Subscribe to Updates
Get the latest creative news from FooBar about art, design and business.
- ಶಿಕ್ಷಣ ನಿಮ್ಮ ಬದುಕಿಗೆ ಭದ್ರ ಬುನಾದಿ: ಶ್ರೀ ಸಿದ್ಧಲಿಂಗ ಮಹಾಸ್ವಾಮಿ
- ಹೂ ಲೋಕ, ಭೂರಮೆಯ ರಥ : ಪ್ರಕೃತಿ ಮಡಿಲಲ್ಲಿ ಚೆಲುವಿನ ರಥಯಾತ್ರೆ ವಾಹ್..!
- ತುಮಕೂರಿನಲ್ಲಿ ಆ.11ರಂದು ನೇರ ಸಂದರ್ಶನ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಕಾಮಗಾರಿ ಸ್ಥಳಕ್ಕೆ ಜಿ.ಪಂ ಸಿಇಒ ಭೇಟಿ: ಶಾಶ್ವತ ಆಸ್ತಿ ನಿರ್ಮಾಣಕ್ಕೆ ಒತ್ತು ನೀಡಲು ಸೂಚನೆ
- ಸ್ತನ್ಯಪಾನ ಬೆಂಬಲಿಸಿ, ಸದೃಢ ಜಗತ್ತು ನಿರ್ಮಿಸಿ: ಡಾ.ರವಿಕುಮಾರ್ ಕರೆ
- ಆಗಸ್ಟ್ 8ರಂದು ಸರಗೂರಿನಲ್ಲಿ ಹೆಚ್.ಡಿ. ಕೋಟೆ ಹಾಗೂ ಸರಗೂರು ತಾಲೂಕು ಮಾದರ ಮಹಾಸಭಾ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ
- ಡಾ.ಎಚ್.ಸಿ.ಮಹದೇವಪ್ಪಗೆ ಸಚಿವ ಸ್ಥಾನ ನೀಡಲು ಆಗ್ರಹ: ಸರಗೂರಿನಲ್ಲಿ ಅಧಿಕರ್ನಾಟಕ ಮಹಾಸಭಾ ಸಭೆ
- ಸರಗೂರು: ಎಸ್.ಸಿ. ಮಹದೇವಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಆಕ್ರೋಶ — ಪ್ರತಿಭಟನೆಯ ಎಚ್ಚರಿಕೆ
Author: admin
ತುಮಕೂರು: ಜಿಲ್ಲೆಯ ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಅಜ್ಜೇನಹಳ್ಳಿ ರಾಮನಹಳ್ಳಿ ಉಪ್ಪಾರಹಟ್ಟಿ ಹಾಗೂ ಮಾರಜ್ಜನಹಟ್ಟಿ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರು ಭಯಭೀತಗೊಂಡಿದ್ದಾರೆ. ಗಾಣದ ಹುಣಸೆ ಗ್ರಾಮದ ಸುತ್ತಮುತ್ತ ಇರುವ ಅಜ್ಜನಹಳ್ಳಿ ರಾಮನಹಳ್ಳಿ ಮಾರಜ್ಜನಹಟ್ಟಿ ಸುತ್ತಮುತ್ತ ನೆಲೆಸಿರುವ ಗ್ರಾಮಗಳಲ್ಲಿ ಚಿರತೆಯ ಹಾವಳಿ ಹೆಚ್ಚಿದ್ದು, ಹಾಡು ಹಗಲೇ ಕುರಿಗಳ ಮೇಲೆ ದಾಳಿ ಮಾಡುವ ಚಿರತೆ ಈವರೆಗೆ, ಮೂರು ಕುರಿಗಳನ್ನು, ಐದು ಸಾಕು ನಾಯಿಗಳನ್ನು ಹೊತ್ತೊಯ್ದಿದೆ. ಭಾನುವಾರ ಸಂಜೆಯೂ ಸಹ ಮಾರಜ್ಜನಹಟ್ಟಿ ಗ್ರಾಮದ ಕುಮಾರ್ ಎಂಬುವವರ ಕುರಿಯ ಮೇಲೆ ಹಗಲು ಹೊತ್ತಿನಲ್ಲಿಯೇ ದಾಳಿ ಮಾಡಿದೆ. ಜನರು ಕೂಗಾಡಿ ಕಲ್ಲುಗಳನ್ನು ತೂರಿ ಓಡಿಸುವ ಪ್ರಯತ್ನ ಮಾಡಿದ್ದು, ಒಂದು ಕುರಿ ಮಾರಣಾಂತಿಕವಾಗಿ ಗಾಯಗೊಂಡಿದೆ. ಈ ಘಟನೆಯಿಂದ ಮಾರಜ್ಜನಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಕುರಿಗಳನ್ನು ಮೇಯಿಸಲು ದನಗಳನ್ನು ಮೇಯಿಸಲು ಭಯಭೀತಗೊಂಡಿದ್ದಾರೆ ಹಾಗೂ ರಾತ್ರಿ ಹೊತ್ತು ಜಮೀನುಗಳಲ್ಲಿ ನೀರು ಹಾಯಿಸಲು ಸಹ ಹೆದರಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಆದಷ್ಟು ಶೀಘ್ರವಾಗಿ ಚಿರತೆಯನ್ನು ಸೆರೆ ಹಿಡಿದು…
ತುಮಕೂರು: ಜಗದ್ಗುರು ಶ್ರೀ ರೇಣುಕಾಚಾರ್ಯರು ನಡೆಸಿಕೊಂಡು ಬಂದ ವೀರಶೈವ ಪರಂಪರೆಯಲ್ಲಿ ವೀರಶೈವ ಧಮದ ಮೂಲ ಸಿದ್ದಾಂತವನ್ನು ಬಹಳಷ್ಟು ಜನ ತಿಳಿದುಕೊಂಡಿಲ್ಲ. ಅಲ್ಲದೆ ತಿಳಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಹೀಗಾಗಿ ಧರ್ಮದಲ್ಲಿ ಅನೇಕ ಸಮಸ್ಯೆ ಮತ್ತು ಸವಾಲುಗಳನ್ನು ಕಾಣುವಂತಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ತುಮಕೂರು ನಗರದಲ್ಲಿ ನಾಲ್ಕು ದಿನಗಳ ಕಾಲ ನಡೆದ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಇರುವಂತಹ ಸತ್ಯವನ್ನು ಗ್ರಂಥಗಳಿಂದ ತಿಳಿದುಕೊಳ್ಳಲು ಸಾಧ್ಯವಿದೆ. ಆದ್ರೆ ಬಹಳಷ್ಟು ಜನ ಅವುಗಳನ್ನು ತಿಳಿದುಕೊಂಡು ದಾರಿಯಲ್ಲಿ ನಡೆದುಕೊಂಡರೆ ಸನ್ಮಾರ್ಗ ಲಭಿಸಲಿದೆ, ಆದ್ರೆ ಕೆಲವರು ಅದನ್ನು ತಿಳಿದುಕೊಳ್ಳದೆ ಇರುವುದರಿಂದ ಕೆಲವೊಂದು ಅವಾಂತರಗಳು ಮತ್ತು ಆತಂಕಗಳಿಗೆ ಕಾರಣವಾಗಿದೆ ಎಂದ್ರೆ ತಪ್ಪಾಗಲಾರದು ಎಂದು ತಿಳಿಸಿದರು. ವೀರಶೈವ ಧರ್ಮದ ಇತಿಹಾಸ ಮತ್ತು ಬೆಳೆದುಬಂದ ಪರಂಪರೆ ಅತ್ಯಂತ ಪ್ರಾಚೀನ ಎನ್ನುವುದರಲ್ಲಿ ಎರಡು ಮಾತು ಇಲ್ಲವೇ ಇಲ್ಲ. ಪರಮಾಚಾರ್ಯರು ಹಾಕಿದ ಧರ್ಮ…
ಬೆಂಗಳೂರು: ಡಾಕ್ಟರ್ ಮನಮೋಹನ್ ಸಿಂಗ್ ಹೆಸರನ್ನು ಕರ್ನಾಟಕದಲ್ಲಿ ಶಾಶ್ವತವಾಗಿ ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಹಿರಿಯ ಸಾಮಾಜಿಕ ಹೋರಾಟಗಾರ, ನೈಜಹೋರಾಟಗಾರರ ವೇದಿಕೆಯ ಹೆಚ್.ಎಂ.ವೆಂಕಟೇಶ್ ಮನವಿ ಮಾಡಿದ್ದಾರೆ. ಪ್ರಪಂಚದಲ್ಲಿಯೇ ಅತ್ಯಂತ ಬಹು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಕರೆಯಲ್ಪಡುವ ಭಾರತ ದೇಶದ ಪ್ರಧಾನಮಂತ್ರಿಯಾಗಿ 10 ವರ್ಷಗಳ ಕಾಲ ಸತತವಾಗಿ ಆಡಳಿತ ನಡೆಸಿದ ನಮ್ಮ ನೆಚ್ಚಿನ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಡಾಕ್ಟರ್ ಮನಮೋಹನ ಸಿಂಗ್ ಈಗ ನಮ್ಮನ್ನು ಅಗಲಿದ್ದಾರೆ. ಅವರು ಈ ದೇಶಕ್ಕೆ ನೀಡಿದ ಕೊಡುಗೆ ಮತ್ತು ಶಾಸನಗಳು/ಯೋಜನೆಗಳು ಹತ್ತು ಹಲವು ಇದರಲ್ಲಿ ಬಹಳ ಮುಖ್ಯವಾಗಿ ಗುರುತಿಸಲ್ಪಡುವ ಶಾಸನ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲು ಅವರು ಮಾಹಿತಿಯ ಹಕ್ಕು ಅದಿನಿಯಮ 2005 ಜಾರಿಗೊಳಿಸುವ ಮೂಲಕ ಪ್ರಜಾಪ್ರಭುತ್ವದ ಆಡಳಿತದಲ್ಲಿ ಪಾರದರ್ಶಕತೆಯನ್ನು ತಂದು ಪ್ರತಿಯೊಬ್ಬ ನಾಗರೀಕರು ಆಡಳಿತದಲ್ಲಿನ ಪಾಲುದಾರರಾಗುವಂತೆ ಮತ್ತು ಆಡಳಿತದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆಯುವಂಥ ಆಯಿತು. ಇದೊಂದು ಕ್ರಾಂತಿಕಾರಿ ನಿರ್ಧಾರವಾಗಿತ್ತು, ಈ ಮಾಹಿತಿ ಹಕ್ಕು ಕಾಯ್ದೆ2005 ಉಳಿಸಿ ಇನ್ನಷ್ಟು ಬಲಪಡಿಸುವ ಗುರುತರ…
ವಿಜಯಪುರ: ತುಮಕೂರು—ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನ ಮೇಲೆ ಕಂಟೈನರ್ ಬಿದ್ದು 6 ಜನ ಸಾವಿಗೀಡಾಗಿದ್ದರು. ಈ ಅಪಘಾತದಲ್ಲಿ ಮಗ, ಸೊಸೆ, ಮೊಮ್ಮಕ್ಕಳನ್ನು ಕಳೆದುಕೊಂಡಿದ್ದ ಈರಗೊಂಡ ಏಗಪ್ಪಗೊಳ ಕೂಡ ನಿಧನರಾಗಿದ್ದಾರೆ. ನೆಲಮಂಗಲ ತಾಲೂಕಿನ ತಾಳೆಕೆರೆ ಬಳಿ ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ಸರಣಿ ಅಪಘಾತ ಸಂಭವಿಸಿತ್ತು. ಈ ದುರಂತದಲ್ಲಿ ಕಾರಿನ ಮೇಲೆ ಕಂಟೈನರ್ ಬಿದ್ದ ಪರಿಣಾಮ IAST ಸಾಫ್ಟ್‌ವೇರ್ ಸಲ್ಯೂಷನ್ ಮುಖ್ಯಸ್ಥ ಚಂದ್ರಮ್ ಯಾಗಪ್ಪಗೋಳ್( 48), ಗೌರಾಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36), ಆರ್ಯ (6) ಎಂಬುವವರು ಮೃತಪಟ್ಟಿದ್ದರು. ಮಗ ಚಂದ್ರಮ್ ಯಾಗಪ್ಪಗೋಳ್, ಸೊಸೆ, ಮೊಮ್ಮಕ್ಕಳ ಸಾವಿನಿಂದ ಈರಗೊಂಡ ಏಗಪ್ಪಗೊಳ ಆಘಾತಗೊಂಡಿದ್ದರು. ಈರಗೊಂಡ ಏಗಪ್ಪಗೊಳ ಅವರು ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ನಡುವೆ ಕುಟುಂಬಸ್ಥರ ಸಾವಿನಿಂದ ನೊಂದಿದ್ದ ಅವರು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮದಲ್ಲಿ ಶನಿವಾರ ಸಂಜೆ ನಿಧನರಾಗಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ಬೆಂಗಳೂರು: ಬೈಕ್ ಕದಿಯಲು ಬಂದಿದ್ದ ಕಳ್ಳನನ್ನು ಸಾರ್ವಜನಿಕರೇ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಜೆ.ಪಿ.ನಗರ ಒಂದನೇ ಹಂತದ 34ನೇ ಮುಖ್ಯರಸ್ತೆಯ ಅಪಾರ್ಮೇಂಟ್ ಬಳಿ ನಡೆದಿದೆ. ರಾತ್ರಿ ಸುಮಾರು 12:30ರ ಸಮಯದಲ್ಲಿ ಜೆ.ಪಿ.ನಗರದ ಒಂದನೇ ಹಂತದ 34ನೇ ಮುಖ್ಯರಸ್ತೆಯ ಅಪಾರ್ಮೇಂಟ್ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ನ ಹ್ಯಾಂಡ್ ಲಾಕ್ ಮುರಿದ ಕಳ್ಳ, ಬೈಕ್ ನ್ನು ತಳ್ಳಿಕೊಂಡು ಹೋಗುತ್ತಿದ್ದ. ಈ ವೇಳೆ ಮಾಲಿಕ ಶಬ್ದ ಕೇಳಿ ಮನೆಯಿಂದ ಹೊರ ಬಂದಾಗ ಕಳ್ಳ ಬೈಕ್ ತಳ್ಳಿಕೊಂಡು ಓಡಿ ಹೋಗುತ್ತಿರುವುದು ಕಂಡು ಬಂದಿದೆ. ಈ ವೇಳೆ ಅಕ್ಕಪಕ್ಕದ ನಿವಾಸಿಗಳನ್ನು ಕರೆದುಕೊಂಡು 1 ಕಿ.ಮೀ. ದೂರ ಬೆನ್ನಟ್ಟಿ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಕಳ್ಳನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ. ಸಾರ್ವಜನಿಕರ ಒಗ್ಗಟ್ಟಿನ ನಡವಳಿಕೆಯಿಂದಾಗಿ ಕಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಪಾವಗಡ: ಶನಿವಾರ ರಾತ್ರಿ 8:30 ರ ಸಂದರ್ಭದಲ್ಲಿ ಪಾವಗಡ ಪಟ್ಟಣದ ಅಗ್ನಿಶಾಮಕ ಠಾಣೆಯ ಆವರಣದೊಳಗಡೆ ಕರಡಿಯೊಂದು ನುಗ್ಗಿ ಅವಾಂತರ ಸೃಷ್ಟಿಸಿದೆ. ಪಾವಗಡ ಪಟ್ಟಣದ ಬಳ್ಳಾರಿ ರಸ್ತೆ ಮಾರ್ಗದ ಎಪಿಎಂಸಿ ಸಮೀಪದಲ್ಲಿ ಅಗ್ನಿಶಾಮಕ ಠಾಣೆ ಇದ್ದು ಈ ಠಾಣೆಗೆ ಒಂದು ಕಡೆ ಕಾಂಪೌಂಡ್ ಇದೆ. ಇನ್ನೊಂದು ಕಡೆಯಲ್ಲಿ ಕಾಂಪೌಂಡ್ ಇಲ್ಲ. ಹೀಗಾಗಿ 24 ಗಂಟೆ ಕರ್ತವ್ಯ ನಿರ್ವಹಿಸುವಂತಹ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಜೀವ ಕೈಯಲ್ಲಿ ಇಟ್ಟುಕೊಂಡು ಕೆಲಸ ಮಾಡುವಂತಹ ಪರಿಸ್ಥಿತಿ ಸದ್ಯ ನಿರ್ಮಾಣವಾಗಿದೆ. ಶಾಸಕರು ಠಾಣೆಯ ಒಂದು ಭಾಗಕ್ಕೆ ಕಾಂಪೌಂಡನ್ನು ನಿರ್ಮಿಸಲು ಕ್ರಮ ವಹಿಸಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ . ಬೆಟ್ಟ ಸಮೀಪದಲ್ಲಿಯೇ ಇರುವುದರಿಂದ ಸಂಜೆಯಾದರೆ ಕರಡಿಗಳು ಬೆಟ್ಟದಿಂದ ಇಳಿದು ಊರಿನ ಮಧ್ಯಕ್ಕೆ ಬರುತ್ತಿರುವುದು ಇತ್ತೀಚೆಗೆ ಸಹಜವಾಗಿದೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಔರಾದ್: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಡಾ.ಬಿ. ಆರ್ ಅಂಬೇಡ್ಕರ್ ಹೋರಾಟ ಸಮಿತಿ ವತಿಯಿಂದ ಔರಾದ್ ಬಂದ್ ಪ್ರತಿಭಟನೆ ನಡೆಯಿತು. ಹೋರಾಟ ಸಮಿತಿಯ ಪದಾಧಿಕಾರಿಗಳು ಔರಾದ್ ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿಯಿಂದ ಎಪಿಎಂಸಿ ವೃತ್ತದವರೆಗೆ ಮೆರವಣಿಗೆ ಮೂಲಕ ತೆರಳಿದ್ದರು ಬಳಿಕ ಟೈರ್ ಬೆಂಕಿ ಹಚ್ಚಿ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಎ ಪಿ ಎಂ ಸಿ ಕ್ರಾಸ್ ನಿಂದ ಮೆರವಣಿಗೆ ಮೂಲಕ ಬಸ್ ನಿಲ್ದಾಣದ ವರೆಗೆ ಅಮಿತ್ ಶಾ ಪ್ರತಿಕೃತಿಗೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ನಂತರ ರಾಷ್ಟ್ರಪತಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಔರಾದ ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಮೂಲಕ ಮನವಿ ಸಲ್ಲಿಸಿದ್ದರು. ಈ ಸಮಯದಲ್ಲಿ ಹೋರಾಟರಾರರಾದ ಧನರಾಜ್ ಮುಸ್ತಾಪುರೆ, ಗೌತಮ್ ಮೇತ್ರೆ, ಸುಭಾಷ್ ಲಾಧಾ, ರಾಹುಲ್ ಖಂಡಾರೆ, ರತ್ನಾದೀಪ ಕಸ್ತುರೆ, ರಾಮಣ್ಣ ವಡೆಯರ, ದಲಿತ ಹಿರಿಯರ ಮುಖಂಡರು ಸುಧಾಕರ್ ಕೊಳ್ಳುರ್, ಎಮ್.ಡಿ.ನಯೂಮ, ಪರಮೇಶ್ವರ್ ಮೇತ್ರೆ, ಕರಬಸಪ್ಪಾ ಸೊರಾಳೆ,…
ತುಮಕೂರು: ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಲಭ್ಯವಿರುವ ತೆಂಗಿನ ಸಸಿಗಳನ್ನು ಮಾರಾಟ ಮಾಡಲು ಉದ್ದೇಶಿಸಲಾಗಿದ್ದು, ರೈತರು ಈ ಸುವರ್ಣಾವಕಾಶವನ್ನು ಪಡೆದುಕೊಳ್ಳಬೇಕೆಂದು ತುಮಕೂರಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮನವಿ ಮಾಡಿದ್ದಾರೆ. ತುಮಕೂರು ತಾಲ್ಲೂಕಿನ ನಿಡುವಳಲು ತೋಟಗಾರಿಕೆ ಕ್ಷೇತ್ರದಲ್ಲಿ 24,972 ತೆಂಗಿನ ಸಸಿ, ಜಿಲ್ಲಾ ನರ್ಸರಿಯಲ್ಲಿ 1264, ಕೊರಟಗೆರೆ ತಾಲ್ಲೂಕು ದೊಡ್ಡಸಾಗ್ಗೆರೆ ಡಾ.ಎಂ.ಹೆಚ್.ಮರಿಗೌಡ ತೋಟಗಾರಿಕೆ ಕ್ಷೇತ್ರ–4933, ಕುಣಿಗಲ್ ತಾಲ್ಲೂಕು ಮಂಗಳ ತೋಟಗಾರಿಕೆ ಕ್ಷೇತ್ರ–13606 ಹಾಗೂ ರಂಗಸ್ವಾಮಿಗುಡ್ಡ ತೋಟಗಾರಿಕೆ ಕ್ಷೇತ್ರ–18957, ಮಧುಗಿರಿ ತಾಲ್ಲೂಕು ಇಂದಿರಾ ತೋಟಗಾರಿಕೆ ಕ್ಷೇತ್ರ–3277, ತುರುವೇಕೆರೆ ತಾಲ್ಲೂಕು ಮಾದಿಹಳ್ಳಿ ತೋಟಗಾರಿಕೆ ಕ್ಷೇತ್ರ–1249, ಗುಬ್ಬಿ ತಾಲ್ಲೂಕು ಹೇರೂರು ತೋಟಗಾರಿಕೆ ಕ್ಷೇತ್ರ– 1957, ತಿಪಟೂರು ತಾಲ್ಲೂಕು ಗೊರಗೊಂಡನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ 2878 ತೆಂಗಿನ ಸಸಿಗಳು ಮಾರಾಟಕ್ಕೆ ಲಭ್ಯವಿದೆ. ತೆಂಗಿನ ಸಸಿಗಳನ್ನು ಖರೀದಿಸುವವರು ಹೆಚ್ಚಿನ ಮಾಹಿತಿಗಾಗಿ ಎಂ.ಎನ್ ರೇಖಾ(ನಿಡುವಳಲು–8147636329); ಜ್ಞಾನೇಂದ್ರ ಎಂ.ಎನ್.(ಜಿಲ್ಲಾ ನರ್ಸರಿ–9591655665); ಕೆಂಪೇಗೌಡ ಬಿ.ಆರ್.(ದೊಡ್ಡಸಾಗ್ಗೆರೆ–9986456750); ಗಿರೀಶ್‌ಬಾಬು ವಿ.ಎಸ್.(ಮಂಗಳ ತೋಟಗಾರಿಕೆ ಕ್ಷೇತ್ರ–7892643025), ಶ್ವೇತಾ ಎ.ಸಿ.(ರಂಗಸ್ವಾಮಿಗುಡ್ಡ–9481121653), ಅಭಿಲಾಷ್ ಎಲ್.(ಇಂದಿರಾ–7975509668), ಪ್ರವೀಣ್ ಹೆಚ್.ಜೆ.(ಮಾದಿಹಳ್ಳಿ–8971167552), ತಿಮ್ಮರಾಜಮ್ಮ(ಹೇರೂರು-7338140275) ಹಾಗೂ ಶ್ರೀನಿವಾಸ ಗೌಡ(ಗೊರಗೊಂಡನಹಳ್ಳಿ–8310780633)…
ತುಮಕೂರು: ಜಿಲ್ಲೆಯ ಗೊನೆಗಾರರು ಕೇರಾ ಸುರಕ್ಷಾ ವಿಮಾ ಯೋಜನೆಯ ಪ್ರಯೋಜನವನ್ನು ಪಡೆಯಬೇಕೆಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಾರದಮ್ಮ ಮನವಿ ಮಾಡಿದ್ದಾರೆ. ಕೇರಾ ಸುರಕ್ಷಾ ವಿಮಾ ಯೋಜನೆಯು ವೈಯಕ್ತಿಕ ಅಪಘಾತ ವಿಮಾ ಯೋಜನೆಯಾಗಿದ್ದು, ತೆಂಗು ಅಭಿವೃದ್ಧಿ ಮಂಡಳಿಯು ” Friends of Coconut Tree” ಕಾರ್ಯಕ್ರಮದಡಿ ಈ ಯೋಜನೆಯನ್ನು ಅನುಷ್ಟಾನಗೊಳಿಸಿದೆ. ಜಿಲ್ಲೆಯಲ್ಲಿ ಸುಮಾರು 2,24,507 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಕಾಯಿ ಅಥವಾ ಎಳನೀರು ಕೊಯ್ಲು ಮಾಡುವ ಗೊನೆಗಾರರ ಸುರಕ್ಷತಾ ದೃಷ್ಟಿಯಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಗೊನೆಗಾರರಿಗೆ ಏನೇ ಅಪಘಾತ ಸಂಭವಿಸಿದರೂ ಕೇರಾ ಸುರಕ್ಷಾ ವಿಮಾ ಯೋಜನೆಯಡಿ ವಿವಿಧ ಸೌಲಭ್ಯ ಒದಗಿಸಲಾಗುವುದು. ತೆಂಗಿನ ಮರ ಹತ್ತುವವರು/ತೆಂಗಿನಕಾಯಿ ಕೀಳುವವರು/ನೀರಾ ತಂತ್ರಜ್ಞರು ಅಪಘಾತಕ್ಕೊಳಗಾಗಿ ಮರಣ ಹೊಂದಿದ್ದಲ್ಲಿ ಅಥವಾ ಅಂಗವಿಕಲರಾದಲ್ಲಿ ದುರ್ಘಟನೆ/ ಅಪಘಾತವಾದ 7 ದಿನಗಳೊಳಗಾಗಿ ತೆಂಗು ಅಭಿವೃದ್ಧಿ ಮಂಡಳಿಗೆ ಮಾಹಿತಿ ನೀಡಬೇಕು. ಮರಣ ಹೊಂದಿದಲ್ಲಿ 7 ಲಕ್ಷ ರೂ., ಶಾಶ್ವತ ಭಾಗಶಃ ಅಂಗವಿಕಲತೆ ಹೊಂದಿದಲ್ಲಿ 3.50 ಲಕ್ಷ ರೂ., ಆಸ್ಪತ್ರೆ ವೆಚ್ಚ(24 Hours IP) 2…
ತುಮಕೂರು: ತಿಪಟೂರು ನಗರಸಭೆಯ 2025–26ನೇ ಸಾಲಿನ ಆಯವ್ಯಯ ಅಂದಾಜು ಪಟ್ಟಿ ತಯಾರಿಸಲು ಡಿಸೆಂಬರ್ 30ರಂದು ಬೆಳಿಗ್ಗೆ 11 ಗಂಟೆಗೆ ನಗರಸಭಾ ಸಭಾಂಗಣದಲ್ಲಿ 2ನೇ ಸುತ್ತಿನ ಸಾರ್ವಜನಿಕ ಸಮಾಲೋಚನಾ ಪೂರ್ವಭಾವಿ ಸಭೆ ನಡೆಯಲಿದೆ. ನಗರಸಭೆ ಅಧ್ಯಕ್ಷೆ ಯಮುನಾ ಎ.ಎಸ್. ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸಭೆಗೆ ತಿಪಟೂರು ನಗರದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹೊಟೇಲ್ ಅಸೋಸಿಯೇಷನ್, ಛತ್ರಗಳ ಮಾಲೀಕರ ಸಂಘ, ಸಿನಿಮಾ ಮಂದಿರಗಳ ಮಾಲೀಕರ ಸಂಘ, ನರ್ಸಿಂಗ್ ಹೋಮ್ಸ್ ಸಂಘ, ಶಿಕ್ಷಣ ಸಂಸ್ಥೆಯ ಸಂಘಗಳ ಪದಾಧಿಕಾರಿಗಳು, ವಕೀಲರ ಅಸೋಸಿಯೇಷನ್, ನಾಗರಿಕ ಹಿತರಕ್ಷಣಾ ಸೇವಾ ಸಮಿತಿ, ಸರ್ಕಾರೇತರ ಸಂಘ ಸಂಸ್ಥೆಗಳು, ವಾಣಿಜ್ಯ & ಕೈಗಾರಿಕೋದ್ಯಮ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಲಹೆಗಳನ್ನು ನೀಡಲು ಕೋರಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx