Author: admin

ತುಮಕೂರು:  ಮಧುಗಿರಿ ಅಬಕಾರಿ ವಲಯಕ್ಕೆ ಸಂಬಂಧಿಸಿದಂತೆ  29ನೇ ತಾರೀಕು  ದೂರು ದಾಖಲಾಗಿದ್ದು,  ಮಧುಗಿರಿ ವಲಯ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪದ್ಮ ಎಂಬ ಮಹಿಳೆಯನ್ನು ಕಳೆದ 4 ವರ್ಷದಿಂದ ಅನಧಿಕೃತವಾಗಿ ಕೆಲಸಕ್ಕೆ ನೇಮಿಸಿಕೊಂಡು ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಕರ್ತವ್ಯ ಲೋಪ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಾಮಾಜಿಕ ಹೋರಾಟಗಾರ ಮಹೇಶ್ ಅವರು ಈ ದೂರನ್ನು ನೀಡಿದ್ದಾರೆ.  25–09–24 ರಂದು ಬೆಂಗಳೂರು ಅಬಕಾರಿ ಕಛೇರಿಗಳಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಟೇಲ್ ಮತ್ತು ಉಪಲೋಕಯುಕ್ತ ಬಿ.ವೀರಪ್ಪ ರವರು ನಡೆಸಿದ ಕಾರ್ಯಾಚರಣೆ ವೇಳೆ ಅಬಕಾರಿ ನಿರೀಕ್ಷಕರು ಅನಧಿಕೃತವಾಗಿ ಖಾಸಗಿ ವ್ಯಕ್ತಿಗಳನ್ನು ನೇಮಿಸಿಕೊಂಡು ವೇತನ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಇದೇ ರೀತಿಯಲ್ಲಿಯೇ ಮಧುಗಿರಿ ಅಬಕಾರಿ ಕಛೇರಿಯಲ್ಲಿ ನಡೆದಿರುತ್ತದೆ  ಎಂದು ತುಮಕೂರು ಅಬಕಾರಿ ಉಪ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ಅವರು ತಿಳಿಸಿದ್ದು, ಈ ಸಂಬಂಧ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಜರುಗಿಸಿ ಅಮಾನತು ಮಾಡುವಂತೆ…

Read More

ವೈ.ಎನ್.ಹೊಸಕೋಟೆ : ಹೋಬಳಿಯ ಹನುಮಂತನಹಳ್ಳಿ ಗ್ರಾಮದ ಬಡಗಿ ತಿಮ್ಮರಾಯಪ್ಪರವರ ಮನೆಯಲ್ಲಿ ಬುಕ್ಕರಾಯರ ಕಾಲಕ್ಕೆ ಸಂಬಂದಿಸಿದ ತಾಮ್ರ ಶಾಸನ ಪತ್ತೆಯಾಗಿದೆ. ಈ ಭಾಗದ ಇತಿಹಾಸ ಸಂಶೋಧಕ ಹೊ.ಮ.ನಾಗರಾಜು ಸ್ಥಳೀಯ ಜಾನಪದ ಕಲಾವಿದರಾದ ಟಿ.ಎ.ಶಿವಣ್ಣರ ಸಹಕಾರದಿಂದ ಶಾಸನವನ್ನು ಪತ್ತೆಹಚ್ಚಿದ್ದಾರೆ. ಅಷ್ಟವಧಾನಿ ಗುರುವೇಪಲ್ಲಿ ನರಸಿಂಹುಲು ರವರ ಸಹಕಾರದಿಂದ ಶಾಸನವನ್ನು ಓದಲಾಗಿದ್ದು, ಗೌರಿಬಿದನೂರು ತಾಲ್ಲೂಕಿನಲ್ಲಿರುವ ನಗರಗೆರೆ ಗ್ರಾಮದ ರಚನೆಯ ವಿಷಯ ಒಳಗೊಂಡಿದೆ ಎಂದಿದ್ದಾರೆ. ಶಾಸನ ಫಲಕವು 12 ಇಂಚು ಎತ್ತರ 6 ಇಂಚು ಅಗಲ ಅಳತೆಯನ್ನು ಹೊಂದಿದೆ. ದಪ್ಪದ ತಾಮ್ರದ ಹಲಗೆಯ ಎರಡು ಮುಖಗಳ ಮೇಲೆ ಶಾಸನವನ್ನು ಕೆತ್ತಲಾಗಿದ್ದು, ಒಟ್ಟು 80 ಸಾಲುಗಳಿವೆ. ಅಕ್ಷರಗಳು ಕನ್ನಡ ಲಿಪಿಯಾಗಿದ್ದು, ತೆಲುಗು ಭಾಷೆಯನ್ನು ಒಳಗೊಂಡ ಶಾಸನ ಇದಾಗಿದೆ. ಗ್ರಾಮಕ್ಕೆ ರಾಮದೇವರುಗಳು ದಯಮಾಡಿದಾಗ ಬರೆದ ರುಜುವು ಎಂದು ಶಾಸನದ ಪ್ರಾರಂಭದ ಸಾಲುಗಳಲ್ಲಿ ತಿಳಿಸಲಾಗಿದೆ. ಆದರೆ ಶಾಸನದಲ್ಲಿ ಶಾಸನ ರಚನಾ ಕಾಲ ಲಭ್ಯವಿರುವುದಿಲ್ಲ. ನಿಡಗಲ್ಲು, ಹೊಸಕೋಟೆ ಹರತಿ ಪಾಳೇಗಾರರ ಮೂಲಪುರುಷನಾದ ಆನೆಗೊಂದಿಯ ತಿಪ್ಪನಾಯಕನು ಶಾಲಿ ಶಕ 1157 ರಲ್ಲಿ ಬಹದ್ದೂರ್ ಮಲ್ಲಿಕನ ಮೇಲೆ…

Read More

ತುಮಕೂರು:  ರಾಜ್ಯ ಉಪಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದಲ್ಲಿ ಅಕ್ಟೋಬರ್ 18ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:30 ಹಾಗೂ ಮ.2:30 ರಿಂದ ಸಂಜೆ 5 ಗಂಟೆಯವರೆಗೆ ನಗರದ ಡಾ.ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕ ಕುಂದು–ಕೊರತೆ ಅಹವಾಲುಗಳನ್ನು ಸ್ವೀಕರಿಸಲಿದ್ದು, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಎ.ವಿ. ಲಕ್ಷ್ಮೀನಾರಾಯಣ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಉಪ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹಾಗೂ ಉಪಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸಭೆಯನ್ನು ಉದ್ಘಾಟಿಸುವರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಜಯಂತ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ಜಿಲ್ಲಾ…

Read More

ತುಮಕೂರು:  ಜಿಲ್ಲೆಯಾದ್ಯಂತ ಅಕ್ಟೋಬರ್ 21 ರಿಂದ ನವೆಂಬರ್ 20ರವರೆಗೆ ಹಸು, ಎಮ್ಮೆ, ಹಂದಿ ಸೇರಿ ಎಲ್ಲಾ ಜಾನುವಾರುಗಳಿಗೆ ಕಾಲು–ಬಾಯಿ ಜ್ವರ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪಶುಪಾಲಕರ ಮನೆ-ಮನೆಗೆ ಭೇಟಿ ನೀಡಿ ಲಸಿಕೆ ನೀಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸಂಜೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 5 ಲಕ್ಷ ಜಾನುವಾರುಗಳಿದ್ದು, ಪಶುಪಾಲನಾ ಇಲಾಖಾ ಸಿಬ್ಬಂದಿ, ಹಾಲು ಉತ್ಪಾದಕ ಸಹಕಾರ ಸಂಘಗಳ ಸಿಬ್ಬಂದಿ, ಮೈತ್ರಿ ಕಾರ್ಯಕರ್ತರು ಹಾಗೂ ಪಶುಸಖಿಯರು ಮನೆ-ಮನೆಗೆ ಭೇಟಿ ನೀಡಿ ಜಾನುವಾರುಗಳಿಗೆ ಶೇ.100ರಷ್ಟು ಲಸಿಕೆ ನೀಡಬೇಕು ಎಂದು ತಿಳಿಸಿದರು. ಲಸಿಕೆ ನೀಡುವುದರಿಂದ ಜಾನುವಾರುಗಳಲ್ಲಿ ಕಂಡು ಬರುವ ಕಾಲುಬಾಯಿ ಜ್ವರವನ್ನು ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ಲಸಿಕಾ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಎಲ್ಲಾ ರೈತರು, ಪಶುಪಾಲಕರು, ಜಾನುವಾರು ಸಾಕಾಣಿಕೆದಾರರಿಗೆ ಅರಿವು ಮೂಡಿಸಬೇಕು ಎಂದು ನಿರ್ದೇಶನ ನೀಡಿದರು. ಸಭೆಯಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು (ಆಡಳಿತ) ಡಾ.ಗಿರೀಶ್ ಬಾಬು…

Read More

ತುಮಕೂರು: ಸರ್ಕಾರವು ತನ್ನ ಆಯವ್ಯಯದಲ್ಲಿ ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣಕ್ಕಾಗಿ 11,447 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಾ ನಗರ ಪಾಲಿಕೆ ಸಹಯೋಗದಲ್ಲಿ ನಗರದ ಬಾಲ ಭವನ ಸಭಾಂಗಣದಲ್ಲಿ ಗುರುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಜಾತಿ ಗಣತಿ ಆಧಾರದ ಮೇಲೆ ಶೇಕಡಾ 3ರಷ್ಟಿದ್ದ ಮೀಸಲಾತಿಯನ್ನು ಶೇ. 7.5ಕ್ಕೆ ಹೆಚ್ಚಿಸಲಾಗಿದೆ. ಉದ್ಯೋಗ ಮತ್ತು ಶಿಕ್ಷಣಕ್ಕೆ ಮಾತ್ರ ಈ ಮೀಸಲಾತಿ ಅನ್ವಯವಾಗಲಿದೆ ಎಂದು ತಿಳಿಸಿದರು. ಸ್ವಾವಲಂಬಿ ಬದುಕು ನಡೆಸಲು ಪರಿಶಿಷ್ಟ ವರ್ಗದ ಸುಮಾರು 5,000 ಯುವಕ/ಯುವತಿಯರಿಗೆ ವಿವಿಧ ತರಬೇತಿ ನೀಡಲಾಗಿದೆಯಲ್ಲದೆ 74,367 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗಿದೆ. ರಾಜ್ಯದಲ್ಲಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ 12 ಬುಡಕಟ್ಟು ಸಮುದಾಯದ 48,000 ಕುಟುಂಬಗಳಿಗೆ ಪೌಷ್ಟಿಕ ಆಹಾರ ಒದಗಿಸಲು…

Read More

ಸರಗೂರು: ದಾರ್ಶನಿಕ ಮಹಾಶಯರ ಜಯಂತಿಗಳ ಆಚರಣೆಯನ್ನು ಆಚರಿಸಲೆಂದೇ ಸರಕಾರ ನಿಗದಿತ ದಿನದಂದು ರಜಾ ಘೋಷಣೆ ಮಾಡಿ ಅನುವು ಮಾಡಿಕೊಡುತ್ತದೆ ಎಂದು ಪ.ಪಂ. ಮುಖ್ಯಾಧಿಕಾರಿ ಮಂಜುನಾಥ ತಿಳಿಸಿದರು. ತಾಲೂಕಿನ ಪಟ್ಟಣದ ಪ.ಪಂ. ಆವರಣದಲ್ಲಿ ಗುರುವಾರ ದಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮ ಸಡಗರದಿಂದ ಪೋಟೋಗೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದರು. ಸ್ವಾತಂತ್ರ್ಯ ದಿನಾಚರಣೆ, ಗಾಂಧಿಜಯಂತಿ ಮೊದಲಾದ ರಾಷ್ಟ್ರೀಯ ಹಬ್ಬಗಳ ಹಾಗೆ ಇದು ಕೇವಲ ಸರಕಾರಿ ಆಚರಣೆ ಮಾತ್ರವಲ್ಲ, ಬದಲಾಗಿ ವಾಲ್ಮೀಕಿ, ಬೇಡ ಸಮುದಾಯದ ಮನೆಮನೆಯ ಹಬ್ಬವಾಗಿ ಸಮುದಾಯದೊಳಗೆ ಚಲಿಸುತ್ತದೆ. ಈ ಚಲನೆ ಕನಿಷ್ಠ ಒಂದು ತಿಂಗಳತನಕ ಜೀವಂತವಿರುತ್ತದೆ ಎಂದರು. ಆದ್ದರಿಂದ ಸದರಿ ದಿನಗಳಂದೇ ದಿನಾಚಾರಣೆಯನ್ನು ಆಚರಿಸುವುದು ಸೂಕ್ತವಾಗಿರುತ್ತದೆ. ಶ್ರೀ ಮಹರ್ಷಿ ವಾಲ್ಮೀಕಿ ರಚಿಸಿರುವಂತಹ ರಾಮಾಯಣದಂತಹ ಉತ್ತಮ ಕೊಡುಗೆಗಳನ್ನು ಅನುಸರಿಸಿದ್ದೇ ಆದಲ್ಲಿ, ಎಲ್ಲಾ ಸಮುದಾಯದವರು ಮುಂದೆ ಬರಲು ಅನುಕೂಲಕವಾಗಲಿದೆ ಎಂದು ತಿಳಿಸಿದರು. ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಶ್ರೀನಿವಾಸ.ಮಾತನಾಡಿದರು. ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷ ಶಿವಕುಮಾರ್, ಸದಸ್ಯರು ವಿನಾಯಕ ಪ್ರಸಾದ್,ಉಮರಾಮಚಂದ್ರ, ಚೆಲುವ ಕೃಷ್ಣ,ನೂರಳಾಸ್ವಾಮಿ,ಸಣ್ಣತಾಯಮ್ಮ, ದಿವ್ಯ…

Read More

ತುಮಕೂರು: ಹುಟ್ಟುಹಬ್ಬದ ಸಂದರ್ಭದಲ್ಲಿ ತಲ್ವಾರ್ ನಿಂದ ಕೇಕ್ ಕತ್ತರಿಸಿ ನಡುರಸ್ತೆಯಲ್ಲಿ ಬೀದಿಯ ವಾತಾವರಣ ಸೃಷ್ಟಿ ಮಾಡಿದ್ದ ಆರೋಪಿ ಸೈಯದ್ ಶರೂಫ್ ಎಂಬಾತನನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 12ರಂದು ರಾತ್ರಿ 10:30ರ ಸಂದರ್ಭದಲ್ಲಿ ಗುಬ್ಬಿ ಪಟ್ಟಣದ ಮಧ್ಯಭಾಗದಲ್ಲಿ ಸಾರ್ವಜನಿಕರ ಸಂಚಾರಕ್ಕೆ ತಡೆಯೊಡ್ಡಿ ರಸ್ತೆ ಮಧ್ಯದಲ್ಲಿ ತಲ್ವಾರ್ನಿಂದ ಕೇಕ್ ಕತ್ತರಿಸಿ ತನ್ನ ಸಹಚರರೊಂದಿಗೆ ಕೇಕೆ ಹಾಕಿದ್ದನು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಕಾರವಾರ: ಶ್ರೀ ಮಹರ್ಷಿ ವಾಲ್ಮೀಕಿ ಅವರು ತಾವು ರಚಿಸಿದ ರಾಮಾಯಣ ಮಹಾಕಾವ್ಯದಲ್ಲಿ ಧರ್ಮ, ಸಾಹಿತ್ಯ, ಪರಿಸರ ರಕ್ಷಣೆ, ಮಹಿಳೆಯರಿಗೆ ಗೌರವ ನೀಡುವುದು ಸೇರಿದಂತೆ ಹಲವು ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹೇಳಿದರು. ಅವರು ಗುರುವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾರದ ಮುನಿಗಳಿಂದ ಪರಿವರ್ತನೆಗೊಂಡ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯವನ್ನು ರಚಿದರು. ಎಲ್ಲರೂ ಜೀವನದಲ್ಲಿ ಸತ್ಯದ ಪರವಾಗಿ ನಿಂತುಕೊಂಡಾಗ ಮಾತ್ರ ಭವಿಷ್ಯದಲ್ಲಿ ಮುಂದೆ ಬರಲು ಸಾಧ್ಯವಿದೆ. ಸಾಧನೆಯ ಹಾದಿಗೆ ಕಷ್ಟ ಕಾರ್ಪಣ್ಯಗಳು ಅಡ್ಡಿಯಾಗಲಿದ್ದು, ಅವುಗಳನ್ನು ಎದುರಿಸಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದಲ್ಲಿ ಯಶಸ್ಸಿನ ಪ್ರತಿಫಲ ದೊರೆಯಲಿದೆ ಎಂಬುದನ್ನು ರಾಮಾಯಣದಲ್ಲಿ ನೋಡಬಹುದಾಗಿದೆ ಎಂದು ಹೇಳಿದರು. ರಾಮಾಯಣದಲ್ಲಿ ಕೇವಲ ಮನುಷ್ಯರಲ್ಲದೇ ಪ್ರಾಣಿ, ಪಕ್ಷಿ, ಪರಿಸರದ ಬಗ್ಗೆ ಬರೆಯಲಾಗಿದೆ.…

Read More

ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿ ಕೇಂದ್ರದಲ್ಲಿರುವ ಶತಮಾನ ಕಂಡ ಸರ್ಕಾರಿ ಬಾಲಕರ ಪಾಠಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವವನ್ನು ಆಚರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಐ.ಎ.ನಾರಾಯಣಪ್ಪ, ದೈಹಿಕ ಶಿಕ್ಷಕರಾದ ಮಾರಪ್ಪ, ಶಿಕ್ಷಕಿಯರಾದ ನಿರ್ಮಲಾ, ಹೇಮಲತಾ, ಶ್ರೀದೇವಿ, ಅತಿಥಿ ಶಿಕ್ಷಕಿ ಶಿಲ್ಪ, ವಿದ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿ ಹಾಜರಿದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಮನತುಂಬಿ ಹಾಡುವೆನು…! ಮಾನವ ತನ್ನ ಭಾವನೆಯನ್ನು ಅಭಿವ್ಯಕ್ತ ಪಡಿಸುವ ಅಮೂಲ್ಯ ಮಾಧ್ಯಮವೇ ಕಲೆ, ಕಲೆ ನಮ್ಮ ದೇಹ ಮನಸುಗಳ ಎರಡನ್ನು ಸಂಸ್ಕರಿಸಿ ಬದುಕನ್ನು ರೂಪಿಸುತ್ತದೆ. ಪ್ರಕೃತಿ ನಾನಾ ಕಲೆಗಳ ಮೂಲ ಕಲೆ ಕಲಾವಿದರು, ಬದುಕಿನ ಅನರ್ಘ್ಯ ರತ್ನಗಳು ಕಲೆ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ದೊಡ್ಡ ಮನಸ್ಸು ನಮ್ಮಲ್ಲಿರಬೇಕು ಅದೇ ಭಕ್ತಿರಸ ಗಾನಸುಧ ಗಾಯನ. ವಲಚಿ ನವರಾಗ ಮಾಲೀಕಾವರಣ ಆದಿತಾಳ ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್ ರಚನೆಯಲ್ಲಿ ಚೆನ್ನಾಗಿ ಮೂಡಿ ಬಂತು. ವಾತಾಪಿ ಗಣಪತಿo ಆದಿತಾಳ ಹಂಸಧ್ವನಿ ರಾಗ ಮುತ್ತುಸ್ವಾಮಿ ದೀಕ್ಷಿತರ ರಚನೆಯ ಅರ್ಥಗರ್ಭಿತ ಸಾಹಿತ್ಯ ಅಷ್ಟೇ ಮಧುರವಾದ ರಾಗ ಸಂಯೋಜನೆ ಯಲ್ಲಿ ಮೂಡಿಬಂತು. ಸರಸ್ವತಿ ನಮೋಸ್ತುತೆ ರೂಪಕ ತಾಳ ಸರಸ್ವತಿ ರಾಗ ಜನನಿ ಜನನಿ ಆದಿತಾಳ ರೇವತಿ ರಾಗ ಹಾಡುಗಳನ್ನು ಸವಿತಾ ಕೋಡಂದೂರ್ ಮತ್ತು ಸಿಂಚನ ಲಕ್ಷ್ಮಿ ಕೊಡಂದೂರು ಅಮ್ಮ ಮಗಳ ದ್ವಂದ್ವ ಹಾಡುಗಾರಿಕೆ ಸುಶ್ರವ್ಯವಾಗಿ ಮೂಡಿ ಬಂತು. ಐಗಿರಿ ನಂದಿನಿ ,ಕುರೈ ಒಂಡ್ರುಂ ಶಿವರಂಜಿನಿ ರಾಗವನ್ನು ಸಿಂಚನ ಲಕ್ಷ್ಮಿ ಕೋಡಂದೂರು ಹಾಡಿ…

Read More