Author: admin

 ಜೆ.ರಂಗನಾಥ,  ತುಮಕೂರು ಸುತ್ತಲೂ ಆಚ್ಚ ಹಸಿರು, ತೆಂಗು –ಕಂಗು ಗಳ ನಡುವೆ ನವಿಲುಗಳ ನರ್ತನ ,ಈ ನಡುವೆ ಕಂಗೊಳಿಸುವ ಐತಿಹಾಸಿಕ ತಾಣವೇ ಕುಚ್ಚಂಗಿ. ಸುಮಾರು 900 ವರ್ಷಗಳ ಇತಿಹಾಸ ವಿರುವ ಈ ಜೈನ  ಬಸದಿ ಕ್ರಿಸ್ತಶಕ. 1180.  ರಲ್ಲಿ ಬಮ್ಮಸೆಟ್ಟಿ ಕುಟುಂಬಸ್ಥರು ನಿರ್ಮಿಸಿದ್ದಾರೆ. ಮೂಲ ಸಂಘದ ದೇಸಿ ಗಣಿಯ ಹನಸೋಗೆ ಶಾಖೆಯ ನಯಸೇನಾ ಸಿದ್ಧಾಂತ ಶ್ರೀಗಳವರ ಶಿಷ್ಯರಾದ ಆಧ್ಯಾತ್ಮ ಬಾಲಚಂದ್ರ ದೇವರ ಪ್ರಭಾವದಿಂದ ನಿರ್ಮಿಸಿದೆ. ಈ ಬಸದಿಗೆ, ಬಮ್ಮ ಶೆಟ್ಟಿ  ವಂಶಸ್ಥರು ಅಡಿಕೆ ವ್ಯಾಪಾರದಲ್ಲಿ ಹೆಚ್ಚು ಪ್ರವೃತ್ತರಾಗಿ ಹೆಸರು ಮಾಡಿದ್ದರಿಂದ ಈ ವಂಶಸ್ಥರಿಗೆ ಈಗಲೂ ” ಗೊಟಡಿಕೆ” ವಂಶಸ್ಥರು ಎಂಬ ಹೆಸರಿದೆ. ಬಮ್ಮಾ ಶೆಟ್ಟಿ ಪುತ್ರ ಕೇಸರಿ ಶೆಟ್ಟಿ ಶ್ರೀ ಪಾರ್ಶ್ವನಾಥ ಬಸದಿಯನ್ನು ನಿರ್ಮಿಸಿ ದತ್ತಿ ನೀಡಿದ್ದರು. ಈ ಗೋಟಡಿಕೆ ವಂಶಸ್ಥರು  ಬೆಳ್ಳಾವಿ ,ಧಾರವಾಡ ,ಹುಬ್ಬಳ್ಳಿ, ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ವಿವಿಧೇಡಿಗಳಲ್ಲಿ ನೆಲೆಸಿದ್ದಾರೆ. ಬೊಮ್ಮಾ ಶೆಟ್ಟಿಯು  ತನ್ನ ಪುತ್ರ ಕೇಸರಿ ಶೆಟ್ಟಿಯೊಡನೆ ಕುಚ್ಚಂಗಿಗೆ ಬರುವ ಮೊದಲು ಹುಬ್ಬಳ್ಳಿಗೆ 30 ಕಿ.ಮೀ.…

Read More

ಬೆಂಗಳೂರು: ನಾನು ವಯಸ್ಸಿನಲ್ಲಿ ಕಿರಿಯನಾದರೂ, ನನ್ನನ್ನು ಸ್ವಾಗತಿಸಲು ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಎದ್ದು ನಿಂತರು. ಅವರ ಸರಳ ನಡೆಯಿಂದ ನಾನು ಆಶ್ಚರ್ಯ ಚಕಿತನಾಗಿದ್ದೆ ಎಂದು 1991 ರ ಬ್ಯಾಚ್‌ನ ಹಿರಿಯ ಐಎಎಸ್ ಅಧಿಕಾರಿ, ಕರ್ನಾಟಕ ಕೇಡರ್ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್)ಯಾಗಿರುವ ಎಲ್‌ಕೆ ಅತೀಕ್ ಹೇಳಿದ್ದಾರೆ. ಮಾಜಿ ಪಿಎಂ ಮನಮೋಹನ್ ಸಿಂಗ್ ಅವರು ನಿಧನರಾದ ಹಿನ್ನೆಲೆ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡ ಎಲ್.ಕೆ.ಅತೀಕ್,  ಪ್ರೋಟೋಕಾಲ್‌ ನ ಭಾಗವಾಗಿ, ಡಾ.ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಲು ನನ್ನನ್ನು ಅಂದಿನ ಪ್ರಧಾನಿಯವರ ಅಧಿಕೃತ ನಿವಾಸ 7, ರೇಸ್ ಕೋರ್ಸ್ ರಸ್ತೆಗೆ ಕರೆದೊಯ್ಯಲಾಯಿತು. ಅವರು ತಮ್ಮ ಬರವಣಿಗೆಯ ಮೇಜಿನ ಬಳಿ ಕುಳಿತಿದ್ದರು, ನಾನು ಹೋದ ಕೂಡಲೇ ಅವರು ಎದ್ದು ನನ್ನನ್ನು ಸ್ವಾಗತಿಸಿದರು ಮತ್ತು ನನ್ನ ಹಿನ್ನೆಲೆಯ ಬಗ್ಗೆ ಕೇಳಿದರು ಹಾಗೂ ನನ್ನ ಕುಟುಂಬದ ಬಗ್ಗೆ ವಿಚಾರಿಸಿದರು. ಅವರ ಅಸಾಧಾರಣ ಸರಳ ನಡವಳಿಕೆಯ ಸಂಸ್ಕೃತಿಯಿಂದ ನಾನು ಅಶ್ಚರ್ಯಚಕಿತನಾದೆ ಎಂದು ಅವರು ಹೇಳಿದ್ದಾರೆ. ಅಧಿಕಾರಶಾಹಿಗಳಾದ…

Read More

ಬೆಂಗಳೂರು:  ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆ  ಸರ್ಕಾರಿ ರಜೆ ಘೋಷಿಸಲಾಗಿದೆ. ಹೀಗಾಗಿ ಶುಕ್ರವಾರ ನಡೆಯಬೇಕಿದ್ದ ಹಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಎಂಬಿಎ ದ್ವಿತೀಯ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡಿದೆ. ಮುಂದಿನ ಪರೀಕ್ಷಾ ದಿನಾಂಕ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವರು ತಿಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪದವಿ, ಸ್ನಾತಕೋತ್ತರ ಎಲ್ಲ ಪರೀಕ್ಷೆಗಳು ಮುಂದೂಡಲಾಗಿದೆ. ಮುಂದಿನ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮೈಸೂರು ವಿಶ್ವ ವಿದ್ಯಾಲಯ ಕುಲಸಚಿವ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ನವದೆಹಲಿ: ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಗುರುವಾರ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಶನಿವಾರ ದೆಹಲಿ ರಾಜ್‌ಘಾಟ್ ಬಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮನಮೋಹನ್ ಸಿಂಗ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ. ಗುರುವಾರ ರಾತ್ರಿಯೇ ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ತರಲಾಗಿದೆ.  ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗಿದೆ. ಕೇಂದ್ರ ಸರ್ಕಾರ ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ ಮತ್ತು 7 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ರಜೆ ಘೋಷಣೆ : ಬೆಂಗಳೂರು ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನದ ಗೌರವಾರ್ಥ  ಇಂದು ಶುಕ್ರವಾರ  ಸರ್ಕಾರಿ ರಜೆ ಘೋಷಿಸಲಾಗಿದ್ದು, ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಈ ಕುರಿತು  ಸರ್ಕಾರಿ ಆದೇಶ ಹೊರಡಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…

Read More

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.  ತಮ್ಮ 92ನೇ ವಯಸ್ಸಿನಲ್ಲಿ ಮನಮೋಹನ್ ಸಿಂಗ್ ಇಹಲೋಕ ತ್ಯಜಿಸಿದ್ದಾರೆ. ಇಂದು ರಾತ್ರಿ 8:06 ಗಂಟೆ ಸುಮಾರಿಗೆ ಏಮ್ಸ್‌ ಆಸ್ಪತ್ರೆಗೆ ದಾಖಲಾದ ಮನಮೋಹನ್ ಸಿಂಗ್ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗಿಲ್ಲ. ರಾತ್ರಿ 9:51ಕ್ಕೆ ಅವರು ನಿಧನರಾದರು ಎಂದು ಏಮ್ಸ್ ತಿಳಿಸಿದೆ. ಡಾ. ಸಿಂಗ್ ಅವರು ಪತ್ನಿ ಗುರುಶರಣ್ ಕೌರ್ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. 1991 ರಲ್ಲಿ ರಾಜ್ಯಸಭೆಗೆ ಪ್ರವೇಶ ಮಾಡುವ ತಮ್ಮ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದ ಸಿಂಗ್, 2024ರ ಏಪ್ರಿಲ್​ನಲ್ಲಿ ಅವರ ರಾಜ್ಯಸಭೆ ಅಧಿಕಾರವಧಿ ಅಂತ್ಯವಾಗಿತ್ತು. ಈ ಮೂಲಕ ಅವರು ಸಂಸತ್ತಿನ ಮೇಲ್ಮನೆಯಲ್ಲಿ 33 ವರ್ಷಗಳ ಕಾಲ ಇದ್ದರು. ಸರ್ಕಾರಿ ರಜೆ ಘೋಷಣೆ: ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನದ ಗೌರವಾರ್ಥ ನಾಳೆ (ಶುಕ್ರವಾರ) ಸರ್ಕಾರಿ ರಜೆ ಘೋಷಿಸಲಾಗಿದ್ದು, ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.ಈ ಕುರಿತು ಮುಖ್ಯಮಂತ್ರಿ…

Read More

ಪಾವಗಡ: ಹರಿಹರಪುರ ಗ್ರಾಮದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಗುಡಿಸಲು ಸುಟ್ಟು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮತುಮಕೂರು ವರದಿಯ ಬೆನ್ನಲ್ಲೇ ನೈಜ್ಯ ಹೋರಾಟಗಾರ ವೇದಿಕೆ, ಬೆಂಗಳೂರು ಮತ್ತು ಕಾಳಜಿ ಪೌಂಡೇಶನ್ (ರಿ), ತುಮಕೂರು ಸಂಘಟನೆಗಳು ಅಧಿಕಾರಿಗಳ ಗಮನ ಸೆಳೆದು  ಸಂತ್ರಸ್ತರಿಗೆ ಅಧಿಕಾರಿಗಳಿಂದ ತಕ್ಷಣದಲ್ಲಿ ಸ್ಪಂದನೆ ಸಿಗುವ ಕಾರ್ಯ ಮಾಡಿದೆ. ಹರಿಹರಪುರ ಗ್ರಾಮದಲ್ಲಿ ಗುಡಿಸಲು ಬೆಂಕಿಗಾಹುತಿಯಾಗಿ ಬಡ ಕುಟುಂಬಗಳು ಬೀದಿಪಾಲಾಗಿರುವ ಬಗ್ಗೆ ನಮ್ಮತುಮಕೂರು ಸವಿವರವಾದ ವರದಿಯನ್ನ ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ನೈಜ್ಯ ಹೋರಾಟಗಾರ ವೇದಿಕೆ, ಬೆಂಗಳೂರು ಮತ್ತು ಕಾಳಜಿ ಪೌಂಡೇಶನ್ (ರಿ), ತುಮಕೂರು ಸಂಘಟನೆಗಳು ತಹಶೀಲ್ದಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದು, ಸಂತ್ರಸ್ತರ ಸಮಸ್ಯೆಯ ತೀವ್ರತೆಯನ್ನ ಮನವರಿಕೆ ಮಾಡಿದ್ದಾರೆ. ಈ ವೇಳೆ ತಕ್ಷಣದಲ್ಲೇ ಸ್ಪಂದಿಸಿದ ತಹಶೀಲ್ದಾರ್ ಅವರು, ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ನೈಜ್ಯ ಹೋರಾಟಗಾರ ವೇದಿಕೆ ಮತ್ತು ಕಾಳಜಿ ಪೌಂಡೇಶನ್‌ ತಂಡದ ಸಮಯ ಪ್ರಜ್ಞೆಯಿಂದ ಸಂತ್ರಸ್ತರಿಗೆ ನೆರವಿನ ಭರವಸೆ ದೊರೆಯಿತು. ಜನರು ಹಾಗೂ…

Read More

ಕನ್ನಡ ಫಿಲಂ ಚೇಂಬರ್ ಟೈಗರ್ ನಾಗ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಚಲನ ಚಿತ್ರ ಕ್ಷೇತ್ರದಲ್ಲಿ ತೊಡಗಿಕೊಂಡು  ಸಾಮಾಜಿಕ ಸೇವೆ ಹಾಗೂ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವುದನ್ನು ಪರಿಗಣಿಸಿ   ಬುಧವಾರ  ಬೆಂಗಳೂರಿನ   ರವಿಂದ್ರ ಕಲಾಕ್ಷೇತ್ರ ದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಟೈಗರ್ ನಾಗ್ ಇವರು ಸಾಮಾಜಿಕ ಹೋರಾಟಗಾರ ಪ್ರಗತಿಪರ ಚಿಂತಕರ ನಿರ್ದೇಶಕ ನಿರ್ಮಾಪಕ ಅನೇಕ ಪ್ರಗತಿ ಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಾ, ಗ್ರಾಮ ಪಂಚಾಯಿತಿ ಪಿಡಿಓ ಇಂದ ಐಎಎಸ್ ಅಧಿಕಾರಿಗಳ ವರೆಗೆ ನೂರಾರು ಹೋರಾಟ ಮಾಡಿ ಭ್ರಷ್ಟ ಅಧಿಕಾರಿಗಳಿಗೆ ಜೈಲಿಗೆ ಕಳಿಸಲು ಕಾರಣರಾಗಿ ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನರಾಗಿದ್ದಾರೆ. ಸಾಮಾಜಿಕ ಅನಿಷ್ಟ ಅವ್ಯವಸ್ಥೆಗಳ ವಿರುದ್ಧ ಧ್ವನಿಯೆತ್ತಿ ಅವುಗಳನ್ನು ಪ್ರಶ್ನಿಸುವ ಎದೆಗಾರಿಕೆ ತೋರುತ್ತಾ ಪ್ರಾಮಾಣಿಕ ಹೋರಾಟ ಮಾಡುತ್ತಾ ಬಂದಿದ್ದರು ಸಂವಿಧಾನ ಜಾಗೃತಿ ಮೂಡಿಸುವ ಆದಿವಾಸಿಗಳ ಕಥೆ ಇರುವ ಚಿತ್ರಕ್ಕೆ ಇವರೇ ನಿರ್ದೇಶನ ನಿರ್ಮಾಣ ಮಾಡಿದ್ದ ಅಡವಿ ಚಿತ್ರಕ್ಕೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದು ಡಾ.ಬಿ.ಆರ್. ಅಂಬೇಡ್ಕರ್ ಬುದ್ಧ…

Read More

ಬೆಳಗಾವಿ:  “ಗಾಂಧಿ ಭಾರತ” ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಳಗಾವಿಯ ರಾಮತೀರ್ಥ ನಗರದಲ್ಲಿ ಗುರುವಾರ (ಡಿ.26) ಗಂಗಾಧರ ದೇಶಪಾಂಡೆ ಅವರ ಸ್ಮಾರಕ ಭವನ‌ ಮತ್ತು ಛಾಯಾಚಿತ್ರ ಗ್ಯಾಲರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು. ಸ್ಮಾರಕ ಭವನ ಅಂದಾಜು 15 ಗುಂಟೆ ಜಾಗೆಯಲ್ಲಿ 1.58 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ಸ್ಥಳದಲ್ಲಿ ಸ್ಮಾರಕ ಭವನ, ದೇಶಪಾಂಡೆ ಅವರ ಪುತ್ಥಳಿ, ಫೋಟೋ ಗ್ಯಾಲರಿ,  ಆವರಣದ ಕಾಂಪೌಂಡ್, ತಂತಿಬೇಲಿ, ಪೇವರ್ಸ್ ಹಾಗೂ ಉದ್ಯಾನವನ ನಿರ್ಮಿಸಲಾಗಿದೆ. ಈ ಸಂದರ್ಭದಲ್ಲಿ ಕಾನೂನು, ನ್ಯಾಯ, ಮಾನವ ಹಕ್ಕುಗಳ, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಹಾಗೂ ಶತಮಾನೋತ್ಸವ ಸಮಿತಿಯ ಅಧ್ಯಕ್ಷರು ಎಚ್.ಕೆ ಪಾಟೀಲ, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರು ವೀರಪ್ಪ ಮೊಯ್ಲಿ, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಸರ್ಕಾರದ ಮುಖ್ಯ ಸಚೇತಕ ಅಶೋಕ…

Read More

ಸೋಷಿಯಲ್ ಮೀಡಿಯಾದಲ್ಲಿ ರೇಶ್ಮಾ ಆಂಟಿ ಅಂತಲೇ ಫೇಮಸ್ ಆಗಿರುವ ರೇಶ್ಮಾ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದೆ. ವಿಡಿಯೋ ಆರಂಭಕ್ಕೂ ಮೊದಲ ಹಾಯ್ ಫ್ರೆಂಡ್ಸ್ ಅಂತ ಹೇಳುವ ರೇಶ್ಮಾ ಅವರ ಡೈಲಾಗ್ ಕೂಡ ಫೇಮಸ್ ಆಗಿದೆ. ಗಿಚ್ಚಿ ಗಿಲಿಗಿಲಿ ರೀ–ಲೋಡೆಡ್ಡ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಂತರ ಭಾರೀ ಅಭಿಮಾನಿಗಳನ್ನ ರೀಚ್ ಆಗುತ್ತಿರುವ ರೇಶ್ಮಾ ಅವರು ವಿಧಾನ ಸೌಧದ ಬಳಿ ಕಿರುಚಾಡಿ ವಿಡಿಯೋ ಮಾಡಿದ್ದಾರೆ. ರಾತ್ರಿ ವೇಳೆ ವಿಧಾನಸೌಧ ಮುಂದೆ ಹೋದ ರೇಶ್ಮಾ ಅವರು ಜೋರಾಗಿ ಕಿರುಚಾಡಿ ವಿಡಿಯೋ ಮಾಡಿದ್ದಾರೆ. ಹಾಯ್ ಫ್ರೆಂಡ್ಸ್ ನಾವು ಎಲ್ಲಿ ಬಂದಿದ್ದೀವಿ ಗೊತ್ತಾ? ಅಂತ ಪ್ರಶ್ನಿಸಿ ವಿಧಾನ ಸೌಧ ತೋರಿಸಿದ್ದಾರೆ. ಬಳಿಕ ‘ಅಯ್ಯೋ ಗೇಟ್ ತೆಗೆಯಪ್ಪೋ…ಯಾರು ಇಲ್ವಾ ಯಾರೂ ಇಲ್ಲ. ನಾನು ಒಳಗಡೆ ಹೋಗಬೇಕು ಎಲ್ಲರನ್ನು ನೋಡಬೇಕು. ಚಿಕ್ಕ ಹುಡುಗಿಯಿಂದ ನನಗೆ ಈ ಆಸೆ ಇದೆ. 1ನೇ ಕ್ಲಾಸ್ನಿಂದ 10ನೇ ಕ್ಲಾಸ್ವರೆಗೂ ಬುಕ್ನಲ್ಲಿ ಹಾಕಿರುತ್ತಾರೆ ಅದೇ ವಿಧಾನಸೌಧ ಇದು. ಸಿದ್ದರಾಮಯ್ಯ ಸರ್ ನನ್ನ ಒಳಗೆ ಕರ್ಕೊಳ್ಳಿ…ಅವ್ರು ಒಳಗಡೆ ಕೂತಿರಬಹುದು.…

Read More

ಮೈಸೂರು: ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಂದಿನ ಸಂಪುಟ ಸಭೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ. ಜನವರಿ ಎರಡನೇ ವಾರದಲ್ಲಿ ಮುಂದಿನ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆಂದು ವರದಿಗಳಿಂದ ತಿಳಿದು ಬಂದಿದೆ. ಚಾಮರಾಜನಗರ ಜಿಲ್ಲೆಯ ಆದಿವಾಸಿಗಳು ಸೇರಿದಂತೆ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು 2002 ರಲ್ಲಿ ಬಿಳಿಗಿರಿರಂಗ ಬೆಟ್ಟದಲ್ಲಿ ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು, ಸಂಪುಟ ಸಭೆ ನಡೆಸಿದ್ದರು. ಸರ್ಕಾರದ ನಿರ್ಧಾರ ಹಿನ್ನೆಲೆಯಲ್ಲಿ ಶಿಲ್ಪಾ ನಾಗ್ ಅವರು ಹನೂರಿನಲ್ಲಿ ಸಭೆ ನಡೆಸಿ, ಸ್ಥಳೀಯ ಅಧಿಕಾರಿಗಳ ಪ್ರತಿಕ್ರಿಯೆ, ಪ್ರದೇಶದ ಸಮಸ್ಯೆಗಳನ್ನು ಪಟ್ಟಿ ಮಾಡಲಿದ್ದಾರೆ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More