Author: admin

ಹೆಚ್.ಡಿ.ಕೋಟೆ: ತಾಲ್ಲೂಕಿನ ನೂಲ್ಲುಕುಪ್ಪೆ ಗ್ರಾಪಂ ವ್ಯಾಪ್ತಿಯ ಲಕ್ಷ್ಮೀಪುರ ಹಾಡಿಯಲ್ಲಿ ಜನರನ್ನು ಕೇಳುವವರ್ಯಾರು ಎಂದು ಪ್ರಶ್ನೆ ಉಂಟಾಗಿದೆ. ಹೆಚ್.ಡಿ.ಕೋಟೆ ತಾಲ್ಲೂಕು ಅತಿ ಹೆಚ್ಚು ಹಾಡಿಗಳಿಂದ  ಹೊಂದಿರುವ ತಾಲ್ಲೂಕು  ಸರ್ಕಾರದಿಂದ ಕೋಟಿಗಟ್ಟಲೆ ಅನುದಾನವನ್ನು ನೀಡಿದ್ದರೂ ಕೂಡ ಹಾಡಿಗಳು ಇನ್ನೂ ಅಭಿವೃದ್ಧಿಯಾಗಿಲ್ಲ. ಮೈಸೂರು ಮತ್ತು ಮಾನದವಾಡಿ ಮುಖ್ಯ ರಸ್ತೆ, ಕೋಟೆಯ ಹೃದಯ ಭಾಗವಾಗಿರುವ  ಹ್ಯಾಂಡ್ ಪೋಸ್ಟ್ ನಿಂದ  5 ಕಿ.ಮೀ. ಇರುವ ಲಕ್ಷ್ಮೀಪುರ ಹಾಡಿಯ ದುಸ್ಥಿತಿಯನ್ನು ಇಲ್ಲಿನ ಜನರು ತೋಡಿಕೊಂಡಿದ್ದು, ಇಲ್ಲಿ ನಾವು ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.  ಚರಂಡಿ ಕೊಳಚೆ ನೀರಿನಲ್ಲಿ ಹುಳುಗಳಾಗಿವೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳೂ ಕೂಡ ಕಾಣಿಸಿಕೊಂಡಿವೆ. ಇಲ್ಲಿ ಇಷ್ಟೊಂದು ಸಮಸ್ಯೆಗಳಿದ್ದರೂ ಸರ್ಕಾರದ ಯಾವ ಅಧಿಕಾರಿಗಳೂ ಕ್ರಮಕೈಗೊಳ್ಳುತ್ತಿಲ್ಲ ಎಂದು ಇಲ್ಲಿನ ನಿವಾಸಿ ಚಂದ್ರಮ್ಮ ಅವರು ಆಕ್ರೋಶ ವ್ಯಕ್ತಪಡಿಸಿದರು.  ಇಲ್ಲಿ ಹಾಡಿಯಲ್ಲಿ ಶಾಲೆ ಹಾಗೂ ಅಂಗನವಾಡಿ ಇಲ್ಲ .ಇವರು ಮಕ್ಕಳು ಅಂಗನವಾಡಿ ಹೋಗಬೇಕಂದರೆ ಆನಗಟ್ಟಿ ಹಾಡಿಯಲ್ಲಿ ಅಂಗನವಾಡಿಗೆ 2 ಕಿ.ಮೀ.ನಷ್ಟು ದೂರ ಸಣ್ಣ ಮಕ್ಕಳನ್ನು ನಡೆಸಿಕೊಂಡು ಹೋಗಬೇಕು ಅಳಲು…

Read More

ಕೊಡಿಗೇನಹಳ್ಳಿ: ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯ ಬ್ಯಾಲ್ಯ ಗ್ರಾಮ ಪಂಚಾಯಿತಿಯಲ್ಲಿ  ರೂ. 25 ಲಕ್ಷದಷ್ಟು ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಪ್ರಭಾವಿ ಮುಖಂಡರು ಇದರಲ್ಲಿ  ಭಾಗಿಯಾಗಿದ್ದಾರೆ ಎಂದು ದೂರಲಾಗಿದೆ. ಗ್ರಾಮ ಪಂಚಾಯಿತಿಯ ಸದಸ್ಯರಾದ ಅರುಣ್ ಕುಮಾರ್, ಯೋಗೀಶ್, ಬಿ.ಎಸ್. ಶಾರದಮ್ಮ ಮತ್ತು ಎಂ.ಎನ್. ರಾಧಮ್ಮ ಅವರು ಈ ಬಗ್ಗೆ ಆರೋಪಿಸಿದ್ದು, ಪಂಚಾಯಿತಿ ಆಡಳಿತ ಅಧಿಕಾರಕ್ಕೆ ಬಂದು 10 ತಿಂಗಳಾಗಿದ್ದರೂ ಇಲ್ಲಿಯವರೆಗೆ 10 ಸಾಮಾನ್ಯ ಸಭೆಗಳನ್ನು ಕರೆಯಬೇಕಾಗಿತ್ತು. ಕೇವಲ 3 ಸಭೆಗಳನ್ನು ಮಾತ್ರ ನಡೆಸಲಾಗಿದೆ. ಈ ಹಿಂದಿನ ಅವಧಿಯ ಬಿಲ್‌ ಗಳು ಬಾಕಿಯಿವೆ ಎಂದು ತೋರಿಸಿ ವಿವಿಧ ಏಜೆನ್ಸಿಗಳಿಗೆ ರೂ. 28 ಲಕ್ಷ ಡ್ರಾ ಮಾಡಿ ಕೊಡಲಾಗಿದೆ ಎಂದಿದ್ದಾರೆ. ಈ ಎಲ್ಲಾ ಬಿಲ್‌ ಗಳನ್ನು ಪಾವತಿಸಲು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಿಲ್ಲ. ಹಾಗೆಯೇ ಹಿಂದಿನ ಪಿಡಿಒ ಹಳೇ ಬಿಲ್‌ ಗಳು ಬಾಕಿಯಿವೆ ಎಂದು ಎಲ್ಲಿಯೂ ನಮೂದಿಸಿರುವುದಿಲ್ಲ ಎಂದು ಹೇಳಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಒಂದು ದಿನದಲ್ಲಿ…

Read More

ಕುಣಿಗಲ್: ಕನ್ನಡ ಸಾಹಿತ್ಯ ಪರಿಷತ್ ಕೆಲವರ ಸ್ವತ್ತಾಗದೆ ನಾಡಿನ ಸಮಸ್ತ ಕನ್ನಡಿಗರ ಪರಿಷತ್ತಾಗಲು ಶ್ರಮಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಾಯಣ್ಣ ತಿಳಿಸಿದರು. ಪಟ್ಟಣದಲ್ಲಿ ಶನಿವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ ನ ಆಜೀವ ಸದಸ್ಯರ ಸಭೆಯಲ್ಲಿ ಮತಯಾಚಿಸಿ ಅವರು ಮಾತನಾಡಿ, ಕುಣಿಗಲ್ ತಾಲ್ಲೂಕಿನ ಮೂಲದವರಾಗಿದ್ದು, ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ತಾಲ್ಲೂಕಿನ ವ್ಯಕ್ತಿ ಅಂತಹ ಪದವಿಗೇರಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಸಾಹಿತ್ಯ ಪರಿಷತ್ ಸದಸ್ಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ, ಶ್ರೇಷ್ಠ ಕೃತಿಗಳಿಗೆ ಪ್ರೋತ್ಸಾಹಧನ, ಜಿಲ್ಲಾ ಮತ್ತು ತಾಲ್ಲೂಕಿನ ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡಲಾಗುವುದು. ಜತೆಗೆ ಪರಿಷತ್ನ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲಾಗುವುದು. ಮುದ್ರಾಣಾಲಯವನ್ನು ಆಧುನೀಕರಿಸಿ ಕನ್ನಡ ನುಡಿ ಪತ್ರಿಕೆಯ ವಿಸ್ತಾರಕ್ಕೆ ಗಮನಹರಿಸಲಾಗುವುದು ಎಂದು ಹೇಳಿದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತುಮಕೂರು: ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚನ್ನಮ್ಮ ಅವರ ಸಾಲಿಗೆ ವೀರವನಿತೆ ಒನಕೆ ಓಬವ್ವ ಕೂಡ ಸೇರಿದ್ದು, ನಾಡಿನ ಹೆಣ್ಣು ಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಶಾಸಕ ಡಾ.ಜಿ. ಪರಮೇಶ್ವರ ಅಭಿಪ್ರಾಯಪಟ್ಟರು. ನಗರದ ಡಾ.ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಇತ್ತೀಚೆಗೆ ಛಲವಾದಿ ಕಲೆ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಹಾಗೂ ಕುರುಕ್ಷೇತ್ರ ನಾಟಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ರಾಜ್ಯವನ್ನಾಳಿದವರು ಓಬವ್ವಳನ್ನು ಸ್ಮರಿಸುವ ಕೆಲಸ ಮಾಡಲಿಲ್ಲ. ಆದರೆ, ನೆಹರು ಓಲೇಕಾರ್ ಈ ವಿಚಾರವಾಗಿ ಅಧಿಕಾರಸ್ಥರ ಗಮನ ಸೆಳೆದು ನಾಡ ಹಬ್ಬವಾಗಿ ಆಚರಿಸಲು ಆದೇಶ ಮಾಡಿಸಿದ್ದಾರೆ ಎಂದು ತಿಳಿಸಿದರು. ಪ್ರಸ್ತುತ ಸಮಾಜವನ್ನು ಛಿದ್ರವಾಗಿಸುವ ನಾಟಕ ನಡೆಯುತ್ತಿದೆ. ಆದರೆ, ಛಲವಾದಿ ಮಹಾಸಭಾ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು. ಛಲವಾದಿ ಮಹಾಸಭಾದ ಸಂಸ್ಥಾಪಕ ಅಧ್ಯಕ್ಷ ಕೆ. ಶಿವರಾಮ್, ಸರ್ಕಾರ ಓಬವ್ವ ಜಯಂತಿಯನ್ನು ನಾಡ ಹಬ್ಬವಾಗಿ ಆಚರಿಸಲು ಆದೇಶಿಸುವ…

Read More

ಸರಗೂರು: ಎಂ.ಡಿ.ನಾಗೇಂದ್ರ ರವರು ಮಹಾರಾಷ್ಟ್ರ ದ ನಾಸಿಕ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟ ದ 4×400 ಮೀಟರ್ ರಿಲೇ ನಲ್ಲಿ ಚಿನ್ನದ ಪದಕ, 4×100 ಮೀಟರ್ ರೀಲೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, 400 ಮೀಟರ್ ಓಟದ ವಿಭಾಗದಲ್ಲಿ ಬೆಳ್ಳಿ ಪದಕ &200 ಮೀಟರ್ ಓಟದ ವಿಭಾಗದಲ್ಲಿ ಕಂಚಿನ ಪದಕ ವನ್ನು ಪಡೆದು ಮುಂದಿನ  ಅಂತಾರಾಷ್ಟ್ರೀಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಸರಗೂರು ತಾಲ್ಲೂಕಿನ ಮುಳ್ಳೂರು ಗ್ರಾಮದ ನಿವಾಸಿಯಾದ  ಎಂ.ಡಿ.ನಾಗೇಂದ್ರರವರು ಮೈಸೂರು ನಗರದ ದೇವರಾಜ ಸಂಚಾರ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು. ಜೊತೆಯಲ್ಲಿ  ಕ್ರೀಡಾಕೂಟಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದಾರೆ. ಮೈಸೂರು ನಗರದ ದೇವರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆ ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಡಿ ನಾಗೇಂದ್ರರವರು ಮಹಾರಾಷ್ಟ್ರ ದ ನಾಸಿಕ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟದ 4×400 ಮೀಟರ್ ರಿಲೇನಲ್ಲಿ ಚಿನ್ನದ ಪದಕ,4×100 ಮೀಟರ್ ರೀಲೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, 400 ಮೀಟರ್ ಓಟದ ವಿಭಾಗದಲ್ಲಿ ಬೆಳ್ಳಿ ಪದಕ…

Read More

ಗುಬ್ಬಿ: ತಾಲ್ಲೂಕಿನ “ತುಮಕೂರು ಮಿತ್ರ” ದಿನಪತ್ರಿಕೆ ವರದಿಗಾರ ಜಿ.ಆರ್.ರಮೇಶ್ ಗೌಡ ಎಂಬವರ ಮೇಲೆ  ನವದೆಂಬರ್ 14ರಂದು  ಭಾನುವಾರ ಮಧ್ಯಾಹ್ನ ಗುಬ್ಬಿ ನಗರದಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳ ಗುಂಪು ಹಲ್ಲೆ ನಡೆಸಿದ್ದು,  ಇದನ್ನು ಖಂಡಿಸಿ, ಪತ್ರಕರ್ತನ ಮೇಲೆ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗುಬ್ಬಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಗುಬ್ಬಿ ತಾಲೂಕು ದಂಡಾಧಿಕಾರಿಗಳಿಗೆ  ಮನವಿ ಸಲ್ಲಿಸಿದರು. ಸಮಸ್ಯೆ ಎನೇ ಇದ್ದರು ಕಾನೂನಾತ್ಮಕವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡುವುದು ಸೂಕ್ತ ಕ್ರಮ ಅದನ್ನು ಬಿಟ್ಟು ಓರ್ವ ಪತ್ರಕರ್ತನ ಮೇಲೆ ಸಾರ್ವಜನಿಕವಾಗಿ ದೈಹಿಕವಾಗಿ ಹಲ್ಲೆ ಮಾಡಿರುವುದು  ಖಂಡನೀಯವಾದ   ವಿಚಾರ ಈ ಘಟನೆಯಿಂದ ಪತ್ರಕರ್ತರಲ್ಲಿ ತೀವ್ರ ಕಳವಳ ಉಂಟು ಮಾಡಿದೆ  ಈ ಘಟನೆಯ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಿ  ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇಯಿಸಿದರು. ಈ ಸಂದರ್ಭದಲ್ಲಿ ಗುಬ್ಬಿ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ಅಂಜೀನಪ್ಪ, ಉಪಾಧ್ಯಕ್ಷ ಕೆ.ಟಿ.ರಂಗಸ್ವಾಮಿ, ಕಾರ್ಯದರ್ಶಿ…

Read More

ತುಮಕೂರು:  ಬ್ಯಾಂಕ್ ನ ವಾಚ್ ಮ್ಯಾನ್ ನನ್ನು ಭೀಕರವಾಗಿ ಹತ್ಯೆ ಮಾಡಿ ದರೋಡೆ ಮಾಡಿರುವ ಘಟನೆ ತುಮಕೂರಿನ ನಾಗವಲ್ಲಿ ಗ್ರಾಮದಲ್ಲಿ ಭಾನುವಾರ ನಡೆದಿದ್ದು, ಬ್ಯಾಂಕ್ ನಲ್ಲಿದ್ದ ಹಣವನ್ನು ದರೋಡೆಕೋರರು ದೋಚಿದ್ದಾರೆ ಎಂದು ತಿಳಿದು ಬಂದಿದೆ. 55 ವರ್ಷ ವಯಸ್ಸಿನ ಸಿದ್ದಪ್ಪ ಹತ್ಯೆಗೀಡಾದ ವಾಚ್ ಮ್ಯಾನ್ ಆಗಿದ್ದು, ಇವರು ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಬ್ಯಾಂಕ್ ದರೋಡೆ ಮಾಡುವ ಉದ್ದೇಶದಿಂದ ಬಂದ ದರೋಡೆಕೋರರು ಸಿದ್ದಪ್ಪ ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಎಎಸ್ ಪಿ ರಾಹುಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶ್ವಾನದಳದ ಸುಳಿವಿನ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳ ಸುಳಿವಿಗಾಗಿ ಪೊಲೀಸರು ಜಾಲಾಡುತ್ತಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಸರಗೂರು: ಸರಗೂರು ತಾಲೂಕು ಹಳೆಹೆಗ್ಗುಡಿಲು ಗ್ರಾಮದ ರಾಮಚಂದ್ರ ನಾಯಕರವರು ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಈಗ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಇನ್ನು ಹೆಚ್ಚಿನ ಆರ್ಥಿಕ ಸಹಕಾರದ ಅಗತ್ಯ ಇರುವುದಾಗಿ ಅವರ ತಾಯಿ ಮತ್ತು ಅಣ್ಣಾ ನಾಗರಾಜು ತಿಳಿಸಿರುತ್ತಾರೆ. ಸರ್ವಧರ್ಮ “ಸಮಾಜ ಸೇವೆಗಾಗಿ ಹೃದಯವಂತರು” ಸೇವಾ ಸಂಸ್ಥೆಯ ವತಿಯಿಂದ  ಆಹಾರ ಸಾಮಾಗ್ರಿಗಳನ್ನು ಮತ್ತು ಆರ್ಥಿಕ ಹಣಕಾಸು ಸಹಕಾರ ನೀಡಲಾಯಿತು.  ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸರ್ವಧರ್ಮ ಚಿಕ್ಕದೇವ್ ಹೆಗ್ಗಡಾಪುರ, ಪ್ರಧಾನ ಕಾರ್ಯದರ್ಶಿ ಮಹದೇವರಾಜ್ ಚೌಡಹಳ್ಳಿ, ಚಂದ್ರಹಾದನೂರು, ಸತೀಶ್ ಮಾಚನಾಯಕನಹಳ್ಳಿ, ವಿನೋದ್ ರಾಜ್ ಕೆ.ಎಂ ಹಳ್ಳಿ, ಚೆನ್ನನಾಯಕ, ರವಿ ನಾಯಕ ಸೇರಿದಂತೆ ಇತರರು ಹಾಜರಿದ್ದರು. ರಾಮಚಂದ್ರ  ಅವರು ಕುಟುಂಬಕ್ಕೆ ಆಧಾರವಾಗಿದ್ದರು. ಆದರೆ ಅವರ  ಎರಡೂ ಕಿಡ್ನಿ ವೈಫಲ್ಯವಾಗಿದ್ದು, ಇದರಿಂದಾಗಿ ಅವರ ಕುಟುಂಬ ಇದೀಗ ಆರ್ಥಿಕವಾಗಿ ಕೂಡ ಬಹಳ ಕಷ್ಟದಲ್ಲಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದಾಗ ಎರಡೂ ಕಿಡ್ನಿ ವೈಫಲ್ಯವಾಗಿದೆ…

Read More

ತುಮಕೂರು:  ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಹಿರಿಯ ಸಹೋದರಿ ನಾಗರತ್ನಮ್ಮನವರು  ಇಂದು ನಿಧನರಾಗಿದ್ದಾರೆ. ಇವರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ  3 ಗಂಟೆಗೆ ಪರಮೇಶ್ವರ ಅವರ ತುಮಕೂರಿನ ಸಿದ್ಧಾರ್ಥ ನಗರ(ಗೊಲ್ಲಹಳ್ಳಿ) ನಿವಾಸದ ಪಕ್ಕದ ಜಮೀನಿನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತುಮಕೂರು: ‘ಮಕ್ಕಳ ದಿನಾಚರಣೆ’ ಅಂಗವಾಗಿ ನಗರದ ಸರ್ಕಾರಿ ಚಿತ್ರಕಲಾ ಕಾಲೇಜಿನಲ್ಲಿ ಇಂದು ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷ  ಶ್ರೀನಿವಾಸಮೂರ್ತಿ ಟಿ. ವಿದ್ಯಾರ್ಥಿಗಳು ಕಲಿಯುವ ಕಾಲೇಜು ಆವರಣವನ್ನು  ಹಳೆಯ ವಿದ್ಯಾರ್ಥಿಗಳು ತಮ್ಮ ರಜಾ ದಿನವನ್ನು ಉಪಯೋಗಿಸಿಕೊಂಡು  ಶ್ರಮದಾನ ಮಾಡಿರುವುದು ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಇನ್ನೂ ಕಾಲೇಜಿನ ಪ್ರಾಂಶುಪಾಲರಾದ ಸಿ.ಸಿ.ಬಾರಕೇರ ಅವರು ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಕಾಲೇಜಿನ ಬಗೆಗಿನ ಕಾಳಜಿ, ಅಭಿಮಾನ ಮತ್ತು ಗೌರವದಿಂದ ಇಂದು ಶ್ರಮದಾನ ಮಾಡುವ ಮೂಲಕ ಒಂದು ಪುಣ್ಯದ ಕಾರ್ಯವನ್ನು ಮಾಡಿದ್ದೀರಿ. ಈ ಸಂಸ್ಥೆಯ ಬೆಳವಣಿಗೆಗೆ ನಿಮ್ಮ ಪ್ರೀತಿ, ವಿಶ್ವಾಸ ಹೀಗೆಯೇ ಮುಂದುವರಿಯಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯ ಮಟ್ಟದ ಶಿಕ್ಷಕರತ್ನ ಪ್ರಶಸ್ತಿ ಪುರಸ್ಕೃತ ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಯತೀಶ್ ಕುಮಾರ್ ಅವರು ಮಾತನಾಡಿ, ಹಳೆಯ ಸಂಘದ ವತಿಯಿಂದ ಕಾಲೇಜಿನ ನಿವೇಶನ ಪಡೆಯಲು ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ.ನಮ್ಮ ಕರೆಯನ್ನು ಬೆಂಬಲಿಸಿ ಈ ಕಾಲೇಜಿನ ಅಭಿವೃದ್ಧಿಗೆ ತಮ್ಮೆಲ್ಲರ…

Read More