Author: admin

ಚಿಕ್ಕಮಗಳೂರು: 7 ವರ್ಷದ ಮಗಳು ಸೇರಿ ಒಂದೇ ಮನೆಯಲ್ಲಿದ್ದ ಮೂವರಿಗೆ ಗುಂಡು ಹಾರಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಖಾಂಡ್ಯಾ ಸಮೀಪದ ಮಾಗಲು ಗ್ರಾಮದಲ್ಲಿ ನಡೆದಿದೆ. ಅತ್ತೆ ಜ್ಯೋತಿ(50), ನಾದಿನಿ ಸಿಂಧು(26), ಮಗಳು ಖುಷಿ(7) ಹತ್ಯೆಗೀಡಾದವರಾಗಿದ್ದಾರೆ. ಖುಷಿಯ ತಂದೆ ರತ್ನಾಕರ್ ಎಂಬಾತ ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ರತ್ನಾಕರ್ ನ ಪತ್ನಿ 2 ವರ್ಷಗಳ ಹಿಂದೆ ಮೋಸ ಮಾಡಿ ಹೋಗಿದ್ದಳು. ಶಾಲೆಯಲ್ಲಿ ಸಹಪಾಠಿಗಳು ನಿಮ್ಮ ಅಮ್ಮ ಎಲ್ಲಿ ಎಂದು ಮಗಳ ಬಳಿ ವಿಚಾರಿಸಿದಾಗ ನೊಂದ ಮಗಳು ತಂದೆಯ ಬಳಿ ಹೇಳಿಕೊಂಡಿದ್ದಾಳೆ. ಮಗಳು ತನ್ನ ಅಮ್ಮನ ಫೋಟೋವನ್ನು ಆಲ್ಬಾಂನಿಂದ ತೆಗೆದುಕೊಂಡು ಹೋಗಿ ಶಾಲೆಯಲ್ಲಿ ಸಹಪಾಠಿಗಳಿಗೆ ತೋರಿಸಿದ್ದಳು ಎಂದು ಹತ್ಯೆಯ ಬಳಿಕ ರತ್ನಾಕರ್ ಸೆಲ್ಫಿ ವಿಡಿಯೋ ಮಾಡಿಟ್ಟಿದ್ದಾನೆ. ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…

Read More

ತುಮಕೂರು: ವೈಜ್ಞಾನಿಕ ಅನ್ವೇಷಣೆಗಳು ತಕ್ಷಣ ಯಶಸ್ಸನ್ನು ನೀಡುವುದಿಲ್ಲ. ವೈಫಲ್ಯ ಮತ್ತು ಪ್ರತಿಕೂಲತೆಗಳು ಪ್ರಯಾಣದ ಒಂದು ಭಾಗವಾಗಿರುತ್ತವೆ. ನಿಜವಾದ ಜೈವಿಕಾಣುಶಾಸ್ತ್ರಜ್ಞನು ಸಹನಶೀಲತೆ, ಧೈರ್ಯ, ಮತ್ತು ನಿರಂತರ ಪರಿಶ್ರಮದಿಂದ ಯಶಸ್ಸಿನತ್ತ ಮುನ್ನಡೆಯಬೇಕು ಎಂದು ಹಿರಿಯ ವಿಜ್ಞಾನಿ ಡಾ. ಶಿವಾಜಿ ಜಾಧವ್ ತಿಳಿಸಿದರು. ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಸೂಕ್ಷ್ಮ ಜೀವಶಾಸ್ತ್ರ ವಿಭಾಗದಲ್ಲಿ ‘21ನೇ ಶತಮಾನದ ಜೈವಿಕಾಣುಶಾಸ್ತ್ರ: ಹೊಸ ಆವಿಷ್ಕಾರಗಳು ಮತ್ತು ಅನ್ವಯಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಂಕೆಗಳಿಗಿಂತ ಜ್ಞಾನ ಮಹತ್ವದ್ದು. ಅಂಕೆಗಳು ಪ್ರಾರಂಭಿಕ ಅವಕಾಶಗಳನ್ನು ನೀಡಬಹುದು. ಆದರೆ ದೀರ್ಘಕಾಲೀನ ಯಶಸ್ಸನ್ನು ನಿರ್ಧರಿಸುವುದು ಆಳವಾದ ಜ್ಞಾನ ಮತ್ತು ತಜ್ಞತೆ. ಜೈವಿಕಾಣುಶಾಸ್ತ್ರದಲ್ಲಿ ಸೂಕ್ಷ್ಮಮಜೀವಿಗಳು, ರೋಗಗಳು, ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಆಳವಾದ ತಿಳುವಳಿಕೆ ಅನಿವಾರ್ಯ ಎಂದರು. ನಿರಂತರ ಅಧ್ಯಯನ ಮತ್ತು ಕುತೂಹಲ ಅತ್ಯಗತ್ಯ. ಜೈವಿಕಾಣುಶಾಸ್ತ್ರದ ಕ್ಷೇತ್ರ ನಿರಂತರ ಬೆಳವಣಿಗೆಯನ್ನು ಕಾಣುತ್ತಿದೆ. ಹೊಸ ಸಂಶೋಧನೆಗಳು ಮತ್ತು ಆವಿಷ್ಕಾರಗಳು ನಮ್ಮ ಜೀವನದ ಅರಿವನ್ನು ವಿಸ್ತರಿಸುತ್ತವೆ. ನಾವು ಹೆಚ್ಚು ತಿಳಿಯಲು, ಅಧ್ಯಯನ ಮಾಡಲು, ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳಲು, ಮತ್ತು ವೈಜ್ಞಾನಿಕ ಚರ್ಚೆಗಳಲ್ಲಿ ತೊಡಗಲು…

Read More

ತುಮಕೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ / ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಏಪ್ರಿಲ್ 10ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ. ಪ್ರವೇಶ ಕಲ್ಪಿಸಲಾಗುವ ವಸತಿ ಶಾಲೆಗಳಲ್ಲಿ ಶೇ.75ರಷ್ಟು ಸ್ಥಾನಗಳನ್ನು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿ(ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ)ಗಳಿಗೆ ಹಾಗೂ ಶೇ25ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಿರಿಸಲಾಗಿದೆ. ಅರ್ಜಿ ಸಲ್ಲಿಸುವವರ ಕುಟುಂಬದ ವಾರ್ಷಿಕ ಆದಾಯವು 2.50 ಲಕ್ಷ ಮೀರಿರಬಾರದು. ವಸತಿ ಶಾಲೆ 6ನೇ ತರಗತಿ ಪ್ರವೇಶಕ್ಕಾಗಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ ವಿಳಾಸ Admission for Morarji desai residential schoolನಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್…

Read More

ತುಮಕೂರು: ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು IISc, IIT & NIT ಸಂಸ್ಥೆಗಳ ಮೂಲಕ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಮೆಷಿನ್ ಲರ್ನಿಂಗ್ ವೃತ್ತಿಪರ ತರಬೇತಿ ಕೋರ್ಸುಗಳಿಗಾಗಿ ಪರಿಶಿಷ್ಟ ಪಂಗಡದ ಇಂಜಿನಿಯರಿಂಗ್ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದವರಿಗೆ 15,000 ರೂ.ಗಳ ಶಿಷ್ಯವೇತನ ನೀಡಲಾಗುವುದು. ಆಸಕ್ತರು ಏಪ್ರಿಲ್ 11ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತುಮಕೂರು, ಮಧುಗಿರಿ, ಶಿರಾ, ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಗುಬ್ಬಿ, ತಿಪಟೂರು, ತುರುವೇಕೆರೆ, ಕುಣಿಗಲ್ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ/ ಪಾವಗಡ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ/ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ತುಮಕೂರು: ಪ್ರತಿಯೊಬ್ಬ ನಾಗರಿಕನೂ ತೆರಿಗೆ ಕಾನೂನಿನ ಎಲ್ಲ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅನುಸರಿಸಬೇಕು ಎಂದು ಭಾರತದ ಸರ್ವೋಚ್ಛ ನ್ಯಾಯಾಲಯದ ವಕೀಲರಾದ ಕೆ. ಆರ್. ಪ್ರದೀಪ್ ಹೇಳಿದರು. ತುಮಕೂರು ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ತೆರಿಗೆ ನ್ಯಾಯಶಾಸ್ತ್ರ ಮತ್ತು ನೇರ ತೆರಿಗೆ ಪದ್ಧತಿಗಳು’ ಕುರಿತ ವಿಶೇಷ ಉಪನ್ಯಾಸ ನೀಡಿದರು. ಪಾವತಿಸುವ ಸಾಮರ್ಥ್ಯ ಮತ್ತು ಪಾವತಿಸಲು ಇಚ್ಛೆ ಉತ್ತಮ ತೆರಿಗೆ ಕಾನೂನನ್ನು ಹೊಂದಲು ಎರಡು ತತ್ವಗಳಾಗಿವೆ ಎಂದರು. ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿರುವ ಪ್ರತೀಕ್ಷಣವನ್ನೂ ಕಲಿಕೆಗಾಗಿ ಬಳಸಿಕೊಳ್ಳಬೇಕು. ಕಲಿಕೆಗೆ ಯಾವುದೇ ಸಮಯದ ಮಿತಿ ಇರಬಾರದು. ಹೆಚ್ಚಿನದನ್ನು ತಮ್ಮದಾಗಿಸಿಕೊಳ್ಳುವ ಕುತೂಹಲ ಸದಾ ಜಾಗೃತವಾಗಿರಬೇಕು ಎಂದರು. ಕುಲಸಚಿವೆ ನಾಹಿದಾ ಜಮ್ ಜಮ್, ಮೌಲ್ಯಮಾಪನ ಕುಲಸಚಿವ ಪ್ರೊ.ಕೆ.ಪ್ರಸನ್ನ ಕುಮಾರ್, ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಶೇಖರ್, ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯೋಜಕ…

Read More

ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ: ತಾಲ್ಲೂಕಿನ ವಡ್ಡಗೆರೆ ಗ್ರಾಮದ 850 ವರ್ಷಗಳ ಇತಿಹಾಸವುಳ್ಳ ಶ್ರೀ ವೀರನಾಗಮ್ಮ ತಾಯಿಯ ಯುಗಾದಿ ಜಾತ್ರಾ ಮಹೋತ್ಸವವು ಲಕ್ಷಾಂತರ ಮಂದಿ ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಪ್ರತಿವರ್ಷ ಯುಗಾದಿ ಮರುದಿನ ನಡೆಯುವ ಶ್ರೀವೀರನಾಗಮ್ಮ ತಾಯಿ ಜಾತ್ರೆಯು ರಥೋತ್ಸವದೊಂದಿಗೆ ವಿಜೃಂಭಣೆಯಿಂದ ನಡೆದಿದೆ. ಈ ವರ್ಷ ದೇವಾಲಯದ ಆಡಳಿತ ಮಂಡಳಿಯಿಂದ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ತೇರಿನ ರಥದಲ್ಲಿ ವೀರನಾಗಮ್ಮ ತಾಯಿ ಮೆರವಣಿಗೆ ವಿಗ್ರಹವನ್ನು ರಥದಲ್ಲಿ ಕೂರಿಸಿ ಸಂಪ್ರಾದಾಯಿಕ ಸಕಲ ಪೂಜೆಗಳನ್ನು ನೆರವೇರಿಸಿದ ಬಳಿಕ ಎಲೆರಾಂಪುರ ಶ್ರೀಮಠದ ಡಾ.ಹನುಮಂತನಾಥ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ತಾಯಿಗೆ ಇಷ್ಟಾರ್ಥಗಳನ್ನು ಸಲ್ಲಿಸುವಂತೆ ಪೂಜೆ ಸಲ್ಲಿಸಿ ಹರಕೆ ತೀರಿಸಿ ಶ್ರೀ ವೀರನಾಗಮ್ಮ ತಾಯಿಯ ರಥ ಎಳೆದು ತಾಯಿಯ ವೈಭವವನ್ನು ಕಣ್ತುಂಬಿಕೊಂಡರು. ಆಗಮಿಸಿದ ಭಕ್ತಾಧಿಗಳಿಗೆ ಆಡಳಿತ ಮಂಡಳಿಯಿಂದ ವಿಶೇಷ ದರ್ಶನ ವ್ಯವಸ್ಥೆ, ಪ್ರಸಾದ ವ್ಯವಸ್ಥೆ ಆಯೋಜನೆ ಮಾಡಲಾಗಿತ್ತು. ದೇವಾಲಯದ ಪ್ರಧಾನ ಅರ್ಚಕ ಶಿವಕುಮಾರ್ ಮಾತನಾಡಿ,…

Read More

ಸಿಂಧನೂರು: ಮೊಲ ಬೇಟೆಯಾಡಿದ ಮಸ್ಕಿ ಶಾಸಕ ಬಸನಗೌಡ ತುರುವಿಹಾಳ ಅವರ ಪುತ್ರ  ಹಾಗೂ ಶಾಸಕರ ಸಹೋದರನ ವಿರುದ್ಧ ಮಂಗಳವಾರ ಪ್ರಕರಣ ದಾಖಲಾಗಿದೆ. ತಾಲೂಕಿನ  ತುರುವಿಹಾಳ ಪಟ್ಟಣದಲ್ಲಿ  ಸೋಮವಾರ ಯುಗಾದಿ ಕರಿ ನಿಮಿತ್ಯ ಬೇಟೆಯಾಡಿದ ಮೊಲವನ್ನು ಹಿಡಿದು ಶಾಸಕರ ಪುತ್ರ ಸತೀಶಗೌಡ ಹಾಗೂ ಅವರ ಸಹೋದರ ಸಿದ್ದನಗೌಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದವು. ಪ್ರಕರಣ ದಾಖಲಿಸುವಂತೆ ಒತ್ತಡ ಕೇಳಿಬಂದ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಡಿಸಿಎಫ್ ಪ್ರವೀಣ್ ಪ್ರಕರಣ ಮಾಡಿದ್ದಾರೆ. ಮೆರವಣಿಗೆಯಲ್ಲಿ ಭಾಗಿಯಾಗಿರುವವರು ಕೂಡ ಇದೀಗ ಕಾನೂನಿನ ಸಂಕಷ್ಟಕ್ಕೆ ಸಿಲುಕಲಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಾಗುವ ಸಾಧ್ಯತೆಗಳಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಬೆಳಗಾವಿ:  ಬಿಜೆಪಿಯ ಉಚ್ಛಾಟಿತ ಶಾಸಕ ಯತ್ನಾಳ್ ಹೊಸ ಪಕ್ಷ ಕಟ್ಟುವುದಾಗಿ ಘೋಷಣೆಮಾಡಿದ್ದರು. ಆದ್ರೆ ಈ ಬಗ್ಗೆ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಹೊಸ ಪಕ್ಷ ಸ್ಥಾಪಿಸುವ ಮಾತುಗಳು ಊಹಾಪೋಹ ಮಾತ್ರ. ಯತ್ನಾಳ ಅವರು ಬಿಜೆಪಿಯನ್ನು ಬಿಟ್ಟುಹೋಗುವುದಿಲ್ಲ, ಪಕ್ಷದಲ್ಲೇ ಮುಂದುವರೆಯುತ್ತಾರೆ ಎಂದು ಹೇಳಿದ್ದಾರೆ. ಯತ್ನಾಳ ಅವರು ಬಿಜೆಪಿಗೆ ವಾಪಸ್ ಬರುತ್ತಾರೆ, ಅವರು ಬೇರೆಡೆಗೆ ಹೋಗುವುದಿಲ್ಲ ಎಂದು ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. ಯತ್ನಾಳ ಅವರು ಹೊಸ ಪಕ್ಷದ ಬಗ್ಗೆ ಹೇಳಿದ್ದ ಉದ್ದೇಶ ವಿಭಿನ್ನವಾಗಿದೆ. ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಅಸಂಗತವಾಗಿವೆ. ಹಿಂದೂತ್ವದ ಆದರ್ಶಗಳಿಗಾಗಿ ಯತ್ನಾಳ ಹೊಸ ಪಕ್ಷ ಕಟ್ಟುವ ಸಾಧ್ಯತೆಯ ಬಗ್ಗೆ ಚರ್ಚೆಗಳು ನಡೆದಿದ್ದವು ಎಂದು ಒಪ್ಪಿಕೊಂಡ ಅವರು, “ಆರ್‌ಎಸ್‌ಎಸ್ ಇರುವಾಗ ಹೊಸ ಪಕ್ಷದ ಅವಶ್ಯಕತೆ ಇಲ್ಲ, ಅಷ್ಟೇ ಸಾಕು  ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…

Read More

ತುಮಕೂರು: ಭಕ್ತರ ಪಾಲಿಗೆ ನಡೆದಾಡುವ ದೇವರು ಎನಿಸಿಕೊಂಡಿದ್ದ ಪರಮಪೂಜ್ಯ ಶಿವಕುಮಾರ ಶ್ರೀಗಳ ಜಯಂತೋತ್ಸವ  ಇಂದು ಇಡೀ ನಾಡಿನಾದ್ಯಂತ ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಗ್ತಿದೆ. ಅವರು ತೊರಿಸಿಕೊಟ್ಟ ಮಾರ್ಗದರ್ಶನದಂತೆ ಎಲ್ಲರು ನಡೆದುಕೊಳ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಎರಡು ಪ್ರಮುಖ ಹೋರಾಟ ಕೈಗೊಂಡಿದ್ದೇವೆ.  ಎರಡು ಹಂತದ ಹೋರಾಟ ನಡೆಸುತ್ತೇವೆ.  ರಾಜ್ಯದ ಸರ್ಕಾರದ ನೀತಿ ಖಂಡಿಸಿ, ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುವುದಾಗಿ ಅವರು ತಿಳಿಸಿದರು. ಹಾಲು ಪೆಟ್ರೋಲ್ ನೀರು ವಿದ್ಯುತ್ ದರ ಜಾಸ್ತಿ ಆಗಿದೆ.  ಜನ ಸಾಮಾನ್ಯರಿಗೆ ಬರೆ ಎಳೆದಿದ್ದಾರೆ. ಎರಡನೇ ಹಂತದ ಹೋರಾಟ.ಏ 7ಕ್ಕೆ ನಡೆಯಲಿದೆ. ಬೆಲೆ ಏರಿಕೆ ಕುರಿತು ಅಹೋರಾತ್ರಿ ಧರಣಿ ನಡೆಯಲಿದೆ ಎಂದರು. ಎರಡನೇ ಹಂತದ ಹೋರಾಟ  ಮುಸ್ಲಿಮರಿಗೆ ಕೊಟ್ಟ ಮೀಸಲಾತಿ ವಿರುದ್ದ ಹಾಗೂ ಎಸ್ಸಿ ಎಸ್ಟಿ ಹಣ ದುರುಪಯೋಗ ಮಾಡಿದುರ ಕುರಿತು ಹೋರಾಟ ಎಂದು ತಿಳಿಸಿದರು. ಮೈಸೂರಿನಿಂದ ಜನ ಆಕ್ರೋಶ…

Read More

ತುಮಕೂರು:  ರಾಜೇಂದ್ರ ರಾಜಣ್ಣ ಹತ್ಯೆಗೆ  ಸುಪಾರಿ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ  ಸಚಿವ ಕೆ.ಎನ್.ರಾಜಣ್ಣ ತುಮಕೂರಲ್ಲಿ ಪ್ರತಿಕ್ರಿಯಿಸಿದ್ದು,  ಸುಫಾರಿ ಪ್ರಕರಣದ ಬಗ್ಗೆ ರಾಜೇಂದ್ರ ಅವರನ್ನೇ ಕೇಳಿ ಎಂದಿದ್ದಾರೆ. ಹನಿಟ್ಯಾಪ್‌ ಪ್ರಕರಣ ತನಿಖೆಯಾಗುವಾಗ ಮಧ್ಯದಲ್ಲಿ ಏನ್ ಹೇಳೋಕಾಗುತ್ತೆ.  ಯಾವುದರಲ್ಲಿ ಮಾಡ್ತಾರೆ ಮಾಡಲಿ ಎಸ್ ಐ ಟಿ ಮಾಡ್ತಾರ  ಇನ್ನೊಂದು ಮಾಡ್ತಾರ ಮಾಡಲಿ,  ಅದು ಗೃಹಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದರು. ಕೆಲವು ವಿಚಾರಗಳನ್ನ ಹೇಳಲಿಕ್ಕೆ ಆಗೋದಿಲ್ಲ ಆಮೇಲೆ ಹೇಳ್ತೀನಿ ಬನ್ನಿ. ರಾಜೇಂದ್ರ ಹತ್ಯೆ ಸುಫಾರಿ ಆಡಿಯೋ ಪ್ರಕರಣ ಸಂಬಂಧ ಪ್ರಶ್ನೆಗೆ ಉತ್ತರಿಸಿದ ಅವರು, ನೀವೇ ತೋರಿಸಿದ್ದೀರಾ ಎಲ್ಲಾ ಅದರ ಬಗ್ಗೆ ನಾನು ಏನು ಹೇಳೋಕೆ ಆಗೋಲ್ಲ.  ಪ್ರಭಾವ ಇದ್ದೋರು ಇದ್ದಾರೋ ಇಲ್ವೋ.  ಈ ರೀತಿಯ ಕಾನೂನು ಬಾಹಿರ ಕ್ರಮಗಳಿಗೆ ಯಾರೇ ಪ್ರಯತ್ನ ಮಾಡಿರಲಿ ದೇವರು ಒಳ್ಳೆದು ಮಾಡೋಲ್ಲ ಅನ್ನೋದರ ಜೊತೆಗೆ ಸಾರ್ವಜನಿಕ ಜೀವನದಲ್ಲಿ ಅವರ ಇರಬಾರದು ಎಂದರು. ಯಾರೇ ಆಗಿರಲಿ ನಾನೇ ಆಗಿರಲಿ ಇರಬಾರದು. ನಾನು ಹೇಳೋದು ಬೇರೆಯವರಿಗೋಸ್ಕರ ಅಲ್ಲಾ ನಾನು ಸೇರಿಸಿ…

Read More