Subscribe to Updates
Get the latest creative news from FooBar about art, design and business.
- ಸಚಿವ ಸಂಪುಟ ವಿಸ್ತರಣೆ: ಎಚ್.ಕೆ. ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ–ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ
- ತುಮಕೂರು ಕಾಂಗ್ರೆಸ್ ನಲ್ಲಿ ಆಕ್ರೋಶ ಸ್ಫೋಟ: ವಿಪಕ್ಷ ಸಾಲಿನಲ್ಲಿ ಆಸನ ಕೋರಿದ ಟಿ.ಬಿ. ಜಯಚಂದ್ರ, ಹೆಚ್ ಡಿಕೆಯನ್ನು ಹೊಗಳಿದ ಶಾಸಕ ಶ್ರೀನಿವಾಸ್
- ಸಚಿವ ಸ್ಥಾನ ಸಿಗಲಿಲ್ಲವೆಂದು ಪಕ್ಷದ ವಿರುದ್ಧ ಮಾತಾಡುವುದು ಸರಿಯಲ್ಲ: ಪ್ರಿಯಾಂಕ್ ಖರ್ಗೆ
- ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಚುರುಕು: 105 ಅಡಿಗೆ ತಲುಪಿದ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ
- ಬಿಜೆಪಿಯವರು ಬರ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ನೀಡಲಿ: ಸಚಿವ ಸಂತೋಷ್ ಲಾಡ್
- ನನ್ನ ಮತದಾನ ನನ್ನ ಹಕ್ಕು: ಎಸ್ಐಆರ್ ಜಾಗೃತಿ
- 10 ಸಾವಿರ ಕೋಟಿ ಅನುದಾನ ಬಿಡುಗಡೆಗೆ ಆಗ್ರಹ: ಕರ್ನಾಟಕದ 28 ಜಿಲ್ಲೆಗಳು ಮಳೆಯಿಲ್ಲದೇ ಬರಪೀಡಿತ | ತುಮಕೂರಿನಲ್ಲಿ ಬಿಜೆಪಿ ಬರ ಅಧ್ಯಯನ
- ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆ ಮೂಡಿಸಿದ “ಓ ಮೈ ಡಾಗ್” ಆಗಸ್ಟ್ 7ರಂದು ಅದ್ದೂರಿ ರಿಲೀಸ್
Author: admin
ತಿರುವನಂತಪುರ: ಕಳೆದ ಏಪ್ರಿಲ್ ನಲ್ಲಿ ನಡೆದ ತ್ರಿಶೂರ್ ಪೂರಂ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸಚಿವ ಸುರೇಶ್ ಗೋಪಿ ಮತ್ತು ಇತರ ಇಬ್ಬರ ವಿರುದ್ಧ ಆಂಬ್ಯುಲೆನ್ಸ್ ದುರುಪಯೋಗಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಮತ್ತು ಆಂಬ್ಯುಲೆನ್ಸ್ ಚಾಲಕನ ವಿರುದ್ಧ ತ್ರಿಶೂರ್ ಪೂರ್ವ ಪೊಲೀಸರು ಭಾನುವಾರ ಎಫ್ ಐಆರ್ ದಾಖಲಿಸಿದ್ದಾರೆ. ಕೇಂದ್ರ ಸಚಿವರ ವಿರುದ್ಧ ಐಪಿಸಿಯ ಸೆಕ್ಷನ್ 279 (ಸಾರ್ವಜನಿಕ ಮಾರ್ಗದಲ್ಲಿ ದುಡುಕಿನ ಚಾಲನೆ ಅಥವಾ ಸವಾರಿ) ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 179, 184, 188 ಮತ್ತು 192 ನ್ನು ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. . ಎಫ್‌ಐಆರ್ ಪ್ರಕಾರ, ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಅಂದಿನ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ಸುರೇಶ್ ಗೋಪಿ ಮತ್ತು ಇತರ…
ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅದಿದೇವತೆ ಹಾಸನಾಂಬೆ ದೇವಾಲಯದ ಬಾಗಿಲು ಇಂದು ಶಾಸ್ತ್ರೋಕ್ತವಾಗಿ ಮುಚ್ಚಲಾಗಿದೆ. ಈ ಮೂಲಕ ಈ ವರ್ಷ ದೇವಿಯ ದರ್ಶನೋತ್ಸವಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ಮುಂದಿನ ವರ್ಷ ಮತ್ತೆ ದೇವಾಲಯದ ಬಾಗಿಲು ತೆರೆಯಲಿದೆ. ಹಾಸನಂಬೆ ದೇವಿಗೆ ವಿಶೇಷ ಪೂಜೆ, ಸ್ವಚ್ಛತೆ, ಸಿಂಗಾರ ಪೂಜಾ ಕೈಂಕೈರ್ಯದ ಬಳಿಕ ಶಾಸ್ತ್ರೋಕ್ತವಾಗಿ ದೇವಾಲಯದ ಬಾಗಿಲು ಮುಚ್ಚಲಾಯಿತು. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರ ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಬಾಗಿಲು ಮುಚ್ಚಲಾಯಿತು. ಮುಂದಿನ ವರ್ಷ ಅಕ್ಟೋಬರ್ 9ರಂದು ಮತ್ತೆದೇವಾಲಯದ ಬಾಗಿಲು ತೆರೆಯಲಿದೆ. ಈ ವರ್ಷ ಅ.25ರಿಂದ ನವೆಂಬರ್ 3ರವರೆಗೆ ಹಾಸನಾಂಬ ದೇವಾಲಯದ ಬಾಗಿಲು ತೆರೆದಿತ್ತು. ಇಂದು ಬೆಳಿಗ್ಗೆ 6ಗಂಟೆಯವರೆಗೂ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ 18 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬ ದೇವಿ ದರ್ಶನ ಪಡೆದು ಪುನೀತರಾಗಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಕಿವಿ ಮಾತನ್ನೂ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಅವರು, ‘ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿರುವುದು ತುಂಬಾ ದು:ಖದ ವಿಷಯ. ಉತ್ತಮ ನಿರ್ದೇಶಕನನ್ನು ಕಳೆದುಕೊಂಡಿದ್ದು ಮನಸ್ಸಿಗೆ ನೋವು ಉಂಟುಮಾಡಿದೆ ಎಂದರು. ಈ ಘಟನೆಯನ್ನು ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಅವರ ಕುಟುಂಬಸ್ಥರಿಗೆ ಗುರುಪ್ರಸಾದ್ ಅವರನ್ನು ಕಳೆದುಕೊಂಡಿರುವ ದು:ಖ ಭರಿಸುವಂತಹ ಶಕ್ತಿ ಆ ಭಗವಂತ ಕರುಣಿಸಲಿ. ಜೊತೆಗೆ ಕನ್ನಡ ಚಿತ್ರರಂಗ ಬೇರೆ ಭಾಷೆಗಳ ಹೊಡೆತಕ್ಕೆ ಸಿಲುಕಿದೆ. ಯಾರೇ ಆಗಲಿ ನಿರ್ದೇಶಕ ಹಾಗೂ ನಿರ್ಮಾಪಕರಾಗಲಿ ಎಂಥಹ ಸಂದರ್ಭವೇ ಬರಲಿ ಧೈರ್ಯದಿಂದ ಎದುರಿಸಬೇಕು’ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಂಗಳೂರು: ಬಿಜೆಪಿಯವರು ಗೋಸುಂಬೆಗಿಂತ ಹೆಚ್ಚು ವೇಗವಾಗಿ ಬಣ್ಣ ಬದಲಿಸುವವರು! ರೈತರಿಗೆ ವಕ್ಫ್ ಬೋರ್ಡ್ ಮಂಡಳಿ ನೋಟಿಸ್ ನೀಡಿದ್ದನ್ನು ರಾಜಕೀಯಕ್ಕೆ ಬಳಸುತ್ತಿರುವ ಬಿಜೆಪಿಗರು ತಮ್ಮ ಸರ್ಕಾರದ ಆಡಳಿತಾವಧಿಯಲ್ಲೂ ರೈತರಿಗೆ ನೋಟಿಸ್ ನೀಡಿದ್ದರು. ವಕ್ಪ್ ಮಂಡಳಿಗೆ ಬಿಜೆಪಿ ಬೆಂಬಲವಾಗಿ ನಿಂತಿತ್ತು, ರೈತರ ಭೂಮಿ ಕಸಿಯಲು ಕುಮಕ್ಕು ನೀಡಿತ್ತು ಎನ್ನುವುದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಾತುಗಳೇ ಸಾಕ್ಷಿ ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು “ವಕ್ಫ್ ಭೂಮಿ ಅಲ್ಲಾನಿಗೆ ಸೇರಿದ್ದು, ಅದನ್ನು ಮರಳಿ ಪಡೆಯುವುದರಲ್ಲಿ ಯಾವುದೇ ರಾಜಿ ಬೇಡ, ₹2000 ಕೋಟಿ ಮೊತ್ತದ ವಕ್ಫ್ ಆಸ್ತಿ ಖಾಸಗಿಯವರ ವಶದಲ್ಲಿದೆ, ಅದನ್ನು ಮರಳಿ ಪಡೆಯುವವರೆಗೂ ನೀವು ಸುಮ್ಮನೆ ಕೂರಬಾರದು ನಾವೂ ಸುಮ್ಮನೆ ಕೂರಬಾರದು, ನಿಮ್ಮ ಜೊತೆಗೆ ನಾವಿದ್ದೇವೆ” ಇದು ಅಂದಿನ ಸಿಎಂ ಬೊಮ್ಮಯಿಯವರ ಮಾತು ಎಂದಿದ್ದಾರೆ. ಎರಡು ನಾಲಿಗೆಯ ಬಿಜೆಪಿಯವರಿಗೆ ಒಂದಷ್ಟು ಪ್ರಶ್ನೆಗಳು… ಎಂದು ಪ್ರಿಯಾಂಕ್ ಹಲವು ಪ್ರಶ್ನೆಗಳನ್ನು ಹಾಕಿದ್ದಾರೆ. ವಕ್ಫ್ ಮಂಡಳಿ…
ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ದೇಶಕ ಗುರುಪ್ರಸಾದ್ ಸಾವಿಗೆ ಶರಣಾಗಿರುವುದು ಇಂದು ಬೆಳಕಿಗೆ ಬಂದಿತ್ತು. ಇದೀಗ ಅವರ ಸಾವಿಗೆ ಕಾರಣ ಬಯಲಾಗಿದೆ. ಗುರುಪ್ರಸಾದ್ ಸಾಲಗಾರರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದಾಗಿ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಇತ್ತೀಚೆಗೆ ಎರಡನೇ ಮದುವೆ ಆಗಿದ್ದಂತ ನಟ, ನಿರ್ದೇಶಕರ ಗುರುಪ್ರಸಾದ್ ಅವರು ಸಾಲ ಮಾಡಿದ್ದರು. ಸಾಲ ತೀರಿಸಲು ಆಗದೇ ತೊಳಲಾಡುತ್ತಿದ್ದರು. ಇದೇ ಕಾರಣದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಪದೇ ಪದೇ ಸಾಲಗಾರರು ಮನೆಗೆ ಬರ್ತಾರೆ ಅಂತ ಮನೆ ಕೂಡ ಮೂರು ಬಾರಿ ಬೆಂಗಳೂರಲ್ಲಿ ಬದಲಾವಣೆ ಮಾಡಿದ್ದರಂತೆ. ಜಯನಗರ, ಕನಕಪುರ, ಅಶೋಕ ನಗರದಲ್ಲಿ ಮನೆ ಮಾಡಿದ್ದರು. ಕೊನೆ ಕೊನೆಗೆ ಒಂಟಿಯಾಗಿ ಕೂಡ ವಾಸವಾಗಿದ್ದರು ಎನ್ನಲಾಗಿದೆ. ಇದಲ್ಲದೇ ಗುರುಪ್ರಸಾದ್ ಅವರು ಸಾಲದ ಹೊರೆಯ ಬಗ್ಗೆ ನಟ ಜಗ್ಗೇಶ್ ಅವರ ಜೊತೆಗೆ ಹಂಚಿಕೊಂಡಿದ್ದರು. ಈ ವೇಳೆ ಅವರನ್ನು ಸಮಾಧಾನಿಸಿ ಕಳುಹಿಸಿದ್ದಾಗಿ ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…
ಮೇರಠ್: ಹಣ ಸುಳಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು ಇಬ್ಬರು ಪೊಲೀಸರನ್ನು ಒತ್ತೆಯಾಳುಗಳಾಗಿರಿಸಿಕೊಂಡು ಥಳಿಸಿದ ಘಟನೆ ಪರೀಕ್ಷಿತ್ಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪರೀಕ್ಷಿತ್ ಗಢ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸತ್ಯೇಂದ್ರ ಹಾಗೂ ಪ್ರಶಿಕ್ಷಣಾರ್ಥಿ ಸಬ್ ಇನ್ ಸ್ಪೆಕ್ಟರ್ ಶಿವಂ ಅವರನ್ನು ಗೋವಿಂದಪುರಿ ಗ್ರಾಮಸ್ಥರು ಶನಿವಾರ ರಾತ್ರಿ ಒತ್ತೆಯಾಳುಗಳಾಗಿರಿಸಿಕೊಂಡು ಥಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ವಿವಿಧ ಪೊಲೀಸ್ ಠಾಣೆಯ ಆರಕ್ಷಕ ಪಡೆ ಸ್ಥಳಕ್ಕೆ ದೌಡಾಯಿಸಿತು ಎಂದು ಅವರು ಮಾಹಿತಿ ನೀಡಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ಗ್ರಾಮಸ್ಥರು ವಾಗ್ವಾದ ನಡೆಸಿದ್ದಾರೆ. ಸಬ್ ಇನ್ಸ್ಪೆಕ್ಟರ್ ಸತ್ಯೇಂದ್ರ ಅವರು ಅಂಗಡಿ ಮಾಲೀಕರನ್ನು ಹಣ ಕೊಡುವಂತೆ ಹೆದರಿಸುತ್ತಿದ್ದರು. ಕೊಡದಿದ್ದರೆ ಜೈಲಿಗೆ ಕಳುಹಿಸುವ ಬೆದರಿಕೆಯನ್ನೂ ಒಡ್ಡುತ್ತಿದ್ದರು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಗ್ರಾಮಸ್ಥರನ್ನು ಸಮಾಧಾನ ಪಡಿಸಿದ ವೃತ್ತ ಪೊಲೀಸ್ ಅಧಿಕಾರಿ ನವಿನಾ ಶುಕ್ಲಾ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿ ಇಬ್ಬರನ್ನು ಗ್ರಾಮಸ್ಥರಿಂದ ಬಿಡಿಸಿದ್ದಾರೆ. ಸದ್ಯ ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…
ನಮ್ಮ ತುಮಕೂರು ಮಾಧ್ಯಮವು ಈ ವರುಷ ತನ್ನ ಮೂರನೇ ವಾರ್ಷಿಕೋತ್ಸವವನ್ನು ಯಶಸ್ವಿಯಾಗಿ ಆಚರಿಸುತ್ತಿದ್ದು, ಈ ಸಾಧನೆ ನಮ್ಮ ಎಲ್ಲಾ ಸಹೋದ್ಯೋಗಿಗಳು, ವೀಕ್ಷಕರು ಮತ್ತು ಓದುಗರ ಬೆಂಬಲದ ಪ್ರತಿಫಲವಾಗಿದೆ. ಮೂರು ವರ್ಷಗಳ ಕಾಲದ ಈ ಪಯಣದಲ್ಲಿ ನಾವು ಹಲವು ಸವಾಲುಗಳನ್ನು ಎದುರಿಸಿದರೂ, ಪ್ರತಿ ಸವಾಲಿನ ನಂತರದ ಯಶಸ್ಸು ನಮ್ಮ ಸೇವೆಗೆ ನಿಮ್ಮೆಲ್ಲರ ಪ್ರೋತ್ಸಾಹದಿಂದಲೇ ಸಾಧ್ಯವಾಯಿತು. ಮಾಧ್ಯಮ ಕ್ಷೇತ್ರದಲ್ಲಿ ಸ್ಪರ್ಧೆ, ಹಲವು ಸವಾಲುಗಳ ನಡುವೆಯೂ, ತಾಜಾ ಸುದ್ದಿಗಳು, ಸತ್ಯಾಸತ್ಯತೆ, ನಿಷ್ಠೆ ಮತ್ತು ಸಾಮಾಜಿಕ ಬದ್ಧತೆಯೊಂದಿಗೆ ಅಪಾರ ಜನರಿಗೆ ತಲುಪಿದ್ದೇವೆ ಎನ್ನುವ ಸಂತೃಪ್ತಿ ನಮಗಿದೆ. ಈ ಮೂರು ವರ್ಷಗಳಲ್ಲಿ ನಮ್ಮತುಮಕೂರು ಮಾಧ್ಯಮ ನೊಂದವರ ಕಣ್ಣು ಒರಸಿದೆ, ಸಾರ್ವಜನಿಕರ ಮೂಲಭೂತ ಸಮಸ್ಯೆಗಳನ್ನು ಪೂರೈಸುವುದು ಸರ್ಕಾರ, ಜಿಲ್ಲಾಡಳಿತದ ಜವಾಬ್ದಾರಿ ಅನ್ನೋದನ್ನ ಸಾರಿ ಹೇಳಿದ್ದೇವೆ. ಸಾಮಾಜಿಕ ಸಂಘಟನೆಗಳ ಹೋರಾಟಕ್ಕೆ ನಮ್ಮತುಮಕೂರು ಮಾಧ್ಯಮ ಬಲವಾಗಿ ಬೆಂಬಲಿಸಿದೆ. ಸಂವಿಧಾನಾತ್ಮಕ ಧ್ಯೇಯಗಳನ್ನು ಮೈಗೂಡಿಸಿಕೊಂಡು ಮಾಧ್ಯಮ, ಕಾನೂನಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಮೂರು ವರ್ಷದ ಪ್ರಯಾಣದಲ್ಲಿ ಮಾಧ್ಯಮವು ಬೆದರಿಕೆಗಳಿಗೆ ಬಗ್ಗಿಲ್ಲ, ಆಮಿಷಗಳಿಗೆ ಕೈಯೊಡ್ಡಿಲ್ಲ ಎನ್ನುವುದನ್ನು ಹೇಳಲು…
ನಟ ಹಾಗೂ ನಿರ್ದೇಶಕ ಗುರುಪ್ರಸಾದ್ ಅವರು ಸಾವಿಗೆ ಶರಣಾಗಿದ್ದಾರೆ ಎನ್ನುವ ಆಘಾತಕಾರಿ ಸುದ್ದಿ ಬಂದಿದ್ದು, ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಮೂರು ದಿನಗಳ ಹಿಂದೆ ಗುರುಪ್ರಸಾದ್ ಅವರು ತಮ್ಮ ನಿವಾಸದಲ್ಲೇ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಮಾದನಾಯಕಹಳ್ಳಿ ಅಪಾರ್ಟ್‌ಮೆಂಟ್ ನಲ್ಲಿ ಅವರು ಸಾವಿಗೆ ಶರಣಾಗಿದ್ದಾರೆ. ಗುರುಪ್ರಸಾದ್ ಅವರು ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದರು. ತಮ್ಮ 52ನೇ ವಯಸ್ಸಿನಲ್ಲಿ ಜೀವನವನ್ನು ಕೊನೆಗಾಣಿಸಿದ್ದಾರೆ. 3 ದಿನಗಳ ಹಿಂದೆ ಅವರು ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಅವರ ಅಪಾರ್ಟ್ ಮೆಂಟ್ ನಲ್ಲಿ ಮೃತದೇಹ ಪತ್ತೆಯಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಸರಗೂರು: ತಾಲೂಕಿನ ಪಟ್ಟಣದ ನಾಲ್ಕನೇ ವಾರ್ಡಿನ ನಿವಾಸಿಯಾದ ಆಟೋ ಜೋಗಪ್ಪ ಅಪ್ಪಟ ಕನ್ನಡ ಅಭಿಮಾನಿ. ಇವರು 20 ರಿಂದ 25 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ದಿನದಂದು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದರು. ಆಟೋ ಗೆ ಶೃಂಗಾರ ಮಾಡಿ ನಂತರ ತಾಯಿ ಭುವನೇಶ್ವರಿ ಪೋಟೋಗೆ ಪುಷ್ಪಹಾರ ಹಾಕಿ ಕನ್ನಡ ರಾಜ್ಯೋತ್ಸವ ಆಚರಿಸಿದ ಅವರು ಬಳಿಕ ಮಾತನಾಡಿ, ಈ ದಿನದಂದು ನನ್ನ ಆಟೋದಲ್ಲಿ ಯಾರೇ ಸಂಚಾರ ಮಾಡಿಕೊಂಡು ಬರುವವರಿಗೆ ಯಾವುದೇ ರೀತಿಯ ಹಣವನ್ನು ಪಡೆಯುವುದಿಲ್ಲ. ಇದರಿಂದ ನಾನು ಕನ್ನಡ ನಾಡಿನಲ್ಲಿ ಹುಟ್ಟಿರುವುದಕ್ಕೂ ಸಾರ್ಥಕ ವಾಗಿದೆ ಎಂದರು. ಕನ್ನಡ ರಾಜ್ಯೋತ್ಸವ ಅಂಗವಾಗಿ ನವೆಂಬರ್ 1 ರಂದು ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಉಚಿತವಾಗಿ ಸಾರ್ವಜನಿಕರಿಗೆ ಪ್ರಯಾಣ ಹಾಗೂ ಅದರ ಜೊತೆಯಲ್ಲಿ ಶಾಲೆಯ ಮಕ್ಕಳಿಗೆ ಪುಸ್ತಕಗಳು ಮತ್ತು ಇನ್ನೂ ವಿವಿಧ ಸೇವೆ 20, ವರ್ಷದಿಂದ ಮಾಡಿಕೊಂಡು ಬರುತ್ತಿರುತ್ತೇನೆ ಎಂದು ಹೇಳಿದರು. ಈ ದಿನದಂದು ಜನರ ಸೇವೆ ಮಾಡಿದ್ದರಿಂದ ಕನ್ನಡ ನಾಡಿಗೆ ಅಭಿಮಾನಕ್ಕೆ ಕೊಡುವ ಸೇವೆ…
ಮಧುಗಿರಿ: ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಸಂದರ್ಭದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು, ಆದರೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಕಾಣೆಯಾಗಿರುವುದನ್ನ ಗಮನಿಸಿದ ಕನ್ನಡಪರ ಸಂಘಟನೆಗಳ ಹೋರಾಟಗಾರರು ಸಿಡಿ ಮಿಡಿಗೊಂಡು ಅಬಕಾರಿ ಕಛೇರಿಗೆ ಮುತ್ತಿಗೆ ಹಾಕಿದ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಗೈರುಹಾಜರಿದ್ದನ್ನು ಡಿವೈಎಸ್ಪಿ ಚಂದ್ರಪ್ಪರನ್ನು ಪ್ರಶ್ನಿಸಿದ್ದಕ್ಕೆ ನಾನು ಮೂರು ದಿನಗಳಿಂದ ಕಛೇರಿಯಲ್ಲಿ ಇರಲಿಲ್ಲ, ಹಾಗಾಗಿ ನಾನು ಬೇರೆ ಇನ್ಸ್ ಪೆಕ್ಟರ್ ಗೆ ಧ್ವಜಾರೋಹಣ ನೇರವೇರಿಸಲು ಸೂಚನೆ ನೀಡಿದ್ದೇನೆ ಎಂದು ಚಂದ್ರಪ್ಪ ಹೇಳಿದ್ದಾರೆ. ಈ ವೇಳೆ ಇನ್ಸ್‌ಪೆಕ್ಟರ್ ಗೆ ಕರೆ ಮಾಡಿ ವಿಚಾರಿಸಿದಾಗ ನನಗೆ ಕೊರಟಗೆರೆ ಇನ್ ಚಾರ್ಜ್ ನೀಡಿದ್ದು, ನಾನು ರಾಜ್ಯೋತ್ಸವ ಕಾರ್ಯಕ್ರಮದಲ್ಲಿದ್ದೇನೆ. ಮಧುಗಿರಿಯಲ್ಲಿ ಡಿವೈಎಸ್ಪಿ ಚಂದ್ರಪ್ಪ ಅವರೇ ಮಾಡಬೇಕು ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ. ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಂಡು ಅಧಿಕಾರಿಗಳು ಕನ್ನಡಾಂಬೆಗೆ ಅಗೌರವ ತರುತ್ತಿರುವುದಂತೂ ಸುಳ್ಳಲ್ಲ. ಇತ್ತ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನಂತರ ಕನ್ನಡ ಪರ ಸಂಘಟನೆಯವರೆ ಅಬಕಾರಿ ಇಲಾಖೆಯಲ್ಲಿ ದ್ವಜರೋಹಣ ನೇರವೇರಿಸಿರುವುದು ಅಲ್ಲಿನ…