ರಾಜ್ಯದ ವಿವಿಧೆಡೆ ಹಿಂಗಾರು ಮಳೆ ಚುರುಕುಗೊಂಡಿದ್ದು, ಉತ್ಪಾದನೆ ಕುಂಠಿತವಾಗಿ ತರಕಾರಿಗಳ ಬೆಲೆ ಮತ್ತೆ ಏರಿಕೆಯಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ತರಕಾರಿಗಳ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಕಂಡು ಬಂದಿದೆ.
ಬೆಂಗಳೂರು ಸೇರಿದಂತೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಶಿವಮೊಗ್ಗ, ಬಳ್ಳಾರಿ, ರಾಯಚೂರು, ಹಾಸನ , ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕೈಗೆ ಬಂದ ಫಸಲು ನೆಲಕಚ್ಚಿದೆ.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಕೆಜಿಗೆ ಎಲ್ಲಾ ತರಕಾರಿಗಳ ಬೆಲೆ 10 ರೂ. ಏರಿಕೆಯಾಗಿದೆ. ಅದರಲ್ಲೂ ಲಾಟರಿ ಬೆಳೆ ಎಂದೇ ಕರೆಯುವ ಟೊಮೆಟೋ ಬೆಲೆ ಏರಿಕೆಯಾಗುತ್ತಲೇ ಇದೆ. ಮಳೆ ಹೆಚ್ಚಾದ ಕಾರಣ ಗಿಡದಲ್ಲಿ ಇದ್ದ ಟೊಮ್ಯಾಟೋ ನಾಶವಾಗಿದ್ದು ಬೆಲೆ ಏರಿಕೆಯಾಗಿದೆ.
ರಾಜ್ಯದಲ್ಲೇ ದೊಡ್ಡ ಮಾರುಕಟ್ಟೆಯಾದ ಕೋಲಾರ ಮಾರುಕಟ್ಟೆಯಿಂದ ರಾಜ್ಯ ಹಾಗೂ ಅಂತಾರಾಜ್ಯಗಳಿಗೆ ಟೊಮ್ಯಾಟೋ ಸರಬರಾಜು ಆಗುತ್ತದೆ. ಆದರೆ ಅಲ್ಲೇ ನಿರೀಕ್ಷಿತ ಪ್ರಮಾಣದಲ್ಲಿ ಮಾಲು ಬರುತ್ತಿಲ್ಲ . ಹಾಗಾಗಿ ಕೆಜಿಗೆ 60ರೂ. ನಿಂದ 70 ರೂ.ಗೆ ಮಾರಾಟವಾಗುತ್ತಿದೆ.
ನಾಟಿ ಬೀನ್ಸ್ ನೂರರ ಗಡಿದಾಟಿ ಮುನ್ನುಗ್ಗುತ್ತಲೆ ಇದೆ. ಕೆಜಿಗೆ 120 ರೂ.ಗೆ ಮಾರಾಟವಾಗುತ್ತದೆ. ರಿಂಗ್ ಬೀನ್ಸ್ ಕೂಡ 100 ರೂ. ಇದೆ. ಅದೇ ರೀತಿ ಕ್ಯಾರೆಟ್ 60ರೂ., ಮೂಲಂಗಿ 40ರೂ., ಕ್ಯಾಪ್ಸಿಕಂ 80ರೂ., ಹೀರೆಕಾಯಿ 60ರೂ., ಬದನೆ 50ರೂ., ನವಿಲುಕೋಸು 50ರೂ., ಆಲೂಗೆಡ್ಡೆ 50ರೂ.. ಸೌತೆಕಾಯಿ 30ರೂ., ಗ್ರೀನ್ ಚಿಲ್ಲಿ 80ರೂ., ನುಗ್ಗೆಕಾಯಿ 120ರೂ.ಗೆ ಚಿಲ್ಲರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296