Author: admin

ತುಮಕೂರು: ಹಲವು ವರ್ಷಗಳಿಂದ ನಿಂತಲ್ಲೇ ನಿಂತಿದ್ದ ವಾಹನಗಳಿಗೆ ಮುಕ್ತಿ ನೀಡಲಾಗಿದ್ದು, ತುಮಕೂರು ನಗರ ಪೊಲೀಸ್ ಠಾಣೆಯಿಂದ 46 ಬೈಕ್, 3 ಆಟೋಗಳ ಹರಾಜು ಮಾಡಲಾಗಿದೆ. 1 ಲಕ್ಷದ 10 ಸಾವಿರ ರೂ. ಬಿಡ್ ಕೂಗಿದ ತುಮಕೂರಿನ ಅಜ್ಮತ್ ಉಲ್ಲಾ ಶರೀಫ್ ಹರಾಜಿನಲ್ಲಿ ವಾಹನ ಪಡೆದುಕೊಂಡರು. ಹರಾಜಿನಲ್ಲಿ ಪಡೆದ ಯಾವುದೇ ವಾಹನಗಳು ರಸ್ತೆಗೆ ಇಳಿಸುವಂತಿಲ್ಲ, ಎಲ್ಲಾ ವಾಹನಗಳು ಗುಜರಿಗೆ ಬಳಕೆ ಮಾಡಿಕೊಳ್ಳುವಂತೆ ನ್ಯಾಯಾಲಯದ ಆದೇಶ ನೀಡಿತ್ತು. ತುಮಕೂರು ನಗರ ಠಾಣೆಯ ಸಿಪಿಐ ದಿನೇಶ್ ಕುಮಾರ್ ನೇತೃತ್ವದಲ್ಲಿ ವಾಹನಗಳ ಹರಾಜು ಪ್ರಕ್ರಿಯೆ ನಡೆಯಿತು. ಹಳೆಯ ವಾಹನಗಳನ್ನು ಪಡೆಯಲು ಹರಾಜು ಪ್ರಕ್ರಿಯೆಯಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ಬೀದರ್: ತೆಲಂಗಾಣ ರಾಜ್ಯದ ಹೈದ್ರಾಬಾದ್ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ–65ರ ಮುಖಾಂತರ ಮಹಾರಾಷ್ಟ್ರ ರಾಜ್ಯಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ ಒಂದು ಕೋಟಿಗೂ ಮೌಲ್ಯದ ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗೆಜೆಟೆಡ್ ಅಧಿಕಾರಿ ಡಾ.ಬಾಲಕೃಷ್ಣ ರಾಠೋಡ್ ಅವರ ನೇತೃತ್ವದಲ್ಲಿ ರಾಜೇಶ್ವರ ಓವರ್ ಬ್ರಿಡ್ಜ್ ರಾ.ಹೆದ್ದಾರಿ-65 ಮೇಲೆ ಕಾರು ತಪಾಸಣೆ ನಡೆಸಲಾಗುತ್ತಿತ್ತು. ಇದೇ ವೇಳೆ ಆರೋಪಿಗಳು ಪೊಲೀಸರನ್ನು ನೋಡಿ ಕಾರು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು, ರಸ್ತೆ ಬದಿಯ ಡಿವೈಡರ್ ಗೆ ಕಾರು ಡಿಕ್ಕಿಯಾಗಿದೆ. ಈ ವೇಳೆ ಕಾರಿನಿಂದ 2—3 ಗಾಂಜಾ ಪ್ಯಾಕೆಟ್ ಗಳು ಹೊರ ಬಿದ್ದಿದೆ. ಪೊಲೀಸರು ತಪಾಸಣೆ ಮಾಡಿದ ವೇಳೆ ಕಾರಿನಲ್ಲಿ 1,23,90,000 ರೂ. ಮೌಲ್ಯದ ಒಟ್ಟು 123 ಕೆ.ಜಿ. ಗಾಂಜಾ ಪತ್ತೆಯಾಗಿತ್ತು. ತಕ್ಷಣವೇ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೀದರ್ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ನಿರ್ದೇಶನದಂತೆ ಕಾರ್ಯಾಚರಣೆ…

Read More

ಹೆಚ್.ಡಿ.ಕೋಟೆ: ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದೆ. ತಾಲೂಕಿನ ಕಣಿಯನಹುಂಡಿ ಗ್ರಾಮದ ಜಯರಾಮು (55)ಎಂಬ ರೈತ ಪ್ರಾಣ ಕಳೆದುಕೊಂಡ ದುರ್ದೈವಿಯಾಗಿದ್ದಾರೆ. ಜಯರಾಮು ಎರಡು ಎಕರೆ ಜಮೀನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಬೆಳೆದ ಇಬ್ಬರು ಹೆಣ್ಣುಮಕ್ಕಳನ್ನು ಮದುವೆ ಮಾಡಬೇಕೆಂದು ಜನಬ್ಯಾಂಕ್, ಇಕ್ವೀಟಸ್ ಪೈನಾನ್ಸ್ ನಲ್ಲಿ 5 ಲಕ್ಷ ಸಾಲ ಪಡೆದು ಕೊಂಡಿದ್ದರು. ಸಾಲದ ಹಣದಲ್ಲಿ ಮಕ್ಕಳ ಮದುವೆ ಹಾಗೂ ಕೃಷಿ ಚಟುವಟಿಕೆಯನ್ನು ನಡೆಸಿದ್ದರು. ಆದರೆ ಬೆಳೆದ ಬೆಳೆಗೆ ಸರಿಯಾದ ರೀತಿಯ ಬೆಲೆ ಸಿಗದ ಕಾರಣ ಜಯರಾಮು ದಾರಿತೋಚದೆ ಕಂಗಲಾಗಿದ್ದರು. ಇತ್ತ ಸಾಲ ತೀರಿಸುವಂತೆ ಪೈನಾನ್ಸ್ ಕಂಪನಿಯ ಸಿಬ್ಬಂದಿಗಳು ಕಿರುಕುಳ ನೀಡಲು ಪ್ರಾರಂಭಿಸಿದರು, ಸಿಬ್ಬಂದಿಗಳು ನೀಡುವ ಕಿರುಕುಳ ನೀಡಲು ತಡೆಯಲಾಗದೆ, ತನ್ನ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರ್ಕಾರ ಮೈಕ್ರೋ ಪೈನಾನ್ಸ್ ರವರು ಸಾಲಗಾರರಿಗೆ ತೊಂದರೆ ಕೊಡಬಾರದು ಎಂದು ಖಡಕ್ ಸೂಚನೆ ನೀಡಿದ್ದರೂ, ಕಿರುಕುಳ ನೀಡುವ ಸಿಬ್ಬಂದಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಹಾಗೂ ಕುಟುಂಬಕ್ಕೆ ಆಧಾರವಾಗಿದ್ದ…

Read More

ಕೊರಟಗೆರೆ: ಗ್ರಾಪಂಗೆ 15 ದಿನಕ್ಕೊಮ್ಮೆ ಬರುವ ಪಿಡಿಓ ಗ್ರಾಪಂ ಸಭೆಗಳನ್ನೇ ಮಾಡದೇ ಸದಸ್ಯರ ಮನೆ ಹತ್ತಿರ ಹೋಗಿ ಸಹಿ ಪಡೆದು ಅನುದಾನ ದುರುಪಯೋಗ ಮಾಡ್ತಾರೇ ಎಂದು ಆರೋಪಿಸಿ, ಗ್ರಾ.ಪಂ. ಸದಸ್ಯರಿಂದಲೇ ಗ್ರಾಮ ಪಂಚಾಯತಿ ಮುಂಭಾಗ ಬೆಳ್ಳಂಬೆಳಗ್ಗೆ ದಿಢೀರ್ ಪ್ರತಿಭಟನೆ ನಡೆಸಿದರು. ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರ ಗ್ರಾ.ಪಂ. ಕಚೇರಿಯ ಮುಂದೆ ಗ್ರಾಪಂ ಸದಸ್ಯರಿಂದ ಪ್ರತಿಭಟನೆ ನಡೆಯಿತು. ಕಂದಾಯ ವಸೂಲಾತಿಯ ಮಾಹಿತಿ ಕೇಳಿದ್ರೇ ಪುಸ್ತಕಗಳೇ ಕಚೇರಿಯಲ್ಲಿ ಇಲ್ಲ ಕಳೆದಿವೆ, ನಕಲು ರಸೀದಿಗಳು ನನಗೇ ಹಿಂದಿನ ಪಿಡಿಓ ನೀಡಿಲ್ಲ ಅಂತಾರೇ ಎಂದು ಉಡಾಫೆ ಉತ್ತರ ನೀಡ್ತಾರೇ ಎಂಬ ಆರೋಪ ಮಾಡಿದರು. ಅಂಗಡಿ ಮಳಿಗೆ ಮತ್ತು ತರಕಾರಿ ಸಂತೆಯ ಹರಾಜು ಅವಧಿ ಮುಗಿದು ವರ್ಷಗಳೇ ಕಳೆದು ಗ್ರಾ.ಪಂ. ಸದಸ್ಯರಿಗೆ ಅದರ ಮಾಹಿತಿಯೇ ನೀಡದೇ ಗೌಪ್ಯವಾಗಿ ಇಡುತ್ತಿರೋದು ಏಕೆ ಎಂದು ಪ್ರಶ್ನಿಸಿದರು. ಅಕ್ಕಿರಾಂಪುರ ಗ್ರಾ.ಪಂ. ಅಧ್ಯಕ್ಷೆಯ ಪತಿ ನಾಗರಾಜು ಮತ್ತು ಪಿಡಿಓ ರವಿಕುಮಾರ್ ಏಕಪಕ್ಷಿಯ ನಿರ್ಧಾರಕ್ಕೆ ಬೇಸತ್ತು, ನಮ್ಮ ಗ್ರಾ.ಪಂ. ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇವೆ…

Read More

ಪಾವಗಡ: ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿ ಕ್ಯಾತಗಾನಚರ್ಲ ಗ್ರಾಮದ ಅಪರ್ಣ(30) ಎಂಬ ಮಹಿಳೆ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಮಹಿಳೆಯು ಗ್ರಾಮದ ವ್ಯಕ್ತಿಯೊಬ್ಬರ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಅಪರ್ಣಳ ಗಂಡ ನರಸಿಂಹ ಆರೋಪಿಸಿದ್ದಾರೆ. ತಾನು ಶಿವಮಾಲೆ ಧರಿಸಿದ್ದರಿಂದ ಭಾನುವಾರ ರಾತ್ರಿ ದೇವಸ್ಥಾನದಲ್ಲಿ ಮಲಗಿದ್ದೆ. ಪಕ್ಕದ ಮನೆಯವರು ತನ್ನ ಹೆಂಡತಿ ನೇಣು ಹಾಕಿಕೊಂಡಿರುವ ಬಗ್ಗೆ ಸೋಮವಾರ ಬೆಳಿಗ್ಗೆ ನರಸಿಂಹನಿಗೆ ಮಾಹಿತಿ ನೀಡಿರುವುದಾಗಿ ಅವರು ತಿಳಿಸಿದರು. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಮಂಜುನಾಥ್, ಸಬ್‌ ಇನ್ಸೆಪೆಕ್ಟ‌ರ್ ಲಕ್ಷ್ಮಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಿರುಮಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ಬೀದರ್ : ಕರ್ನಾಟಕ ಮಾಧ್ಯಮ ಅಕಾಡೆಮಿಯ 2023–24ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಬೀದರ್ ಜಿಲ್ಲಾ ಪ್ರಜಾವಾಣಿ ಹಿರಿಯ ವರದಿಗಾರ ಶಶಿಕಾಂತ್ ಎಸ್. ಶೆಂಬೆಳ್ಳಿ ಅವರಿಗೆ ಪ್ರದಾನ ಮಾಡಲಾಯಿತು ಸೋಮವಾರ ಬೆಂಗಳೂರಿನ ಐಐಎಸಿಯಲ್ಲಿರುವ ಜೆ.ಎನ್.ಟಾಟಾ ಸಭಾಂಗಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗಿಯಾಗಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ₹50 ಸಾವಿರ ನಗದು,ಪ್ರಮಾಣ ಪತ್ರ ಹೊಂದಿದೆ ಸಮಾರಂಭದಲ್ಲಿ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ, ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನುಂ, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ವಾರ್ತಾ ಇಲಾಖೆ ಆಯುಕ್ತ ಹೇಮಂತ ನಿಂಬಾಳ್ಕರ್, ಅಕಾಡೆಮಿ ಕಾರ್ಯದರ್ಶಿ ಸಹನಾ ಹಾಜರಿದ್ದರು. ಅನಾರೋಗ್ಯದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರುಹಾಜರಾಗಿದ್ದರು. ವರದಿ: ಅರವಿಂದ ಮಲ್ಲೀಗೆ,  ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…

Read More

ಬೀದರ್: ಸಿಆರ್ ಪಿಎಫ್ ಯೋಧನಾಗಿ 21 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ರವೀಂದ್ರರನ್ನು ತಾಯ್ನಾಡಾದ  ಬೀದರ್ ಜಿಲ್ಲೆಯ ಔರಾದ ತಾಲೂಕಿನ ಜೀರ್ಗಾ(ಬಿ) ಗ್ರಾಮದಲ್ಲಿ ಅಭಿನಂದಿಸಲಾಯಿತು. ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು. ಹೇಡಗಾಪೂರ ಸಂಸ್ಥಾನದ ದಾರುಕಲಿಂಗ ಶಿವಾಚಾರ್ಯ, ಸಿ ಪಿ ಐ ರಘುವೀರ್ ಸಿಂಗ್ ಠಾಕೂರ್,ತಾ ಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟ, ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ.ಸಂಜೀವಕುಮಾರ ಲದ್ದಿ, ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಶಶಿಕಾಂತ ಬಂಬುಳಗೆ, ಪಿಕೆಪಿಎಸ್ ಅಧ್ಯಕ್ಷ ಬಸಯ್ಯ ಸ್ವಾಮಿ ಅಭಿನಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವರದಿ: ಅರವಿಂದ ಮಲ್ಲೀಗೆ ಬೀದರ್  ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ತುಮಕೂರು: ಸಾರಿಗೆ ಇಲಾಖೆ, ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ವಾಸನ್ ಐ ಕೇರ್ ವತಿಯಿಂದ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಫೆಬ್ರವರಿ 5ರಂದು ಬೆಳಿಗ್ಗೆ 11 ಗಂಟೆಗೆ “ಆರೋಗ್ಯ ಜಾಗೃತಿ ಮತ್ತು ತಪಾಸಣಾ ಶಿಬಿರ ಹಾಗೂ ಜಾಗೃತಿ ನಡಿಗೆ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ನಗರದ ಬಿ.ಹೆಚ್.ರಸ್ತೆಯಲ್ಲಿರುವ ಆರ್ ಟಿಓ ಕಚೇರಿಯಲ್ಲಿ ನಡೆಯಲಿದ್ದು, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಉದ್ಘಾಟಿಸುವರು. ಅಪರ ಸಾರಿಗೆ ಆಯುಕ್ತ(ಪ್ರವರ್ತನ) ಸಿ.ಮಲ್ಲಿಕಾರ್ಜುನ ಅಧ್ಯಕ್ಷತೆವಹಿಸುವರು. ಶಿಬಿರದಲ್ಲಿ ಉಚಿತವಾಗಿ ಬಿಪಿ, ಸಕ್ಕರೆ ಕಾಯಿಲೆ, ಇಸಿಜಿ, ಕಂಪ್ಯೂಟರೈಸ್ಡ್ ಕಣ್ಣಿನ ಪರೀಕ್ಷೆಯನ್ನು ಮಾಡಲಾಗುವುದು. ವಾಹನ ಮಾಲೀಕರು ಮತ್ತು ಚಾಲಕರು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ. ಪ್ರಸಾದ್ ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ಗದಗ: ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿ, ವಿಡಿಯೋ ಮಾಡಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಕಾಮುಕರನ್ನು ಪೊಲೀಸರು ಬಂಧಿಸಿರುವ ಘಟನೆ ಗದಗ ಜಿಲ್ಲೆಯ ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅತ್ಯಾಚಾರ ನಡೆಸಿದ ಸುಲೇಮಾನ್ ಹಾಗೂ ವಿಡಿಯೋ ಮಾಡಿದ ಅಲ್ತಾಫ್ ಎಂಬ ಇಬ್ಬರು ಬಂಧಿತ ಆರೋಪಿಗಳಾಗಿದ್ದು, ಸೋಮವಾರ ಇವರಿಬ್ಬರನ್ನು ಬಂಧಿಸಲಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನರೇಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಸುಲೈಮಾನ್ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಮತ್ತು ಆತನ ಸಹಚರ ಅಲ್ತಾಫ್ ಇಡೀ ಕೃತ್ಯವನ್ನು ವಿಡಿಯೋ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಮಹಿಳೆಯ ಪೋಷಕರು ಇತ್ತೀಚೆಗೆ ತಮ್ಮ ಮಗಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿದುಕೊಂಡಿದ್ದು, ಸೋಮವಾರ ನರೇಗಲ್ ಪೊಲೀಸರಿಗೆ ದೂರು ನೀಡಿದ್ದು, ತಕ್ಷಣವೇ ಪೊಲೀಸರು ಕಾನೂನು ಕ್ರಮಕೈಗೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…

Read More

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷರ ವಿಚಾರದಲ್ಲಿ ಯತ್ನಾಳ್ ಮತ್ತು ಬಣದ ಹೋರಾಟ ಕೊನೆಗೂ ಫಲ ನೀಡಿದ್ದು, ಶೀಘ್ರವೇ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. ಈ ಬಗ್ಗೆ ಸ್ವತಃ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, 8—10 ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ತಾನೇ ಚುನಾವಣೆ ಗೆದ್ದು ರಾಜ್ಯಾಧ್ಯಕ್ಷನಾಗಿ ಮುಂದುವರಿಯುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಎಂಟು ಹತ್ತು ದಿನಗಳಲ್ಲಿ ಚುನಾವಣೆ ನಡೆದು ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ. ಭಾರತೀಯ ಜನತಾ ಪಾರ್ಟಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಭವಿಷ್ಯ ಯಾವುದೇ ಒಂದು ರಾಜಕೀಯ ಪಕ್ಷದಲ್ಲಿ ಇಷ್ಟೊಂದು ವ್ಯವಸ್ಥಿತವಾಗಿ ಸಂಘಟನೆಯ ಚುನಾವಣೆ ನಡೆಯುತ್ತದೆ ಎಂದರೆ ಅದು ಬಿಜೆಪಿಯಲ್ಲಿ ಮಾತ್ರ ಎಂದು ಅವರು ಹೇಳಿದರು. ಕಳೆದ ಒಂದು ವರ್ಷಗಳಿಂದ ನಮ್ಮ ಪಕ್ಷದ ಹಿರಿಯರು, ಕಾರ್ಯಕರ್ತರು ಒಟ್ಟಾಗಿ ಭ್ರಷ್ಟ, ದುಷ್ಟ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೇವೆ. ನಾನು ರಾಜ್ಯಾಧ್ಯಕ್ಷನಾಗಿ ಹೇಗೆ ಕೆಲಸ ಮಾಡಿದ್ದೇನೆ ಎಂದು ರಾಜ್ಯದ ಜನತೆಗೆ ಕಾರ್ಯಕರ್ತರಿಗೆ, ಪಕ್ಷದ ಹಿರಿಯರಿಗೆ…

Read More