Subscribe to Updates
Get the latest creative news from FooBar about art, design and business.
- ಸಚಿವ ಸಂಪುಟ ವಿಸ್ತರಣೆ: ಎಚ್.ಕೆ. ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ–ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ
- ತುಮಕೂರು ಕಾಂಗ್ರೆಸ್ ನಲ್ಲಿ ಆಕ್ರೋಶ ಸ್ಫೋಟ: ವಿಪಕ್ಷ ಸಾಲಿನಲ್ಲಿ ಆಸನ ಕೋರಿದ ಟಿ.ಬಿ. ಜಯಚಂದ್ರ, ಹೆಚ್ ಡಿಕೆಯನ್ನು ಹೊಗಳಿದ ಶಾಸಕ ಶ್ರೀನಿವಾಸ್
- ಸಚಿವ ಸ್ಥಾನ ಸಿಗಲಿಲ್ಲವೆಂದು ಪಕ್ಷದ ವಿರುದ್ಧ ಮಾತಾಡುವುದು ಸರಿಯಲ್ಲ: ಪ್ರಿಯಾಂಕ್ ಖರ್ಗೆ
- ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಚುರುಕು: 105 ಅಡಿಗೆ ತಲುಪಿದ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ
- ಬಿಜೆಪಿಯವರು ಬರ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ನೀಡಲಿ: ಸಚಿವ ಸಂತೋಷ್ ಲಾಡ್
- ನನ್ನ ಮತದಾನ ನನ್ನ ಹಕ್ಕು: ಎಸ್ಐಆರ್ ಜಾಗೃತಿ
- 10 ಸಾವಿರ ಕೋಟಿ ಅನುದಾನ ಬಿಡುಗಡೆಗೆ ಆಗ್ರಹ: ಕರ್ನಾಟಕದ 28 ಜಿಲ್ಲೆಗಳು ಮಳೆಯಿಲ್ಲದೇ ಬರಪೀಡಿತ | ತುಮಕೂರಿನಲ್ಲಿ ಬಿಜೆಪಿ ಬರ ಅಧ್ಯಯನ
- ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆ ಮೂಡಿಸಿದ “ಓ ಮೈ ಡಾಗ್” ಆಗಸ್ಟ್ 7ರಂದು ಅದ್ದೂರಿ ರಿಲೀಸ್
Author: admin
ಮೈಸೂರು: ಸಿದ್ದರಾಮಯ್ಯರಿಗೆ ಈಗ ದೇವರು ಮಠಗಳು ನೆನಪಾಗಿದೆ. ಮುಡಾ ಹಗರಣವಾದ ಮೇಲಂತೂ ಅವರಿಗೆ ಹೆಚ್ಚಿನ ಭಕ್ತಿ ಬಂದಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಸುತ್ತೂರು ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಮುಡಾ ಹಗರಣದ ಪ್ರಭಾವದಿಂದ ದೇವರ ಮೇಲೆ ಭಕ್ತಿ ಬಂದಿದೆ, ಈಗ ಅವರಿಗೆ ಮಠಗಳು ನೆನಪಾಗಿವೆ ಎಂದು ವ್ಯಂಗ್ಯವಾಡಿದ್ದಾರೆ. ಮೊದಲು ಕುಂಕುಮವನ್ನೇ ಹಾಕಿಸಿಕೊಳ್ಳುತ್ತಿರಲಿಲ್ಲ, ಆದರೆ ಈಗ ಹುಡುಕಿಕೊಂಡು ಹೋಗಿ ದೇವರ ದರ್ಶನ ಮಾಡುತ್ತಿದ್ದಾರೆ. ಇದೆಲ್ಲ ಮುಡಾ ಹಗರಣದ ಪ್ರಭಾವ ಅನಿಸುತ್ತೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು. ದೀಪಕ್ಕೆ ಸಿಕ್ಕ ಪತಂಗದಂತಾಗಿದೆ ಕಾಂಗ್ರೆಸ್ ಸರ್ಕಾರದ ಸ್ಥಿತಿ, ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಿಕೊಳ್ಳುತ್ತಿದೆ. ಒಂದು ತಪ್ಪು ಮುಚ್ಚಿಕೊಳ್ಳಲು ಮತ್ತೊಂದು ತಪ್ಪು ಮಾಡುತ್ತಿದೆ. ಮುಡಾ, ವಕ್ಫ್ ಎಲ್ಲದರಲ್ಲು ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…
ಸರಗೂರು: ‘ಅರ್ಹರಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು, ಸಂಬಂಧಿಸಿದವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು’ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಚನ್ನೀಪುರ ಚೆಲುವರಾಜು ಹೇಳಿದರು. ಸರ್ಕಾರದ ಮಹತ್ವಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ ಕುರಿತು ಬುಧವಾರ ದಂದು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ತಾಲೂಕಿನ ಸುಮಾರು ಗ್ರಾಮಗಳಿಗೆ ಬಸ್ ವ್ಯವಸ್ಥೆ ಇಲ್ಲ.ಸೋಮವಾರದಿಂದ ಶನಿವಾರರವರಿಗೆ ಬಸ್ ಕಲ್ಪಿಸಿದೆ.ಅದರೆ ಭಾನುವಾರ ಬಂದರೆ ಬಸ್ ವ್ಯವಸ್ಥೆ ಸ್ಥಗಿತಗೊಂಡಿದ್ದಾರೆ. ಶಾಲೆಯ ಮಕ್ಕಳು ಬಸ್ ಸಂಚಾರ ಮಾಡುತ್ತಿದ್ದಾರೆ. ಅದರೆ ಸಣ್ಣ ಮಕ್ಕಳಿಗೆ ಅರ್ಥ ಚಾರ್ಜ್ ತೆಗೆದುಕೊಳ್ಳಬೇಕು ಅಂದರೆ ನಿಮ್ಮ ಕಂಡಕ್ಟರ್ ರವರು ಒಬ್ಬ ವ್ಯಕ್ತಿಗೆ ಯಾವ ಮಟ್ಟಿಗೆ ಚಾರ್ಜ್ ತೆಗೆದುಕೊಳ್ಳುತ್ತಿರಾ? ಅದೇ ರೀತಿ ಮಕ್ಕಳಿಗೆ ತೆಗೆದುಕೊಳ್ಳುತ್ತಿದ್ದಾರೆ ದೂರು ಬಂದಿದೆ. ನಿಮ್ಮ ಸಿಬ್ಬಂದಿಗಳಿಗೆ ಶಾಲೆಯ ಮಕ್ಕಳು ಮತ್ತು ಸಾರ್ವಜನಿಕರಿಗೆ ಅವರಿಗೆ ತಿಳುವಳಿಕೆ ನೀಡಬೇಕು. ಗ್ರಾಮಗಳಿಂದ ಹೆಂಗಸರು ಹಾಗೂ ಮಕ್ಕಳು ನಡೆದುಕೊಂಡು ಬಸ್ ನಿಲ್ದಾಣದಲ್ಲಿ ಇದ್ದರೆ. ಚಾಲಕರು ಬಸ್ ನಿಲ್ಲಿಸುವುದಿಲ್ಲ ಹಾಗೂ…
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಮತ್ತು ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ. ಈ ರೀತಿ ಹೀಯಾಳಿಸುವವರ ವಿರುದ್ಧ ರಾಜ್ಯ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕನ್ನಡೇತರರ ಜೊತೆ ಅವರದೇ ಭಾಷೆಯಲ್ಲಿ ಮಾತನಾಡುವ ಬದಲು ಕನ್ನಡ ಕಲಿಸಿ ಕನ್ನಡ ವಾತಾವರಣ ನಿರ್ಮಿಸಿದರೆ ಭಾಷಾ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು. ಸ್ವಾತಂತ್ರ್ಯಾ ನಂತರ ಭಾಷಾವಾರು ಪ್ರಾಂತ್ಯಗಳು ವಿಂಗಡಣೆಯಾದ ಬಳಿಕ ಕರ್ನಾಟಕ ಎಂದು ನಾಮಕರಣಗೊಂಡಿದೆ. ಅದರ 50ನೇ ವರ್ಷದ ವೇಳೆಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆದರೆ ಅವರು ಅದನ್ನು ಆಚರಣೆ ಮಾಡಲಿಲ್ಲ ಎಂದು ಆಕ್ಷೇಪಿಸಿದ ಅವರು, ತಾವು ಮುಖ್ಯಮಂತ್ರಿಯಾದ ಬಳಿಕ ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ ಎಂಬ ಕಾರ್ಯಕ್ರಮವನ್ನು ಬಜೆಟ್ ನಲ್ಲಿ ರೂಪಿಸಿದ್ದಾಗಿ ಹೇಳಿದರು. ಕನ್ನಡ ಭಾಷೆಗೆ 2…
ಬೆಂಗಳೂರು: ರಾಜ್ಯಾದ್ಯಂತ ದೀಪಾವಳಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಪಟಾಕಿ ಅವಘಡದಿಂದ ಹಲವರು ಗಾಯಗೊಂಡಿದ್ದಾರೆ. ಪಟಾಕಿ ಕಿಡಿ ತಾಗಿ ಕಣ್ಣಿಗೆ ಗಾಯಮಾಡಿಕೊಂಡಿರುವ 29 ಜನರು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಿಂಟೋ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 15 ಪ್ರಕರಣಗಳು ದಾಖಲಾಗಿವೆ. ಒಟ್ಟು 29 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ 8 ಜನರಿಗೆ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ವಯಸ್ಕರರು 9 ಜನರು, 9 ಮಕ್ಕಳು, ಅಕ್ಕಪಕ್ಕ ನಿಂತಿದ್ದವರಿಗೆ ಪಟಾಕಿ ಕಿಡಿ ತಗುಲಿ ಗಾಯಗೊಂಡ 8 ಜನ, ಸ್ವತಃ ಪಟಾಕಿ ಹಚ್ಚುವಾಗ ಕಣ್ಣಿಗೆ ಕಿಡಿ ತಗುಲಿ ಗಾಯಗೊಂಡ 7 ಜನರು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಇಬ್ಬರಿಗೆ ಸರ್ಜರಿ ಮಾಡಲಾಗಿದೆ. 15 ಜನರು ಗಂಭೀರವಾಗಿ ಗಾಯಗೊಂಡವರಿದ್ದು, 14 ಜನರು ಸಣ್ಣಪುಟ್ಟ ಗಾಯಗೊಂಡವರಾಗಿದ್ದಾರೆ ಎಂದು ತಿಳಿದುಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುಮಕೂರು: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ಜನನಿಬಿಡ ಪ್ರದೇಶದಲ್ಲಿ ಲಾಂಗ್ ಹಿಡಿದು ಅಂಗಡಿಯವೊಂದಕ್ಕೆ ನುಗ್ಗಿ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ. ತುಮಕೂರು ನಗರದ ಮೇಳಕೋಟೆ ಮುಖ್ಯರಸ್ತೆಯಲ್ಲಿರುವ ಮುಬಾರಕ್ ಸಮೋಸ ಸೆಂಟರ್ ನಲ್ಲಿ ಗುಂಪೊಂದು ಯುವಕನ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿದೆ. ತೀವ್ರ ವಾಗಿ ಹಲ್ಲೆ ಮಾಡಿರೋ ಘಟನೆ ಮೊಬೈಲ್ ನಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಉಪ್ಪಾರಹಳ್ಳಿ ಮೂಲದ ಯುವತಿಯ ವಿಷಯಕ್ಕೆ ಸಂಬಂಧಿಸಿದಂತೆ ಸದಾಶಿವನಗರದ ಹುಸೆನ್ ಎಂಬ ಯುವಕ ಇಸ್ಮಾಯಿಲ್ ನಗರದ ಆಯುಬ್ ಎಂಬ ಯುವಕನಿಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಜನಿಬಿಡ ಪ್ರದೇಶದಲ್ಲಿ ಪುಂಡರ ಗುಂಪು ತಲ್ವಾರ್ ನಿಂದ ಹಲ್ಲೆ ನಡೆಸಿರುವ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಹಲ್ಲೆಗೊಳಗಾದ ಯುವಕನನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಪಾಯದಿಂದ ಯುವಕಪಾರಾಗಿದ್ದಾನೆ. ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…
ತುಮಕೂರು: ವಕ್ಪ್ ಆಸ್ತಿ ವಿಚಾರ ಯಾಕೆ ಪ್ರಾರಂಭವಾಯಿತು, ಇಷ್ಟು ದಿನ ಯಾಕೇ ಇರಲಿಲ್ಲ. ಇದೀಗ ಕಾಂಗ್ರೆಸ್ ನ ದುರಾಡರಳಿತ ಹೊರಬರಲಿಕ್ಕೆ ಪ್ರಾರಂಭವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಶುಕ್ರವಾರ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನ ಅಕ್ರಮ ಮುಚ್ಚಿಕೊಳ್ಳುವ ಪ್ರಯತ್ನ ಇದು. ಸಂವಿಧಾನ ರಚನೆ ಮಾಡಬೇಕಾದರೆ ಪ್ರತಿ ಕುಟುಂಬದ ಹಕ್ಕು, ನ್ಯಾಯಾಂಗದಲ್ಲಿ ಚರ್ಚೆಗಳು ಆರಂಭವಾಗಿವೆ ಇದಕ್ಕೆ ಜನರ ಉತ್ತರ ಸಿಗಲಿದೆ ಎಂದರು. ಕೇಂದ್ರದ ಮೋದಿಯವರ ಕ್ಯಾಬಿನೆಟ್ ನಲ್ಲಿ ಈ ಕುರಿತು ಯಾವ ರೀತಿ ತೀರ್ಮಾನ ಆಗಬೇಕು ಎಂದು ಚರ್ಚೆ ಆಗಿದೆ. ಕಾನೂನು ವ್ಯಾಪ್ತಿಯಲ್ಲಿ ಇದೆಲ್ಲದಕ್ಕೂ ಅಂತಿಮ ಮಾಡಲಿಕ್ಕೆ ಕಾನೂನು ಬಲಿಷ್ಠ ವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು ಎಂದರು. ಇಂದು ಅಮಾವಾಸ್ಯೆ ಕಾರಣ ಚುಂಚನಗಿರಿ ಗೆ ಭೇಟಿ ಬಳಿಕ ಸಿದ್ದಗಂಗಾ ಮಠಕ್ಕೆ ಬಂದು ಆಶೀರ್ವಾದ ಪಡೆದಿದ್ದೇನೆ. ಬಿಜೆಪಿಯವರು ಸೇರಿ ಎಲ್ಲರೂ ಜೊತೆಗೂಡಿ ಚನ್ನಪಟ್ಟಣ ಉಪಚುನಾವಣೆ ಸೇರಿದಂತೆ ಮೂರು ಕಡೆ ಕೆಲಸ ಮಾಡಲಾಗುತ್ತಿದೆ ಎಂದರು. ಕಾಂಗ್ರೆಸ್ ಆಡಳಿತ ಯಾವರೀತಿ ಇದೆ, ಕಾಂಗ್ರೆಸ್…
ತುಮಕೂರು: ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಶ್ರೀ ಶಿವಕುಮಾರಸ್ವಾಮೀಜಿಗಳ ಗದ್ದುಗೆ ದರ್ಶನ ಮಾಡಿದರು. ಕುಮಾರಸ್ವಾಮಿ ಅವರಿಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಾಥ್ ನೀಡಿದರು. ತುಮಕೂರು ಬಿಜೆಪಿ ಶಾಸಕ ಜ್ಯೋತಿಗಣೇಶ್, ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ, ಚಿಕ್ಕನಾಯಕನಹಳ್ಳಿ ಜೆಡಿಎಸ್ ಶಾಸಕ ಸುರೇಶ್ ಬಾಬು ಜೊತೆಯಲ್ಲಿ ಇದ್ದರು. ರಾಮನಗರ ಸೇರಿದಂತೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಿದ್ದಗಂಗಾ ಮಠದ ಭಕ್ತಾದಿಗಳ ಸಂಖ್ಯೆ ಕೂಡ ಅಪಾರ ಪ್ರಮಾಣದಲ್ಲಿದ್ದಾರೆ. ಹೀಗಾಗಿ ಬಹುತೇಕ ಆ ಭಾಗದಲ್ಲಿ ಚುನಾವಣೆಗಳು ನಡೆದ ಸಂದರ್ಭದಲ್ಲಿ ಅಭ್ಯರ್ಥಿಗಳು ಹಾಗೂ ಮುಖಂಡರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದು ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಸ್ವಾಮೀಜಿಯವರ ಆಶೀರ್ವಾದ ಪಡೆಯುವುದು ಸರ್ವೇ ಸಾಮಾನ್ಯವಾಗಿರುತ್ತದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ತುಮಕೂರು: ಜಿಲ್ಲೆಯ ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಿದ ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಕನ್ನಡ’ ಭಾಷೆ ಭಾಷೆಗಳ ರಾಣಿ ಇದ್ದ ಹಾಗೆ ನಮ್ಮ ಭಾಷೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು ಸಾಹಸ ಶೌರ್ಯ, ಔದಾರ್ಯಕ್ಕೆ ಹೆಸರಾಗಿದ್ದು, ನಾಡು ನುಡಿಯ ವಿಷಯದಲ್ಲಿ ನಾವೆಲ್ಲರೂ ಸ್ವಾಭಿಮಾನಿಗಳಾಗಿರಬೇಕು. ವಿಜಯನಗರ ಸಾಮ್ರಾಟ ಕೃಷ್ಣದೇವರಾಯರ ಆದಿಯಾಗಿ ಅನೇಕ ರಾಜಮಹರಾಜರು ಕವಿಗಳು ಶರಣರು ನಾಡಿನ ಕೀರ್ತಿಯನ್ನ ಬೆಳಗಿದ್ದು, ಇಂದು ಅಖಂಡ ಕರ್ನಾಟಕ ಕನ್ನಡಿಗ ಹೆಮ್ಮೆಯಾಗಿದೆ ಎಂದು ತಿಳಿಸಿದರು. ನಾಡಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ, ಕನ್ನಡ ನಾಡು ನುಡಿ, ಅನೇಕ ಮಹನೀಯರ ತ್ಯಾಗ ಪರಿಶ್ರಮದಿಂದ ರೂಪುಗೊಂಡಿದೆ. ಕನ್ನಡಿಗರು ಹೃದಯ ವೈಶಾಲ್ಯಕ್ಕೆ ಹೆಸರಾಗಿದ್ದು ಡ್ಯಾಡಿ ಮಮ್ಮಿ ಸಂಸ್ಕೃತಿ ಬಿಟ್ಟು ಅಪ್ಪ ಅಮ್ಮ ಅನುವ ಸಂಸ್ಕೃತಿ ಬೆಳಸಿಕೊಳ್ಳ ಬೇಕು, ನಮ್ಮ ಭಾಷೆ ನಾಡು ನುಡಿಯನ್ನ ಪ್ರೀತಿಸೋಣ ಬೇರೆ ಭಾಷೆಗಳನ್ನ ಗೌರವಿಸೋಣ, ನಮ್ಮ ನಾಡು ನುಡಿಗೆ ಅಗೌರವ ಉಂಟಾದಾಗ ಸ್ವಾಭಿಮಾನಿಗಳಾಗಿ…
ತುಮಕೂರು: ನವೆಂಬರ್ 1 ಕನ್ನಡರಾಜ್ಯೋತ್ಸವ ಮೆರವಣಿಗೆಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಚಾಲನೆ ನೀಡಿದರು. ತುಮಕೂರು ಟೌನ್ ಹಾಲ್ ವೃತ್ತದಿಂದ ಆರಂಭವಾದ ಮೆರವಣಿಗೆ, ವಿವಿಧ ಕಲಾತಂಡಗಳೊಂದಿಗೆ ಸಾಗಿತು. ಶಾಲಾ ಮಕ್ಕಳು ಸೇರಿದಂತೆ ವಿವಿಧ ಇಲಾಖೆಯ ಸ್ಥಬ್ದಚಿತ್ರಗಳು ಭಾಗಿಯಾಗಿವೆ. ಸರ್ಕಾರದ ವಿವಿಧ ಯೋಜನೆಗಳ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಗುಬ್ಬಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಾವಿನ ಕಟ್ಟೆ ಕೆರೆಯ ಅಂಗಳದಲ್ಲಿ 42 ಕುಟುಂಬಗಳನ್ನು ಸಾತೇನಹಳ್ಳಿಗೆ ಸ್ಥಳಾಂತರ ಗೊಳಿಸುವ ಕಾರ್ಯ ಕ್ಷಿಪ್ರಗತಿಯಲ್ಲಿ ಕೈಗೆತ್ತಿಕೊಂಡು ಕೆರೆ ಅಂಗಳದಲ್ಲಿ ನರಕ ಯಾತನೆ ಅನುಭವಿಸುತ್ತಿದ್ದ ಕುಟುಂಬಗಳಿಗೆ ನವಚೇತನ ನೀಡಿದ ತಹಶೀಲ್ದಾರ್ ಆರತಿ ಮತ್ತು ಪಟ್ಟಣ ಪಂಚಾಯಿತಿ ಚೀಪ್ ಆಫೀಸರ್ ಮಂಜುಳಾ ದೇವಿ ಅವರ ಕಾರ್ಯವೈಖರಿಗೆ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್.ಎಂ.ವೆಂಕಟೇಶ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇಂದು ಬಾಬು ಜಗಜೀವನ್ ರಾಮ್ ಭವನದಲ್ಲಿರುವ ನಿರಾಶ್ರಿತರನ್ನು ಮತ್ತು ಪುನರ್ವಸತಿ ಸೌಕರ್ಯ ಕಲ್ಪಿಸಿದ ಸಾತೇನಹಳ್ಳಿಗೆ ನೈಜ ಹೋರಾಟಗಾರರ ವೇದಿಕೆ ಮತ್ತು ಕಾಳಜಿ ಫೌಂಡೇಶನ್ ಸದಸ್ಯರು ಭೇಟಿ ನೀಡಿದರು. ಇಲ್ಲಿನ 42 ಕುಟುಂಬಗಳ ಸದಸ್ಯರೊಂದಿಗೆ ಚರ್ಚಿಸಿ ಅವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ನೈಜ ಹೋರಾಟಗಾರರ ವೇದಿಕೆ ಮತ್ತು ಕಾಳಜಿ ಫೌಂಡೇಶನ್ ಸದಸ್ಯರು ಮುಖ್ಯ ಪಾತ್ರ ವಹಿಸಿದ್ದರು. ಈ ಸಂಘಟನೆಗಳ ನಿರಂತರ ಹೋರಾಟದಿಂದಾಗಿ ಕಳೆದ ಏಳೆಂಟು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪ್ರಕರಣ ಸುಖಾಂತ್ಯವಾಗಿದೆ. ತಾಲೂಕು ಆಡಳಿತದ ಅಧಿಕಾರಿಗಳು ಸರ್ಕಾರದ ಕೆಲಸ ದೇವರ ಕೆಲಸವೆಂದು ಮಾಡುತ್ತಿರುವುದರ…