Author: admin

ಸಿರಾ: ಮಿನಿ ವಿಧಾನಸೌಧದಲ್ಲಿ ನಡೆದ ಅಮರಶಿಲ್ಪಿ ಜಕಣಾಚಾರ್ಯ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶಾಸಕರಾದ ಡಾ ಸಿ ಎಂ ರಾಜೇಶ್ ಗೌಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ  ಗ್ರೇಡ್ 2 ತಹಸೀಲ್ದಾರ್ ಮಂಜುನಾಥ್, ನಗರ ಸಭಾ ಆಯುಕ್ತ ಶ್ರೀನಿವಾಸ್, E O ಅನಂತರಾಜು, BEO ಶಂಕರ್, ಲಕ್ಷೀಶ್, R I ಮಂಜುನಾಥ್, ವಿಶ್ವ ಕರ್ಮ ಸಮಾಜದ ಅಧ್ಯಕ್ಷರು ನಟರಾಜ್ ಆಚಾರು, ಕೃಷ್ಣ ಕುಮಾರ್, ನರಸಿಂಹಚಾರು, ಗಿರೀಶ್ ಚಾರು, ಮಂಜುನಾಥ್, ಸುಶೀಲಮ್ಮ,ಮಲ್ಲಚಾರು,ಮುಂತಾದ ಸಮಾಜದ ಮುಖಂಡರು ಹಾಜರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

1818 ಜನವರಿ 1 ರಂದು ನಡೆದ  ಭೀಮ ಕೊರೆಗಾಂವ್ ಯುದ್ಧದ  ಗೆಲುವಿಗೆ 204 ವರ್ಷ ತುಂಬಿದೆ. ಇದನ್ನು ಮೂರನೇ ಆಂಗ್ಲೋ ಮರಾಠ ಯುದ್ಧ ಎಂದೂ ಕರೆಯುತ್ತಾರೆ. ಈ ಯುದ್ಧ ಪೇಶ್ವೆ ಎರಡನೇ ಬಾಜಿರಾವ್ ಮತ್ತು ಈಸ್ಟ್ ಇಂಡಿಯಾ ಕಂಪನಿ ನಡುವಿನ ಯುದ್ಧವಾಗಿರುತ್ತದೆ. 28,000 ಸೈನಿಕರುಳ್ಳ ಬಲಿಷ್ಠ ಮರಾಠ ಸೇನೆಯನ್ನು 500ರಿಂದ 800 ಸೈನಿಕರುಳ್ಳ ಈಸ್ಟ್ ಇಂಡಿಯಾ ಕಂಪನಿ ಸೋಲಿಸಿ ವಿಜಯ ಪತಾಕೆ ಹಾರಿಸಿತ್ತು. ಬ್ರಿಟೀಷರ ಈ ಸೈನ್ಯದಲ್ಲಿ ಹೆಚ್ಚಿನವರು ಮಹರ್ ಜನಾಂಗದವರಾಗಿಯೇ ಇದ್ದರು. ಅಂದಿನ ಕಾಲದಲ್ಲಿ ಮಹರ್ ಜನಾಂಗದವರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿತ್ತು. ಪೇಶ್ವೆಗಳ ಸೇನೆಯಲ್ಲಿ ಮೇಲ್ಜಾತಿಯವರೇ ತುಂಬಿದ್ದರು. ಆಗ ನಡೆಯುತ್ತಿದ್ದ ಮೇಲು ಕೀಳಿನ ಮನೋಭಾವದಿಂದ ನೊಂದಿದ್ದ ಮಹರ್ ಜನರು ಈ ಗೆಲುವನ್ನು ಮೇಲ್ಜಾತಿಯವರ ಮೇಲಿನ ಕೆಳಜಾತಿಯವರ ಗೆಲುವೆಂದೆ ಪರಿಗಣಿಸಿದರು. ಈ ಯುದ್ಧದಲ್ಲಿ ಈಸ್ಟ್ ಇಂಡಿಯಾ‌ ಕಂಪನಿ ಸೈನ್ಯದ 50 ಜನ ಪ್ರಾಣತೆತ್ತರು. ಅದರಲ್ಲಿ  22 ಜನ ಮಹರ್ ಆಗಿದ್ದರು,  16 ಜನ ಮರಾಠಿಗರು,  8 ಜನ ರಜಪೂತರು,  ಇಬ್ಬರು ಮುಸ್ಲಲ್ಮಾನರು ಮತ್ತು…

Read More

1968 ರಿಂದ 2020ರವರೆಗೆ ಕಾರ್ಯನಿರತ ಪತ್ರಕರ್ತನಾಗಿ ಕಾರ್ಯನಿರ್ವಹಿಸಿ, ಪತ್ರಕರ್ತರ ವಿವಿಧ ಸಂಘಟನೆಗಳ ಅಧ್ಯಕ್ಷ,  ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಐ ಎಫ್ ಡಬ್ಲೂ ಜೆ ಕಾರ್ಯಕಾರಿ ಸಮಿತಿ ಸದಸ್ಯನಾಗಿ, ಕೆ ಯು ಡಬ್ಲ್ಯೂ ಜೆ ಯಿಂದ ಮ.ರಾಮಮೂರ್ತಿಪ್ರಶಸ್ತಿ ಹಾಗೂ  ಎಚ್.ಕೆ. ವೀರಣ್ಣ ಗೌಡ ಪ್ರಶಸ್ತಿ , ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರನಾಗಿರುವ ನಾನು ಕವಿ-  ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಪತ್ರಕರ್ತರ ಸಾಮಾಜಿಕ ಜವಾಬ್ದಾರಿಯನ್ನು ಕುರಿತು ಬರೆದಿರುವ ಅಭಿಪ್ರಾಯವನ್ನು ಅನುಮೋದಿಸುತ್ತೇನೆ. ಪತ್ರಕರ್ತರಷ್ಟೇ ಅಲ್ಲ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವರು ಪ್ರತಿಷ್ಠೆ ಮೆರಯುವ ಸಲುವಾಗಿ ಖೊಟ್ಟಿ ಡಾಕ್ಟರೇಟ್ ನೀಡಿ ಹಣ ಮಾಡುವ ದಂಧೆಗೆ ಇಳಿದಿರುವ ಖೊಟ್ಟಿ ವಿಶ್ವವಿದ್ಯಾ ಲಯಗಳಿಂದ ಹಣತೆತ್ತು ಖೊಟ್ಟಿ ಡಾಕ್ಟರೇಟ್ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ಅಕ್ರಮ ವ್ಯವಹಾರವನ್ನು ಬಯಲು ಮಾಡಿ ಆರೋಗ್ಯಕರ ಸಮಾಜವನ್ನು ಕಟ್ಟುವಾಗ ಹೊಣೆಗಾರಿಕೆ ಹೊಂದಿರುವ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ೪…

Read More

ಹೊಸ ಕನಸು… ಹೊಸ ಹುರುಪು… ಹೊಸ ಭರವಸೆ… ಹೊಸ ಗುರಿ… ಹೊಸ ಸಾಹಸ… ಹೀಗೆ ಹೊಸತನವನ್ನು ಹೊತ್ತು ತರುವ  ಹೊಸ ವರ್ಷ ಮತ್ತೆ ಬಂದಿದೆ. ಇದು 2021ಕ್ಕೆ ವಿದಾಯ ಹೇಳಿ 2022ನೇ ಇಸವಿಯನ್ನು ಹರುಷದಿಂದ ಸ್ವಾಗತಿಸುವ ಕ್ಷಣ. ಕಳೆದ ವರ್ಷದ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ, ಜೀವನದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಹೊಸ ಕನಸುಗಳೊಂದಿಗೆ ಸುಂದರ ಭವಿಷ್ಯದತ್ತ ಹೆಜ್ಜೆ ಇಡುವ ಕ್ಷಣ ಇದಾಗಿದೆ. ಹೊಸ ವರ್ಷ ಬರೀ ಕ್ಯಾಲೆಂಡರ್ ಬದಲಾಯಿಸುವ ಕ್ಷಣ  ಮಾತ್ರ ಅಲ್ಲ. ನಮ್ಮ ಬದುಕಿನ ಹೊಸ ಹೆಜ್ಜೆಯತ್ತ ಸಾಗುವ ಹೊತ್ತು ಕೂಡಾ ಹೌದು. ಮತ್ತೆ ನಮಗೆ ಅದೇ 365 ದಿನಗಳು ಸಿಗುತ್ತವೆ. ಈ ದಿನಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ. ಜತೆಗೆ, ಕಳೆದ ವರ್ಷದತ್ತ ಒಮ್ಮೆ ಹಿಂತಿರುಗಿ ನೋಡಿ ಅವಲೋಕನ ಮಾಡಿಕೊಳ್ಳುವುದು ಕೂಡಾ ಮುಖ್ಯ. ಈ ಸಿಂಹಾವಲೋಕನ ಕಳೆದ ವರ್ಷದ ನಮ್ಮ ತಪ್ಪುಗಳನ್ನು ಅರಿತುಕೊಳ್ಳಲು, ಆದ ತಪ್ಪನ್ನು ತಿದ್ದಿಕೊಳ್ಳಲು ಅಥವಾ ನಾವು ಭವಿಷ್ಯದಲ್ಲಿ…

Read More

ತುಮಕೂರು:  ಹೊಸ ವರ್ಷದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಭ್ರಮ ಸಡಗರ ಮನೆ ಮಾಡಿದೆ. ಹೊಸ ವರ್ಷ ಪ್ರಯುಕ್ತ ದೇವಸ್ಥಾನಗಳಲ್ಲಿ ಭಕ್ತರ ದಂಡು ಕಂಡು ಬಂತು. ತುಮಕೂರು ತಾಲೂಕಿನ ಹನುಮಂತಪುರ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಆಂಜನೇಯಸ್ವಾಮಿಗೆ ವಿಳ್ಯದೇಲೆ ಅಲಂಕಾರ ಮಾಡಿ, ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು. ಹೊಸ ವರ್ಷಾಚರಣೆ ಎಂದರೆ, ಕೇಕ್ ಇದ್ದೆ ಇರುತ್ತೆ ಹಾಗಾಗಿ ಈ ಬಾರಿ ಭಕ್ತರಿಗೆ ಹೊಸ ವರ್ಷದ ಪ್ರಯುಕ್ತ ಪ್ರಸಾದ ರೂಪದಲ್ಲಿ  ಮೊಟ್ಟೆ ರಹಿತ ಕೇಕ್ ನ್ನು ದೇವಸ್ಥಾನದ ಆಡಳಿತ ಮಂಡಳಿ ವಿತರಿಸಿದ್ದು, ವಿಶೇಷವಾಗಿತ್ತು. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಹೊಸ ವರ್ಷದ ಹೊಸ್ತಿಲಿನಲ್ಲಿರುವ ನಮಗೆ ಹಳೆಯ ವರ್ಷದ ಹಾಗು ಹೋಗುಗಳ ನೆನಪು ಯಾವಾಗಲೂ ಇರಬೇಕಾಗುತ್ತದೆ. ವಿಜಯಪುರ ಜಿಲ್ಲೆಗೆ 2021 ಖುಷಿಗಿಂತ ಕಹಿಯೇ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಮಹಾಮಾರಿ ಕೊರೊನಾ, ಅಕಾಲಿಕ ಮಳೆ, ಪ್ರಕೃತಿ ಸೇರಿದಂತೆ ಹತ್ತು ಹಲವಾರು ಸಂಕಷ್ಟಗಳು ಜಿಲ್ಲೆಗೆ ಎದುರಾದವು.‌ ಮೊದಲು ಅರ್ಧ ವರ್ಷ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಸಾಕಷ್ಟು ಜೀವಗಳ ದೇಹ ತ್ಯಾಗ ಮಾಡಿದವು.‌ ಆಕ್ಸಿಜನ್ ಇಲ್ಲದೇ ಎಷ್ಟೋ ಜೀವ ಪ್ರಾಣ ತ್ಯಾಗ ಮಾಡಿದವು.‌ ಕೆಲ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಸಿಗದೇ ಸಾಕಷ್ಟು ಜನ ಜೀವ ಕಳೆದುಕೊಳ್ಳಬೇಕಾಯಿತು. ಭೂಕಂಪನ ಭಯ: ವರ್ಷದ ಕಡೆಯ ಮೂರು ತಿಂಗಳು ಜಿಲ್ಲೆಯ ಮನಗೂಳಿ, ಕೊಲ್ಹಾರ್ , ಮುಳವಾಡ ಗ್ರಾಮಗಳಲ್ಲಿ ಭೂಕಂಪನದ ಅನುಭವ ಆಯಿತು.‌ ಸೆಪ್ಟೆಂಬರ್ ದಿಂದ ಅಕ್ಟೋಬರ್ ತಿಂಗಳವರೆಗೆ 14ಬಾರಿ ಭೂಮಿ ಕಂಪಿಸಿತ್ತು.‌ನಂತರ ತಜ್ಞರ ತಂಡ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಕಾಲಿಕ ಮಳೆ: ಸೆಪ್ಟೆಂಬರ್ ಮೊದಲು ವಾರದಲ್ಲಿ ಸುರಿದ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣ ಬೆಳೆ ಹಾನಿಗೊಳಗಾಯಿತು. 12.56…

Read More

ತುಮಕೂರು:  ನಗರದ ಅಂತರಸನಹಳ್ಳಿ ಮಾರುಕಟ್ಟೆ ಬಳಿ ಶುಕ್ರವಾರ ಸಂಜೆ ಕಾರ್ ಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೆ ಕಾರ್ ಚಾಲಕರು ಮತ್ತು ಪ್ರಯಾಣಿಕರು ಪಾರಾದ ಘಟನೆ ನಡೆದಿದೆ. ಅಂತರಸನಹಳ್ಳಿ ಎಪಿಎಂಸಿ ಮಾರುಕಟ್ಟೆಯ ಬಳಿ ಸ್ಕಾರ್ಪಿಯೋ ವಾಹನದ ಚಾಲಕ ಅಜಾಗರೂಕತೆಯ ಚಾಲನೆಯಿಂದಾಗಿ ಮುಂದೆ ಚಲಿಸುತ್ತಿದ್ದ ಬುಲೆರೋ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು,  ಪರಿಣಾಮ ಬುಲೆರೋ ವಾಹನ , ಅದರ ಮುಂದೆ ಚಲಿಸುತ್ತಿದ್ದ  ಇನ್ನೂ ನೊಂದಣಿಯಾಗದ ಹೊಸ ಮಾರುತಿ ಬಲೆನೊ ಕಾರ್ ಡಿಕ್ಕಿ ಹೊಡೆದಿದೆ. ಅಪಘಾತ ನಡೆದ ಕೂಡಲೇ ಸಾರ್ವಜನಿಕರು ಧಾವಿಸಿ ವಾಹನಗಳನ್ನು ರಸ್ತೆ ಬದಿಗೆ ತಂದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇನ್ನು ಅಪಘಾತದಲ್ಲಿ ಸ್ಕಾರ್ಪಿಯೋ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ರೇಡಿಯೇಟರ್ ಮತ್ತು ಎಂಜಿನ್ ಸಂಪೂರ್ಣ ಹಾಳಾಗಿದೆ, ಹಾಗೆಯೇ ಬುಲೆರೋ ಹಾಗೂ ಮಾರುತಿ ಬಲೆನೊ ಕಾರ್ ನ ಬಲಭಾಗ ಸಂಪೂರ್ಣ ಜಖಂಗೊಂಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…

Read More

ತುರುವೇಕೆರೆ: ತಾಲ್ಲೂಕಿನ ಪಟ್ಟಣಕ್ಕೆ ಆಗಮಿಸಿದ್ದ ಶ್ರೀ ವಾಲ್ಮೀಕಿ ನಾಯಕ ಸಮಾಜದ ಸ್ವಾಮೀಗಳಾದ ಶ್ರೀ ಪ್ರಸನ್ನಾನಂದ ಸ್ವಾಮಿಯವರು 2022 ರ ಕ್ಯಾಲೆಂಡರ್ ಅನ್ನು ಬಿಡುಗಡೆ ಗೊಳಿಸಿದ್ದರು. ಪಟ್ಟಣದ ಕನ್ನಡ ಭವನದಲ್ಲಿ ನಡೆದ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಪ್ರಸನ್ನಾನಂದ ಸ್ವಾಮಿಜಿಯವರು ಈ ಬಗ್ಗೆ ಮಾತನಾಡಿ ” ಕಳೆದೆರಡು ವರ್ಷಗಳಿಂದ ಜಗತ್ತನ್ನು ಬೆಚ್ಚಿ ಬೀಳಿಸಿರುವ ಕೊರೋನಾ ವೈರಸ್ ‘ನ ಭಯವನ್ನು ಬಿಟ್ಟು ಧೈರ್ಯದಿಂದ ಮತ್ತು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಿದರೆ ಮಾತ್ರ ಈ ಹೆಮ್ಮಾರಿಯನ್ನು ತಡೆಯಲು ಸಾಧ್ಯ ಎಂದು ಧೈರ್ಯ ತುಂಬಿ,  2021 ರ ಕಹಿಘಟನೆಗಳನ್ನು ಮರೆತು 2022ರ ವರ್ಷ ಇಡೀ ಮಾನವ ಜನಾಂಗಕ್ಕೆ ಶುಭವಾಗಲಿ ” ಎಂದು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ವಸಂತ್ ಕುಮಾರ್, ಕರಿಯಪ್ಪ, ಕಲ್ಪನಾ ಮುನಿರಾಜು, ಪಿ.ಪ್ರಕಾಶ್,  ಆನಂದರಾಜು,  ಸೋಮಶೇಖರಯ್ಯ,  ಶೀಲಾ ಶಿವಪ್ಪ ನಾಯಕ, ಟಿ.ಜಿ.ಶಿವಕುಮಾರ್,  ಗಂಗರಂಗಯ್ಯ,  ಶಂಕರಯ್ಯ,  ಕೃಷ್ಣಪ್ಪ,  ಶಿವಣ್ಣ, ಮಂಜುನಾಥ್ ಹಾಗೂ ಸಮಾಜದ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವರದಿ : ವೆಂಕಟೇಶ…

Read More

ಹಿರಿಯೂರು: ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ  ಹೊಸ ವರ್ಷದ ಪ್ರಯುಕ್ತವಾಗಿ ಗ್ರಾಮಸ್ಥರಿಗೆ  ಕ್ಯಾಲೆಂಡರ್ ಗಳನ್ನು ಹಂಚಲಾಗಿತ್ತು . ಹಿರಿಯೂರು ತಾಲ್ಲೂಕಿನ ಕಸಬಾ ಹೋಬಳಿಯ ಮಸ್ಕಲ್ ಗ್ರಾಮದಲ್ಲಿನ  ಮಸ್ಕಲ್ ಮಟ್ಟಿ ಹಾಗೂ ಮಸ್ಕಲ್ ಗ್ರಾಮದ ಲಂಬಾಣಿ ತಂಡದಲ್ಲಿ  ಹಿರಿಯೂರು ತಾಲ್ಲೂಕಿನ ಮಾಜಿ ಶಾಸಕರು ಹಾಗೂ ಸಚಿವರಾಗಿದ್ದಂತಹ ಡಿ ಸುಧಾಕರ್ ರವರ ನೀಡಿರುವ 2022 ರ ಹೊಸ ಕ್ಯಾಲೆಂಡರ್  ನ್ನು ಕಾರ್ಯಕರ್ತರು ಹಂಚಿದರು. ಈ ಸಂದರ್ಭದಲ್ಲಿ ಮಸ್ಕಲ್   ಗ್ರಾಮ ಪಂಚಾಯತಿ ಅಧ್ಯಕ್ಷರಾದಂತಹ  ಶ್ರೀನಿವಾಸ್ ಅವರು ಮತ್ತು ಉಪಾಧ್ಯಕ್ಷರಾದ ಅಶೋಕ್ ಅವರು ಹಾಗೂ ಇತರರು  ಉಪಸ್ಥಿತರಿದ್ದರು. ವರದಿ: ಮುರುಳಿಧರನ್ ಆರ್.  ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ವಾಹನಗಳ ಸಂಖ್ಯೆಯು ದಿನಕ್ಕಿಂತಲೂ ದಿನ ಹೆಚ್ವುತ್ತಿರುವ ಹಿನ್ನಲೆಯಲ್ಲಿ  ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಈ ಸಮಸ್ಯೆಯ ಅರಿವಿದ್ದರೂ ಅಧಿಕಾರಿಗಳು ಕಣ್ಣಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಿರಿಯೂರು ತಾಲ್ಲೂಕಿನ ಪ್ರಮುಖ ರಸ್ತೆಗಳಾದ ಎನ್ ಹೆಚ್ ೦4 , ನಿಂದ ಟಿ.ಬಿ. ಸರ್ಕಲ್ ವರೆಗೂ ಹಾಗೂ ಚರ್ಚ್ ರಸ್ತೆ , ಹುಳಿಯಾರ್ ರಸ್ತೆಗಳು , ಅರುಣ್ ಟೆಕ್ಸ್ ಟೈಲ್ ನಿಂದ ವಿ ವಿ ಪುರ ಹೋಗುವ ರಸ್ತೆಗಳಲ್ಲಿ ರಸ್ತೆಯ ಗುಂಡಿಗಳು ಪ್ರತಿದಿನ ಬೆಳಿಗ್ಗೆ ಕೆಲಸ , ಕಛೇರಿಗಳಿಗೆ ಹೋಗುವಂತಹ ಜನಸಾಮನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ. ಈ ರಸ್ತೆಯು ಹಿರಿಯೂರು ತಾಲ್ಲೂಕಿನ ಪ್ರಮುಖ ರಸ್ತೆಯಾಗಿದ್ದು, ಈ ರಸ್ತೆಯ ಮೂಲಕವೇ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದ್ದಾರೆ. ಹಿರಿಯೂರು ತಾಲ್ಲೂಕಿನ ಪ್ರಮುಖ ರಸ್ತೆಗಳು ,  ದುರಾಸ್ತಿಗೊಂಡು ಸುಮಾರು ವರ್ಷಗಳಾದರೂ ಸರ್ಕಾರ ಇದರ ಬಗ್ಗೆ ಸ್ವಲ್ಪವೂ ಸಹ ತಲೆಕೆಡಿಸಿಕೊಂಡಿಲ್ಲ.  ಇದರಿಂದಾಗಿ ಹಿರಿಯೂರು ತಾಲ್ಲೂಕಿನ ಸಾರ್ವಜನಿಕರು …

Read More