ಬೆಂಗಳೂರು: ಡಾಕ್ಟರ್ ಮನಮೋಹನ್ ಸಿಂಗ್ ಹೆಸರನ್ನು ಕರ್ನಾಟಕದಲ್ಲಿ ಶಾಶ್ವತವಾಗಿ ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಹಿರಿಯ ಸಾಮಾಜಿಕ ಹೋರಾಟಗಾರ, ನೈಜಹೋರಾಟಗಾರರ ವೇದಿಕೆಯ ಹೆಚ್.ಎಂ.ವೆಂಕಟೇಶ್ ಮನವಿ ಮಾಡಿದ್ದಾರೆ.
ಪ್ರಪಂಚದಲ್ಲಿಯೇ ಅತ್ಯಂತ ಬಹು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಕರೆಯಲ್ಪಡುವ ಭಾರತ ದೇಶದ ಪ್ರಧಾನಮಂತ್ರಿಯಾಗಿ 10 ವರ್ಷಗಳ ಕಾಲ ಸತತವಾಗಿ ಆಡಳಿತ ನಡೆಸಿದ ನಮ್ಮ ನೆಚ್ಚಿನ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಡಾಕ್ಟರ್ ಮನಮೋಹನ ಸಿಂಗ್ ಈಗ ನಮ್ಮನ್ನು ಅಗಲಿದ್ದಾರೆ. ಅವರು ಈ ದೇಶಕ್ಕೆ ನೀಡಿದ ಕೊಡುಗೆ ಮತ್ತು ಶಾಸನಗಳು/ಯೋಜನೆಗಳು ಹತ್ತು ಹಲವು ಇದರಲ್ಲಿ ಬಹಳ ಮುಖ್ಯವಾಗಿ ಗುರುತಿಸಲ್ಪಡುವ ಶಾಸನ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲು ಅವರು ಮಾಹಿತಿಯ ಹಕ್ಕು ಅದಿನಿಯಮ 2005 ಜಾರಿಗೊಳಿಸುವ ಮೂಲಕ ಪ್ರಜಾಪ್ರಭುತ್ವದ ಆಡಳಿತದಲ್ಲಿ ಪಾರದರ್ಶಕತೆಯನ್ನು ತಂದು ಪ್ರತಿಯೊಬ್ಬ ನಾಗರೀಕರು ಆಡಳಿತದಲ್ಲಿನ ಪಾಲುದಾರರಾಗುವಂತೆ ಮತ್ತು ಆಡಳಿತದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆಯುವಂಥ ಆಯಿತು. ಇದೊಂದು ಕ್ರಾಂತಿಕಾರಿ ನಿರ್ಧಾರವಾಗಿತ್ತು, ಈ ಮಾಹಿತಿ ಹಕ್ಕು ಕಾಯ್ದೆ2005 ಉಳಿಸಿ ಇನ್ನಷ್ಟು ಬಲಪಡಿಸುವ ಗುರುತರ ಜವಾಬ್ದಾರಿ ದೇಶದ ನಾಗರಿಕರ ಮೇಲಿದೆ ಎಂದು ಅವರು ಹೇಳಿದ್ದಾರೆ.
ದುರಾದೃಷ್ಟವಷತ್ ಈ ಕಾಯ್ದೆಗೆ ಹಲವಾರು ತಿದ್ದುಪಡಿಯನ್ನು ತರಲಾಗಿದೆ. ಮೂಲ ಕಾಯ್ದೆಯನ್ನು ಉಳಿಸಿಕೊಳ್ಳುವ ಮತ್ತು ಅದನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವ ಪ್ರಯತ್ನ ಜನರಿಂದ ಆಯ್ಕೆ ಆದ ಜನಪ್ರತಿನಿಧಿಗಳ ದೊಡ್ಡ ಜವಾಬ್ದಾರಿಯನ್ನು ಡಾ. ಮನಮೋಹನ್ ಸಿಂಗ್ ಈಗ ಬಿಟ್ಟು ಹೋಗಿದ್ದಾರೆ, ಡಾಕ್ಟರ್ ಮನಮೋಹನ್ ಸಿಂಗ್ ಹೆಸರನ್ನು ಕರ್ನಾಟಕದಲ್ಲಿ ಶಾಶ್ವತವಾಗಿ ಉಳಿಸುವ ಮತ್ತು ಅವರು ಕೊಟ್ಟ ಆಡಳಿತವನ್ನು ನೆನಪಿಸಿಕೊಳ್ಳುವ ಗುರುತರ ಜವಾಬ್ದಾರಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಮೇಲಿದೆ ಎಂದು ಅವರು ತಿಳಿಸಿದ್ದಾರೆ.
ಅಗಲಿದ ಚೇತನ ಡಾಕ್ಟರ್ ಮನಮೋಹನ್ ಸಿಂಗ್ ಅವರ ಹೆಸರನ್ನು ಕರ್ನಾಟಕದಲ್ಲಿ ಶಾಶ್ವತಗೊಳಿಸುವ ಮೊದಲ ಹೆಜ್ಜೆಯಾಗಿ ಅವರ ನೇತೃತ್ವದ ಯುಪಿಎ ಸರ್ಕಾರ ತಂದ ಮಾಹಿತಿ ಹಕ್ಕು ಅದಿನಿಯಮ 2005 ರ ನೆನಪಿಗೆ ಬೆಂಗಳೂರಿನ ವಿಕಾಸ ಸೌಧದ ಎದುರು ಇರುವ ಮಾಹಿತಿ ಸೌಧಕ್ಕೆ ಡಾಕ್ಟರ್ ಮನಮೋಹನ್ ಸಿಂಗ್ ಮಾಹಿತಿ ಸೌಧ ಎಂದು ಮರುನಾಮಕರಣ ಮಾಡಬೇಕೆಂದು ನೈಜ್ಯ ಹೋರಾಟಗಾರರ ವೇದಿಕೆ ಕರ್ನಾಟಕ ಸರ್ಕಾರವನ್ನುಆಗ್ರಹಿಸಿದೆ.
ಅತೀ ಶೀಘ್ರದಲ್ಲಿ ಕರ್ನಾಟಕ ಸರ್ಕಾರವು ಕಾರ್ಯಯೋನ್ಮುಖರಾಗಿ ಡಾಕ್ಟರ್ ಮನಮೋಹನ್ ಸಿಂಗ್ ಅವರ ಹೆಸರು ವಿಧಾನಸೌಧ, ವಿಕಾಸ ಸೌಧದ ಪಕ್ಕದಲ್ಲಿರುವ ಮಾಹಿತಿ ಸೌಧಕ್ಕೆ ಡಾಕ್ಟರ್ ಮನಮೋಹನ್ ಸಿಂಗ್ ಮಾಹಿತಿ ಸೌಧ ಎಂದು ಮರುನಾಮಕರಣ ಮಾಡುವ ಮೂಲಕ ಡಾಕ್ಟರ್ ಮನಮೋಹನ್ ಸಿಂಗ್ ಹೆಸರು ಕರ್ನಾಟಕದಲ್ಲಿ ಅಜರಾಮರವಾಗಿ/ಶಾಶ್ವತವಾಗಿ ಉಳಿಯುತ್ತದೆ. ವಿಧಾನಸೌಧದ ಮೇಲಿರುವ ಸರ್ಕಾರದ ಕೆಲಸ ದೇವರ ಕೆಲಸ ಎಂಬ ಘೋಷ ವಾಕ್ಯಕ್ಕೆ ಇನ್ನಷ್ಟು ಮೆರಗು ಬರುವುದರ ಜೊತೆಗೆ ಮಾಜಿ ಪ್ರಧಾನಿ ಡಾಕ್ಟರ್ ಮನಮೋಹನ್ ಸಿಂಗ್ ಅವರಿಗೆ ಈ ಮೂಲಕ ಗೌರವ ಅರ್ಪಣೆ ಮಾಡುವ ಸುವರ್ಣ ಅವಕಾಶ ಆಡಳಿತರೂಢ ಕಾಂಗ್ರೆಸ್ ಪಕ್ಷದ್ದಾಗಿರುತ್ತದೆ ಎಂದು ಅವರು ನೆನಪಿಸಿದ್ದಾರೆ.
ನೈಜ ಹೋರಾಟಗಾರರ ವೇದಿಕೆ ಯ ಈ ಸಲಹೆಯನ್ನು ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಸ್ವೀಕರಿಸಿ ಮಾಹಿತಿ ಸೌಧಕ್ಕೆ ಡಾಕ್ಟರ್ ಮನಮೋಹನ್ ಸಿಂಗ್ ಮಾಹಿತಿ ಸೌಧ ಎಂದು ಮರುನಾಮಕರಣ ಮಾಡಬೇಕೆಂದು, ನೈಜ್ಯ ಹೋರಾಟಗಾರರ ವೇದಿಕೆಯು ಸರ್ಕಾರವನ್ನು ಆಗ್ರಪಡಿಸುತ್ತಿದೆ. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೂ ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರಿಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx