nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೈಕ್ ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ: ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

    January 17, 2026

    ‘ಕಾವಿ ಬಟ್ಟೆ ಉಳಿದರೆ ಮಾತ್ರ ದೇಶ ಉಳಿಯುತ್ತದೆ’: ನಂಜನಗೂಡಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

    January 17, 2026

    ಅಸ್ಸಾಂನಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಗ್ಯಾರಂಟಿ: ಡಿ.ಕೆ. ಶಿವಕುಮಾರ್ ವಿಶ್ವಾಸ

    January 17, 2026
    Facebook Twitter Instagram
    ಟ್ರೆಂಡಿಂಗ್
    • ಬೈಕ್ ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ: ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ
    • ‘ಕಾವಿ ಬಟ್ಟೆ ಉಳಿದರೆ ಮಾತ್ರ ದೇಶ ಉಳಿಯುತ್ತದೆ’: ನಂಜನಗೂಡಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ
    • ಅಸ್ಸಾಂನಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಗ್ಯಾರಂಟಿ: ಡಿ.ಕೆ. ಶಿವಕುಮಾರ್ ವಿಶ್ವಾಸ
    • ಮುಂದಿನ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಕಟ್ಟುನಿಟ್ಟು: ಸಿಎಂ ಸಿದ್ದರಾಮಯ್ಯ ಸುಳಿವು
    • ಬೆಂಗಳೂರು: ರಸ್ತೆ ಗುಂಡಿ ಗಂಡಾಂತರ — ಟೆಕ್ಕಿಯ ಭುಜದ ಮೂಳೆ ಪುಡಿಪುಡಿ
    • ಆರ್ಡರ್ ಮಾಡಿದ್ದು ಕಸ್ಟಮರ್.. ಆದ್ರೆ ಹೊಟ್ಟೆ ತುಂಬಿದ್ದು ಡೆಲಿವರಿ ಬಾಯ್ ಗೆ! ರಾತ್ರಿ 2:30ಕ್ಕೆ ನಡೆದ ‘ಬಿರಿಯಾನಿ’ ಪುರಾಣ
    • ಗುಬ್ಬಿ: ಬೋನಿಗೆ ಬಿದ್ದ ಚಿರತೆ, ಅಧಿಕಾರಿಗಳು ನಾಪತ್ತೆ! ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
    • EPF ರಿಟರ್ನ್ ಸಲ್ಲಿಕೆಗೆ ಜನವರಿ 20ರವರೆಗೆ ಅವಧಿ ವಿಸ್ತರಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಿಜೃಂಭಣೆಯಿಂದ ನಡೆದ ವಡ್ಡಗೆರೆ ವೀರನಾಗಮ್ಮ ತಾಯಿಯ ರಥೋತ್ಸವ:  850 ವರ್ಷಗಳ ಇತಿಹಾಸವುಳ್ಳ ದೇವಾಲಯಕ್ಕೆ ಹರಿದು ಬಂದ ಲಕ್ಷಾಂತರ ಭಕ್ತರು
    ಕೊರಟಗೆರೆ April 1, 2025

    ವಿಜೃಂಭಣೆಯಿಂದ ನಡೆದ ವಡ್ಡಗೆರೆ ವೀರನಾಗಮ್ಮ ತಾಯಿಯ ರಥೋತ್ಸವ:  850 ವರ್ಷಗಳ ಇತಿಹಾಸವುಳ್ಳ ದೇವಾಲಯಕ್ಕೆ ಹರಿದು ಬಂದ ಲಕ್ಷಾಂತರ ಭಕ್ತರು

    By adminApril 1, 2025No Comments2 Mins Read
    vaddagere veera nagamma

    ವರದಿ: ಮಂಜುಸ್ವಾಮಿ ಎಂ.ಎನ್.

    ಕೊರಟಗೆರೆ: ತಾಲ್ಲೂಕಿನ ವಡ್ಡಗೆರೆ ಗ್ರಾಮದ 850 ವರ್ಷಗಳ ಇತಿಹಾಸವುಳ್ಳ ಶ್ರೀ ವೀರನಾಗಮ್ಮ ತಾಯಿಯ ಯುಗಾದಿ ಜಾತ್ರಾ ಮಹೋತ್ಸವವು ಲಕ್ಷಾಂತರ ಮಂದಿ ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ನಡೆಯಿತು.


    Provided by
    Provided by

    ಪ್ರತಿವರ್ಷ ಯುಗಾದಿ ಮರುದಿನ ನಡೆಯುವ ಶ್ರೀವೀರನಾಗಮ್ಮ ತಾಯಿ ಜಾತ್ರೆಯು ರಥೋತ್ಸವದೊಂದಿಗೆ ವಿಜೃಂಭಣೆಯಿಂದ ನಡೆದಿದೆ. ಈ ವರ್ಷ ದೇವಾಲಯದ ಆಡಳಿತ ಮಂಡಳಿಯಿಂದ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ತೇರಿನ ರಥದಲ್ಲಿ ವೀರನಾಗಮ್ಮ ತಾಯಿ ಮೆರವಣಿಗೆ ವಿಗ್ರಹವನ್ನು ರಥದಲ್ಲಿ ಕೂರಿಸಿ ಸಂಪ್ರಾದಾಯಿಕ ಸಕಲ ಪೂಜೆಗಳನ್ನು ನೆರವೇರಿಸಿದ ಬಳಿಕ ಎಲೆರಾಂಪುರ ಶ್ರೀಮಠದ ಡಾ.ಹನುಮಂತನಾಥ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.

    ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ತಾಯಿಗೆ ಇಷ್ಟಾರ್ಥಗಳನ್ನು ಸಲ್ಲಿಸುವಂತೆ ಪೂಜೆ ಸಲ್ಲಿಸಿ ಹರಕೆ ತೀರಿಸಿ ಶ್ರೀ ವೀರನಾಗಮ್ಮ ತಾಯಿಯ ರಥ ಎಳೆದು ತಾಯಿಯ ವೈಭವವನ್ನು ಕಣ್ತುಂಬಿಕೊಂಡರು. ಆಗಮಿಸಿದ ಭಕ್ತಾಧಿಗಳಿಗೆ ಆಡಳಿತ ಮಂಡಳಿಯಿಂದ ವಿಶೇಷ ದರ್ಶನ ವ್ಯವಸ್ಥೆ, ಪ್ರಸಾದ ವ್ಯವಸ್ಥೆ ಆಯೋಜನೆ ಮಾಡಲಾಗಿತ್ತು.

    ದೇವಾಲಯದ ಪ್ರಧಾನ ಅರ್ಚಕ ಶಿವಕುಮಾರ್ ಮಾತನಾಡಿ, ವಡ್ಡಗೆರೆ ವೀರನಾಗಮ್ಮ ತಾಯಿ ದೇವಾಲಯಕ್ಕೆ ಪುರಾತನ ಇತಿಹಾಸವಿದೆ. ಪ್ರತಿವರ್ಷ ಯುಗಾದಿ ಮಾರನೇ ದಿನ ಅದ್ಧೂರಿ ಜಾತ್ರೆ ನಡೆಯುತ್ತದೆ. ಆಡಳಿತ ಮಂಡಳಿಯು ನಿರ್ಮಿಸಿದ ರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿದೆ. ರಥೋತ್ಸವ ಸಂದರ್ಭದಲ್ಲಿ ಆಂದ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹೀಗೆ ರಾಜ್ಯದ ಅನೇಕ ಭಾಗಗಳಿಂದ ಆಗಮಿಸಿ ತಾಯಿಯ ದರ್ಶನ ಪಡೆದು ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ ಎಂದರು.

    ಈ ವೇಳೆ ಅಡಳಿತ ಮಂಡಳಿಯ ಅಧ್ಯಕ್ಷ ವಿ.ಎನ್ ವೀರಕ್ಯಾತಯ್ಯ, ಕಾರ್ಯದರ್ಶಿ ನಾಗೇಶ್.ವಿ, ನಿರ್ದೇಶಕ ಶಿವಕುಮಾರ್, ರಾಮಯ್ಯ, ವಿ.ಎನ್ ವೀರನಾಗಪ್ಪ ಸೇರಿದಂತೆ ಲಕ್ಷಾಂತರ ಭಕ್ತರು ಹಾಜರಿದ್ದರು.

    ವಿವಾಹ ಭಾಗ್ಯ, ಸಂತಾನ ಭಾಗ್ಯ, ಆರೋಗ್ಯ ಭಾಗ್ಯ ಹೀಗೆ ಅನೇಕ ಭಕ್ತರ ಹರಿಕೆಗಳನ್ನು ಈಡೇರಿಸುತ್ತ ಬಂದಿರುವ ವರಪುರ ವಡ್ಡಗೆರೆ ವೀರನಾಗಮ್ಮ ತಾಯಿಯ ಮಹಿಮೆ ಅಪಾರ. ಇಂದು ಜಾತ್ರೆಯು ವಿಜೃಂಭಣೆಯಿಂದ ನಡೆದಿದ್ದು, ರಥೋತ್ಸವದ ವೇಳೆ ಲಕ್ಷಾಂತರ ಭಕ್ತರು ಪಾಲ್ಗೊಂಡು ತಾಯಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಆಡಳಿತ ಮಂಡಳಿಯು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸಿದೆ.

    —  ಡಾ.ಶ್ರೀಹನುಮಂತನಾಥ ಸ್ವಾಮೀಜಿ

    ಪೀಠಾಧ್ಯಕ್ಷರು, ಶ್ರೀಮಠ ಎಲೆರಾಂಪುರ.


     

    ವಡ್ಡಗೆರೆ ವೀರನಾಗಮ್ಮ ತಾಯಿಯ ಮಹಿಮೆ ಅರಿತವರ ಬದುಕು ಬಂಗಾರವಾಗಿದೆ. ತಾಯಿಗೆ ರಾಜ್ಯ ಸೇರಿ ಹೊರ ರಾಜ್ಯಗಳಲ್ಲೂ ಭಕ್ತರ ಸಂಖೈ ಗಣನೀಯವಾಗಿದೆ. ಎಲೆರಾಂಪುರ ಶ್ರೀಮಠದ ಪೂಜ್ಯರಿಂದ ಇಂದು ತಾಯಿಯ ರಥವು ಲೋಕಾರ್ಪಣೆಗೊಂಡಿದೆ. ಯುಗಾದಿ ಹಬ್ಬದ ಜಾತ್ರಾ ಮಹೋತ್ಸವವು ಆಡಳಿತ ಮಂಡಳಿಯ ಶ್ರಮದಿಂದ ಯಶಸ್ಸು ಕಂಡಿದೆ.

    —  ಮುರುಳಿಧರ ಹಾಲಪ್ಪ.

    ಮಾಜಿ ಅಧ್ಯಕ್ಷ, ಕೌಶಲ್ಯಾಭಿವೃದ್ಧಿ ನಿಗಮ ಮಂಡಳಿ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ನಾಯಿ ಮೇಲೆ ದಾಳಿ ಮಾಡಿದ್ದ ಚಿರತೆ ಕೊನೆಗೂ ಸೆರೆ: ಗ್ರಾಮಸ್ಥರು ನಿರಾಳ

    January 16, 2026

    ಮಾದೇನಹಳ್ಳಿ: ಮುಖ್ಯ ಶಿಕ್ಷಕಿ ಗುಣಶೀಲರವರಿಗೆ ಬೀಳ್ಕೊಡುಗೆ: ಸುಮಾರು 14 ವರ್ಷಗಳಿಂದ ಸೇವೆ

    January 15, 2026

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ:  ಕೊರಟಗೆರೆ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ

    January 14, 2026

    Comments are closed.

    Our Picks

    ಆರ್ಡರ್ ಮಾಡಿದ್ದು ಕಸ್ಟಮರ್.. ಆದ್ರೆ ಹೊಟ್ಟೆ ತುಂಬಿದ್ದು ಡೆಲಿವರಿ ಬಾಯ್ ಗೆ! ರಾತ್ರಿ 2:30ಕ್ಕೆ ನಡೆದ ‘ಬಿರಿಯಾನಿ’ ಪುರಾಣ

    January 17, 2026

    EPF ರಿಟರ್ನ್ ಸಲ್ಲಿಕೆಗೆ ಜನವರಿ 20ರವರೆಗೆ ಅವಧಿ ವಿಸ್ತರಣೆ

    January 17, 2026

    ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ ದರ್ಶನ: ಅಯ್ಯಪ್ಪನ ಕಣ್ತುಂಬಿಕೊಳ್ಳಲು ಭಕ್ತರ ಸಾಗರ, ಕ್ಷಣಗಣನೆ ಆರಂಭ

    January 14, 2026

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ಬೈಕ್ ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ: ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

    January 17, 2026

    ಪಾವಗಡ: ಪಾವಗಡದಿಂದ ಮಧುಗಿರಿ ಕಡೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವ ವೇಳೆ ಎದುರಿಗೆ ಬಂದ ಟಿಪ್ಪರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ…

    ‘ಕಾವಿ ಬಟ್ಟೆ ಉಳಿದರೆ ಮಾತ್ರ ದೇಶ ಉಳಿಯುತ್ತದೆ’: ನಂಜನಗೂಡಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

    January 17, 2026

    ಅಸ್ಸಾಂನಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಗ್ಯಾರಂಟಿ: ಡಿ.ಕೆ. ಶಿವಕುಮಾರ್ ವಿಶ್ವಾಸ

    January 17, 2026

    ಮುಂದಿನ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಕಟ್ಟುನಿಟ್ಟು: ಸಿಎಂ ಸಿದ್ದರಾಮಯ್ಯ ಸುಳಿವು

    January 17, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.