Author: admin

ಮುಳಬಾಗಿಲು:  ಮಹಿಳೆಯರ ಸರ ಕದ್ದು ಪರಾರಿಯಾಗುತ್ತಿದ್ದ ಬೆಸ್ಕಾಂ ಸಿಬ್ಬಂದಿಯನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಆಂಧ್ರದಲ್ಲಿ ನಡೆದಿದೆ. ತಾಲ್ಲೂಕಿನ ಬೈರಪೂರದ ಬಾಳಸಂದ್ರ ಬಿ.ಕೆ.ಲೋಕೇಶ್(27) ಬಂಧಿತ ವ್ಯಕ್ತಿಯಾಗಿದ್ದಾನೆ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪೆದ್ದಪಂಜಾಬಿ ಗ್ರಾಮದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಲೋಕೇಶ್ ಹಾಗೂ ಈತನ ಸ್ನೇಹಿತ ಕಿಶೋರ್ ಹಲ್ಲೆ ಮಾಡಿ ಸರ ಕಸಿದು ಪರಾರಿಯಾಗಿದ್ದಾರೆ. ಈ ವೇಳೆ ಮಹಿಳೆ ಕಿರುಚಿಕೊಂಡಿದ್ದು, ಅಕ್ಕಪಕ್ಕದವರು ಸ್ಥಳಕ್ಕೆ ಬಂದು ಸುತ್ತುವರಿದು ಇಬ್ಬರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೆದ್ದಪಂಜಾಬಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇದಲ್ಲದೆ ವಿದ್ಯುತ್ ಪರಿವರ್ತಕಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ತನಿಖೆ ಮುಂದುವರೆದಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತಿಪಟೂರು: ಸಾರ್ವಜನಿಕ ಆಸ್ಪತ್ರೆ ತಿಪಟೂರು ANZ ಪ್ರವೇಟ್ ಲಿಮಿಟೆಡ್ ಮತ್ತು UNITED WAY OF BANGALORU  ಸ್ವಯಂ ಸೇವಾಸಂಸ್ಥೆಗಳ ನೆರವಿನೊಂದಿಗೆ ಅನುಷ್ಟಾನ ಗೊಂಡಿರುವ ಆಕ್ಸಿಜನ್ ಜನರೇಟರ್ 500 LPM ಹಾಗೂ ಎರಡು ಡಯಾಲಿಸಿಸ್ ಮಿಷನ್ ಗಳನ್ನು  ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಮತ್ತು ಸಕಾಲ ಸಚಿವಾರಾದ ಬಿ.ಸಿ.ನಾಗೇಶ್ ಉದ್ಘಾಟನೆ ಮಾಡಿದರು. ಇದೇ ವೇಳೆ ಸಾರ್ವಜನಿಕ ಆಸ್ಪತ್ರೆ ತಿಪಟೂರು ಇವರ ವತಿಯಿಂದ  ANZ ಪ್ರವೇಟ್ ಲಿಮಿಟೆಡ್ ಮತ್ತು UNITED WAY OF BENGALURU ಇವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ರವಿಕುಮಾರ್ ಸ್ವಾಗತಿಸಿದರು ಮತ್ತು ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿಗಳಾದ ಡಾ.ಪ್ರಹ್ಲಾದ್ ಅಭಿನಂದನಾ ಮಾತುಗಳನ್ನಾಡಿದರು. ತಾಲ್ಲೂಕಿನ ಕೋವಿಡ್ 19 ರೋಗಿಗಳಿಗೆ ಪ್ರಾಣವಾಯು ಪೂರೈಕೆಗೆ ನೆರವಾಗಿರುವ ಹಾಗೂ ಬಡ ರೋಗಿಗಳಿಗೆ ಡಯಾಲಿಸಿಸ್  ಸೇವಾ ಸೌಲಭ್ಯವನ್ನು  ನೀಡಲು ನೆರವಾಗಿರುವಂತಹ  ANZ ಪ್ರವೇಟ್ ಲಿಮಿಟೆಡ್  ಹಾಗೂ UNITED WAY OF BANGALORU ಸ್ವಾಯತ್ತ ಸಂಸ್ಥೆಗಳಿಗೆ ನಾವು ಅಭಾರಿಯಾಗಿದ್ದೇವೆ. ಸ್ವಯಂ ಸೇವಾ ಸಂಸ್ಥೆಯ ಅಧಿಕಾರಿಗಳು ತಿಪಟೂರು ತಾಲ್ಲೂಕಿನ ಬಡರೋಗಿಗಳಿಗೆ…

Read More

ಚಿತ್ರದುರ್ಗ: ಬಾಲಕಿಯನ್ನು ಚುಡಾಯಿಸಿ ಆತ್ಮಹತ್ಯೆಗೆ ಪ್ರೇರೇಪಣೆ ನೀಡಿದ ಪ್ರರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಹೊಸದುರ್ಗ ಡಿವೈಎಸ್ ರೋಷನ್ ಜಮೀರ್ ಹಾಗೂ ಸಿಪಿಐ ಫೈಜುಲ್ಲಾ ನೇತೃತ್ವದ ಪೊಲೀಸರ ಬಂದ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸುದೀಪ,(19) ಕೋಟಿ ಅಲಿಯಾಸ್ ಕೋಟೇಶ  (19)ಮುತ್ತು ಅಲಿಯಾಸ್ ಮುತ್ತುರಾಜ್, (21) ಅಭಿ ಅಲಿಯಾಸ್ ಅಭಿಷೇಕ್ (22) ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳು ಪ್ರಥಮ ಪಿಯುಸಿಯ ವಿದ್ಯಾರ್ಥಿನಿ ಕಾಲೇಜಿಗೆ ಹೋಗುತ್ತಿದ್ದ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿದೆ. ಆರೋಪಿಗಳ ಕಿರುಕುಳದಿಂದ ನೊಂದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದು, ಈ ವೇಳೆ ಬಾಲಕಿಯ ತಂದೆ, ತನ್ನ ಮಗಳ ಸಾವಿಗೆ ಪುಂಡರು ಕಾರಣವಾಗಿದ್ದು, ಅವರ ಕಿರುಕುಳದಿಂದ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದರು. ಘಟನೆ ಸಂಬಂಧ ಹೊಸ ದುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನೂ ಆರೋಪಿಗಳನ್ನು ಕ್ಷಿಪ್ರವಾಗಿ ಬಂಧಿಸಿದ ಪೊಲೀಸ್ ಅಧಿಕಾರಿಗಳ ಕಾರ್ಯವನ್ನು  ಜಿಲ್ಲಾ ಪೊಲೀಸ್…

Read More

ಪೀಣ್ಯ: ಪೀಣ್ಯ ಮೇಲ್ಸೇತುವೆಯಲ್ಲಿ ಡಿಸೆಂಬರ್ 25ರಿಂದ 31ವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತುರ್ತು ದುರಸ್ತಿ ಕಾರ್ಯ ಕೈಗೊಂಡಿರುವುದರಿಂದ, ಎಲ್ಲಾ ಬಗೆಯ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ. ತುಮಕೂರು-ಬೆಂಗಳೂರು ಕಡೆಗೆ ಪ್ರಯಾಣಿಸುವವರಿಗೆ ಬದಲಿ ಮಾರ್ಗಗಳನ್ನು ಸೂಚಿಸಲಾಗಿದ್ದು, ಡಿಸೆಂಬರ್ 31ರವರೆಗೆ ಮೇಲ್ಸೇತುವೆ ಬಳಸದೇ ಸಹಕರಿಸುವಂತೆ ಮನವಿ ಮಾಡಲಾಗಿದೆ. ಬದಲಿ ಮಾರ್ಗಗಳು: ತುಮಕೂರು ಕಡೆಯಿಂದ ಬೆಂಗಳೂರು ನಗರದೊಳಗೆ ಪ್ರವೇಶಿಸುವ ವಾಹನಗಳು  ಮಾದಾವರದ ಬಳಿ ಬಲ ತಿರುವು ಪಡೆದು ನೈಸ್ ರಸ್ತೆಯ ಮೂಲಕ ಬೆಂಗಳೂರು ನಗರದೊಳಗೆ ಪ್ರವೇಶಿಸಬಹುದಾಗಿದೆ. ಬೆಂಗಳೂರು ನಗರದ ಕಡೆಯಿಂದ ತುಮಕೂರು ರಸ್ತೆಯ ಮುಖಾಂತರ ಹೊರ ಹೋಗುವ ವಾಹನಗಳು ಗೊರಗುಂಟೆಪಾಳ್ಯದ ಸಿಎಂಟಿಐ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು ರಿಂಗ್ ರಸ್ತೆ ಮುಖಾಂತರ ಸುಮನಹಳ್ಳಿ, ಮಾಗಡಿ ರಸ್ತೆ ಕಡೆಗೆ ಸಂಚರಿಸಿ ನೈಸ್ ರಸ್ತೆ ಪ್ರವೇಶಿಸಿ ಬೆಂಗಳೂರಿನಿಂದ ಹೊರಗೆ ಸಂಚರಿಸಬಹುದಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಾಂಗ್ರೆಸ್ ಕಚೇರಿಯಲ್ಲಿ ಇಂದು 136ನೇ ಕಾಂಗ್ರೆಸ್ ಸ್ಥಾಪನಾ ದಿನಾಚರಣೆಯನ್ನು ನಡೆಸಲಾಯಿತು. ಹಿರಿಯೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಕೆಪಿಸಿಸಿ ಸದಸ್ಯರಾದ ಅಮೃತ ಸ್ವಾಮಿ, ನಗರಸಭೆ ಅಧ್ಯಕ್ಷೆ ಶಂಶದ್ ಉನ್ನಿಸಾ, ಶಿವಕುಮಾರ್, ಚನ್ನಯ್ಯ, ತಿಪ್ಪೇಸ್ವಾಮಿ, ನವೀನ, ರಾಜೇಶ್, ಚಿಲ್ಲಹಳ್ಳಿ ಶರಣಪ್ಪ, ದಾದಾಪೀರ್, ಸೈಫುಲ್ಲಾ, ಲಕ್ಷ್ಮಿಕಾಂತ್, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೇಡತ್ತೂರು: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಗಳ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಹಣದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಒಂಬುಡ್ಸ್ ಮೇನ್(ಭ್ರಷ್ಟಾಚಾರ ಪ್ರಕರಣಗಳ ಮೇಲ್ವಿಚಾರಕ) ಕಾಟಾಚಾರಕ್ಕೆ ಸ್ಥಳ ತನಿಖೆ ನಡೆಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರು ಜಿಲ್ಲಾ ಪಂಚಾಯಿತಿ ವತಿಯಿಂದ ವೆಂಕಟೇಶ್ ರಾವ್ ನೇತೃತ್ವದ ತಂಡ ತನಿಖೆಗಾಗಿ ಆಗಮಿಸಿದ್ದು, ಗ್ರಾಮ ಪಂಚಾಯಿತಿ ಸಂತೋಷ್ ಸಿಂಗ್  PDO, ರವರ ಮೇಲೆ ಒಂಬುಡ್ಸ್ಮನ್ ತಂಡದವರು ನಾವುಗಳು ನರೇಗ ಪರಿಶೀಲನೆಗೆ ಬಂದಾಗ ಸಕ್ರಮವಾಗಿ ಮೂಲ ದಾಖಲಾತಿಗಳು ಫೈಲ್ ಒದಗಿಸಬೇಕೆಂದು ಆದೇಶಿಸಿದರು. ತುಮಕೂರು ಜಿಲ್ಲಾ ಪಂಚಾಯಿತಿ ನರೇಗ ಯೋಜನೆಗೆ ಬೇಡತ್ತೂರು ಗ್ರಾಮ ಪಂಚಾಯತಿಯಲ್ಲಿ ವಾಸವಾಗಿರುವ ರಾಮಚಂದ್ರಪ್ಪ S/o ಸಣ್ಣಪ್ಪ ರವರು 2021ರ ಅಕ್ಟೋಬರ್ ನಲ್ಲಿ ಇವರು ಬೇಡತ್ತೂರು ಗ್ರಾಮ ಪಂಚಾಯತಿಯಲ್ಲಿ ಅಕ್ರಮ ಕಾಮಗಾರಿಗಳು ಎಂದು ಆರೋಪದ ದೂರು ಮನವಿ  ಸಲ್ಲಿಸಿದರು. ಈ ಮನವಿ ಆಧಾರದ ಮೇಲೆ ಡಿಸೆಂಬರ್ 27 ರಂದು ಸ್ಥಳ ಪರಿಶೀಲನೆ ಮಾಡಿದ ನಂತರ ಇವರ ಮನವಿಯ ಮೇಲೆ ಒತ್ತಡ ಬಂದಿರುವ ಕಾರಣವೂ,ಅಥವಾ ಇವರ ವೈಯಕ್ತಿಕ ಕಾರಣವೂ…

Read More

ತಿಪಟೂರು: ಕಾಂಗ್ರೆಸ್ ಪಕ್ಷವು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನವು ಸಂಸತ್ ನಲ್ಲಿ ದಾಖಲಾಗಿದೆ ಭಾರತ ರತ್ನ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಸಂವಿಧಾನವನ್ನು ರಚನೆ ಮಾಡುವ ಯೋಗ್ಯತೆ ಇಲ್ಲ ಎಂದು ಹೀಯಾಳಿಸಿದ ಕಾಂಗ್ರೆಸ್ ಪಕ್ಷವು, ದಲಿತರ ಮತ್ತು ಹಿಂದುಳಿದ ಪರವಾಗಿ ಮಾತನಾಡುವ ನೈತಿಕತೆ ಕಳೆದುಕೊಂಡಿದೆ ಎಂದು ಕೇಂದ್ರ ಸಾಮಾಜಿಕ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವರಾದ ಎ.ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು. ನಗರದ ಅಗ್ನಿಶಾಮಕ ಠಾಣೆ ಎದುರು ಆಯೋಜಿಸಲಾಗಿದ್ದ ವಿವಿಧ ಕಾಮಗಾರಿಗಳನ್ನು ಉದ್ಘಾಟನೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ರವರು ಸಂಸತ್ತನ್ನು ಪ್ರವೇಶಿಸಬಾರದೆಂದು ಕಾಂಗ್ರೆಸ್ ಪಕ್ಷವು ಹಲವಾರು ತಂತ್ರಗಳನ್ನು ಹೆಣೆದು ಸಂಸತ್ತಿನಿಂದ ದೂರವಿಟ್ಟರು. ಅಂಬೇಡ್ಕರ್ ಅವರ ಅಂತ್ಯಸಂಸ್ಕಾರಕ್ಕೆ ಕನಿಷ್ಠ ಪಕ್ಷ ಭೂಮಿಯನ್ನು ನೀಡದೆ ಜೀವನದ ಪ್ರತಿಯೊಂದು ಹಾದಿಯಲ್ಲಿ ಕಾಂಗ್ರೆಸ್ ಅವಮಾನವನ್ನು ಮಾಡಿಕೊಂಡು ಬಂತು ಎಂದು ಅವರು ಹೇಳಿದರು. ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರಾರ್ಥಮಿಕ  ಮತ್ತು ಪ್ರೌಢಶಿಕ್ಷಣ ಸಚಿವರಾದ ಬಿ ಸಿ ನಾಗೇಶ್, ಸಮಾಜ ಕಲ್ಯಾಣ ಇಲಾಖೆ…

Read More

ಬೆಂಗಳೂರು: ಕೊವಿಡ್ 19 ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿ 10 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ಸಾರ್ವಜನಿಕರ, ವ್ಯಾಪಾರಿಗಳ ತೀವ್ರ ವಿರೋಧಗಳ ನಡುವೆಯೇ ಸರ್ಕಾರ ನೈಟ್ ಕರ್ಫ್ಯೂ ನಡೆಸಲು ಮುಂದಾಗಿದೆ.’ ಇಂದಿನಿಂದ ರಾಜ್ಯಾದ್ಯಂತ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಯಾಗಲಿದೆ. ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಡಿಸಿಪಿಗಳ ಜೊತೆಗೆ ಬೆಂಗಳೂರು ಪೊಲೀಸರು ಆಯುಕ್ತ ಗೌರವ್ ಗುಪ್ತಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ನೈಟ್ ಕರ್ಪ್ಯೂ ಜಾರಿ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಯಲಿದೆ. ಹೊಸ ವರ್ಷದ ಸಂದರ್ಭದಲ್ಲಿಯೇ ನೈಟ್ ಕರ್ಫ್ಯೂ ಜಾರಿಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೊಸ ವರ್ಷದಲ್ಲಿ ಸಾಕಷ್ಟು ಲಾಭಗಳಿಸುತ್ತಿದ್ದ, ಹೊಟೇಲ್, ಪಬ್ ಮೊದಲಾದ ಉದ್ಯಮಗಳಿಗೆ ತೀವ್ರ ಏಟು ಬಿದ್ದಿದೆ. ಜೊತೆಗೆ ಬೀದಿ ವ್ಯಾಪಾರಿಗಳಿಂದ ಹಿಡಿದು, ಪ್ರತಿಯೊಬ್ಬರಿಗೂ ನೈಟ್ ಕರ್ಫ್ಯೂನಿಂದ ತೊಂದರೆಯಾಗಲಿದೆ. ಆದರೆ ಕೊವಿಡ್ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ಅನಿವಾರ್ಯವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಈ ಎಲ್ಲ ಚರ್ಚೆಗಳ ನಡುವೆಯೇ…

Read More

ಸಿರಾ: ಇಲ್ಲಿನ ನಗರಸಭೆಗೆ ಸೋಮವಾರ ನಡೆದ ಚುನಾವಣೆಯಲ್ಲಿ ಸರಾಸರಿ ಶೇ. 79.81 ರಷ್ಟು ಮತದಾನ ನಡೆದಿದೆ. ನಗರದ 31 ವಾರ್ಡ್ ಗಳಲ್ಲಿ 30 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, 45,357 ಜನರ ಪೈಕಿ 36,198 ಜನರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. 14 ವಾರ್ಡ್ ಗಳಲ್ಲಿ ಶೇ.80ಕ್ಕೂ ಹೆಚ್ಚು ಮತದಾನ ನಡೆದಿದ್ದರೆ, 11 ವಾರ್ಡ್ ಗಳಲ್ಲಿ ಶೇ. 75ರಿಂದ 80ರಷ್ಟು ಮತದಾನ ನಡೆದಿದೆ. 5 ವಾರ್ಡ್ ಗಳಲ್ಲಿ ಶೇಕಡ 70ರಿಂದ 75ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 7ನೇ ವಾರ್ಡಿನಲ್ಲಿ ಅತಿ ಹೆಚ್ಚು 88.44ರಷ್ಟು ಮತದಾನ ನಡೆದಿದ್ದರೆ, 11ನೇ ವಾರ್ಡಿನಲ್ಲಿ ಅತಿ ಕಡಿಮೆ ಶೇಕಡ 70.33ರಷ್ಟು ಮತದಾನ ನಡೆದಿದೆ. ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿ, ಯಾವುದೇ ನಗರಾದ್ಯಂತ ಶಾಂತಿಯುತವಾದ ಮತದಾನ ನಡೆದಿದೆ. ವಾರ್ಡ್ ನಂಬರ್ 23ರಲ್ಲಿ ಮೃತ ಮತದಾರರ ಪರವಾಗಿ ಮತ ಚಲಾಯಿಸಲು ಬಂದಿದ್ದ ವ್ಯಕ್ತಿಯನ್ನು ವಶಕ್ಕೆ ನೀಡಲಾಗಿದೆ ಎಂದು ತಿಳಿದುಬಂದಿದೆ. ವಾರ್ಡ್ ನಂಬರ್ 3ರ ಮತಗಟ್ಟೆಯಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ತಮ್ಮ…

Read More

ತಿಪಟೂರು: ಎಲ್ಲರಿಗೂ ಶಿಕ್ಷಣ ಸಿಕ್ಕರೆ ಸಮಾಜ ಸರಿಹೋಗುತ್ತದೆ ಎಂಬ ಕಲ್ಪನೆ ಇದೆ. ಆದರೆ ಮೌಲ್ಯಯುತ ಗುಣಾತ್ಮಕ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ತಿಪಟೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಶಾಲಾ ಶಿಕ್ಷಣದಲ್ಲಿ ಗುಣಾತ್ಮಕ ರಾಷ್ಟ್ರೀಯ ಶಿಕ್ಷಣ ನೀತಿ ಎನ್ ಇ ಪಿ- 2020 ಶೈಕ್ಷಣಿಕ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಪದ್ಧತಿಯಲ್ಲಿ ಕರ್ನಾಟಕ ರಾಜ್ಯ ತಂದಷ್ಟು ಬದಲಾವಣೆಗಳನ್ನು ಭಾರತದಲ್ಲಿ ಯಾವ ರಾಜ್ಯವು ತಂದಿಲ್ಲ. ಅದಕ್ಕೆ ಶಿಕ್ಷಕರಾದ ನೀವುಗಳೇ ಕಾರಣ. ಯಾವುದೇ ಸರ್ಕಾರಿ ವ್ಯವಸ್ಥೆಯಲ್ಲಿ ಶಿಕ್ಷಣ ಇಲಾಖೆ ಎಷ್ಟು ಪಾರದರ್ಶಕ ಇಲಾಖೆ ಇನ್ಯಾವುದೂ ಇಲ್ಲ ಎಂದು ಅವರು ಹೇಳಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ಮಾತನಾಡಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರವರ ವರ್ಗಾವಣೆ ನಿರ್ಧಾರದಿಂದ 16,000 ಶಿಕ್ಷಕರು ತಮ್ಮ ಬೇಡಿಕೆಯ ಊರುಗಳಿಗೆ ವರ್ಗಾವಣೆಯಾಗಿದ್ದಾರೆ ಎಂದರು. ಸಮಾರಂಭದಲ್ಲಿ ಕೋವಿಡ್ ಸಮಯದಲ್ಲಿ ಸೇವೆ ಸಲ್ಲಿಸಿದ…

Read More