Subscribe to Updates
Get the latest creative news from FooBar about art, design and business.
- ಫೆಲೋಶಿಪ್ ಗಾಗಿ ಅರ್ಜಿ ಆಹ್ವಾನ | ಜನವರಿ 9 ಕೊನೆಯದಿನ
- ಜ.4ರಂದು ಎತ್ತಿನಹೊಳೆಗೆ ಕೇಂದ್ರ ಅಡ್ಡಿ ವಿರುದ್ಧ ಸಭೆ: ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮುರಳಿಧರ ಹಾಲಪ್ಪ
- ರುಡ್ ಸೆಟ್ ಸಂಸ್ಥೆ: ವಿವಿಧ ತರಬೇತಿಗೆ ಅರ್ಜಿ
- ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಕಲ್ಪಿಸಿದ ಕಾಂಗ್ರೆಸ್: ಡಾ.ಇಂತಿಯಾಜ್ ಅಹಮದ್ ಅಭಿಮತ
- ಪದವೀಧರರ ಕ್ಷೇತ್ರ: ಕರಡು ಮತದಾರರ ಪಟ್ಟಿ ಸಿದ್ಧ | ಚಿರತೆ ಬಗ್ಗೆ ಸುಳ್ಳು ಮಾಹಿತಿಗೆ ಕಾನೂನು ಕ್ರಮ
- ಬುದ್ಧ, ಬಸವ, ಅಂಬೇಡ್ಕರ್ ಜಗತ್ತಿನ ಬೆಳಕು: ಶ್ರೀ ರುದ್ರಮುನಿ ಸ್ವಾಮೀಜಿ
- ತುಮಕೂರು | ಅಂಬೇಡ್ಕರ್ ಯುವ ಸೇನೆಯಿಂದ 208ನೇ ಭೀಮ-ಕೋರೆಗಾಂವ್ ವಿಜಯ ದಿನಾಚರಣೆ
- ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಿ: ಎಸ್.ಎನ್.ನಾಗರಾಜು ಒತ್ತಾಯ
Author: admin
ಕೊರಟಗೆರೆ: ಸಂಸ್ಕಾರಕ್ಕೆ ಯಾವುದೇ ಜಾತಿ ಮತ ಭೇದವಿಲ್ಲ ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ ಶಿಕ್ಷಣವನ್ನು ಕಲಿಸಿದರೆ ಉತ್ತಮ ಸಮಾಜ ರೂಪಗೋಳ್ಳುತ್ತದೆ ಎಂದು ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು. ಅವರು ತಾಲ್ಲೂಕಿನ ಎಲೆರಾಂಪುರದ ನರಸಿಂಹಗಿರಿ ಕ್ಷೇತ್ರದ ಕುಂಚಿಟಿಗರ ಮಹಾ ಸಂಸ್ಥಾನ ಮಠದಲ್ಲಿ 4 ನೇ ವರ್ಷದ ಸಂಸ್ಕಾರ ಶಿಬಿರ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿ ಮಕ್ಕಳಲ್ಲಿ ಆಧುನಿಕತೆಯ ವೈಭವದ ಜೀವನದಲ್ಲಿ ಅವರ ಮನಸ್ಥತಿ ಕಲುಷಿತವಾಗುತ್ತದೆ ಬದಲಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಮಕ್ಕಳ ಮನಸ್ಸನ್ನು ಒಳ್ಳೆಯ ಕಡೆಗೆ ಕರೆದೊಯ್ಯುವ ದೃಷ್ಟಿಯಿಂದ ಇತಂಹ ಸಂಸ್ಕಾರ ಶಿಬಿರಗಳನ್ನು ಶ್ರೀ ಮಠದಲ್ಲಿ ಪ್ರಾರಂಭಿಸಲಾಗಿದೆ, ಮಕ್ಕಳು ಕಠಿಣ ಪರಿಸ್ಥತಿಯನ್ನು ಜೀವದಲ್ಲಿ ಎದುರಿಸಲು ಅವರ ಮನಸ್ಸು ಸದೃಡವಾಗಿರುಬೇಕು ಈ ಸಂಸ್ಕಾರ ಶಿಬಿರದಲ್ಲಿ ಜಾತಿ, ಉಳ್ಳವರು, ಬಡವರು, ಎನ್ನುವ ಭೇದವಿಲ್ಲ ಎಲ್ಲರೂ ಸಮಾನ ವಿದ್ಯಾರ್ಥಿಗಳು ಈ 10 ದಿನಗಳ ಕಾಲ ಸಂಸ್ಕಾರ ಶಿಬಿರದಲ್ಲಿ ನಡೆಯುವ ಎಲ್ಲಾ ಪ್ರವಚನ, ತರಬೇತಿ, ಆಟ, ಊಟ, ವಸತಿ, ಬಟ್ಟೆ, ಪುಸ್ತಕ ಅಭ್ಯಾಸಗಳ ಸಂಪೂರ್ಣ ಜವಾಬ್ದಾರಿ ವೆಚ್ಚವನ್ನು ಶ್ರೀ ಮಠವು ವಹಿಸುತ್ತದೆ…
ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ : 2026ರ ಜೂನ್ ಅಂತ್ಯದೊಳಗೆ ತುಮಕೂರು ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ,ಕೊರಟಗೆರೆ ಮತ್ತು ಮಧುಗಿರಿ ಕ್ಷೇತ್ರದ 343 ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಿಂದ ನೀರಾವರಿಗೆ 3.44 ಟಿಎಂಸಿ ಮತ್ತು ಕುಡಿಯುವ ನೀರಿಗೆ 2.29 ಟಿಎಂಸಿ ಸೇರಿ ಒಟ್ಟು 5.74 ಟಿಎಂಸಿ ನೀರು ಹರಿಯಲಿದೆ ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಮಾಹಿತಿ ನೀಡಿದರು. ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತೀತಾ ಗ್ರಾ.ಪಂ. ವ್ಯಾಪ್ತಿಯ ಗೊರವನಹಳ್ಳಿಯ ಕಮಲಪ್ರಿಯ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಲಾಗಿದ್ದ 24 ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ಸರಕಾರ ದಿವಾಳಿ ಆಗಿದೆ ಅಂತಾ ವಿರೋಧ ಪಕ್ಷದವ್ರು ಅಂತಾರೇ. ಹಿಂದಿನ ವರ್ಷದ ಬಜೆಟ್ 3 ಲಕ್ಷ 71 ಸಾವಿರ ಕೋಟಿ. ಪ್ರಸ್ತುತ ವರ್ಷದ ಬಜೆಟ್ ಗಾತ್ರ 4 ಲಕ್ಷ 9 ಸಾವಿರ ಕೋಟಿ. ಬಜೆಟ್ ಹೆಚ್ಚಾಗಿದ್ದು ವಿರೋಧ ಪಕ್ಷಗಳಿಗೆ ಗೊತ್ತಿಲ್ಲವೇ.…
ಮಧುಗಿರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಧುಗಿರಿ ಮತ್ತು ಸಮಾಜಶಾಸ್ತ್ರ ವಿಭಾಗ ಹಾಗು ಐ.ಕ್ಯೂ.ಎ.ಸಿ. ಇವುಗಳ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದಿತು. ಕಾರ್ಯಕ್ರಮದಲ್ಲಿ ಡಾ.ಆಶ್ವಾಖ್ ಅಹಮದ್, ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಸಮಾಜಶಾಸ್ತ್ರ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು ಇವರು ಪ್ರಮುಖ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ “ಲಿಂಗತಾರತಮ್ಯ ಮತ್ತು ಸ್ತ್ರೀ ಸಬಲೀಕರಣ: ಸಮಸ್ಯೆಗಳು ಮತ್ತು ಸವಾಲುಗಳು” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡುತ್ತಾ ಲಿಂಗಸಮಾನತೆಯಿಂದ ಮಾತ್ರ ಸ್ತ್ರೀಸಬಲೀಕರಣ ಸಾಧ್ಯ, ಲಿಂಗತಾರತಮ್ಯವು ಒಂದು ಸಮಸ್ಯೆಯಾದರೆ ಸ್ತ್ರೀಸಬಲೀಕರಣವು ಈ ಸಮಸ್ಯೆಯ ಪರಿಹಾರವಾಗಿದೆ. ನಿರ್ದೆಷ್ಟ ಲಿಂಗ ಎನ್ನುವ ಕಾರಣಕ್ಕೆ ವ್ಯಕ್ತಿಯ ಹಕ್ಕುಗಳು ಮತ್ತು ಅವಕಾಶಗಳನ್ನು ನಿರಾಕರಿಸುವುದೆ ಲಿಂಗ ಅಸಮಾನತೆಯಾಗಿದೆ. ಲಿಂಗತಾರತಮ್ಯ ನಿವಾರಣೆಯಾದರೆ ಮಾತ್ರ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಸಾಧ್ಯ ಲಿಂಗತಾರತಮ್ಯವು ಸ್ತ್ರೀಸಬಲೀಕರಣಕ್ಕೆ ಸವಾಲನ್ನೋಡ್ಡುತ್ತಿದ್ದು ಲಿಂಗತಾರತಮ್ಯಕ್ಕೆ ಜೈವಿಕ ಅಂಶ ಕಾರಣವಾಗುವುದರ ಜೊತೆಗೆ ಮಾನಸಿಕ, ಸಾಮಾಜಿಕ ಅಂಶಗಳು ಕಾರಣವಾಗುತ್ತವೆ. ಸಮಾಜದಲ್ಲಿ ಲಿಂಗತಾರತಮ್ಯಕ್ಕೆ ಕಡಿವಾಣ ಹಾಕಬೇಕಾದರೆ…
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಆರ್ಭಟ ಇನ್ನೂ ಮುಂದುವರಿಯಲಿದೆ. ಚಂಡಮಾರುತದ ಹಿನ್ನಲೆ, ಇಂದು 18 ಜಿಲ್ಲೆಗಳಿಗೆ ಮಳೆಯಾಗಲಿದೆ. ನಾಳೆಯಿಂದ ಮಳೆ ಪ್ರಮಾಣ ಕಡಿಮೆಯಾದರೂ ಕೆಲವು ಜಿಲ್ಲೆಗಳಿಗೆ ಮಳೆ ಅಲರ್ಟ್ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಏಪ್ರಿಲ್ 17, ಗುರುವಾರವೂ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ನಗರದಲ್ಲಿ ಭಾರೀ ಮಳೆಯಿಂದಾಗಿ ಸಂಚಾರಕ್ಕೆ ಅಡ್ಡಿಯಾಗಿದೆ, ಹವಾಮಾನ ವೈಪರೀತ್ಯದಿಂದಾಗಿ ಹಲವಾರು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ, ಗದಗ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ, ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಶಿವಮೊಗ್ಗ, ಬಳ್ಳಾರಿ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವಾಮಾನವಿರುತ್ತದೆ. ಏಪ್ರಿಲ್ 16–19 ರವರೆಗೆ ನಗರವು ಪ್ರಧಾನವಾಗಿ ಮೋಡ ಕವಿದ ವಾತಾವರಣದೊಂದಿಗೆ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…
ಬೆಂಗಳೂರು: ಯುವಕನೊಬ್ಬ ಮಹಿಳೆಯೊಬ್ಬರಿಗೆ ತನ್ನ ಮಾರ್ಮಾಂಗ ತೋರಿಸಿ, ಅಶ್ಲೀಲ ಸನ್ನೆ ಮಾಡಿದ್ದು, ಇದನ್ನು ಪ್ರಶ್ನಿಸಿದ ಮಹಿಳೆಯ ಪತಿ ಸೇರಿದಂತೆ ಏಳು ಜನರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಏಪ್ರಿಲ್ 13 ರಂದು ಈ ಘಟನೆ ನಡೆದಿದೆ. ಆರೋಪಿ ತನ್ನ ತಾಯಿ ಮೇಲೂ ಮೇಲೂ ಹಲ್ಲೆ ನಡೆಸಿದ್ದಾನೆ. ಈ ಕುರಿತು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬಳಿಕ ಸ್ಥಳದಿಂದ ಪರಾರಿಯಾಗಿರುವ ಕಾಮುಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಯನ್ನು ಕಾರ್ತಿಕ್ ಎಂದು ಗುರುತಿಸಲಾಗಿದೆ. ಅಂದಹಾಗೆ, ಗೃಹಿಣಿಯೊಬ್ಬಳು ತನ್ನ ಮನೆಯ ಎರಡನೇ ಮಹಡಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರು ಮನೆಯಲ್ಲಿ ವಾಸಿಸುತ್ತಿದ್ದ ಆರೋಪಿ ತನ್ನ ಪ್ಯಾಂಟ್ ಜೀಪ್ ಬಿಚ್ಚಿ ಮಾರ್ಮಾಂಗವನ್ನು ತೋರಿಸಿದ್ದಾನೆ. ಅಲ್ಲದೇ ಅಶ್ಲೀಲ ಸನ್ನೆಗಳ ಮೂಲಕ ಆಕೆಯನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾನೆ. ಇದರಿಂದ ವಿಚಲಿತಳಾದ ಮಹಿಳೆ ತನ್ನ ಪತಿಯನ್ನು ಸಹಾಯಕ್ಕಾಗಿ ಕರೆದಿದ್ದಾಳೆ. ಇದರಿಂದ ಆಕ್ರೋಶಗೊಂಡ ಆರೋಪಿಯು ಪತಿ ಮೇಲೆ ಹಲ್ಲೆ ನಡೆಸಲಾರಂಭಿಸಿದ್ದಾರೆ. ಜಗಳ ಬಿಡಿಸಲು ಬಂದ ನೆರೆಹೊರೆಯವರ ಮೇಲೂ ಹಾಲೊ ಬ್ಲಾಕ್…
ತುಮಕೂರು: ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮೇ 2 ಮತ್ತು 3ರಂದು ಬೆಳಿಗ್ಗೆ 11 ಗಂಟೆಗೆ ಕಾಲಮಾನ ಪರಿಷ್ಕರಣಾ ಸಭೆ ನಡೆಯಲಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ. ಪ್ರಸಾದ್ ತಿಳಿಸಿದ್ದಾರೆ. ತುಮಕೂರು–ಕುಣಿಗಲ್ ಮತ್ತು ಶಿರಾ–ತುಮಕೂರು ವಲಯಕ್ಕೆ ಸಂಬಂಧಿಸಿದಂತೆ ಮೇ 2ರಂದು ಹಾಗೂ ತುಮಕೂರು–ಮಧುಗಿರಿ ಮತ್ತು ತುಮಕೂರು–ಚಿಕ್ಕನಾಯಕನಹಳ್ಳಿ ವಲಯಕ್ಕೆ ಸಂಬಂಧಿಸಿದಂತೆ ಮೇ 3ರಂದು ಸಭೆ ನಡೆಯಲಿದೆ. ಹಿಂದಿನ ಸಭೆಯಲ್ಲಿ ಸ್ವೀಕೃತ ಅರ್ಜಿಗಳ ರಹದಾರಿ ಮಾಲೀಕರು ಅಥವಾ ಅವರ ಪರವಾಗಿ ಹಾಜರಾಗುವ ಪ್ರತಿನಿಧಿಗಳು ಮೂಲ ದಾಖಲಾತಿಗಳೊಂದಿಗೆ ಹಾಗೂ ರಹದಾರಿಯ ಪ್ರಸ್ತುತ ವೇಳಾಪಟ್ಟಿ ಮತ್ತು ಪ್ರಸ್ತಾಪಿತ ವೇಳಾಪಟ್ಟಿಯ ಪ್ರತಿಯೊಂದಿಗೆ ಸಭೆಗೆ ಹಾಜರಾಗಬೇಕೆಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW ————————————
ಬಿಇಓ ವೈಯಕ್ತಿಕ ಜಿದ್ದಿಗೆ 8ಜನ ಶಿಕ್ಷಕರಿಗೆ ಅಮಾನತು | ಲೋಕಾಯುಕ್ತಗೆ ದೂರು ನೀಡಿದ್ರೇ ಬಿಇಓ ನೀಡ್ತಾರೇ ಅಮಾನತು ಶಿಕ್ಷೆ
ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ : ಬಿಇಓ ಸಿ.ವಿ.ನಟರಾಜು ವಿರುದ್ದ ಕಚೇರಿಯ ಭ್ರಷ್ಟಚಾರದ ಬಗ್ಗೆ ತುಮಕೂರು ಲೋಕಾಯುಕ್ತ ಕಚೇರಿಗೆ ಶಿಕ್ಷಕ ಎಸ್.ದೇವರಾಜಯ್ಯ ದೂರು ನೀಡಿದ್ರೇ ಕಾರಣವೇ ನೀಡದೇ ಬಿಇಓ ವೈಯಕ್ತಿಕ ಜಿದ್ದಿನ ದ್ವೇಷದಿಂದ ಶಿಕ್ಷಕನನ್ನು ಏಕಾಏಕಿ ಅಮಾನತು ಮಾಡಿರುವ ಘಟನೆಗೆ ಎಲ್ಲೆಡೆಯು ಆಕ್ರೋಶ ವ್ಯಕ್ತವಾಗಿದೆ. ಕೊರಟಗೆರೆ ಪಟ್ಟಣದ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ರಾಜ್ಯ ಭೀಮಸೇನಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ದಿಢೀರ್ ಮುತ್ತಿಗೆ ಹಾಕಿ ಅಮಾನತು ಮಾಡಿರುವ ಶಿಕ್ಷಕರಿಗೆ ಕಾರಣ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಇಓ ನಟರಾಜು ಅಮಾನತಿಗೆ ಆಗ್ರಹ ಮಾಡಿದರು. ಭೀಮಸೇನಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಬಿಇಓ ನಡುವೆ ಗಂಟೆಗೂ ಹೆಚ್ಚುಕಾಲ ಮಾತಿನ ಚಕಮಕಿ ನಡೆಯಿತು. ಶಿಕ್ಷಕರ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ ಕಚೇರಿಯಿಂದ ಹೊರಗಡೆ ಬಿಇಓ ತಡೆದು ಮತ್ತೆ ಶಿಕ್ಷಕರು ಮುತ್ತಿಗೆ ಹಾಕಿದರು. ಪೊಲೀಸರು ಮಧ್ಯೆ ಪ್ರವೇಶಿಸಿ ಜಗಳವನ್ನು ಬಿಡಿಸಿ ಸಮಾಧಾನ ಮಾಡಿದ ಘಟನೆಯು ನಡೆಯಿತು. ಬಿಇಓ ಕೇಂದ್ರಸ್ಥಾನದಲ್ಲೇ ಏಕೆ ಇಲ್ಲ:…
ತುಮಕೂರು: ಸಹಕಾರಿ ಸಚಿವರ ತವರಲ್ಲಿ 40% ಕಮಿಷನ್ ಆರೋಪ ಕೇಳಿ ಬಂದಿದೆ. ಭ್ರಷ್ಟಾಚಾರದ ಆಡಿಯೋ ವಿಡಿಯೋ ನಮ್ಮತುಮಕೂರು ವಾಹಿನಿಗೆ ಲಭ್ಯವಾಗಿದೆ. ಕಾಂಗ್ರೆಸ್ ಸರ್ಕಾರದ ಮೇಲೆ ಬಿಜೆಪಿ ಪಕ್ಷ ನಿರಂತರ 40% ಪರ್ಸೆಂಟ್ ಆರೋಪ ಮಾಡುತ್ತಲೇ ಬಂದಿದೆ. ಆದ್ರೆ ಯಾವುದೇ ಸಾಕ್ಷಿ ಆಧಾರ ಸಿಕ್ಕಿರಲಿಲ್ಲ, ಇದೀಗ ಈ ಆಡಿಯೋ ವಿಡಿಯೋ ಪರ್ಸಂಟೇಜ್ ಭ್ರಷ್ಟಾಚಾರದ ಕರಾಳಮುಖವನ್ನು ಬಯಲು ಮಾಡಿದೆ. ಇಬ್ಬರು ಪ್ರಭಾವಿ ಸಚಿವರು ಇರುವ ತುಮಕೂರು ಜಿಲ್ಲೆಯ ಮಧುಗಿರಿ ಪಿಡಬ್ಲ್ಯೂಡಿ ಎಇಇ ರಾಜಗೋಪಾಲ್ 3 ಲಕ್ಷ 20 ಸಾವಿರ ಮುಂಗಡ ಲಂಚ ಪಡೆದ ಘಟನೆ ನಡೆದಿದೆ. 20 ಲಕ್ಷದ ಪಿಡ್ಲ್ಯೂಡಿ ಇಲಾಖೆಯ ಕಾಮಗಾರಿಯ ಕೊಡುವುದಾಗಿ 3ಲಕ್ಷ 20 ಸಾವಿರ ಅಡ್ವಾನ್ಸ್ ಕಮಿಷನ್ ಪಡೆದ ಕಥೆ ಇದು ನೋಡಿ. ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಕ್ಷೇತ್ರದ ಪಿಡ್ಲ್ಯೂಡಿ ಇಲಾಖೆಯ ಎಇಇ ಲಂಚಬಾಕತನ ಬಯಲಾಗಿದೆ. ಕೊನೆಗೆ 20 ಲಕ್ಷ ಅನುದಾನವು ಇಲ್ಲ.. ಲಂಚ ಪಡೆದ ಕಮಿಷನ್ ಹಣವೂ ನೀಡದೇ ಗುತ್ತಿಗೆದಾರನಿಗೆ ಬೇರೊಬ್ಬರ ಚೇಕ್ ನೀಡಿ ವಂಚಿಸಿದ ಆರೋಪ ಪಿಡ್ಲ್ಯೂಡಿ…
ತುಮಕೂರು : ಕುಡಿಯುವ ನೀರಿನ ವಿಚಾರಕ್ಕೆ ನಡು ಬೀದಿಯಲ್ಲೇ ಬಡಿದಾಟ ನಡೆದಿರುವ ಘಟನೆ ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ನಡೆದಿದೆ. ಇಕ್ಬಾಲ್ ಅಹಮದ್(46) ಅಬ್ದುಲ್ ಖಾದರ್( 27) ಹಲ್ಲೆಗೊಳಗಾದವರಾಗಿದ್ದು, ಸಲ್ಮಾನ್ ಪಾಷ, ಫರ್ಮಾನ್ ಫಾಷ, ಫಯಾಸ್ ಫಾಷ, ರಕೀಭಾ ಎಂಬುವರಿಂದ ಹಲ್ಲೆ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ. ನಗರದ ವೀರಸಾಗರದ ನಿವಾಸಿ ಇಕ್ಬಾಲ್ ಅಹಮದ್ ಅಕ್ಕನ ಮನೆಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಅಕ್ಕ ಸೈದಾ ಬಾನು ನೀರು ಹಿಡಿದುಕೊಳ್ಳಲು ಹೋದಾಗ ಜಗಳ ತೆಗೆದಿದ್ದ ಫಯಾಸ್ ಕುಟುಂಬ, ಸಾರ್ವಜನಿಕ ಟ್ಯಾಪ್ ನಲ್ಲಿ ನೀರಿಡಿದುಕೊಳ್ಳಲು ಅಡ್ಡಿ ಪಡಿಸಿತ್ತು. ಈ ವೇಳೆ ಜಗಳ ಬಿಡಿಸಲು ಹೋದ ಇಕ್ಬಾಲ್ ಅಹಮದ್ ಮೇಲೆ ಹಲ್ಲೆ ನಡೆಸಲಾಗಿದೆ. ಇಕ್ಬಾಲ್ ನ ತಲೆ ಹಾಗೂ ಕೈ ಎದೆಗೆ ಕಬ್ಬಿಣದ ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಜಗಳ ಬಿಡಿಸಲು ಹೋದ ಅಬ್ದುಲ್ ಮೇಲೂ ಹಲ್ಲೆ ನಡೆದಿದ್ದು, ಗಾಯಾಳುಗಳು ತುಮಕೂರು ಜಿಲ್ಲಾಸ್ಪತ್ರೆ ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ನಡೆಸಿದ…
ತುಮಕೂರು: ಡಾ.ಬಿ.ಆರ್. ಅಂಬೇಡ್ಕರ್ ಅವರ ಕನಸಿನ ಭಾರತವನ್ನು ನಿರ್ಮಿಸೋಣ ಎಂದು ಜಿಲ್ಲೆಯ ಪಾವಗಡ ತಾಲೂಕು ರಾಜವಂತಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ನರಸಪ್ಪ ಅವರು ತಿಳಿಸಿದರು. ಸೋಮವಾರ ದವಡಬೆಟ್ಟ ಗ್ರಾಮದಲ್ಲಿ ಡಾ.ಬಿ.ಅರ್. ಅಂಬೇಡ್ಕರ್ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯದ ನಾಯಕರಲ್ಲ. ಅವರು ಇಡೀ ಭಾರತೀಯ ಸಮಾಜವನ್ನು ಬದಲಾಯಿಸಲು ಶ್ರಮಿಸಿದ ಮಹಾನ್ ಕ್ರಾಂತಿಕಾರಕರಾಗಿದ್ದರು. ಶಿಕ್ಷಣ ಕುರಿತು ಅಂಬೇಡ್ಕರ್ ಅವರ ನಂಬಿಕೆಯನ್ನು ಉಲ್ಲೇಖಿಸಿದ ಅವರು, ‘ಶಿಕ್ಷಣವೇ ಶಕ್ತಿಯ ಮೂಲ — ಇಂದಿನ ತಲೆಮಾರಿಗೆ ದಾರಿ ತೋರಿಸುವ ದೀಪವಾಗಿದೆ’. ಅಂಬೇಡ್ಕರ್ ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಅಂಬೇಡ್ಕರ್ ಅವರು ಅಸ್ಪೃಶ್ಯತೆಯನ್ನು ಬದಿಗೊತ್ತಿ, ಎಲ್ಲರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸುವಂತೆ ಹೋರಾಡಿದ ಮಹಾನ್ ನಾಯಕ. ಅವರು ನೀಡಿದ ಸಂವಿಧಾನವು ಇಂದು ಎಲ್ಲರಿಗೂ ನ್ಯಾಯ, ಸಮಾನತೆ, ಸ್ವಾತಂತ್ರ‍್ಯ ಹಾಗೂ ಬಾಂಧವ್ಯ ಎಂಬ ಪ್ರಮುಖ ಮೌಲ್ಯಗಳನ್ನು ಕಲ್ಪಿಸಿದೆ ಎಂದರಲ್ಲದೆ “ಸ್ವಾತಂತ್ರ್ಯ ಎಂದರೆ ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ. ಅದು ಸಾಮಾಜಿಕ…