Subscribe to Updates
Get the latest creative news from FooBar about art, design and business.
- ಫೆಲೋಶಿಪ್ ಗಾಗಿ ಅರ್ಜಿ ಆಹ್ವಾನ | ಜನವರಿ 9 ಕೊನೆಯದಿನ
- ಜ.4ರಂದು ಎತ್ತಿನಹೊಳೆಗೆ ಕೇಂದ್ರ ಅಡ್ಡಿ ವಿರುದ್ಧ ಸಭೆ: ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮುರಳಿಧರ ಹಾಲಪ್ಪ
- ರುಡ್ ಸೆಟ್ ಸಂಸ್ಥೆ: ವಿವಿಧ ತರಬೇತಿಗೆ ಅರ್ಜಿ
- ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಕಲ್ಪಿಸಿದ ಕಾಂಗ್ರೆಸ್: ಡಾ.ಇಂತಿಯಾಜ್ ಅಹಮದ್ ಅಭಿಮತ
- ಪದವೀಧರರ ಕ್ಷೇತ್ರ: ಕರಡು ಮತದಾರರ ಪಟ್ಟಿ ಸಿದ್ಧ | ಚಿರತೆ ಬಗ್ಗೆ ಸುಳ್ಳು ಮಾಹಿತಿಗೆ ಕಾನೂನು ಕ್ರಮ
- ಬುದ್ಧ, ಬಸವ, ಅಂಬೇಡ್ಕರ್ ಜಗತ್ತಿನ ಬೆಳಕು: ಶ್ರೀ ರುದ್ರಮುನಿ ಸ್ವಾಮೀಜಿ
- ತುಮಕೂರು | ಅಂಬೇಡ್ಕರ್ ಯುವ ಸೇನೆಯಿಂದ 208ನೇ ಭೀಮ-ಕೋರೆಗಾಂವ್ ವಿಜಯ ದಿನಾಚರಣೆ
- ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಿ: ಎಸ್.ಎನ್.ನಾಗರಾಜು ಒತ್ತಾಯ
Author: admin
ಪಾವಗಡ: ತಾಲ್ಲೂಕು ವೀರಮ್ಮನಹಳ್ಳಿ ತಾಂಡ ಗ್ರಾಮದಲ್ಲಿ ಶ್ರೀಮರಿಯಮ್ಮ ದೇವಿ ಮತ್ತು ಶ್ರೀ ಸೇವಾಲಾಲ್ ಮಹಾರಾಜ್ ನೂತನ ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವ ಕಾರ್ಯಕ್ರಮ ಏಪ್ರಿಲ್ 16ರಂದು ನಡೆಯಲಿದೆ. ಬೆಳಗ್ಗೆ ಗಣಪತಿ ಪ್ರಾರ್ಥನೆ, ಗಂಗಾಪೂಜೆ, ಗೋಪೂಜೆ, ಮತ್ತು ಮೃತ್ಸಂಗ್ರಹಣ, ದೇವಾಲಯ ಪ್ರವೇಶ, ಗಣಪತಿ ಪೂಜೆ, ಸ್ವಸ್ತಿವಾಚನ, ದೇವನಾಂದಿ, ಪಂಚಗವ್ಯ, ರಕ್ಷಾಬಂಧನ, ಸರ್ವತೋಭದ್ರ ಮಂಡಲ ಆವಾಹನೆ, ಕಳಶ ಸ್ಥಾಪನೆ, ನವಗ್ರಹ ಮಂಡಲ ಆವಾಹನೆ, ಜಲಕ್ಷೀರಾಧಿವಾಸ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಸಾಯಂಕಾಲ ಕಳಶಗಳಿಗೆ ಅರ್ಚನೆ, ಅಂಕುರಾರ್ಪಣೆ, ವಾಸ್ತು ಮಂಡಲ ಆರಾಧನೆ, ಆಲಯ ದಿಗ್ವಂದನ, ರಕ್ಷೆಘ್ನ ಹೋಮ, ಸಾಯಂದೀಕ್ಷಾ ಹೋಮ, ಕೂಷ್ಮಾಂಡ ಹೋಮ, ಗಣಪತಿ ಹೋಮ, ವಾಸ್ತು ಹೋಮ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಏ.17ರಂದು ಬೆಳಗ್ಗೆ: ಕಳಶಗಳಿಗೆ ಅರ್ಚನೆ, ಸ್ನಪನ, ದೀಕ್ಷಾಹೋಮ, ನವಗ್ರಹೋಮ, ದುರ್ಗಾಹೋಮ, ಮೃತ್ಯುಂಜಯ ಹೋಮ, ನಕ್ಷತ್ರ ಹೋಮ, ಧಾನ್ಯಾಧಿವಾಸ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಸಾಯಂಕಾಲ ಕಳಶಗಳಿಗೆ ಅರ್ಚನೆ, ಸಾಯಂದೀಕ್ಷಾ ಹೋಮ, ಪುಷ್ಪಶಯ್ಯಾದಿವಾಸ, ನ್ಯಾಸಗಳು, ಪಿಂಡಿಕಾ ಸ್ಥಾಪನೆ, ದೀಪಾರಾಧನೆ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ…
ತುಮಕೂರು: ಭಾರತವು ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೊದಲ ಸ್ಥಾನಕ್ಕೆ ಬಂದೇ ಬರುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದರು. ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿಪಿಟಿ ಹಳೆಯ ವಿದ್ಯಾರ್ಥಿಗಳ ಸಂಘವು ನೂತನವಾಗಿ ನಿರ್ಮಿಸಿರುವ ಕಲ್ಪವೃಕ್ಷ ಸಭಾಂಗಣದ ಉದ್ಘಾಟನೆಯನ್ನು ನೆರವೇರಿಸಿ, ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆಧುನಿಕತೆ ಬಹಳ ವೇಗವಾಗಿ ಬದಲಾಗುತ್ತಿದೆ. ಯಾವುದೇ ದೇಶಕ್ಕೆ ಹೋದರು ಭಾರತದ ತಾಂತ್ರಿಕ ಪದವೀಧರು ಸಿಗುತ್ತಾರೆ. ನಾಸಾದಲ್ಲಿ ಶೇ.20ರಷ್ಟು ವಿಜ್ಞಾನಿಗಳು ಭಾರತದವರಿದ್ದಾರೆ. ಹೀಗಾಗಿಯೇ ಪ್ರಪಂಚದ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಗುರುತಿಸುತ್ತಿದ್ದಾರೆ. ತಾಂತ್ರಿಕ ಶಿಕ್ಷಣದಲ್ಲಿ ಪಾಲಿಟೆಕ್ನಿಕ್ ಬಹುಮುಖ್ಯವಾದ ಅಂಗ. ಕರ್ನಾಟಕವು ತಾಂತ್ರಿಕ ಶಿಕ್ಷಣ ನೀಡುವುದರಲ್ಲಿ ಮುಂದೆ ಇದೆ ಎಂದರು. ದೇಶದಲ್ಲಿ ತಾಂತ್ರಿಕ ಪದವಿದರರನ್ನು ಉತ್ಪಾದಿಸುವುದರಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ನಮ್ಮ ರಾಜ್ಯ ನೀಡುತ್ತಿರುವ ಗುಣಮಟ್ಟದ ಶಿಕ್ಷಣದಿಂದ ಹೆಚ್ಚು ಪ್ರಾತಿನಿದ್ಯ ಸಿಕ್ಕಿದೆ. ಇಂಜಿನಿಯರಿಂಗ್, ಪಾಲಿಟೆಕ್ನಿಕ್ ವಿದ್ಯಾರ್ಥಿಗಳನ್ನು ಇಡೀ ವಿಶ್ವದಲ್ಲಿ ಮೊದಲ ಆದ್ಯತೆಯಲ್ಲಿ ಗುರುತಿಸುತ್ತಾರೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಇರಬಹುದು. ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತ ಬಂದಿವೆ ಎಂದು…
ತುಮಕೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಒಟ್ಟಾಗಿ ಸೇರಿ ಸಮನ್ವಯತೆಯಿಂದ ಕೆಲಸ ಮಾಡಿದಾಗ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದು ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ, ಸಂಸದ ಹಾಗೂ ದಿಶಾ ಸಮಿತಿ ಅಧ್ಯಕ್ಷ ವಿ. ಸೋಮಣ್ಣ ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಜರುಗಿದ ದಿಶಾ ಸಮಿತಿಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕು ಎಂದು ತಿಳಿಸಿದ ಅವರು, ಜಿಲ್ಲೆಯಲ್ಲಿ ಜಲ್ ಜೀವನ್ ಮಿಷನ್(ಜೆಜೆಎಂ) ಯೋಜನೆಯ ಪ್ರಗತಿ ಪರಿಶೀಲಿಸುತ್ತಾ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಜೆಜೆಎಂ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಕಳಪೆ ಗುಣಮಟ್ಟದ ಕಾಮಗಾರಿಗಳು ಕಂಡು ಬಂದರೆ ಶಿಸ್ತು ಕ್ರಮ ಜರುಗಿಸಲಾಗುವುದು. ಜಿಲ್ಲೆಯಲ್ಲಿ ಕೇಂದ್ರದ ಜೆಜೆಎಂ ಯೋಜನೆಯು ಶಾಶ್ವತ ಕುಡಿಯುವ ನೀರಿನ ಯೋಜನೆಯಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ ಜಲ್ ಜೀವನ್…
ತುಮಕೂರು: ಜೈನ ಧಮದಲ್ಲಿನ 24 ತೀರ್ಥಂಕರರಲ್ಲಿ 24ನೇ ತೀರ್ಥಂಕರ ಶ್ರೀ ಮಹಾವೀರ ಸ್ವಾಮಿಯ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ಮಹಾವೀರ ಸ್ವಾಮಿ ಜೈನ ಧರ್ಮದ 24ನೇ ಹಾಗೂ ಅಂತಿಮ ತೀರ್ಥಂಕರರಾಗಿದ್ದಾರೆ. ಅವರ ಬದುಕು, ತಪಸ್ಸು, ಹಾಗೂ ಬೋಧನೆಗಳು ಭಾರತೀಯ ದಾರ್ಶನಿಕ ಪರಂಪರೆಯಲ್ಲಿ ಅನನ್ಯ ಸ್ಥಾನ ಹೊಂದಿವೆ. ಅವರು ಬೋಧಿಸಿದ ತತ್ವಗಳು ಕೇವಲ ಜೈನ ಧರ್ಮಕ್ಕಷ್ಟೇ ಸೀಮಿತವಾಗದೇ, ಮಾನವತೆಯ ಮಾರ್ಗದೀಪಗಳಾಗಿವೆ. ಮಹಾವೀರರು ಕ್ರಿ.ಪೂ. 599ರ ಸುಮಾರಿಗೆ ಈಗಿನ ಬಿಹಾರ ರಾಜ್ಯದ ವೈಶಾಲಿಯಲ್ಲಿ ರಾಜವಂಶದಲ್ಲಿ ಜನಿಸಿದರು. ಬಾಲ್ಯದಿಂದಲೇ ಶಾಂತ, ನಿರ್ಲೋಭಿ ಸ್ವಭಾವದವರಾಗಿದ್ದ ಅವರು, 30ನೇ ವಯಸ್ಸಿನಲ್ಲಿ ಸಂಸಾರವನ್ನು ತ್ಯಜಿಸಿ ಕಠಿಣ ತಪಸ್ಸಿನಲ್ಲಿ ತೊಡಗಿದರು. ಸುಮಾರು 12 ವರ್ಷಗಳ ಆತ್ಮಶುದ್ಧಿಯ ಪ್ರಯತ್ನದ ನಂತರ ಅವರಿಗೆ ‘ಕೇವಲಜ್ಞಾನ’ ಅತಿ ಎತ್ತರದ ಜ್ಞಾನಸಾಧನೆ ಲಭಿಸಿತು. ಈ ಜ್ಞಾನವನ್ನು ಪಡೆದ ನಂತರ ಅವರು ತಮ್ಮ ಜೀವಿತವನ್ನೆಲ್ಲ ಜನಾಂಗದ ಕಳಪೆ ನಿವಾರಣೆ ಮತ್ತು ಧರ್ಮದ ಸಾರವನ್ನೆಲ್ಲ ಪ್ರಸಾರ ಮಾಡುವುದರಲ್ಲಿ ಕಳೆದರು. ಮಹಾವೀರ ಸ್ವಾಮೀ ಬೋಧಿಸಿದ ಪಂಚಮಹಾವ್ರತಗಳು — ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ…
ತುರುವೇಕೆರೆ: ನಮ್ಮ ಧಾರ್ಮಿಕ ಆಚರಣೆಗಳಿಗೆ ಧಕ್ಕೆಯಾಗುತ್ತಿದ್ದು ಪ್ರತಿ ವರ್ಷದಂತೆ ನಡೆಯಬೇಕಿದ್ದ ಕೆಂಪಮ್ಮದೇವಿ ಮತ್ತು ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಮುಂದೂಡಿರುವುದು ನಮಗೆ ಬಹಳ ಬೇಸರ ತಂದಿದೆ ಎಂದು ಮರಾಠಿ ಪಾಳ್ಯದ ಮಾದಿಗ ಸಮುದಾಯದ ಮುಖಂಡರಾದ ಬೈರಯ್ಯರವರು ಅಸಮಾಧಾನ ವ್ಯಕ್ತಪಡಿಸಿದ್ರು. ಪಟ್ಟಣದ ಆದಿಜಾಂಭವ ಸಮಿತಿಯ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವುಗಳು ಕೂಡ ದಲಿತ ಜನಾಂಗದ ಮಾದಿಗ ಜಾತಿಗೆ ಸೇರಿದವರಾಗಿದ್ದು, ಅಸ್ಪೃಶ್ಯತೆ ನಮ್ಮ ಗ್ರಾಮದಲ್ಲಿ ಕುಣಿಕೇನಹಳ್ಳಿ ಗ್ರಾಮದಲ್ಲಿ ಇಲ್ಲ ಎಂದರು. ತಾಲೂಕಿನ ಕುಣಿಕೇನಹಳ್ಳಿ ಗ್ರಾಮದಲ್ಲಿ ತಿಂಗಳ 5 ರಿಂದ ನಡೆಯಬೇಕಿದ್ದ ಜಾತ್ರಾ ಮಹೋತ್ಸವ ಕುಣಿಕೇನಹಳ್ಳಿ ಗ್ರಾಮದ ಚಲವಾದಿ ಸಮುದಾಯದ ಜಗದೀಶ್ ರವರು ಸಮಿತಿಗಳಲ್ಲಿ ನಮಗೂ ಸೇರ್ಪಡೆ ಮಾಡಿಕೊಳ್ಳಿ ಎಂಬುವ ಬೇಡಿಕೆಯಿಟ್ಟ ಕಾರಣ ಸವರ್ಣೀಯರು ಮತ್ತು ದಲಿತರ ನಡುವೆ ಸಂಘರ್ಷ ಉಂಟಾಗಿದ್ದು, ಜಾತ್ರಾ ಮಹೋತ್ಸವಕ್ಕಾಗಿ ತಾಲೂಕು ಕಚೇರಿಯಲ್ಲಿ ಶಾಂತಿ ನಡೆಸಿದರೂ ಅದು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎ.ಎನ್.ಅಹಮದ್ ಜಾತ್ರೆಯನ್ನು ಮುಂದೂಡುವಂತೆ ಹೇಳಿದ್ದರು. ಕುಣಿಕೇನಹಳ್ಳಿ ಗ್ರಾಮದಲ್ಲಿ ಕೆಂಪಮ್ಮ ದೇವಿಯ ಜಾತ್ರೆಯಲ್ಲಿ ಮೆರವಣಿಗೆಯಲ್ಲಿ ಸಾಗುವ…
ಕೊರಟಗೆರೆ : 2022ರ ಜನವರಿ 20 ರಂದು ಪಟ್ಟಣದಲ್ಲಿ ನಡೆದ ಹಲ್ಲೆ ಮತ್ತು ಬೆದರಿಕೆಯ ಪ್ರಕರಣದಲ್ಲಿ ಮಧುಗಿರಿ 4ನೇ ಜಿಲ್ಲಾ ಸತ್ರ ನ್ಯಾಯಾಲಯವು ತೀರ್ಪು ನೀಡಿದ್ದು, ಮೊದಲನೇ ಆರೋಪಿ ಕೆ.ಟಿ.ವೆಂಕಟೇಶ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 1,000 ಸಾವಿರ ದಂಡ ವಿಧಿಸಿ, ಇತರ ಇಬ್ಬರು ಆರೋಪಿಗಳಾದ ಅವರ ಪುತ್ರರಾದ ರೋಹಿತ್ ಮತ್ತು ಕಿಶೋರ್ ಅವರಿಗೆ ತಲಾ 1000 ಸಾವಿರ ದಂಡ ವಿಧಿಸಿದೆ. ಪಟ್ಟಣದ ಹನುಮಂತಪುರದ ನಿವಾಸಿಗಳಾದ ವೆಂಕಟೇಶ್ ಕೆ.ಟಿ., ರೋಹಿತ್ ಮತ್ತು ಕಿಶೋರ್ ಎಂಬವರು, ಕರ್ನಾಟಕ ಎಟಿಎಂ ಎದುರಿನ ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸುತ್ತಿದ್ದ ಉಮಾಶಂಕರ್, ಅವರ ತಂದೆ ಕುಮಾರಸ್ವಾಮಿ ಹಾಗೂ ನವೀನ್ ಎಂಬುವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದರು. ಆರೋಪಿಗಳು ಆ ಜಾಗವು ತಮಗೆ ಸೇರಿದ್ದೆಂದು ತಿಳಿಸಿ ಶೆಡ್ ನಿರ್ಮಾಣಕ್ಕೆ ತಡೆ ನೀಡಲು ಯತ್ನಿಸಿದ್ದರು. ಈ ಪ್ರಕರಣದಲ್ಲಿ ಅಭಿಯೋಜನೆಯ ಪರವಾಗಿ ವಕೀಲರಾದ ಬಿ.ಎಂ. ನಿರಂಜನಮೂರ್ತಿ ಅವರು ವಾದ ಮಂಡಿಸಿದ್ದರು.…
ಪಾವಗಡ: ಮೂತ್ರಪಿಂಡದ ಕಾಯಿಲೆಯಿಂದ ಬೇಸತ್ತು ಎಪ್ಪತ್ತೇಳು ವರ್ಷದ ವೃದ್ಧರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪಾವಗಡದಲ್ಲಿ ಮಂಗಳವಾರ ನಡೆಯಿತು. ಬಳ್ಳಾರಿ ಮೂಲದ ಶಂಕರಪ್ಪ(77) ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. ಪಾವಗಡ ಪಟ್ಟಣದ ಬೆಟ್ಟದ ಬುಡದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಚಾಕುವಿನಿಂದ ತಮ್ಮ ಕುತ್ತಿಗೆ ಮತ್ತು ದೇಹದ ಭಾಗಗಳಲ್ಲಿ ಗಾಯಗೊಳಿಸಿಕೊಂಡು ಇವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ವೃದ್ಧನನ್ನು ರಕ್ಷಿಸಿ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಶಂಕರಪ್ಪಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ದಿನಗಳಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಶಂಕರಪ್ಪ, ಹಲವು ಸಲ ಚಿಕಿತ್ಸೆ ಪಡೆದರೂ ಯಾವುದೇ ಫಲಿತಾಂಶ ದೊರೆತಿಲ್ಲ ಎಂಬ ಕಾರಣದಿಂದಾಗಿ ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪಿಎಸ್ ಐ ವಿಜಯ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ…
ತುಮಕೂರು: ಜಿಲ್ಲೆಯ ತುಮಕೂರು, ಶಿರಾ ಹಾಗೂ ತಿಪಟೂರು ತಾಲ್ಲೂಕಿನಲ್ಲಿ ಏಪ್ರಿಲ್ 16 ಹಾಗೂ 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(KCET) ನಡೆಯಲಿದ್ದು, ಪರೀಕ್ಷೆಯನ್ನು ಲೋಪದೋಷವಿಲ್ಲದಂತೆ ನಡೆಸುವ ಹಿನ್ನೆಲೆಯಲ್ಲಿ ನಿಯೋಜಿತ ಅಧಿಕಾರಿ/ಸಿಬ್ಬಂದಿಗಳು ಕಡ್ಡಾಯವಾಗಿ ಪರೀಕ್ಷಾ ಕಾರ್ಯ ವಿಧಾನಗಳನ್ನು ಪಾಲಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಸೋಮವಾರ ಸಂಜೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ 25 ಕೇಂದ್ರಗಳಲ್ಲಿ ಕೆಸಿಇಟಿ ಪರೀಕ್ಷೆ ನಡೆಯಲಿದ್ದು, ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ವೇಳಾಪಟ್ಟಿ ಹಾಗೂ ಪರೀಕ್ಷಾರ್ಥಿಗಳ ಮಾಹಿತಿ ಲಭ್ಯವಿರಬೇಕು. ಪರೀಕ್ಷೆಗಾಗಿ ನಿಯೋಜಿಸಲಾದ ಅಧಿಕಾರಿ/ಸಿಬ್ಬಂದಿಗಳ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಅಗತ್ಯ ತರಬೇತಿ ನೀಡಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಾಲಗುರುಮೂರ್ತಿ ಅವರಿಗೆ ಸೂಚನೆ ನೀಡಿದರು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವ್ಯವಸ್ಥೆ ಮಾಡಿದಂತೆ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ವಿವರವನ್ನು ಕಿಖ ಕೋಡ್ ಅನ್ನು ಸ್ಕ್ಯಾನ್ ಮೂಲಕ ಪಡೆಯುವ ವ್ಯವಸ್ಥೆ…
ತುಮಕೂರು: ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆ ಅಗತ್ಯ ಎಂದು ನವದೆಹಲಿಯ ಕರ್ನಾಟಕ ರಾಜ್ಯ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ ಅವರು ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ನಗರದ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2024–25ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕ ಮತ್ತು ಮಾನಸಿಕ ಆರೋಗ್ಯಗಳೆರಡೂ ಪರಸ್ಪರ ಒಂದಕ್ಕೊಂದು ಸಂಬಂಧ ಹೊಂದಿರುವುದರಿಂದ ಇವೆರಡರ ಸಮತೋಲನವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು. ಸರ್ಕಾರಿ ನೌಕರರು ಕಚೇರಿ ಕೆಲಸದ ಒತ್ತಡದಲ್ಲಿ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಡೆಗಣಿಸಬಾರದು. ಕರ್ತವ್ಯದೊಂದಿಗೆ ನಿಯಮಿತ ಧ್ಯಾನ, ವ್ಯಾಯಾಮ ಮತ್ತು ಉತ್ತಮ ಪೌಷ್ಟಿಕ ಆಹಾರ ಸೇವನೆಯನ್ನು ರೂಢಿಸಿಕೊಳ್ಳುವುದರಿಂದ ಮನಸ್ಸು ಮತ್ತು ದೇಹದ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.…
ತುಮಕೂರು: ಶಾಂತರಸ ಕನ್ನಡದ ಗಜಲ್ ಜನಕ. ಕನ್ನಡದ ಗಜಲ್ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಅವರ ಶತಮಾನೋತ್ಸವದ ಆಚರಣೆಗೆ ಸಾಹಿತ್ಯ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ.ರವಿಕುಮಾರ್ ನೀಹ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ತುಮಕೂರು ಝೆನ್ ಟೀಮ್ ಹಾಗೂ ಬೆಂಗಳೂರಿನ ಸಂಸ ಥಿಯೇಟರ್ ಸೋಮವಾರ ಆಯೋಜಿಸಿದ್ದ ಶಾಂತರಸ ಶತಮಾನೋತ್ಸವ ಆಚರಣೆಯಲ್ಲಿ ಮಾತನಾಡಿದರು. ಶಾಂತರಸ ಅವರ ಜನ್ಮ ಶತಮಾನೋತ್ಸವವನ್ನು ಇಂದು 31 ಜಿಲ್ಲೆಗಳಲ್ಲಿ ಆಚರಿಸಲಾಗುತ್ತಿದೆ. ಶಾಂತರಸರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರು. ಉತ್ತರ ಶ್ರೇಷ್ಠ, ದಕ್ಷಿಣ ಕನಿಷ್ಠ ಎನ್ನುವ ಭಾವನೆ ನಮ್ಮಲ್ಲಿದೆ. ಇದು ದೇಶದಲ್ಲಿ ಮಾತ್ರವಲ್ಲ, ಕರ್ನಾಟಕ ರಾಜ್ಯದಲ್ಲೂ ಇದೆ. ಇಂತಹ ವೈರುಧ್ಯಗಳನ್ನು ಹೋಗಲಾಡಿಸಲು ಶಾಂತರಸ ಶ್ರಮಿಸಿದರು ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಹಾಗೂ ಝೆನ್ ಟೀಮ್ ಮುಖ್ಯಸ್ಥ ಉಗಮ ಶ್ರೀನಿವಾಸ್ ಮತ್ತು ತುಮಕೂರು ವಿಶ್ವವಿದ್ಯಾನಿಲಯ ಡಿವಿಜಿ ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗದ…