Subscribe to Updates
Get the latest creative news from FooBar about art, design and business.
- ‘ನೀವು ಭಯೋತ್ಪಾದಕರಾ?’ ಎಂದು ಪ್ರಶ್ನಿಸಿ ಯುವಕರ ಮೇಲೆ ಬೇಸ್ ಬಾಲ್ ಬ್ಯಾಟ್ ನಿಂದ ಹಲ್ಲೆ; ಎಫ್ ಐಆರ್ ದಾಖಲು
- ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟ: ಬಿಕ್ಕಟ್ಟು ಶಮನಕ್ಕೆ ಹೈಕಮಾಂಡ್ ಮೊರೆ ಹೋದ ಸಿಎಂ ಡಿಕೆಶಿ
- KPSC ಅಕ್ರಮ ಹಾಗೂ ಬಿಡದಿ ಟೌನ್ ಶಿಪ್ ವಿವಾದ: ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ BJP–JDS ಸಜ್ಜು
- ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆಯೇ?: ಪರಿಶೀಲಿಸುವುದು ಹೇಗೆ? ತಪ್ಪದೇ ಈ ಸುದ್ದಿ ಓದಿ
- 36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!
- ಸರಗೂರು: ಮಾದರ ಮಹಾಸಭೆಯ ಉದ್ಘಾಟನೆ –ಪ್ರತಿಭಾ ಪುರಸ್ಕಾರ: ಒಳಮೀಸಲಾತಿ ಜಾರಿಗೆ ಕೆ.ಎಚ್. ಮುನಿಯಪ್ಪ ಪ್ರತಿಪಾದನೆ
- ಹಳ್ಳಿಯ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರುವುದೇ ಎಂ.ಎಸ್.ಎ. ಟ್ರಸ್ಟ್ನ ಮುಖ್ಯ ಉದ್ದೇಶ: ಶಿವರಾಮ ಶೆಟ್ಟಿ
- ರಾಹುಲ್ ಗಾಂಧಿ ಪ್ರಧಾನಿಯಾಗಲಿ: ಕಾಟೂರಿ ವೆಂಕಟೇಶ್ವರಲು ಪಾದಯಾತ್ರೆ
Author: admin
ಬೀದರ್: ಲೋಕ ಸಭೆ ಕ್ಷೇತ್ರದ ಸಂಸದರಾದ ಸಾಗರ್ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಕೆಲವು ದಿವಸಗಳ ಹಿಂದೆ ರೈತರ ಸಮಸ್ಯೆ ಬಗ್ಗೆ ಬೀದರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಭೆ ಜರುಗಿತ್ತು, ಅದರಲ್ಲಿ ವಿಶೇಷವಾಗಿ ಬೀದರ ಜಿಲ್ಲೆಯ ರೈತರ ಹೊಲದ ವಿದ್ಯುತ್ ನ ಅನೇಕ ಸಮಸ್ಯೆ ಕಂಡುಬಂದಿತ್ತು, ಎಲ್ಲ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಬೀದರ ಜಿಲ್ಲೆಯ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರ ಗಮನಕ್ಕೆ ಸಂಸದರು ತಂದಿದ್ದಾರೆ. ಈಶ್ವರ್ ಖಂಡ್ರೆ ಅವರು ಎಲ್ಲ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಗಣಿಸಿ ರೈತರ ಹೊಲದ ವಿದ್ಯುತ್ ನ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಸಚಿವರಾದ ಕೆ.ಜೆ.ಜಾರ್ಜ್ ಅವರನ್ನು ಜಿಲ್ಲೆಗೆ ಆಹ್ವಾನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಬೀದರ್ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂಧನ ಇಲಾಖೆಯ ಸಚಿವರಾದ ಕೆ.ಜೆ.ಜಾರ್ಜ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಕೆ.ಪಿ.ಟಿ.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಜೆಸ್ಕಾಂ ಅಧ್ಯಕ್ಷರಾದ ಪಂಕಜ್ ಕುಮಾರ…
ತುಮಕೂರು: ಶಾಸಕ ಎಸ್.ಆರ್. ಶ್ರೀನಿವಾಸ್ ಪತ್ನಿಗೆ ತುಮುಲ್ ಅಧ್ಯಕ್ಷ ಸ್ಥಾನ ಕೈ ತಪ್ಪಿದ ಹಿನ್ನೆಲೆ ಇಬ್ಬರು ಸಚಿವರ ವಿರುದ್ಧ ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಸಿಡಿದೆದ್ದಿದ್ದಾರೆ. ಸಚಿವ ಪರಮೇಶ್ವರ್ ಹಾಗೂ ಕೆ.ಎನ್.ರಾಜಣ್ಣ ವಿರುದ್ಧ ಶಾಸಕ ಎಸ್.ಆರ್. ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿ ತೊಘಲಕ್ ಆಡಳಿತ ನಡೆಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಬ್ಬರು ಸಚಿವರಿಂದ ತೊಘಲಕ್ ಆಡಳಿತ ನಡೆಯುತ್ತಿದೆ. ಜಿಲ್ಲೆಯಲ್ಲಿ ಏನ್ ನಡಿತಿದೆ ಅನ್ನೋದೆ ಗೊತ್ತಾಗ್ತಿಲ್ಲ. ಇಬ್ಬರು ಮಂತ್ರಿಗಳು ಸೇರಿಕೊಂಡು ಏನ್ ಮಾಡ್ಬೇಕು ಅದನ್ನ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮನ್ನ ಮೀಟಿಂಗ್ ಗೂ ಸಹ ಕರಿತಿಲ್ಲ. ಏನ್ ಮಾಡ್ತಿವಿ ಅಂತ ನಮ್ಮನ್ನ ಕೇಳ್ತಿಲ್ಲ. ತೊಘಲಕ್ ಆಡಳಿತ ಜಿಲ್ಲೆಯಲ್ಲಿ ನಡಿತಿದೆ. ಪರಮೇಶ್ವರ್ ಗೆ ಪೋನ್ ಮಾಡಿ ಏನ್ ಹೇಳ್ಬೇಕು ಅದನ್ನೆಲ್ಲಾ ಹೇಳಿದಿನಿ. ಆ ಇಬ್ಬರು ಸಾಮಾಜಿಕ ನ್ಯಾಯ ಕೊಡೋ ಹರಿಕಾರರು. ಎಡಗೈ ಜನಾಂಗಕ್ಕೆ ಅನ್ಯಾಯ ಆಗಿದೆ. ಇಡೀ ಜಿಲ್ಲೆಯಲ್ಲಿ ಎಸ್ ಟಿ, ಭೋವಿಗಳನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಬಲಗೈ ಸಮುದಾಯದವರು ಮಿನಿಸ್ಟರ್ ಇದ್ದಾರೆ. ಲಿಂಗಾಯತರು,…
ಔರಾದ್ (ಬಿ ) ತಾಲೂಕಿನ ಕೌಠಾ ( ಬಿ ) ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ( ಪಿ ಕೆ ಪಿ ಎಸ್ ) ನ ಅಧ್ಯಕ್ಷರಾಗಿ ಚಂದ್ರಶೇಖರ್ ಕಾಶಪ್ಪ ಬಿರಾದರ, ಉಪಾಧ್ಯಕ್ಷರಾಗಿ ರಾಜಪ್ಪ ಗಣಪತಿ ಎಮ್ಮೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿಯಾದ ಉಮಾಕಾಂತ ಮುಗಟೆ ಘೋಷಿಸಿದರು. ನಿರ್ದೇಶಕರಾಗಿ ಚನ್ನಬಸಪ್ಪ ಮಾಣಿಕಪ್ಪ, ಮಲ್ಲಿಕಾರ್ಜುನ್ ಗುಂಡಪ್ಪ, ಅಶೋಕ್ ಶಿವ ಶೆಟ್ಟಿ, ಚನ್ನಬಸವ ಉಮಾಕಾಂತ, ನರಸಿಂಗ ಶಿವರಾಮ, ಮಾರುತಿ ಹನುಮಂತ, ಸೈಯದ್ ಅನ್ಸರ್ ಮಿಯಾ ಶಬ್ಬೀರ್ ಮಿಯಾ, ಬಸವರಾಜ ಗುರುನಾಥ್, ಇಂದಿರಾಬಾಯಿ ಶರಣಬಸಪ್ಪ, ಕಸ್ತೂರಿಬಾಯಿ, ಬಸವರಾಜ, ಪ್ರಮುಖರಾದ ರವೀಂದ್ರ ಪಾಟೀಲ್, ಬಸವರಾಜ ಬಾಲಾದೆ, ಧನರಾಜ ಬಿರಾದಾರ, ಗುಂಡಪ್ಪ ಬಿರಾದರ, ಸಂಗನಬಸಪ್ಪ ದೇವರೆ, ರವಿ ದೇವರೆ, ನಾಗೂರಾವ ಬಿರಾದಾರ, ಸೋಮಶೇಖರ ಪಾಟೀಲ, ರಮೇಶ ಬಿರಾದಾರ, ಕಲ್ಯಾಣರಾವ್ ಪಾಟೀಲ, ಸುಭಾಷ ಗಾದೆಗೆ, ವಿನೋದ ದೇವರೆ ಅಶೋಕ ಮಾಶೆಟ್ಟಿ ಇತರರಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…
ತುಮಕೂರು: ಬೆಸ್ಕಾಂ ಕ್ಯಾತ್ಸಂದ್ರ ಉಪ ವಿಭಾಗ ವ್ಯಾಪ್ತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ಇಂದಿನಿಂದ ಜನವರಿ 28ರವರೆಗೆ ಬೆಳಿಗ್ಗೆ 11 ರಿಂದ 5 ಗಂಟೆಯವರೆಗೆ ಹೊನ್ನುಡಿಕೆ, ಮಸ್ಕಲ್, ತಮ್ಮಡಿಹಳ್ಳಿ, ಸೋಮಸಾಗರ ಮತ್ತು ಡಿ.ಕೊರಟಗೆರೆ ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ಬೆಳಗಾವಿ: ಕೆಲಸಕ್ಕೆ ಹೋಗುವಾಗ ಮನರೇಗಾ ದಿನಗೂಲಿ ಕಾರ್ಮಿಕರ ಟೆಂಪೋ(ಬಸ್) ಪಲ್ಟಿಯಾಗಿ 35 ಕಾರ್ಮಿಕರಿಗೆ ಗಂಭೀರ ಗಾಯವಾಗಿರುವ ಘಟನೆ ಹಿಡಕಲ್ ಡ್ಯಾಂ ವ್ಯಾಪ್ತಿಯ ಹೊಸೂರ ಕ್ರಾಸ್ ಬಳಿ ನಡೆದಿದೆ. ಗಾಯಾಳುಗಳನ್ನು ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದೆ. ಯಮಕನಮರಡಿ ಕ್ಷೇತ್ರದ ಹಿಡಕಲ್ ಡ್ಯಾಂ ವ್ಯಾಪ್ತಿಯ ಕಾಮಗಾರಿಗೆ ಮನರೇಗಾ ಕಾರ್ಮಿಕರು ಟೆಂಪೋನಲ್ಲಿ ಹೋಗುವಾಗ ಬುಲೆಟ್ ಗೆ ಡಿಕ್ಕಿ ಹೊಡೆದ ಪರಿಣಾಮ 35 ಕ್ಕೂ ಅಧಿಕ ಜನ ಕಾರ್ಮಿಕರು ಗಾಯಗೊಂಡ ಘಟನೆ ನಡೆದಿದೆ. ನಾಲ್ಕೈದು ಜನರ ಕೈ– ಕಾಲು ತೀವ್ರ ಹೊಡೆತ ಬಿದ್ದಿದೆ ಎನ್ನಲಾಗಿದೆ. 29 ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರೆ ಓರ್ವ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ಬೆಂಗಳೂರು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಯೋಗಕ್ಕೆ ಜೈನ ಸಮಾಜದ ಪ್ರತಿನಿಧಿಗಳು ಇಂದು ಭೇಟಿ ನೀಡಿ ಬಜೆಟ್ ನಲ್ಲಿ ಜೈನರ ಬೇಡಿಕೆಗಳನ್ನು ಈಡೇರಿಸಲು ಚರ್ಚೆ ನಡೆಸಲಾಯಿತು. ಬಸದಿಗಳ ಜೀರ್ಣೋದ್ಧಾರ , ಗುರುಕುಲಗಳು, ಪಾಠಶಾಲೆಗಳಿಗೆ ಹೆಚ್ಚಿನ ಅನುದಾನ, ಬೇರೆ ಬೇರೆ ಶೈಕ್ಷಣಿಕ, ಉದ್ಯೋಗಕ್ಕೆ ಹೆಚ್ಚಿನ ಅನುದಾನ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಬೇಡಿಕೆಗಳ ಈಡೇರಿಕೆ ಸರ್ಕಾರದಿಂದ ಹೆಚ್ಚು ಅನುದಾನ ಕೊಡಿಸುವುದಾಗಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ಭರವಸೆ ನೀಡಿದರು. ನಿಯೋಗದಲ್ಲಿ ಕರ್ನಾಟಕ ಜೈನ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯರಾದ ಮಾಳ ಹರ್ಷೇಂದ್ರ ಜೈನ್, ಕರ್ನಾಟಕ ಸಾಹಿತ್ಯ ಪರಿಷತಿನ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜ್, ಸಾಮಾಜಿಕ ಹೋರಾಟಗಾರ ಮಹೇಶ್ ಜೈನ್, ಶಾಂತಿಪ್ರಸಾದ್ ಇನ್ನಿತರ ಉಪಸ್ಥಿತರಿದ್ದರು. ವರದಿ: ಜೆ.ರಂಗನಾಥ, ತುಮಕೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ಕೊರಟಗೆರೆ: ಬೂದಗವಿ (ಸಿದ್ದರಬೆಟ್ಟ) ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಲಕ್ಷ್ಮಿಕಾಂತ ಸಿ.ಕೆ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಕವಿತಾ ರಮೇಶ್ ಮುಂದುವರಿದಿದ್ದಾರೆ. ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೂದಗವಿ(ಸಿದ್ದರಬೆಟ್ಟ) ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಯ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆ ಇದಾಗಿದೆ. ಹಿಂದುಳಿದ “ಬ” ವರ್ಗಕ್ಕೆ ಮೀಸಲಿದ್ದ ಸ್ಥಾನವಾಗಿದ್ದು. ಇಬ್ಬರು ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಮಲ್ಲೇಕಾವು ಕ್ಷೇತ್ರದ ಎಂ.ಎನ್.ಬಸವರಾಜು ಮತ್ತು ಚನ್ನರಾಯನದುರ್ಗ ಕ್ಷೇತ್ರದ ಲಕ್ಷ್ಮೀಕಾಂತ್ ಸಿ.ಕೆ. ನಾಮಪತ್ರ ಸಲ್ಲಿಸಿದ್ದರು. ಸರ್ವ ಸದಸ್ಯರ ಒಗ್ಗಟ್ಟಿನ ಚುನಾವಣೆಯನ್ನಾಗಿಸಲು ತೀರ್ಮಾನಿಸಿ ಮಲ್ಲೇಕಾವು ಕ್ಷೇತ್ರದ ಬಸವರಾಜು ತಮ್ಮ ನಾಮಪತ್ರ ವಾಪಸ್ ಪಡೆದಿದ್ದರು. ನೂತನ ಉಪಾಧ್ಯಕ್ಷರಾಗಿ ಚನ್ನರಾಯನದುರ್ಗ ಕ್ಷೇತ್ರದ ಲಕ್ಷ್ಮೀಕಾಂತ್ ಸಿ ಕೆ ಅವಿರೋಧ ಆಯ್ಕೆಯಾಗಿ ಅಧಿಕಾರಿ ಸ್ವೀಕರಿಸಿದ್ದಾರೆ. ಲಕ್ಷ್ಮೀಕಾಂತ್ ರವರ ಅಭಿಮಾನಿಗಳು ಗ್ರಾಮಸ್ಥರು ಸದಸ್ಯರು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಚುನಾವಣೆ ಅಧಿಕಾರಿಯಾದ ತಹಶೀಲ್ದಾರ್ ಮಂಜುನಾಥ್ ಕೆ.ರವರಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರು ಸೇರಿ ಸನ್ಮಾನಿಸಿ ಧನ್ಯವಾದ ತಿಳಿಸಿದರು. ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮಿಕಾಂತ್…
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ : ತಾಲ್ಲೂಕಿನ ಪಿ ಎಲ್ ಡಿ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ದಿವಂಗತ ಚನ್ನಿಗಪ್ಪನವರ ಆಪ್ತ ಶಿಷ್ಯರಾದ ಎನ್.ಚಿಕ್ಕರಂಗಯ್ಯ ಹಾಗೂ ಉಪಾಧ್ಯಕ್ಷರಾಗಿ ಬಿ.ಡಿ.ನಾಗರಾಜಯ್ಯ ಆಯ್ಕೆಯಾಗಿದ್ದಾರೆ. ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಲ್ಲಿ ಒಟ್ಟು 14 ಸದಸ್ಯರಿದ್ದು ಒಬ್ಬರು ಸರ್ಕಾರದ ನಾಮ ನಿರ್ದೇಶನ ಸದಸ್ಯರಿರುತ್ತಾರೆ. ಜನವರಿ 22 ಬುಧವಾರದಂದು ಪಟ್ಟಣದ ಪಿಎಲ್ ಡಿ ಬ್ಯಾಂಕ್ ಕಛೇರಿಯಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಎನ್.ಡಿ.ಎ. ಪಕ್ಷದ ಬೆಂಬಲಿತ ಅಭ್ಯರ್ಥಿ ಚಿಕ್ಕರಂಗಯ್ಯ 8 ಮತಗಳನ್ನು ಪಡೆದು ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಎಲ್.ಆನಂದ್ ರವರನ್ನು 1 ಮತಗಳ ಅಂತರದಿಂದ ಸೋಲಿಸಿದರು. ಅದೇ ರೀತಿ ಉಪಾದ್ಯಕ್ಷ ಸ್ಥಾನಕ್ಕೆ ಎನ್.ಡಿ.ಎ. ಬೆಂಬಲಿತ ಅಭ್ಯರ್ಥಿ ಬಿ.ಡಿ.ನಾಗರಾಜಯ್ಯ 8 ಮತಗಳನ್ನು ಪಡೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆಂಚಮ್ಮ ರವರನ್ನು 1 ಮತಗಳ ಅಂತರದಿಂದ ಸೋಲಿಸಿದರು. ಕೊರಟಗೆರೆ ಕಾಂಗ್ರೆಸ್ ಗೆ ಆಘಾತ : ಪಿ ಎಲ್ ಡಿ…
ತುಮಕೂರು: ತಾಲೂಕಿನ ಇತಿಹಾಸ ಪ್ರಸಿದ್ಧ ಮಂದರಗಿರಿ ಜೈನ ಕ್ಷೇತ್ರಕ್ಕೆ ಮೇಘಾಲಯ ರಾಜ್ಯಪಾಲರಾದ ಸಿ.ಎಚ್.ವಿಜಯಶಂಕರ್ ಭೇಟಿ ನೀಡಿ ಶ್ರೀ ಚಂದ್ರನಾಥ ತೀರ್ಥಂಕರು, ಶ್ರೀ ಶಾಂತಿಸಾಗರ ಮಹಾರಾಜರ ಪಿಂಚಿ ಮಂದಿರ ಇನ್ನಿತರ ಬಸದಿಗಳ ದರ್ಶನ ಪಡೆದರು. ಶ್ರೀ ಕ್ಷೇತ್ರದಲ್ಲಿ ವಾಸ್ತವ್ಯವಿರುವ ಜೈನ ಮುನಿ ಶ್ರೀ ಅಮಿತ ಸಾಗರ್ ಮಹಾರಾಜ್ ಜಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸೊಗಡು ಶಿವಣ್ಣ ,ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನಮoದಿರ ಸಮಿತಿಯ ಅಧ್ಯಕ್ಷ ಟಿ.ಡಿ .ಬಾಹುಬಲಿ, ಖಜಾಂಚಿ ಸುಭೋಧ ಕುಮಾರ್ ಜೈನ್, ಕಾರ್ಯದರ್ಶಿ ಟಿ.ಜೆ .ನಾಗರಾಜ್, ಉಪಾಧ್ಯಕ್ಷ ತೋವಿನಕೆರೆ ಶೀತಲ್, ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ಜೈನ್ ಅಸೋಸಿಯೇಷನ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಜೆ.ನಾಗರಾಜು, ಎಸ್ .ವಿ.ಜಿನೇಶ್, ಸುನಿಲ್ ಕುಮಾರ್, ಬಿ.ಎಲ್.ಚಂದ್ರ ಕೀರ್ತಿ, ಮೋಹನ್ ಕುಮಾರ್ ಸೇರಿದಂತೆ ಇನ್ನಿತರ ಜೈನ ಮುಖಂಡರುಗಳು ಭಾಗವಹಿಸಿದ್ದರು. ವರದಿ: ಜೆ.ರಂಗನಾಥ, ತುಮಕೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…
ಹೂವಿನ ಹಡಗಲಿ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸತತ ಐದನೇ ಬಾರಿಗೆ ಮಾಗಳದ ಹಿರಿಯ ಜೈನ ಶ್ರಾವಕ ಶ್ರೀ ಯಶೋಧರ ಗೌಡ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಹಾವೀರ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಸನ್ಮಾನ ಸಭೆಯಲ್ಲಿ ಶ್ರೀ ಪಾರ್ಶ್ವನಾಥ ಟ್ರಸ್ಟ್ ಅಧ್ಯಕ್ಷರಾದ ಎಚ್.ಎಸ್ ಪ್ರಶಾಂತ್ ರವರು ಶ್ರೀಯಶೋಧರ ಗೌಡರವರನ್ನು ಸನ್ಮಾನಿಸಿದರು. ಶ್ರೀ ಪಾರ್ಶ್ವನಾಥ ಟ್ರಸ್ಟ್ ಅಧ್ಯಕ್ಷ ಪ್ರಶಾಂತ ಮಾತನಾಡಿ, ಬ್ಯಾಂಕ್ ನಲ್ಲಿ ಜೈನ ಬಾಂಧವರು ಹೆಚ್ಚು ಹೆಚ್ಚು ಶೇರ್ ಗಳನ್ನು ಪಡೆದು ಸಂಘದಿಂದ ದೊರೆಯುವ ಸವಲತ್ತುಗಳ ಲಾಭ ಪಡೆಯಬೇಕೆಂದರು. ಸನ್ಮಾನ ಸ್ವೀಕರಿಸಿದ್ದ ಯಶೋಧರ ಗೌಡ ಸಂತಸ ವ್ಯಕ್ತಪಡಿಸಿ ,ಸಮಾಜಕ್ಕೆ ಕೃತಜ್ಞತೆ ಸಲ್ಲಿಸಿದರು. ಮಹಾವೀರ ಸೊಸೈಟಿಯ ಜೆ.ಮಂಜುನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವಿಜಯಕುಮಾರ್ , ಕಾರ್ಯದರ್ಶಿ ಪದ್ಮರಾಜುಜೈನ್, ಖಜಾಂಚಿ ಬಾಗೇಶ್ ಜೈನರ್ ಉಪಸ್ಥಿತರಿದ್ದರು. ವರದಿ: ಜೆ.ರಂಗನಾಥ– ತುಮಕೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…