Subscribe to Updates
Get the latest creative news from FooBar about art, design and business.
- ರಾಹುಲ್ ಗಾಂಧಿ ಪ್ರಧಾನಿಯಾಗಲಿ: ಕಾಟೂರಿ ವೆಂಕಟೇಶ್ವರಲು ಪಾದಯಾತ್ರೆ
- ಆಗಸ್ಟ್ 9ರಂದು ತಿಪಟೂರಿನಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಯೋಗ ಚಾಂಪಿಯನ್ಷಿಪ್ ಸ್ಪರ್ಧೆ
- ಆ.10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ
- ಶಿಕ್ಷಣ ನಿಮ್ಮ ಬದುಕಿಗೆ ಭದ್ರ ಬುನಾದಿ: ಶ್ರೀ ಸಿದ್ಧಲಿಂಗ ಮಹಾಸ್ವಾಮಿ
- ಹೂ ಲೋಕ, ಭೂರಮೆಯ ರಥ : ಪ್ರಕೃತಿ ಮಡಿಲಲ್ಲಿ ಚೆಲುವಿನ ರಥಯಾತ್ರೆ ವಾಹ್..!
- ತುಮಕೂರಿನಲ್ಲಿ ಆ.11ರಂದು ನೇರ ಸಂದರ್ಶನ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಕಾಮಗಾರಿ ಸ್ಥಳಕ್ಕೆ ಜಿ.ಪಂ ಸಿಇಒ ಭೇಟಿ: ಶಾಶ್ವತ ಆಸ್ತಿ ನಿರ್ಮಾಣಕ್ಕೆ ಒತ್ತು ನೀಡಲು ಸೂಚನೆ
- ಸ್ತನ್ಯಪಾನ ಬೆಂಬಲಿಸಿ, ಸದೃಢ ಜಗತ್ತು ನಿರ್ಮಿಸಿ: ಡಾ.ರವಿಕುಮಾರ್ ಕರೆ
Author: admin
ಮಂಗಳೂರು: ಸಮುದ್ರ ವಿಹಾರಕ್ಕೆ ಬಂದಿದ್ದ ಬೆಂಗಳೂರಿನ ಶಿವಾಜಿನಗರದ ಹೆಚ್.ಪಿ.ಕೆ ರೋಡ್ ನಿವಾಸಿಯೊಬ್ಬರು ಸಮುದ್ರದ ಅಲೆಗಳ ನಡುವೆ ಸಿಲುಕಿ ಸಾವನ್ನಪ್ಪಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಭಾನುವಾರ ನಡೆದಿದೆ. ಬೆಂಗಳೂರಿನ ಶಿವಾಜಿನಗರದ ಹೆಚ್.ಪಿ.ಕೆ ರೋಡ್ ನಿವಾಸಿ ಕೆ.ಎಮ್. ಸಜ್ಜದ್ ಆಲಿ (45) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಸಜ್ಜದ್ ಅವರ ಹಿರಿಯ ಸಹೋದರನ ಪುತ್ರಿ ಸಮುದ್ರದಲ್ಲಿ ಆಟವಾಡುತ್ತಿದ್ದ ಸಂದರ್ಭ ಅಲೆಗಳ ನಡುವೆ ಸಿಲುಕಿದ್ದನ್ನು ಸಾಜಿದ್ ಆಲಿ ರಕ್ಷಿಸಿ, ತಾವೇ ಖುದ್ದು ಅಲೆಗಳ ನಡುವೆ ಸಿಲುಕಿದ್ದರು. ನೀರಿನಲ್ಲಿ ಮುಳುಗಿ ವಾಪಸ್ಸು ದಡಕ್ಕೆ ಬಂದವರನ್ನು ತಕ್ಷಣ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಅವರು ಪಡೀಲ್ ನಲ್ಲಿ ನಡೆದಿದ್ದ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಿ 11 ಮಂದಿ ಕುಟುಂಬಿಕರು ಸೋಮೇಶ್ವರ ಸಮುದ್ರ ತೀರದಲ್ಲಿ ವಿಹಾರಕ್ಕೆಂದು ಆಗಮಿಸಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…
ಬೆಂಗಳೂರು: ಬೀದರ್ ಮೂಲದ ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಆರ್ ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗ ಹಾಗೂ ಕಲಬುರಗಿಯ ಮಾಜಿ ಕಾರ್ಪೊರೇಟರ್ ರಾಜು ಕಪನೂರ ಅವರು ಸಚಿನ್ ಪಂಚಾಲ್ ಅವರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಲಾಗಿದೆ., ಪೊಲೀಸರು ಪ್ರಕರಣ ದಾಖಲಿಸಿರುವುದರಿಂದ ಬಿಜೆಪಿ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ಒತ್ತಾಯಿಸಿದೆ. ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯ ಅವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಮಲ್ಲಿಕಾರ್ಜುನ ಖರ್ಗೆಯವರು ದೆಹಲಿಯಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ನಿರತರಾಗಿರುವಾಗ, ಅವರ ತವರು ಕ್ಷೇತ್ರ ಕಲಬುರಗಿಯಲ್ಲಿ ಪರಿಸ್ಥಿತಿ ವಿರುದ್ಧವಾಗಿದೆ. ಮಹಾನ್ ಸಾಂವಿಧಾನಿಕ ತಜ್ಞರಂತೆ ವರ್ತಿಸುವ ಅವರ ಮಗ ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದೊಂದೇ ಅಲ್ಲ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಟ್ರಸ್ಟ್ಗಳು ಮತ್ತು ಭೂ ಹಗರಣಗಳ ವಿವರಗಳೂ ಒಂದರ ಹಿಂದೆ ಒಂದರಂತೆ ಹೊರಬೀಳುತ್ತಿವೆ ಎಂದು ಟೀಕಿಸಿದ್ದಾರೆ. ಬಹುಕೋಟಿ…
ಮೈಸೂರು: ಪ್ರಿನ್ಸೆಸ್ ರಸ್ತೆ ಅಂತ ದಾಖಲೆ ಇದ್ರೆ ಬದಲಾವಣೆ ಬೇಡ ಎಂದಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಹೆಸರನ್ನು ಬೇರೆ ರಸ್ತೆಗೆ ಇಡಲಿ ಎಂದು ನಾನು ಕಾಂಗ್ರೆಸ್ ಶಾಸಕ ಹರೀಶ್ ಗೌಡಗೆ ಮನವಿ ಮಾಡ್ತೀನಿ ಎಂದು ಹೇಳಿದ್ದಾರೆ. ಮೈಸೂರಿನ ಶ್ರೀ ಲಕ್ಷ್ಮಿವೆಂಕಟರಮಣ ಸ್ವಾಮಿ ದೇವಸ್ಥಾನ ವೃತ್ತದಿಂದ ಆರಂಭವಾಗುವ ಮೇಟಗಳ್ಳಿಯ ರಾಯಲ್ ಇನ್ ಜಂಕ್ಷನ್ ವರೆಗಿನ ರಸ್ತೆಗೆ ಸಿದ್ದರಾಮಯ್ಯರ ಹೆಸರು ಇಡಲು ಪಾಲಿಕೆ ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರತಾಪ್ ಸಿಂಹ ಸಿದ್ದರಾಮಯ್ಯರ ಹೆಸರು ಇಟ್ಟರೆ ತಪ್ಪೇನು? ಎಂದು ಪ್ರಶ್ನಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸಂಸದ ಯದುವೀರ್ ಒಡೆಯರ್ ಪ್ರತಾಪ್ ಸಿಂಹಗೆ ಇತಿಹಾಸ ತಿಳಿದಿಲ್ಲ. ಪ್ರಿನ್ಸೆಸ್ ರಸ್ತೆ ಇತಿಹಾಸ ನಾನು ತಿಳಿಸಿದ ಮೇಲೆ ಅವರಿಗೆ ಗೊತ್ತಾಗಲಿದೆ ಎಂದಿದ್ದರು. ಒಡೆಯರ್ ಪ್ರತಿಕ್ರಿಯೆ ಬೆನ್ನಲ್ಲೇ ಮಾತನಾಡಿರುವ ಪ್ರತಾಪ್ ಸಿಂಹ.. ಒಂದೊಮ್ಮೆ ಪ್ರಿನ್ಸೆಸ್ ರಸ್ತೆ ಅಂತ ಕರೆಯೋದಕ್ಕೆ ದಾಖಲೆ ಇದ್ದರೆ ಬದಲಾವಣೆ ಬೇಡ ಎಂದಿದ್ದಾರೆ. ಸಿದ್ದರಾಮಯ್ಯ ಹೆಸರಿಡಿ ಅಂದ ತಕ್ಷಣ ನಾನು ಸಿದ್ದರಾಮಯ್ಯ ಪರ ಅಂತಲ್ಲ.…
ಒಡಿಶಾ: ತನ್ನದೇ 9 ದಿನಗಳ ಮಗುವನ್ನು ವ್ಯಕ್ತಿಯೊಬ್ಬ ಕೇವಲ 60 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಒಡಿಶಾದ ಬಲ್ಸೋರೆದಲ್ಲಿ ನಡೆದಿದೆ. ಶಾಂತಿ ಬೆಹೆರಾ ಎಂಬುವವರು ಪಿಆರ್ಎಂ ಮೆಡಿಕಲ್ ಕಾಲೇಜ್ ಬರೀಪಾದದಲ್ಲಿ ಡಿಸೆಂಬರ್ 9 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದಾದ ಬಳಿಕ ಇಬ್ಬರು ವ್ಯಕ್ತಿಗಳ ಮಧ್ಯಸ್ಥಿಕೆಯಲ್ಲಿ ಮಗುವನ್ನು ಸೇಲ್ ಮಾಡಲು ಆಕೆಯ ಪತಿ ಡೀಲ್ ಕುದುರಿಸಿಕೊಂಡಿದ್ದಾನೆ. ನಂತರ 60 ಸಾವಿರ ರೂಪಾಯಿಗೆ ಮಗುವನ್ನು ಮಾರಾಟ ಮಾಡಿದ್ದಾನೆ. ಡಿಸೆಂಬರ್ 22 ರಂದು ಹೆರಿಗೆ ಬಳಿಕ ಶಾಂತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಳು. ಇದರ ಬೆನ್ನಲ್ಲೇ ಆಕೆಯ ಪತಿ ಮಗುವನ್ನು ಮಾರಾಟ ಮಾಡಿದ ಹಣದಲ್ಲಿ ಬೈಕ್ ಖರೀದಿಸಿ, ಬೈಕ್ ನಲ್ಲಿ ಓಡಾಡುತ್ತಿದ್ದ. ಬಡತನದಲ್ಲಿದ್ದ ಈತನಿಗೆ ಏಕಾಏಕಿ ಬೈಕ್ ಹೇಗೆ ಬಂತು ಎಂದು ಸ್ಥಳೀಯರು ಅನುಮಾನಗೊಂಡಿದ್ದರು. ಜೊತೆಗೆ ಮಗು ಕೂಡ ಇಲ್ಲದಿರುವುದನ್ನು ಕಂಡು ಮಕ್ಕಳ ಕಲ್ಯಾಣ ಇಲಾಖೆಯ ಗಮನಕ್ಕೆ ತಂದಿದ್ದರು. ತನಿಖೆಯನ್ನು ಕೈಗೆತ್ತಿಕೊಂಡ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಸ್ತಾ ಪೊಲೀಸರು ಮಗುವನ್ನು ಖರೀದಿ…
ಹುಕ್ಕೇರಿ: ಮಾನವ ಲೋಕ ಕಲ್ಯಾಣಕ್ಕಾಗಿ ಹಾಗೂ ಮತ್ತೊಬ್ಬರ ಒಳಿತಿಗಾಗಿ ಪರೋಪಕರ ಗುಣ ಬೆಳೆಸಿಕೊಳ್ಳಬೇಕೆಂದು ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಸ್ವಸ್ತಿ ಶ್ರೀ ಅಭಿನವ ಚಾರು ಕೀರ್ತಿ ಭಟ್ಟರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು. ಅವರಿಂದು ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲೂಕಿನ ಹುಲ್ಲೊಳಿಯಲ್ಲಿ ಅರಿಹಂತ ಸೌಹಾರ್ದ ಸಹಕಾರಿ ಸಂಘದ ಬೆಳ್ಳಿಹಬ್ಬ ಮಹೋತ್ಸವದಲ್ಲಿ ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಜೈನ ಧರ್ಮದಲ್ಲಿನ ಪ್ರತಿಯೊಬ್ಬರೂ ಪರೋಪಕಾರ ಭಾವನೆ ಬೆಳೆಸಿಕೊಳ್ಳಬೇಕು. ಇದರಿಂದ ಧರ್ಮದ ಪ್ರಭಾವನೆ ಸಾಧ್ಯವಾಗಲಿದೆ, ಶಾಂತಿ ,ಅಹಿಂಸೆ , ಸಂಸ್ಕೃತಿ, ಸಂಸ್ಕಾರ ಗಳು ಅತಿ ಅಗತ್ಯ, ಮತ್ತೊಬ್ಬರ ಒಳಿತಿಗಾಗಿ ,ಲೋಕಕಲ್ಯಾಣಕ್ಕಾಗಿ ಜೀವನ ಸಾರ್ಥಕವಾಗಲಿದೆ ಎಂದರು. ಇದೇ ಸಂದರ್ಭದಲ್ಲಿ ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ 10 ಗ್ರಾಂಗಳ ಬೆಳ್ಳಿ ನಾಣ್ಯ ವಿತರಿಸಿದರು. ಮಾಜಿ ಸಂಸದ ರಮೇಶ್ ಕತ್ತಿ ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶ ತರವಲ್ಲ, ಸಮಾಜಮುಖಿ ಕಾರ್ಯದಿಂದ ಸಮಾಜದ ಉನ್ನತಿಗೆ ಶ್ರಮಿಸಬೇಕೆಂದು ಅವರು, ಗ್ರಾಮೀಣ ಭಾಗದ ಬಡ ಜನರ, ಕೂಲಿ ಕಾರ್ಮಿಕರ, ವ್ಯಾಪಾರಸ್ಥರಿಗೆ , ಆರ್ಥಿಕ ನೆರವು ನೀಡುವ…
ತುಮಕೂರು: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕುಚ್ಛಂಗಿ ಗ್ರಾಮದ ಶ್ರೀ ಪಾರ್ಶ್ವನಾಥ ಜಿನಮಂದಿರದ 55ನೇ ವಾರ್ಷಿಕ ಪೂಜಾ ಮಹೋತ್ಸವ ಇಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು. ಕುಚ್ಚಂಗಿ ಶ್ರೀ ಪಾರ್ಶ್ವನಾಥ ಚಾರಿಟೇಬಲ್ ಅಂಡ್ ಎಜುಕೇಶನಲ್ ಟ್ರಸ್ಟ್ ತುಮಕೂರು ಇವರ ವತಿಯಿಂದ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಅಭಿಷೇಕ, ಆರಾಧನೆಗಳು, 108 ಕಳಸಗಳ ಮಹಾಭಿಷೇಕ ಪೂಜೆಗಳು ನಡೆದವು. ಕಾರ್ಯಕ್ರಮದಲ್ಲಿ ಗೊಮ್ಮಟವಾಣಿ ಜೈನ ಪಾಕ್ಷಿಕ ಪತ್ರಿಕೆ ಮಾಜಿ ಸಂಪಾದಕ ರಾದ ಎಸ್. ಎನ್ .ಅಶೋಕ್ ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಜಿ.ಪಿ .ಉಮೇಶ್ ಕುಮಾರ್, ಜಿನರಾಜ್ ಜೈನ, ಎಂ. ಜೆ. ಬ್ರಹ್ಮಪ್ಪ, ಸನ್ಮತಿ ಕುಮಾರ್, ಜಿ.ಸಿ ಬ್ರಹ್ಮದೇವ್, ಜೈ ಭಾರತ್ ಟ್ರಾನ್ಸ್ ಪೋರ್ಟ್ ನ ಬಾಹುಬಲಿ, ಬೆಳಗುಲಿ ವಿಜಯ್ ಕುಮಾರ್, ಪದ್ಮರಾಜು, ಬೆಳಗುಲಿ ಕುಬೇರ್, ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವ ನಾಥ ಜಿನಮಂದಿರ ಸಮಿತಿ ಉಪಾಧ್ಯಕ್ಷ ತೋವಿನಕೆರೆ ಶೀತಲ್ , ಕಾಂತರಾಜು, ಶ್ರುತ ಜೈನ್ ಮಹಿಳಾ ಮಿಲನ ಶೀಲಾ , ಪದ್ಮಿನಿ…
ನಂಜನಗೂಡು: ತಾಲೂಕಿನ ಇತಿಹಾಸ ಪ್ರಸಿದ್ಧ ಏಚಿಗಾನಹಳ್ಳಿ ಶ್ರೀನಿವಾಸ ತೀರ್ಥಂಕರರ 108 ಕಲಸಗಳ ಮಹಾಭಿಷೇಕ ಪೂಜೆ ,ಶ್ರೀ ಕುದುರೆ ಬ್ರಹ್ಮ ಯಕ್ಷರ ಮತ್ತು ಶ್ರೀ ಕುಶ್ಮಾಂಡೀನಿ ದೇವಿಗೆ ಶೋಡಶೋಪಚಾರ ಪೂಜೆ ಇಲ್ಲಿನ ಶ್ರೀ ನೇಮಿನಾಥ ಧಾರ್ಮಿಕ ಸಭಾ ಮಂಟಪದಲ್ಲಿ ನಡೆಯಿತು. ಶ್ರೀ ಕ್ಷೇತ್ರ ಕನಕಗಿರಿ ಜೈನ ಮಠದ ಸ್ವಸ್ತಿ ಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಹಾಸನದ ಸುದೀಪ್ ಮತ್ತು ಭವ್ಯ ದಂಪತಿಗಳು ಶ್ರೀ ಕುದುರೆ ಬ್ರಹ್ಮ ದೇವರಿಗೆ ಅರ್ಧ ಕೆ.ಜಿ. ತೂಕದ ಬೆಳ್ಳಿಯ ಖಡ್ಗವನ್ನು ದೇಣಿಗೆಯಾಗಿ ನೀಡಿದರು. ಮಾಜಿ ಮಂಡಲ್ ಪ್ರಧಾನರು ಹಾಗೂ ಎಚಿಗನಹಳ್ಳಿ ಶ್ರೀ ಕುದುರೆ ಬ್ರಹ್ಮದೇವರ ಸೇವಾ ಸಮಿತಿಯ ಅಧ್ಯಕ್ಷ ಕೆ. ಆದಿ ರಾಜಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪುರೋಹಿತ ರತ್ನ ನಾಗ ಕುಮಾರ್ ಪಂಡಿತ್, ಸ್ಥಳೀಯ ಪುರೋಹಿತರು, ಶ್ರೀ ಕುದುರೆ ಬ್ರಹ್ಮದೇವರ ಸೇವಾ ಸಮಿತಿಯ ಪದಾಧಿಕಾರಿಗಳು, ಕಡಕೋಳ –ಏಚಿಗನಹಳ್ಳಿ ಜೈನ ಯುವ ಸಂಘಗಳು, ಮಹಿಳಾ ಸಂಘಗಳು ಪದಾಧಿಕಾರಿಗಳು,…
ಪಾವಗಡ: ಭಾರತೀಯ ಪರಿವರ್ತನ ಸಂಘ–BPS, ಪಾವಗಡ ತಾಲ್ಲೂಕು ವತಿಯಿಂದ ಹೈಕೋರ್ಟ್ ವಕೀಲರು ಹಾಗೂ ರಾಜ್ಯಧ್ಯಕ್ಷ ಪ್ರೊ.ಹರಿರಾಮ್ ಅವರ ನೇತೃತ್ವದಲ್ಲಿ ಹರಿಹರಪುರ ಗ್ರಾಮಕ್ಕೆ ಭೇಟಿ ನೀಡಿ ಬೆಂಕಿ ಅವಘಡದಿಂದ ಗುಡಿಸಲು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಲಾಯಿತು. ನಿಡಗಲ್ಲು ಹೋಬಳಿ ಹರಿಹರಪುರ ಗ್ರಾಮದಲ್ಲಿ ಭೂತಮ್ಮ ಕೋಂ ದೊಡ್ಡಣ್ಣ ಎಂಬ 2 ಕುಟುಂಬಗಳ ಗುಡಿಸಲು ಮನೆ ಸುಟ್ಟು ಹೋಗಿತ್ತು. ಈ ಹಿನ್ನೆಲೆಯಲ್ಲಿ ಪ್ರೊ.ಹರಿರಾಮ್ ನೇತೃತ್ವದಲ್ಲಿ BPS ಮುಖಂಡರು ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಿ, ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಸರ್ಕಾರಿ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಮಾಡಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು. ವಿಶೇಷವಾಗಿ ಪದವಿ ಓದುತ್ತಿರುವ ವಿದ್ಯಾರ್ಥಿನಿಯನ್ನು ನೀನು ಚೆನ್ನಾಗಿ ಓದು KAS ತರಬೇತಿ ಕೊಡಿಸುತ್ತೇನೆ ಎಂದು ಹರಿರಾಮ್ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಿಪಿಎಸ್ ತುಮಕೂರು ಜಿಲ್ಲಾಧ್ಯಕ್ಷ, ಚಿಕ್ಕತಿಮ್ಮನಹಟ್ಟಿ ಗ್ರಾಮದ ಎಚ್.ಕೆಂಚರಾಯ, ಪಾವಗಡ ತಾಲೂಕು ಸಂಯೋಜಿಕರಾದ ಹರಿಹರಪುರ ಗ್ರಾಮದ ಎಚ್.ಡಿ.ಈರಣ್ಣ, ಮುಖಂಡರಾದ ಹನುಮಂತರಾಯಪ್ಪ, ಕಲಾವಿದರಾದ ನಾಗರಾಜು,…
ಪಾವಗಡ : ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ನಿವೃತ್ತ ಇಂಜಿನಿಯರ್ ಹೆಚ್.ಆರ್ ಶ್ರೀನಿವಾಸ ಮೂರ್ತಿ(89) ಅನಾರೋಗ್ಯದಿಂದ ಭಾನುವಾರ ಮುಂಜಾನೆ 2:40ರ ಸಮಯದಲ್ಲಿ ನಿಧನರಾಗಿದ್ದಾರೆ. ಬೆಂಗಳೂರಿನ ಜೆಪಿ ನಗರದ ತಮ್ಮ ಪುತ್ರನ ನಿವಾಸದಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಪತ್ನಿ, ಪುತ್ರರು, ಪುತ್ರಿಯರನ್ನು ಅಗಲಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ತಿಪಟೂರು: ಹೈದರಾಬಾದ್ ಅಕ್ಷಯ ಪ್ರಾರ್ಥನಾ ಫೌಂಡೇಶನ್ ವತಿಯಿಂದ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಕಲಾ,ಸಾಹಿತ್ಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಕೊಡಮಾಡುವ ರಾಷ್ಟ್ರ ಮಟ್ಟದ ಭಾರತ ಸೇವಾರತ್ನ –2024 ರ ಪ್ರಶಸ್ತಿಗೆ ತಿಪಟೂರಿನ ಕಲ್ಪತರು ವಿದ್ಯಾಸಂಸ್ಥೆಯ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಶ್ರೀನಿವಾಸ ಬಿ. ರವರು ಭಾಜನರಾಗಿದ್ದಾರೆ. ಶ್ರೀನಿವಾಸ್ ರವರು ಈಗಾಗಲೇ ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಹಲವು ಪದಕಗಳನ್ನು ಪಡೆದಿದ್ದು, 2023 ನೇ ಸಾಲಿನಲ್ಲಿ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 03 ಚಿನ್ನದ ಪದಕಗಳನ್ನು ಹಾಗೂ 2024ನೇ ಸಾಲಿನಲ್ಲಿ ಥಾಯ್ಲೆಂಡಿನ ಸಖೋನ್ ನಖೊನ್ ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ 03 ಚಿನ್ನ, 01 ಬೆಳ್ಳಿ ಹಾಗೂ 01 ಕಂಚಿನ ಪದಕಗಳನ್ನು ಪಡೆದು ನಾಡಿಗೆ ಹಾಗೂ ದೇಶಕ್ಕೆ ಕೀರ್ತಿಯನ್ನು ತಂದಿದ್ದು, ಇವರು ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ…