Subscribe to Updates
Get the latest creative news from FooBar about art, design and business.
- ತುಮಕೂರಿನಲ್ಲಿ ಆ.11ರಂದು ನೇರ ಸಂದರ್ಶನ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಕಾಮಗಾರಿ ಸ್ಥಳಕ್ಕೆ ಜಿ.ಪಂ ಸಿಇಒ ಭೇಟಿ: ಶಾಶ್ವತ ಆಸ್ತಿ ನಿರ್ಮಾಣಕ್ಕೆ ಒತ್ತು ನೀಡಲು ಸೂಚನೆ
- ಸ್ತನ್ಯಪಾನ ಬೆಂಬಲಿಸಿ, ಸದೃಢ ಜಗತ್ತು ನಿರ್ಮಿಸಿ: ಡಾ.ರವಿಕುಮಾರ್ ಕರೆ
- ಆಗಸ್ಟ್ 8ರಂದು ಸರಗೂರಿನಲ್ಲಿ ಹೆಚ್.ಡಿ. ಕೋಟೆ ಹಾಗೂ ಸರಗೂರು ತಾಲೂಕು ಮಾದರ ಮಹಾಸಭಾ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ
- ಡಾ.ಎಚ್.ಸಿ.ಮಹದೇವಪ್ಪಗೆ ಸಚಿವ ಸ್ಥಾನ ನೀಡಲು ಆಗ್ರಹ: ಸರಗೂರಿನಲ್ಲಿ ಅಧಿಕರ್ನಾಟಕ ಮಹಾಸಭಾ ಸಭೆ
- ಸರಗೂರು: ಎಸ್.ಸಿ. ಮಹದೇವಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಆಕ್ರೋಶ — ಪ್ರತಿಭಟನೆಯ ಎಚ್ಚರಿಕೆ
- ರಸ್ತೆ ಗುಂಡಿ ತಪ್ಪಿಸಲು ಹೋಗಿ ಲಾರಿ ಡಿಕ್ಕಿ: ನವವಿವಾಹಿತೆ ದಾರುಣ ಸಾವು, ಸಾರ್ವಜನಿಕರ ತೀವ್ರ ಆಕ್ರೋಶ
- ಸರಗೂರು: ಸಾಧಕ ಪ್ರಸನ್ನ ಕುಮಾರ್ ಅವರಿಗೆ ‘ಪಟ್ಟಣದ ಸ್ನೇಹಿತರು’ ಬಳಗದಿಂದ ಸನ್ಮಾನ
Author: admin
ಬೆಂಗಳೂರು: ಪಿಟ್ ಬುಲ್ ಶ್ವಾನ ದಾಳಿಗೆ ಎರಡು ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಐಟಿಸಿ ರಸ್ತೆಯ ಸುಬ್ಬಣ್ಣಪಾಳ್ಯದಲ್ಲಿ ನಡೆದಿದೆ. ಅನುಷ್ಕಾ ಧಮಾಲ್(2) ಎಂಬ ಬಾಲಕಿ ತನ್ನ ತಾಯಿಯ ಜೊತೆಗೆ ಇದ್ದ ವೇಳೆ ಆಕೆಯ ಮೇಲೆ ನೆರೆಹೊರೆಯವರ ನಾಯಿ ಏಕಾಏಕಿ ದಾಳಿ ಮಾಡಿದ್ದು, ಬಾಲಕಿಯ ಭುಜವನ್ನು ಕಚ್ಚಿದೆ. ಈ ವೇಳೆ ತಾಯಿ ಬಾಲಕಿಯನ್ನು ರಕ್ಷಿಸಲು ಹರಸಾಹಸಪಟ್ಟಿದ್ದಾರೆ ಎಂದು ವರದಿಯಾಗಿದೆ. ಸುಬ್ಬಣ್ಣಪಾಳ್ಯದ ವೆಂಕಟೇಶ್ವರ ಲೇಔಟ್ ನಿವಾಸಿಯಾಗಿರುವ ಬಾಲಕಿಯ ತಂದೆ ನಬರಾಜ್ ಧಮಾಲ್ ಅವರು ನಾಯಿಯ ಮಾಲೀಕರ ವಿರುದ್ಧ ಮರುದಿನ ದೂರು ದಾಖಲಿಸಿದ್ದಾರೆ. ನಾಯಿಯ ಮಾಲಿಕರು ಬಾಲಕಿಯ ಚಿಕಿತ್ಸಾ ವೆಚ್ಚ ನೋಡಿಕೊಳ್ಳದ ಹಿನ್ನೆಲೆ ಬಾಲಕಿಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆನ್ನಲಾಗಿದೆ. ಅದೃಷ್ಟವಶಾತ್ ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ. ಸದ್ಯ ನಾಯಿಯ ಮಾಲಿಕರನ್ನು ವಿಚಾರಣೆ ನಡೆಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅತ್ಯಂತ ಪ್ರಾಮಾಣಿಕ ರಾಜಕಾರಣಿ, 10 ವರ್ಷ ಪ್ರಧಾನಿಯಾಗಿದ್ದ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷಗಳಾಗಿತ್ತು. ಅವರ ಬದುಕನ್ನು ಪವಾಡದ ರೀತಿ ನೋಡಬಹುದಾಗಿದೆ. ಇವತ್ತಿನ ಪಾಕಿಸ್ತಾನದ ಕುಗ್ರಾಮವೊಂದರಲ್ಲಿ ಜನಿಸಿದ್ದ ಅವರು,ಅಲ್ಲಿಂದ ದೇಶ ಹಾಗೂ ಜಗತ್ತಿನಲ್ಲೇ ಖ್ಯಾತ, ಶ್ರೇಷ್ಠ ಅರ್ಥ ಶಾಸ್ತ್ರಜ್ಞರಾಗಿ ಬೆಳೆದರು ಎಂದರು. ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಐದು ವರ್ಷಗಳ ಕಾಲ ದೇಶದ ಆರ್ಥಿಕ ಸಲಹೆಗಾರರಾಗಿದ್ದರು. ಉದಾರೀಕರಣ ಹಾಗೂ ಖಾಸಗೀಕರಣದ ಮೂಲ ಭಾರತದ ಆರ್ಥಿಕತೆಯನ್ನು ಜಾಗತಿಕತೆಗೆ ಮುಕ್ತವಾಗಿಸಿದರು. ಆ ನಿರ್ಧಾರಗಳಿಂದ ದೇಶದ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಯಿತು ಎಂದು ವಿಶ್ಲೇಷಿಸಿದರು. ಅದರ ನಂತರ 2004ರಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿದಾಗ ಸೋನಿಯಾ ಗಾಂಧಿ ಪ್ರಧಾನಿಯಾಗಲು ನಿರಾಕರಿಸಿದರು. ಆ ವೇಳೆ ಮನಮೋಹನ್ ಸಿಂಗ್ ರನ್ನು ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಲಾಗುತ್ತದೆ. 10 ವರ್ಷಗಳ ಕಾಲ ದೇಶದ ಅಧಿಕಾರದ ಚುಕ್ಕಾಣಿ…
ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಮನಮೋಹನ್ ಸಿಂಗ್ ಅವರ ದೆಹಲಿಯ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ್ ಪಡೆದುಕೊಂಡರು. ವಿನಮ್ರ ಮೂಲದಿಂದ ಏರಿದ ಅವರು ಗೌರವಾನ್ವಿತ ಅರ್ಥಶಾಸ್ತ್ರಜ್ಞರಾದರು. ಅವರು ಹಣಕಾಸು ಸಚಿವರಾಗಿಯೂ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು, ವರ್ಷಗಳಲ್ಲಿ ನಮ್ಮ ಆರ್ಥಿಕ ನೀತಿಯ ಮೇಲೆ ಬಲವಾದ ಮುದ್ರೆ ಹಾಕಿದರು. ಸಂಸತ್ತಿನಲ್ಲಿ ಅವರ ಮಧ್ಯಸ್ಥಿಕೆಗಳು ಸಹ ಒಳನೋಟವುಳ್ಳದ್ದಾಗಿದೆ ಎಂದು ಪಿಎಂ ಮೋದಿ ಹೇಳಿದರು. ಡಾ.ಮನಮೋಹನ್ ಸಿಂಗ್ ಜಿ ಅವರು ಪ್ರಧಾನಿಯಾಗಿದ್ದಾಗ ಮತ್ತು ನಾನು ಗುಜರಾತ್ ಸಿಎಂ ಆಗಿದ್ದಾಗ ನಿಯಮಿತವಾಗಿ ಸಂವಹನ ನಡೆಸುತ್ತಿದ್ದೆವು. ನಾವು ಆಡಳಿತಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ವ್ಯಾಪಕವಾದ ಚರ್ಚೆಗಳನ್ನು ನಡೆಸುತ್ತೇವೆ. ಅವರ ಬುದ್ಧಿವಂತಿಕೆ ಮತ್ತು ನಮ್ರತೆ ಯಾವಾಗಲೂ ಗೋಚರಿಸುತ್ತದೆ. ಈ ದುಃಖದ ಸಮಯದಲ್ಲಿ, ನನ್ನ ಆಲೋಚನೆಗಳು ಡಾ. ಮನಮೋಹನ್ ಸಿಂಗ್ ಅವರ ಕುಟುಂಬ, ಅವರ ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳೊಂದಿಗೆ ಇರುತ್ತದೆ ಎಂದು ಪ್ರಧಾನಿ ನುಡಿದರು.…
ಹುಬ್ಬಳ್ಳಿ: ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ 9 ಮಂದಿ ಅಯ್ಯಪ್ಪ ಮಾಲಾಧಾರಿಗಳ ಪೈಕಿ ಇಬ್ಬರು ಈಗಾಗಲೇ ಮೃತಪಟ್ಟಿದ್ದಾರೆ. ಇದೀಗ ಮತ್ತೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. ಈ ಘಟನೆಯಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಬೆಂಕಿ ಅವಘಡದಲ್ಲಿ ಗಾಯಗೊಂಡಿರುವ ಇನ್ನೂ ಆರು ಅಯ್ಯಪ್ಪ ಭಕ್ತರು ಸದ್ಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಕಿಮ್ಸ್) ಚಿಕಿತ್ಸೆ ಪಡೆಯುತ್ತಿದ್ದಾರೆ. ಗೃಹ ಸಚಿವ ಜಿ. ಪರಮೇಶ್ವರ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಆರೋಗ್ಯ ವಿಚಾರಿಸಿದ್ದಾರೆ. ಗಾಯಾಳುಗಳಿಗೆ ತಜ್ಞ ವೈದ್ಯರ ತಂಡದಿಂದ ಕಾಳಜಿ ವಹಿಸಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಒದಗಿಸುವಂತೆ ಮನವಿ ಮಾಡಲಾಗುವುದು ಎಂದು ಎಕ್ಸ್ ಪೋಸ್ಟ್ನಲ್ಲಿ ಪರಮೇಶ್ವರ ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಬೀದರ್: ಆನ್ ಲೈನ್ ಗೇಮಿಂಗ್‌ನಲ್ಲಿ ಹಣ ಕಳೆದುಕೊಂಡ ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾಲ್ಕಿ ತಾಲ್ಲೂಕಿನ ಮೆಹಕರ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಹುಲಸೂರ ತಾಲ್ಲೂಕಿನ ಬೇಲೂರ ಗ್ರಾಮದ ವಿಜಯಕುಮಾರ್ (24) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಡಿ.ಫಾರ್ಮ್ ಪದವೀಧರನಾದ ಯುವಕ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಆನ್ ಲೈನ್ ಗೇಮ್ಸ್ ಚಟಕ್ಕೆ ಬಿದ್ದು ಸುಮಾರು 1.5ಲಕ್ಷ ಹಣ ಕಳೆದುಕೊಂಡಿದ್ದ. ಇದರಿಂದ ಮನನೊಂದ ಯುವಕ ಬುಧವಾರ ಸಂಜೆ ಸಾಯಗಾಂವ ಗ್ರಾಮ ಸಮೀಪದ ಜ್ಯೋತಿ ತಾಂಡಾ ಬಳಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸ್ಥಳೀಯರು ಕೂಡಲೇ ಯುವಕನನ್ನು ಭಾಲ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಅಲ್ಲಿಂದ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ತುಮಕೂರು: ಬೆಸ್ಕಾಂ ಶಿರಾ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಯ ಬ್ರಹ್ಮಸಂದ್ರ ಉಪಸ್ಥಾವರದಲ್ಲಿ ರಿಪೇರಿ ಕಾಮಗಾರಿ ಕೈಗೊಂಡಿರುವುದರಿಂದ ಡಿಸೆಂಬರ್ 30 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಚಿನ್ನೇನ ಹಳ್ಳಿ, ತಾಳಗುಂದ , ಸೀಬಿ, ತರೂರು, ಸೀಬಿ ಅಗ್ರಹಾರ ಹಾಗೂ ಯಲದಬಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ವಿದ್ಯತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾಯ೯ ನಿವಾ೯ಹಕ ಇಂಜಿನಿಯರ್ ಗೋವಿಂದರಾಯ ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx
ಇತ್ತೀಚೆಗೆ ರಾಜ್ಯದಲ್ಲಿ ನಡೆದಂತಹ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ನೌಕರರು ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಕೆಲವು ದಿನ ಹೋರಾಟ ಮಾಡಿದ್ದು ಕೇಳಿ ಬಂತು, ಸರ್ಕಾರ ಸಹಾ ಇವರ ಹೋರಾಟಕ್ಕೆ ಸ್ಪಂದನೆ ನೀಡಿತ್ತು. ಅದೇ ಜನ ಸಾಮಾನ್ಯರು ರೈತರು ಹೋರಾಟ ಮಾಡುವ ಸಂದರ್ಭದಲ್ಲಿ ಎಷ್ಟೊ ಅಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ. ಸರ್ಕಾರಿ ನೌಕರರಲ್ಲಿ ಸಂಘಟನೆಗಳು ಬಲಾಢ್ಯ ಆಗಿರುತ್ತದೆ. ಆದರೆ ಜನಸಾಮಾನ್ಯರು ರೈತರ ಸಂಘಟನೆಗಳ ಕೊರತೆ ಇದೆ, ಬಲಿಷ್ಟವಾಗಿ ಇಲ್ಲ ಈ ಕಾರಣದಿಂದ ಯಶಸ್ಸು ಕಾಣುವುದಿಲ್ಲ. ಚುನಾವಣೆಗಳ ಸಂದರ್ಭದಲ್ಲಿ ರೈತರು ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ರಾಜಕಾರಣಿಗಳು ಮೊಸಳೆ ಕಣ್ಣಿರು ಸುರಿಸುವುದು ಇದೆ. ಅದೇ ಸರ್ಕಾರಿ ನೌಕರರು ಸಂಘಟನೆಗಳ ಹೋರಾಟ ಮಾಡಿದರೆ ಬೆಂಬಲಕ್ಕೆ ರಾಜಕಾರಣಿಗಳು ಅಥವಾ ಜನಪ್ರತಿನಿಧಿಗಳು ನೇರವಾಗಿ ಬೆಂಬಲ ನೀಡುತ್ತಾರೆ. ಈ ಸಂಘಟನೆಯಲ್ಲಿ ಪ್ರಸ್ತಾಪ ಒಂದು ಕೇಳಿ ಬಂತು. ವರ್ಗಾವಣೆ ವಿಷಯದಲ್ಲಿ ಬಡ್ತಿ ಮೂಲಕ ಬೇರೆ ತಾಲ್ಲೂಕ್ ಗಳಿಗೆ ವರ್ಗಾವಣೆ ಮಾಡಬಾರದು ಎಂದೂ ಗ್ರಾಮ ಪಂಚಾಯತಿ ಅಧಿಕಾರಿಗಳು ಮನವಿಯಲ್ಲಿ ಇತ್ತು, ಆದರೆ ಇಲ್ಲಿ ವಿಷಯ…
ಜೆ.ರಂಗನಾಥ, ತುಮಕೂರು ಅಕ್ಕಿರಾಂಪುರ ಐತಿಹಾಸಿಕ ತಾಣ, ಜಯಮಂಗಲಿ, ಸುವರ್ಣಮುಖಿ ಹಾಗೂ ರೌಪ್ಯ ಮುಖಿ ನದಿಗಳ ತ್ರಿವೇಣಿ ಸಂಗಮದ ತಾಣ. ಸುವರ್ಣಮುಖಿ ನದಿಯ ಬಲ ದಂಡೆಯ ಜೈನ ಕ್ಷೇತ್ರ ಶ್ರೀ ಅನಂತನಾಥ ತೀರ್ಥಂಕರ ಸನ್ನಿಧಿ. ಶ್ರೀ ಆನಂತ ನಾಥ ತೀರ್ಥಂಕರರು ಜೈನ ಧರ್ಮದ 14ನೇ ತೀರ್ಥಂಕರರಾಗಿದ್ದು, ಯಕ್ಷ ಪಾತಾಳ ,ಯಕ್ಷಿ ಅನಂತಮತಿಯರಾಗಿದ್ದು, ಇವರ ಲಾಂಛನ ಕರಡಿಯಾಗಿದೆ. ಈ ಬಸದಿ ಗರ್ಭಗುಡಿ , ಸುಖನಾಸಿ, ನವರಂಗ, ಮುಖ ಮಂಟಪ, ಪ್ರದಕ್ಷಿಣ ಪಥ ಹೊಂದಿದ್ದು ಉತ್ತರ ಅಭಿಮುಖವಾಗಿದೆ ಬಸದಿಯೊಳಗೆ ಕಂಬ ಶಿಲ್ಪಗಳು, ಹೆಚ್ಚಾಗಿ ಕಮಲ ದಳಗಳಿಂದ ಕೂಡಿರುವುದು ವಿಶೇಷವಾಗಿದೆ. ಅಲ್ಲದೆ ನವರಂಗದ ಪ್ರವೇಶ ದ್ವಾರ ಹಾಗೂ ಸುಖನಾಸಿ ಪ್ರವೇಶ ದ್ವಾರದಲ್ಲಿ ಜಯ –ವಿಜಯರು , ಲಲಾಟದಲ್ಲಿ ತೀರ್ಥಂಕರರು ಹಾಗೂ ಉತ್ತಮ ಬಾಗಿಲು ವಾರ್ಡಗಳನ್ನು ಹೊಂದಿದ್ದು, ಗರ್ಭಗುಡಿ ಪ್ರವೇಶ ದ್ವಾರದಲ್ಲಿ ಬಳ್ಳಿ ವರಸೆ ಚಿತ್ರಗಳನ್ನು ಹೊಂದಿದ್ದು, ಲಲಾಟದಲ್ಲಿ ಗಜಲಕ್ಷ್ಮಿ ಇರುವುದು ವಿಶೇಷ. ಗರ್ಭಗುಡಿಯಲ್ಲಿ ಮೂರು ಅಡಿಗಳ ಎತ್ತರದ ಶ್ರೀ ಅನಂತನಾಥ ತೀರ್ಥಂಕರರ ಖಡ್ಗಾಸನ ಮೂರ್ತಿ ಇದೆ. ಈ…
ಅರಸೀಕೆರೆ: ಇಲ್ಲಿನ ಸಹಸ್ರಕೂಟ ಜಿನಾಲಯ ದೇಶದಲ್ಲಿ ವಿಶಿಷ್ಟವಾಗಿದ್ದು , ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕದವರು ಶ್ರೀ ಕ್ಷೇತ್ರ ಶ್ರವಣಬೆಳಗೊಳ ಸಂದರ್ಶಿಸಲು ಅರಸೀಕೆರೆ ಹೆಬ್ಬಾಗಿಲಾಗಿದ್ದು ,ಈ ಮೂಲಕ ಭಟ್ಟರಕರು, ಮುನಿಗಳು ,ಯಾತ್ರಾತ್ರಿಗಳು, ಮಾತಾಜಿ ಗಳು, ಕಾಲ್ನಡಿಗೆ ಯಲ್ಲಿ ಸಂಚರಿಸಬೇಕಿದೆ ,ಈ ಜಿನಾಲಯವನ್ನು ಅಭಿವೃದ್ಧಿಪಡಿಸಿ ತ್ಯಾಗಿ ಭವನ, ಆಹಾರ ತಯಾರಿಕ ಭವನಗಳೊಂದಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದು ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಸ್ವಸ್ತಿ ಶ್ರೀ ಅಭಿನವ ಚಾರುಕೀರ್ತಿ ಭಟ್ಟರಕ ಪಟ್ಟಾಚಾರ್ಯ ಶ್ರೀಗಳು ತಿಳಿಸಿದರು. ಅವರು ಶ್ರವಣಬೆಳಗೊಳ ದಿಂದ ಬೆಳಗಾವಿಗೆ ತೆರಳುವ ಮಾರ್ಗ ಮಧ್ಯೆ ನಗರದ ಸಹಸ್ರಕೂಟ ಜಿನಾ ಲಯಕ್ಕೆಭೇಟಿ ನೀಡಿ ,ಬಸದಿ ದರ್ಶನ ಪಡೆದು ಭಕ್ತರನ್ನು ಆಶೀರ್ವದಿಸಿ ಮಾತನಾಡಿದರು. ಈ ಬಸದಿಗೆ ಶ್ರವಣಬೆಳಗೊಳ ಮಠವು ಎಲ್ಲಾ ರೀತಿಯ ಜವಾಬ್ದಾರಿ ತೆಗೆದುಕೊಂಡು ಒಂದು ಶ್ರದ್ಧಾ ಕೇಂದ್ರವನ್ನಾಗಿ ಮಾಡಲಾಗುವುದು ಎಂದ ಭಟ್ಟರಕ್ಕ ಶ್ರೀಗಳು , ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಸಂತಸ ತಂದಿದೆ, ಜಿಲ್ಲೆಯಲ್ಲಿರುವ ವಿವಿಧ ಜಿನಮಂದಿರಗಳೊಂದಿಗೆ ಒಂದು ಸಾವಿರ ವರ್ಷಗಳಿಗೂ ಹೆಚ್ಚು ವರ್ಷಗಳ ಇತಿಹಾಸವಿರುವ…
ಶ್ರೀ ಕ್ಷೇತ್ರ ಧರ್ಮಸ್ಥಳ: ಸಿರಿ ಸಂಸ್ಥೆ ವತಿಯಿಂದ 2025ನೇ ವರ್ಷದ ನೂತನ ಕ್ಯಾಲೆಂಡರ್ ಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡು ಕಚೇರಿಯಲ್ಲಿ ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ರಾಜ್ಯಸಭಾ ಸದಸ್ಯರು ,ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಅಧ್ಯಕ್ಷರು ,ಪದ್ಮಶ್ರೀ ರಾಜ್ಯಸಭಾ ಸದಸ್ಯರಾದ ಡಿ. ವೀರೇಂದ್ರ ಹೆಗ್ಡೆ ಹಾಗೂ ಸಿರಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ. ಹೇಮಾವತಿ ವಿ .ಹೆಗಡೆ ದಂಪತಿಗಳು 2025 ನೇ ಸಾಲಿನ ನೂತನ ಕ್ಯಾಲೆಂಡರ್ ಗಳನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಕ್ಯಾಲೆಂಡರ್ ಮುದ್ರಣ ಕಾರ್ಯದಲ್ಲಿ ಸಹಕರಿಸಿದ ಮಂಜುಶ್ರೀ ಪ್ರಿಂಟರ್ಸ್ ಶೇಖರ್ ಹಾಗೂ ಸಿಬ್ಬಂದಿ ವರ್ಗದವರು ಸೇವೆಯನ್ನು ಸ್ಮರಿಸಿದರು . ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಜನಾರ್ಧನ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಡಿದರು. ಕಾರ್ಯಕ್ರಮದಲ್ಲಿ ಸಿರಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಮಾರುಕಟ್ಟೆ ವಿಭಾಗದ ಅಧಿಕಾರಿಗಳು ,ವಲಯ ಅಧಿಕಾರಿಗಳು ಉಪಸ್ಥಿತರಿದ್ದರು. ವರದಿ: ಜೆ.ರಂಗನಾಥ, ತುಮಕೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…