Author: admin

ಬೀದರ್: ಕರ್ನಾಟಕ ಸರ್ಕಾರವು ಪೊಲೀಸ್ ಇಲಾಖೆಯು, ಪೊಲೀಸ್ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅವರ ಕುಂದುಕೊರತೆಗಳನ್ನು ಪರಿಹರಿಸಲು ಮುಂದಾಗಿದೆ. ಪೊಲೀಸರು ಜನಸ್ನೇಹಿ ಪೊಲೀಸರಾಗಿ ಕೆಲಸ ಮಾಡಲು, ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಯ ನಡುವೆ ವಿಶ್ವಾಸ ವೃದ್ಧಿಸಲು, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಪೊಲೀಸ್ ಸಿಬ್ಬಂದಿಯ ಗಮನಕ್ಕೆ ತರಲು ಮತ್ತು ಪರಿಹಾರ ಕಂಡುಕೊಳ್ಳಲು ಮನೆ ಮನೆಗೆ ಪೊಲೀಸ್ ಯೋಜನೆಯನ್ನು ಜಾರಿಗೆ ಬಂದಿರುತ್ತದೆ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ನೀಡಿದ ನಿರ್ದೇಶನದಂತೆ ಸಂತಪೂರ ಪೊಲೀಸ್ ಠಾಣೆ ಪಿಎಸ್ ಐ ನಂದಕುಮಾರ ತಮ್ಮ ಠಾಣೆಯ ಸಿಬ್ಬಂದಿಯೊಂದಿಗೆ ತಮ್ಮ ಠಾಣಾ ವ್ಯಾಪ್ತಿಯ ಗ್ರಾಮಗಳಿಗೆ, ಓಣಿಗಳಿಗೆ ಭೇಟಿ ನೀಡಿ, ಅವರ ಕುಂದು ಕೊರತೆಗಳನ್ನು ಆಲಿಸಿ, ಮನೆ ಮನೆಗೆ ಪೊಲೀಸ್ ಯೋಜನೆ ಅನುಷ್ಠಾನದ ಕುರಿತು ಭಿತ್ತಿ ಪತ್ರವನ್ನು ಹಂಚುವ ಮೂಲಕ ಅರಿವು ಮೂಡಿಸಿದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…

Read More

ಸರಗೂರು: ತಾಲೂಕಿನ ಕೆ.ಬೆಳತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ ಬಡಾವಣೆ ಗ್ರಾಮದ ನಿವಾಸಿಯಾದ ಕೆಂಪರಾಜು ತನ್ನ ಊರಿನ ಅಂಗನವಾಡಿ ಮಕ್ಕಳಿಗೆ 18– 20 ಸಮವಸ್ತ್ರ ವಿತರಣೆ ಮಾಡಿದರು. ಇದೇ ವೇಳೆ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಅಲ್ಲಿ ಬರುವ ಸವಲತ್ತುಗಳನ್ನು ಉಪಯೋಗಿಸಿಕೊಳ್ಳಿ, ಯಾರು ಖಾಸಗಿ ಶಾಲೆಗೆ ಸೇರಿಸಬೇಡಿ. ನನ್ನ ಗ್ರಾಮದ ಶಾಲೆ ಅಭಿವೃದ್ಧಿಯಾದರೆ ಇಡೀ ದೇಶವೇ ಅಭಿವೃದ್ಧಿ ಆದಂತೆ. ಎಂದು ಸಲಹೆ ನೀಡಿದರು. ಇದೇ ವೇಳೆ ಅಂಗನವಾಡಿ ಟೀಚರ್ ಆದ ನಾಗೇಂದ್ರಿ ಹಾಗೂ ಜಯಲಕ್ಷ್ಮೀ, ಮಕ್ಕಳ ಪೋಷಕರು ಹಾಗೂ ಗ್ರಾಮದ ಮುಖಂಡರು ಸಂತೋಷ ವ್ಯಕ್ತಪಡಿಸಿದರು. ವರದಿ: ಹಾದನೂರು ಚಂದ್ರ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಸರಗೂರು:  ಜೆಡಿಎಸ್ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದು ಜೆಡಿಎಸ್‌ ಮುಖಂಡ ಕೆ.ಎಂ. ಕೃಷ್ಣನಾಯಕ ತಿಳಿಸಿದರು. ತಾಲೂಕಿನ ಸಮೀಪದ ಬೀರಂಬಳ್ಳಿ ಗ್ರಾಮಕ್ಕೆ ಸೋಮವಾರದಂದು ಭೇಟಿ ನೀಡಿ ಅಂಬೇಡ್ಕರ್ ಪ್ರತಿಮೆ ಜೀರ್ಣೋದ್ಧಾರ ಮಾಡಲು ಮುಂದಾಗಿರುವ ಗ್ರಾಮಸ್ಥರಿಗೆ ಜೆಡಿಎಸ್ ಪಕ್ಷದ ಮುಖಂಡ ಕೆ.ಎಂ.ಕೃಷ್ಣನಾಯಕ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ 25 ಸಾವಿರ ಧನ ಸಹಾಯ ಮಾಡಿ ನಂತರ ಮಾತನಾಡಿದರು. ತಾಲೂಕಿನಲ್ಲಿ ಜೆಡಿಎಸ್ ಸಂಘಟಿಸುವ ನಿಟ್ಟಿನಲ್ಲಿ ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡಗಳ ಸಮ್ಮುಖದಲ್ಲಿ ವಿವಿಧ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದ ಅವರು, ಕೋಟೆಗೆ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಆಗಮಿಸಲಿದ್ದು, ಬೃಹತ್ ವೇದಿಕೆ ‘ಕಾರ್ಯಕ್ರಮ ಆಯೋಜಿಸಲಾಗುವುದು. ಕಾರ್ಯಕ್ರಮದಲ್ಲಿ ಸಾವಿರಾರು ಕಾಂಗ್ರೆಸ್ — ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು. ತಾ.ಪಂ., ಜಿ.ಪಂ. ಚುನಾವಣೆ ಬರುವುದರಿಂದ ಜೆಡಿಎಸ್ ಪಕ್ಷವನ್ನು ಬಲಗೊಳಿಸಲು ತಾಲೂಕಿನ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ…

Read More

ಮೈಸೂರು : ಈ ಬಾರಿ ನಾಡಹಬ್ಬ ದಸರಾದಲ್ಲಿ ಅತ್ಯಂತ ಕಿರಿಯ ಹೆಣ್ಣಾನೆಯಾದ ಹೇಮಾವತಿ (11) ಭಾಗವಹಿಸಲಿದ್ದಾಳೆ. ಜಂಬೂಸವಾರಿಯ ದಿನ ಚಿನ್ನದ ಅಂಬಾರಿ ಹೊತ್ತು ಸಾಗುವ ಗಂಡು ಆನೆಗೆ ಹೆಣ್ಣು ಆನೆಗಳು ಸಾಥ್ ನೀಡುತ್ತವೆ.; ಈ ಮೂಲಕ ಆನೆಗಳು ಚಿನ್ನದ ಅಂಬಾರಿ ಹೊತ್ತು ಸಾಗಲು ಪ್ರಮುಖ ಪಾತ್ರ ವಹಿಸುತ್ತವೆ. ಈ ಹೆಣ್ಣು ಆನೆಗಳು ಗಂಡು ಆನೆಗಳ ಜೊತೆಯಲ್ಲಿ ತಾಲೀಮು ಮಾಡುವುದರಿಂದ ಗಂಡು ಆನೆಗಳು ಗಾಬರಿಯಾಗದಂತೆ ಸರಾಗವಾಗಿ ಸಾಗಲು ಅನುವು ಮಾಡಿಕೊಡುತ್ತವೆ. ಗಜಪಡೆಯ ಭಾರ ಹೊರುವ ತಾಲೀಮಿನಲ್ಲಿ ಅಭಿಮನ್ಯು ಜೊತೆ ಹೇಮಾವತಿ ಆನೆ ಭಾಗವಹಿಸಿದೆ. ಈ ಆನೆ ಭವಿಷ್ಯದಲ್ಲಿ ಜಂಬೂಸವಾರಿಯಲ್ಲಿ ಕುಮ್ಕಿ ಆನೆಯಾಗಿ ಬಹಳ ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ ಹಾಗೂ ಹೆಣ್ಣು ಆನೆಗಳ ಕೊರತೆ ನಿಭಾಯಿಸಲಿದೆ ಎಂಬ ನಿಟ್ಟಿನಲ್ಲಿ ಅರಣ್ಯ ಇಲಾಖೆಯವರು ಇದನ್ನು ಕರೆಸಿದ್ದಾರೆ. 2014ರಲ್ಲಿ ಕೊಡಗಿನ ಆನೆ ಶಿಬಿರದಲ್ಲಿ ಜನಿಸಿರುವ ಈ ಹೇಮಾವತಿ ಆನೆ, ಶಿಬಿರದಲ್ಲಿ ಮಾವುತರು ಹಾಗೂ ಕಾವಾಡಿಗಳ ತರಬೇತಿಯಿಂದ ಶಿಸ್ತು ಮತ್ತು ಶಾಂತ ಸ್ವಭಾವದಿಂದ ಗಮನ ಸೆಳೆದಿದೆ. ನಮ್ಮತುಮಕೂರಿನ…

Read More

ಸರಗೂರು:  ಶಾಸಕ ಅನಿಲ್ ಚಿಕ್ಕಮಾದುರವರು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಸಂಘದ ನಿರ್ದೇಶಕ ಆಯ್ಕೆ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ ಮಾತನಾಡಿ, ಕೊನೆಗೂ ದೇವರು ಕೈಬಿಡಲಿಲ್ಲ ಏಕೆಂದರೆ ಕೆಲವು ತಿಂಗಳ ಹಿಂದೆ ಎಂಡಿಸಿಸಿ ನಿರ್ದೇಶಕ ಆಯ್ಕೆ ಚುನಾವಣೆ ನಡೆದು ಶಾಸಕ ಅನಿಲ್ ಚಿಕ್ಕಮಾದು ರವರಿಗೆ 8 ಮತಗಳು ಬಿದ್ದಿದ್ದವು. ಅದರಿಂದ ಶಾಸಕರ ವಿರುದ್ಧ ಸ್ಪರ್ಧೆ ಮಾಡಿದವರಿಗೂ 8 ಮತಗಳು ಬಿದ್ದಿದ್ದವದರಿಂದ ನ್ಯಾಯಾಲಯ ತೀರ್ಪುಗಾಗಿ ಕಾದು ಕೊನೆಗೂ ಶಾಸಕರಿಗೆ ತೀರ್ಪು ಪ್ರಕಟವಾಗುತ್ತಿದ್ದಂತೆ. ತಾಲ್ಲೂಕಿನ ಜನತೆ ಶಾಸಕರ ಪರವಾಗಿ ನ್ಯಾಯ ಸಿಕ್ಕಿದೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದ ಟೌನ್ ಅಧ್ಯಕ್ಷ ಹಾಗೂ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎನ್.ನಾಗರಾಜು ಮಾತನಾಡಿ, ಯಾರೂ ಶಾಸಕರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸಮಬಲದ ಬಂದಿದೆ. ನಾವೇ ಗೆಲುವು ಸಾಧಿಸುವ ಭ್ರಮೆ ಇದ್ದಾರೆ. ಅವರಿಗೆ ತಕ್ಕ…

Read More

Provided by Provided by ತುಮಕೂರು:  ತುಮಕೂರು ನಗರದ ಸಿರಾ ಗೇಟ್ ಬಳಿ ಅಂಜಲಿ ಫ್ಯಾನ್ಸಿ & ಗಿಫ್ಟ್ ಸೆಂಟರ್ ತನ್ನ ಹೊಸ ಅಂಗಡಿ ಆರಂಭಿಸಿದ್ದು, ಗ್ರಾಹಕರಿಗೆ ಹೊಸ ಖರೀದಿ ಅನುಭವ ನೀಡಲು ಸಜ್ಜಾಗಿದೆ. ಮಹಾವೀರ ಗೋಲ್ಡನ್ ಆರ್ಚ್, (ಲ್ಯಾಂಡ್ ಮಾರ್ಕ್: ರಿಲಯನ್ಸ್ ಟ್ರೆಂಡ್ಸ್), ಸಿರಾ ರಸ್ತೆ, ಸಿರಾ ಗೇಟ್, ತುಮಕೂರು ಈ ವಿಳಾಸದಲ್ಲಿ ಅಂಜಲಿ ಫ್ಯಾನ್ಸಿ & ಗಿಫ್ಟ್ ಸೆಂಟರ್ ಕಾರ್ಯಾರಂಭ ಮಾಡಿದ್ದು, ಗ್ರಾಹಕರಿಗೆ ಹೊಸ ಶಾಪಿಂಗ್ ಅನುಭವ ನೀಡುವ ಮೂಲಕ ಆಕರ್ಷಿಸಿದೆ. ಇಲ್ಲಿ ಲಭ್ಯವಿರುವ ವಿಶೇಷತೆಗಳು:  ಗಿಫ್ಟ್ ಆರ್ಟಿಕಲ್ಸ್ ಇಮಿಟೇಶನ್ ಜ್ಯುವೆಲ್ಲರಿ ಕಾಸ್ಮೆಟಿಕ್ಸ್ ಫೋಟೋ ಫ್ರೇಮ್ಸ್ ಕಸ್ಟಮೈಸ್‌ಡ್ ಫೋಟೋ ಫ್ರೇಮ್ಸ್ ಗ್ರಾಮಗರು ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: 7022812597 / 9845977937 ಸಂಪರ್ಕಿಸಬಹುದಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಈ ಹೊಸ ಅಂಗಡಿಯನ್ನು ತೆರೆಯಲಾಗಿದೆ. ಖರೀದಿಯ ಹೊಸ ಅನುಭವ ಪಡೆಯಲು ಇಂದೇ ಅಂಜಲಿ ಫ್ಯಾನ್ಸಿ & ಗಿಫ್ಟ್ ಸೆಂಟರ್ ಗೆ ಭೇಟಿ ನೀಡಿ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸತತ ಮೂರು ಪಂದ್ಯಗಳನ್ನು ಸೋಲಿಸಿ ಖೋ ಖೋ ಪಂದ್ಯಾವಳಿಯಲ್ಲಿ, ಹಾಲ್ಕುರಿಕೆ ಹೆಚ್.ಸಿ ಎಂ.ಜಿ ಸಂಯುಕ್ತ ಪದವಿಪೂರ್ವಕಾಲೇಜು ಮೊದಲ ಸ್ಥಾನ ಪಡೆದುಕೊಂಡಿದ್ದು, ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ. ವಿಜೇತ ಖೋಖೋ ತಂಡದ ವಿದ್ಯಾರ್ಥಿಗಳನ್ನ ಕೋಚ್ ಡಾ.ಗಂಗಾಧರ್ ನಾಗರಾಜ್, ಮುಖ್ಯೋಪಾಧ್ಯಾಯರಾದ ವೀರಣ್ಣಗೌಡ, ಹನುಮಂತಯ್ಯ ಮುಂತಾದವರು ಉಪಸ್ಥಿತರಿದ್ದರು. ವರದಿ: ಆನಂದ್, ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಕೊರಟಗೆರೆ : ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯದ ಎಲ್ಲಾ 36,000 ಮುಜರಾಯಿ ದೇವಾಲಯಗಳಲ್ಲಿ 2025ರ ಆಗಸ್ಟ್ 15ರಿಂದ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪರಿಸರ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗಾಗಿ ಈ ಕ್ರಮವನ್ನು ಘನ ಸರ್ಕಾರ ಕೈಗೊಳ್ಳಲಾಗಿದ್ದು, ಪ್ಲಾಸ್ಟಿಕ್ ಲೋಟ, ತಟ್ಟೆ, ಬ್ಯಾಗ್‌ ಗಳು ಮತ್ತು ಇನ್ನಿತರ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಲಾಗಿದೆ. ಸರ್ಕಾರದ ಈ ನಿಯಮವನ್ನು ಉಲ್ಲಂಘಿಸಿದರೆ ದೇವಾಲಯಗಳ ಆಡಳಿತ ಮಂಡಳಿಯು ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊರಟಗೆರೆ ಗ್ರೇಡ್ 2 ತಹಶೀಲ್ದಾರ್ ರಾಮ್ ಪ್ರಸಾದ್ ತಿಳಿಸಿದ್ದಾರೆ. ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಸ್ಯಕಾಶಿ, ಸಿದ್ದರ ತಪೋವನ, ಆಯುರ್ವೇದಿಕ್ ಔಷಧಿಗಳ ದಿವ್ಯತಾಣವಾದ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ಸಿದ್ದೇಶ್ವರ ಸ್ವಾಮಿಯ ದೇವಾಲಯದ  ಅವರಣದಲ್ಲಿ ಇರುವಂತಹ ಅಂಗಡಿ ಮುಂಗಟ್ಟುಗಳು,ಹೋಟೆಲ್ ಗಳು, ಟೀ ಅಂಗಡಿಗಳು, ಪೂಜಾ ಸಾಮಗ್ರಿಗಳ ಅಂಗಡಿಗಳಿಗೆ ಗ್ರೇಡ್ 2 ತಹಶೀಲ್ದಾರ್ ರಾಮ್ ಪ್ರಸಾದ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ಲಾಸ್ಟಿಕ್ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಅಂಗಡಿಗಳ…

Read More

ಪಾವಗಡ: ಮಾಜಿ ಸಚಿವರಾದ ವೆಂಕಟರಮಣಪ್ಪನವರು ಮತ್ತು ಪಾವಗಡದ  ಶಾಸಕರು, ತುಮುಲ್ ಅಧ್ಯಕ್ಷರು ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹೆಚ್.ವಿ.ವೆಂಕಟೇಶ್ ರವರು ವಸತಿ ಮತ್ತು ಅಲ್ಪಸಂಖ್ಯಾತ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರನ್ನು ಬೆಂಗಳೂರಿನಲ್ಲಿ ಸೋಮವಾರದಂದು ಭೇಟಿ ಮಾಡಿದರು. ವೈ.ಎನ್.ಹೊಸಕೋಟೆಯಲ್ಲಿ ಜಾಮೀಯ ಮಸೀದಿ ನಿರ್ಮಾಣಕ್ಕೆ ಅನುದಾನ ಮತ್ತು ಮನೆಗಳಿಗೆ ಬೇಡಿಕೆ ಇಟ್ಟರು. ಈ ವೇಳೆ ಮಾನ್ಯ ಸಚಿವರು ಮಾತನಾಡಿ, ತಾಲ್ಲೂಕಿಗೆ ಈಗಾಗಲೇ 500 ಮನೆಗಳು ಮತ್ತು ಜಾಮಿಯ ಮಸೀದಿ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಶಾಸಕರಾದ ಶಿವಲಿಂಗೆಗೌಡ, ಅಬ್ಬಯ್ಯ ಪ್ರಸಾದ್ ಇದ್ದರು. ವರದಿ : ನಂದೀಶ್ ನಾಯ್ಕ ಪಿ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ವೈ.ಎನ್.ಹೊಸಕೋಟೆ: ಗ್ರಾಮದ ಶ್ರೀ ಚೌಡೇಶ್ವರಿ ಸಮುದಾಯ ಭವನದಲ್ಲಿ ಶುಕ್ರವಾರದಂದು ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ, ತುಮಕೂರು ಜಿಲ್ಲಾ ಅಂದತ್ವ ನಿಯಂತ್ರಣಾ ಸಂಸ್ಥೆ ಸೇವಾ ಟ್ರಸ್ಟ್  ಮತ್ತು ಪಾವಗಡದ ಹೆಲ್ಪ್ ಸೊಸೈಟಿ ವತಿಯಿಂದ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನುಉದ್ಘಾಟಿಸಿದ ಶ್ರೀ ಚೌಡೇಶ್ವರಿ ಸಮುದಾಯ ಭವನದ ಅಧ್ಯಕ್ಷರಾದ ಜಿ.ಬಿ.ಸತ್ಯನಾರಾಯಣ ಮಾತನಾಡಿ, ಹಲವು ವರ್ಷಗಳಿಂದ ತಾಲ್ಲೂಕಿನಾದ್ಯಂತ ಹೆಲ್ಪ್ ಸೊಸೈಟಿ ವಿವಿಧ ಸಮಾಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಆ ಮೂಲಕ ಹಲವರ ನೋವನ್ನು ಅಳಿಸುವ  ಪ್ರಯತ್ನ ಮಾಡುತ್ತಿದೆ. ಈ ಸೇವೆ ನಿತ್ಯ ನಿರಂತರವಾಗಲಿ. ಅಶಕ್ತರಿಗೆ ಆಸರೆಯಾಗಲಿ ಎಂದು ತಿಳಿಸಿದರು. ಹೆಲ್ಪ್ ಸೊಸೈಟಿಯ ಅಧ್ಯಕ್ಷ ಮಾತನಾಡಿ, ಪ್ರತಿ ತಿಂಗಳು ವೈ.ಎನ್.ಹೊಸಕೋಟೆಯಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆಸಕ್ತರು ಇದರ ಉಪಯೋಗ ಪಡೆದುಕೊಳ್ಳಬಹುದು. ತಾಲ್ಲೂಕಿನಲ್ಲಿ ಶಿಕ್ಷಣ ಆರೋಗ್ಯ ಪರಿಸರ ಸಂರಕ್ಷಣೆಯಲ್ಲಿ ನಮ್ಮ ಸಂಘಟನೆಯು ಎಲ್ಲರ ಸಹಕಾರದ ಮೇರೆಗೆ ಕೈಲಾದ ಸೇವೆಯನ್ನು ಸಲ್ಲಿಸುತ್ತಿದೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರು. ಶಿಬಿರದಲ್ಲಿ 93 ಜನ…

Read More