Subscribe to Updates
Get the latest creative news from FooBar about art, design and business.
- ಗೃಹಜ್ಯೋತಿ ಫಲಾನುಭವಿಗಳಿಗೆ ಎಚ್ಚರಿಕೆ: ಸಮೀಕ್ಷೆಯಲ್ಲಿ ಮಾಹಿತಿ ನೀಡದಿದ್ದರೆ ಉಚಿತ ವಿದ್ಯುತ್ ಭಾಗ್ಯ ಬಂದ್?
- ‘ಗಾಡ್ ಫಾದರ್ ಇಲ್ಲದ್ದಕ್ಕೆ ಸಚಿವ ಸ್ಥಾನ ತಪ್ಪಿದೆ’: ಕೆಎಸ್ ಆರ್ ಟಿಸಿ ಅಧ್ಯಕ್ಷ ಸ್ಥಾನಕ್ಕೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ರಾಜೀನಾಮೆ ಘೋಷಣೆ
- ಆ.28ಕ್ಕೆ ಎಸ್ಸಿ, ಎಸ್ಟಿ ನೌಕರರ 6ನೇ ರಾಜ್ಯಮಟ್ಟದ ಐಕ್ಯತಾ ಸಮಾವೇಶ
- ತುಮಕೂರು: ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಯ ಹಿರಿಯ ಶಾಸಕರಿಗೆ ಕಡೆಗಣನೆ; ಕಾಂಗ್ರೆಸ್ ನಲ್ಲಿ ಬಂಡಾಯದ ಕಾವು
- ಕಾರವಾರ: ಅಂಚೆ ಇಲಾಖೆಯಿಂದ ಬುಕಿಂಗ್, ಪಿಕ್–ಅಪ್ ಮತ್ತು ಡೆಲಿವರಿ ಪಾಲುದಾರರಿಗಾಗಿ ಆನ್ ಲೈನ್ ಅರ್ಜಿ
- ಗ್ಯಾಸ್ ಸಿಲಿಂಡರ್ ಕಳ್ಳತನ ಜಾಲ ಭೇದಿಸಿ ಬೀದರ್ ಪೊಲೀಸರು: ₹9.75 ಲಕ್ಷ ಮೌಲ್ಯದ 55 ಗ್ಯಾಸ್ ಸಿಲಿಂಡರ್ ವಶ | ನಾಲ್ವರು ಆರೋಪಿಗಳ ಬಂಧನ
- 560 ಭೂಮಾಪಕರ ಹುದ್ದೆ: ಸ್ಪರ್ಧಾತ್ಮಕ ಪರೀಕ್ಷೆಗೆ ಒರಿಯಂಟೇಶನ್ ತರಬೇತಿ
- ತಿಪಟೂರು: ನೀರು, ವಿದ್ಯುತ್ ಅಭಾವ ಹಾಗೂ ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಸುದ್ದಿಗೋಷ್ಠಿ | ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
Author: admin
ತುಮಕೂರು : ನಗರದ ಸರಸ್ವತಿಪುರಂ ನಲ್ಲಿರುವ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಐ.ಸಿ.ಐ.ಸಿ.ಐ ಬ್ಯಾಂಕ್ ವತಿಯಿಂದ 30 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ICICI ಎನ್.ಐ.ಐ.ಟಿ, ಐ.ಎಫ್, ಬಿ.ಐ. ಸಂಬಂಧ ವ್ಯವಸ್ಥಾಪಕ ಕಾರ್ಯಕ್ರಮವನ್ನು ಶುಕ್ರವಾರದಂದು ಆಯೋಜನೆ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಎನ್.ಐ.ಐ.ಟಿ ಪ್ರೋಗ್ರಾಮ್ ಅಡ್ವೈಸರಾದ ಶಶಿ ರಾಜ್ ಆರ್.ಅವರು ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸ ಮುಗಿದ ಮೇಲೆ ಬ್ಯಾಂಕ್ ನಲ್ಲಿ ಯಾವ ರೀತಿ ಉದ್ಯೋಗಕ್ಕೆ ಆಯ್ಕೆ.ಹಾಗೂ ಬ್ಯಾಂಕ್ ನಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂದು ತಿಳಿಸಿದ್ದರು. ಇದೇ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಹೇಮಲತಾ ಪಿ ಮತ್ತು ಐಕ್ಯೂಎಸ್ ಸಿ ಸಂಚಾಲಕರಾದ ಸೈಯದ್ ಬಾಬು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವಿನಯ್ ಕುಮಾರ್, ಸಹಾಯ ಪ್ರಾಧ್ಯಾಪಕಗಳು, ಹಾಗೂ ವಿದ್ಯಾರ್ಥಿಗಳು ಹಾಜರಾಗಿದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296…
ತುಮಕೂರು: ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ 2 ಪ್ರತ್ಯೇಕ ಕಾಣೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ. ಪ್ರಕರಣ-1 : ಸುಮಾರು 20 ವರ್ಷದ ಕೃತಿಕ ಪಿ. ಎಂಬ ಯುವತಿಯು ಅಕ್ಟೋಬರ್ 3 ರಿಂದ ಕಾಣೆಯಾಗಿದ್ದಾಳೆ ಎಂದು ಈಕೆಯ ತಾಯಿ ನಾಗವೇಣಿ ಠಾಣೆಗೆ ದೂರು ಸಲ್ಲಿಸಿದ್ದಾರೆ. ಕಾಣೆಯಾದ ಯುವತಿಯು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಮಾತನಾಡುತ್ತಾಳೆ. ಕಾಣೆಯಾದ ಸಂದರ್ಭದಲ್ಲಿ ಸಿಮೆಂಟ್ ಬಣ್ಣದ ಟೀ–ಷರ್ಟ್, ಕಪ್ಪು ಬಣ್ಣದ ಸ್ಕರ್ಟ್ ಧರಿಸಿದ್ದಳು. ಪ್ರಕರಣ-2 : ಸುಮಾರು 38 ವರ್ಷದ ಯೋಗೀಶ್ ಬಿನ್ ನಾಗಪ್ಪ ಎಂಬ ವ್ಯಕ್ತಿಯು ಏಪ್ರಿಲ್ 8 ರಿಂದ ಕಾಣೆಯಾಗಿದ್ದಾನೆ ಎಂದು ಈತನ ಪತ್ನಿ ಶ್ವೇತ ಠಾಣೆಗೆ ದೂರು ನೀಡಿದ್ದಾರೆ. ಕಾಣೆಯಾದ ವ್ಯಕ್ತಿಯು 5.5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ ಮಾತನಾಡುತ್ತಾನೆ. ಈತನು ಕಾಣೆಯಾದ ಸಂದರ್ಭದಲ್ಲಿ ಮೆಂತ್ಯೆ ಬಣ್ಣದ ತುಂಬು ತೋಳಿನ ಅಂಗಿ…
ತುಮಕೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರವು ರೈತರಿಗೆ ಆಧುನಿಕ ಕುರಿ/ಮೇಕೆ ಸಾಕಾಣಿಕೆ ಕುರಿತು ಅಕ್ಟೋಬರ್ 21 ಮತ್ತು 22ರಂದು ಬೆಳಿಗ್ಗೆ 10 ಗಂಟೆಗೆ ಉಚಿತ ತರಬೇತಿ ನೀಡಲು ಉದ್ದೇಶಿಸಿದ್ದು, ಆಸಕ್ತರು ನಿಗದಿಪಡಿಸಿದ ದಿನಾಂಕದಂದು ತರಬೇತಿಗೆ ಹಾಜರಾಗಬಹುದಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿ ತಿಳಿಸಿದ್ದಾರೆ. ತರಬೇತಿಗೆ ಹಾಜರಾಗಲಿಚ್ಛಿಸುವವರು ಇತ್ತೀಚಿನ ತಮ್ಮ 2 ಪಾಸ್‌ಪೋರ್ಟ್ ಅಳತೆ ಭಾವಚಿತ್ರ, ರೈತರ ಫ್ರೂಟ್ ಐಡಿ ಸಂಖ್ಯೆ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ(ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದಲ್ಲಿ)ವನ್ನು ಕಡ್ಡಾಯವಾಗಿ ತರಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶು ವೈದ್ಯಕೀಯ ಸಂಸ್ಥೆ/ ದೂರವಾಣಿ ಸಂಖ್ಯೆ 0816–2251214ನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುಮಕೂರು: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ತನ್ನ ಅಧೀನದಲ್ಲಿರುವ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಪಿಯುಸಿ ಮತ್ತು ಪಿಯುಸಿ ಸಮಾಂನಾಂತರ ಕೋರ್ಸಿನ ಸಾಮಾನ್ಯ ಪದವಿ ಮಟ್ಟದ ಕೋರ್ಸು, ವೃತ್ತಿಪರ ಕೋರ್ಸು ಮತ್ತು ಸ್ನಾತಕೋತ್ತರ ಕೋರ್ಸಿನ ಪ್ರವೇಶಕ್ಕಾಗಿ ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ನವೆಂಬರ್ 11ರವರೆಗೆ ವಿಸ್ತರಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ. ಆಸಕ್ತರು ಜಾಲತಾಣ https://shp.karnataka.gov.in ಮೂಲಕ ನವೆಂಬರ್ 11ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಭವನ, ಇಂದಿರಾ ಕಾಲೇಜು ಮುಂಭಾಗ, ಉಪ್ಪಾರಹಳ್ಳಿ, ತುಮಕೂರು ಅಥವಾ ದೂರವಾಣಿ ಸಂಖ್ಯೆ: 0816–2273724ನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಳಗಾವಿ: ವಿಧಾನಮಂಡಲದ ಚಳಿಗಾಲದ ಅಧಿವೇಶನ ಡಿಸೆಂಬರ್ 9 ರಿಂದ 20 ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದ್ದು, ದಿನಾಂಕವನ್ನು ಸಚಿವ ಸಂಪುಟ ಅಂತಿಮಗೊಳಿಸಲಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಖಾದರ್ ಮತ್ತು ಹೊರಟ್ಟಿ ಶುಕ್ರವಾರ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು ಮತ್ತು ಚಳಿಗಾಲದ ಅಧಿವೇಶನದ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದರು. “ಶಾಸಕಾಂಗ ಅಧಿವೇಶನವು ಹೆಚ್ಚು ಯಶಸ್ವಿಯಾಗಬೇಕೆಂದು ನಾವು ಬಯಸುತ್ತೇವೆ. ಆದ್ದರಿಂದ, ನಾವು ಬಹಳ ಹಿಂದೆಯೇ ಪರಿಶೀಲನಾ ಸಭೆಗಳನ್ನು ನಡೆಸುತ್ತಿದ್ದೇವೆ. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದು ಖಾದರ್ ಹೇಳಿದರು. ಈ ಅಧಿವೇಶನದಲ್ಲಿಯೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಯ ನಿಗದಿಪಡಿಸಲಾಗುವುದು ಎಂದು ಸ್ಪೀಕರ್ ಹೇಳಿದರು. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಈ ಪ್ರದೇಶದ ಹೆಚ್ಚಿನ ಜನರು ಉಭಯ ಸದನಗಳ ಕಲಾಪಗಳಿಗೆ ಸಾಕ್ಷಿಯಾಗುವುದನ್ನು ಖಚಿತಪಡಿಸಿಕೊಳ್ಳಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಾಸ್…
ಬೆಂಗಳೂರು: ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರ ಹೆಸರನ್ನು ಸಂಬಂಧಪಡದ ಪ್ರಕರಣವೊಂದರಲ್ಲಿ ಎಳೆದು ತರುವ ಮೂಲಕ ಕಾಂಗ್ರೆಸ್ಸಿಗರು ವಿಘ್ನ ಸಂತೋಷ ಪಡಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಆರೋಪಿತ ಗೋಪಾಲ ಜೋಷಿ ಅವರೊಂದಿಗೆ ಕಳೆದ 32 ವರ್ಷಗಳಿಂದಲೂ ಸಂಪರ್ಕ ಕಡಿದುಕೊಂಡು ಯಾರೊಂದಿಗೂ ತಮ್ಮ ಸಂಬಂಧ ಬೆರೆಸದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನ್ಯಾಯಾಲಯದಲ್ಲಿ 2013ರಲ್ಲೇ ತಡೆಯಾಜ್ಞೆ ತಂದಿದ್ದಾರೆ, ಅಲ್ಲದೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಅದರ ವಿವರವಿರುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಇಷ್ಟಾಗಿಯೂ ಮುಡಾ ಹಾಗೂ ಮಹರ್ಷಿ ವಾಲ್ಮೀಕಿ ನಿಗಮದ ಹಗರಣದಂತೆ ಹತ್ತು- ಹಲವು ಹಗರಣಗಳಲ್ಲಿ ಸಿಲುಕಿ ತನಿಖೆ ಎದುರಿಸುತ್ತಿರುವ ಮುಖ್ಯಮಂತ್ರಿ ಹಾಗೂ ಇತರ ಮಂತ್ರಿಗಳು ನೈತಿಕತೆ ಗಾಳಿಗೆ ತೂರಿ ತಮ್ಮ ಸ್ಥಾನಗಳಿಗೆ ಭಂಡತನದಿಂದ ಅಂಟಿ ಕುಳಿತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹತಾಶೆಯ ಅಂಚಿಗೆ ತಲುಪಿರುವ ಕಾಂಗ್ರೆಸ್ಸಿಗರು ಜೋಷಿಯವರ ವಿಚಾರದಲ್ಲಿ ‘ಮೊಸರಿನಲ್ಲಿ ಕಲ್ಲು ಹುಡುಕಲು ಹೊರಟಿದ್ದಾರೆ’. ಪ್ರಹ್ಲಾದ್ ಜೋಶಿ ಅವರು ತಮ್ಮ ಇಡೀ ರಾಜಕೀಯ…
ತುಮಕೂರು: ಗುಬ್ಬಿ ಬೆಸ್ಕಾಂ ಉಪವಿಭಾಗ ವ್ಯಾಪ್ತಿಯಲ್ಲಿ ಅಕ್ರಮ–ಸಕ್ರಮ ಯೋಜನೆಯಡಿ ರೈತರಿಗೆ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ. ಗ್ರಾಹಕರು ಅಕ್ರಮ–ಸಕ್ರಮ ಯೋಜನೆಯಡಿ 2015 ರಿಂದ 2022ರ ಮಾರ್ಚ್ ಮಾಹೆವರೆಗೆ ಹಣ ಪಾವತಿಸಿರುವ ರೈತರಿಗೆ ಸೌಲಭ್ಯ ವಿತರಣೆಗೆ ಸ್ಥಳ ಪರಿಶೀಲನೆಗೆ ಸಂಬಂಧಿಸಿದ ಶಾಖಾಧಿಕಾರಿಗಳು ಭೇಟಿ ನೀಡಲಿದ್ದು, ಭೇಟಿ ಸಂದರ್ಭದಲ್ಲಿ ಹಣ ಪಾವತಿಸಿದ ಆರ್.ಆರ್ ನಂಬರ್ಗಳ ಸ್ಥಾವರಗಳ ಸ್ಥಳ ಪರಿಶೀಲನೆ ಹಾಗೂ ಅಂದಾಜು ಪಟ್ಟಿ ತಯಾರಿಕೆಗೆ ಸಹಕರಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಗುಬ್ಬಿ ಶಾಖೆ-9449844214–47, ಚೇಳೂರು ಶಾಖೆ–9449844223 ಮತ್ತು ಸಿ.ಎಸ್.ಪುರ ಶಾಖೆ–9449844232ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ರಾಜ್ಯದ ವಿವಿಧೆಡೆ ಹಿಂಗಾರು ಮಳೆ ಚುರುಕುಗೊಂಡಿದ್ದು, ಉತ್ಪಾದನೆ ಕುಂಠಿತವಾಗಿ ತರಕಾರಿಗಳ ಬೆಲೆ ಮತ್ತೆ ಏರಿಕೆಯಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ತರಕಾರಿಗಳ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಕಂಡು ಬಂದಿದೆ. ಬೆಂಗಳೂರು ಸೇರಿದಂತೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಶಿವಮೊಗ್ಗ, ಬಳ್ಳಾರಿ, ರಾಯಚೂರು, ಹಾಸನ , ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕೈಗೆ ಬಂದ ಫಸಲು ನೆಲಕಚ್ಚಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಕೆಜಿಗೆ ಎಲ್ಲಾ ತರಕಾರಿಗಳ ಬೆಲೆ 10 ರೂ. ಏರಿಕೆಯಾಗಿದೆ. ಅದರಲ್ಲೂ ಲಾಟರಿ ಬೆಳೆ ಎಂದೇ ಕರೆಯುವ ಟೊಮೆಟೋ ಬೆಲೆ ಏರಿಕೆಯಾಗುತ್ತಲೇ ಇದೆ. ಮಳೆ ಹೆಚ್ಚಾದ ಕಾರಣ ಗಿಡದಲ್ಲಿ ಇದ್ದ ಟೊಮ್ಯಾಟೋ ನಾಶವಾಗಿದ್ದು ಬೆಲೆ ಏರಿಕೆಯಾಗಿದೆ. ರಾಜ್ಯದಲ್ಲೇ ದೊಡ್ಡ ಮಾರುಕಟ್ಟೆಯಾದ ಕೋಲಾರ ಮಾರುಕಟ್ಟೆಯಿಂದ ರಾಜ್ಯ ಹಾಗೂ ಅಂತಾರಾಜ್ಯಗಳಿಗೆ ಟೊಮ್ಯಾಟೋ ಸರಬರಾಜು ಆಗುತ್ತದೆ. ಆದರೆ ಅಲ್ಲೇ ನಿರೀಕ್ಷಿತ ಪ್ರಮಾಣದಲ್ಲಿ ಮಾಲು ಬರುತ್ತಿಲ್ಲ . ಹಾಗಾಗಿ ಕೆಜಿಗೆ 60ರೂ. ನಿಂದ 70 ರೂ.ಗೆ ಮಾರಾಟವಾಗುತ್ತಿದೆ. ನಾಟಿ ಬೀನ್ಸ್ ನೂರರ ಗಡಿದಾಟಿ…
ತುಮಕೂರು: ವಿಶ್ವವಿದ್ಯಾನಿಲಯದ ಪ್ರಸಾರಾಂಗವು ಪ್ರಕಟಿಸಿರುವ ರಾಜ್ಯ ಶಿಕ್ಷಣ ನೀತಿಅನ್ವಯ ಸಿದ್ಧಪಡಿಸಿದ ಪ್ರಥಮ ಸೆಮಿಸ್ಟರ್ ಪದವಿಯ ಇಂಗ್ಲಿಷ್ ಭಾಷಾ ಪಠ್ಯ ಪುಸ್ತಕಗಳನ್ನು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಶುಕ್ರವಾರ ಬಿಡುಗಡೆಗೊಳಿಸಿದರು. ಪಠ್ಯ ಪುಸ್ತಕಗಳ ಪ್ರಧಾನ ಸಂಪಾದಕ ಪ್ರೊ.ಎನ್. ಎಸ್. ಗುಂಡೂರ್ ಹಾಗೂ ಸಂಪಾದಕ ಮಂಡಳಿಯ ಸದಸ್ಯರಾದ ಪ್ರೊ.ಎಚ್.ಕೆ.ಶಿವಲಿಂಗಸ್ವಾಮಿ, ಡಾ.ಎಸ್. ಎನ್. ಕಿರಣ್, ಡಾ.ಮೊನ್ಬಿಂದರ್ ಕೌರ್, ಡಾ. ಸಿ. ಎಂ. ರವಿ, ಡಾ. ಭರತ್ ಶಿಲ್ಪಿ, ಡಾ. ಬಿ. ಎನ್. ವೇಣುಗೋಪಾಲ, ದಾಕ್ಷಾಯಿಣಿ ಉಪಸ್ಥಿತರಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಜನಪ್ರಿಯ ನಿರೂಪಕಿ ಅನುಶ್ರೀ ಅವರ ಮದುವೆಯ ಬಗ್ಗೆ ಸಾಕಷ್ಟು ಸುದ್ದಿಗಳನ್ನು ನೀವು ನೋಡಿರುತ್ತೀರಿ, ಇದೀಗ ಮತ್ತೆ ಅನುಶ್ರೀ ಅವರ ಮದುವೆ ಬಗ್ಗೆ ಸುದ್ದಿಯಾಗಿದೆ. ಅನುಶ್ರೀ ಮದುವೆಯಾಗಲು ಗ್ರೀನ್ ಸಿಗ್ನಲ್ ನೀಡುತ್ತಿದ್ದು, ದಾಂಪತ್ಯ ಜೀವನದತ್ತ ಒಲವು ತೋರುತ್ತಿದ್ದಾರೆ. ಈ ಬಗ್ಗೆ ಇತ್ತೀಚಿನ ಕೆಲವು ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಇದೀಗ ಮುಂದಿನ ವರ್ಷ ನಿರೂಪಕಿ ಅನುಶ್ರೀ ಮದುವೆಯಾಗುವುದು ಖಚಿತವಾಗಿದ್ದು, ದಿನಾಂಕ ಕೂಡ ಬಹುತೇಕ ನಿಗದಿಯಾಗಿದೆಯಂತೆ. ಇದು ಅನುಶ್ರೀ ಮದುವೆ ಬಗ್ಗೆ ಯಾರೋ ಏನೋ ನೀಡಿರುವ ಹೇಳಿಕೆಯಲ್ಲ ಸ್ವತಃ ಅನುಶ್ರೀಯೇ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಒಂದು ಸಿಕ್ರೇಟ್ ಅನ್ನು ಬಹಿರಂಗ ಪಡಿಸಿದ್ದಾರೆ. ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯರಾದ ನಟಿ ನಯನ, ಸೂರಜ್, ಜಗ್ಗಪ್ಪ ಹಾಗೂ ಗಿಲ್ಲಿ ಅವರನ್ನು ಅನುಶ್ರೀ ತಮ್ಮ ಯೂಟ್ಯೂಬ್ ಚಾನೆಲ್ ಗೆ ಅತಿಥಿಗಳನ್ನಾಗಿ ಕರೆದು ಚಿಟ್ ಚಾಟ್ ನಡೆಸಿದ್ದರು. ಈ ವೇಳೆ ಅನುಶ್ರೀ ಚೆನ್ನಾಗಿ ಕೂತಿದ್ದೀರಾ ಕಂಡ್ರೋ ಮದುವೆ ಆಗಿರುವವರು ಒಂದೆಡೆ, ಮದುವೆ ಆಗದೆ ಇರೋರು ಮತ್ತೊಂದೆಡೆ ಎಂದು ಕಾಲೆಳೆದರು. ಮದುವೆ…