Subscribe to Updates
Get the latest creative news from FooBar about art, design and business.
- 80ನೇ ಸ್ವಾತಂತ್ರ್ಯ ದಿನಾಚರಣೆ: ಹುತಾತ್ಮರ ಕನಸಿನ ಭಾರತ ನಿರ್ಮಿಸಲು ವಿದ್ಯಾರ್ಥಿಗಳಿಂದ ಪ್ರತಿಜ್ಞೆ!
- ಗಿರಿನಗರ ಸರ್ಕಾರಿ ಶಾಲೆ ಅಭಿವೃದ್ಧಿಗೆ ₹1 ಲಕ್ಷ ದೇಣಿಗೆ ಘೋಷಿಸಿದ ಸಮಾಜ ಸೇವಕ ಸದಾನಂದ
- ಪ್ರಾಣತ್ಯಾಗ ಬಲಿದಾನದಿಂದ ಬಂದ ಸ್ವಾತಂತ್ರ್ಯವನ್ನ ಇವತ್ತೀನ ಯುವ ಪೀಳಿಗೆ ಅರಿಯಬೇಕು: ತಹಶೀಲ್ದಾರ್ ಮಂಜುನಾಥ್
- ಬೀದರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ
- ಸ್ವಾತಂತ್ರ್ಯ ದಿನ ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ, ನಮ್ಮೆಲ್ಲರ ಹಬ್ಬ: ಪ್ರಾಂಶುಪಾಲ ಡಾ.ಶಶಿಕುಮಾರ್ ಎಚ್.ಸಿ.
- ಮಹಾರಾಜವಾಡಿಯಲ್ಲಿ ಅದ್ಧೂರಿಯಾಗಿ ಜರುಗಿದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ
- ತುಮಕೂರು: 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ — ಶ್ರೀಮಠ ಹಾಗೂ ಕ್ರೀಡಾಂಗಣದಲ್ಲಿ ಡಾ.ಜಿ.ಪರಮೇಶ್ವರ್ ಧ್ವಜಾರೋಹಣ
- ತುಮಕೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ
Author: admin
ಸರಗೂರು: ಸರಗೂರು ವಲಯ ವ್ಯಾಪ್ತಿಯ ಹಲಸೂರು ಗ್ರಾಮದ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆಯ ಮೇಲೆ ಹುಲಿ ಏಕಾಏಕಿ ದಾಳಿ ನಡೆಸಿ ಬಲಿ ತೆಗೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಗ್ರಾಮದ ಸೋಮಣ್ಣ ನಾಯಕ ಎಂಬುವರು ಜಮೀನಿನಲ್ಲಿ ಭಾನುವಾರ ಮೇಕೆಗಳನ್ನು ಮೇಯಿಸುತ್ತಿದ್ದಾಗ ನುಗು ಜಲಾಶಯದ ಕಾಡಿನಿಂದ ಹೊರಬಂದ ಹುಲಿ ಜಮೀನಿನಲ್ಲಿದ್ದ ಮೇಕೆಗಳ ಮೇಲೆ ಏಕಾಏಕಿ ದಾಳಿ ನಡೆಸಿದ ವೇಳೆ ಮೇಕೆ ಮೃತಪಟ್ಟಿವೆ. ಇದರಲ್ಲಿ ಮೇಕೆಯೊಂದನ್ನು ಅರ್ಥ ಭಾಗವನ್ನು ತಿಂದು, ಕಾಡಿನೊಳಗೆ ಎಳೆದುಕೊಂಡು ಹೋಗುವ ಸಂದರ್ಭದಲ್ಲಿ ಮೇಕೆಯನ್ನು ಮೇಯಿಸುತ್ತಿದ್ದ ರೈತರು ಕೂಗಾಡಿದ್ದಾರೆ. ಈ ವೇಳೆ ಮೇಕೆಯನ್ನು ಅಲ್ಲೇ ಬಿಟ್ಟು ಹೋಗಿದೆ ಎಂದು ರೈತ ಸೋಮಣ್ಣ ನಾಯಕ ತಿಳಿಸಿದ್ದಾರೆ. ಗ್ರಾಪಂ ಅಧ್ಯಕ್ಷ ಹಲಸೂರು ಟಿ.ಕುಮಾರ್ ಮಾತನಾಡಿ, ಮೇಕೆಗಳನ್ನು ಸಾಕಿ ಜೀವನ ನಡೆಸುತ್ತಿದ್ದ ಸೋಮಣ್ಣ ನಾಯಕ ಅವರಿಗೆ ಸುಮಾರು 60 ಸಾವಿರ ರೂ.ಗೂ ಅಧಿಕ ನಷ್ಟವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಲು ಕರೆ ಮಾಡಿದರೆ…
ಕೊರಟಗೆರೆ: ಮಧುಗಿರಿ ಹಾಗೂ ಕೊರಟಗೆರೆ ಕ್ಷೇತ್ರ ನನ್ನನ್ನು ಉನ್ನತ ಮಟ್ಟಕ್ಕೆ ಬೆಳೆಸಿದೆ. ಮಧುಗಿರಿ ಕ್ಷೇತ್ರದ ಜನತೆ ಗಿಡನೆಟ್ಟು ಪೋಷಿಸಿದರು. ಹಣ್ಣು ಬಿಡುವ ಹೊತ್ತಿಗೆ ಕೊರಟಗೆರೆ ಕ್ಷೇತ್ರಕ್ಕೆ ಕಳಿಸಿದರು. ಈ ಕ್ಷೇತ್ರದ ಜನ ನನ್ನನ್ನು ಉನ್ನತ ಹುದ್ದೆ ಏರಲು ಆಶೀರ್ವದಿಸಿದರು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು. ತಾಲ್ಲೂಕಿನ ಚಟೇನಹಳ್ಳಿ ಗ್ರಾಮದ ಗಂಗಮಾಳಮ್ಮ, ಮೈಲಾರಲಿಂಗೇಶ್ವರ ನೂತನ ದೇವಾಲಯದ ಪ್ರಾಣ, ಕಳಶ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾತನಾಡಿದರು. ಪೋಷಕರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ. ಒಂದು ಮಗು ವಿದ್ಯಾವಂತವಾದರೆ ಇಡೀ ಕುಟುಂಬದ ಅಭಿವೃದ್ಧಿಗೆ ಸಹಕಾರವಾಗುತ್ತದೆ. ಬಡತನ ನಿವಾರಣೆಗೆ ಶಿಕ್ಷಣವೇ ಉತ್ತಮ ಮಾರ್ಗ. ಇದರಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಪರಮೇಶ್ವರ ಅವರಿಗೆ ಕಂಬಳಿ ಹೊದಿಸಿ, ಜೋಡಿ ಕುರಿಗಳನ್ನು ನೀಡಿದರು. ಇದಕ್ಕೂ ಮುನ್ನ ತಾಲ್ಲೂಕಿನ ಶಾಂತಲಿಂಗಯ್ಯನಪಾಳ್ಯ ರಸ್ತೆ, ಮುದ್ದನಹಳ್ಳಿ ರಸ್ತೆ ಹಾಗೂ ಬಿಳೇಕಲ್ಲಹಳ್ಳಿ– ಬಿಡಿ ಪುರ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್…
ತುಮಕೂರು: ಈಡಿಗರಲ್ಲಿ ನಾವೆಲ್ಲ ಒಂದು ಎಂಬ ಏಕತಾ ಮನೋಭಾವ ಮೂಡಬೇಕು. ಒಳ ಪಂಗಡದ ಹೆಸರಿನಲ್ಲಿ ವಿಘಟನೆಯಾಗಬಾರದು ಎಂದು ಸೋಲೂರಿನ ಆರ್ಯ ಈಡಿಗರ ಮಹಾಸಂಸ್ಥಾನ ಮಠದ ವಿಖ್ಯಾತನಂದ ಸ್ವಾಮೀಜಿ ಸಲಹೆ ಮಾಡಿದರು. ನಗರದಲ್ಲಿ ಭಾನುವಾರ ಜಿಲ್ಲಾ ಆರ್ಯ ಈಡಿಗರ ಸಂಘ, ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ ಸಮಿತಿ, ಜೆ.ಪಿ.ನಾರಾಯಣ ಸ್ವಾಮಿ ಪ್ರತಿಷ್ಠಾನ, ನಾರಾಯಣ ಗುರು ಸಮಾಜ ಟ್ರಸ್ಟ್, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಆಯೋಜಿಸಿದ್ದ ನಾರಾಯಣ ಗುರು ಜಯಂತಿ, ಪ್ರತಿಭಾ ಪುರಸ್ಕಾರ ವಿತರಣೆ, ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ನಮ್ಮಲ್ಲಿ ಸಂಕುಚಿತ ಮನೋಭಾವ ಬಿಟ್ಟು ಹೋದರೆ ಮಾತ್ರ ಸದೃಢ ಸಮಾಜ ಕಟ್ಟಲು ಸಾಧ್ಯ. ಎಲ್ಲರು ಸ್ವಾವಲಂಬಿ, ಸುಸಂಸ್ಕೃತರಾಗಬೇಕು ಎಂಬುವುದು ನಾರಾಯಣ ಗುರು ಆಶಯವಾಗಿತ್ತು. ಅವರ ವಿಚಾರ ಎಷ್ಟು ಅಳವಡಿಸಿಕೊಂಡಿದ್ದೇವೆ ಎಂಬುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮಾತನಾಡಿ ‘ನಾವೆಲ್ಲ ಒಳ ಪಂಗಡಗಳ ಜತೆಗೆ ಹೋರಾಟ ಮಾಡದೆ, ಒಗ್ಗಟ್ಟಾಗಿರಬೇಕು. ಎಲ್ಲರನ್ನು ಜತೆಯಲ್ಲಿ ಕರೆದುಕೊಂಡು ಹೋದರೆ ಮುಂದುವರಿಯಲು ಸಾಧ್ಯ. ಈಗಾಗಲೇ ನಮ್ಮ…
ವರದಿ: ಹಾದನೂರು ಚಂದ್ರ ಸರಗೂರು: ತಾಲೂಕಿನ ಬೆಣ್ಣೆಗೆರೆ ಗ್ರಾಮದ ರೈತ ರಾಜಶೇಖರ್ ಎಂಬುವರ ಮೇಲೆ ಹುಲಿ ದಾಳಿ ನಡೆಸಿ, ಪ್ರಾಣ ಬಲಿ ಪಡೆದಿದೆ. ಬಡಗಲಪುರ ಗ್ರಾಮದಲ್ಲಿ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ರೈತನ ಮೇಲೆ ನರಭಕ್ಷಕ ಹುಲಿ ದಾಳಿ ನಡೆಸಿರುವ ಘಟನೆ ಮುಳ್ಳೂರು(ಬೆಣ್ಣೇಗೆರೆ) ಗ್ರಾಮದಲ್ಲಿ ಭಾನುವಾರ ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಂಚಿನ ನುಗು ವನ್ಯಜೀವಿ ವಲಯ ಅರಣ್ಯದಂಚಿನ ಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಣ್ಣೇಗೆರೆ ಗ್ರಾಮದ ರಾಜಶೇಖರ್(65) ಹುಲಿ ದಾಳಿಯಿಂದ ಮೃತಪಟ್ಟವರು. ಮೃತರಿಗೆ ಒಬ್ಬರು ಪುತ್ರರು, ಪತ್ನಿ ಇದ್ದಾರೆ. ಇವರು ಜಮೀನಿನಲ್ಲಿ ದನ ಮೇಯಿಸುವಾಗ ಹುಲಿ ಏಕಾಏಕಿ ದಾಳಿ ನಡೆಸಿ, ಕುತ್ತಿಗೆಗೆ ಬಲವಾಗಿ ಕಚ್ಚಿದೆ. ತಿನ್ನಲು ಯತ್ನಿಸಿ 100 ಮೀ. ದೂರದವರೆಗೂ ಎಳೆದುಕೊಂಡು ಹೋಗಿದೆ. ಆದರೆ, ತಿಂದಿಲ್ಲ. ಇದರಿಂದ ತೀವ್ರ ರಕ್ತಸ್ರಾವವಾಗಿದ್ದು, ರಾಜಶೇಖರ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರೈತರ ಆಕ್ರೋಶ: ಹುಲಿ ದಾಳಿಯಿಂದ ರೈತ ಸಾವಿಗೀಡಾದ ಸಂಗತಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೇ ಬಾರದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ…
ತಿಪಟೂರು: ತಿಪಟೂರು ನಗರಕ್ಕೆ ಹಾಸನ, ಅರಸೀಕೆರೆ, ಬೆಂಗಳೂರು, ಹುಳಿಯಾರು ಹಾಗೂ ತುರುವೇಕೆರೆ ಕಡೆಯಿಂದ ಪ್ರವೇಶಿಸಲು ಸಾಧ್ಯವಿದ್ದರೂ, ಈ ರಸ್ತೆಯಲ್ಲಿ ಪ್ರಯಾಣಿಸುವುದು ಮಾತ್ರ ಬಹಳ ಕಷ್ಟಕರ ಎನ್ನುವಂತಿದೆ ಈ ರಸ್ತೆಯ ಸ್ಥಿತಿ. ಹಾಲ್ಕುರಿಕೆ ರಸ್ತೆಯ ಗೋವಿನಪುರ, ಅಣ್ಣಾಪುರದ ಅಸುಪಾಸಿನಲ್ಲಿ ರಸ್ತೆ ಗುಂಡಿಗಳು ಎದುರಾಗುತ್ತವೆ. ತುರುವೇಕೆರೆ ದಿಕ್ಕಿನಿಂದ ಬರುವ ವಾಹನಗಳಿಗೆ ರೈಲ್ವೆ ಮಾರ್ಗದ ಬಳಿ ಗುಂಡಿಗಳ ಸಾಲು ವೆಲ್ ಕಂ ಮಾಡುತ್ತವೆ. ರಾತ್ರಿಯಂತೂ ರಸ್ತೆ ಗುಂಡಿಯಲ್ಲಿ ನೀರು ನಿಂತು ಗುಂಡಿಗೆ ಬಿದ್ದು ಎದ್ದು ಹೋಗುವ ದುಸ್ಥಿತಿ ಜನರದ್ದಾಗಿದೆ. ಬೆಂಗಳೂರು ಕಡೆಯಿಂದ ಬರುವಾಗ ಕೋಡಿ ವೃತ್ತದಿಂದಲೇ ರಸ್ತೆ ಸುಸಜ್ಜಿತವಾಗಿಲ್ಲ. ಯುಜಿಡಿ ನೀರು ಮಳೆ ನೀರಿನ ಜೊತ ಕಲೆತು ರಸ್ತೆ ಮೇಲೆ ಹರಿದು ದುರ್ವಾಸನೆ ಬೀರುತ್ತಿದೆ. ಚೆಂದನೇಹಳ್ಳಿ ಗಡಿಯಿಂದ ತಿಪಟೂರು ಹಾಸನ ರಸ್ತೆಯಲ್ಲಿ ಆಳವಾದ ಗುಂಡಿಗಳಿದ್ದು, ಹಲವು ಅಪಘಾತ ಇಲ್ಲಿ ನಡೆದಿವೆ. ಗ್ರಾಮಾಂತರ ಪ್ರದೇಶದಲ್ಲಿ ಬೋಚಿಹಳ್ಳಿ ಮತ್ತಿಘಟ್ಟ ಜಿಲ್ಲಾ ರಸ್ತೆ, ಬಳವವೇರಲು ಹೊಸೂರು ರಸ್ತೆ, ವಿಘ್ನಸಂತೆ ಗ್ರಾಮ, ಹಾಲ್ಕುರಿಕೆ ಬೈರಾಪುರ ರಸ್ತೆ, ಹಾಲೇನಹಳ್ಳಿಯ ತಿರುವುಗಳಲ್ಲಿ ಆಳವಾದ ಗುಂಡಿಗಳಾಗಿವೆ.…
ತುರುವೇಕೆರೆ: ಇಂದು ತುರುವೇಕೆರೆಯ ಪ್ರವಾಸಿಮಂದಿರದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಸಲುವಾಗಿ (ವ್ಯಾಪ್ತಿ — ತುಮಕೂರುˌ ಚಿತ್ರದುರ್ಗˌ ಚಿಕ್ಕಬಳ್ಳಾಪುರˌ ದಾವಣಗೆರೆˌ ಕೋಲಾರ) ಈ ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ಸ್ವಯಂಪ್ರೇರಿತರಾಗಿ ಬಂದು ತಮ್ಮ ತಮ್ಮ ತಾಲ್ಲೂಕು ಕಛೇರಿಯಲ್ಲಿ ನೋಂದಾಯಿಸಬೇಕೆಂದು ಡಿ.ಪಿ. ವೇಣುಗೋಪಾಲ್ ಮನವಿ ಮಾಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಭಾರತ ಚುನಾವಣಾ ಆಯೋಗವು ದಿನಾಂಕ 30.09.2025 ರಿಂದ ದಿನಾಂಕ 06.11.2025 ರವರೆಗೆ ಕಾಲಾವಕಾಶ ನಿಗದಿಪಡಿಸಿದ್ದು, ಎಲ್ಲಾ ಅರ್ಹ ಪದವೀಧರರು ನಮೂನೆ 18 ರಲ್ಲಿ ಪೂರಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಲು ಕೋರಿದರು. ಅಕ್ಟೋಬರ್ 30ಕ್ಕೆ ಪದವಿ ಉತ್ತೀರ್ಣರಾಗಿ ಮೂರು ವರ್ಷ ತುಂಬಿರಬೇಕು. ಈಗಾಗಲೇ ನೋಂದಣಿಯಾಗಿ ಮತದಾನ ಮಾಡಿದ ಪದವೀಧರರು ಮರು ನೋಂದಣಿ ಮಾಡಿಕೊಳ್ಳಬೇಕು. ಅರ್ಜಿಗಳನ್ನು ಸಲ್ಲಿಸಲು ಬೇಕಾದ ದಾಖಲೆಗಳು: 1) ಪದವಿ ಕಾನ್ವೋಕೇಶನ್ ಸರ್ಟಿಫಿಕೇಟ್ 2) ಆಧಾರ್ ಕಾರ್ಡ್ 3) ಚುನಾವಣಾ ಗುರುತಿನ…
ಕುಣಿಗಲ್: ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿ ರೈತರಿಂದ ನೇರವಾಗಿ ರಾಗಿ ಖರೀದಿ ಮಾಡಲಾಗುತ್ತಿದೆ ರಾಗಿ ಖರೀದಿ ಕೇಂದ್ರಗಳಲ್ಲಿ ರಾಗಿ ಬೋಕರ್ ಗಳ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಪ ಕೇಳಿಬಂದಿದೆ. ಇದನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಕಡಿವಾಣ ಹಾಕಬೇಕು ಇಲ್ಲ ಎಂದರೆ ಸಂಬಂಧಪಟ್ಟ ಅಧಿಕಾ ರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ಎಚ್ಚರಿಕೆ ನೀಡಿದರು. ಅವರು ಪಟ್ಟಡದ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ರೈತರು ಆರ್ಥಿಕವಾಗಿ ಸಬಲರಾಗಲಿ ಎಂದು ರೈತ ಬೆಳೆದಂತ ರಾಗಿಗೆ ಪ್ರತಿ ಕ್ವಿಂಟಾಲಿಗೆ 4,886 ರೂಗಳನ್ನು ನಿಗದಿ ಮಾಡಿದೆ ಪ್ರತಿ ರೈತರಿಂದ 1 ಎಕರೆಗೆ ಕನಿಷ್ಠ 10 ಕ್ವಿಂಟಾಲ್ ನಿಂದ ಗರಿಷ್ಠ 50 ಕ್ವಿಂಟಾಲ್ ಮೀರದಂತೆ ರಾಗಿಯನ್ನ ಖರೀದಿ ಮಾಡಲಾಗುವುದು, ಈ ಬಾರಿ ಸರ್ಕಾರ ಹದಿನೈದು ಕೋಟಿ ರೂ.ಗಳ ರಾಗಿಯನ್ನು ಖರೀದಿ ಮಾಡಲಾಗುತ್ತದೆ. ರಾಗಿ ಬೆಳೆದಂತಹ ರೈತರು ಉತ್ತಮ ಗುಣಮಟ್ಟದ ರಾಗಿಯನ್ನು ಖರೀದಿ ಕೇಂದ್ರಕ್ಕೆ ಹಾಕಬೇಕು, ರಾಗಿ…
ತುಮಕೂರು: ಅನುಸೂಚಿತ ಬುಡಕಟ್ಟು ಸಮುದಾಯದ ವಿರುದ್ಧ ಅವಮಾನಕಾರಿ, ಜಾತಿ ನಿಂದನೆ ಮಾಡಿದ ಮಾಜಿ ಸಂಸದ ರಮೇಶ್ ವಿಶ್ವನಾಥ ಕತ್ತಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಶುಕ್ರವಾರ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಅನುಸೂಚಿತ ಬುಡಕಟ್ಟು ಸಮುದಾಯದ ವಿರುದ್ಧ ಜಾತಿ ನಿಂದನೆ ಮಾಡಿದ ರಮೇಶ್ ಕತ್ತಿ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಹೇಳಿದ ಮುಖಂಡರು, ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು. ನಗರದ ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ಜಿ. ಪುರುಷೋತ್ತಮ್ ಮಾತನಾಡಿ, ಮಾಜಿ ಸಂಸದ ರಮೇಶ್ ಕತ್ತಿಯವರು ಬೆಳಗಾವಿಯಲ್ಲಿ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯ ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಅನುಸೂಚಿತ ಬುಡಕಟ್ಟು ಸಮುದಾಯವನ್ನು ಕೆಟ್ಟ ಪದಗಳಿಂದ ಅವಹೇಳಕಾರಿಯಾಗಿ ನಿಂದಿಸಿದ್ದರು. ಅವರ ವಿರುದ್ಧ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಬೇಕು ಎಂದು ಮನವಿ ಮಾಡಿದರು. ರಮೇಶ್ ಕತ್ತಿ ಬಳಸಿರುವ ಪದ…
ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾ ನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನವೆಂಬರ್ 8ರಂದು ಆಚರಿಸಲಾಗುವ “ಸಂತ ಶ್ರೇಷ್ಟ ಕನಕದಾಸರ ಜಯಂತ್ಯುತ್ಸವ” ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕುರುಬ ಸಮುದಾಯದ ಸಾಧಕರನ್ನು ಸನ್ಮಾನಿಸಲು ಉದ್ದೇಶಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸ್ವ ಬರಹದ ಅರ್ಜಿಯನ್ನು ನವೆಂಬರ್ 3ರೊಳಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಪಕ್ಕ ಬಾಳನಕಟ್ಟೆ, ತುಮಕೂರು ಇವರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ. 0816–2275204ನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತುಮಕೂರು: ಜಿಲ್ಲೆಯ ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗ್ರಂಥಾಲಯದಲ್ಲಿರುವ 15,025 ಹಳೆ/ಅನುಪಯುಕ್ತ ಪುಸ್ತಕಗಳನ್ನು ನವೆಂಬರ್ 3ರಂದು ಮಧ್ಯಾಹ್ನ 3 ಗಂಟೆಗೆ ಟೆಂಡ ಕಂ ಬಹಿರಂಗ ಹರಾಜು ಮೂಲಕ ಮಾರಾಟ ಮಾಡಲಾಗುವುದು. ಅರ್ಜಿ ನಮೂನೆಯನ್ನು ಅಕ್ಟೋಬರ್ 29ರವರೆಗೆ ಕಾಲೇಜಿನ ಪ್ರಾಂಶುಪಾಲರ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 31ರ ಸಂಜೆ 4 ಗಂಟೆಯೊಳಗೆ ಸಲ್ಲಿಸಬಹುದು ಎಂದು ಕಾಲೇಜು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC