ತುಮಕೂರು: ರಾಜೇಂದ್ರ ರಾಜಣ್ಣ ಹತ್ಯೆಗೆ ಸುಪಾರಿ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎನ್.ರಾಜಣ್ಣ ತುಮಕೂರಲ್ಲಿ ಪ್ರತಿಕ್ರಿಯಿಸಿದ್ದು, ಸುಫಾರಿ ಪ್ರಕರಣದ ಬಗ್ಗೆ ರಾಜೇಂದ್ರ ಅವರನ್ನೇ ಕೇಳಿ ಎಂದಿದ್ದಾರೆ.
ಹನಿಟ್ಯಾಪ್ ಪ್ರಕರಣ ತನಿಖೆಯಾಗುವಾಗ ಮಧ್ಯದಲ್ಲಿ ಏನ್ ಹೇಳೋಕಾಗುತ್ತೆ. ಯಾವುದರಲ್ಲಿ ಮಾಡ್ತಾರೆ ಮಾಡಲಿ ಎಸ್ ಐ ಟಿ ಮಾಡ್ತಾರ ಇನ್ನೊಂದು ಮಾಡ್ತಾರ ಮಾಡಲಿ, ಅದು ಗೃಹಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದರು.
ಕೆಲವು ವಿಚಾರಗಳನ್ನ ಹೇಳಲಿಕ್ಕೆ ಆಗೋದಿಲ್ಲ ಆಮೇಲೆ ಹೇಳ್ತೀನಿ ಬನ್ನಿ. ರಾಜೇಂದ್ರ ಹತ್ಯೆ ಸುಫಾರಿ ಆಡಿಯೋ ಪ್ರಕರಣ ಸಂಬಂಧ ಪ್ರಶ್ನೆಗೆ ಉತ್ತರಿಸಿದ ಅವರು, ನೀವೇ ತೋರಿಸಿದ್ದೀರಾ ಎಲ್ಲಾ ಅದರ ಬಗ್ಗೆ ನಾನು ಏನು ಹೇಳೋಕೆ ಆಗೋಲ್ಲ. ಪ್ರಭಾವ ಇದ್ದೋರು ಇದ್ದಾರೋ ಇಲ್ವೋ. ಈ ರೀತಿಯ ಕಾನೂನು ಬಾಹಿರ ಕ್ರಮಗಳಿಗೆ ಯಾರೇ ಪ್ರಯತ್ನ ಮಾಡಿರಲಿ ದೇವರು ಒಳ್ಳೆದು ಮಾಡೋಲ್ಲ ಅನ್ನೋದರ ಜೊತೆಗೆ ಸಾರ್ವಜನಿಕ ಜೀವನದಲ್ಲಿ ಅವರ ಇರಬಾರದು ಎಂದರು.
ಯಾರೇ ಆಗಿರಲಿ ನಾನೇ ಆಗಿರಲಿ ಇರಬಾರದು. ನಾನು ಹೇಳೋದು ಬೇರೆಯವರಿಗೋಸ್ಕರ ಅಲ್ಲಾ ನಾನು ಸೇರಿಸಿ ಹೇಳೋದು. ಬೆಂಗಳೂರು ಮುಂಬೈ ಯಾರು ಬೇಕಾದ್ರು ಇರಬಹುದು. ನಮ್ಮ ಪಕ್ಷದವರು ಇನ್ನೊಂದು ಪಕ್ಷದವರೋ ಯಾರೇ ಪ್ರಯತ್ನ ಮಾಡಿರಲಿ, ಈ ರೀತಿಯ ಹೀನ ಕೃತ್ಯಗಳಿಗೆ ಯಾರೇ ಪ್ರಯತ್ನ ಮಾಡೋದು ಖಂಡನಾರ್ಹ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4