Author: admin

ಚಿಕ್ಕಮಗಳೂರಿನ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ವಿಶ್ವಕರ್ಮ ಆಚಾರ್ಯ ಅವರಿಗೆ ಕರ್ನಾಟಕ ಶಿಲ್ಪಕಲಾ ಅಕಾಡಮಿಯ 16 ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನದಲ್ಲಿ 2 ಅಡಿ ಎತ್ತರದ ಕಲ್ಲಿನ ನಾಟ್ಯಗಣಪತಿ ಕಲಾಕೃತಿಗೆ  ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ. ಚಿತ್ರಕಲೆ ಮತ್ತು ಶಿಲ್ಪಕಲೆಯ ಮುಖಾಂತರ ತಮ್ಮ ವಿಶಿಷ್ಟ ಸೇವೆಯ ಮುಖಾಂತರ ಕರ್ನಾಟಕ ಲಲಿತಕಲಾ ಅಕಾಡಮಿ ಪ್ರಶಸ್ತಿ ಲಭಿಸಿದ್ದ ಇವರಿಗೆ , ಈ ಬಾರಿಯ ಶಿಲ್ಪಕಲಾ ಕ್ಷೇತ್ರದ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಕನ್ನಡಭವನ ನಯನ ಸಭಂಗಣದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಿಲ್ಪಕಲಾ ಅಕಾಡಮಿಯ ಅಧ್ಯಕ್ಷರಾದ ವೀರಣ್ಣ ಅರ್ಕಾಸಾಲಿ ಹಾಗೂ ಪ್ರೊ.ನಿರಂಜನ್ ವಾನಳ್ಳಿ ಮಾನ್ಯ ಕುಲಪತಿಗಳು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ , ಹಿರಿಯ ಶಿಲ್ಪಿ ಎಂ ರಾಮಮೂರ್ತಿ, ರಿಜಿಸ್ಟ್ರಾರ್ ಆರ್ ಚಂದ್ರಶೇಖರ್ ರವರು  ಪ್ರಶಸ್ತಿ ಪ್ರದಾನ ಮಾಡಿದರು. ವರದಿ: ಆನಂದ್ ತಿಪಟೂರ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬ್ರೆಸಿಲಿಯಾ:  ಈಶಾನ್ಯ ಬ್ರೆಜಿಲ್‍ನ ಬಹಿಯಾ ರಾಜ್ಯದ ಒಟ್ಟು 116 ನಗರಗಳಲ್ಲಿ ನವೆಂಬರ್ ಅಂತ್ಯದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ತುರ್ತುಸ್ಥಿತಿ ತಲೆದೋರಿದೆ. 21 ಮಂದಿ ಅಸುನೀಗಿ 358 ಮಂದಿ ಗಾಯಗೊಂಡಿದ್ದಾರೆ. ಬ್ರೆಜಿಲ್‍ ನ ಇತರ ನಾಲ್ಕು ಉತ್ತರ ಮತ್ತು ಆಗ್ನೇಯ ರಾಜ್ಯಗಳಲ್ಲಿ ಸಹ ಇತ್ತೀಚಿನ ದಿನಗಳಲ್ಲಿ ಪ್ರವಾಹ ಉಂಟಾಗಿದೆ. ಬಹಿಯಾದಲ್ಲಿ ಪ್ರವಾಹದಿಂದ 4,70,000 ಜನರು ಸಂಕಷ್ಟಪೀಡಿತರಾಗಿದ್ದಾರೆ. ಕನಿಷ್ಟ ಪಕ್ಷ 50 ನಗರಗಳಲ್ಲಿ ಮನೆಗಳು ಹಾಗೂ ಅಂಗಡಿಗಳಿಗೆ ನೀರು ನುಗ್ಗಿ ಜನರು ತಮ್ಮ ವಸ್ತುಗಳನ್ನು ತೊರೆದು ಸುರಕ್ಷಿತ ಸ್ಥಳಗಳತ್ತ ದಾವಿಸುವಂತೆ ಮಾಡಿದೆ.ರಾಜ್ಯ ಸರ್ಕಾರದ ಅಧಿಕೃತ ಅಂಕಿ-ಅಂಶದ ಪ್ರಕಾರ, ಪ್ರವಾಹದಿಂದಾಗಿ 34,163 ಜನರು ನಿರ್ವಸತಿಗರಾಗಿದ್ದಾರೆ ಮತ್ತು ಬಹುತೇಕ 43,000 ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಇದು ಕಳೆದ 32 ವರ್ಷಗಳಲ್ಲಿ ಬ್ರೆಜಿಲ್‍ನ ಬಹಿಯಾದಲ್ಲಿ ಅತಿ ಹೆಚ್ಚು ಮಳೆ ಸುರಿದ ಅವಯಾಗಿದೆ. ಈ ವರ್ಷ ಇಲ್ಲಿ ವಾಡಿಕೆಗಿಂತ ಐದು ಪಟ್ಟು ಅಧಿಕ ಮಳೆಯಾಗಿದೆ ಎಂದು ತಿಳಿದುಬಂದಿದೆ. ವರದಿ:  ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ತುಮಕೂರು:  ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ  ಕಂದಾಯ ಇಲಾಖೆಯ ನೌಕರರ ಸಂಘದ  2022ರ ಹೊಸ ಕ್ಯಾಲೆಂಡರ್ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ್  ಆರ್.ಜಿ.ಚಂದ್ರಶೇಖರ್,   ಗ್ರೇಡ್ -2  ತಹಸೀಲ್ದಾರ್  ಜಗನ್ನಾಥ್ , ಕಂದಾಯ ಇಲಾಖೆಯ ನೌಕರರ ಅಧ್ಯಕ್ಷರಾದ ಸಿ .ವಿ ರವಿಕುಮಾರ್, ಉಪಾಧ್ಯಕ್ಷರಾದ ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಟಿ.ನಾಗಮಣಿ, ಖಜಾಂಚಿಗಳಾದ ಅಶೋಕ್,  ಜಂಟಿ ಕಾರ್ಯದರ್ಶಿ ಪುನೀತ್, ನಿರ್ದೇಶಕರಾದ ನೀಲಕಂಠೇಶ್ ಹಾಗೂ  ಕಂದಾಯ ಇಲಾಖೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತಿಪಟೂರು:  ನಗರದ   ದೊಡ್ಡಯ್ಯನಪಾಳ್ಯದ ಶ್ರೀ ಚೌಡೇಶ್ವರಿ ಪತ್ತಿನ ಸಹಕಾರ ಸಂಘ ನಿಯಮಿತದ 2021-2026 ರ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಎಸ್.ಸೋಮಶೇಖರ್,  ಉಪಾಧ್ಯಕ್ಷರಾಗಿ ಮಂಜುನಾಥ ಎಂ.ಸಿ., ನಿರ್ದೇಶಕರುಗಳಾಗಿ ರಾಜಶೇಖರ್ ಪಿ.ಎಸ್.,  ಶಂಕರಮೂರ್ತಿ ಹೆಚ್.ಎಸ್., ಸೋಮಶೇಖರಪ್ಪ ಎಂ.ಆರ್.,  ಶಶಿಕಿರಣ್ ಎಂ., ನಟರಾಜ್, ಶ್ರೀಮತಿ ಲಕ್ಷ್ಮಮ್ಮ,ಶ್ರೀಮತಿ ಗಿರಿಜಾ,ಗಿರೀಶ್ ಕುಮಾರ್. ಎಸ್,ರೇಣುಕಮೂರ್ತಿ.ಬಿ, ಕಾಂತರಾಜ್.ಆರ್, ಮತ್ತು ಸಂಜೀವಯ್ಯ.ಎಸ್ ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷರಾದ ಎಸ್. ಸೋಮಶೇಖರ್, ಉಪಾಧ್ಯಕ್ಷ ಮಂಜುನಾಥ್ ಮತ್ತು ರಿಟರ್ನಿಂಗ್ ಅಧಿಕಾರಿ ವಿ.ಎಸ್. ಗುರುರಾಜ್ ಮಾತನಾಡಿದರು. ಆಡಳಿತಾಧಿಕಾರಿ ಶ್ರೀಮತಿ ಬಬಿತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೃತ್ಯುಂಜಯ ಮತ್ತು ಸಿಬ್ಬಂದಿ ಕುಮಾರಸ್ವಾಮಿ ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ವರದಿ: ಆನಂದ್ ತಿಪಟೂರ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಯಾದಗಿರಿ: ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಕ್ಕೇರಾ ಪುರಸಭೆಗೆ ನಡೆದ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, 23 ಸ್ಥಾನಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿಗಳು 17 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದು ಅಧಿಕಾರ ಗದ್ದುಗೆ ಹಿಡಿದಿದೆ. ಬಿಜೆಪಿ ಅಭ್ಯರ್ಥಿಗಳು ಕೇವಲ 6 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ, ಇದರಿಂದ ಹಾಲಿ ಬಿಜೆಪಿ ಶಾಸಕ ರಾಜುಗೌಡ ಅವರಿಗೆ  ಮುಖಭಂಗವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತಿಪಟೂರು: ಸರ್ಕಾರ ಈ ಕೂಡಲೇ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಬೇಕೆಂದು ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಮಾಜ ಸೇವಕ ಕೆ ಟಿ ಶಾಂತಕುಮಾರ್ ಒತ್ತಾಯಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಥಮ ದರ್ಜೆ ಕಾಲೇಜಿನಲ್ಲಿ 160ಕ್ಕೂ ಹೆಚ್ಚು ಉಪನ್ಯಾಸಕರಿದ್ದು, ಅವರಿಗೆ ಸರಿಯಾದ ರೀತಿಯಲ್ಲಿ ಸಂಬಳ ಸಿಗದ ಕಾರಣ ವಿದ್ಯಾರ್ಥಿಗಳಿಗೆ ಪಾಠ ನಡೆದಂತೆ ಆಗಿದ್ದು,  ಇದರಿಂದ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದೆ.  ಸುಮಾರು 3,600 ಹೆಚ್ಚಿನ ಮಕ್ಕಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುತ್ತಾರೆ. ಆದರೆ ಕಳೆದ 20ದಿನಗಳಿಂದ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸಿದೆ ಇರುವುದರಿಂದ ವಿದ್ಯಾರ್ಥಿಗಳಿಗಂತೂ ಸಾಕಷ್ಟು ತೊಂದರೆ ಆಗುತ್ತಿದೆ  ಎಂದರು. ಸರಕಾರ ಅತಿಥಿ ಉಪನ್ಯಾಸಕರನ್ನು ಸೇವಾ ಭದ್ರತೆ ಮತ್ತು ಸರಕಾರಿ ನೌಕರನಾಗಿ ಪರಿಗಣಿಸಬೇಕು. ಕಳೆದ 20 ವರ್ಷಗಳಿಂದ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಆದರೆ ಸರ್ಕಾರ ಸರಿಯಾದ ಸಂಬಳ ಮತ್ತು ಕಾಯಂ ಮಾಡದೇ ಇರುವುದರಿಂದ ಅತಿಥಿ ಉಪನ್ಯಾಸಕರಿಗೆ ಜೀವನ…

Read More

ಸಾಕ್ರಮೆಂಟೋ:  ಓಮಿಕ್ರಾನ್ ಭೀತಿ ನಡುವೆ ಕ್ಯಾಲಿಫೋರ್ನಿಯಾದಲ್ಲಿ ಕೋವಿಡ್ ಪ್ರಕರಣಗಳು 50 ಲಕ್ಷಕ್ಕೆ ಏರಿಕೆಯಾಗಿದ್ದು, ಈ ಮಟ್ಟದ ಪ್ರಕರಣಗಳನ್ನು ತಲುಪಿದ ಅಮೆರಿಕದ ಪ್ರಥಮ ರಾಜ್ಯವಾಗಿದೆ. 2020ರ ಜನವರಿ 25ರಂದು ಕ್ಯಾಲಿಫೋರ್ನಿಯಾದಲ್ಲಿ ಪ್ರಥಮ ಕೊರೊನಾ ವೈರಸ್ ಪ್ರಕರಣ ದೃಢಪಟ್ಟಿತ್ತು. ಆ ವರ್ಷದ ನವೆಂಬರ್ 11 ರಂದು ಅಂದರೆ 292 ದಿನಗಳ ಬಳಿಕ ಒಂದು ದಶಲಕ್ಷ ಸೋಂಕು ಪ್ರಕರಣಗಳು ಏರಿಕೆಯಾಗಿತ್ತು. 44 ದಿನಗಳ ಬಳಿಕ 2 ದಶಲಕ್ಷಕ್ಕೆ ಕೊರೊನಾ ಸೋಂಕು ಏರಿತು. ಕ್ಯಾಲಿಫೋರ್ನಿಯಾದ ಕೇಸ್‍ಲೋಡ್ ಕೂಡ ಇತರ ದೊಡ್ಡ ರಾಜ್ಯಗಳಿಗಿಂತ ಅಧಿಕವಾಗಿದೆ.ಟೆಕ್ಸಾಸ್‍ನಲ್ಲಿ 4.4 ದಶಲಕ್ಷ ಅಧಿಕ ಕೊರೊನಾ ಪ್ರಕರಣಗಳಿದ್ದರೆ ಭಾನುವಾರ ಫಾರಿಡಾದಲ್ಲಿ ಸೋಂಕಿನ ಪ್ರಕರಣಗಳು 3.09 ದಶಲಕ್ಷಕ್ಕೇರಿತ್ತು. ಅಮೆರಿಕಾದಲ್ಲಿ ಕೋವಿಡ್ ಪ್ರಕರಣಗಳ ಭಾರಿ ಹೆಚ್ಚಳದಿಂದಾಗಿ ಪರೀಕ್ಷೆ ಮಾಡಿಸಿಕೊಳ್ಳಲು ಮತ್ತು ಚಿಕಿತ್ಸೆ ಪಡೆಯಲು ಹಾಹಾಕಾರ ಉಂಟಾಗಿದೆ.3ನೇ ಅಲೆಗೆ ಅಮೆರಿಕ ತತ್ತರಿಸಿದೆ. ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದ ಕೋವಿಡ್ ನಿಯಂತ್ರಣ ಮತ್ತು ನಿವಾರಣೆ ಸರ್ಕಾರಕ್ಕೆ ಭಾರೀ ತಲೆನೋವಾಗಿ ಪರಿಣಮಿಸಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More

ಸಿರಾ: ಸಿರಾ ನಗರ ಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು,  ಕಾಂಗ್ರೆಸ್ 11 ಸ್ಥಾನಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಒಟ್ಟು 30 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, ಇದೀಗ ಫಲಿತಾಂಶ ಪ್ರಕಟಗೊಂಡಿದೆ. ಫಲಿತಾಂಶ ಹೀಗಿದೆ: ಕಾಂಗ್ರೆಸ್: 11 ಸ್ಥಾನದಲ್ಲಿ ಗೆಲುವು ಜೆಡಿಎಸ್: 07 ಸ್ಥಾನದಲ್ಲಿ ಗೆಲುವು ಬಿಜೆಪಿ: 4 ಸ್ಥಾನದಲ್ಲಿ ಗೆಲುವು ಇತರೇ: 8 ಸ್ಥಾನಗಳಲ್ಲಿ ಗೆಲುವು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮಧುಗಿರಿ: ತಾಲೂಕಿನ ಕಸಬಾ ಕೆರೆಗಳ ಪಾಳ್ಯ ರಸ್ತೆಯಲ್ಲಿರುವ ಮುನೇಶ್ವರ ಸ್ವಾಮಿ ದೇವಸ್ಥಾನದಲ್ಲಿ  ಐ.ಎಸ್.ಐ.  ಮಾರ್ಕ್ ಇಲ್ಲದೆ ಬಿಸ್ಲೇರಿ ನೀರನ್ನು ತಯಾರಿಸುತ್ತಾರೆ ಎಂದು ದೂರಿನ ಆಧಾರದ ಮೇಲೆ  ತಹಸಿಲ್ದಾರ್  ಹಾಗೂ ಆಹಾರ ಶಿರಸ್ತೆದರ್ ಮತ್ತು ಅಧಿಕಾರಿಗಳು ದಾಳಿ ನಡೆಸಿದರು. ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಅರುಂಧತಿ ಕೆ. ಮಾತನಾಡಿ, ಬಿಸ್ಲೇರಿ ಅಂತ ಹೆಸರು ಹಾಕಿಕೊಂಡು ಐ.ಎಸ್.ಐ. ಮಾರ್ಕ್ ಇಲ್ಲದೆ,   ನೀರನ್ನು ತಯಾರಿಸುತ್ತಿದ್ದಾರೆ ಎಂದು ದೂರು ಬಂತು,  ಅದರ ಆಧಾರದ ಮೇಲೆ ನಾವು ಮತ್ತು ಆಹಾರ ಶಿರಸ್ತೇದಾರ್ ಹಾಗೂ ಅಧಿಕಾರಿಗಳು ಬಂದು ತಪಾಸಣೆ ಮಾಡಿದ್ದೇವೆ ಎಂದರು. ತಪಾಸಣೆ ವೇಳೆ ನಮಗೆ ಯಾರು ಕಂಡುಬಂದಿಲ್ಲ.  ಈ ಜಾಗದ ಮಾಲೀಕರನ್ನು ವಿಚಾರಿಸಿದಾಗ, ನಾವು ಐಎಸ್ ಐ ಮಾರ್ಕ್ ಗೆ ಅಪ್ಲೈ ಮಾಡಿದ್ದೇವೆ ಎಂದು ಹೇಳಿದ್ದಾರೆ. ನಮಗೆ ಬಾಟಲಿಗಳು ಸಿಕ್ಕಿವೆ, ಲೇಬಲ್ ಗಳು ಸಿಕ್ಕಿಲ್ಲ, ದೂರಿನ ಆಧಾರದ ಮೇಲೆ ದಾಖಲಾತಿಗಳು ಕೊಡಿ ಎಂದು ನೋಟಿಸ್ ಕೊಟ್ಟಿದ್ದೇವೆ, ದಾಖಲಾತಿಗಳು ತರಿಸಿಕೊಂಡು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.…

Read More

ಸರಗೂರು: ಅಂಗವಿಕಲತೆ ಎಂಬುದು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂದು ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್  ಬಿ. ನಂದ್‌ಕುಮಾರ್ ಅವರು ಹೇಳಿದರು. ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಹಾಗೂ ಸಮುದಾಯದ ಸಂಘ-ಸಂಸ್ಥೆಗಳ ಸಹಭಾಗಿತ್ವದೊಂದಿಗೆ ವಿಶೇಷ ಚೇತನ ವ್ಯಕ್ತಿಗಳ ನಾಯಕತ್ವ ಮತ್ತು ಭಾಗವಹಿಸುವಿಕೆ ಎಂಬ ಘೋಷ ವಾಕ್ಯದೊಂದಿಗೆ ಅಂತರರಾಷ್ಟ್ರೀಯ ವಿಶೇಷಚೇತನರ ದಿನಾಚರಣೆಯನ್ನು ಆಚರಿಸಲಾಯಿತು. ಬಳಿಕ ಮಾತನಾಡಿದ ಅಂತರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಬಿ.ಆನಂದ್‌ಕುಮಾರ್ ಅವರು,  ಅಂಗವಿಕಲತೆ ಎಂಬುದು ಕೇವಲ ಶಾಪವಲ್ಲ, ಅದೊಂದು ದೇವರ ವರ.  ಅಂಗವಿಕಲತೆ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟು ಸಮಾಜದಲ್ಲಿ ಗುರುತಿಸಿಕೊಳ್ಳುವಂತಹ ಕೆಲಸಗಳನ್ನು ಮಾಡಬೇಕು ಎಂದರು. ಗ್ರಾಮೀಣ ಮಟ್ಟದಲ್ಲಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವಂತಹ ಅಂಗವಿಕಲ ಯುವಕರುಗಳಿಗೆ, ಮುಂದಿನ ದಿನಗಳಲ್ಲಿ ಕ್ರೀಡಾ ತರಬೇತಿಯನ್ನು ನೀಡಲಾಗುವುದು. ಹಾಗೂ ಯಾವುದೇ ಕಾರಣಕ್ಕೂ ಗುರಿ ತಲುಪುವ ವರೆಗೂ ಯುವಕರು ಕುಗ್ಗ ಬೇಡಿ, ಎಂದು ಧೈರ್ಯ ತುಂಬಿದರು. ನಂತರ ವಡುವಲು ವಿರಕ್ತ ಮಠದ ಮಠಾಧ್ಯಕ್ಷರಾದ ಶ್ರೀ ಶ್ರೀ ಮಹಾದೇವಸ್ವಾಮಿಗಳು ಮಾತನಾಡಿ, ವಿಶೇಷಚೇತನರಿಗೆ…

Read More