Author: admin

ತುಮಕೂರು: ತುಮುಲ್ ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಿ ಪಾವಗಡ ಶಾಸಕ ವೆಂಕಟೇಶ್ ಅವರನ್ನು ಆಯ್ಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಬಿಜೆಪಿ  ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಪಾವಗಡದವರನ್ನ ನಾಮನಿರ್ದೇಶನ ಮಾಡಿ ಅಧ್ಯಕ್ಷನ ಮಾಡಿ ನಮ್ಮ ಮುಖದ ಮೇಲೆ ಕೆನ್ನೆಗೆ ಒಡೆದಂತಾಗಿದೆ.  ಇದಕ್ಕಿಂತ ನಾಚಿಕೆಗೇಡಿನ ಸ್ಥಿತಿ ಒಕ್ಕೂಟ ವ್ಯವಸ್ಥೆಗೆ ಬರಬಾರದು. ಅವರೇನಾದ್ರು ಸಹಕಾರ ಮಂತ್ರಿ ಅನ್ನೋ ಯೋಗ್ಯತೆ ಇದ್ರೆ ಬಂದು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು, ನಾನು ಸಹಕಾರ ಕ್ಷೇತ್ರಕ್ಕೆ ಅಯೋಗ್ಯ ನಾನು, ಈ ಕ್ಷೇತ್ರಕ್ಕೆ ಯೋಗ್ಯನಲ್ಲ ಅಂತಾ ರಾಜೀನಾಮೆ ಕೊಡಬೇಕು ಎಂದು ಮಾಧುಸ್ವಾಮಿ ಕಿಡಿಕಾರಿದರು. ನಾನು ಅಧಿಕಾರದಲ್ಲಿದ್ದಾಗ ನನ್ನದು ನಡೀತಾ ಇತ್ತು, ಒಂದು ದಿನ ಆ ವ್ಯವಸ್ಥೆಗೆ ಬಾಯಾಕಿಲ್ಲ. ನಾವು ನಮ್ಮ ಹಾಗೇ ಗೆದ್ದು ಬಂದಿದ್ದಾರೆ ಅವರ ಆಡಳಿತ ಅವರು ಮಾಡಲಿ ಎಂತಾ ಹೇಳಿದವರು ನಾವು. ರೈತ ಕೆನ್ನೆಮೇಲೆ ಒಡೆದಂಗೆ ಹತ್ತು ಜನರಲ್ಲಿ ಅವರು ಯಾರಿಗಾದ್ರು ಅಧ್ಯಕ್ಷ ಸ್ಥಾನ ಕೊಡಲಿ. ನಾವು ಯಾರಿಗೆ ಓಟ್ ಹಾಕಬೇಕು ಅಂತಾ…

Read More

ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ನೇಗಲಾಲ ಗ್ರಾಮದ ಶ್ರೀ ಕಾವಲಮ್ಮ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವ  9 ವರ್ಷಗಳ ನಂತರ 5 ಹಳ್ಳಿ ಗ್ರಾಮಸ್ಥರ ತೀರ್ಮಾನದಂತೆ ಶ್ರೀ ಕಾವಲಮ್ಮ ದೇವರ ದೊಡ್ಡ ಜಾತ್ರೆ ಮಾಡಲು ತೀರ್ಮಾನ ಮಾಡಲಾಗಿದೆ. ದಿನಾಂಕ ಈ ಕೆಳಕಂಡಂತೆ ನಿಗದಿ ಮಾಡಲಾಗಿದೆ: 1) 27–4–2025 ರಂದು ವಿಶೇಷ ಬಂಡಿ ಪೂಜೆ. 2) 5—5–2025 ಬೊಮ್ಮ ದೇವರಿಗೆ ಆರತಿ. 3) 11 ಮತ್ತು 12—5–2025 ಅಮ್ಮನವರ ಜಲಧಿ ಕಾರ್ಯಕ್ರಮ. 4) 19–5–2025 ಮರು ಪೂಜೆ ಕಾರ್ಯಕ್ರಮ. ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ವಿಜಯಪುರ: ಕಾರು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮೃತಪಟ್ಟ ಘಟನೆ ವಿಜಯಪುರ ತಾಲೂಕಿನ ಕನ್ನಾಳ ಕ್ರಾಸ್ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದ ಈ ದುರ್ಘಟನೆಯಲ್ಲಿ ಅಭಿಷೇಕ್ ಸಾವಂತ್ (34), ವಿಜಯಕುಮಾರ್ ಔರಂಗಾಬಾದ್ (45), ರಾಜು ಗೆಣ್ಣೂರ (30) ಎಂಬವರು ಮೃತಪಟ್ಟಿದ್ದಾರೆ. ಅಲ್ಲದೇ ಇನ್ನಿಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲಸದ ನಿಮಿತ್ತ ಕಾರಿನಲ್ಲಿ ಐವರು ಸೊಲ್ಲಾಪುರಕ್ಕೆ ಹೋಗಿದ್ದು, ವಾಪಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ತನಿಖೆ ಮುಂದುವರಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಬೆಂಗಳೂರು: ವಿವಾಹ ವಿಚ್ಛೇದನದ ಅರ್ಜಿ ವಾಪಸ್ ಪಡೆಯಲು ಪತ್ನಿ ನಿರಾಕರಿಸಿದ ಹಿನ್ನೆಲೆ ವ್ಯಕ್ತಿಯೊಬ್ಬ ಪತ್ನಿಯ ಮನೆಯ ಮುಂಭಾಗದಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ನಗರದ ನಾಗರಭಾವಿ ಬಡಾವಣೆಯಲ್ಲಿ ಗುರುವಾರ ಈ ಘಟನೆ ನಡೆದಿದೆ. ಮೃತರನ್ನು ಕುಣಿಗಲ್ ಪಟ್ಟಣದ ನಿವಾಸಿ 39 ವರ್ಷದ ಮಂಜುನಾಥ್ ಎಂದು ಗುರುತಿಸಲಾಗಿದೆ. ಮಂಜುನಾಥ್ 2013ರಲ್ಲಿ ವಿವಾಹವಾಗಿದ್ದರು ಮತ್ತು ನಂತರ ಬೆಂಗಳೂರಿನ ಫ್ಲ್ಯಾಟ್‌ ನಲ್ಲಿ ವಾಸಿಸುತ್ತಿದ್ದರು. ದಂಪತಿಗೆ 9 ವರ್ಷದ ಗಂಡು ಮಗುವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿ ನಡುವೆ ಭಿನ್ನಾಭಿಪ್ರಾಯ ಮೂಡಿದ್ದರಿಂದ ಮಂಜುನಾಥ್ ಎರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ಇಬ್ಬರೂ ವಿಚ್ಛೇದನ ಪಡೆಯಲು ನ್ಯಾಯಾಲಯ ಮೆಟ್ಟಿಲೇರಿದ್ದರು. ಈ ಮಧ್ಯೆ, ವಿಚ್ಛೇದನ ಅರ್ಜಿಯನ್ನು ಹಿಂಪಡೆಯುವಂತೆ ಮಂಜುನಾಥ್ ಪತ್ನಿ ಬಳಿ ಕೇಳಿದ್ದರು. ಅದೇ ವಿಚಾರವಾಗಿ ಮನವೊಲಿಸಲು ಪತ್ನಿಯ ನಿವಾಸಕ್ಕೆ ಬಂದಿದ್ದರು. ಅರ್ಜಿ ಹಿಂಪಡೆಯಲು ಪತ್ನಿ ನಿರಾಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…

Read More

ಬೆಂಗಳೂರಿನಲ್ಲಿ ಫೆಬ್ರವರಿ 11 ರಿಂದ 14ರವರೆಗೆ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಪೂರ್ವಸಿದ್ಧತೆಗಳ ಅಂಗವಾಗಿ ರಾಜ್ಯ ಸರ್ಕಾರವು ದೆಹಲಿಯಲ್ಲಿ ರೋಡ್‌ ಶೋ ನಡೆಸಿತು. ರಾಜ್ಯದಲ್ಲಿ ಹೂಡಿಕೆಯ ಅವಕಾಶಗಳ ಬಗ್ಗೆ ಬೃಹತ್‌ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್‌ ಅವರು ಉದ್ಯಮಿಗಳಿಗೆ ಮನವರಿಕೆ ಮಾಡಿಕೊಟ್ಟು ಸಮಾವೇಶದಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದಾರೆ. ಬಳಿಕ ಮಾತನಾಡಿದ ಸಚಿವರು, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ₹10 ಲಕ್ಷ ಕೋಟಿ ಹೂಡಿಕೆ ಆಗುವ ವಿಶ್ವಾಸ ಇದೆ. ರಾಜ್ಯದ ಆಹಾರ ಸಂಸ್ಕರಣಾ ವಲಯಕ್ಕೆ ಕೊಡುಗೆ ನೀಡುತ್ತಿರುವ ಐಟಿಸಿ ಲಿಮಿಟೆಡ್‌, ಈ ಕ್ಷೇತ್ರಗಳಲ್ಲಿ ತನ್ನ ವಹಿವಾಟು ವಿಸ್ತರಿಸುವುದಾಗಿ ವಾಗ್ದಾನ ಮಾಡಿದೆ. ಐಟಿಸಿ ಲಿಮಿಟೆಡ್‌ನ ಈ ಹೂಡಿಕೆ ಪ್ರಸ್ತಾವಗಳು ರಾಜ್ಯದಲ್ಲಿ ಮೂಲಸೌಲಭ್ಯಗಳಿಗೆ ಉತ್ತೇಜನ ನೀಡಲಿವೆ. ಉದ್ಯೋಗ ಅವಕಾಶಗಳು ಹೆಚ್ಚಿಸಲಿವೆ ಎಂದು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಬೆಂಗಳೂರು: ಕೃಷಿ ಪ್ರಧಾನವಾದ ಮಂಡ್ಯ  ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ  ಒಂದು ಸಂಯೋಜಿತ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು ತೀರ್ಮಾನಿಸಲಾಗಿದ್ದು, ಇದರಿಂದ ಮಂಡ್ಯ, ಹಾಸನ, ಮೈಸೂರು ಚಾಮರಾಜನಗರ ಭಾಗದ ರೈತರಿಗೆ  ಸಾವಯವ ಹಾಗೂ ಸಿರಿಧಾನ್ಯ ಕೃಷಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ದೊರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಅಂತರರಾಷ್ಟ್ರೀಯ ವಾಣಿಜ್ಯ  ಮೇಳ ಸಾವಯವ ಮತ್ತು ಸಿರಿಧಾನ್ಯ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರೈತರ ಹಲವು ದಿನಗಳ ಬೇಡಿಕೆಯಾದ ಎಂಎಸ್ ಪಿ (ಕನಿಷ್ಟ ಬೆಂಬಲ ಬೆಲೆ) ಯೋಜನೆಯನ್ನು ಜಾರಿಗೆ ತರಬೇಕೆಂದು ಕೇಂದ್ರಸರ್ಕಾರವನ್ನು ಒತ್ತಾಯಿಸಿದರು. ರಾಗಿ ತಿಂದವನು ನಿರೋಗಿ ಸಿರಿಧಾನ್ಯಗಳ ಸೇವೆನೆ ಆರೋಗ್ಯಕ್ಕೆ ಉತ್ತಮ: ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಆಹಾರದ ಕೊರತೆಯಿತ್ತು. ಆದರೆ ಈಗ ಹಲವಾರು ಆಹಾರಧಾನ್ಯಗಳನ್ನು ಭಾರತ ರಫ್ತು ಮಾಡುತ್ತಿರುವುದು ಹೆಮ್ಮೆಯ ವಿಷಯ. ವಿರಳ ಮಳೆಯಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಸಾವಯವ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತದೆ. ಕೃಷಿ ಕುಟುಂಬಕ್ಕೆ…

Read More

ತುಮಕೂರು:  ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ಅಗತ್ಯವಾದ ಜ್ಞಾನ ಮೂಡಿಸುವಂತಹ ಫಲ–ಪುಷ್ಪ ಪ್ರದರ್ಶನವನ್ನು ಈ ಬಾರಿ ವಿಶೇಷವಾಗಿ ಏರ್ಪಡಿಸಲಾಗಿದೆ. ಆಕರ್ಷಕ ವಿನ್ಯಾಸದ ಫಲ-ಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು. ಇಂದು ತೋಟಗಾರಿಕೆ ಇಲಾಖೆ ಸಭಾಂಗಣದಲ್ಲಿ ‘ಫಲಪುಷ್ಪ ಪ್ರದರ್ಶನ 2024–25’ಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಫಲ–ಪುಷ್ಪ ಪ್ರದರ್ಶನವನ್ನು ನಗರದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಜನವರಿ 26 ರಿಂದ 28 ರವರೆಗೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಫಲಪುಷ್ಪ ಪ್ರದರ್ಶನದಲ್ಲಿ ಮಂಧರಗಿರಿ ಮರು ಸೃಷ್ಠಿ, ಸಿರಿಧಾನ್ಯ ಕಲಾಕೃತಿ, ತರಕಾರಿ ಕೆತ್ತನೆಯಲ್ಲಿ ಇಸ್ರೋಗೆ ನಮನ, ಜಾನುರ್ ಕಲೆಯಲ್ಲಿ ಹೊಮ್ಮುವ ರೈತ ಜೀವನ, ಮರಳು ಕಲಾಕೃತಿ, ಆಕರ್ಷಕ ವಿನ್ಯಾಸದ ಪುಷ್ಪ ಪ್ರದರ್ಶನ ವಿಶೇಷ ಆಕರ್ಷಣೆಯಾಗಿವೆ ಎಂದು ತಿಳಿಸಿದರು. ಕೃಷಿ ಇಲಾಖೆಯಿಂದ ಪಾರಂಪರಿಕ ಹಾಗೂ ಆಧುನಿಕ ಕೃಷಿ ಸಲಕರಣೆಗಳು ಮತ್ತು ಯಂತ್ರೋಪಕರಣಗಳ ಪ್ರದರ್ಶನ, ಮೀನುಗಾರಿಕೆ ಇಲಾಖೆಯಿಂದ ಆಕರ್ಷಕ…

Read More

ತುಮಕೂರು:  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಪ್ರತಿ ತಿಂಗಳು 2,000 ರೂ.ಗಳ ಮಾಸಾಶನ ನೀಡಲು ಅರ್ಜಿ ಆಹ್ವಾನಿಸಿದೆ. ಈ ಯೋಜನೆಗೆ ವರ್ಷ ಪೂರ್ತಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರಿಗೆ 58 ವರ್ಷ ಪೂರ್ಣಗೊಂಡಿರಬೇಕು ಹಾಗೂ 25 ವರ್ಷಗಳ ಕಾಲ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಬಗ್ಗೆ ಸೂಕ್ತ ಮಾಹಿತಿ ಒದಗಿಸಬೇಕು. ಅರ್ಜಿದಾರರು ಸರ್ಕಾರದ ಇತರೆ ಯಾವುದೇ ಯೋಜನೆಗಳಡಿ ಮಾಸಾಶನ ಫಲಾನುಭವಿಗಳಾಗಿರಬಾರದು. ವಾರ್ಷಿಕ ಆದಾಯ 1ಲಕ್ಷ ರೂ. ಮಿತಿಯಲ್ಲಿರಬೇಕು. ಎಲ್ಲಾ ಸಮುದಾಯ, ಎಲ್ಲಾ ಕಲಾಪ್ರಕಾರ ಹಾಗೂ ವಿವಿಧ ಅಲೆಮಾರಿ ಸಮುದಾಯದ ಕಲಾವಿದರೂ ಸಹ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಈ ಬಗ್ಗೆ ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾರಿ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ. 0816–2275204ನ್ನು ಸಂಪರ್ಕಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ ಕು ಮಿರ್ಜಿ…

Read More

ತುಮಕೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಬೆಂಗಳೂರು, ಮಂಗಳೂರು, ಧಾರವಾಡ ಮತ್ತು ಕಲಬುರಗಿ ಕೇಂದ್ರಗಳಲ್ಲಿ 6 ತಿಂಗಳ ಅವಧಿಯ ಗ್ರಂಥಾಲಯ ವಿಜ್ಞಾನ ತರಬೇತಿ ಶಾಲಾ ಪ್ರವೇಶಾತಿಗೆ ಈಗಾಗಲೇ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಜನವರಿ 31ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ತುಮಕೂರು: ಮಹಾನಗರಪಾಲಿಕೆಯ 35 ವಾರ್ಡ್ ಗಳ ವ್ಯಾಪ್ತಿಯ ಉದ್ದಿಮೆದಾರರು ಕಟ್ಟಡದ ಪಾರ್ಕಿಂಗ್/ಸೆಲ್ಲರ್ ಜಾಗದಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿ ಉದ್ದಿಮೆ ನಡೆಸುತ್ತಿದ್ದು, ತಮ್ಮ ಉದ್ದಿಮೆಯನ್ನು ಸ್ಥಳಾಂತರಿಸಲು ಮಹಾನಗರಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಸೂಚಿಸಿದ್ದಾರೆ. ಬೆಂಗಳೂರಿನ ಲೋಕಾಯುಕ್ತ ಜಿ.ಆರ್. ಸುಧೀಂದ್ರ ಅವರಿಗೆ ದೂರು ಸಲ್ಲಿಸಿರುವ ಮೇರೆಗೆ ದೂರಿನ ಕುರಿತು ಸೂಕ್ತ ಕ್ರಮಕೈಗೊಳ್ಳಲು ಅವರು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ 7 ದಿನಗಳೊಳಗಾಗಿ ತಮ್ಮ ಉದ್ದಿಮೆಯನ್ನು ಕಟ್ಟಡದ ಪಾರ್ಕಿಂಗ್/ಸೆಲ್ಲರ್ ಜಾಗದಿಂದ ಸ್ಥಳಾಂತರಿಸತಕ್ಕದ್ದು,  ತಪ್ಪಿದ್ದಲ್ಲಿ ತಮ್ಮ ಉದ್ದಿಮೆ ಪರವಾನಗಿಯನ್ನು ರದ್ದುಗೊಳಿಸುವ/ಖಾಲಿಗೊಳಿಸುವ ನಿಟ್ಟಿನಲ್ಲಿ ಕೆ.ಎಂ.ಸಿ.ಕಾಯ್ದೆ 1976 ಕಲಂ 377ರಂತೆ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More