Author: admin

ಬೆಂಗಳೂರು: ಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಮೀಕ್ಷೆಯ ಅಂಕಿಅಂಶಗಳು ಅವಶ್ಯಕ. ಯಾವ ಜಾತಿಯ ಜನರಲ್ಲಿ ಅನಕ್ಷರತೆ, ಬಡತನ, ಜಮೀನು ಇತ್ಯಾದಿಗಳಿಲ್ಲ ಎಂಬುದರ ಮಾಹಿತಿ ತಿಳಿದುಕೊಳ್ಳಲು ಸಮೀಕ್ಷೆ ಅನಿವಾರ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿ ಕೊಂಡಿದ್ದಾರೆ. ಇಂದು ಬೆಂಗಳೂರಿನ ಎಂ.ಎಸ್‌‍. ರಾಮಯ್ಯ ಆಸ್ಪತ್ರೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಸಮೀಕ್ಷೆಯಿಂದ ಸಮಾಜದ ಉದ್ಧಾರ ಸಾಧ್ಯವಿಲ್ಲ ಎಂದು ಕೇಂದ್ರಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ. ಪಾಪ ಅವರಿಗೆ ಗೊತ್ತಿಲ್ಲ, ಸಮಾಜದಲ್ಲಿ ಅಸಮಾನತೆಯಂತೂ ಇದೆ. ಸಮಾನತೆ ನಿರ್ಮಾಣವಾಗಬೇಕು ಎಂಬುದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಆಶಯವಾಗಿದೆ ಎಂದರು. ಸಮಾನತೆ ನಿರ್ಮಾಣವಾಗಬೇಕಾದರೆ, ಅಸಮಾನತೆ ತೊಲಗಬೇಕು. ಇದಕ್ಕಾಗಿ ದುರ್ಬಲರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಅದಕ್ಕಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ದತ್ತಾಂಶಗಳ ಅಗತ್ಯವಿದೆ. ಅದನ್ನು ಸಂಗ್ರಹಿಸಲು ಸಮೀಕ್ಷೆ ನಡೆಸುತ್ತಿದ್ದೇವೆ ಎಂದರು. ಸಮಾಜದಲ್ಲಿ ಅಸಮಾನತೆ ನಿರಂತರವಾಗಿರಬೇಕು ಎಂಬುದು ಬಿಜೆಪಿಯವರ ಬಯಕೆ. ನಿರ್ದಿಷ್ಟವಾದ ಜಾತಿಯೊಂದು ಉತ್ತುಂಗದಲ್ಲಿರಬೇಕೆಂದು ಬಿಜೆಪಿ ಬಯಸುತ್ತದೆ ಎಂದ ಅವರು, ಕಾಂಗ್ರೆಸ್‌‍ ವರಿಷ್ಠ ರಾಹುಲ್‌ ಗಾಂಧಿ ಹಾಗೂ ರಾಜ್ಯ ಸರ್ಕಾರದ ಒತ್ತಾಯದ ಮೇರೆಗೆ,…

Read More

ಔರಾದ: ಕಂದಗುಳ ಬುದ್ಧ ವಿಹಾರದಲ್ಲಿ ಅಕ್ಟೋಬರ್ 2ರಂದು ಧಮ್ಮಚಕ್ರ ಪ್ರವರ್ತನ ದಿನಾಚರಣೆ ಭವ್ಯವಾಗಿ ಜರುಗಲಿದೆ ಎಂದು ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರ ತಿಳಿಸಿದ್ದಾರೆ. ಕಾರ್ಯಕ್ರಮ ಸಂಬಂಧ ಮಾಹಿತಿ ನೀಡಿದ ಅವರು,  ಬೆಳಿಗ್ಗೆ 11ಕ್ಕೆ ಬುದ್ಧ ಪೂಜೆ–ಪ್ರಾರ್ಥನೆಯಿಂದ ಕಾರ್ಯಕ್ರಮ ಆರಂಭವಾಗಿ, ಮಧ್ಯಾಹ್ನ 1ಕ್ಕೆ ಭೀಮಗೀತೆ ಹಾಗೂ ಭಜನೆಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಈ ಸಮಾರಂಭವನ್ನು ಸಿದ್ದಾರ್ಥ್ ಸೋಶಿಯಲ್ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿವೆ.  ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅವರು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ. ವರದಿ: ಅರವಿಂದ ಮಲ್ಲಿಗೆ, ಬೀದರ್  ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತುಮಕೂರು: ನವರಾತ್ರಿ ಆಚರಣೆಯು ಅಂತಿಮ ಘಟ್ಟ ತಲುಪಿದ್ದು, ಜಂಬೂ ಸವಾರಿಗೆ ನಗರ ಸಜ್ಜಾಗಿ ನಿಂತಿದೆ. ದಸರಾದ ಕೊನೆಯ ದಿನವಾದ ಗುರುವಾರ ವಿಜಯದಶಮಿಯಂದು ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ. ಕಳೆದ ವರ್ಷದಿಂದ ಜಿಲ್ಲಾ ಆಡಳಿತ ದಸರಾ ಆಚರಣೆ ಮಾಡುತ್ತಾ ಬಂದಿದ್ದು, ಈ ವರ್ಷದ ಆಚರಣೆ ಹಾಗೂ ಕಾರ್ಯಕ್ರಮಗಳನ್ನು ಮತ್ತಷ್ಟು ವಿಸ್ತರಿಸಿದೆ. ಹಿಂದಿನ ವರ್ಷಗಳಲ್ಲಿ ಬನ್ನಿ ಕಡಿದು, ದೇವರ ಮೆರವಣಿಗೆ ಮಾಡಲಾಗುತಿತ್ತು. ಆದರೆ ಈ ಬಾರಿ ಜಂಬೂ ಸವಾರಿ ಮೆರವಣಿಗೆಯನ್ನು ಅದ್ದೂರಿಯಾಗಿ ಏರ್ಪಡಿಸಲಾಗಿದೆ. ಮೈಸೂರು ದಸರಾ ಮಾದರಿಯನ್ನು ಜಿಲ್ಲಾ ಆಡಳಿತ ಸಹ ಅನುಕರಣೆ ಮಾಡುತ್ತಿದ್ದು, ಮೆರವಣಿಗೆಗೆ ಆನೆಗಳನ್ನು ಕರೆ ತರಲಾಗಿದೆ. ಮೈಸೂರಿನ ಜಂಬೂ ಸವಾರಿ ಮಾದರಿಯಲ್ಲೇ ನಗರದಲ್ಲೂ ಮೆರವಣಿಗೆ ಆಯೋಜನೆ ಮಾಡಲಾಗಿದೆ. ಆನೆಗಳ ಜತೆಗೆ ನಗರ ಹಾಗೂ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಗ್ರಾಮ ದೇವತೆಗಳು ಭಾಗವಹಿಸಲಿವೆ. ವೈಭವಯುತ ಅಂಬಾರಿ ಮೆರವಣಿಗೆಯಲ್ಲಿ ಕಳಸ ಹೊತ್ತ 150 ಮಹಿಳೆಯರು ಪಾಲ್ಗೊಳ್ಳಲಿದ್ದಾರೆ. ವಿವಿಧ ಕಲಾ ತಂಡಗಳು ಪ್ರದರ್ಶನ ನೀಡಲಿದ್ದು, ಕಲಾವಿದರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದು, ತಮ್ಮ ಪ್ರತಿಭೆ ಪ್ರದರ್ಶನ…

Read More

ತುಮಕೂರು: ದಸರಾ ಅಂಗವಾಗಿ ನಗರದ ಕ್ಯಾತ್ಸಂದ್ರದ ಚಂದ್ರಮೌಳೀಶ್ವರ ಬಡಾವಣೆಯ ಮಧುಸೂದನ್ ಅವರ ನಿವಾಸದಲ್ಲಿ ಸಾಂಪ್ರದಾಯಿಕ ಗೊಂಬೆಗಳ ಪ್ರದರ್ಶನ ಏರ್ಪಡಿಸಿದ್ದು, ಗಮನ ಸೆಳೆಯುತ್ತಿದೆ. ಸುಮಾರು 1 ಸಾವಿರ ವಿವಿಧ ಮಾದರಿ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ನವರಾತ್ರಿ ಆರಂಭದ ದಿನದಿಂದ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅ. 2ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ನಿವೃತ್ತ ನೌಕರರಾದ ಮಧುಸೂದನ್ 14 ವರ್ಷಗಳಿಂದ ಪ್ರತಿ ದಸರಾ ಸಮಯದಲ್ಲಿ ಇದೇ ರೀತಿಯಾಗಿ ಗೊಂಬೆಗಳ ಪ್ರದರ್ಶನ ಏರ್ಪಡಿಸುತ್ತಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡು, ಉತ್ತರಪ್ರದೇಶ, ವಾರಾಣಸಿ ಸೇರಿದಂತೆ ವಿವಿಧ ಕಡೆಗಳಿಂದ ಗೊಂಬೆಗಳನ್ನು ಖರೀದಿಸಿ ತಂದು ಸಂಗ್ರಹಿಸಿದ್ದಾರೆ. ವಿಧಾನಸೌಧ, ಹೈಕೋರ್ಟ್‌, ಅಯೋಧ್ಯೆ ರಾಮ ಮಂದಿರದ ಮಾದರಿಗಳು ಆಕರ್ಷಣೀಯವಾಗಿವೆ. ಮೈಸೂರು ಮಹಾರಾಜರ ಚಿತ್ರಗಳು ಸಹ ಇವೆ. ಮೈಸೂರು ದಸರಾ ಮೆರವಣಿಗೆ ದೃಶ್ಯವನ್ನು ಗೊಂಬೆಗಳಲ್ಲಿ ಕಟ್ಟಿಕೊಡುವ ಕೆಲಸ ತುಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ. ರಾಮಾಯಣ, ಮಹಾಭಾರತದ ಬಗ್ಗೆ ತಿಳಿಸುವ ಗೊಂಬೆಗಳು ನೋಡುಗರನ್ನು ಆಕರ್ಷಿಸುತ್ತಿವೆ. ಈ ಹಿಂದೆ ನಮ್ಮ ತಾಯಿ ಗೊಂಬೆ ಸಂಗ್ರಹ ಮಾಡುತ್ತಿದ್ದರು. ಅದು ನನಗೂ ರೂಢಿಯಾಯಿತು. ಬೇರೆ…

Read More

ತುಮಕೂರು: ‘ತುಮಕೂರು ದಸರಾ’ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ನಟ ವಿ.ರವಿಚಂದ್ರನ್‌, ನಟಿ ರಮ್ಯಾ ಅವರನ್ನು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಮಂಗಳವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು. ರವಿಚಂದ್ರನ್‌ ನಟನೆಯ ‘ಜಾಣ’ ಚಿತ್ರದ ‘ಪ್ರೇಮಲೋಕದ ಪಾರಿಜಾತವೇ’ ಗೀತೆಗೆ ರವಿಚಂದ್ರನ್, ರಮ್ಯಾ ಹೆಜ್ಜೆ ಹಾಕಿ ನೆರೆದವರನ್ನು ರಂಜಿಸಿದರು. ಪ್ರೇಕ್ಷಕರು ಸಿಳ್ಳೆ, ಚೆಪ್ಪಾಳೆಯ ಸದ್ದು ಮೊಳಗಿಸಿದರು. ಇದಕ್ಕೂ ಮುನ್ನ ರವಿಚಂದ್ರನ್‌ ತಮ್ಮ ‘ಮಲ್ಲ’ ಚಿತ್ರದ ‘ಕರುನಾಡೇ ಕೈ ಚಾಚಿದೆ ನೋಡೇ’, ‘ಕನಸುಗಾರನಾಗಿ ಕರುನಾಡಲ್ಲೇ ಮತ್ತೆ ಹುಟ್ಟಬೇಕು ನಾನು’ ಎಂಬ ಗೀತೆಗೆ ನೃತ್ಯ ಪ್ರದರ್ಶಿಸಿದರು. ರವಿಚಂದ್ರನ್‌ ಮಾತನಾಡಿ, ‘ಪ್ರೇಮಲೋಕ–2 ಚಿತ್ರ ಬಂದೇ ಬರುತ್ತದೆ. ಈಗಾಗಲೇ 24 ಹಾಡು ಸಿದ್ಧವಾಗಿದೆ. ಚಿತ್ರೀಕರಣಕ್ಕೆ ಸೂಕ್ತ ಜಾಗ ಸಿಗುತ್ತಿಲ್ಲ. ಚಿತ್ರೀಕರಣಕ್ಕೆ ಒಂದು ಊರು ಕಟ್ಟಬೇಕಾಗುತ್ತದೆ. ತಯಾರಿ ನಡೆಯುತ್ತಿದೆ’ ಎಂದು ಹೇಳಿದರು. ಯಾವತ್ತಿಗೂ ಸಿನಿಮಾದ ಮೇಲಿನ ಹಠ, ಛಲ ಕಡಿಮೆಯಾಗಲ್ಲ. ಕುಟುಂಬಕ್ಕೆ ಬೇಕಾದರೆ ಮೋಸ ಮಾಡಿರಬಹುದು. ಆದರೆ ಸಿನಿಮಾಗೆ ಎಂದಿಗೂ ಮೋಸ ಮಾಡಿಲ್ಲ. ಮಾಡಲ್ಲ. ಕಾರ್ಯಕ್ರಮಕ್ಕೆ ತುಂಬಾ ರಾಯಲ್ ಆಗಿ ಸ್ವಾಗತಿಸಿದ್ದಾರೆ.…

Read More

ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ : ನವರಾತ್ರಿ ಹಬ್ಬಕ್ಕೆ ಪ್ರಮುಖ ಆಕರ್ಷಣೆ ದಸರಾ ಬೊಂಬೆ, ಗ್ರಾಮೀಣ ಭಾಗದ ಜನರಲ್ಲಿ ಹಬ್ಬದ ವಾತವರಣ ನಿರ್ಮಾಣ ಮಾಡಲಾಗುತ್ತದೆ. ನವದುರ್ಗೆಯರನ್ನ 9 ದಿನಗಳ ಕಾಲ ಪೂಜಿಸುವ ನವರಾತ್ರಿ ಹಬ್ಬ ಹೆಂಗಳೆಯರ ಪಾಲಿಗೆ ವಿಶೇಷ. ನವರಾತ್ರಿ ಹಬ್ಬಕ್ಕೆ ಮೆರುಗು ತಂದುಕೊಡುವುದು ಬೊಂಬೆಗಳ ಸಾಲು. ನವವಿಧದಲ್ಲಿ ನೆಡೆಯುವ ದೇವಿ ಆರಾಧನೆಯ ಜತೆಗೆ ಮನೆಮಂದಿಯೆಲ್ಲಾ ವಿಶೇಷವಾಗಿ ನವರಾತ್ರಿ ಹಬ್ಬದಲ್ಲಿ ಬೊಂಬೆಗಳನ್ನ ಜೋಡಿಸಿ ಬಂಧು ಬಳಗದವರನ್ನ ಆಹ್ವಾನಿಸಿ ಸಂಭ್ರಮಿಸುತ್ತಾರೆ. ತಾಲೂಕಿನ ಹೊಳವನಹಳ್ಳಿಯ ನಿವೃತ್ತ ಮುಖ್ಯ ಶಿಕ್ಷಕ ದಿವಂಗತ ರಮಾನಂದ್ ಮತ್ತು ಅವರ ಪತ್ನಿ ನಾಗಮಣಿಯವರು ಮನೆಯಲ್ಲಿ ಪ್ರತಿವರ್ಷದಂತೆ ದಸರಾ ವೈಭವವನ್ನು ಸಾರುವ ಗೊಂಬೆಗಳನ್ನು ಸುಮಾರು 150 ವರ್ಷದಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ತಮ್ಮ ಮನೆಯಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ಗೊಂಬೆಗಳನ್ನ ಕೂರಿಸಿ ಮನೆಯ ಅಕ್ಕಪಕ್ಕದ ಮುತೈದೆಯರು ಹಾಗೂ ಮಕ್ಕಳನ್ನ ಕರೆದು ಪೂಜೆಯನ್ನ ಮಾಡುತ್ತಾರೆ. ವಿಶೇಷ ಪೂಜೆ ಮತ್ತು ಭಜನೆ: ನವರಾತ್ರಿಯ ಪ್ರಯುಕ್ತ ಮನೆಯಲ್ಲಿ 9 ದಿನಗಳು ಕಾಲ ಪ್ರತಿನಿತ್ಯ ಮುತ್ತೈದೆಯರು…

Read More

ಕೊರಟಗೆರೆ: ತಾಲ್ಲೂಕಿನ ಕಸಬಾ ಹೋಬಳಿಯ ಬಜ್ಜನಹಳ್ಳಿಯ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಕರ್ನಾಟಕದಲ್ಲಿ 6ನೇ ರಾಜ್ಯಮಟ್ಟದ ಕಲಾ ಉತ್ಸವ — 2025 ಕಾರ್ಯಕ್ರಮ ಶನಿವಾರ ಜರುಗಿತು. ಕೇಂದ್ರದ ಬುಡಕಟ್ಟು ಮಂತ್ರಾಲಯದ ಅಧೀನದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಕರ್ನಾಟಕ ಶಿಕ್ಷಣ ಪರಿಶಿಷ್ಟ ಪಂಗಡಗಳ ಸಂಸ್ಥೆಯ (KESTS) ಶಿಕ್ಷಣ ಸಲಹೆಗಾರರಾದ ಅನುಸೂಯಾ ಮತ್ತು ಕನ್ನಯ್ಯ ಭೇಟಿ ಉಪಸ್ಥಿತರಿದ್ದರು. ಶಾಲೆಯ ಪ್ರಾಂಶುಪಾಲರು ವಿನೋದ ಕುಮಾರ ಯಾದವ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದರು. ನಿರೂಪಣೆಯನ್ನು ನೀನಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳಿಗೆ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ. ನಿರ್ಣಾಯಕರಾಗಿ ತುಮಕೂರಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಚಿದಾನಂದ ದೇವರಮನಿ ಹಾಗೂ ಕೇಂದ್ರಿಯ ವಿದ್ಯಾಲಯ ಮತ್ತು ನವೋದಯ ವಿದ್ಯಾಲಯದ ಸಂಗೀತ ಶಿಕ್ಷಕರು ಆಗಮಿಸಿದರು. EMRS ಕೊಲಗಲ್ಲು (ಬಳ್ಳಾರಿ) ಶಾಲೆಯ ವಿದ್ಯಾರ್ಥಿಗಳು ಮತ್ತು ಸಂಗೀತ ಶಿಕ್ಷಕರು ಕೂಡ ಉಪಸ್ಥಿತರಿದ್ದರು. ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿತು. ಈ ಸಂದರ್ಭದಲ್ಲಿ ಏಕಲವ್ಯ ವಸತಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿಗಳು…

Read More

ಬೀದರ್: ರೈತಪರ ಕಾಳಜಿಯುಳ್ಳ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿ ಹೆಕ್ಟೇರ್ ಬೆಳೆ ಹಾನಿಗೆ ಹೆಚ್ಚುವರಿ 8,500 ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಅವರಿಗೆ ಧನ್ಯವಾದಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದ್ದಾರೆ ಮಹಾ ಮಳೆಯಿಂದ ಬೀದರ್ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದ 4 ಜಿಲ್ಲೆಗಳಲ್ಲಿ ಲಕ್ಷಾಂತರ ಎಕರೆ ಭೂಮಿಯಲ್ಲಿ ಸಂಭವಿಸಿರುವ ಬೆಳೆ ಹಾನಿಗೆ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಪರಿಹಾರದ ಜೊತೆಗೆ ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿಯಾಗಿ 8,500 ರೂ. ಘೋಷಿಸಿರುವ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಸ್ವಾಗತ. ನಮ್ಮ ಭಾಗದ ಸಚಿವರ, ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿ ಇಂದು ಮಳೆ ಹಾನಿ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿಗಳು, ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚುವರಿಯಾಗಿ 8,500 ರೂ. ಘೋಷಿಸಿದ್ದಾರೆ ಎಂದು ಅವರು ಹೇಳಿದ್ದಾರೆ ಎನ್ ಡಿ ಆರ್ ಎಫ್ ನಿಯಮಗಳಂತೆ ಕುಷ್ಕಿ, ನೀರಾವರಿ ಜಮೀನು ಹಾಗೂ ಬಹು ಬೆಳೆ ಹಾನಿಗೆ ಕ್ರಮವಾಗಿ ಪ್ರತಿ ಹೆಕ್ಟೇರ್ ಗೆ 8,500…

Read More

ವಿ.ಎಂ.ಎಸ್.ಗೋಪಿ, ಬೆಂಗಳೂರು. ನವ ರಾತ್ರಿಗಳು ಮೈಸೂರ ದಸರಾಗಳು ನವರಾತ್ರಿ ಉತ್ಸವಗಳು ಎಷ್ಟೊಂದು ಸುಂದರವು ಹಬ್ಬದ ಸಡಗರವು ನವ ಅವತಾರಗಳು ನವ ಬಣ್ಣಗಳು ಹಳದಿ ಬಣ್ಣಗಳು ಶೈಲಪುತ್ರಿ ದುರ್ಗೆ ಹಸಿರು ಬಣ್ಣಗಳು ಬ್ರಹ್ಮಚಾರಿಣಿ  ದುರ್ಗೆ ಬೂದು ಬಣ್ಣಗಳು ಚಂದ್ರಘಂಟಾ  ದುರ್ಗೆ ಕೇಸರಿ ಬಣ್ಣಗಳು ಕೂಷ್ಮಾಂಡದೇವಿ  ದುರ್ಗೆ ಬಿಳಿ ಬಣ್ಣಗಳು ಸ್ಕಂದಾ ಮಾತಾ  ದುರ್ಗೆ ಕೆಂಪು ಬಣ್ಣಗಳು ಕಾತ್ಯಾಯಿನಿ  ದುರ್ಗೆ ನೀಲಿ ಬಣ್ಣಗಳು ಕಾಳರಾತ್ರಿ ಮಹಾಮಾಯೇ ಗುಲಾಬಿ ಬಣ್ಣಗಳು ಮಹಾ ಗೌರಿ  ತಾಯಿ ನೇರಳೆ ಬಣ್ಣಗಳು ಸಿದ್ಧಿಧಾತ್ರಿ ತಾಯಿ ದೇವಿಯ ಅವತಾರಗಳು ನವರಾತ್ರಿಯ ದಿನಗಳು ಆಯುಧ ಪೂಜೆಗಳು ವಿಜಯದಶಮಿ ಹಬ್ಬಗಳು ದಸರಾ  ಹಬ್ಬದ ಸಂಭ್ರಮಗಳು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ತುಮಕೂರು: ಬೆಂಗಳೂರಿನ ಮಾದವರದಿಂದ ತುಮಕೂರುವರೆಗೆ ಮೆಟ್ರೊ ವಿಸ್ತರಿಸಲು ಅಂದಾಜು 20,649 ಕೋಟಿ ವೆಚ್ಚ ಆಗಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಇಲ್ಲಿ ಸೋಮವಾರ ಹೇಳಿದರು. ಮೆಟ್ರೊ ವಿಸ್ತರಣೆಗೆ ಸಂಬಂಧಿಸಿದಂತೆ ವಿಸ್ಕೃತ ಯೋಜನಾ ವರದಿ (ಡಿಪಿಆರ್) ಸಿದ್ಧ ಪಡಿಸಲು ಸೆ. 25ರಂದು ಸರ್ಕಾರ ಆದೇಶ ಹೊರಡಿಸಿದೆ. ಬಿಎಂಆರ್‌ಸಿಎಲ್‌ಗೆ ಡಿಪಿಆರ್ ಹೊಣೆ ವಹಿಸಲಾಗಿದೆ. ಇದಕ್ಕಾಗಿ 3 ಕೋಟಿ ಖರ್ಚು ಮಾಡಲಾಗುತ್ತಿದೆ. ಆದಷ್ಟು ಶೀಘ್ರ ವರದಿ ಸಲ್ಲಿಕೆಗೆ ಸೂಚಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬಿಎಂಆರ್‌ ಸಿಎಲ್‌ ವತಿಯಿಂದ ಈಗಾಗಲೇ ಕಾರ್ಯ ಸಾಧ್ಯತಾ ವರದಿ ಸಲ್ಲಿಕೆಯಾಗಿದೆ. ನಗರದವರೆಗೆ ಮೆಟ್ರೊ ವಿಸ್ತರಿಸುವ ಯೋಜನೆ ಒಂದೊಂದು ಹಂತ ದಾಟಿಕೊಂಡು ಮುಂದೆ ಸಾಗುತ್ತಿದೆ. ಮೆಟ್ರೊ ನಗರಕ್ಕೆ ಮಾತ್ರ  ಸೀಮಿತವಾಗಿದೆ. ಗ್ರಾಮೀಣ ಭಾಗಕ್ಕೆ ವಿಸ್ತರಿಸಲು ಹೊಸ ಕಾನೂನು ರೂಪಿಸಬೇಕು. ಅನೇಕ ನಿಯಮ ಪಾಲಿಸಬೇಕಿದೆ ಎಂದು ಹೇಳಿದರು. ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಮೆಟ್ರೊ ಕಾಮಗಾರಿ ನಡೆಸಲಾಗುತ್ತದೆ. ಡಿಪಿಆರ್ ಸಲ್ಲಿಕೆಯಾದ ನಂತರ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು…

Read More