Subscribe to Updates
Get the latest creative news from FooBar about art, design and business.
- ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!
- ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ
- ವಾಲ್ಮೀಕಿ ನಿಗಮ ಹಗರಣ: ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿ ಪ್ರವಾಸ; ಸಚಿವ ಬಿ. ನಾಗೇಂದ್ರ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!
- ‘ನೀವು ಭಯೋತ್ಪಾದಕರಾ?’ ಎಂದು ಪ್ರಶ್ನಿಸಿ ಯುವಕರ ಮೇಲೆ ಬೇಸ್ ಬಾಲ್ ಬ್ಯಾಟ್ ನಿಂದ ಹಲ್ಲೆ; ಎಫ್ ಐಆರ್ ದಾಖಲು
- ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟ: ಬಿಕ್ಕಟ್ಟು ಶಮನಕ್ಕೆ ಹೈಕಮಾಂಡ್ ಮೊರೆ ಹೋದ ಸಿಎಂ ಡಿಕೆಶಿ
- KPSC ಅಕ್ರಮ ಹಾಗೂ ಬಿಡದಿ ಟೌನ್ ಶಿಪ್ ವಿವಾದ: ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ BJP–JDS ಸಜ್ಜು
- ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆಯೇ?: ಪರಿಶೀಲಿಸುವುದು ಹೇಗೆ? ತಪ್ಪದೇ ಈ ಸುದ್ದಿ ಓದಿ
- 36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!
Author: admin
ಕೊರಟಗೆರೆ: ದ್ವಿಚಕ್ರ ವಾಹನ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕೊರಟಗೆರೆ ತಾಲೂಕಿನ ಜಿ. ನಾಗೇನಹಳ್ಳಿ ಸಮೀಪದ ಖಾಸಗಿ ಸೌತೆಕಾಯಿ ಫ್ಯಾಕ್ಟರಿ ಬಳಿ ಹೆದ್ದಾರಿಯಲ್ಲಿ ನಡೆದಿದೆ. ಆಂಧ್ರಪ್ರದೇಶದ ಬಾಳೆಕಟ್ಟೆ ಗುಡಿಬಂಡೆ ಮೂಲದ ವಾಸಿ ಮಂಜುನಾಥ್ (22) ಮೃತಪಟ್ಟ ಯುವಕನಾಗಿದ್ದಾನೆ. ಅಪಘಾತ ನಡೆಯುತ್ತಿದ್ದಂತೆ ಕಾರು ಚಾಲಕ ಕಾರಿನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್ ಹಾಗೂ ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಕೊರಟಗೆರೆ: ಪಟ್ಟಣದ ಹೊರವಲಯದ ಬೈಲಾಂಜನೇಯ ದೇವಸ್ಥಾನ ಬಳಿ ಭಾನುವಾರ ಮಧ್ಯಾಹ್ನ ಪಟ್ಟಣದ ಬಡ ರೈತ ಗೋವಿಂದಪ್ಪ ಹಸುಗಳನ್ನು ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಪಕ್ಕದಲ್ಲಿ ಇದ್ದ ಬೆಟ್ಟದಿಂದ ಬಂದ ಚಿರತೆ ಏಕಾಏಕಿ ಸೀಮೆ ಹಸುವಿನ ಮೇಲೆ ದಾಳಿ ಮಾಡಿದೆ. ಚಿರತೆ ದಾಳಿಯನ್ನು ಕಂಡ ರೈತ ಗೋವಿಂದಪ್ಪ ಕಿರುಚಾಡಿದ್ದಾನೆ ಅಷ್ಟರಲ್ಲಿ ಚಿರತೆ ಕರುವಿನ ಹೊಟ್ಟೆ ಭಾಗದ ಮೇಲೆ ದಾಳಿ ಮಾಡಿದ ಪರಿಣಾಮ ಕರು ಸ್ಥಳದಲ್ಲಿ ಸಾವನಪ್ಪಿತ್ತು. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿದು ಸ್ಥಳಕ್ಕೆ ಬಂದು ಪರಿಶೀಲಿಸಿ, ರೈತರಿಗೆ ಪರಿಹಾರದ ವ್ಯವಸ್ಥೆಯನ್ನು ತಕ್ಷಣ ಮಾಡುತ್ತೇವೆ ಎಂದು ತಿಳಿಸಿ, ಈ ಭಾಗದಲ್ಲಿ ಬೆಟ್ಟ ಗುಡ್ಡಗಳು ಜಾಸ್ತಿ ಇರುವುದರಿಂದ ಚಿರತೆಗಳು ಕರಡಿಗಳು ಕಾಣಿಸಿಕೊಳ್ಳುತ್ತವೆ. ರೈತರು ಈ ಭಾಗದಲ್ಲಿ ಸ್ವಲ್ಪ ಜಾಗೃತಿಯಿಂದ ಇರಬೇಕು ರೈತರು ಸಾರ್ವಜನಿಕರ ಹಿತ ದೃಷ್ಟಿಯಿಂದ ಬೋನುಗಳನ್ನು ಇಡುವ ವ್ಯವಸ್ಥೆಯನ್ನು ಮಾಡುತ್ತೇವೆ ಎಂದರು.. ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ/ತಾಲ್ಲೂಕು ಸವಿತಾ ಸಮಾಜದ ವತಿಯಿಂದ ಫೆಬ್ರವರಿ 4ರಂದು ಬೆಳಿಗ್ಗೆ 10:30 ಗಂಟೆಗೆ ನಗರದ ಅಮಾನಿಕೆರೆ ರಸ್ತೆ ಕನ್ನಡ ಭವನದಲ್ಲಿ “ಸವಿತಾ ಮಹರ್ಷಿ ಜಯಂತಿ” ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಜಯಂತಿ ಕಾರ್ಯಕ್ರಮದ ಪ್ರಯುಕ್ತ ತುಮಕೂರಿನ ಸ್ವದೇಶಿ ವಿಶ್ವಣ್ಣ ಅವರಿಂದ ಉಪನ್ಯಾಸ ಏರ್ಪಡಿಸಲಾಗಿದೆ. ನಂತರ ಸವಿತಾ ಸಮಾಜದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಸಹಾಯಕ ಕೃಷಿ ನಿರ್ದೇಶಕ ಅಶ್ವತ್ಥನಾರಾಯಣ, ತಾಲ್ಲೂಕು ಸವಿತಾ ಸಮಾಜದ ಮಾಜಿ ಅಧ್ಯಕ್ಷ ಸುಬ್ರಮಣ್ಯ ಎನ್., ಶಿವಣ್ಣ ಊರುಕೆರೆ, ಡೋಲು ವಿದ್ವಾನ್ ಹೆಚ್.ಜಿ. ಶಿವಶಂಕರ್ ಹಾಗೂ ಎನ್.ಮಂಜುಳ ಲೀಡೋ ನಾಗರಾಜು ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸುವರು. ಸಮಾಜದ ಗಣ್ಯರು, ಮುಖಂಡರು, ಕಲಾವಿದರು, ಜಿಲ್ಲೆಯ ಸವಿತಾ ಸಮಾನದ ಸಂಘ–ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕನಿರ್ದೇಶಕ ಈಶ್ವರ್ ಕು.ಮಿರ್ಜಿ ತಿಳಿಸಿದ್ದಾರೆ.…
ತುಮಕೂರು: ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಫೆಬ್ರವರಿ 4ರಂದು ನಿಗಧಿಯಾಗಿದ್ದ “ಸಾರ್ವಜನಿಕ ಕುಂದು ಕೊರತೆ ಸಭೆ, ಅಹವಾಲು ಸ್ವೀಕಾರ ಸಭೆ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ”ಯನ್ನು ಫೆಬ್ರವರಿ 6ಕ್ಕೆ ಮುಂದೂಡಲಾಗಿದೆ. ಸಭೆಯನ್ನು ಅಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತಿಪಟೂರು ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪೊಲೀಸ್ ಅಧಿಕ್ಷಕ ಲಕ್ಷ್ಮೀನಾರಾಯಣ ಎ.ವಿ. ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಬಳ್ಳಾರಿ: ಬಳ್ಳಾರಿ ವಿಭಾಗದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಂದ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಸಾರ್ವಜನಿಕರು ವಿವಿಧ ಇಲಾಖೆಗಳಿಗೆ ಸಲ್ಲಿಸಿದ ಅರ್ಜಿಗಳನ್ನು ವಿಲೇ ಮಾಡದಿರುವ ಕುರಿತು ಕುಂದುಕೊರತೆಗಳ ಅಹವಾಲುಗಳ ಸ್ವೀಕಾರ/ಜನ ಸಂಪರ್ಕ ಸಭೆ ಏರ್ಪಡಿಸಲಾಗಿದೆ ಎಂದು ಬಳ್ಳಾರಿ ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿದ್ಧರಾಜು ಸಿ. ಅವರು ತಿಳಿಸಿದ್ದಾರೆ. ಪೊಲೀಸ್ ಅಧೀಕ್ಷಕರಾದ ಸಿದ್ಧರಾಜು.ಸಿ ಮಾರ್ಗದರ್ಶನದಲ್ಲಿ ಡಿಎಸ್ ಪಿ ಆರ್.ವಸಂತ್ ಕುಮಾರ್ ಮತ್ತು ಪೊಲೀಸ್ ನಿರೀಕ್ಷಕರಾದ ಸಂಗಮೇಶ್ ನೇತೃತ್ವದಲ್ಲಿ ಕುರುಗೋಡು, ಸಿರುಗುಪ್ಪ ಮತ್ತು ಬಳ್ಳಾರಿ ತಾಲ್ಲೂಕು ಕೇಂದ್ರಗಳಲ್ಲಿ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ನಡೆಯಲಿದೆ. ಅಹವಾಲು ಸ್ವೀಕರಿಸುವ ದಿನ ಮತ್ತು ಸ್ಥಳ: ಫೆ.12 ರಂದು ಬೆಳಿಗ್ಗೆ 11:30 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕುರುಗೋಡು ತಹಶೀಲ್ದಾರರ ಕಚೇರಿ ಸಭಾಂಗಣ, ಫೆ.15 ರಂದು ಬೆಳಿಗ್ಗೆ 11:30 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಿರುಗುಪ್ಪ ಸಿಡಿಪಿಓ ಕಚೇರಿ ಸಭಾಂಗಣ ಮತ್ತು ಫೆ.19 ರಂದು ಬೆಳಿಗ್ಗೆ 11:30 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬಳ್ಳಾರಿಯ ನೂತನ ಜಿಲ್ಲಾಡಳಿತ ಭವನದ ತಹಶೀಲ್ದಾರರ…
ಧಾರವಾಡ: ಜಾಗತೀಕರಣ ಹಾಗೂ ಉದಾರೀಕರಣದ ಇಂದಿನ ಕಾಲಘಟ್ಟದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಯಲ್ಲಿ ಸಾಮಾಜಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಾಗ ಮಾನವ, ಸಂಘಟನೆಗಳು ಯಶಸ್ಸು ಕಾಣಲು ಸಾಧ್ಯ ಎಂದು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯಧ್ಯಕ್ಷರಾದ ಪದ್ಮಪ್ರಕಾಶ್ ತಿಳಿಸಿದರು. ಅವರಿಂದು ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಪ್ರಥಮ ವಲಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೈನ ಸಮಾಜದ ಅಭಿವೃದ್ಧಿಯ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನ ಹೊತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಮಾಜದ ಅಭಿವೃದ್ಧಿಗೆ ಪ್ರಗತಿಪರ ಕಾಳಜಿ ಹೊಂದಿ ಕಾರ್ಯಕ್ರಮ ಗಳನ್ನ ರೂಪಿಸಬೇಕು ಎಂದು ಸಲಹೆ ನೀಡಿದರು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷರು ಹಾಗೂ ರತ್ನತ್ತ್ರೆಯ ಕ್ರಿಯೇಷನ್ ನಿರ್ದೇಶಿಕ ಡಾ.ನೀರಜಾ ನಾಗೇಂದ್ರ ಕುಮಾರ್ ಮಾತನಾಡಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹಿಳಾ ಸಮಾಜಗಳು ಕಾರ್ಯ ಪ್ರವೃತ್ತರಾಗಬೇಕು. ಅಲ್ಲದೇ ಮಹಿಳಾ ಸಮಾಜದ ಕಾರ್ಯದರ್ಶಿಗಳು ತಮ್ಮ ಸಮಾಜದ ಕಾರ್ಯಕ್ರಮಗಳ ಬಗ್ಗೆ ವರದಿ ಮಾಡಬೇಕೆಂದರು. ಕಾರ್ಯಕ್ರಮದಲ್ಲಿ ಡಾ. ಪದ್ಮಲತಾ ನಿರಂಜನ್ ಒಕ್ಕೂಟದ ಬಗ್ಗೆ ಅರ್ಥಪೂರ್ಣ…
ತುಮಕೂರು: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಯುವಕ ರೈಲಿನಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ತುಮಕೂರು ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ 4 ರಲ್ಲಿ ನಡೆದಿದೆ. ಬೆಂಗಳೂರಿನಿಂದ ತುಮಕೂರಿಗೆ ಬರುತ್ತಿದ್ದ ಯುವಕ ಛಾಯಾಂಕ್ (24) ಮೃತಪಟ್ಟ ಯುವಕನಾಗಿದ್ದಾನೆ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಅಮ್ಮಸಂದ್ರ ಗ್ರಾಮದ ಯುವಕ ಪುಷ್ಪಕ್ ಎಕ್ಸ್’ಪ್ರೆಸ್ ರೈಲಿನಲ್ಲಿ ಆಗಮಿಸಿದ್ದು, ರೈಲಿನಿಂದ ಆಯತಪ್ಪಿ ತಾನು ಬಂದ ರೈಲಿನಡಿಗೆ ಸಿಲುಕಿದ್ದಾರೆ. ಘಟನೆಯಿಂದಾಗಿ ಯುವಕನ ಕೈ ಕಾಲುಗಳಿಗೆ ತೀವ್ರವಾದ ಏಟು ಬಿದ್ದಿತ್ತು. ನರಳಾಡುತ್ತಿದ್ದ ಯುವಕನನ್ನು ಕಂಡು ಮನೆಯವರ ಪೋನ್ ನಂಬರ್ ಪಡೆದು ಮಾಹಿತಿ ನೀಡಲಾಗಿತ್ತು. ಆದರೆ ಆಸ್ಪತ್ರೆಗೆ ರವಾನಿಸುವಷ್ಟರಲ್ಲಿ ಯುವಕ ಸಾವನ್ನಪ್ಪಿದ್ದ. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದರೆ, ಯುವಕನನ್ನು ರಕ್ಷಿಸಲು ಸಾಧ್ಯವಾಗುತ್ತಿತ್ತು ಎನ್ನುವ ಅಭಿಪ್ರಾಯವೂ ಕೇಳಿ ಬಂದಿದೆ. ಮೃತ ಛಾಯಾಂಕ್ ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಕೆಲಸ ಮಾಡ್ತಿದ್ದ ಎಂದು ತಿಳಿದು ಬಂದಿದೆ. ತುಮಕೂರು ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…
ಬೆಂಗಳೂರು: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರನ್ನು ವಿಶೇಷ ತನಿಖಾ ತಂಡ(ಎಸ್ ಐಟಿ) ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪಿಎಸ್ ಐ ನೇಮಕಾತಿ ಹಗರಣದಲ್ಲಿ ಮಾಗಡಿ ಮೂಲದವರು ಹಾಗೂ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಇದನ್ನು ಅಶ್ವಥ್ ನಾರಾಯಣ ಮಾಡಿಸಿದ್ದಾರೆ ಎನ್ನುವ ಆರೋಪಗಳ ಹಿನ್ನೆಲೆ ಅವರನ್ನು ವಿಚಾರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಸರ್ಕಾರ ಪಿಎಸ್‌ಐ ಹಗರಣದ ಮರುತನಿಖೆಗೆ ಆದೇಶಿಸಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿರುವ ಎಸ್ ಐಟಿ ಅಶ್ವಥ್ ನಾರಾಯಣ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದೆ. ವಿಚಾರಣೆಗೆ ಹಾಜರಾದ ಅಶ್ವಥ್ ನಾರಾಯಣ ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ, ಇದೊಂದು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ಮೈಸೂರು: ತನ್ನ ಸ್ನೇಹಿತನಿಗೆ ಹಣ, ಕಾರು ಸಾಲ ತನ್ನ ಹೆಸರಿನಲ್ಲಿ ತೆಗೆಸಿಕೊಟ್ಟಿದ್ದ ವ್ಯಕ್ತಿಯೊಬ್ಬರು ಮೋಸ ಹೋಗಿದ್ದು, ಇದೀಗ ಬ್ಯಾಂಕ್ ಸಾಲ ತೀರಿಸಲಾಗದೇ ನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ತಾಲೂಕಿನ ದಂಡಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಂಜನಗೂಡು ತಾಲೂಕಿನ ಮುಲ್ಲೂಪುರ ಗ್ರಾಮದ ಸಿದ್ದೇಶ್ (40) ಆತ್ಮಹತ್ಯೆಗೆ ಶರಣಾಗಿರುವವರು ಎಂದು ತಿಳಿದು ಬಂದಿದೆ. ಸಿದ್ದೇಶ್ ತನ್ನ ಸ್ನೇಹಿತ ಮಣಿಕಂಠ ಎಂಬಾತನಿಗೆ ಬ್ಯಾಂಕ್ ನಲ್ಲಿ ಕಾರು ಹಾಗೂ ತನ್ನ ಹೆಸರಿನಲ್ಲಿ 2 ಲಕ್ಷ ರೂಪಾಯಿ ಸಾಲ ಕೊಡಿಸಿದ್ದರು. ಆದರೆ ಸ್ನೇಹಿತ 2 ಕಂತು ಕಟ್ಟಿ ಸುಮ್ಮನಾಗಿದ್ದ. ಇದರಿಂದಾಗಿ ಸಾಲತೀರಿಸಿ ಎಂದು ಬ್ಯಾಂಕ್ ನವರು ಸಿದ್ದೇಶ್ ಗೆ ಕರೆ ಮಾಡುತ್ತಿದ್ದರು. ಬ್ಯಾಂಕ್ ನವರ ಕರೆ ಹೆಚ್ಚಾಗುತ್ತಿದ್ದಂತೆಯೇ ಸಿದ್ದೇಶ್ ಮಾನಸಿಕವಾಗಿ ನೊಂದು, ಸ್ನೇಹಿತನಿಗೆ ಸಾಲ ತೆಗೆಸಿಕೊಟ್ಟಿರುವ ವಿಚಾರದ ಬಗ್ಗೆ ವಿಡಿಯೋ ಮಾಡಿ, ಬಳಿಕ ಸಾವಿಗೆ ಶರಣಾಗಿದ್ದಾರೆ. ಘಟನೆ ಸಂಬಂಧ ವರುಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ…
ಬೆಂಗಳೂರು: ಕುಂಭಮೇಳಕ್ಕೆ ಹೋದ್ರೆ ತಪ್ಪೇನಿದೆ? ಕುಂಭ ಮೇಳ ಎನ್ನುವುದು ಪುಣ್ಯ ಸ್ಥಾನ. ಹಲವರಿಗೆ ಅದರ ಮೇಲೆ ನಂಬಿಕೆ ಇದೆ, ನಂಬಿಕೆ ಇದ್ದವರು ಹೋಗುತ್ತಾರೆ. ಅವರವರ ನಂಬಿಕೆ ಅವರವರಿಗೆ. ನಂಬಿಕೆಯನ್ನು ಪ್ರಶ್ನೆ ಮಾಡಲು ನಾನು ಯಾರು? ಎಂದು ನಟ ಪ್ರಕಾಶ್ ರಾಜ್ ಪ್ರಶ್ನೆ ಮಾಡಿದ್ದಾರೆ. ಇತ್ತೀಚೆಗೆ ಕುಂಭಮೇಳದಲ್ಲಿ ಪ್ರಕಾಶ್ ರಾಜ್ ಸ್ನಾನ ಮಾಡುತ್ತಿರುವಂತೆ ಎಐ ಚಿತ್ರ ಸೃಷ್ಟಿಸಿದ್ದ ಕಿಡಿಗೇಡಿಗಳ ವಿರುದ್ಧ ಪ್ರಕಾಶ್ ರಾಜ್ ದೂರು ನೀಡಿದ್ದರು. ಇದೀಗ ಕುಂಭ ಮೇಳದ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗಳಿಗೆ ಮತ್ತೆ ಪ್ರಕಾಶ್ ರಾಜ್ ಉತ್ತರಿಸಿದ್ದಾರೆ. ನನಗೆ ವೈಯಕ್ತಿಕವಾಗಿ ದೇವರ ಮೇಲೆ ನಂಬಿಕೆ ಇಲ್ಲ. ನಾನು ದೇವರು ಇಲ್ಲದೇ ಬದುಕುತ್ತೇನೆ ಆದರೆ ಮನುಷ್ಯರು ಇಲ್ಲದೇ ಬದುಕುವುದಿಲ್ಲ. ಸಮಸ್ಯೆಗಳು ಬಂದಲ್ಲಿ ನಮಗೆ ಮನುಷ್ಯರು ಬೇಕು ಎಂದು ನಾನು ನಂಬುತ್ತೇನೆ. ಹಾಗೆಂದ ಮಾತ್ರಕ್ಕೆ ಬೇರೆಯವರ ನಂಬಿಕೆಗಳನ್ನು ಪ್ರಶ್ನೆ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಒಬ್ಬರ ಮನಸ್ಸಿಗೆ ಶಾಂತಿ, ಚೈತನ್ಯ ಕೊಡುತ್ತದೆ ಎಂತಾದರೆ ಅವರು ಕುಂಭಮೇಳಕ್ಕೆ ಹೋದರೆ ತಪ್ಪೇನೂ ಇಲ್ಲ. ಆದರೆ ಈ…