವಳ್ಳಿ ಹೋಬಳಿ ಗುರುಗದಹಳ್ಳಿ ಗ್ರಾಮ ಪಂಚಾಯಿತಿ ಅಲ್ಲಿ ವಿಧಾನಪರಿಷತ್ ಚುನಾವಣೆ ಮತದಾನ ನಡೆಯುತ್ತಿದ್ದು, ಪಂಚಾಯತ್  ಸದಸ್ಯರೆಲ್ಲರೂ ಒಬ್ಬರಾಗಿ ಶಿಸ್ತಿನಿಂದ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಪಂಚಾಯತ್ ಸಿಬ್ಬಂದಿ ವರ್ಗ, ಪೊಲೀಸ್ ಅಧಿಕಾರಿಗಳು, ಆಶಾ ಕಾರ್ಯಕರ್ತರು ತಮ್ಮ ಕಾರ್ಯವನ್ನು ಬಹಳ ಶಿಸ್ತಿನಿಂದ ನಿರ್ವಹಿಸಿದ್ದು, ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಡದೇ ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಯಲು ಶ್ರಮಿಸಿದ್ದಾರೆ. ಮತದಾನ ಮಾಡಲು ಬಂದ ಎಲ್ಲಾ ಸದಸ್ಯರಿಗೂ ಕೋವಿಡ್ 19 ಸುರಕ್ಷಾ ಕ್ರಮವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಮತಚಲಾಯಿಸಲು ಅವಕಾಶ ಮಾಡಿಕೊಡಲಾಗಿತ್ತು. ವರದಿ: ಮಂಜು ಗುರುಗದಹಳ್ಳಿ ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ರಾಂಝಿ: ನೆರೆಹೊರೆಯವರ ಕಿರುಕುಳ ತಾಳಲಾರದೆ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಧ್ಯಪ್ರದೇಶದ ಜಬಲ್ ಪುರ ಜಿಲ್ಲೆಯ ರಾಂಝಿಯಲ್ಲಿ ನಡೆದಿದೆ. ಬಾಲಕಿಯು ಮಧ್ಯಪ್ರದೇಶದ ಪ್ರದೇಶದ ನಿವಾಸಿಯಾಗಿದ್ದು, ನೆರೆಹೊರೆಯ ಮನೆಯವರು ಬಾಲಕಿಯು ಶಾಲೆಗೆ ಹೋಗುವ ವೇಳೆ ಅವಳ ಚಿತ್ರಗಳನ್ನು ಕ್ಲಿಕ್ಕಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ.. ಇದರಿಂದ ಬೇಸತ್ತಿದ್ದ ಬಾಲಕಿಯೂ ಪೊಲೀಸರಿಗೆ ದೂರು ನೀಡಲು ಹೋದರೆ ಪೊಲೀಸರು ಮೂರು ಗಂಟೆಯಾದರೂ ದೂರು ದಾಖಲಿಸಿಕೊಂಡಿರಲಿಲ್ಲ ಎನ್ನಲಾಗಿದೆ.. ಹೀಗಾಗಿ ಮನನೊಂದ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಬಾಲಕಿಯ ಮನೆಯಲ್ಲಿದ್ದ ಡೆತ್ ನೋಟ್ನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಆಧಾರದ ಮೇಲೆ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಆಶಾ ಖನ್ನಾ, ತನ್ವಿ ಕೇವತ್ ಮತ್ತು ಮಮತಾ ಕೇವತ್ ಮತ್ತು ಇಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿಸಲಾಗಿದೆ.. ಮೃತ ಬಾಲಕಿಯ ತಂದೆ , ಬಾಲಕಿಗೆ ಆರೋಪಿಗಳು ಕಿರುಕುಳ ನೀಡುತ್ತಿದ್ದು, ನನಗೂ ಹೊಡೆದಿದ್ದಾರೆ ಎಂದು ಈ ಹಿಂದೆ ದೂರು…

Read More

ಚಿಕ್ಕಮಗಳೂರು: ಕೋವಿಡ್ ನಿಂದ ಮೃತಪಟ್ಟ ತರೀಕೆರೆ ತಾಲ್ಲೂಕಿನ ಬೇಲೇನಹಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಮಹದೇವಪ್ಪ ಮತ್ತು ಅಜ್ಜಂಪುರ ತಾಲೂಕಿನ ಪುರ ಗ್ರಾಮ ಪಂಚಾಯಿತಿಯ ನೀರುಗಂಟಿ ಕಲ್ಲೇಶಪ್ಪ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಮೊದಲ ಹಂತದ ಪರಿಹಾರ ಧನ ವಿತರಿಸಲಾಯಿತು. ಪರಿಹಾರದ ಮೊತ್ತ 30 ಲಕ್ಷ ಮಂಜೂರಾಗಿದ್ದು, ಮೊದಲ ಹಂತದಲ್ಲಿ 10 ಲಕ್ಷ ರೂ. ಗಳನ್ನು ಆರ್ ಟಿ ಎಸ್ ಮೂಲಕ ಪಡೆಯಲು ಮಂಜೂರಾತಿ ಆದೇಶ ಪ್ರತಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು  ಹಸ್ತಾಂತರಿಸಿದರು. ಉಪಕಾರ್ಯದರ್ಶಿ ಕಿಶೋರ್ ಕುಮಾರ್ ಹಾಗೂ ಸಿಎಓ ಶಿವಕುಮಾರ್ ಇದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 1770

Read More

ಐಎಎಫ್ ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ, ಭಾರತೀಯ ವಾಯುಪಡೆಯ (ಐಎಎಫ್) ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರ ತಂದೆ ತಿಳಿಸಿದ್ದಾರೆ. ವರುಣ್ ಸಿಂಗ್ ಅವರ ತಂದೆ, ಭೋಪಾಲ್ ನಿವಾಸಿಯಾಗಿದ್ದು, ಅವರು ಸಹ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.  ತೀವ್ರವಾಗಿ ಗಾಯಗೊಂಡ ಗ್ರೂಪ್  ಕ್ಯಾಪ್ಟನ್  ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. “ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುತ್ತಿದೆ. ನಾನು ವೆಲ್ಲಿಂಗ್ಟನ್ ತಲುಪಿದ್ದೇನೆ” ಎಂದು ಅವರು ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ. ವರುಣ್ ಸಿಂಗ್ ಅವರು ಜನರಲ್ ರಾವತ್ ಅವರೊಂದಿಗೆ ವೆಲ್ಲಿಂಗ್ಟನ್ಗೆ ಪ್ರಯಾಣಿಸುತ್ತಿದ್ದರು, ಅಲ್ಲಿ ಸಿಡಿಎಸ್ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ನಿಗದಿಯಾಗಿತ್ತು, ಆಗ ತಮಿಳುನಾಡಿನ ಕೂನೂರ್ ಬಳಿ ಚಾಪರ್ ಅಪಘಾತಕ್ಕೀಡಾಯಿತು. ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಸಿಂಗ್ ಅವರಿಗೆ ತೀವ್ರ ಗಾಯಗಳಾಗಿದ್ದು, ಸದ್ಯಕ್ಕೆ ವೆಂಟಿಲೇಟರ್ ಯಂತ್ರದ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿವೃತ್ತ ಕರ್ನಲ್ ಅವರು ತಮ್ಮ ಮಗನ ಸ್ಥಿತಿಗೆ…

Read More

ತಿಪಟೂರು: ನಗರದಲ್ಲಿನ ಕೋಡಿ ಸರ್ಕಲ್ ಹತ್ತಿರ ಬರುವ ನಕ್ಷತ್ರ ಬಾರ್ ಅಂಡ್ ರೆಸ್ಟೋರೆಂಟ್ ವ್ಯವಸ್ಥಾಪಕರಾದ ರಮೇಶ್ ಶಿವಪುರ ಇವರ ಮೇಲೆ ನಗರ ಪೊಲೀಸ್ ಠಾಣಾ ಪೇದೆ ಕೃಷ್ಣಮೂರ್ತಿ ಎಂಬವರು ಹಲ್ಲೆ ನಡೆಸಿ, ಹಣ ವಸೂಲಿ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದಲಿತ ಪರ ಮತ್ತು ಪ್ರಗತಿಪರ ಸಂಘಟನೆಗಳು, ತಾಲೂಕಿನ ಆದಿಜಾಂಬವ ಸಂಘದ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ್ದು, ಸೆಪ್ಟಂಬರ್ ನಲ್ಲಿ ಈ ಘಟನೆ ನಡೆದಿದ್ದು,  ಸಂಜೆ 5:30ರಿಂದ 6 ಗಂಟೆಯ ವೇಳೆ ಕೃಷ್ಣಪ್ಪನವರು  ಕಂಠಪೂರ್ತಿಯಾಗಿ ಕುಡಿದು ಬಿಲ್ ಕೊಡದೇ ಹೋಗಿದ್ದು, ಬಿಲ್ ಕೇಳಿದ ಸಂದರ್ಭ ಬಾರ್ ನ ವ್ಯವಸ್ಥಾಪಕ ರಮೇಶ್ ಅವರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ್ದಾರೆ ಎಂದು ದಲಿತ ಮುಖಂಡ ಕುಪ್ಪಾಳು ರಂಗಸ್ವಾಮಿ ಆರೋಪಿಸಿದರು. ಪೇದೆ ಕೃಷ್ಣಮೂರ್ತಿ ಅವರು, ಹಲ್ಲೆ ನಡೆಸಿರುವುದೇ ಅಲ್ಲದೇ ಮಾಮೂಲಿ ವಸೂಲಿ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ತಿಪಟೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ಯಾವುದೇ…

Read More