ತುಮಕೂರು: ವಕ್ಪ್ ಆಸ್ತಿ ವಿಚಾರ ಯಾಕೆ ಪ್ರಾರಂಭವಾಯಿತು, ಇಷ್ಟು ದಿನ ಯಾಕೇ ಇರಲಿಲ್ಲ. ಇದೀಗ ಕಾಂಗ್ರೆಸ್ ನ ದುರಾಡರಳಿತ ಹೊರಬರಲಿಕ್ಕೆ ಪ್ರಾರಂಭವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶುಕ್ರವಾರ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನ ಅಕ್ರಮ ಮುಚ್ಚಿಕೊಳ್ಳುವ ಪ್ರಯತ್ನ ಇದು. ಸಂವಿಧಾನ ರಚನೆ ಮಾಡಬೇಕಾದರೆ ಪ್ರತಿ ಕುಟುಂಬದ ಹಕ್ಕು, ನ್ಯಾಯಾಂಗದಲ್ಲಿ ಚರ್ಚೆಗಳು ಆರಂಭವಾಗಿವೆ ಇದಕ್ಕೆ ಜನರ ಉತ್ತರ ಸಿಗಲಿದೆ ಎಂದರು.
ಕೇಂದ್ರದ ಮೋದಿಯವರ ಕ್ಯಾಬಿನೆಟ್ ನಲ್ಲಿ ಈ ಕುರಿತು ಯಾವ ರೀತಿ ತೀರ್ಮಾನ ಆಗಬೇಕು ಎಂದು ಚರ್ಚೆ ಆಗಿದೆ.
ಕಾನೂನು ವ್ಯಾಪ್ತಿಯಲ್ಲಿ ಇದೆಲ್ಲದಕ್ಕೂ ಅಂತಿಮ ಮಾಡಲಿಕ್ಕೆ ಕಾನೂನು ಬಲಿಷ್ಠ ವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು ಎಂದರು. ಇಂದು ಅಮಾವಾಸ್ಯೆ ಕಾರಣ ಚುಂಚನಗಿರಿ ಗೆ ಭೇಟಿ ಬಳಿಕ ಸಿದ್ದಗಂಗಾ ಮಠಕ್ಕೆ ಬಂದು ಆಶೀರ್ವಾದ ಪಡೆದಿದ್ದೇನೆ.
ಬಿಜೆಪಿಯವರು ಸೇರಿ ಎಲ್ಲರೂ ಜೊತೆಗೂಡಿ ಚನ್ನಪಟ್ಟಣ ಉಪಚುನಾವಣೆ ಸೇರಿದಂತೆ ಮೂರು ಕಡೆ ಕೆಲಸ ಮಾಡಲಾಗುತ್ತಿದೆ ಎಂದರು. ಕಾಂಗ್ರೆಸ್ ಆಡಳಿತ ಯಾವರೀತಿ ಇದೆ, ಕಾಂಗ್ರೆಸ್ ನಾಯಕರ ಪರಸ್ಪರ ಕಚ್ಚಾಟ ಯಾವ ರೀತಿ ನಡಿತಾ ಇದೆ ಅಂತಾ ನಾವು ಹೇಳ ಬೇಕಿಲ್ಲ. ಖರ್ಗೆಯವರು ಇಬ್ಬರು ನಾಯಕರನ್ನ ಅಕ್ಕ ಪಕ್ಕ ಕೂರಿಸಿಕೊಂಡು ಉಪದೇಶ ಮಾಡಿ ಸಲಹೆ ಕೊಟ್ಟು ಹೋಗಿದ್ದಾರೆ, ನಾವು ಕೊಟ್ಟಿದ್ದೇವಾ ಎಂದರು.
ಶಕ್ತಿ ಯೋಜನೆ ನಿಲ್ಲಿಸುವ ವಿಚಾರದಲ್ಲಿ ಇದು ಪ್ರಾರಂಭ ಮಾಡಿರೋದು ಜನರ ಪಲ್ಸ್ ತಿಳಿದುಕೊಳ್ಳೊದಿಕ್ಕೆ. ಇದು ಆರಂಭದ ಹಂತ ಗ್ಯಾರಂಟಿ ಒಂದೊಂದೆ ವಾಪಸ್ ಪಡೆಯಲು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q