Subscribe to Updates
Get the latest creative news from FooBar about art, design and business.
- 80ನೇ ಸ್ವಾತಂತ್ರ್ಯ ದಿನಾಚರಣೆ: ಹುತಾತ್ಮರ ಕನಸಿನ ಭಾರತ ನಿರ್ಮಿಸಲು ವಿದ್ಯಾರ್ಥಿಗಳಿಂದ ಪ್ರತಿಜ್ಞೆ!
- ಗಿರಿನಗರ ಸರ್ಕಾರಿ ಶಾಲೆ ಅಭಿವೃದ್ಧಿಗೆ ₹1 ಲಕ್ಷ ದೇಣಿಗೆ ಘೋಷಿಸಿದ ಸಮಾಜ ಸೇವಕ ಸದಾನಂದ
- ಪ್ರಾಣತ್ಯಾಗ ಬಲಿದಾನದಿಂದ ಬಂದ ಸ್ವಾತಂತ್ರ್ಯವನ್ನ ಇವತ್ತೀನ ಯುವ ಪೀಳಿಗೆ ಅರಿಯಬೇಕು: ತಹಶೀಲ್ದಾರ್ ಮಂಜುನಾಥ್
- ಬೀದರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ
- ಸ್ವಾತಂತ್ರ್ಯ ದಿನ ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ, ನಮ್ಮೆಲ್ಲರ ಹಬ್ಬ: ಪ್ರಾಂಶುಪಾಲ ಡಾ.ಶಶಿಕುಮಾರ್ ಎಚ್.ಸಿ.
- ಮಹಾರಾಜವಾಡಿಯಲ್ಲಿ ಅದ್ಧೂರಿಯಾಗಿ ಜರುಗಿದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ
- ತುಮಕೂರು: 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ — ಶ್ರೀಮಠ ಹಾಗೂ ಕ್ರೀಡಾಂಗಣದಲ್ಲಿ ಡಾ.ಜಿ.ಪರಮೇಶ್ವರ್ ಧ್ವಜಾರೋಹಣ
- ತುಮಕೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ
Author: admin
ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಹೊಸಳ್ಳಿ ಚಂದ್ರಪ್ಪನವರ ನೇತೃತ್ವದಲ್ಲಿ ನಡೆಯುತ್ತಿರುವ ಆಹೋರಾತ್ರಿ ಧರಣಿ 22 ನೇ ದಿನಕ್ಕೆ ತಲುಪಿದ್ದು, ಕರ್ನಾಟಕ ರಾಜ್ಯ ರೈತ ಸಂಘವು ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯಧ್ಯಕ್ಷರಾದ ಈಚಘಟ್ಟದ ಸಿದ್ಧವೀರಪ್ಪ ಅವರು, ಪಟ್ಟಣ ಪಂಚಾಯಿತಿ ಮತ್ತು ಸರ್ಕಾರಗಳ ಡಕಾಯತಿಯಂತಹ ತೆರಿಗೆ ನೀತಿಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯಿತಿ ಸಂತೆ ಮೈದಾನದಲ್ಲಿ ವ್ಯಾಪಾರ ಮಾಡುವವರಿಗೆ ಕುಡಿಯುವ ನೀರು, ನೆರಳಿಗಾಗಿ ಮೇಲ್ಛಾವಣಿ, ಶೌಚಾಲಯ ಮತ್ತು ವಿಶ್ರಾಂತಿ ಸೌಲಭ್ಯಗಳಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ತೆರಿಗೆ ವಸೂಲಿ ಮಾಡುವುದು ಸಾರ್ವಜನಿಕರನ್ನು ಡಕಾಯಿತಿ ಮಾಡುವ ಕೆಲಸ ಎಂದು ಸಿದ್ಧವೀರಪ್ಪ ತೀವ್ರವಾಗಿ ಟೀಕಿಸಿದರು. ರೈತರು ತಂದ ಸರಕಿಗೆ ರೈತನಿಂದ ಒಂದು ತೆರಿಗೆ ಮತ್ತು ಅದನ್ನು ಮಾರಾಟ ಮಾಡುವ ವ್ಯಾಪಾರಿಯಿಂದ ಇನ್ನೊಂದು ತೆರಿಗೆ ಒಂದೇ ಸರಕಿನ ಮೇಲೆ ಎರಡು ಬಾರಿ ತೆರಿಗೆ ಸಂಗ್ರಹಿಸುವ ಈ ಡಬಲ್ ತೆರಿಗೆ ನೀತಿ ಅಥವಾ ದರೋಡೆಕೋರತನ ಕೂಡಲೇ…
ಕೊರಟಗೆರೆ: ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ ಸಿ ಅನಂತರಾಮ್ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ 2025–26ನೇ ಸಾಲಿನ ತಾಲ್ಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸಭೆ ನಡೆಯಿತು. ತಾಲ್ಲೂಕು ರಾಜ್ಯೋತ್ಸವ ಆಯ್ಕೆ ಸಮಿತಿಯ ಸಭೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಒಟ್ಟು 31 ಅರ್ಜಿಗಳು ಸ್ವೀಕೃತವಾಗಿದ್ದು, ಈ ಅರ್ಜಿಗಳಲ್ಲಿ ರಂಗಭೂಮಿ ಕ್ಷೇತ್ರಕ್ಕೆ 10, ಸಮಾಜ ಸೇವೆ/ ಸಾಮಾಜಿಕ ಹೋರಾಟಗಾರರು ಕ್ಷೇತ್ರಕ್ಕೆ 04, ಕನ್ನಡ ಸಾಹಿತ್ಯ / ಸಂಶೋಧನೆ ಕ್ಷೇತ್ರಕ್ಕೆ 03, ಕ್ರೀಡಾ/ ಯೋಗಾ ಕ್ಷೇತ್ರಕ್ಕೆ 02, ಕಲೆ/ ಸಂಗೀತ/ ಜನಪದ ಕ್ಷೇತ್ರಕ್ಕೆ 03, ಪತ್ರಿಕಾ ರಂಗ 03, ಆಡಳಿತ ಕ್ಷೇತ್ರ 02, ಕನ್ನಡ ಪರ ಹೋರಾಟಗಾರರು ಕ್ಷೇತ್ರಕ್ಕೆ 04 ರಂತೆ ಅರ್ಜಿಗಳು ಸ್ವೀಕೃತವಾಗಿರುವುದಾಗಿ ಸಭೆಗೆ ಮಾಹಿತಿ ನೀಡಿದರು. ಹಾಗೂ ಈ ಅರ್ಜಿಗಳಲ್ಲಿ 2025-26ನೇ ಸಾಲಿಗೆ ಒಟ್ಟು 14 ಅರ್ಜಿಗಳನ್ನು ಆಯ್ಕೆ ಮಾಡಬೇಕಾಗಿದ್ದು, ಪ್ರತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಕನ್ನಡ ರಾಜ್ಯೋತ್ಸವದ ವಿಶೇಷ ಆಚರಣೆಗಾಗಿ 14 ಜನರನ್ನು ಮಾತ್ರ…
ಸರಗೂರು: ತಾಲೂಕಿನ ಬಿ ಮಟಕರೆ ಗ್ರಾಪಂ ವ್ಯಾಪ್ತಿಯ ಕಾಡು ಬೇಗೂರು ಗ್ರಾಮದಲ್ಲಿರುವ ದಲಿತರ ಸ್ವಾಧೀನದಲ್ಲಿರುವ ಜಮೀನನ್ನು ಕಾಡು ಬೇಗೂರು ಗ್ರಾಮದ ದಾಸಪ್ಪ ಮತ್ತು ಮಕ್ಕಳು ಕಿತ್ತುಕೊಳ್ಳಲು ಯತ್ನಿಸುತ್ತಿದ್ದಾರೆ, ತೊಂದರೆ ನೀಡುತ್ತಿದ್ದಾರೆ ಎಂದು ಅದೇ ಗ್ರಾಮದ ನೊಂದ ಕುಟುಂಬದವರು ಗುರುವಾರ ಹುಣಸೂರು ಉಪವಿಭಾಗಾಧಿಕಾರಿ ಕಚೇರಿಯ ತಹಶೀಲ್ದಾರ್ ಯದುಗೀರಿಶ್ ಅವರಿಗೆ ದೂರು ಸಲ್ಲಿಸಿದರು. ನಂತರ ಮಾತನಾಡಿದ ದಲಿತ ಮಹಿಳೆ ಲತಾ, ಗ್ರಾಮದ ನನ್ನ ದೊಡ್ಡಪ್ಪನ ಹೆಸರಿನಲ್ಲಿ ಪುಟ್ಟಕಾಂತಯ್ಯ ಬಿನ್ ಲೇಟ್ ದಾಸಯ್ಯರವರಿಗೆ ದಿನಾಂಕ 02—11–1983 ರಂದು ಸರ್ಕಾರವು ಕಾಡುಬೇಗೂರು ಗ್ರಾಮದ ಸರ್ವೆ ನಂಬರು 6ರ ವಿಸ್ತೀರ್ಣ 4 ಎಕರೆ ಜಮೀನನ್ನು ಎಲ್ ಎನ್ ಡಿ.4/134/1971-72ರಂದು ಎಲ್ ಎನ್ ಡಿ.(ಎಸ್.ಇ.)ನಂ.12/12/1983–84ರಂದು ಸರ್ಕಾರವು ದರಖಾಸ್ತು ಮೂಲಕ ಉಚಿತವಾಗಿ ಸಾಗುವಳಿ ಚೀಟಿ ನೀಡಿ ಅದೇ ದಿನವೇ ಸ್ವಾಧೀನಾನುಭವ ನೀಡಿರುತ್ತಾರೆ. ನಾನು ಗ್ರಾಮೀಣ ಪ್ರದೇಶದ ಮುಗ್ಧ ಮಹಿಳೆಯಾಗಿರುತ್ತೇನೆ ಹಾಗೂ ಪರಿಶಿಷ್ಟ ಜಾತಿ ಆದಿ ಕರ್ನಾಟಕ ಜನಾಂಗಕ್ಕೆ ಸೇರಿದವಳಾಗಿರುತ್ತೇನೆ ಹಾಗೂ ಅವಿದ್ಯಾವಂತ ಮುಗ್ಧ ಮಹಿಳೆಯಾಗಿರುತ್ತೇನೆ. ಹಾಗೂ ಹಲವಾರು ಷರತ್ತುಗಳನ್ನು ನೀಡಿ ಮಂಜೂರು…
ಬೀದರ್: ಡಾನ್ ಬಾಸ್ಕೋ ಐಟಿಐ ಕಾಲೇಜಿನಲ್ಲಿ ಅಕ್ಟೋಬರ್ 29, 2025 ರಂದು ಹೊಸ ಟೈಲರಿಂಗ್ ತರಗತಿಯ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಬ್ಯಾಚ್ 30 ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾನ್ ಬಾಸ್ಕೋ ಬೀದರ್ ನ ನಿರ್ದೇಶಕ ರೆವರೆಂಡ್ ಫಾದರ್ ಸ್ಟೀವನ್ ಎಲ್. ಮತ್ತು ಬೀದರ್ ಡಾನ್ ಬಾಸ್ಕೋ ಐಟಿಐ ಕಾಲೇಜಿನ ಪ್ರಾಂಶುಪಾಲ ರೆವರೆಂಡ್ ಫಾದರ್ ಮ್ಯಾಥ್ಯೂ ಉಪಸ್ಥಿತರಿದ್ದರು. ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು, ನಂತರ ದೀಪ ಬೆಳಗಿಸಲಾಯಿತು. ರೆವರೆಂಡ್ ಫಾದರ್ ಸ್ಟೀವನ್ ಎಲ್. ಮಾತನಾಡಿ, ಈ ಉಪಕ್ರಮವನ್ನು ಶ್ಲಾಘಿಸಿದರು ಮತ್ತು ಭಾಗವಹಿಸುವ ಮಹಿಳೆಯರು ಸ್ವಾವಲಂಬಿಗಳಾಗಿರಬೇಕು ಮತ್ತು ಕೌಶಲ್ಯ ಅಭಿವೃದ್ಧಿಯ ಮೂಲಕ ಉಜ್ವಲ ಭವಿಷ್ಯವನ್ನು ನಿರ್ಮಿಸಬೇಕು ಎಂದು ಪ್ರೋತ್ಸಾಹಿಸಿದರು. ಮಹಿಳಾ ಸಬಲೀಕರಣ ಮತ್ತು ಸ್ವಾತಂತ್ರ್ಯವನ್ನು ಉತ್ತೇಜಿಸುವಲ್ಲಿ ವೃತ್ತಿಪರ ಶಿಕ್ಷಣದ ಮಹತ್ವವನ್ನು ಅವರು ಒತ್ತಿ ಹೇಳಿದರು. ರೆವರೆಂಡ್ ಫಾದರ್ ಮ್ಯಾಥ್ಯೂ ಮಾತನಾಡಿದರು. ಟೈಲರಿಂಗ್ ತರಗತಿಯ ಉದ್ಘಾಟನೆ ಅನೇಕ ಮಹಿಳೆಯರಿಗೆ ಸ್ವಾವಲಂಬಿ ಭವಿಷ್ಯದ ಕನಸನ್ನು ಮೂಡಿಸಿದೆ. ವರದಿ: ಅರವಿಂದ ಮಲ್ಲಿಗೆ, ಬೀದರ್…
ಬೀದರ್: ಜಿಲ್ಲೆಯ ಗ್ರಾಮ ಪಂಚಾಯತಿ ಚುನಾಯಿತ ಅಧ್ಯಕ್ಷರ ಅಧಿಕಾರ ಚಲಾಯಿಸಿದ ಆರೋಪದಡಿ ಔರಾದ್ ತಾಲ್ಲೂಕಿನ ಹೆಡಗಾಪುರ ಗ್ರಾಮ ಪಂಚಾಯತ್ ಪಿಡಿಒ ಮಹಾಲಕ್ಷ್ಮಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ್ ಬದೋಲೆ ಅವರು ಆದೇಶ ಹೊರಡಿಸಿದ್ದಾರೆ. ‘ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯನ್ನು ಕಾನೂನು ಬಾಹಿರವಾಗಿ/ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ–1993ರ ನಿಯಮಗಳನ್ನು ಉಲ್ಲಂಘಿಸಿ ಸಾಮಾನ್ಯ ಸಭೆಯನ್ನು ಜರುಗಿಸಿರುವ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಜೇಮ್ಸ್ ಅವರು ದೂರು ಸಲ್ಲಿಸಿದ್ದರು. ಪಂಚಾಯತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳದೆ ಅಧ್ಯಕ್ಷೆ, ಪಿಡಿಒ ಇಬ್ಬರೂ ಸೇರಿ ಸರ್ಕಾರದ ಹಣ ಲೂಟಿ ಮಾಡಿರುವುದಾಗಿ ಮತ್ತು ಗ್ರಾ.ಪಂ. ನಡವಳಿಯನ್ನು ಮನಸ್ಸಿಗೆ ಬಂದಂತೆ ಪಾಸು ಮಾಡಿರುವುದಾಗಿ ಹಾಗೂ ಸದರಿ ವಿಷಯದ ಕುರಿತು ವಿಚಾರಿಸಿದಾಗ ನನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿರುವುದಾಗಿ ಉಪಾಧ್ಯಕ್ಷ ಸೈಯದ್ ಶರಫೋದೀನ್ ಅವರು ದೂರು ಸಲ್ಲಿಸಿದ್ದರು. ಈ ದೂರಿನ್ವಯ ಜಿ.ಪಂ.ಆಡಳಿತ ವಿಭಾಗದ ಸಹಾಯಕ ನಿರ್ದೇಶಕ (ಆಡಳಿತ) ಜಯಪ್ರಕಾಶ…
ಬೆಂಗಳೂರು: ಚಳಿಗಾಲದ ರೇಸ್ ಗಾಗಿ ಬೆಂಗಳೂರು ಟರ್ಫ್ ಕ್ಲಬ್ ಸಿದ್ಧತೆ ನಡೆಸುತ್ತಿದ್ದು, ಕುಣಿಗಲ್ ಗೆ ಸ್ಥಳಾಂತರಗೊಳ್ಳಲು ರಾಜ್ಯ ಸರ್ಕಾರದ ಅಧಿಕೃತ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಬಿಟಿಸಿ ಅಧ್ಯಕ್ಷ ಮಂಜುನಾಥ ರಮೇಶ್ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಸ್ಥಳಾಂತರಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಕುಣಿಗಲ್ ಗೆ ಸ್ಥಳಾಂತರಗೊಳ್ಳುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ. ನಾವು ಸರ್ಕಾರದ ಸೂಚನೆಗಳನ್ನು ಪಾಲನೆ ಮಾಡಬೇಕಿದೆ ಎಂದು ಪುಣೆಯ ಪೂನವಲ್ಲಾ ಸ್ಟಡ್ ಫಾರ್ಮ್ಸ್‌ನ ಜವರಾಯ್ ಎಸ್ ಪೂನವಲ್ಲಾ ಅವರು ಹೇಳಿದ್ದಾರೆ. ಇದೇ ವೇಳೆ 2 ವರ್ಷಗಳಲ್ಲಿ ಕುಣಿಗಲ್ ಗೆ ಸ್ಥಳಾಂತರಗೊಳ್ಳುತ್ತಿರುವ ಬಗ್ಗೆಯೂ ಮಾಹಿತಿ ನೀಡಿದರು. ಬಿಟಿಸಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸುಮಾರು 80 ಎಕರೆ ಭೂಮಿಯಲ್ಲಿ ಆರು ಎಕರೆಗಳನ್ನು ಕ್ಲಬ್‌ನ ಆಡಳಿತಾತ್ಮಕ ಕಾರ್ಯಗಳನ್ನು ಮತ್ತು ಇತರ ಚಟುವಟಿಕೆಗಳನ್ನು ನಿರ್ವಹಣೆಗೆ ಬಿಟ್ಟುಕೊಡಲು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆಂದು ತಿಳಿಸಿದರು. ಇದೇ ವೇಳೆ ವಿಂಟರ್ ರೇಸ್ ಕುರಿತಂತೆಯೂ ಮಾಹಿತಿ ನೀಡಿದರು. ಜಿಎಸ್‌ಟಿ 2.0 ಅನುಷ್ಠಾನದ ನಂತರ, ನಾವು ರೇಸ್ ಗಳನ್ನು ನಡೆಸುವ…
ಶಿರಾ: ತಾಲೂಕಿನ ಪ್ರಮುಖ ಬೆಳೆಯಾಗಿರುವ ಶೇಂಗಾ ಮಳೆಯಾಗದ ಹಿನ್ನೆಲೆ ಇಳುವರಿ ಕುಂಠಿತಗೊಂಡಿದೆ. ಪ್ರತಿ ಬಾರಿ ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದಾಗಿ ಶೇಂಗಾ ಬೆಳೆಗಾರರು ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾದರೂ ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಶೇಂಗಾ ಬಿತ್ತನೆ ಕಡಿಮೆಯಾಗಿದೆ. 25,040 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯ ಗುರಿ ಇದ್ದರೂ ಕೇವಲ 15,715 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿತ್ತು. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳ ಅರ್ಧ ಭಾಗ ಮಳೆಯಾಗದ ಕಾರಣ ರೈತರು ಶೇಂಗಾ ಬದಲು ರಾಗಿಯತ್ತ ಒಲವು ತೋರಿದ್ದು, 12,913 ಹೆಕ್ಟೇರ್ ನಲ್ಲಿ ರಾಗಿ ಬಿತ್ತನೆಯಾಗಿದೆ. ಶೇಂಗಾ ಬಿತ್ತನೆಯ ಸಮಯದಲ್ಲಿ ಮಳೆ ಬಂದಿದ್ದು ಬಿಟ್ಟರೆ ನಂತರ ಎರಡು ತಿಂಗಳು ಮಳೆ ಇಲ್ಲದೆ ಗಿಡ ಒಣಗುವಂತಾಗಿತ್ತು. ಕೆಲವೆಡೆ ಎಲೆ ಚುಕ್ಕೆ ರೋಗದಿಂದ ಗಿಡಗಳು ಒಣಗಿ ಅವುಗಳನ್ನು ಕೀಳಲು ಹರಸಾಹಸ ಪಡುವಂತಾಯಿತು. ಈಗಾಗಲೇ ಶೇ 80ರಷ್ಟು ಶೇಂಗಾ ಕಟಾವು ಮುಗಿದಿದೆ. ಅಕ್ಟೋಬರ್ ತಿಂಗಳಲ್ಲಿ ಸತತ ಮಳೆಯಿಂದಾಗಿ ಶೇಂಗಾ ಬಿಡಿಸಲು ಸಾಧ್ಯವಾಗದೆ…
ತಿಪಟೂರು: ಪದವೀಧರರ ಕ್ಷೇತ್ರದ ಚುನಾವಣೆಗೆ ಮತದಾನ ಮಾಡಲು ಈ ಹಿಂದೆ ಹೆಸರು ಸೇರಿಸಿದ್ದರೂ ಮತ್ತೆ ನೊಂದಣಿಗೆ ಅಗತ್ಯವಿದೆ, ತಪ್ಪದೆ ನೋಂದಾಯಿಸಿಕೊಳ್ಳುವಂತೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ತೀರ್ಥ ಕುಮಾರ್ ತಿಳಿಸಿದರು. ತಿಪಟೂರು ತಾಲೂಕು ಸೇರಿದಂತೆ ತುಮಕೂರು ಜಿಲ್ಲೆಯ ಪದವೀಧರರ ನೋಂದಣಿ ಪ್ರಕ್ರಿಯೆ ಕುಂಠಿತವಾಗಿದೆ ಇಡೀ ಜಿಲ್ಲೆಯಲ್ಲಿ ಇದುವರೆಗೂ ಶೇಕಡ 25 ರಿಂದ 35ರಷ್ಟು ಮಾತ್ರ ನೋಂದಣಿಯಾಗಿದೆ ಎಂದು ತಿಳಿಸಿದರು. ನವೆಂಬರ್ 6 ನೋಂದಣಿಗೆ ಕೊನೆಯ ದಿನವಾಗಿದ್ದು ಅಷ್ಟರಲ್ಲಿ ಎಲ್ಲಾ ಪದವೀಧರರು ನೊಂದಣಿ ಮಾಡಿಸಲು ಮನವಿ ಮಾಡಿದ ರುತೀರ್ಥ ಕುಮಾರ ಅವರು ಚುನಾವಣೆ ಆಯೋಗ ಕೊನೆಯ ದಿನಾಂಕವನ್ನು ವಿಸ್ತರಿಸಬೇಕೆಂದು ಮನವಿ ಮಾಡಿದರು. ವರದಿ: ಆನಂದ್, ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತಿಪಟೂರು: ತಾನು ಬರೆದ ಪತ್ರಕ್ಕೆ ಸ್ಪಂದಿಸಿ ಸಿಎಂ ಸಿದ್ದರಾಮಯ್ಯನವರು ರಾಜ್ಯ ಸರ್ಕಾರದ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ರಕ್ಷಣಾ ಯೋಜನೆ ಸಹಕಾರ ಇಲಾಖೆಯ ಯಶಸ್ವಿನಿ ಟ್ರಸ್ಟಿಯಾಗಿ ತಾಲೂಕು ಕುಮಾರ ಆಸ್ಪತ್ರೆಯ ವೈದ್ಯ ಡಾ. ಶ್ರೀಧರ್ ನೇಮಕ ಹಿಂಪಡೆದ ಕ್ರಮ ಸ್ವಾಗತ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಬಿ.ಶಶಿಧರ್ ತಿಳಿಸಿದರು. ಯಶಸ್ವಿನಿ ಟ್ರಸ್ಟಿಯನ್ನಾಗಿ ಆರ್ ಎಸ್ ಎಸ್ ಕಾರ್ಯಕರ್ತರನ್ನು ನೇಮಿಸಿ ಆದೇಶ ಹೊರಡಿಸಿದ್ದ ನೇಮಕಕ್ಕೆ ನಮ್ಮ ತಿಪಟೂರು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಸಹಕಾರ ನೀಡಿದ್ದು. ಇದು ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿತ್ತು. ಈ ಬಗ್ಗೆ ನಾನು ಬರೆದಿದ್ದ ಪತ್ರಕ್ಕೆ ಸ್ಪಂದಿಸಿದ ಸಿಎಂ ಆದೇಶ ಹಿಂಪಡೆದುಕಾಂಗ್ರೆಸ್ ಕಾರ್ಯಕರ್ತರಲ್ಲಿ ನೈತಿಕ ಬಲ ಹೆಚ್ಚಿಸಿದೆ ಮತ್ತು ಆರ್ ಎಸ್ ಎಸ್ ಅಲ್ಲದೆ ಯಾವುದೇ ವ್ಯಕ್ತಿಯನ್ನು ಟ್ರಸ್ಟಿಯನ್ನಾಗಿ ಮಾಡಿದರೆ ನಮಗೆ ಯಾವುದೇ ತಕರಾರಿಲ್ಲ ಎಂದು ಸಿ.ಬಿ.ಶಶಿಧರ್ ತಿಳಿಸಿದರು. ವರದಿ: ಆನಂದ್, ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ತುಮಕೂರು: ಕೃತಕ ಬುದ್ಧಿಮತ್ತೆಯನ್ನು (ಎ.ಐ.) ಸಾಕಷ್ಟು ಎಚ್ಚರಿಕೆ, ಬುದ್ಧಿವಂತಿಕೆಯಿಂದ ಬಳಸಬೇಕಿದೆ ಎಂದು ಕಂಪ್ಯೂಟರ್ ತಜ್ಞ ಪ್ರೊ.ಕೆ.ಪಿ.ರಾವ್ ಸಲಹೆ ಮಾಡಿದರು. ತುಮಕೂರು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರೊ.ಕಮಲಾ ಹಂಪನಾ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕೃತಕ ಬುದ್ಧಿಮತ್ತೆ ಮತ್ತು ಸಾಹಿತ್ಯ ಕುರಿತು ಮಾತನಾಡಿದರು. ತಂತ್ರಜ್ಞಾನ ಕತ್ತಿಯ ಅಲಗಿನ ಹಾಗೆ. ಅದಕ್ಕೆ ಎರಡೂ ರೀತಿಯ ಬಳಕೆ ಗೊತ್ತಿದೆ. ನಾವು ಅದರ ಧನಾತ್ಮಕ ಆಯಾಮವನ್ನು ನೋಡಬೇಕು. ಕೃತಕ ಬುದ್ಧಿಮತ್ತೆ ಮಾನವ ಜನಾಂಗಕ್ಕೆ ವರವಾಗಿ ಪರಿಣಮಿಸುವಂತೆ ನೋಡಿಕೊಳ್ಳಬೇಕು. ಇದು ಮನುಷ್ಯನ ಉನ್ನತಿಗಾಗಿಯೇ ಹೊರತು, ಅವನತಿಗಾಗಿ ಅಲ್ಲ ಎಂಬುದನ್ನು ಅರಿಯಬೇಕು ಎಂದು ಹೇಳಿದರು. ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಇಂಗ್ಲಿಷ್ ಭಾಷೆಯಲ್ಲಿ ಸಾಕಷ್ಟು ಕೆಲಸಗಳಾಗಿವೆ. ಕನ್ನಡವೂ ಸೇರಿದಂತೆ ಭಾರತದ ಸಾಕಷ್ಟು ಭಾಷೆಗಳಲ್ಲಿ ಆಗಿರುವ ಕೆಲಸ ಏನೇನೂ ಸಾಲದು. ಆ ಬಗ್ಗೆ ಮತ್ತಷ್ಟು ಪ್ರಯತ್ನಗಳು ನಡೆಯಬೇಕಿದೆ ಎಂದರು. ಶಾಂತ ಪರಿಸ್ಥಿತಿಯಲ್ಲಿ ಹೊಸತು ಅನ್ವೇಷಣೆ ಆಗುವುದಿಲ್ಲ. ಅದಕ್ಕೆ ಒಂದು ಬಗೆಯ ಸಂಘರ್ಷ ಬೇಕು. ಇದು ಮನುಷ್ಯನ ಸ್ವಭಾವ. ಆದರೆ ಕಂಪ್ಯೂಟರ್‌ಗೆ ಅಂತಹ ಸಮಸ್ಯೆ ಇಲ್ಲ…