ಬೆಂಗಳೂರು: ಪಿಟ್ ಬುಲ್ ಶ್ವಾನ ದಾಳಿಗೆ ಎರಡು ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಐಟಿಸಿ ರಸ್ತೆಯ ಸುಬ್ಬಣ್ಣಪಾಳ್ಯದಲ್ಲಿ ನಡೆದಿದೆ.
ಅನುಷ್ಕಾ ಧಮಾಲ್(2) ಎಂಬ ಬಾಲಕಿ ತನ್ನ ತಾಯಿಯ ಜೊತೆಗೆ ಇದ್ದ ವೇಳೆ ಆಕೆಯ ಮೇಲೆ ನೆರೆಹೊರೆಯವರ ನಾಯಿ ಏಕಾಏಕಿ ದಾಳಿ ಮಾಡಿದ್ದು, ಬಾಲಕಿಯ ಭುಜವನ್ನು ಕಚ್ಚಿದೆ. ಈ ವೇಳೆ ತಾಯಿ ಬಾಲಕಿಯನ್ನು ರಕ್ಷಿಸಲು ಹರಸಾಹಸಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸುಬ್ಬಣ್ಣಪಾಳ್ಯದ ವೆಂಕಟೇಶ್ವರ ಲೇಔಟ್ ನಿವಾಸಿಯಾಗಿರುವ ಬಾಲಕಿಯ ತಂದೆ ನಬರಾಜ್ ಧಮಾಲ್ ಅವರು ನಾಯಿಯ ಮಾಲೀಕರ ವಿರುದ್ಧ ಮರುದಿನ ದೂರು ದಾಖಲಿಸಿದ್ದಾರೆ.
ನಾಯಿಯ ಮಾಲಿಕರು ಬಾಲಕಿಯ ಚಿಕಿತ್ಸಾ ವೆಚ್ಚ ನೋಡಿಕೊಳ್ಳದ ಹಿನ್ನೆಲೆ ಬಾಲಕಿಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆನ್ನಲಾಗಿದೆ. ಅದೃಷ್ಟವಶಾತ್ ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ.
ಸದ್ಯ ನಾಯಿಯ ಮಾಲಿಕರನ್ನು ವಿಚಾರಣೆ ನಡೆಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx