Author: admin

ಪಾವಗಡ:  ನೋಂದವರ ಕಣ್ಣೀರು ಒರೆಸಿ, ಆತ್ಮಸ್ಥೆರ್ಯ ತುಂಬುತ್ತಿದ್ದ ಸೇವಾಲಾಲ ಮಹಾರಾಜರು ನಮ್ಮ  ಬಂಜಾರ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ, ಎಲ್ಲಾ ವರ್ಗಗಳಲ್ಲಿಯೂ ಸೇವೆ ಸಲ್ಲಿಸುವ ಮೂಲಕ ಮಾನವೀಯತೆಯ ನೈಜ ಸೇವಕರಾಗಿದ್ದರು ಎಂದು ಅಕ್ಷರ‌ ದಾಸೋಹ ಎಡಿಎಂ ಶಂಕರಪ್ಪ ಅಭಿಪ್ರಾಯ ಪಟ್ಟರು. ಶನಿವಾರ ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್ ರ 286ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಬಂಜಾರ ಸಮಾಜದ ಶ್ರೇಷ್ಠ ದಾರ್ಶನಿಕರಾದ ಸೇವಾಲಾಲ ಮಹಾರಾಜರು, ತಮ್ಮ ಆದರ್ಶ ಮತ್ತು ತತ್ವಗಳ ಮೂಲಕ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರೇಷ್ಠ ಕೊಡುಗೆ ನೀಡಿದ ಮಹಾನ್ ಪುರುಷರು. ಅವರ ಜೀವನ ಸಂದೇಶ ಇಂದು ಸಹ ನಾವು ಕೈಗೊಳ್ಳಬೇಕಾದ ಮಾರ್ಗದರ್ಶನವಾಗಿದೆ ಎಂದು ತಿಳಿಸಿದರು. ಗ್ರೇಡ್–2 ತಹಶೀಲ್ದಾರ್ ಚಂದ್ರಶೇಖರ್ ಮಾತನಾಡಿ, ಸಂತ ಸೇವಾಲಾಲ್ ಬಂಜಾರ ಸಮುದಾಯದ ಕುಲಗುರುವೂ ಹೌದು, ನಾಯಕರೂ ಹೌದು, ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ಬಾಲ್ಯ ವಿವಾಹ, ಮದ್ಯಪಾನ ಹಾಗೂ ಶಿಕ್ಷಣದ ಬಗ್ಗೆ ಬುಡಕಟ್ಟು ಜನಾಂಗದಲ್ಲಿ ಅಷ್ಟೇ…

Read More

ತುಮಕೂರು:  ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಶನಿವಾರ ಸಂಜೆ ತಮ್ಮ ಕಚೇರಿಯಲ್ಲಿ ಎಲ್ಲಾ ಉಪವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಕಂದಾಯ ಸಿಬ್ಬಂದಿಯೊಂದಿಗೆ ಸಭೆ ನಡೆಸಿದರು ಇ — ಆಫೀಸ್,  ಸಕಾಲ, 1–5 ದರಖಾಸ್ತು, ಪೋಡಿ, ಕಡತ ವಿಲೇವಾರಿ, ಬಗರ್ ಹುಕುಂ ಹಾಗೂ ಕಂದಾಯ ವಿಷಯಗಳ ಬಗ್ಗೆ ಸಭೆ ನಡೆಸಿ ಪ್ರಗತಿ ಸಾಧಿಸಲು ಸೂಚನೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ತುಮಕೂರು:  ಸುರೇಶ್ ಗೌಡ ಪಾರ್ಟಿಯಲ್ಲೇ ಯಗ್ಗಣ ಸತ್ತು ಬಿದ್ದಿದೆ, ನಾನು ವಿಜಯೇಂದ್ರ ಜಾಗದಲ್ಲಿ ಇದ್ದಿದ್ರೆ ಯತ್ನಾಳ್ ಕಿತ್ತು ಬಿಸಾಕ್ ತಾ ಇದ್ದೆ.  ಯತ್ನಾಳ್ ಸೀನಿಯರ್ ಲೀಡರ್ ಇದ್ರು ಅಂತಹವರ ಬಾಯಲ್ಲಿ ಇಂತಹ ಆರೋಪ ಬಂದ್ರು ಕೇಳೋರಿಲ್ಲ.  ಅವರು ಪಕ್ಷದಲ್ಲಿ ಶಿಸ್ತು ಇದ್ಯಾ, ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು ಆದ್ರೆ ಗುಂಪುಗಾರಿಕೆ ಇಲ್ಲ ಎಂದು ಶಾಸಕ ಸುರೇಶ್ ಗೌಡಗೆ ಸಚಿವ ಕೆ.ಎನ್.ರಾಜಣ್ಣ ತಿರುಗೇಟು ನೀಡಿದರು. ಲಿಂಕ್ ಕೇನಾಲ್ ಸಂಪೂರ್ಣವಾಗಿ ಬೇಡ ಅಂತಾ ಇದ್ದೇವೆ.  ಬೇರೆ ಭೂಮಿಯಲ್ಲಿ ಮಾಡಬೇಕಾದ್ರೆ ಅಕ್ವೇಷನ್ ಮಾಡಬೇಕು.  ರೈತ ಒಪ್ಪದೇ ಯಾವುದೇ ಕಾಮಗಾರಿ ಮಾಡಬಾರದು.  ನೀರು ಅಲ್ಲಿಗೆ ಹೋಗದ ರೀತಿಯಲ್ಲಿ ನೋಡಿ ಕೊಳ್ತೀವಿ ಎಂದರು. ನಾನು ಅಧಿಕಾರದಲ್ಲಿದ್ದಾಗ ನನ್ನ ಜಾತಿಯವರು ಅಧಿಕಾರಕ್ಕೆ ಬರಬಾರದು,  ಮತ್ತೆ ಬೇರೆ ಜಾತಿಯವರನ್ನ ಆ ಭಾಗದಲ್ಲಿ ಅಧಿಕಾರ ನೀಡಬೇಕು.  ಇದನ್ನ ಕೆ.ಸಿ.ವೇಣುಗೋಪಾಲ್ ಅವರಿಗೆ ಮನವರಿಕೆ ಮಾಡಿದ್ದೇನೆ ಒಪ್ಪಿದ್ದಾರೆ.  ಕೆಲಸ ವಿಧಾನ ಪರಿಷತ್ ಸದಸ್ಯರ ನಾಮಿನೇಷನ್ ಮಾಡುತ್ತಿದ್ದಾರೆ.  ಯಾವ ಜಾತಿಯವರು ಪರಿಷತ್ ನಲ್ಲಿ ಇಲ್ಲ ಅವರಿಗೆ ಮಾಡಬೇಕು.  ದೇವರಾಜು…

Read More

ಬೀದರ್: ಜಾತಿ ಆದಾಯ ಪ್ರಮಾಣ ಪತ್ರ ಪಡೆಯಲು ವಿಳಂಬವಾಗದಂತೆ ವಿದ್ಯಾರ್ಥಿ ಗಳ ಅನುಕೂಲಕ್ಕಾಗಿ ಜಿಲ್ಲಾಡಳಿತದಿಂದ ಸಹಾಯವಾಣಿ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ. ಗ್ರಾಮ ಅಡಳಿತ ಅಧಿಕಾರಿಗಳ ಮುಷ್ಕರದಿಂದ ಜಾತಿ ಆದಾಯ ಪ್ರಮಾಣ ಪತ್ರ ಪಡೆಯಲು ವಿಳಂವಾಗುತ್ತಿದ್ದು, ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ನೇಮಕಾತಿ ಉದ್ದೇಶಗಳಿಗಾಗಿ  ತ್ವರಿತವಾಗಿ ಸ್ಪಂದಿಸಲು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ ಎಂದು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ವರದಿ:  ಅರವಿಂದ ಮಲ್ಲಿಗೆ,  ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಬೀದರ್ : ಎಟಿಎಂ ಯಂತ್ರಕ್ಕೆ ಹಣ ತುಂಬಲು ತರುತ್ತಿದ್ದ ವೇಳೆ ಹಾಡಹಗಲೇ ಏಜೆನ್ಸಿಯ ಸಿಬ್ಬಂದಿಯೊಬ್ಬರನ್ನು ಗುಂಡು ಹಾರಿಸಿ ಹತ್ಯೆ ಮಾಡಿ , ದರೋಡೆ ಮಾಡಿದ ದರೋಡೆಕೋರರ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನವನ್ನು ಪೊಲೀಸ್ ಇಲಾಖೆ ಘೋಷಿಸಿದೆ. ದರೋಡೆಕೋರರ ಮಾಹಿತಿ ಸಿಕ್ಕಿದಲ್ಲಿ, ಬೀದರ್ ಜಿಲ್ಲೆಯ ಎಸ್ಪಿ ಪ್ರದೀಪ್ ಗುಂಟಿ ಮೊಬೈಲ್ ನಂಬರ್: 9480803401 ಹಾಗೂ ಬೀದರ್ ಜಿಲ್ಲೆಯ ಡಿಎಸ್ಪಿ ಮೊಬೈಲ್ ನಂಬರ್ 9480803420 ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ. ಜನವರಿ 16ರಂದು ಬೀದರ್ ನಲ್ಲಿ ಹಾಡಹಗಲೇ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿತ್ತು. ಜಿಲ್ಲಾ ನ್ಯಾಯಾಲಯದ ಸನಿಹದಲ್ಲಿನ ಎಟಿಎಂನಲ್ಲಿ ಹಣ ಹಾಕಲು ಬಂದಿದ್ದ ಸಿಎಂಸಿಎಸ್ ಏಜೆನ್ಸಿ ಸಿಬ್ಬಂದಿಗಳ ಮೇಲೆ ಬೈಕ್ ನಲ್ಲಿ ಬಂದಿದ್ದ ದರೋಡೆಕೋರರ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ದರೋಡೆಕೋರರ ಗುಂಡಿಗೆ ಏಜೆನ್ಸಿಯ ಗಿರಿ ವೆಂಕಟೇಶ್ ಎಂಬವರು ಬಲಿಯಾಗಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ತುಮಕೂರು: ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಆಗಮಿಸದೇ ಬಂಜಾರ ಸಮುದಾಯಕ್ಕೆ ಅವಮಾನ ಮಾಡಿದ್ದಾರೇ ಎಂದು ನಿವೃತ್ತ ನ್ಯಾಯಾಧೀಶರಾದ ಗಣೇಶ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದರು. ತುಮಕೂರಿನ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಬಂಜಾರ ಸೇವಾಲಾಲ್ ಸೇವಾ ಸಂಘದಿಂದ ಶನಿವಾರ ನಡೆದ ಪವಾಡ ಪರುಷ ಸಂತಾ ಸೇವಾಲಾಲ್ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಸೇವಾಲಾಲ್ ಜಯಂತಿಗೆ ಸರಕಾರ ನೀಡುವ ಭಿಕ್ಷೆಯ ಹಣ ನಮಗೇ ಬೇಡ. ಕಾರ್ಯಕ್ರಮಕ್ಕೆ ಜಿಲ್ಲಾಮಟ್ಟದ ಅಧಿಕಾರಿವರ್ಗ ಮತ್ತು ಜನ ಪ್ರತಿನಿಧಿಗಳು ಗೈರಾಗಿ ಜಯಂತಿಗೆ ಅವಮಾನ ಮಾಡಿದ್ದಾರೆ. ಇಂತಹ ದುಸ್ಥಿತಿಗೆ ತಕ್ಕ ಉತ್ತರವನ್ನ ನಾವು ಶಿಕ್ಷಣದಿಂದ ನೀಡಬೇಕಿದೆ ಎಂದರು. ತುಮಕೂರು ಉಪವಿಭಾಗ ಅಧಿಕಾರಿ ಗೌರವಗುಪ್ತ ಮಾತನಾಡಿ 18ನೇ ಶತಮಾನದಲ್ಲೇ 300ವರ್ಷದ ಹಿಂದೇ ಮೌಡ್ಯತೆಯ ವಿರುದ್ದ ಹೋರಾಟ ಮಾಡಿದ ಮಹಾನ್ ನಾಯಕ ಶ್ರೀಸಂತ ಸೇವಾಲಾಲ್ ಮಹಾರಾಜರು ನಮ್ಮ ರಾಜ್ಯದವರು ಅನ್ನುವುದೇ ನಮಗೇ ಹೆಮ್ಮೆಯ ವಿಷಯ. ಅವರ ಜೀವನದ ಆದರ್ಶವು…

Read More

ಕೊರಟಗೆರೆ : ತಾಲೂಕು ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌರಿಕಲ್ಲು ಗ್ರಾಮದ ಸರ್ವೆ ನಂ.36ರಲ್ಲಿ 4ಎಕರೆ ಖನಿಜ ಸಂಪತ್ತಿನ ಕಲ್ಲುಕ್ವಾರಿಯ ಕಥೆಯಿದು. ಪೂರ್ವಕ್ಕೆ ಕರಡಿಧಾಮದ ಮೀಸಲು ಅರಣ್ಯ ಇದೆ. ಪಶ್ಚಿಯಕ್ಕೆ ಹಿರೇಬೆಟ್ಟ ರಕ್ಷಿತ ಅರಣ್ಯ ಇದ್ದರೂ ಸರಕಾರಿ ಅಧಿಕಾರಿವರ್ಗ ಸ್ಥಳಕ್ಕೆ ಭೇಟಿ ನೀಡದೇ ಅನುಮತಿ ನೀಡಿದ ಪರಿಣಾಮ ಈಗ ಕಾರ್ಮಿಕರು ಮತ್ತು ಸ್ಥಳೀಯ ರೈತರಿಗೆ ಮತ್ತೇ ಶುರುವಾಯ್ತು ಸಂಕಷ್ಟ. ಸಿದ್ದರಬೆಟ್ಟ ಗ್ರಾ.ಪಂ. ವ್ಯಾಪ್ತಿಯ ಗೌರಿಕಲ್ಲು, ದೊಗ್ಗನಹಳ್ಳಿ, ಮಲ್ಲೇಕಾವು, ಗೊಲ್ಲರಹಟ್ಟಿ, ಗೊಂದಿಹಳ್ಳಿ ಮತ್ತು ವಿರೋಬನಹಳ್ಳಿಯ ಅಕ್ಕ–ಪಕ್ಕದ ನೂರಾರು ರೈತರ ಜಮೀನುಗಳಿವೆ. ರೈತರ ಜಮೀನುಗಳ ಬಳಿಯೇ ಕಲ್ಲುಕ್ವಾರೇ ಪ್ರಾರಂಭವಾದ್ರೇ ಬಂಡೆಶಬ್ದದ ಜೊತೆ ಕ್ರಷರ್ ಧೂಳಿನಿಂದ ರೈತರ ಬೆಳೆಗಳಿಗೆ ಹಾನಿಯ ಜೊತೆ ದುಡಿದು ತಿನ್ನುವ ಕಾರ್ಮಿಕರಿಗೆ ಅತಿದೊಡ್ಡ ಸಮಸ್ಯೆ ಆಗಲಿದೆ. 4 ಎಕರೆ ಕಲ್ಲು ಕ್ವಾರೇಗೆ 30ವರ್ಷ ಗುತ್ತಿಗೆ: ಬೆಂಡೋಣಿಯ ಕಲ್ಲುಗಣಿ ಗುತ್ತಿಗೆದಾರ ಬಿ.ಆರ್.ಜಯರಾಮ್ ಗೆ 2011ರಲ್ಲೇ ಕೊರಟಗೆರೆ ತಾಲೂಕಿನ ಗೌರಿಕಲ್ಲು ಗ್ರಾಮದ ಸರ್ವೆ ನಂಬರ್ 36ರಲ್ಲಿ 4 ಎಕರೆ ಸರಕಾರಿ ಖನಿಜ…

Read More

ತುಮಕೂರು:  ರಾಜ್ಯದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಯಾರು ಉಪ ಮುಖ್ಯಮಂತ್ರಿಯಾಗಬೇಕು ಮತ್ತು ಕೆಪಿಸಿಸಿ ಅಧ್ಯಕ್ಷರಾಗಬೇಕು ಎಂಬ ಕುರಿತು  2023ರ ಮೇ 18ರಂದು ಎಐಸಿಸಿ ಹೊರಡಿಸಿರುವ ನೋಟಿಫಿಕೇಶನ್ ನಲ್ಲಿ  ಪ್ರಸ್ತಾಪಿಸಲಾಗಿದೆ. ಇದನ್ನು ಸ್ಪಷ್ಟಪಡಿಸಬೇಕೆಂದು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಎಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಮುಖಂಡರ ಬಳಿ ದೆಹಲಿಯಲ್ಲಿ  ಇದನ್ನು ಪ್ರಸ್ತಾಪಿಸಿದ್ದೇನೆ. ಅವರ ಪ್ರತಿಕ್ರಿಯೆಗಾಗಿ ನಾನು ಕಾಯುತ್ತಿದ್ದೇನೆ ಎಂದು ಹೇಳಿದರು. ಅಹಿಂದ ಸಮಾವೇಶಕ್ಕೆ ಕುರಿತಂತೆ ಈಗಾಗಲೇ ಯಾವುದೇ ಸ್ಥಳವನ್ನು ಅಂತಿಮಗೊಳಿಸಿಲ್ಲ, ಅದರಲ್ಲಿ ಚಿತ್ರದುರ್ಗ ದಾವಣಗೆರೆ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಯಾವುದಾದರೂ ಒಂದು ಜಿಲ್ಲೆಯನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಹೀಗಾಗಿ ದಲಿತ ಮುಖ್ಯಮಂತ್ರಿ ಕುರಿತ ಪ್ರಸ್ತಾಪ ಅನಾವಶ್ಯಕವಾಗಿದೆ ಎಂದು ಹೇಳಿದರು. ದೆಹಲಿಯಲ್ಲಿ ಹೈಕಮಾಂಡ್ ಜೊತೆ ಅನೇಕ ವಿಷಯಗಳನ್ನು ಪ್ರಸ್ತಾಪ ಮಾಡಿದ್ದೇನೆ ಅದರಲ್ಲಿ ವಿಧಾನ ಪರಿಷತ್ಗೆ ನಾಮಕರಣ ಸದಸ್ಯರ ನೇಮಕದಲ್ಲಿ ಇದುವರೆಗೂ ಅಧಿಕಾರ…

Read More

ಮಂಡ್ಯ: ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಮಂಡ್ಯ ತಾಲೂಕಿನ ಕೆ.ಗೌಡಗೆರೆ ಗ್ರಾಮದಲ್ಲಿ ನಡೆದಿದ್ದು, ಪತಿಯ ವಿರುದ್ಧ ಕುಟುಂಬಸ್ಥರು ಹತ್ಯೆ ಆರೋಪ ಮಾಡಿದ್ದಾರೆ. ಜಾಹ್ನವಿ(26) ಮೃತಪಟ್ಟವರಾಗಿದ್ದರು. ಇವರ ಪತಿ ಯಶ್ವಂತ್ ಗುರುವಾರ ಜಾಹ್ನವಿಯ ಪೋಷಕರಿಗೆ ಕರೆ ಮಾಡಿ, ಜಾಹ್ನವಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದಾನೆ. ಜಾಹ್ನವಿ ಪೋಷಕರು ಬಂದು ನೋಡಿದ ವೇಳೆ ಮೃತದೇಹದ ಮೈಮೇಲೆ, ಮುಖದ ಮೇಲೆ ರಕ್ತದ ಕಲೆ ಪತ್ತೆಯಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಯಶ್ವಂತ್ ಮದುವೆಯಾದಾಗಿನಿಂದಲೂ ಜಾಹ್ನವಿಗೆ ಕಿರುಕುಳ ನೀಡುತ್ತಿದ್ದ. ಕುಡಿದು ಬಂದು ಮನಸೋ ಇಚ್ಛೆ ಹಲ್ಲೆ ನಡೆಸುತ್ತಿದ್ದ. ಆತ ಗಾಂಜಾ ಸೇವಿಸುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ. ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಡಾಕ್ಟರ್ ಧನ್ಯತಾ ಕೈ ಹಿಡಿಯೋದಕ್ಕೆ ಸಜ್ಜಾಗಿರುವ ಧನಂಜಯ ಇಂದು ಆರತಕ್ಷತೆಯ ಅಂಗಳದಲ್ಲಿ ಸಂಭ್ರಮಿಸಲಿದ್ದಾರೆ. ಇದಕ್ಕೂ ಮುನ್ನ ಹಳದಿ ಶಾಸ್ತ್ರ ಸಂಭ್ರಮ ಮನೆ ಮಾಡಿತು. ಡಾಲಿ ಧನಂಜಯ ಮದುವೆಗೆ ಮೈಸೂರಲ್ಲಿ ಸಿದ್ಧತೆ ಜೋರಾಗಿ ನಡೆಯುತ್ತಿದೆ.  ಮೈಸೂರಿನಲ್ಲಿ ನಡೆದ ಹಳದಿ ಸಮಾರಂಭದಲ್ಲಿ ಕುಟುಂಬಸ್ಥರು ಹಾಗೂ ಗೆಳೆಯರು ಭಾಗಿಯಾಗಿದ್ದರು. ಸಂಭ್ರಮದಿಂದ ನೆರವೇರಿದ ಹಳದಿ ಶಾಸ್ತ್ರದಲ್ಲಿ ಡಾಲಿ ಧನಂಜಯ ಮತ್ತು ಧನ್ಯತಾ ಹೊಸ ಬದುಕಿಗೆ ಹೆಜ್ಜೆ ಇಟ್ಟಿದ್ದಾರೆ. ಹೊಸ ಜೋಡಿಗೆ ಸಪ್ತಮಿ ಗೌಡ, ಕಾರ್ತಿಕ್ ಗೌಡ, ಬಿ.ಸಿ. ಪಾಟೀಲ್ ಸೇರಿದಂತೆ ಆಪ್ತಬಳಗ ಶುಭ ಹಾರೈಸಿತು. ಮೈಸೂರು ವಸ್ತು ಸಂಗ್ರಹಾಲಯ ಮೈದಾನದಲ್ಲಿಂದು ಡಾಲಿ ಧನಂಜಯ ಮತ್ತು ಧನ್ಯತಾ ಆರತಕ್ಷತೆ ನಡೆಯಲಿದೆ. ಮೊದಲಿಗೆ ಬೆಳಗ್ಗೆ 10 ಗಂಟೆಗೆ ಮದುವೆ ಸಿದ್ಧತೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಬಹುಕಾಲದ ಗೆಳತಿ ಜೊತೆಗೆ ಸಂಜೆ ಗ್ರ್ಯಾಂಡ್ ರಿಸೆಪ್ಶನ್ ನಡೆಯಲಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More