Subscribe to Updates
Get the latest creative news from FooBar about art, design and business.
- ಗೃಹಜ್ಯೋತಿ ಫಲಾನುಭವಿಗಳಿಗೆ ಎಚ್ಚರಿಕೆ: ಸಮೀಕ್ಷೆಯಲ್ಲಿ ಮಾಹಿತಿ ನೀಡದಿದ್ದರೆ ಉಚಿತ ವಿದ್ಯುತ್ ಭಾಗ್ಯ ಬಂದ್?
- ‘ಗಾಡ್ ಫಾದರ್ ಇಲ್ಲದ್ದಕ್ಕೆ ಸಚಿವ ಸ್ಥಾನ ತಪ್ಪಿದೆ’: ಕೆಎಸ್ ಆರ್ ಟಿಸಿ ಅಧ್ಯಕ್ಷ ಸ್ಥಾನಕ್ಕೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ರಾಜೀನಾಮೆ ಘೋಷಣೆ
- ಆ.28ಕ್ಕೆ ಎಸ್ಸಿ, ಎಸ್ಟಿ ನೌಕರರ 6ನೇ ರಾಜ್ಯಮಟ್ಟದ ಐಕ್ಯತಾ ಸಮಾವೇಶ
- ತುಮಕೂರು: ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಯ ಹಿರಿಯ ಶಾಸಕರಿಗೆ ಕಡೆಗಣನೆ; ಕಾಂಗ್ರೆಸ್ ನಲ್ಲಿ ಬಂಡಾಯದ ಕಾವು
- ಕಾರವಾರ: ಅಂಚೆ ಇಲಾಖೆಯಿಂದ ಬುಕಿಂಗ್, ಪಿಕ್–ಅಪ್ ಮತ್ತು ಡೆಲಿವರಿ ಪಾಲುದಾರರಿಗಾಗಿ ಆನ್ ಲೈನ್ ಅರ್ಜಿ
- ಗ್ಯಾಸ್ ಸಿಲಿಂಡರ್ ಕಳ್ಳತನ ಜಾಲ ಭೇದಿಸಿ ಬೀದರ್ ಪೊಲೀಸರು: ₹9.75 ಲಕ್ಷ ಮೌಲ್ಯದ 55 ಗ್ಯಾಸ್ ಸಿಲಿಂಡರ್ ವಶ | ನಾಲ್ವರು ಆರೋಪಿಗಳ ಬಂಧನ
- 560 ಭೂಮಾಪಕರ ಹುದ್ದೆ: ಸ್ಪರ್ಧಾತ್ಮಕ ಪರೀಕ್ಷೆಗೆ ಒರಿಯಂಟೇಶನ್ ತರಬೇತಿ
- ತಿಪಟೂರು: ನೀರು, ವಿದ್ಯುತ್ ಅಭಾವ ಹಾಗೂ ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಸುದ್ದಿಗೋಷ್ಠಿ | ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
Author: admin
ಪಾವಗಡ: ತಾಲೂಕಿನಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆ ವಿವಿಧೆಡೆ ಅನೇಕ ಹಳೆಯ ಮನೆಗಳು ಮೇಲ್ಚಾವಣಿ ಕುಸಿದಿದೆ. ಕೆಲವು ಮನೆಗಳಿಗೆ ಮಳೆಯ ನೀರು ನುಗ್ಗಿದೆ. ಮಳೆಯ ತೀವ್ರತೆಗೆ ಮೇಕೆ ಮರಿಗಳು ಸಹ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಗ್ಗೆ ಏಳು ಗಂಟೆಗೆ ನಡೆದಿದೆ. ಪಾವಗಡ ತಾಲೂಕಿನ ಸಿಂಗರೆಡ್ಡಿಹಳ್ಳಿ, ಗಂಗಸಾಗರ, ಕ್ಯಾತಗಾನಕೆರೆ, ಬೆಳ್ಳಿ ಬಟ್ಟಲು ಗ್ರಾಮಗಳಲ್ಲಿ ತಲಾ ಒಂದು ಮನೆಯ ಮೇಲ್ಚಾವಣಿ ಕುಸಿದಿದ್ದು ಸಾಸನಕುಂಟೆ ಗ್ರಾಮದಲ್ಲಿ ಎರಡು ಮನೆಗಳ ಮೇಲ್ಚಾವಣಿ ಕುಸಿದು ಬಿದ್ದಿದ್ದು, ವದನಕಲ್ಲು ಗ್ರಾಮದ ಸಣ್ಣೀರಪ್ಪ ಎನ್ನುವವರಿಗೆ ಸೇರಿದ ಮೂರು ಮೇಕೆ ಮರಿಗಳು ಮಳೆಯಲ್ಲಿ ನೆನೆದು ಸಾವನ್ನಪ್ಪಿದೆ. ಮತ್ತೊಂದೆಡೆ ತಾಲೂಕಿನ ನಾಗಲಮಡಿಕೆ ಡ್ಯಾಂ ಸೇರಿದಂತೆ ಮತ್ತಿತರ ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದರೆ. ಕಟಾವು ಹಂತದಲ್ಲಿರುವ ಶೇಂಗಾ ಸೇರಿದಂತೆ ಮತ್ತಿತರ ಬೆಳೆಗಳ ಪಸಲು ಪಡೆಯಲು ರೈತರು ವಾರಸಾಹಾಸ ಪಡುತ್ತಿದ್ದು ನಷ್ಟದ ಭಯದಿಂದ ಜೀವನ ನಡೆಸುತ್ತಿದ್ದಾರೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…
ಪಾವಗಡ : ಕೊರಟಗೆರೆ ಪಟ್ಟಣದಲ್ಲಿ ವಾಲ್ಮೀಕಿ ಜಯಂತಿಯ ಹಿಂದಿನ ದಿನ ರಾತ್ರಿ ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ಪುರಸಭೆ ಇಲಾಖೆ ವಾಲ್ಮೀಕಿ ವಿಗ್ರಹ ತೆರವು ಗೊಳಿಸಿರುವುದನ್ನು ವಿರೋಧಿಸಿ ಪಾವಗಡ ಜಾಗೃತಿ ವೇದಿಕೆ ಅಧ್ಯಕ್ಷರಾದ ಲೋಕೇಶ್ ಪಾಳೇಗಾರ್ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿ, ವಾಲ್ಮೀಕಿ ಸಮಾಜಕ್ಕೆ ಶ್ರೀ ಮಹರ್ಷಿ ವಾಲ್ಮೀಕಿಗೆ ಮಾಡಿರುವ ಅಪಮಾನವನ್ನು ಖಂಡಿಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಲೋಕೇಶ್ ಪಾಳೇಗಾರ್, ರಾಮಾಯಣ ಗ್ರಂಥವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿಯವರ ವಿಗ್ರಹವನ್ನು ತಾಲ್ಲೂಕು ಆಡಳಿತ ರಾತ್ರೋ ರಾತ್ರೋ ತೆರವುಗೊಳಿಸಿ ನಂತರ ಸಮಾಜದ ಮುಖಂಡರನ್ನು ಮನವೊಲಿಸಿ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ಎಂದು ತಾಲೂಕ್ ಆಡಳಿತ ನಾಮಫಲಕ ಹಾಕಿ ವಾಲ್ಮೀಕಿ ನಂತರ ಮತ್ತೆ ವಿಗ್ರಹ ಹಾಗೂ ನಾಮಫಲಕ ತೆರವು ಗೊಳಿಸಿ ಇಡೀ ವಾಲ್ಮೀಕಿ ಸಮಾಜಕ್ಕೆ ಮಾಡಿರುವ ಅವಮಾನವನ್ನು ಖಂಡಿಸಿ, ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ವಾಲ್ಮೀಕಿ ವಿಗ್ರಹ ಮತ್ತು ನಾಮಫಲಕವನ್ನು…
ಬೆಂಗಳೂರು: 2028 ರಲ್ಲೂ ನಾವೇ ಅಧಿಕಾರಕ್ಕೆ ಬಂದು ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಕಾರ್ಯಕ್ರಮ ಮುಂದುವರೆಸುತ್ತೇವೆ. ಮಹಿಳೆಯರು ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ರಕ್ಷಣೆಗೆ ಮುಂದಾಗಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. KPCC ಕಚೇರಿಯ ಭಾರತ್ ಜೋಡೋ ಭವನದಲ್ಲಿ ಸೌಮ್ಯ ರೆಡ್ಡಿಯವರು ಪ್ರದೇಶ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಾತ್ಯತೀತತೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳ ಬಗ್ಗೆ ಸ್ಪಷ್ಟತೆ ಕೊಡುವ ಮೂಲಕ ಕಾರ್ಯಕರ್ತೆಯರನ್ನು ಸಜ್ಜುಗೊಳಿಸಿ ಪಕ್ಷ ಸಂಘಟನೆ ಮಾಡುವ ಸಮರ್ಥ್ಯ ಸೌಮ್ಯರೆಡ್ಡಿಯವರಿಗೆ ಇದ್ದು ಈ ದಿಕ್ಕಿನಲ್ಲಿ ಮುಂದುವರೆಯಿರಿ ಎಂದು ಕರೆ ನೀಡಿದರು. ಬಿಜೆಪಿ ಪಕ್ಷವೇ ಬಹುಜನರ, ದುಡಿಯುವ ವರ್ಗಗಳ, ಶ್ರಮಿಕ ಸಂಸ್ಕೃತಿಯ ವಿರೋಧಿ. ಮುಖ್ಯವಾಗಿ ಬಿಜೆಪಿ ಮಹಿಳಾ ಮೀಸಲಾತಿಯ, ಮಹಿಳಾ ಹಕ್ಕುಗಳ ವಿರೋಧಿ. ಇದನ್ನು ಸಮಸ್ತ ಮಹಿಳೆಯರಿಗೆ ಅರ್ಥ ಮಾಡಿಸುವ ಕೆಲಸ ಮಾಡಿ ಎಂದು ಕರೆ ನೀಡಿದರು. ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ಮಹಿಳೆಯರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ…
ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಅಸಮಾಧಾನ ಇನ್ನೂ ಮುಂದುವರಿದಿದೆ. ಒಂದೆಡೆ ಟಿಕೆಟ್ ಗಾಗಿ ಸಿ.ಪಿ.ಯೋಗೇಶ್ವರ್ ಪಟ್ಟು ಹಿಡಿದಿದ್ದರೆ ಅತ್ತ ಜೆಡಿಎಸ್ ನಿಂದ ಹೆಚ್.ಡಿ.ಕುಮಾರಸ್ವಾಮಿ ನಿಖಿಲ್ ಅಥವಾ ಅನಿತಾ ಅವರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದಾರೆ. ಆದರೆ ಯಾರೇ ಅಭ್ಯರ್ಥಿಯಾದರೂ ಇಲ್ಲಿ ಗೆಲ್ಲಬೇಕಾದರೆ ಯೋಗೇಶ್ವರ್ ಮತ್ತು ಕುಮಾರಸ್ವಾಮಿ ಇಬ್ಬರ ಬೆಂಬಲವೂ ಬೇಕಾಗುತ್ತದೆ. ಇದರ ನಡುವೆ ನಿಖಿಲ್ ಕುಮಾರಸ್ವಾಮಿ ಅಥವಾ ಅನಿತಾ ಕುಮಾರಸ್ವಾಮಿ ಹೆಸರು ಬಲವಾಗಿ ಕೇಳಿಬರುತ್ತಿದೆ. ಚನ್ನಪಟ್ಟಣಕ್ಕೆ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರದಲ್ಲಿ ಸಂಪೂರ್ಣ ಅಧಿಕಾರವನ್ನು ನನಗೆ ನೀಡಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ತಮ್ಮ ಪುತ್ರನನ್ನು ಇಲ್ಲಿಂದ ಕಣಕ್ಕಿಳಿಸಬೇಕು ಎಂದು ಕುಮಾರಸ್ವಾಮಿಯವರಿಗೆ ಚಿಂತನೆಯಿದೆ. ಇನ್ನೊಂದೆಡೆ ನಿಖಿಲ್ ಇಲ್ಲದೇ ಇದ್ದರೆ ಪತ್ನಿ ಅನಿತಾರನ್ನಾದರೂ ಕಣಕ್ಕಿಳಿಸಬೇಕೆಂಬ ಬಯಕೆ ಅವರದ್ದು ಎಂದು ಹೇಳಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತಲೆಗೆ ಇದೀಗ ಹಳೆಯ ಕೇಸ್ ವೊಂದು ಸುತ್ತಿಕೊಂಡಿದ್ದು, ಹಳೆಯ ಕೇಸ್ ಇದೀಗ ರಿ ಓಪನ್ ಆಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 120 ಕ್ಕೂ ಹೆಚ್ಚು ದಿನಗಳಿಂದ ದರ್ಶನ್ ಜೈಲಿನಲ್ಲೇ ಇದ್ದಾರೆ. ಅವರ ಜಾಮೀನು ಅರ್ಜಿ ಇತ್ತೀಚೆಗೆ ಕೆಳಹಂತದ ನ್ಯಾಯಾಲಯದಲ್ಲಿ ತಿರಸ್ಕೃತವಾಗಿತ್ತು. ಈ ಹಿನ್ನಲೆಯಲ್ಲಿ ಅವರು ಹೈಕೋರ್ಟ್ ಮೊರೆ ಹೋಗುತ್ತಿದ್ದಾರೆ. ಆದರೆ ಈ ನಡುವೆ ಅವರಿಗೆ ಹಳೇ ಕೇಸ್ ಕಂಟಕ ತಂದಿದೆ. ಭಗವಾನ್ ಶ್ರೀಕೃಷ್ಣಾ ಎಂಬ ಸಿನಿಮಾವನ್ನು ಯುವ ನಿರ್ಮಾಪಕ ಭರತ್ ಎಂಬವರು ನಿರ್ಮಿಸಿದ್ದರು. ಈ ಸಿನಿಮಾಗೆ ಧ್ರುವನ್ ನಾಯಕರಾಗಿದ್ದರು. ಈ ಸಿನಿಮಾ ಶೂಟಿಂಗ್ ನಡೆಯುತ್ತಿಲ್ಲ ಎಂದು ಧ್ರುವನ್ ನಟ ದರ್ಶನ್ ಬಳಿ ದೂರು ಹೇಳಿದ್ದರು. ಅದರಂತೆ ದರ್ಶನ್ ಕೈಯಲ್ಲಿ ಭರತ್ ಗೆ ಧ್ರುವನ್ ಕರೆ ಮಾಡಿಸಿದ್ದರು. ಧ್ರುವನ್ ಪರವಾಗಿ ಮಾತನಾಡಿದ್ದ ದರ್ಶನ್ ಬೆದರಿಕೆ ಹಾಕಿದ್ದರು. ಘಟನೆ ಬಗ್ಗೆ ಭರತ್ ಇತ್ತೀಚೆಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಬಂಧಿತರಾದ ಬಳಿಕ…
ನಾನು ನಿಮಗೆ ಮತ ಹಾಕಿದ್ದೇನೆ, ನನ್ನ ಸಮಸ್ಯೆ ಪರಿಹರಿಸಿ, ನನಗೊಂದು ಸಿಂಪಲ್ ಮದುವೆ ಮಾಡಿಸಿಕೊಡಿ ಎಂದು ಮತದಾರನೊಬ್ಬ ಶಾಸಕರೊಬ್ಬರಿಗೆ ಬೇಡಿಕೆಯಿಟ್ಟ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರಪ್ರದೇಶದ ಚರಖಾರಿ ಕ್ಷೇತ್ರದ ಶಾಸಕರಾದ ಬ್ರಿಜ್ ಭೂಷಣ್ ರಜಪೂತ್ ಅವರಿಗೆ ಮತದಾರನೊಬ್ಬ ಈ ರೀತಿ ಶಾಕ್ ನೀಡಿದ್ದಾನೆ. ಉತ್ತರ ಪ್ರದೇಶದ ಮಹೋಬಾದ ಪೆಟ್ರೋಲ್ ಬಂಕ್ ಗೆ ಶಾಸಕರ ಕಾರು ಫುಯೆಲ್ ತುಂಬಿಸಿಕೊಳ್ಳಲು ಬಂದಿತ್ತು. ಈ ವೇಳೆ ಬಂಕ್ ನಲ್ಲಿದ್ದ ಉದ್ಯೋಗಿ 44 ವರ್ಷದ ಅಖಿಲೇಂದ್ರ ಖರೆ ಎಂಬಾತ ಸೀದಾ ಶಾಸಕರ ಬಳಿ ಬಂದು, ದಯವಿಟ್ಟು ನನಗೊಂದು ಮದುವೆ ಮಾಡಿಸಿಬಿಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ನಗುತ್ತಾ ಪ್ರತಿಕ್ರಿಯಿಸಿದ ಶಾಸಕ ಬ್ರಿಜ್‌ಭೂಷಣ್, ನಿನಗೆ ಎಂತಹ ವಧು ಬೇಕು? ಎಂದು ಕೇಳಿದ್ದಾರೆ. ಇದಕ್ಕೆ ನನಗೆ ಇದೇ ಸಮುದಾಯದ ವಧು ಬೇಕು ಎನ್ನುವುದೇನಿಲ್ಲ, ಯಾವ ಸಮುದಾಯದ ಹುಡುಗಿಯಾದ್ರೂ ಓಕೆ ಎಂದು ಅಖಿಲೇಂದ್ರ ಉತ್ತರಿಸಿದ್ದಾರೆ. ಬಳಿಕ ಆತನ ಹಿನ್ನೆಲೆ ಕೇಳಿದಾಗ, ತನಗೆ ತಿಂಗಳಿಗೆ 6,000 ರೂಪಾಯಿ ಸಂಬಳ ಬರುತ್ತದೆ. ಸ್ವಲ್ಪ…
ಭೋಪಾಲ್: ಡಿಜೆ ಸೌಂಡಿಗೆ 13 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ. ಸಮರ್ ಬಿಲೋರ್ (13) ಮೃತ ಬಾಲಕ. ಸ್ಥಳೀಯ ಉತ್ಸವದ ವೇಳೆ ಈ ಘಟನೆ ನಡೆದಿದೆ. ಗುಂಪಿನ ನಡುವೆ ಡಿಜೆ ಸೌಂಡಿಗೆ ಸಮರ್ ಕುಣಿಯುತ್ತಿದ್ದ. ಆತ ಇದ್ದಕ್ಕಿದ್ದಂತೆ ಕುಸಿದು ಬಿದ್ದರೂ ಕುಣಿಯುವುದರಲ್ಲಿ ಮಗ್ನರಾಗಿದ್ದ ಇತರರು ಆತನನ್ನು ಗಮನಿಸಲಿಲ್ಲ. ಸ್ವಲ್ಪ ಸಮಯದ ಬಳಿಕ ಸಮರ್ ಬಿದ್ದಿರುವುದನ್ನು ನೋಡಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಆತ ಬದುಕುಳಿಯಲಿಲ್ಲ. ಇನ್ನು ಸಮರ್‌ಗೆ ಬಾಲ್ಯದಿಂದಲೂ ಹೃದ್ರೋಗವಿದೆ. ಆದರೂ ಆತನ ಆರೋಗ್ಯ ಚೆನ್ನಾಗಿಯೇ ಇತ್ತು ಎಂದು ಅವರ ತಾಯಿ ಹೇಳಿದ್ದಾರೆ. ಅಧಿಕ ಶಬ್ದವನ್ನು ದೇಹ ತಡೆದುಕೊಳ್ಳಲು ಸಾಧ್ಯವಾಗದೆ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ವೈದ್ಯರು ಹೇಳುತ್ತಾರೆ. ಈ ಘಟನೆಯ ನಂತರ 40 ರಿಂದ 50 ಡೆಸಿಬಲ್ ಗಿಂತ ಹೆಚ್ಚಿನ ಸ್ಪೀಕರ್ ಗಳನ್ನು ಅಳವಡಿಸದಂತೆ ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ಚಿತ್ರದುರ್ಗ: ಕಾಲೇಜು ಕಟ್ಟಡದಿಂದ ಬಿದ್ದು ಕಾಲೇಜು ವಿದ್ಯಾರ್ಥಿನಿ ಮೃತಪಟ್ಟ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಳ್ಳಕರೆ ಮೂಲದ ಪ್ರೇಮಾ (18) ಮೃತಪಟ್ಟ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಡಾನ್ ಬಾಸ್ಕೊ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಚಳ್ಳಕೆರೆ ಮೂಲದ ಪ್ರೇಮಾ ಕಾಲೇಜು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಚಿತ್ರದುರ್ಗದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಪಾವಗಡ: ಹೋಬಳಿಯ ಶಕ್ತಿಸ್ಥಳವಾಗಿರುವಂತಹ ನಾಡಕಚೇರಿಗೆ ತರಲು ಸೂಕ್ತ ರಸ್ತೆ ಇಲ್ಲದಂತಾಗಿದೆ . ವೈ ಎನ್ ಹೊಸಕೋಟೆ ಹೋಬಳಿಯ ನಾಡಕಚೇರಿ ಬಳಿಯ ರಸ್ತೆ ಕೆಸರು ಗದ್ದೆಯಂತಾಗಿದೆ. ಇದೇ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸುವ ದುಸ್ಥಿತಿ ಇದೆ. ನಾಡಕಚೇರಿ ಪ್ರಾರಂಭವಾಗಿ ಮೂರು ವರ್ಷಗಳು ಕಳೆದರೂ ಕಾಂಪೌಂಡ್ ನಿರ್ಮಿಸಿಲ್ಲ , ಕಚೇರಿಗೆ ಹೋಗಲು ದಾರಿ ಇಲ್ಲ. ಜೊತೆಗೆ ನಾಡಕಚೇರಿ ಇದೆ ಎನ್ನುವ ಸೂಚನಾ ಫಲಕವು ಸಹ ಇಲ್ಲದಿರುವುದು ವಿಪರ್ಯಾಸವೇ ಸರಿ. ಇದೊಂದೇ ಅಲ್ಲದೆ ನಾಡ ಕಚೇರಿಯಲ್ಲಿ ಇರಬೇಕಾದಂತಹ ಮೂಲ ಸೌಕರ್ಯಗಳು ಇಲ್ಲದಿರುವುದು ಇಲ್ಲಿನ ಆಡಳಿತ ವೈಖರಿಗಿಡಿದ ಕೈಗನ್ನಡಿಯಾಗಿದೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಗತಿಪರರು ಹಲವು ಬಾರಿ ಮನವಿ ಮಾಡಿದರು ಸಹ ಯಾವುದೇ ಗಮನಹರಿಸಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2024-25ನೇ ಸಾಲಿಗೆ ಪರಿಶಿಷ್ಟ ಜಾತಿಯ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಗೆ ಸೇರಿದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಪದವಿ/ ಸ್ನಾತಕೋತ್ತರ ಪದವಿ ಹೊಂದಿರುವ ಇಬ್ಬರು ಅಭ್ಯರ್ಥಿಗಳಿಗೆ ತುಮಕೂರು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಕಚೇರಿಯಲ್ಲಿ ಒಂದು ವರ್ಷದ ಅವಧಿಗೆ ಅಪ್ರೆಂಟಿಸ್ ತರಬೇತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಈ ತರಬೇತಿಯು 2025ನೇ ದಿನದರ್ಶಿ(ಕ್ಯಾಲೆಂಡರ್)ಯ ಜನವರಿ ಮಾಹೆಯಿಂದ ಪ್ರಾರಂಭಗೊಂಡು ಡಿಸೆಂಬರ್ 2025ಕ್ಕೆ ಕೊನೆಗೊಳ್ಳಲಿದೆ. ರಾಜ್ಯದಲ್ಲಿ ಕಾನೂನಾತ್ಮಕವಾಗಿ ಸ್ಥಾಪಿತಗೊಂಡ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದ, ಕಂಪ್ಯೂಟರ್ ಜ್ಞಾನ ಇರುವ, ಕನ್ನಡ ಭಾಷೆ ಬಳಕೆಯಲ್ಲಿ ಪ್ರಬುದ್ಧತೆ ಇರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿಯ ಇಬ್ಬರು ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಸಂದರ್ಶನದ ಮೂಲಕ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳ ವಯಸ್ಸು ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕದಂದು 35 ವರ್ಷ ಮೀರಿರಬಾರದು. ಅರ್ಜಿ ಲಕೋಟೆಯ ಮೇಲೆ ಕಡ್ಡಾಯವಾಗಿ “ವಿಶೇಷ ಘಟಕ…