ಒಡಿಶಾ: ತನ್ನದೇ 9 ದಿನಗಳ ಮಗುವನ್ನು ವ್ಯಕ್ತಿಯೊಬ್ಬ ಕೇವಲ 60 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಒಡಿಶಾದ ಬಲ್ಸೋರೆದಲ್ಲಿ ನಡೆದಿದೆ.
ಶಾಂತಿ ಬೆಹೆರಾ ಎಂಬುವವರು ಪಿಆರ್ಎಂ ಮೆಡಿಕಲ್ ಕಾಲೇಜ್ ಬರೀಪಾದದಲ್ಲಿ ಡಿಸೆಂಬರ್ 9 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದಾದ ಬಳಿಕ ಇಬ್ಬರು ವ್ಯಕ್ತಿಗಳ ಮಧ್ಯಸ್ಥಿಕೆಯಲ್ಲಿ ಮಗುವನ್ನು ಸೇಲ್ ಮಾಡಲು ಆಕೆಯ ಪತಿ ಡೀಲ್ ಕುದುರಿಸಿಕೊಂಡಿದ್ದಾನೆ. ನಂತರ 60 ಸಾವಿರ ರೂಪಾಯಿಗೆ ಮಗುವನ್ನು ಮಾರಾಟ ಮಾಡಿದ್ದಾನೆ.
ಡಿಸೆಂಬರ್ 22 ರಂದು ಹೆರಿಗೆ ಬಳಿಕ ಶಾಂತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಳು. ಇದರ ಬೆನ್ನಲ್ಲೇ ಆಕೆಯ ಪತಿ ಮಗುವನ್ನು ಮಾರಾಟ ಮಾಡಿದ ಹಣದಲ್ಲಿ ಬೈಕ್ ಖರೀದಿಸಿ, ಬೈಕ್ ನಲ್ಲಿ ಓಡಾಡುತ್ತಿದ್ದ. ಬಡತನದಲ್ಲಿದ್ದ ಈತನಿಗೆ ಏಕಾಏಕಿ ಬೈಕ್ ಹೇಗೆ ಬಂತು ಎಂದು ಸ್ಥಳೀಯರು ಅನುಮಾನಗೊಂಡಿದ್ದರು. ಜೊತೆಗೆ ಮಗು ಕೂಡ ಇಲ್ಲದಿರುವುದನ್ನು ಕಂಡು ಮಕ್ಕಳ ಕಲ್ಯಾಣ ಇಲಾಖೆಯ ಗಮನಕ್ಕೆ ತಂದಿದ್ದರು.
ತನಿಖೆಯನ್ನು ಕೈಗೆತ್ತಿಕೊಂಡ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಸ್ತಾ ಪೊಲೀಸರು ಮಗುವನ್ನು ಖರೀದಿ ಮಾಡಿದವರ ಕೈಯಿಂದ ರಕ್ಷಿಸಿದ್ದಾರೆ. ಜೊತೆಗೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್ ಕೂಡ ನೀಡಿದ್ದಾರೆ. ಮಗುವನ್ನು ಮಾರುವುದಕ್ಕೆ ಆರಂಭದಲ್ಲಿ ಧರ್ಮು ಪತ್ನಿ ಶಾಂತಿ ಒಪ್ಪಿರಲಿಲ್ಲ.
ಆದ್ರೆ ಮಗುವನ್ನು ಖರೀದಿದಾರರಷ್ಟು ಚೆನ್ನಾಗಿ ನಮಗೆ ಸಾಕಲು ಸಾಧ್ಯವಿಲ್ಲವೆಂದು ಕೊನೆಗೆ ಒಪ್ಪಿದೆ ಎಂದು ಹೇಳಿದ್ದಾರಂತೆ.
ಸದ್ಯ ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ಧಿಯಲ್ಲಿ ಮಗು ಆರೋಗ್ಯವಾಗಿದ್ದು. ತನಿಖೆಯನ್ನು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸರು ಮುಂದುವರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx