Author: admin

ಪಶ್ಚಿಮ ಬಂಗಾಳ:  ಗಂಡನ ಕಿಡ್ನಿಯನ್ನು 10 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಹೆಂಡತಿಯೊಬ್ಬಳು ಪ್ರಿಯಕರನೊಂದಿಗೆ ಪರಾರಿಯಾಗಿರುವ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಚಾನ್ ಕ್ರಿಲ್ ನಲ್ಲಿ ನಡೆದಿದೆ. ಚಾನ್ ಕ್ರಿಲ್ ನಲ್ಲಿ ವರ್ಣಚಿತ್ರಕಾರನಾಗಿ ಕೆಲಸ ಮಾಡುತ್ತಿದ್ದ ಪತಿ ತನ್ನ ಪತ್ನಿಯಿಂದಲೇ ಮೋಸ ಹೋಗಿದ್ದಾನೆ. ಮಗಳ ವಿದ್ಯಾಭ್ಯಾಸಕ್ಕೆ ಹಣ ಸಾಕಾಗುತ್ತಿಲ್ಲ ಎಂಬ ನೆಪವೊಡ್ಡಿ ಪತ್ನಿ ಕಿಡ್ನಿ ಮಾರಾಟ ಮಾಡುವಂತೆ ನಿರಂತರವಾಗಿ ಪತಿಯ ಮೇಲೆ ಪತ್ನಿ ಒತ್ತಡ ಹೇರುತ್ತಿದ್ದಳು. ಮಗಳ ಭವಿಷ್ಯಕ್ಕಾಗಿ ಕಿಡ್ನಿ ಮಾರಾಟ ಮಾಡಲು ಕೊನೆಗೂ ಪತಿ ಒಪ್ಪಿಕೊಂಡಿದ್ದ. ಬಳಿಕ ಒಂದು ತಿಂಗಳ ನಂತರ ಒಂದು ಮೂತ್ರ ಪಿಂಡವನ್ನು 10 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ. ಕಿಡ್ನಿ ಮಾರಾಟ ಮಾಡಿದ ಹಣ ಪತ್ನಿಯ ಕೈಗೆ ಸೇರುತ್ತಿದ್ದಂತೆಯೇ, ಹಣವನ್ನು ಬ್ಯಾಂಕಿಗೆ ಹಾಕಿ ಬರುತ್ತೇನೆ ಎಂದು ತನ್ನ ಬಳಿಯೇ ಇರಿಸಿಕೊಂಡ ಪತ್ನಿ ನಡು ರಾತ್ರಿ ತನ್ನ ಪ್ರಿಯಕರನೊಂದಿಗೆ ಊರು ಬಿಟ್ಟು ಎಸ್ಕೇಪ್ ಆಗಿದ್ದಾಳೆ. ಸದ್ಯ ಮೋಸ ಹೋದ ಪತಿ ಸ್ಥಳೀಯ ಪೊಲೀಸ್ ಠಾಣೆ ಮೆಟ್ಟಿಲೇರಿ ನ್ಯಾಯ…

Read More

ಮುಂಬೈ: ಜನರಿಲ್ಲದ ರೈಲಿನ ಬೋಗಿಯೊಂದರಲ್ಲಿ ಮಹಿಳೆಯೊಬ್ಬರ ಮೇಲೆ ಕಾಮುಕನೊಬ್ಬ ಅತ್ಯಾಚಾರ ನಡೆಸಿರುವ ಘಟನೆ ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ನಡೆದಿದೆ. ಮಧ್ಯವಯಸ್ಸಿನ ಮಹಿಳೆ ಮತ್ತು ಅವರ ಮಗ ಶನಿವಾರ ರಾತ್ರಿ ಬೇರೆ ನಿಲ್ದಾಣದಿಂದ ಬಾಂದ್ರಾ ಟರ್ಮಿನಸ್‌ಗೆ ಬಂದಿಳಿದ ನಂತರ ಮಹಿಳೆ ಫ್ಲಾಟ್ ಫಾರಂನ ಮತ್ತೊಂದು ಬದಿಯಲ್ಲಿದ್ದ ರೈಲು ಹತ್ತಿದ್ದಾರೆ. ಆ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ.  ಇದೇ ವೇಳೆ ಕೂಲಿ ಕಾರ್ಮಿನೊಬ್ಬ ಈ ರೈಲಿಗೆ ಹತ್ತಿದ್ದು, ಮಹಿಳೆಯ  ಮೇಲೆ ಅತ್ಯಾಚಾರ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇದೇ ವೇಳೆ ಮಹಿಳೆ ಬಾಂದ್ರಾ ಜಿಆರ್ ಪಿ ಠಾಣೆ ಸಂಪರ್ಕಿಸಿದ್ದು, ದೂರು ದಾಖಲಿಸಿದ್ದಾರೆ. ರೈಲ್ವೆ ಪೊಲೀಸರು ಅನೇಕ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ ಬಳಿಕ ಕೂಲಿಕಾರ್ಮಿಕನನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾದಡಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…

Read More

ಬೆಂಗಳೂರು: ರಾಜ್ಯದಲ್ಲಿ  ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದ್ದು ದಿನಕ್ಕೊಂದು ಮಾನಭಂಗ, ಅತ್ಯಾಚಾರ ಪ್ರಕರಣಗಳು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುತ್ತಲೇ ಇದೆ ಎಂದು ಆರ್.ಅಶೋಕ್ ಹೇಳಿದ್ದಾರೆ. ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು,  ಮಂಡ್ಯದಲ್ಲಿ 8 ವರ್ಷದ ಬಾಲಕಿಯನ್ನು ಬೆದರಿಸಿ ಸರ್ಕಾರಿ ಶಾಲಾ ಅವರಣದಲ್ಲೇ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿರುವ ಹೃದಯ ವಿದ್ರಾವಕ ಘಟನೆ ರಾಜ್ಯದಲ್ಲಿ ತಾಂಡವವಾಡುತ್ತಿರುವ ಅರಾಜಕತೆಗೆ ಮತ್ತೊಮ್ಮೆ ಕನ್ನಡಿ ಹಿಡಿದಿದೆ ಎಂದಿದ್ದಾರೆ. ಸಿಎಂ  ಸಿದ್ದರಾಮಯ್ಯನವರೇ, ಮಹಿಳೆಯರ ಮೇಲೆ ಅತ್ಯಾಚಾರವಾದರೆ ಬಿಜೆಪಿ ಕಾಲದಲ್ಲಿ ರೇಪ್ ಆಗಿಲ್ಲವಾ ಎಂದು ಉಡಾಫೆ ಕೊಡುತ್ತೀರಲ್ಲಾ, ನಿಮ್ಮ ಸರ್ಕಾರದ ಈ ಸಂವೇದನಾರಹಿತ ಧೋರಣೆ, ಅಲಕ್ಷ್ಯವೇ ಇವತ್ತಿನ ಅರಾಜಕತೆಗೆ ಕಾರಣ ಎಂದು ಅವರು ಪ್ರಶ್ನಿಸಿದ್ದಾರೆ. ಆಕಸ್ಮಿಕ ಗೃಹ ಸಚಿವ ಡಾ.ಪರಮೇಶ್ವರ್ ಅವರೇ, 8 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆ ಮೂವರು ಕಾಮುಕರನ್ನು ಪತ್ತೆ ಹಚ್ಚಿ, ಬಂಧಿಸಿ, ಕಾನೂನಿನ ವಶಕ್ಕೆ ಒಪ್ಪಿಸಿ. ಮಹಿಳೆಯರ ಸುರಕ್ಷತೆಯ ವಿಷಯವನ್ನ ಗಂಭೀರವಾಗಿ ಪರಿಗಣಿಸಿ ನಾಡಿನ ಹೆಣ್ಣುಮಕ್ಕಳಿಗೆ…

Read More

ತುಮಕೂರು:  ನಗರದ ಯಲ್ಲಾಪುರ ಕುಶಾಲ್ ಬಾರ್ & ರೆಸ್ಟೋರೆಂಟ್ ನಲ್ಲಿ  ಕುಡಿತದ ಮತ್ತಿನಲ್ಲಿ ಇಬ್ಬರ ನಡುವೆ ಭಾರೀ ಗಲಾಟೆ ಸಂಭವಿಸಿ ಮಾರಾಮಾರಿ ನಡೆದಿದೆ. ಅಂತರಸನಹಳ್ಳಿಯ ರೌಡಿಶೀಟರ್ ಭರತ್ ಹಾಗೂ ಧನುಷ್ ಮಧ್ಯೆ ಮಾತಿನ ಚಕಮಕಿ ಆರಂಭವಾಗಿದ್ದು ಹಲ್ಲೆಗೆ ಕಾರಣವಾಗಿದೆ. ಇಬ್ಬರು ಒಟ್ಟಿಗೆ ಕುಡಿದು ಗಲಾಟೆ ಮಾಡಿಕೊಂಡಿದ್ದಾರೆ.  ಈ ವೇಳೆ ಭರತ್ ತನ್ನ ಕೈಯಲ್ಲಿದ್ದ ಮದ್ಯದ ಬಾಟಲಿನಿಂದ ಧನುಷ್ ಗೆ ಹೊಡೆದಿದ್ದು, ಇದರಿಂದ ಧನುಷ್ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯವಾಗಿದೆ. ಗಾಯಗೊಂಡ ಧನುಷ್ ಕೂಡ ತಿರುಗಿ ಹಲ್ಲೆ ನಡೆಸಿದ್ದಾನೆ. ಭರತ್ ತಲೆಯ ಮೇಲೆ ಹಾಲೋ ಬ್ರಿಕ್ಸ್ ಎತ್ತಿ ಹಾಕಿದ್ದಾನೆ. ಇದರಿಂದ ಭರತ್ ತೀವ್ರವಾಗಿ ಗಾಯಗೊಂಡಿದ್ದಾನೆ. ಇಬ್ಬರೂ  ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇಬ್ಬರು ನಟೋರಿಯಸ್ ರೌಡಿಶೀಟರ್ ರೋಹಿತ್ ಗ್ಯಾಂಗ್ ನ ಸದಸ್ಯರಾಗಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳ ವಿಚಾರಣೆ ಹಾಗೂ ಈ ಜಗಳದ ಹಿಂದಿನ ಕಾರಣ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. …

Read More

ತುಮಕೂರು :  ನಗರದಲ್ಲಿ ಒಂಟಿ ಮಹಿಳೆಯರನ್ನೇ ಗುರಿಯಾಗಿ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಅಂತರರಾಜ್ಯ ಕಳ್ಳರನ್ನು ಹೊಸ ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈ ಮೂಲದ ಭರತ್ (40) ಮತ್ತು ಜಮಾಲುದೀನ್ (38) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 6 ಲಕ್ಷ 70 ಸಾವಿರ ರೂಪಾಯಿ ಮೌಲ್ಯದ 113 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದು, ಈ ಮೂಲಕ ಎರಡು ಪ್ರತ್ಯೇಕ ಸರಗಳ್ಳತನ ಪ್ರಕರಣಗಳನ್ನ ಪತ್ತೆ ಹಚ್ಚಲಾಗಿದೆ. ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆ ಮತ್ತು ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಸರಗಳ್ಳತನ ಪ್ರಕರಣಗಳಲ್ಲಿ ಈ ಬಂಧಿತರು ಭಾಗಿದ್ದಾರೆ. ಆರೋಪಿಗಳು ಬೈಕ್ ನಲ್ಲಿ ಸಂಚರಿಸುತ್ತಾ ವಾಕಿಂಗ್ ಮಾಡುವ ಒಂಟಿ ಮಹಿಳೆಯರನ್ನ ಗುರಿಯಾಗಿ ಹಿಂಬಾಲಿಸುತ್ತಿದ್ದರು. ಸೂಕ್ತ ಅವಕಾಶ ಕಂಡು ಕೂಡಲೇ ಮಹಿಳೆಯರ  ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಈ ಖದೀಮರು ತುಮಕೂರಿನ ವಾಲ್ಮೀಕಿ ನಗರದಲ್ಲಿ ವಸಂತಮ್ಮ ಎಂಬ ಮಹಿಳೆಯ ಸುಮಾರು 70 ಗ್ರಾಂ ತೂಕದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದರು. ಈ ಪ್ರಕರಣ ಸಂಬಂಧ ವಸಂತಮ್ಮ ಹೊಸ…

Read More

ಪಾವಗಡ: ಇಂದಿನ ಜಾಗತಿಕರು ಹಾಗೂ ಉದಾರಿ ಕರಣದ ನೀತಿಯಿಂದ ಜೈನ ಧರ್ಮದಲ್ಲಿ ಸಂಸ್ಕೃತಿ, ಸಂಸ್ಕಾರ ಪರಂಪರೆಗಳು ,ನೀತಿ, ಸಿದ್ಧಾಂತಗಳು ಅವನತಿಯತ್ತ ಸಾಗಿದ್ದು,  ಇದನ್ನು ಉಳಿಸಿ  ಬೆಳೆಸಲು ಪೋಷಕರು ತಮ್ಮ ಮಕ್ಕಳಲ್ಲಿ ಧಾರ್ಮಿಕ ಭಾವನೆ ಮೂಡಿಸುವುದು ಅತಿ ಅಗತ್ಯವಾಗಿದೆ ಎಂದು ಶ್ರೀ ಕ್ಷೇತ್ರ ಆರತಿಪುರ ದಿಗಂಬರ ಜೈನಮಠದ ಪೀಠಾಧ್ಯಕ್ಷರಾದ ಸ್ವಸ್ತಿ ಶ್ರೀ  ಸಿದ್ಧಾಂತ ಕೀರ್ತಿ ಭಟ್ಟರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು. ಅವರಿಂದು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನಿಡಿಗಲ್ ದುರ್ಗದಲ್ಲಿ ಶ್ರೀ ಕಷ್ಟಹರಣ ಪಾರ್ಶ್ವನಾಥ   ಜಿನಮಂದಿರದ ವಾರ್ಷಿಕ ಪೂಜಾ ಮಹೋತ್ಸವದ  ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜೈನ ಧರ್ಮ ಪುರಾತನವಾದದ್ದು ಸಂಸ್ಕೃತಿ, ಸಂಸ್ಕಾರ ಶಾಂತಿ, ಆಹಿಂಸೆ ಹೊಂದಿದ ಧರ್ಮವಾಗಿದ್ದು ಮಕ್ಕಳಿಗೆ ಮೊದಲು ಸಂಸ್ಕಾರ, ಸಂಸ್ಕೃತಿ ನೀಡುವುದು ಪೋಷಕರ ಕರ್ತವ್ಯವಾಗಿದೆ .ಮೋಕ್ಷ, ಧರ್ಮ, ಕಾರ್ಯಗಳಲ್ಲಿ ಗಂಡಸರು ಮಹತ್ವದ ಪಾತ್ರ ವಹಿಸಿದ್ದು, ಹೆಣ್ಣು ಮಕ್ಕಳು  ಕೌಟುಂಬಿಕ ವಿಚಾರಗಳಿಗೆ  ಆದ್ಯತೆ ನೀಡುತ್ತಿದ್ದಾರೆ ಎಂದರು. ಕಳೆದ 12ನೇ ಶತಮಾನದಿಂದ ಈ ಬಸದಿಯನ್ನು ಸ್ಥಳೀಯರು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ…

Read More

ತುಮಕೂರು:  ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಸತತ 8ನೇ ಕೇಂದ್ರ ಬಜೆಟ್ ಮಂಡಿಸಿದ ಮಹಿಳಾ ಸಚಿವೆ ಎಂಬ ಖ್ಯಾತಿಗೆ ಪಾತ್ರವಾಗಿರುವುದಕ್ಕೆ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಪಿ. ಆರ್. ಕುರಂದವಾಡ ಶ್ಲಾಘಿಸಿದ್ದಾರೆ. 2025ನೇ ಸಾಲಿನ ಬಜೆಟ್ ನಲ್ಲಿ ಪ್ರಮುಖವಾಗಿ ರಫ್ತು ಮಾಡುವ ಎಂಎಸ್’ಎಂಇ ಗಳಿಗೆ 20 ಕೋಟಿಯವರೆಗೆ ಸಾಲ ಸೌಲಭ್ಯ ಲಭಿಸಿದೆ ಎಂದಿದ್ದಾರೆ. 27 ವಲಯಗಳಲ್ಲಿ ಸಾಲ ಯೋಜನೆ, ಕುಲಕರ್ಮಿಗಳ ಆಧಾರಿತ ಎಂಎಸ್ ಎಂಇ ಗಳಿಗೆ ವಿಶೇಷ ಯೋಜನೆ, ಒಂದು ಕೋಟಿ ಕೆಲಸಗಾರರಿಗೆ ಹೆಲ್ತ್ ಇನ್ಶೂರೆನ್ಸ್, ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಯೋಜನೆ, ಹೊಸ ಉದ್ಯೋಗ ಸೃಷ್ಟಿಗೆ ಪ್ರವಾಸಿ ಕೇಂದ್ರಗಳಲ್ಲಿ ಒತ್ತು ನೀಡಿರುವುದು ಸ್ವಾಗತ ಎಂದಿದ್ದಾರೆ. 120 ಹೊಸ ಕೇಂದ್ರಗಳಿಗೆ ವಿಮಾನ  ಸಂಪಕಕ್ಕೆ ಆದ್ಯತೆ, ಸ್ಥಳೀಯ ಮಟ್ಟದ ಉತ್ಪಾದನೆಗಳ ರಫ್ತಿಗೆ ಆದ್ಯತೆ, ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಗೆ ಆದ್ಯತೆ, ವಿಮಾಕ್ಷೇತ್ರದಲ್ಲಿ 100% ವಿದೇಶಿ ಹೂಡಿಕೆ, ರಫ್ತು ಉತ್ತೇಜನಕ್ಕೆ ಮಂಡಳಿ ಸ್ಥಾಪನೆ, ಡಿಜಿಟಲ್ ವ್ಯಾಪಾರವೃದ್ಧಿಗಾಗಿ ಉತ್ತೇಜನ, ಇನ್ಶೂರೆನ್ಸ್ ವಲಯದಲ್ಲಿ…

Read More

ಫೈಜಾಬಾದ್: ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಿದ್ದ ದಲಿತ ಸಮುದಾಯಕ್ಕೆ ಸೇರಿದ 22 ವರ್ಷ ವಯಸ್ಸಿನ ಯುವತಿಯ ಕಣ್ಣುಗುಡ್ಡೆ ಕಿತ್ತು, ಬಟ್ಟೆ ಹರಿದು ಭೀಕರವಾಗಿ ಅತ್ಯಾಚಾರ ನಡೆಸಿರುವ ಘಟನೆ ಅಯೋಧ್ಯೆಯ ಬಳಿ ನಡೆದಿದೆ. ಗುರುವಾರ ರಾತ್ರಿಯಾದರೂ ಯುವತಿ ಮನೆಗೆ ಬಾರದ ಹಿನ್ನೆಲೆ ಆತಂಕಗೊಂಡ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆದರೆ ದೂರು ಸ್ವೀಕರಿಸಬೇಕಿದ್ದ ಪೊಲೀಸರು, ನಿಮ್ಮ ಮಗಳನ್ನು ನೀವೇ ಹುಡುಕಿ ಎಂದು ಗದರಿಸಿ ಪೋಷಕರನ್ನು ಕಳುಹಿಸಿದ್ದರು. ಕೊನೆಗೆ ಅಯೋಧ್ಯೆಯ ಕಾಲುವೆಯೊಂದರಲ್ಲಿ ಯುವತಿಯ ಮೃತದೇಹ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹದ ಮೇಲೆ ಬಟ್ಟೆ ಇರಲಿಲ್ಲ. ಕಣ್ಣುಗುಡ್ಡೆ ಕಿತ್ತುಹಾಕಲಾಗಿದೆ. ದೇಹದ ಹಲವೆಡೆ ಗಂಭೀರ ಗಾಯಗಳಾಗಿವೆ. ಕೈಕಾಲುಗಳನ್ನು ಹಗ್ಗಗಳಿಂದ ಕಟ್ಟಲಾಗಿತ್ತು ಆಕೆಯ ಮೇಲೆ ಅತ್ಯಾಚಾರ ನಡೆಸಿ ನಂತರ ಕೊಲ್ಲಲಾಗಿದೆ ಎಂದು ಪೋಷಕರು ಶಂಕಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕುಟುಂಬವು ಶುಕ್ರವಾರ ದೂರು ದಾಖಲಿಸಿದ ನಂತರ ಪೊಲೀಸರು ನಾಪತ್ತೆ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿ ಅಶುತೋಷ್ ತಿವಾರಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಮೈಸೂರು:  ಭಾರತ ರಾಮಾಯಣ, ಮಹಾಭಾರತದ ಸನ್ನಿವೇಶಗಳನ್ನು ವಿಶಿಷ್ಟ ಕಥೆಗಳಾಗಿ ನೀಡುವ ಮೂಲಕ ಜಗತ್ತಿನಲ್ಲಿ ಕಥೆಗಳ ಆಗರವೆನಿಸಿದೆ. ಭಾರತದಲ್ಲಿ ನಿರ್ಮಿತ ಸಿನೆಮಾಗಳು ಕೂಡ ಜಾಗತಿಕ ಮಟ್ಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್.ಮುರುಗನ್ ಅವರು  ಹೇಳಿದರು‌. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎರಡು ದಿನಗಳ ಕಾಲ ನಡೆದ ಮೂರನೇ ‘ಪರಿದೃಶ್ಯ’ ಅಂತರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತವನ್ನು ಜಾಗತಿಕ ಮಟ್ಟದ ಸೃಜನಾತ್ಮಕ ಆರ್ಥಿಕತೆಯಾಗಿ ಮಾಡಲು ಆಡಿಯೋ ವಿಶ್ಯುವಲ್ ಎಂಟರ್ ಟೈನ್ಮೆಂಟ್ ಸಮ್ಮಿಟ್ ಅನ್ನು 2019 ರಲ್ಲಿ  ಘೋಷಣೆ ಮಾಡಿದ್ದು  ಈ ವರ್ಷ ಅದು ನಡೆಯಲಿದೆ. ಎಲ್ಲಾ ರೀತಿಯ ಮಾಧ್ಯಮಗಳಿಗೂ ಇದು ಪೂರಕವಾದದ್ದು. ಪಾರಂಪರಿಕ ಮಾಧ್ಯಮ, ಟಿವಿ ಮಾಧ್ಯಮ, ಗೇಮಿಂಗ್, ಸಾಮಾಜಿಕ ಜಾಲತಾಣ ಕ್ಷೇತ್ರಕ್ಕೆ ಪ್ರೋತ್ಸಾಹದಾಯಕವಾಗಿದೆ. ಯಂಗ್ ಫಿಲ್ಮ್ ಮೇಕರ್ಸ್ ಚಾಲೆಂಜ್ ಎಂಬುದು ಕೂಡ ಇದರ ಒಂದು ಭಾಗ. ಇದರ ಅಡಿಯಲ್ಲಿ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಗೋವಾದಲ್ಲಿ 100…

Read More

ಬೆಂಗಳೂರು : ನಂಬಿಕೆ ಮತ್ತು ತಾಳ್ಮೆ ಯಾವಾಗಲೂ ಇರಬೇಕು, ಸ್ವಲ್ಪ ಟೈಮ್ ತೆಗೆದುಕೊಂಡರೂ, ನಿಜ  ಹೊರ ಬರುತ್ತದೆ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ. ಡ್ರಗ್ಸ್ ಕೇಸ್ ನಿಂದ ಖುಲಾಸೆಗೊಂಡಿರುವ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯಾವಾಗಲೂ ನಂಬಿಕೆ ಮತ್ತು ತಾಳ್ಮೆ ಇರಬೇಕು. ಯಾವಾಗಲೂ ಹೇಳುವ ಹಾಗೆಯೇ ಸತ್ಯ ಯಾವತ್ತಿದ್ದರೂ ಹೊರ ಬರುತ್ತೆ, ಇದೀಗ ನಿಜ ಏನು ಅಂತ ಆಚೆ ಬಂದಿದೆ ಪ್ರಕರಣ ಮುಗಿದಿದೆ. ಆ ಬಗ್ಗೆ ಈಗ ಮಾತಾಡೋದು ಬೇಡ. ಹೊಸ ವರ್ಷ, ಹೊಸ ಹೊಸ ಪ್ರಾಜೆಕ್ಟ್‌ ಗಳು ಬರ್ತಿದೆ, ಸಿನಿಮಾಗಳು ರಿಲೀಸ್ ಆಗ್ತಿದೆ. ಒಳ್ಳೆಯ ವಿಷಯಗಳ ಬಗ್ಗೆ ಮಾತಾಡೋಣ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More