Author: admin

ಸರಗೂರು: ಸುನೀಲ್ ಬೋಸ್ ಅಭಿಮಾನಿಗಳ ಬಳಗದ ನೂತನ ಅಧ್ಯಕ್ಷರಾಗಿ ದೇವಲಾಪುರ ಸಿದ್ದರಾಜುರನ್ನು ಹಿರಿಯರ ಮುಖಂಡರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ತಾಲೂಕಿನ ಸಮೀಪದ ‌ಹ್ಯಾಂಡ್ ಪೋಸ್ಟ್ ನ ಮೈರಾಡ ಪಾನ್ ಸಭಾಂಗಣದಲ್ಲಿ ಬುಧವಾರದಂದು ನಡೆದ ಸಂಸದ ಸುನೀಲ್ ಬೋಸ್ ಅಭಿಮಾನಿಗಳ ಬಳಗದ ಅಧ್ಯಕ್ಷರ ಆಯ್ಕೆ ಬಗ್ಗೆ ಹಾಗೂ ಬಲಗೈ ಸಮಾಜದ ಕುಂದುಕೊರತೆಗಳ ಪೂರ್ವಭಾವಿ ಸಭೆಯನ್ನು ಹಮ್ಮಿಕೊಂಡು ಸಮಾಜದ ಹಿರಿಯರ ಸಮ್ಮುಖದಲ್ಲಿ ಸಂಸದ ಸುನೀಲ್ ಬೋಸ್ ಅಭಿಮಾನಿಗಳ ಬಳಗದ ನೂತನ ಅಧ್ಯಕ್ಷರಾಗಿ ದೇವಲಾಪುರ ಸಿದ್ದರಾಜು ಅವರನ್ನು ಆಯ್ಕೆ ಮಾಡಲಾಯಿತು ‌. ನಂತರ ಮಾತನಾಡಿದ ನೂತನ ಅಧ್ಯಕ್ಷ ದೇವಲಾಪುರ ಸಿದ್ದರಾಜು,  ತಾಲೂಕಿನ ಜನತೆ ಸಮಾಜ ಕಲ್ಯಾಣ ಹಾಗೂ ಮೈಸೂರು ಉಸ್ತುವಾರಿ ಸಚಿವ ಡಾ.ಎಸ್.ಸಿ.ಮಹದೇವಪ್ಪ ಮತ್ತು ಶಾಸಕ ಅನಿಲ್ ಚಿಕ್ಕಮಾದು ಹಾಗೂ ಸಂಸದ ಸುನೀಲ್ ಬೋಸ್ ರವರ ಮಾರ್ಗದರ್ಶನದಲ್ಲಿ ಈ ಬಳಗವನ್ನು ಮುನ್ನಡೆಸಿಕೊಂಡು ಹೋಗುತ್ತೇನೆ. ಎಲ್ಲಾ ಸಮಾಜ ಅಭಿವೃದ್ಧಿ ಕೆಲಸ ಹೆಚ್ಚಿನ ಆದ್ಯತೆ ನೀಡಿ ಇವರ ಮಾರ್ಗದರ್ಶನದಲ್ಲಿ ಸರ್ಕಾರದಿಂದ ಬರುವ ಸೌಲಭ್ಯವನ್ನು ಸಾರ್ವಜನಿಕರಿಗೆ ತಲುಪುವ ನಿಟ್ಟಿನಲ್ಲಿ ಕೆಲಸ…

Read More

ಔರಾದ: ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಗಾಯತ್ರಿದೇವಿ ಅವರು ಉತ್ತಮ ಸೇವೆ ಸಲ್ಲಿಸುತ್ತಿದ್ದು, ಅವರ ವಿರುದ್ಧ ಕೆಲವರು ವಿನಾಕಾರಣ ಸುಳ್ಳು ಆರೋಪ ಮಾಡುತ್ತಿರುವುದನ್ನು ರಾಜ್ಯ ಆದಿಜಾಂಬವ ಸಂಘದ ತಾಲೂಕು ಘಟಕ ಅಧ್ಯಕ್ಷರಾದ ಸುಂದರರಾಜ್ ಎಸ್. ಮುದ್ದಾಳೆ ಅವರು ಕಟುವಾಗಿ ಖಂಡಿಸಿದ್ದಾರೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡುರಾವ್ ಅವರಿಗೆ ತಹಶೀಲ್ದಾರ ಮುಖಾಂತರ ಸಲ್ಲಿಸಿದ ಮನವಿಯಲ್ಲಿ ಮಹಾರಾಷ್ಟ್ರ ಹಾಗೂ ತೆಲಂಗಣ ಹಿಂದುಳಿದ ಗಡಿ ಪ್ರದೇಶದ ಔರಾದ್ ತಾಲೂಕಿನಲ್ಲಿ ನಿರಂತರವಾಗಿ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ನೀಡುವ ಮೂಲಕ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಗಾಯತ್ರಿದೇವಿ ಅವರು ಈ ಭಾಗದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆ ಮಾದರಿಯಲ್ಲಿ ಮೇಲ್ದರ್ಜೆಗೆ ಏರಿಸಿ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಕಳೆದ 18 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡ್ತಿದ್ದಾರೆ ಎಂದರು. ಇವರ ಸೇವೆಯನ್ನು ಗುರುತಿಸುವ ಮೂಲಕ ಕಳೇದ ತಿಂಗಳಷ್ಟೇ ಪ್ರತಿಷ್ಠಿತ ‘ಕನ್ನಡಪ್ರಭ’ ಹಾಗೂ ಸುವರ್ಣನ್ಯೂಸ್ ಸುದ್ದಿ ಸಂಸ್ಥೆ ‘ಹೇಲ್ತ್ ಕೇರ್ ಎಕ್ಸಲೇನ್ಸ್’ ಅವಾರ್ಡ್ ನೀಡುವ ಮೂಲಕ…

Read More

ಕೊರಟಗೆರೆ : ಕೊರಟಗೆರೆ ಪಟ್ಟಣ ಪಂಚಾಯಿತಿ ಮತ್ತು ಶ್ರೀ ಸತ್ಯ ಗಣಪತಿ ಸೇವಾ ಮಂಡಳಿ ಸಹಯೋಗದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಕರ್ತವ್ಯ ನಿರ್ವಹಿಸಿದ ಕೊರಟಗೆರೆ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಪಿಐ ಆರ್.ಪಿ.ಅನಿಲ್, ಯಾವುದೇ ಸಭೆ ಸಮಾರಂಭ ಮೆರವಣಿಗೆ ಕಾರ್ಯಕ್ರಮಗಳು ಯಶಸ್ವಿಯಾಗಲು ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಅತಿಮುಖ್ಯವಾದುದು, ಸೆಷ್ಟೆಂಬರ್ 6ರಂದು ನಡೆದ ಗಣೇಶ ವಿಸರ್ಜನೆ ಮೆರವಣಿಗೆ ಶಾಂತಿಯಾಗಿ ಭಾವೈಕ್ಯತೆಯಿಂದ ಪೂರ್ಣಗೊಳಿಸಿದ್ದು ರಾಜ್ಯಕ್ಕೆ ಮಾದರಿಯಾಗಿದ್ದು, ಇದಕ್ಕೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿವರ್ಗದ ಶ್ರಮವು ಕಾರಣವಾಗಿದೆ ಎಂದರು. ಪ.ಪಂ.ಅನಿತಾ ಮಾತನಾಡಿ, ಗಣಪತಿ ಹಬ್ಬವನ್ನು ಎಲ್ಲರೂ ಜಾತಿ ಮತಭೇದವನ್ನು ಮರೆತು 11 ದಿನಗಳ ಕಾಲ ಆಚರಿಸಿದ್ದೇವೆ ಮೆರವಣಿಗೆಯು ಪಟ್ಟಣದಲ್ಲಿ ವೈವಿದ್ಯವಾಗಿ ನಡೆದಿದ್ದು, ಇದಕ್ಕೆ ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರು ಅಧಿಕಾರಿಗಳು ಸಿಬ್ಬಂದಿ ವರ್ಗದ ಸಹಕಾರ ಹಾಗೂ 11 ದಿನಗಳ ಸ್ವಚ್ಚತೆಯಲ್ಲಿ ನಮ್ಮ ಪೌರಕಾರ್ಮಿಕರ ಶ್ರಮ ಸಾಕಷ್ಟು ಇದೆ ಎಂದರು. ಪಿಎಸೈ ತೀರ್ಥೇಶ್ ಮಾತನಾಡಿ,  11 ದಿನಗಳ ಕಾಲ ಗಣಪತಿ ಮಹೋತ್ಸವ ಹಾಗೂ…

Read More

ಸರಗೂರು:  ಸಾರ್ವಜನಿಕರು ಆಸ್ತಿಗಳ ಪೌತಿ ಖಾತೆಗಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸರಗೂರು ಹೋಬಳಿ ರಾಜಸ್ವ ನಿರೀಕ್ಷಕ ರವಿಚಂದ್ರನ್ ತಿಳಿಸಿದರು. ತಾಲೂಕಿನ ಎಂ.ಸಿ.ತಳಲು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಪೌತೆ ಖಾತೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪೌತಿ ಖಾತೆ ಆಂದೋಲನ ನಡೆಸುವ ಮೂಲಕ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕು ಆಡಳಿತ ಮುಂದಾಗಿದ್ದು, ಎಲ್ಲರೂ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಖಾತಾ ತಂತ್ರಾಂಶದಿಂದ ಅತ್ಯಂತ ಕಡಿಮೆ ದಾಖಲೆ ಮೂಲಕ ಶೀಘ್ರವಾಗಿ ವಾರಸುದಾರರಿಗೆ ಪೌತಿ ಖಾತೆ ವರ್ಗಾವಣೆಯಾಗಲಿದೆ. ಜಮೀನು ಮಾಲೀಕ ಮರಣ ಹೊಂದಿದ್ದರೆ, ಜಮೀನಿನ ವಾರಸುದಾರರಾಗಿ ಕುಟುಂಬದ ಸದಸ್ಯರಿಗೆ ಹಕ್ಕು ಪಡೆಯಲು ಪೌತಿ ಖಾತೆ ಸಹಕಾರಿಯಾಗಿದೆ. ಸರಕಾರ ಈಗಾಗಲೇ ಸರಕಾರದ ಸೌಲಭ್ಯ ಪಡೆಯುವುದಕ್ಕಾಗಿ ಜಮೀನಿನ ಮಾಲೀಕರ ಪಹಣಿಗೆ ಆಧಾರ್‌ ಕಾರ್ಡ್‌ಗಳನ್ನು ಲಿಂಕ್‌ ಮಾಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗ ಪುರುಷೋತ್ತಮ್…

Read More

ಸರಗೂರು: ಶಾಸಕ ಅನಿಲ್ ಚಿಕ್ಕಮಾದು ರವರು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಸಂಘದ ನಿರ್ದೇಶಕ ಆಯ್ಕೆಯಾದ ಹಿನ್ನೆಲೆಯಲ್ಲಿ ಕೆ.ಬೆಳತ್ತೂರು ಗ್ರಾ.ಪಂ. ಸದಸ್ಯರು ಹಾಗೂ ಮುಖಂಡರು ಶಾಸಕ ಅನಿಲ್ ಚಿಕ್ಕಮಾದು ರವರ ನಿವಾಸಕ್ಕೆ ತೆರಳಿ ಹೂ ಗುಚ್ಛ ಹಾಗೂ ಸಿಹಿ ತಿನ್ನಿಸಿ ಗೌರವ ಸಲ್ಲಿಸಿದರು. ನಂತರ ಕೆ.ಬೆಳತ್ತೂರು ಗ್ರಾ.ಪಂ. ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಸದಸ್ಯ ರುದ್ರಯ್ಯ ಮಾತನಾಡಿ, ನಮ್ಮ ತಾಲೂಕಿನ ಅಭಿವೃದ್ಧಿಕಾರ ಜನಪ್ರಿಯ ಶಾಸಕ ಎಂದು ಹೆಸರು ಪಡೆದುಕೊಂಡಿರುವ ವ್ಯಕ್ತಿ.ಯಾವುದೇ ಕ್ಷೇತ್ರದಲ್ಲಿ ಚುನಾವಣಾ ಸ್ಪರ್ಧೆ ಮಾಡಿದರೂ ಅಲ್ಲಿ ಅವರು ವಿಜಯಶಾಲಿಯಾಗಿ ಬರುತ್ತಿದ್ದಾರೆ ಎಂದರು. ತಂದೆ ದಿ ಮಾಜಿ ಶಾಸಕ ಚಿಕ್ಕಮಾದು ಹಾಗೂ ದಿ ಮಾಜಿ ಸಂಸದ ಆರ್.ಧ್ರುವನಾರಾಯಣ್ ರವರ ಶಿಷ್ಯರಾಗಿ ಅವರ ಹಾದಿಯಲ್ಲಿ ಬರುವುದರಿಂದ ಬೆಳೆವಣಿಗೆ ಇನ್ನೂ ಉನ್ನತ ಮಟ್ಟಕ್ಕೆ ಅವಕಾಶ ಕಲ್ಪಿಸುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯ ರುದ್ರಯ್ಯ, ಬಿ.ಎಂ. ಪ್ರಕಾಶ್, ನಾಗೇಂದ್ರ, ಗೋಪಾಲ್ ರಾಜು,…

Read More

ತುಮಕೂರು: ಜಿಲ್ಲಾಡಳಿತದ ವತಿಯಿಂದ ಆಚರಿಸುವ ತುಮಕೂರು ದಸರಾ– 2025ರ ಅಂಗವಾಗಿ ಸೆಪ್ಟೆಂಬರ್ 27ರಂದು ಹಮ್ಮಿಕೊಂಡಿರುವ ಮಹಿಳಾ ಮತ್ತು ಮಕ್ಕಳ ದಸರಾ ಕಾರ್ಯಕ್ರಮದಡಿ ಮಹಿಳೆಯರು ಹಾಗೂ ಮಕ್ಕಳಿಗಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ (ಚುಕ್ಕಿ ಮತ್ತು ಎಳೆ ರಂಗೋಲಿ), ಲೆಮನ್ ಅಂಡ್ ಸ್ಪೂನ್, ಲೆಗ್ ಟೈಡ್ ರೇಸ್, ಮ್ಯೂಸಿಕಲ್ ಛೇರ್, ಹಗ್ಗ–ಜಗ್ಗಾಟ, ತಾಯಿ ಮತ್ತು ಮಗುವಿನ (6 ವರ್ಷದವರೆಗೆ) ಸಾಂಪ್ರದಾಯಿಕ ಉಡುಗೆ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವವರು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಭವನ, ಎಂ.ಜಿ.ರಸ್ತೆ, ತುಮಕೂರು ಇವರ ಕಚೇರಿಯಲ್ಲಿ ಸೆಪ್ಟೆಂಬರ್ 20ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9901890079, 9606599437ನ್ನು ಸಂಪರ್ಕಿಸಬಹುದಾಗಿದೆ ಎಂದು ಉಪನಿರ್ದೇಶಕ ಡಾ.ಸಿದ್ದರಾಮಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಬೀದರ್: ಜಿಲ್ಲೆಯ ತಂದೆ ಹಾಗೂ ಅವರ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಭಾಲ್ಲಿ ತಾಲೂಕಿನ ಮೂರೂರು ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಜರುಗಿದೆ. ಬೀದರ್ ನಗರದ ಮೈಲೂರು ಬಡಾವಣೆಯ ನಿವಾಸಿಗಳಾದ ತಿಪ್ಪಣ್ಣ (ಶಿವಮೂರ್ತಿ)(45) ಅವರ ಮಕ್ಕಳಾದ ಶ್ರೀಶಾಂತ್ (9),ರಿತೀಕ್ (7) ಹಾಗೂ ರಾಕೇಶ (7 ತಿಂಗಳು) ಮೃತರು ಎಂದು ತಿಳಿದುಬಂದಿದೆ. ಮೃತ ಶಿವಮೂರ್ತಿ ಅವರ ಪತ್ನಿ ರಮಾಬಾಯಿ ಅವರು ತಮ್ಮ ನಾಲ್ಕು ಜನ ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದಾರೆ ಎನ್ನಲಾಗಿದೆ ತಂದೆ ಶಿವಮೂರ್ತಿ ಹಾಗೂ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಪತ್ನಿ ರಮಾಬಾಯಿ (35) ಹಾಗೂ ಮಗ ಶ್ರೀಕಾಂತ್ (7) ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೂಲತಃ ಬೀದರ್ ತಾಲೂಕಿನ ಸಂಗೊಳಗಿ ಗ್ರಾಮದವರಾದ ಶಿವಮೂರ್ತಿ ಅವರು ಹಲವು ವರ್ಷಗಳಿಂದ ಮೈಲೂರುನಲ್ಲಿ ವಾಸವಿದ್ದರು. ಮೃತ ಶಿವಮೂರ್ತಿ ಟಿ. ವಿ. ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದರು ಎಂದು ಕುಟುಂಬದ ಮೂಲಗಳಿಂದ  ತಿಳಿದು ಬಂದಿದೆ. ಸಹೋದರರ…

Read More

ಸರಗೂರು: ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ನಂಬಿರುವ ಜೆಡಿಎಸ್ ಪಕ್ಷದಿಂದ ತಾಲೂಕು ಅಭಿವೃದ್ಧಿ ಸಾಧ್ಯ ಎಂದು ಜೆಡಿಎಸ್ ಮುಖಂಡ ಕೆ.ಎಂ.ಕೃಷ್ಣನಾಯಕ ಹೇಳಿದರು ತಾಲೂಕಿನ ಕೋತ್ತೇಗಾಲ ಗ್ರಾಪಂ ವ್ಯಾಪ್ತಿಯ ಹಲಸೂರು ಗ್ರಾಮದಲ್ಲಿ ಮಂಗಳವಾರದಂದು ಭೇಟಿ ನೀಡಿ ಮಾರಮ್ಮನ ದೇವಸ್ಥಾನದ ಅಭಿವೃದ್ಧಿಗಾಗಿ ಒಂದು ಲಕ್ಷ ರೂ.ಗಳನ್ನು ಸಹಾಯಧನ ಹಾಗೂ 25  ಕ್ವಿಂಟಾಲ್ ಅಕ್ಕಿ ಕೊಡುವುದಾಗಿ ಭರವಸೆ ನೀಡಿ ನಂತರ ಮಾತನಾಡಿದರು. ರಾಜ್ಯ ದಲ್ಲಿ ಪ್ರಾದೇಶಿಕ ಪಕ್ಷದಿಂದ ಮಾತ್ರ ಜನರ ಸಮಸ್ಯೆ, ರಾಜ್ಯ ಸಮಸ್ಯೆ ನಿವಾರಣೆ ಸಾಧ್ಯ. ಸಿಎಂ ಆಗಿದ್ದಾಗ ಕುಮಾರಸ್ವಾಮಿ ನೀಡಿದ ಅಭಿವೃದ್ಧಿ ಕಾರ್ಯಗಳು ಕೂಡ ಶ್ರೀರಕ್ಷೆ ಎಂದರು. ಕ್ಷೇತ್ರದಲ್ಲಿ ಬದಲಾವಣೆ ಬೇಕಾಗಿದೆ. ಜನರ ಸೇವೆ ಮಾಡುವ ವ್ಯಕ್ತಿಗೆ ಆದ್ಯತೆ ನೀಡಿ ಎನ್ನುವ ಜಾಗೃತಿ ಮೂಡಿಸಬೇಕಾಗಿದೆ. ಈ ಹಿಂದೆ ರಾಜಕೀಯ ಮಾಡಲು ಬರುವವರು ಜನ ಸೇವೆ ನಮ್ಮ ಗುರಿ ಎನ್ನುವ ಮಾತು ಇತ್ತು. ಈಗ ದುಷ್ಟ ರಾಜಕಾರಣಿಗಳು ಈ ಮಾತು ಹಾಳು ಮಾಡಿದ್ದಾರೆ. ಜನರಿಗೆ ಅರಿವು ಮೂಡಿಸುವುದಾಗಿ ಹೇಳಿದರು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ…

Read More

ಬೀದರ್: ಜಿಲ್ಲೆಯ ಔರಾದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗುಂಡಪ್ಪ ವಕೀಲ್ ಅವರು ಡಿಜಿಟಲ್ ಅರೆಸ್ಟ್ 30 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ ಘಟನೆ ಸಂಬಂಧ ಬೆಂಗಳೂರು ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಸಿಬಿಐ, ಇ.ಡಿ. ಹಾಗೂ ಜಡ್ಜ್ ಹೆಸರಿನಲ್ಲಿ ವಂಚಕರು ಮಾಜಿ ಶಾಸಕರಿಂದ ಹಂತ ಹಂತವಾಗಿ 30 ಲಕ್ಷ ರೂ. ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಆಗಸ್ಟ್ 12ರಂದು ಸಿಬಿಐ ಆಫೀಸರ್ ಎಂದು ಕರೆ ಮಾಡಿದ್ದ ಆನ್ ಲೈನ್ ವಂಚಕರು ನೀವು ನರೇಶ್ ಗೋಯಲ್ ಮನಿ ಲಾಂಡರಿಂಗ್ ಕೇಸ್ ನಲ್ಲಿ ಭಾಗಿಯಾಗಿದ್ದೀರಿ ನರೇಶ್ ಗೋಯಲ್ ಜೊತೆ ಅಕ್ರಮ ವ್ಯವಹಾರ ಮಾಡಿದ್ದೀರಿ ಎಂದು ಹೆದರಿಸಿದ್ದರು. ಆ.13ರಂದು ಸಿಬಿಐ ಡಿಸಿಪಿ ಎಂದು ಮತ್ತೋರ್ವ ಕರೆ ಮಾಡಿ, ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ, ಕಾಲ್ ಕಟ್ ಮಾಡಬೇಡಿ ಎಂದು ಭಯಪಡಿಸಿದ್ದ ಬಳಿಕ ಆನ್ ಲೈನ್ ನಲ್ಲಿ ಫೇಕ್ ಜಡ್ಜ್ ಮುಂದೆ ಹಾಜರುಪಡಿಸಿದ್ದ ಖದೀಮರು ಕೋರ್ಟ್ ಹಾಲ್ ರೀತಿ ಸೆಟಪ್ ಮಾಡಿ ನಂಬಿಕೆ ಹುಟ್ಟಿಸಿದ್ದರು. ನಮ್ಮದು…

Read More

ಔರಾದ್ : ಪಟ್ಟಣದಲ್ಲಿ ಅನಧಿಕೃತವಾಗಿ ಓಡಿಸುತ್ತಿರುವ ಶಾಲಾ ವಾಹನಗಳನ್ನು ಆರ್‌ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಔರಾದ್ ತಾಲೂಕಿನ ಎಕಂಬಾ ಗ್ರಾಮದ ಸೇಂಟ್ ಪೌಲ್ ಪಬ್ಲಿಕ್ ಶಾಲೆಯಲ್ಲಿ 1ನೇ ತರಗತಿಯ 6 ವರ್ಷದ ಕಾವೇರಿ ಎಂಬ ಬಾಲಕಿ ಶಾಲಾ ವಾಹನದ ಚಕ್ರದಲ್ಲಿ ಸಿಲುಕಿ ಮೃತಪಟ್ಟಿರುವ ಹಿನ್ನಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು, ನಿಯಮ ಗಾಳಿಗೆ ತೂರಿ ಶಾಲಾ ವಾಹನಗಳನ್ನು ಓಡಿಸುತ್ತಿರುವವರ ಮೇಲೆ ಕ್ರಮ ಜರುಗಿಸುವಂತೆ ಆರ್‌ ಟಿಒ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅನಧಿಕೃತವಾದ ಶಾಲಾ ವಾಹನಗಳನ್ನು ಆರ್‌ ಟಿಒ ಅಧಿಕಾರಿಗಳು ಇಂದು ವಶಕ್ಕೆ ಪಡೆದಿದ್ದಾರೆ. ಇನ್‌ಸ್ಪೆಕ್ಟರ್ ಹುಸೇನ್ ನದಾಫ್ ನೇತೃತ್ವದಲ್ಲಿ, ಸಿಬ್ಬಂದಿಗಳೊಂದಿಗೆ ಔರಾದ್ ಹಾಗೂ ಸಂತಪೂರ್ ನಗರದ ರಸ್ತೆಯ ಮೇಲೆ ಸಂಚರಿಸುತ್ತಿರುವ ಶಾಲಾ ವಾಹನಗಳನ್ನು ನಿಲ್ಲಿಸಿ, ಪರಿಶೀಲನೆ ನಡೆಸಿ ಕ್ರಮ ಜರುಗಿಸಿದ್ದಾರೆ. ನಂತರ ಶಾಲೆಗಳಿಗೆ ಭೇಟಿ ನೀಡಿದ ಅವರು ಇಲಾಖೆಯ ನಿಯಮ ಗಾಳಿಗೆ ತೂರಿ ಮಕ್ಕಳನ್ನು ಶಾಲೆಗೆ ಕರೆತಂದಿರುವ 6 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಇಲಾಖೆಯ ನಿಯಮ ಉಲ್ಲಂಘಿಸುವಂತಿಲ್ಲ. ತಾಲೂಕಿನಲ್ಲಿ ಅನೇಕ…

Read More