Subscribe to Updates
Get the latest creative news from FooBar about art, design and business.
- 80ನೇ ಸ್ವಾತಂತ್ರ್ಯ ದಿನಾಚರಣೆ: ಹುತಾತ್ಮರ ಕನಸಿನ ಭಾರತ ನಿರ್ಮಿಸಲು ವಿದ್ಯಾರ್ಥಿಗಳಿಂದ ಪ್ರತಿಜ್ಞೆ!
- ಗಿರಿನಗರ ಸರ್ಕಾರಿ ಶಾಲೆ ಅಭಿವೃದ್ಧಿಗೆ ₹1 ಲಕ್ಷ ದೇಣಿಗೆ ಘೋಷಿಸಿದ ಸಮಾಜ ಸೇವಕ ಸದಾನಂದ
- ಪ್ರಾಣತ್ಯಾಗ ಬಲಿದಾನದಿಂದ ಬಂದ ಸ್ವಾತಂತ್ರ್ಯವನ್ನ ಇವತ್ತೀನ ಯುವ ಪೀಳಿಗೆ ಅರಿಯಬೇಕು: ತಹಶೀಲ್ದಾರ್ ಮಂಜುನಾಥ್
- ಬೀದರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ
- ಸ್ವಾತಂತ್ರ್ಯ ದಿನ ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ, ನಮ್ಮೆಲ್ಲರ ಹಬ್ಬ: ಪ್ರಾಂಶುಪಾಲ ಡಾ.ಶಶಿಕುಮಾರ್ ಎಚ್.ಸಿ.
- ಮಹಾರಾಜವಾಡಿಯಲ್ಲಿ ಅದ್ಧೂರಿಯಾಗಿ ಜರುಗಿದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ
- ತುಮಕೂರು: 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ — ಶ್ರೀಮಠ ಹಾಗೂ ಕ್ರೀಡಾಂಗಣದಲ್ಲಿ ಡಾ.ಜಿ.ಪರಮೇಶ್ವರ್ ಧ್ವಜಾರೋಹಣ
- ತುಮಕೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ
Author: admin
ವರದಿ: ಹಾದನೂರು ಚಂದ್ರ ಸರಗೂರು: ತಾಲೂಕಿನಾದ್ಯಂತ ಕಳೆದ ತಿಂಗಳಿಂದ ಕಾಡು ಪ್ರಾಣಿಗಳಿಂದ ದಾಳಿ ಹೆಚ್ಚಾಗಿದ್ದು ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಮತ್ತು ಪ್ರಾಣ ಹಾನಿ ಸಂಭವಿಸಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಎಚ್ಚೆತ್ತುಕೊಳ್ಳದೆ. ಹುಲಿ, ಚಿರತೆ, ಕಾಡಾನೆ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳದೇ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ವಿರುದ್ಧ ಬಿಜೆಪಿ ತಾಲೂಕು ಘಟಕದ ರೈತ ಮೋರ್ಚಾ ವತಿಯಿಂದ ಸರಗೂರು ಅರಣ್ಯ ವಲಯ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಸರ್ಕಾರ ಮತ್ತು ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಹಾಗೂ ತಾಲ್ಲೂಕು ಶಾಸಕ ಅನಿಲ್ ಚಿಕ್ಕಮಾದು ವಿರುದ್ಧ ಕಾಡುಪ್ರಾಣಿಗಳಿಂದ ರೈತರಿಗೆ ಆಗುತ್ತಿರುವ ತೊಂದರೆಗೆ ಸಚಿವರು ಹಾಗೂ ಶಾಸಕರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಗೌಡ ಮಾತನಾಡಿ, ಕಳೆದ ಒಂದು ವಾರದಿಂದ ಬಡಗಲಪುರ ಗ್ರಾಮದ ರೈತ ಮೇಲೆ ಹುಲಿ…
ಬೀದರ್: ಜಿಲ್ಲೆಯ ಔರಾದ್, ಹುಮನಾಬಾದ್, ಭಾಲ್ಕಿ ಸೇರಿದಂತೆ ನಾನಾ ಕಡೆ ಮಂಗಳವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಎಡೆಬಿಡದೆ ಮಳೆ ಸುರಿಯಿತು. ಸೋಮವಾರದಿಂದ ಮೋಡ ಕವಿದ ವಾತಾವರಣವಿದ್ದು, ತಣ್ಣನೆಯ ಗಾಳಿ ಬೀಸುತ್ತಿದೆ. ಸೋಮವಾರ ನಸುಕಿನ ಜಾವ ಕೆಲವೆಡೆ ವರ್ಷಧಾರೆ ಆಗಿದೆ. ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮೋಡ ಕವಿದ ವಾತಾವರಣ ಇತ್ತು. ನಂತರ ಮಳೆಯ ಕಣ್ಣಾಮುಚ್ಚಾಲೆ ಆಡುತ್ತಿದೆ. ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಭರದಿಂದ ಸಾಗಿದ್ದು, 1.51 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿದೆ. ಈಗಾಗಲೇ ಕೆಲವೆಡೆ ಶೇ.50ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಇನ್ನೂ ಕೆಲವೆಡೆ ಸೋಯಾಅವರೆ ರಾಶಿ ಮಾಡುವ ಕಾರ್ಯ ನಡೆಯುತ್ತಿದೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೀದರ್: ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆ ಬೀದರ್ ಹಾಗೂ ಬೋಸ್ಕೋ ಬೆಂಗಳೂರು ಮತ್ತು ಡಾನ್ ಬಾಸ್ಕೋ ಬೀದರ್ ಇವರ ಸಂಯುಕ್ತ ಆಶ್ರಯದಲ್ಲಿ ಪೋಷಕತ್ವ ಯೋಜನೆ ಜಾರಿಯಲ್ಲಿದೆ. ಆದ್ದರಿಂದ ಬೀದರ್ ಜಿಲ್ಲೆಯ ಜಲವಾಡದ ಅಂಗನವಾಡಿ 5ನೇ ಕೇಂದ್ರದಲ್ಲಿ ಪೋಷಕತ್ವ ಯೋಜನೆ ಕುರಿತು ಮಾಹಿತಿ ನೀಡಲಾಯಿತು. ಪೋಷಕತ್ವ ಯೋಜನೆ ಅಡಿಯಲ್ಲಿ ಮಗುವಿನ ಪಾಲನೆ ಘೋಷಣೆ ರಕ್ಷಣೆಗಾಗಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮತ್ತು ಬೋಸ್ಕೋ ಬೆಂಗಳೂರು ಮತ್ತು ಡಾನ್ ಬಾಸ್ಕೋ ಬೀದರ್ ಇವರ ಆದೇಶದ ಮೇರೆಗೆ ಈ ಕಾರ್ಯಕ್ರಮವನ್ನು ಬೀದರ ಜಿಲ್ಲೆಯ ಜನವಡ ಅಂಗನವಾಡಿಯಲ್ಲಿ ಹಮ್ಮಿಕೊಳ್ಳಲಾಯಿತು. ಪೋಷಕತ್ವ ಯೋಜನೆ ಎಂದರೆ, ಜೈವಿಕ ಕುಟುಂಬವಲ್ಲದ ಬೇರೊಂದು ಕುಟುಂಬಕ್ಕೆ ತಾತ್ಕಾಲಿಕ ಅಥವಾ ವಿಸ್ತರಿಸಲ್ಪಟ್ಟ ಅವಧಿಯವರೆಗೆ 2 ವರ್ಷಕ್ಕೆ ಮೀರದ ಅವಧಿಯವರೆಗೆ ಬಾಲ ನ್ಯಾಯ ಕಾಯ್ದೆ 2005ರ ಕಲಂ 44ರ ಪ್ರಕಾರ ಮಗುವನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಬೀದರ್ ಜಿಲ್ಲೆಯ ಡಾನ್ ಬೋಸ್ಕೋ ಪೋಷಕತ್ವ ಯೋಜನೆಯ ಸಂಯೋಜಕರಾದ ರಮೇಶ್ ಅವರು…
ತುಮಕೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ಆರಂಭದಲ್ಲೇ ‘ನವೆಂಬರ್ ಕ್ರಾಂತಿ’ ಎಂದು ಹೇಳಿಕೆ ನೀಡಿದ್ದ ಮಾಜಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಇದೀಗ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಮತ್ತೆ ಹೇಳಿಕೆ ನೀಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಯ್ಕೆ ಅಚ್ಚರಿ ಎಂಬಂತೆ ನಡೆಯಬಹುದು ಎಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಾಕಷ್ಟು ಸಲ ಅಚ್ಚರಿ ಎನ್ನುವಂತೆ ಮುಖ್ಯಮಂತ್ರಿ ಆಯ್ಕೆ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾವ ರೀತಿ ತೀರ್ಮಾನ ಆಗುತ್ತದೆ ಎಂದು ಹೇಳುವುದು ಕಷ್ಟ ಎಂದಿರುವ ಅವರು, ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾದ ಸಮಯದಲ್ಲೂ ರಾಜ್ಯದಲ್ಲಿ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು ಅಂತ ಉದಾಹರಣೆ ನೀಡಿದರು.. ಹೈಕಮಾಂಡ್ ತೀರ್ಮಾನದಂತೆ ಮೊಯ್ಲಿ ಮುಖ್ಯಮಂತ್ರಿಯಾದರು ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಸರಗೂರು: ತಾಲೂಕಿನ ಮುಳ್ಳೂರು ಸಮೀಪದ ಬೆಣ್ಣೆಗೆರೆಯ ರಾಜಶೇಖರ್ ಎಂಬವರನ್ನು ಬಲಿ ಪಡೆದಿದ್ದ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುವ ವೇಳೆಯೇ ಮುಳ್ಳೂರಿನಿಂದ ಸುಮಾರು 10 ಕಿ.ಮೀ. ದೂರದ ಹೀರೇಗೌಡನಹುಂಡಿ ಸಮೀಪ ಜಮೀನಿನಲ್ಲಿ ಹುಲಿಯೊಂದು ಪತ್ತೆಯಾಗಿದ್ದು, ಅದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ರಾಜಶೇಖರ್ ಅವರನ್ನು ಬಲಿ ಪಡೆದಿದ್ದ ಹುಲಿಯ ಸೆರೆಗೆ ಮಂಗಳವಾರವೂ ರೋಹಿತಾ, ಭೀಮಾ, ಮಹೇಂದ್ರ ಸಾಕಾನೆಗಳ ಮೂಲಕ ಬಂಡೀಪುರ ಅರಣ್ಯ ವ್ಯಾಪ್ತಿಯ ನುಗು, ಕಲ್ಕರೆ, ಯಡಿಯಾಲ ಉಪ ವಿಭಾಗದ ಸುಮಾರು 130ಕ್ಕೂ ಅಧಿಕ ಸಿಬ್ಬಂದಿ ಕೂಂಬಿಂಗ್ ಆರಂಭಿಸಿ ಹಂತಕ ಹುಲಿಗಾಗಿ ತೀವ್ರಶೋಧ ನಡೆಸುತ್ತಿರುವಾಗಲೇ, ಬೆಳಗ್ಗೆ ಸುಮಾರು 11 ಗಂಟೆಗೆ ವೇಳೆಗೆ ಸಮೀಪದ ಹೀರೇಗೌಡನ ಹುಂಡಿ ಬಳಿ ಸತೀಶ್ ಎಂಬವರ ಜಮೀನಿನಲ್ಲಿ ಹುಲಿಯೊಂದು ಕಾಣಿಸಿಕೊಂಡಿದ್ದು, ಈ ಬಗ್ಗೆ ಸ್ಥಳೀಯ ರೈತರು ನೀಡಿದ ಖಚಿತ ಮಾಹಿತಿ ಮೇರೆಗೆ ಕೂಡಲೇ ಸಾಕಾನೆಗಳನ್ನು ಸ್ಥಳಕ್ಕೆ ಕರೆತಂದ ಅರಣ್ಯ ಇಲಾಖೆ ಹುಲಿಗಾಗಿ ಶೋಧ ಆರಂಭಿಸಿದೆ. ಬಳಿಕ ಹುಲಿ ಚಲನವಲನಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹುಲಿಯು ಸಂಜೆ ಸುಮಾರು…
ಕೊರಟಗೆರೆ: ಕ್ರೀಡೆಯಲ್ಲಿ ಭಾಗವಹಿಸುವುದು ಮಹತ್ವದ್ದೇ ಹೊರೆತು, ಸೋಲು–ಗೆಲುವು ಮುಖ್ಯವಲ್ಲ. ಕ್ರೀಡಾಪಟುಗಳು ಶಿಸ್ತು, ಸಮಯವನ್ನು ಪಾಲಿಸಬೇಕು. ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಗೃಹ ಸಚಿವರ ವಿಶೇಷ ಅಧಿಕಾರಿ ಡಾ.ನಾಗಣ್ಣ ತಿಳಿಸಿದರು. ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಉಪನಿರ್ದೇಶಕರ ಕಾರ್ಯಾಲಯ ಮಧುಗಿರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕೊರಟಗೆರೆ ಇವರ ಸಹಯೋಗದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಯು/14 ಮತ್ತು ಯು/17 ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಧ್ವಜಾರೋಹಣ ನೆರವೇರಿಸಿ ಕ್ರೀಡಾಜ್ಯೋತಿ ಹಿಡಿದು ಕ್ರೀಡೆಗೆ ಚಾಲನೆ ನೀಡಿ ಮಾತನಾಡಿದರು. ಕ್ರೀಡಾ ಕ್ಷೇತ್ರ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಎಂದಿಗೂ ವಿಶೇಷ ಗೌರವವಿದೆ. ಅವರು ಸದಾ ಸ್ಪೂರ್ತಿದಾಯಕರಾಗಿರುತ್ತಾರೆ. ಮಕ್ಕಳು ಜಿಲ್ಲಾಮಟ್ಟದಲ್ಲಿ ಗೆಲುವು ಸಾಧಿಸಿ ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಸಾಧನೆ ತೋರಬೇಕು ಎಂದು ಹೇಳಿದರು. ಮಧುಗಿರಿ ಡಿಡಿಪಿಐ ಮಾಧವರೆಡ್ಡಿ ವಿ. ಕ್ರೀಡಾಕೂಟದ ಪ್ರಾಸ್ತಾವಿಕ ನುಡಿಗಳನ್ನಾಡಿ, ಕ್ರೀಡೆಯಲ್ಲಿ ಸೋಲು–ಗೆಲುವು ಎಲ್ಲರಿಗೂ ಇರುತ್ತದೆ. ಆದರೆ ಸತತ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳು ಶಿಸ್ತು, ಒಳ್ಳೆಯ ಪ್ರಯತ್ನ, ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕು…
ಔರಾದ್: ಕನ್ನಡ ನಾಮಫಲಕ ಕಡ್ಡಾಯವಾಗಿ ಅಳವಡಿಸುವಂತೆ ತಹಶೀಲ್ದಾರ್ ಮಹೇಶ ಪಾಟೀಲ್ ಮಂಗಳವಾರ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಸೂಚಿಸಿದರಲ್ಲದೇ, ಅನ್ಯ ಭಾಷೆಯಲ್ಲಿರುವುದನ್ನು ತೆರವುಗೊಳಿಸುವಂತೆ ಸೂಚಿಸಿದರು. ಸರ್ಕಾರ ಕನ್ನಡ ನಾಮಫಲಕ 60% ಕಡ್ಡಾಯವಾಗಿ ಇರಬೇಕೆಂದು ಆದೇಶಿಸಿದರು ಸಹ ಕ್ಯಾರೆ ಎನ್ನದ ಅಂಗಡಿ ಮಾಲೀಕರಿಗೆ ತಹಶೀಲ್ದಾರ್ ಸೇರಿದಂತೆ ಕರವೇ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಅಂಗಡಿಗಳಿಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ತಹಶೀಲ್ದಾರ್ ಮಹೇಶ್ ಪಾಟೀಲ್, ಸರ್ಕಾರದ ಆದೇಶ ಪ್ರತಿಯೊಬ್ಬರು ಪಾಲಿಸಬೇಕು. 60% ಕನ್ನಡದಲ್ಲಿರುವುದು ಕಡ್ಡಾಯ. ಕಡೆಗಣಿಸಿದರೇ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪಪಂ ಮುಖ್ಯಾಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದರು. ಈ ಸಂದರ್ಭದಲ್ಲಿ ಕರವೇ ತಾಲೂಕ ಅಧ್ಯಕ್ಷರು ಅನಿಲ ದೇವಕತ್ತೆ, ಕರವೇ ನಗರ ಘಟಕ ಅಧ್ಯಕ್ಷರು ಭೀಮ ಹೇಳವಿ, ಕರವೇ ಉಪಾಧ್ಯಕ್ಷರು ಕೇಶವ ಹಕ್ಕೇ, ಬಸವಕುಮಾರ ಚೌಕಂಪಲ್ಲೆ, ಕಪಿಲ್ ಹತ್ತಾಗಲೆ, ಧರಾಮ್ ಕಾಂಬಳೆ, ಏವನ್ ಕಾಂಬಳೆ, ರಾಹುಲ್ ಹೇಳವಿ, ಅಭಿಷೇಕ್ ಜಾಧವ ಹಾಗೂ ಕರವೇ ಕಾರ್ಯಕರ್ತರು…
ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾ ನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತಿಯಿಂದ ನವೆಂಬರ್ 11ರಂದು ಆಚರಿಸಲಾಗುವ “ಒನಕೆ ಓಬವ್ವ’ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಛಲವಾದಿ ಸಮುದಾಯದ ಸಾಧಕರನ್ನು ಸನ್ಮಾನಿಸಲು ಉದ್ದೇಶಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸ್ವ–ಬರಹದ ಅರ್ಜಿಯನ್ನು ನವೆಂಬರ್ 5ರೊಳಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಪಠ್ಯ ಬಾಳನಕಟ್ಟೆ, ತುಮಕೂರು ಇವರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ. 0816–2275204ನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಈಸ್ಟರ್ ಕು. ಮಿರ್ಜಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತುಮಕೂರು: ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 4ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತುಮಕೂರು: ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ) ತುಮಕೂರು ಇವರು ಅಕ್ಟೋಬರ್ 29 ರ ಬುಧವಾರ ಸಂಜೆ 6.30 ಗಂಟೆಗೆ ಡಾ.ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಸಾಹಿತಿ ಡಾ.ಚಂದ್ರಶೇಖರ ಪಾಟೀಲರ ಗೋಕರ್ಣದ ಗೌಡಶಾನಿ ರಂಗ ಪ್ರಯೋಗ ಹಮ್ಮಿಕೊಳ್ಳಲಾಗಿದೆ. ಕಳೆದ 20 ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಹೊಸ ನಾಟಕಗಳ ಪ್ರಯೋಗ ಹೊಸ ಕಲಾವಿದರಿಗೆ ತರಬೇತಿ ಮತ್ತು ನಾಟಕಗಳ ಪ್ರಯೋಗ, ನಾಟಕಗಳ ಕುರಿತ ಕಾರ್ಯಾಗಾರ, ವಿಚಾರ ಸಂಕಿರಣ ಹೀಗೆ ಹಲವು ಕಾರ್ಯಕ್ರಮಗಳ ಮೂಲಕ ರಂಗಭೂಮಿ ಉಳಿವಿಗೆ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ನಿರಂತರವಾಗಿ ತೊಡಗಿಕೊಂಡಿದೆ. ಇದರ ಮುಂದುವರಿದ ಭಾಗವಾಗಿ ಅಕ್ಟೋಬರ್ 29ರ ಬುಧವಾರ ಗೋಕರ್ಣದ ಗೌಡಶಾನಿ ನಾಟಕದ ಪ್ರಯೋಗವನ್ನು ಕೌಡುಮಾರನಹಳ್ಳಿ ಕಾಂತರಾಜು ಅವರ ಬೆಳಕು ಮತ್ತು ರಂಗವಿನ್ಯಾಸ ಹಾಗು ಶಿವಕುಮಾರ್ ತಿಮ್ಮಲಾಪುರ ಅವರ ನಿರ್ದೇಶನದಲ್ಲಿ ಆಯೋಜಿಸಲಾಗಿದೆ. ಗೋಕರ್ಣದ ಗೌಡಶಾನಿ ರಂಗಪ್ರಯೋಗದ ಪ್ರೇರಕ ಗಣ್ಯರಾಗಿ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ, ಹೆಣ್ಣೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್.ಅಕ್ಕಮ್ಮ, ಕವಿಗಳು ಮತ್ತು ಕನ್ನಡ ಅಧ್ಯಾಪಕರಾದ ಡಾ.ಶಿವಣ್ಣ…