Subscribe to Updates
Get the latest creative news from FooBar about art, design and business.
- BPS: ಪದಾಧಿಕಾರಿಗಳ ಆಯ್ಕೆ, ಎಂಬಿಬಿಎಸ್ ವಿದ್ಯಾರ್ಥಿಗೆ ಸನ್ಮಾನ
- ಹಂಚೀಪುರ ಗ್ರಾ.ಪಂ.: ರಸ್ತೆ ಬದಿಯ ಗಿಡಗಂಟಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ
- ಸರಗೂರು | ಆರ್ ಎಸ್ ಎಸ್ ಬ್ಯಾನ್ ಗೆ ಡಿ ಎಸ್ ಎಸ್ ಒತ್ತಾಯ
- ತಿಪಟೂರು | ಸರಿಯಾಗಿ ಕಾರ್ಯನಿರ್ವಹಿಸದ ಸಂಚಾರ ಸಿಗ್ನಲ್ ಗಳು: ವಾಹನ ಚಾಲಕರಿಂದ ಆಕ್ರೋಶ
- ಕನಕದಾಸರು ಸಮಾಜದ ಓರೆಕೋರೆಗಳನ್ನು ತಿದ್ದಲು ಶ್ರಮಿಸಿದವರು: ಸಿ.ವಿ.ಕುಮಾರ್
- ಅವೈಜ್ಞಾನಿಕ ಸುತ್ತೋಲೆ ವಾಪಸ್ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಂಶುಪಾಲರ, ಉಪನ್ಯಾಸಕರ ಸಂಘ ಆಗ್ರಹ
- ತುಮಕೂರು | ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ
- ಕುಲವಿಲ್ಲದ ನೆಲೆಗಾಗಿ ನಡೆದಾಡಿದ ಸಂತ ಕವಿ ಕನಕದಾಸರು: ಬಿಡಗಲು ಶಿವಣ್ಣ ಅಭಿಮತ
Author: admin
ತುಮಕೂರು: ನಗರದ ಕರಿಬಸವೇಶ್ವರ ಸ್ವಾಮಿಯ ಮಠದಲ್ಲಿದ್ದ ಆನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಸ್ ಕಂಪೆನಿಗೆ ಮಾರಾಟ ಮಾಡುವ ವಿಫಲ ಯತ್ನ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಗರದ ಕರಿಬಸವೇಶ್ವರ ಸ್ವಾಮಿ ಮಠದಲ್ಲಿ ಸುಮಾರು, 29 ವರ್ಷಗಳಿಂದ ಇರುವ ಆನೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸೆ ಕೊಡಿಸುವ ನೆಪವೊಡ್ಡಿ ಬನ್ನೇರುಘಟ್ಟದ ಅರಣ್ಯ ಪ್ರದೇಶಕ್ಕೆ ಕರೆದೊಯ್ಯುವುದಾಗಿ ಹೇಳಿ, ಗುಜರಾತ್ ಮೂಲದ ಸರ್ಕಸ್ ಕಂಪೆನಿಗೆ ಮಾರಾಟ ಮಾಡಲು ಯತ್ನಿಸಿದ್ದಾರೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ. ಆನೆಯನ್ನು ಲಾರಿಯಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ದಾಬಾಸ್ ಪೇಟೆ ಬಳಿ ಮಠದ ಸಿಬ್ಬಂದಿಯನ್ನು ಲಾರಿಯಿಂದ ಕೆಳಗಿಳಿಸಿ ಹಲ್ಲೆ ನಡೆಸಿ, ಕುಣಿಗಲ್ ಭಾಗದ ಹಳ್ಳಿಯೊಂದರಲ್ಲಿ ಬಚ್ಚಿಡಲಾಗಿತ್ತು ಎಂದು ಮಠದ ಸಿಬ್ಬಂದಿ ಆರೋಪಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಗರಸಭೆ ಅಭಿವೃದ್ಧಿಯಾಗ ಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಂತ ಮುಖ್ಯವಾದದ್ದು, ಸಾರ್ವಜನಿಕರು ಸಹಕಾರ ನೀಡಿ, ನಗರಸಭೆಗೆ ಕಟ್ಟಬೇಕಾದ ಅಗತ್ಯ ತೆರಿಗೆಗಳನ್ನು ಪಾವತಿ ಮಾಡಿದರೆ ಮಾತ್ರ ನಗರಸಭೆಯಿಂದ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಡಿ.ಉಮೇಶ್ ರವರು ಹೇಳಿದರು. ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಂಷುನ್ನೀಸಾರವರ ಅಧ್ಯಕ್ಷತೆಯಲ್ಲಿ ಹಿರಿಯೂರು ನಗರಸಭೆಯ 2022-23ನೇ ಸಾಲಿನ ಕರಡು ಆಯವ್ಯಯ ಪಟ್ಟಿ ತಯಾರಿಸುವ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಗರದಲ್ಲಿ ಬಹಳಷ್ಟು ಸಾರ್ವಜನಿಕರು ಬಹಳ ವರ್ಷಗಳಿಂದ ತಮ್ಮ ಮನೆಗಳ ಕಂದಾಯಗಳನ್ನು ಕಟ್ಟಿರುವುದಿಲ್ಲ, ಅನೇಕ ಉದ್ದಿಮೆದಾರರು ವರ್ತಕರು ತಮ್ಮ ಟ್ರೇಡ್ ಲೈಸನ್ಸ್ ಗಳನ್ನು ನವೀಕರಿಸಿರುವುದಿಲ್ಲ, ಅವುಗಳನ್ನು ಈಗ ಪಟ್ಟಿ ಮಾಡಲು ಹೇಳಿದ್ದೇನೆ, ಅವರಿಗೆ ನೋಟೀಸ್ ನೀಡುವ ಮೂಲಕ, ಕಂದಾಯ ವಸೂಲಾತಿ ಮಾಡಬೇಕಿದೆ ಎಂಬುದಾಗಿ ಅವರು ಹೇಳಿದರು. ಆದರೆ ನಮ್ಮಲ್ಲಿ ಈ ಎಲ್ಲಾ ಕೆಲಸ-ಕಾರ್ಯಗಳಿಗೆ ನೌಕರರ ಕೊರತೆಯಿದ್ದು, ಅಗತ್ಯ ಸಿಬ್ಬಂದಿ ಬೇಕಾಗಿದೆ,…
ಮಧುಗಿರಿ: ತಾಲ್ಲೂಕು, ಪುರವರ ಹೋಬಳಿ, ಬ್ಯಾಲ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಳಬಾಗಿಲಪಾಳ್ಯ ಗ್ರಾಮದಲ್ಲಿ ಹೊಸ ವರ್ಷದ ದಿನದಂದು ಗ್ರಾ.ಪಂ ಸದಸ್ಯೆ ರಾಧಮ್ಮ ಅವರ ನೇತೃತ್ವದಲ್ಲಿ ಕುಂದುಕೊರತೆಯ ಸಭೆ ನಡೆಯಿತು. ಈ ವೇಳೆ ನಿವೇಶನ, ಮಳೆಯಿಂದ ಕುಸಿದ ಮನೆಗಳ ಪರಿಹಾರ, ಪಿಂಚಣಿ, ಚರಂಡಿ, ಶುದ್ದನೀರು, ಪಡಿತರ ಚೀಟಿ ಇನ್ನಿತರೆ ಕೊಂದು ಕೊರತೆಗಳ ಬಗ್ಗೆ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸ್ಥಳದಲ್ಲೇ ಪುರವರ ಹೋಬಳಿ ಆರ್.ಐ. ರವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ ತಕ್ಷಣ ಸ್ಪಂದಿಸಿದ ಆರ್.ಐ ರವರು ಸ್ಥಳಕ್ಕೆ ಗ್ರಾಮ ಲೆಕ್ಕಿಗ ಶ್ರೀಧರ್ ರವರನ್ನು ಕಳುಹಿಸಿ ಮಹಜರ್ ಮಾಡಿಸಿ, ಸಮಸ್ಯೆಗಳನ್ನು ಪರಿಹರಿಸಲಾಗುವುದೆಂದು ಭರವಸೆ ನೀಡಿದರು. ಈ ವೇಳೆ ಗ್ರಾಮ ಸಹಾಯಕ ಮೂರ್ತಿ, ಗ್ರಾಮದ ಮಾಜಿ ಸದಸ್ಯ ಮಲ್ಲಿಕಾರ್ಜುನ್, ಗ್ರಾ.ಪಂ. ಸದಸ್ಯ ಅರುಣ,ವಕೀಲರಾದ ತಿಮ್ಮಣ್ಣ,ಮಂಜುನಾಥ್, ಅಗ್ರಹಾರ ವೆಂಕಟೇಶ್, ಹನುಮಂತಪುರ ತಿಮ್ಮರಾಜು, ಸೌಭಾಗ್ಯ, ಬೇಬಿ, ಆಶಾ, ರೂಪ, ರತ್ಮಮ್ಮ, ವೀದಭದ್ರಯ್ಯ, ಮಧು, ಮಲ್ಲಣ್ಣ, ನಾಗೇಂದ್ರ, ಇತರರು ಹಾಜರಿದ್ದರು. ನಮ್ಮತುಮಕೂರು.ಕಾಂನ ಕ್ಷಣ…
ಹಿರಿಯೂರು: ತಾಲ್ಲೂಕಿನ ತಾಲ್ಲೂಕು ಕಚೇರಿಯ ನಿರ್ಮಾಣವಾಗಿರುವ ಶೌಚಾಲಯವು ಸಾರ್ವಜನಿಕರಿಗೆ ಉಪಯೋಗವಾಗದ ಮೇಲೆ ಯಾವ ಸಾರ್ಥಕತೆಗಾಗಿ ಈ ಶೌಚಾಲಯಗಳನ್ನು ನಿರ್ಮಾಣ ಮಾಡಿದಿರಿ ಎಂಬುದಾಗಿ ಕ್ಷೇತ್ರದ ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀ ನಿವಾಸ್ ಸಂಬಂಧಪಟ್ಟ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ತಾಲ್ಲೂಕು ಕಚೇರಿಯಲ್ಲಿರುವ ಸಾರ್ವಜನಿಕ ಶೌಚಾಲಯವು ಜನರಿಗೆ ಸರಿಯಾದ ರೀತಿಯಲ್ಲಿ ಸದ್ಬಳಕೆಯಾಗುತ್ತಿಲ್ಲ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಮತ್ತು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಇಂದು ಕ್ಷೇತ್ರದ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ತಾಲ್ಲೂಕು ಕಚೇರಿಗೆ ದಿಢೀರನೆ ಭೇಟಿ ನೀಡಿ, ಈ ಬಗ್ಗೆ ಪರಿಶೀಲನೆ ನಡೆಸಿದರಲ್ಲದೆ, ಶೌಚಾಲಯ ಬೀಗ ಹಾಕಿರುವುದನ್ನು ಕಂಡು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕ ಹಣದಿಂದ ಸಾರ್ವಜನಿಕರಿಗಾಗಿ ನಿರ್ಮಿಸಿರುವ ಶೌಚಾಲಯವನ್ನು ಸಾರ್ವಜನಿಕರು ಉಪಯೋಗಿಸಲು ಅವಕಾಶ ನೀಡದೇ ಬೀಗ ಹಾಕಿ, ಬೇಜಾವಾಬ್ದಾರಿತನದಿಂದ ವರ್ತಿಸಿರುವುದಲ್ಲದೆ, ಸಾರ್ವಜನಿಕರಿಂದ ಈಬಗ್ಗೆ ನನಗೆ ದೂರು ಬರುವಂತೆ ಮಾಡಿರುವುದು ನಿಜಕ್ಕೂ ಬೇಸರ ತಂದಿದೆ ಎಂಬುದಾಗಿ ಹೇಳಿದರು. ತಾಲ್ಲೂಕು ತಹಶೀಲ್ದಾರರು, ಹಾಗೂ ನಗರಸಭೆ ಆಯುಕ್ತರ ಸಮ್ಮುಖದಲ್ಲಿ ಹೆಲ್ತ್ ಇನ್ಸ್…
ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರದಲ್ಲಿ ಇಂದು 9ನೇ ವರ್ಷದ ಹನುಮ ಜಯಂತ್ಯೋತ್ಸವವನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಯಿತು. ಗ್ರಾಮದ ಯುವಕರು ಮತ್ತು ಹಿರಿಯರು ಎಲ್ಲರೂ ಸೇರಿ ಕಳೆದ ಒಂದು ವಾರದಿಂದ ಹನುಮ ಜಯಂತಿ ಆಚರಣೆಗೆಂದು ಇಡೀ ಊರನ್ನು ಕೇಸರಿ ಬಂಟಿಂಗ್ಸ್ ಮತ್ತು ಬಾವುಟಗಳನ್ನು ಕಟ್ಟುವುದರ ಮೂಲಕ ಕೇಸರಿಮಯಗೊಳಿಸಿದ್ದಾರೆ. ಇಷ್ಟಲ್ಲದೇ ಹನುಮ ಜಯಂತಿಯಾದ ಇಂದು ಸರ್ವ ಧರ್ಮದವರಿಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನಡೆಸಿ ಸಾವಿರಾರು ಜನರಿಗೆ ಊಟ ಉಣಬಡಿಸಿದರು. ಈ ಕಾರ್ಯಕ್ರಮವು ತಾಲ್ಲೂಕಿನಲ್ಲಿ ಬಹಳ ಮೆಚ್ಚುಗೆ ಗಳಿಸಿತು. ತಾಲ್ಲೂಕಿನ ಶಾಸಕರಾದ ಮಸಾಲ ಜಯರಾಮ್ ರವರು ಹನುಮ ದೇವಸ್ಥಾನಕ್ಕೆ ಆಗಮಿಸಿ ಹನುಮನ ಕೃಪೆಗೆ ಪಾತ್ರರಾದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುಮಕೂರು: ಜಿಲ್ಲೆ ತುರುವೇಕೆರೆ ಪಟ್ಟಣದ ಮಾಯಸಂದ್ರ ರಸ್ತೆ ಪೊಲೀಸ್ ಠಾಣೆಯ ಎದುರಿನಲ್ಲಿರುವ A. V. S. S, ಕಛೇರಿಯಲ್ಲಿ ತುರುವೇಕೆರೆ ತಾಲ್ಲೂಕಿನ ಛಲವಾದಿ ಮಹಾ ಸಭಾ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಹಯೋಗದೊಂದಿಗೆ 204 ನೇ ಭೀಮಾ ಕೊರೆಗಾಂವ್ ವಿಜಯೋತ್ಸವ ದಿನವನ್ನು ಆಚರಿಸಲಾಯಿತು. ತಾಲ್ಲೂಕು ಛಲವಾದಿ ಮಹಾಸಭಾದ ಅಧ್ಯಕ್ಷರಾದ ಡೊಂಕಿಹಳ್ಳಿ ರಾಮಣ್ಣ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಕುಣಿಕೆನಹಳ್ಳಿ ಜಗದೀಶ್ ಮಾತನಾಡಿ, ಈ ಒಂದು ಹೋರಾಟದಲ್ಲಿ ಮಡಿದ ಮಹರ್ ಸೈನಿಕರ ಸ್ವಾಭಿಮಾನ ಮತ್ತು ಪೇಶ್ವೆಯವರ ದುರಾಡಳಿತ ಹಾಗೂ ಅಸ್ಪೃಶ್ಯತೆ, ಸಾಮಾಜಿಕ, ಹಕ್ಕಿಗಾಗಿ ಮಡಿದಂತಹ ದಿನ ಎಂದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೊಡಗಿಹಳ್ಳಿ ಹನುಮಂತಯ್ಯ,ಬೀಚನಹಳ್ಳಿ ಮಹಾದೇವಯ್ಯ, ಪುರ ರಾಮಚಂದ್ರಯ್ಯ, ಶಂಕರಪ್ಪ, ನರಸಿಂಹ, ಕಾಚಿಹಳ್ಳಿ ಪುಟ್ಟರಾಜು, ಪ್ರಸನ್ನಕುಮಾರ್, ಶಿವಲಿಂಗಯ್ಯ ಮುಂತಾದವರು ಹಾಜರಿದ್ದರು. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…
ಮಾಯಸಂದ್ರದ ಪ್ರತಿಷ್ಠಿತ ಕಾನ್ವೆಂಟ್’ಗಳಲ್ಲಿ ಒಂದಾಗಿರುವ ಸೌರಭ ಕಾನ್ವೆಂಟ್ , 2022ರ ಹೊಸ ವರ್ಷವನ್ನು ಪುಟಾಣಿ ಮಕ್ಕಳ ಕೈನಲ್ಲಿ ಕೇಕ್ ಕತ್ತರಿಸುವ ಮೂಲಕ ಸ್ವಾಗತಿಸಲಾಯಿತು. ಇತ್ತೀಚೆಗಷ್ಟೇ ಹೊಸ ಪೈಂಟಿಂಗ್’ನಿಂದ ನವೀಕರಣಗೊಂಡಿದ್ದ ಕಾನ್ವೆಂಟ್ ಬಗ್ಗೆ ಮಾತನಾಡಿದ ಶಾಲಾ ಕಾರ್ಯದರ್ಶಿಗಳಾದ ಶ್ರೀಮತಿ ಕಲ್ಪನಾ ಮುನಿರಾಜು’ರವರು ” ಹೊಸವರ್ಷ ಎಲ್ಲರಿಗೂ ಹೊಸ ಹರ್ಷ ತರಲಿ, ಮಕ್ಕಳಿ ಆ ದೇವರು ಉತ್ತಮ ಆರೋಗ್ಯ ಮತ್ತು ವಿದ್ಯೆ ನೀಡಲಿ ” ಎಂದು ಹಾರೈಸಿದರು. ಕಾರ್ಯಕ್ರಮದ ನಂತರ ಸಿಹಿಹಂಚಿಕೆ ಮಾಡಲಾಯಿತು ಮತ್ತು ಮನೋರಂಜನಾ ಕಾರ್ಯಕ್ರಮ ನಡೆಯಿತು. ಮುನಿರಾಜು.ಆರ್,ಸಹಶಿಕ್ಷಕರಾದ ಗಿರೀಶ್ ಬಿ.ಜಿ.ಲೀಲಾವತಿ ಡಿ.ಕೆ., ನುಸ್ರತ್ ಝಬೀನ್ ಮತ್ತು ಗುರುಪ್ರಸಾದ್’ರವರು ಹಾಜರಿದ್ದರು. ವರದಿ: ವೆಂಕಟೇಶ ಜೆ.ಎಸ್. ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಹಾಗೂ ಎಲ್ಲಾ ಪದಾಧಿಕಾರಗಳಿಗೆ ಯುವಮುಖಂಡ ಅಂತೋಣಿ ಜೆ . ಹೊಸ ವರ್ಷದ ಶುಭಾಶಯಗಳು ತಿಳಿಸಿದ್ದಾರೆ ಹಿರಿಯೂರು ತಾಲ್ಲೂಕಿನ ಮಾಜಿ ಶಾಸಕರು , ಸಚಿವರು ಹಾಗೂ ಹಾಲಿ ಡಿ. ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಡಿ.ಸುಧಾಕರ್ ರವರ ಪಕ್ಷದ ಪರವಾಗಿ ವಾರ್ಡ್ ನಂ 28ರ ಬೂತ್ ಕಮಿಟಿಯ ಪದಾಧಿಕಾರಿಗಳಿಗೆ ಹೊಸ ವರ್ಷದ ಕ್ಯಾಲೆಂಡರ್ ಗಳನ್ನು ನೀಡುವ ಮೂಲಕ ಅಂತೋಣಿ ಜೆ. ರವರು ಹೊಸವರ್ಷದ ಶುಭಾಶಯಗಳನ್ನು ತಿಳಿಸಿದರು . ವರದಿ: ಮುರುಳಿಧರನ್ ಆರ್. ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾರ್ಡ್ ನಂ 9ರಲ್ಲಿರುವ ಶ್ರೀ ದುರ್ಗಾ ಪರಮೇಶ್ವರಿ ದೇವಿಗೆ ಇಂದು ವರ್ಷದ ಮೊದಲನೆಯ ದಿನ ಪ್ರಯುಕ್ತ ವಿಶೇಷ ಪೂಜೆ, ದೇವಿಗೆ ಹೂವಿನ ಅಲಂಕಾರ ಹಾಗೂ ಭಕ್ತರಿಂದ ಅನ್ನಸಂತರ್ಪಣೆ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನೆರವೇರಿಸಲ್ಪಟ್ಟಿತ್ತು . ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರ ಕುಟುಂಬಸ್ಥರು , ಹಾಗೂ ಹೆಚ್ವಿನ ಸಂಖ್ಯೆಯಲ್ಲಿ ಭಕ್ತಾಧಿಗಳು ದೇವಿ ದುರ್ಗಾ ಪರಮೇಶ್ವರಿಯ ಕೃಪೆಗೆ ಪಾತ್ರರಾದರು. ವರದಿ: ಮುರುಳಿಧರನ್ ಆರ್. ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದ ನಗರಸಭೆ ಕಾರ್ಯಾಲಯದಲ್ಲಿ 2022 ರ ಹೊಸ ವರ್ಷದ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಶಂಶುನ್ನಿಸಾ ರವರು ಕೇಕ್ ಕಟ್ ಮಾಡುವುದರ ಮೂಲಕ ನಗರಸಭೆಯ ಸಿಬ್ಬಂದಿ ವರ್ಗದವರಿಗೆ ಹೊಸ ವರ್ಷದ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಂಶುನ್ನಿಸಾ , ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್ ಪೌರಾಯುಕ್ತರಾದ ಉಮೇಶ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚಿತ್ರಜಿತ್ ಯಾದವ್ ಹಾಗೂ ನಗರಸಭಾ ಸದಸ್ಯರುಗಳಾದ ಸಣ್ಣಪ್ಪ ( ಸೊಸೈಟಿ ) ಹಾಗೂ ನಗರಸಭೆ ಕಾರ್ಯಾಲಯದ ಸಿಬ್ಬಂದಿ ವರ್ಗದವರು ಇತರರು ಉಪಸ್ಥಿತರಿದ್ದರು. ವರದಿ: ಮುರುಳಿಧರನ್ ಆರ್. ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy