Subscribe to Updates
Get the latest creative news from FooBar about art, design and business.
- ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಸಿಎಂ ಕರ್ನಾಟಕ ಭೇಟಿ ಮುಂದೂಡಿಕೆ
- ಬೀದರ್: ಬಸವಕಲ್ಯಾಣದಲ್ಲಿ ಕೆರೆಯಂತಾದ ರಸ್ತೆಗಳು; ಗುಂಡಿಗಳಲ್ಲಿ ಈಜಾಡಿದ ಮಕ್ಕಳು!
- ಸರಗೂರು: ತಾಯಿ ಚಿಕ್ಕದೇವಮ್ಮ ಬೆಟ್ಟದಲ್ಲಿ ಮೂರನೇ ಆಷಾಢ ಶುಕ್ರವಾರದ ಸಂಭ್ರಮ; ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ
- ಸರಗೂರು: ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ಅಹಮದ್ ಖಾನ್ ಸೆರ್
- ತಿಪಟೂರು: ಆ.12ರಿಂದ ಭೀಮನ ಅಮಾವಾಸ್ಯೆ ಮಹೋತ್ಸವ
- ಆ.3 ರಿಂದ ಕೋಟೆ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವ
- ತುಮಕೂರು: ಆ.3ರಿಂದ ಕೊಲ್ಲಾಪುರದಮ್ಮ, ಕರುಗಳಮ್ಮ ಜಾತ್ರಾ ಮಹೋತ್ಸವ
- ಪಾವಗಡ: ವಸತಿ ಶಾಲೆಯಿಂದ ಓಡಿ ಹೋಗಿದ್ದ ವಿದ್ಯಾರ್ಥಿಗಳು ಪತ್ತೆ
Author: admin
ಅಸ್ಸಾಂ: ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಬೆನ್ನಲ್ಲೇ ಉದ್ರಿಕ್ತ ಗ್ರಾಮಸ್ಥರು ಶಾಲೆಗೆ ಬೆಂಕಿಯಿಟ್ಟು ಧ್ವಂಸಗೊಳಿಸಿದ ಘಟನೆ ಕರೀಂಗಂಜ್ ನ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ. ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಜೊತೆಗೆ ಈ ಶಾಲೆಯ ಶಿಕ್ಷಕ ಅಸಭ್ಯವಾಗಿ ವರ್ತಿಸುತ್ತಿದ್ದ. ವಿದ್ಯಾರ್ಥಿನಿಯರಿಗೆ ಅಶ್ಲೀಲ ಚಿತ್ರ ನೋಡುವಂತೆ ಒತ್ತಡ ಹಾಕುತ್ತಿದ್ದ, ಬಳಿಕ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿನಿಯೊಬ್ಬಳು ಶಿಕ್ಷಕ ತನಗೆ ಅಶ್ಲೀಲ ಚಿತ್ರ ತೋರಿಸಿ, ಮೈ ಸ್ಪರ್ಶಿಸಿ ಕಿರುಕುಳ ನೀಡುತ್ತಿದ್ದಾನೆ ಎಂದು ತನ್ನ ಮನೆಯಲ್ಲಿ ಪೋಷಕರ ಬಳಿ ಹೇಳಿಕೊಂಡಿದ್ದಳು. ಇದರಿಂದ ಕೆಂಡಾಮಂಡಲವಾದ ಪೋಷಕರು ಗ್ರಾಮಸ್ಥರೊಂದಿಗೆ ಶಾಲೆಗೆ ಬಂದಿದ್ದು, ಶಿಕ್ಷಕನನ್ನು ವಿಚಾರಿಸಲು ಮುಂದಾಗಿದ್ದಾರೆ. ಈ ವೇಳೆ ಶಿಕ್ಷಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಸಾರ್ವಜನಿಕರು ಶಾಲೆಯನ್ನು ಧ್ವಂಸಗೊಳಿಸಿ ಬೆಂಕಿಯಿಟ್ಟಿದ್ದಾರೆ. ಸದ್ಯ ಕಾಮುಕ ಶಿಕ್ಷಕನ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…
ಚೆನ್ನೈ: ಭಾರತೀಯ ಕೋಸ್ಟ್ ಗಾರ್ಡ್ ಮಹಾನಿರ್ದೇಶಕ ರಾಕೇಶ್ ಪಾಲ್ ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ರಾಕೇಶ್ ಪಾಲ್ ಶನಿವಾರ ಚೆನ್ನೈಗೆ ಬಂದಿದ್ದ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ. 1989ರಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಸೇರಿದ್ದ ಪಾಲ್, ಜುಲೈ 2023ರಲ್ಲಿ ಭಾರತೀಯ ಕೋಸ್ಟ್ ಗಾರ್ಡ್‌ನ ಮಹಾ ನಿರ್ದೇಶಕರಾಗಿ ನೇಮಕಗೊಂಡರು. ಕಳೆದ ತಿಂಗಳಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ತಮ್ಮ ವಿಶೇಷ ಸೇವೆ ವಿಶಿಷ್ಟ ಸೇವಾ ಮೆಡಲ್ ಪಡೆದುಕೊಂಡಿದ್ದರು. ಕೋಸ್ಟ್ ಗಾರ್ಡ್‌ನ ಮೊದಲ ಗನ್ನರ್ ಎಂಬ ಮನ್ನಣೆ ಹೊಂದಿದ್ದ ಅವರು, 2013 ರಲ್ಲಿ ತತ್ರಾಕ್ಷಕ್ ಪದಕ (ಟಿಎಂ) ಮತ್ತು 2018 ರಲ್ಲಿ ಅವರ ವಿಶಿಷ್ಟ ಸೇವೆಗಾಗಿ ಅಧ್ಯಕ್ಷ ತತ್ರಾಕ್ಷಕ್ ಪದಕ (ಪಿಟಿಎಂ) ಸಹ ಪಡೆದುಕೊಂಡಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
ಸಹೋದರ ಸಹೋದರಿಯರ ನಡುವಿನ ಸಂಬಂಧವು ತುಂಬಾ ಪವಿತ್ರವಾದದ್ದು ಎಂದು ಭಾವಿಸಲಾಗುತ್ತದೆ. ಆದರೆ ಇಲ್ಲೊಂದು ಕಡೆಯಲ್ಲಿ ರಕ್ತ ಸಂಬಂಧಕ್ಕೆ ಬೆಲೆ ನೀಡದೇ ಅಣ್ಣನೊಂದಿಗೆ ತಂಗಿಯನ್ನೇ ಮದುವೆ ಮಾಡುವ ವಿಚಿತ್ರವಾದ ಸಂಪ್ರದಾಯವಿದೆ. ಭಾರತದ ಈ ಬುಡಕಟ್ಟು ಜನಾಂಗದಲ್ಲಿ ಸಹೋದರಿಯನ್ನೇ ಮದುವೆ ಆಗುವ ವಿಚಿತ್ರ ಸಂಪ್ರದಾಯವಿದೆ.ಈ ಬುಡಕಟ್ಟಿನಲ್ಲಿ ಒಡಹುಟ್ಟಿದವರು ವಯಸ್ಸಿಗೆ ಬಂದ ನಂತರದಲ್ಲಿ ಗಂಡ ಹೆಂಡತಿಯಾಗುತ್ತಾರೆ. ಛತ್ತೀಸ್‌ಗಢದಲ್ಲಿ ಬಾಸ್ಟರ್ ಪ್ರಾಂತ್ಯದಲ್ಲಿ ಧುರ್ವಾ ಎಂಬ ಬುಡಕಟ್ಟು ಜನಾಂಗದವರು ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಬುಡಕಟ್ಟು ಜನಾಂಗದವರು ತಮ್ಮದೇ ಅದ ಆಚಾರ ವಿಚಾರ, ವಿಚಿತ್ರ ಪದ್ಧತಿಯಿಂದಲೇ ಗಮನ ಸೆಳೆದಿದ್ದಾರೆ. ಈ ಬುಡಕಟ್ಟು ಜನಾಂಗದಲ್ಲಿ ಹೆತ್ತವರೇ ತಮ್ಮ ಇಬ್ಬರು ಮಕ್ಕಳಾದ ಅಣ್ಣ ತಂಗಿಯರಿಗೆ ಮದುವೆ ಮಾಡುತ್ತಾರೆ. ಮಗಳನ್ನು ಮಗನಿಗೆ ಮದುವೆ ಮಾಡುವ ಪದ್ಧತಿ ಈ ಗ್ರಾಮದಲ್ಲಿ ಹಲವು ವರ್ಷಗಳಿಂದಲೇ ನಡೆಯುತ್ತಿದೆ. ಇದಕ್ಕೆ ಕಾರಣ ಈ ಧುರ್ವಾ ಬುಡಕಟ್ಟು ಜನರು ರಕ್ತ ಸಂಬಂಧಗಳ ಬಗ್ಗೆ ನಂಬಿಕೆಯನ್ನು ಇಟ್ಟಿಲ್ಲ. ಇದೇ ಕಾರಣದಿಂದಾಗಿ ಈ ಬುಡಕಟ್ಟಿನ ಜನರು ಮಗಳನ್ನೇ ಮಗನಿಗೆ ಧಾರೆಯೆರೆದು ಕೊಡುತ್ತಾರೆ.…
ಭಾರತದ ಅತಿದೊಡ್ಡ ವಿಮಾ ಸಂಸ್ಥೆಯಾದ ಲೈಫ್ ಇನ್ಷೂರೆನ್ಸ್ ಕಾರ್ಪೊರೇಶನ್ ಅತಿದೊಡ್ಡ ಏಜೆಂಟ್ಗಳ ಬಳಗ ಹೊಂದಿದೆ. ಎಲ್ ಐಸಿ ಇನ್ಷೂರೆನ್ಸ್ ಏಜೆಂಟ್ ಗಳ ಸಂಖ್ಯೆ ದೇಶಾದ್ಯಂತ ಸುಮಾರು 14 ಲಕ್ಷ ಇದೆ. ಉದ್ಯೋಗಿಗಳನ್ನು ಸೇರಿಸಿದರೆ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಅತಿಹೆಚ್ಚು ಮಂದಿಗೆ ಕೆಲಸ ಕೊಟ್ಟಿರುವ ಸಂಸ್ಥೆಗಳಲ್ಲಿ ಎಲ್ಐಸಿ ಒಂದು. ಇಲ್ಲಿ ಎಲ್ ಐಸಿ ಏಜೆಂಟ್ ಗಳಿಗೆ ನಿಶ್ಚಿತ ಸಂಬಳ ಎಂಬುದು ಇರುವುದಿಲ್ಲ. ಪ್ರತೀ ಏಜೆಂಟ್ ಗಳೂ ಕೂಡ ಕಮಿಷನ್ ಆಧಾರದ ಮೇಲೆ ಆದಾಯಗಳಿಸುತ್ತಾರೆ. ಕರ್ನಾಟಕದಲ್ಲಿ ಒಟ್ಟು 81,674 ಎಲ್ ಐಸಿ ಏಜೆಂಟ್ ಗಳು ಇದ್ದು, ಇವರು ಗಳಿಸುವ ಆದಾಯ ತಿಂಗಳಿಗೆ ಸರಾಸರಿಯಾಗಿ 13,265 ರೂ. ಎನ್ನಲಾಗಿದೆ. ಎಲ್ ಐಸಿ ಏಜೆಂಟ್ ಆಗುವುದು ಹೇಗೆ? ಎಲ್ ಐಸಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡುವವರು ಕನಿಷ್ಠ ದ್ವಿತೀಯ ಪಿಯುಸಿ ಓದಿರಬೇಕು. ಐಆರ್ ಡಿಎಐ ಪ್ರತೀ ವರ್ಷ ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆ ಆಗಿರಬೇಕು. ನಿಮ್ಮ ಸ್ಥಳದ ಸಮೀಪ ಇರುವ ಎಲ್ಐಸಿ ಕಚೇರಿಯಲ್ಲಿ ಏಜೆಂಟ್ ಆಗಿ ಸೇರಲು ಅಲ್ಲಿನ…
ಖ್ಯಾತ ಜ್ಯೋತಿಷಿ ವೇಣುಸ್ವಾಮಿ ನಾಗ ಚೈತನ್ಯ ಮತ್ತು ಸೆಲೆಬ್ರಿಟಿಗಳ ಗಾಸಿಪ್ ಹೇಳುವುದರಲ್ಲಿ ಫೇಮಸ್. ಅವರು ಶೋಭಿತಾ ಧೂಳಿಪಾಲ ಅವರು ಬ್ರೇಕ್ ಅಪ್ ಆಗಲಿದ್ದಾರೆ ಎಂಬ ಕಾಮೆಂಟ್ ಮೂಲಕ ಸಂಚಲನ ಮೂಡಿಸಿದ್ದಾರೆ. ಈ ಸಂಘರ್ಷ ಬಗೆಹರಿಯುವ ಮುನ್ನವೇ ಮತ್ತೊಮ್ಮೆ ವಿವಾದಾತ್ಮಕ ಕಾಮೆಂಟ್‌ಗಳನ್ನು ಮಾಡಲಾಗಿದೆ. ವೇಣುಸ್ವಾಮಿ ಇತ್ತೀಚೆಗಷ್ಟೇ ಮತ್ತೊಬ್ಬ ಸ್ಟಾರ್ ಹೀರೋಯಿನ್ ಬಗ್ಗೆ ಮಾತನಾಡಿದ್ದಾರೆ. ತೆಲುಗಿನಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿ ಸದ್ಯ ಬಾಲಿವುಡ್ ನಿರ್ಮಾಪಕರೊಬ್ಬರ ಮಗನನ್ನು ಮದುವೆಯಾಗಿ ಮುಂಬೈನಲ್ಲಿ ನೆಲೆಸಿರುವ ನಟಿಯ ಮೇಲೆ ವೇಣುಸ್ವಾಮಿ ವಿವಾದಾತ್ಮಕ ಕಾಮೆಂಟ್ ಮಾಡಿದ್ದಾರೆ. ನಾಗ ಚೈತನ್ಯ ಅವರ ಎರಡನೇ ಭಾವಿ ಪತ್ನಿ ಶೊಭಿತಾ ಧೂಳಿಪಾಲ ಕೂಡ ಬ್ರೇಕ್ ಅಪ್ ಆಗುತ್ತಾರೆ ಎಂದು ಕಾಮೆಂಟ್ ಮಾಡುವ ಮೂಲಕ ಇತ್ತೀಚೆಗಷ್ಟೇ ಭಾರೀ ಸಂಚಲನ ಮೂಡಿಸಿದ್ದಾರೆ. ಇದೀಗ ರಾಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಬ್ರೇಕ್ ಅಪ್ ಆಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಒಟ್ಟಿಗಿರುವ ಈ ಜೋಡಿ ಬೇರ್ಪಟ್ಟರೆ ವೇಣುಸ್ವಾಮಿ ಮೇಲೆ ಇನ್ನಷ್ಟು ಟೀಕೆಗಳು ಬರುವ ಸಾಧ್ಯತೆ…
ನಟ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಉತ್ತಮ ಆರಂಭ ಪಡೆದು, ಪ್ರೇಕ್ಷಕರ ಮನಗೆದ್ದು, ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.ಈ ವೇಳೆ ಗಣೇಶ್ ಅವರು ತಮ್ಮ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದಾರೆ. ಬಾಸ್ ಪದ ಬಳಕೆ ಇತ್ತೀಚೆಗೆ ಹೆಚ್ಚಿದೆ. ನೆಚ್ಚಿನ ಹೀರೋಗೆ ಅಭಿಮಾನಿಗಳು ಬಾಸ್ ಎಂದು ಕರೆಯುತ್ತಾರೆ. ‘ಬಾಸ್’ ಎಂದರೆ ಅದು ದರ್ಶನ್ ಎಂದು ಅವರ ಫ್ಯಾನ್ಸ್ ಹೇಳುತ್ತಾರೆ. ಸುದೀಪ್, ಯಶ್ ಅಭಿಮಾನಿಗಳು ಕೂಡ ಬಾಸ್ ಪದ ನಮ್ಮ ಹೀರೋಗೆ ಹೊಂದಿಕೆ ಆಗುತ್ತದೆ ಎಂದು ಹೇಳುತ್ತಾರೆ. ಗಣೇಶ್ ಫ್ಯಾನ್ಸ್ ಅವರನ್ನು ಥಿಯೇಟರ್ ಮುಂದೆ ‘ಜಿ ಬಾಸ್’ ಎಂದು ಕರೆದಿದ್ದರು. ‘ಕೃಷ್ಣಂ ಪ್ರಣಯ ಸಖಿ’ ಗೆದ್ದ ಖುಷಿಯಲ್ಲಿ ಈ ರೀತಿ ಕರೆಯುತ್ತಿದ್ದರು. ಇದಕ್ಕೆ ಗಣೇಶ್ ಬೇಸರ ಹೊಹಾಕಿದ್ದಾರೆ. ‘ನನ್ನನ್ನು ಫ್ಯಾನ್ಸ್ ಜಿ ಬಾಸ್ ಎನ್ನುತ್ತಿದ್ದರು. ದಯವಿಟ್ಟು ಹಾಗೆ ಕರೆಯಬೇಡಿ. ನಾನು ನಿಮ್ಮ ಮನೆಯ ಹುಡುಗ. ನನಗೆ ಗೋಲ್ಡನ್ ಸ್ಟಾರ್ ಎಂದು ಇಟ್ಟಿದ್ದೀರಿ. ಹಾಗೆಯೇ ಕರೆಯಿರಿ ಸಾಕು’ ಎಂದು…
ಡಾ.ಬ್ರೋ ಹಲವು ದೇಶಗಳನ್ನು ಸುತ್ತಿ ಬ್ಲಾಗ್ ಮಾಡಿದ್ದರು. ಇದೀಗ ಡಾ.ಬ್ರೋ ಹೊಸ ಉದ್ಯಮ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಆಫೀಸು ಓಪನ್ ಮಾಡಿರುವ ಬ್ರೋ, ಗೋ ಪ್ರವಾಸವೆಂಬ ಟ್ರಾವೆಲಿಂಗ್ ಉದ್ಯಮ ಶುರು ಮಾಡಿದ್ದಾರೆ. ವಿಶ್ವದ ಮೂಲೆ ಮೂಲೆಯನ್ನು ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದು ಕನ್ನಡಿಗರಿಗೆ ತೋರಿಸುತ್ತಿರುವ ಡಾ. ಬ್ರೋ ಪ್ರಸಿದ್ಧಿಯ ಗಗನ್, ವಿನೂತನ ಕೆಲಸಕ್ಕೆ ಮುಂದಾಗಿದ್ದಾರೆ. ಪ್ರವಾಸದ ಮೂಲಕವೇ ಪ್ರಸಿದ್ಧಿ ಪಡೆದಿರುವ ಗಗನ್, ಈಗ ತಮ್ಮ ಜೊತೆ ಸಾಮಾನ್ಯ ಜನರಿಗೂ ವಿಶ್ವವನ್ನು ಸುತ್ತಲು ಅವಕಾಶ ಮಾಡಿಕೊಡ್ತಿದ್ದಾರೆ. ಈ ಕೆಲಸಕ್ಕೆ ಡಾ.ಬ್ರೋಗೆ ಅವರ ಸ್ನೇಹಿತರು ಕೂಡ ಸಾಥ್ ಕೊಟ್ಟಿದ್ದಾರೆ. ಇವರೆಲ್ಲ ಸೇರಿ, ನಿಮ್ಮನ್ನು ಭಾರತ ಸೇರಿ, ಬೇರೆ ಬೇೆರೆ ದೇಶಗಳಿಗೆ ಪ್ರವಾಸಕ್ಕೆ ಕರೆದೊಯ್ಯುತ್ತಾರೆ. ಇನ್ನು ಗೋ ಪ್ರವಾಸಕ್ಕೆ ಎಷ್ಟರ ಮಟ್ಟಿಗೆ ರೆಸ್ಪಾನ್ಸ್ ಸಿಕ್ಕಿದೆ ಅಂದ್ರೆ, ಫಟಾಪಟ್ ಎಂದು ಟಿಕೇಟ್ ಸೇಲ್ ಆಗಿದೆ. ಡಾ.ಬ್ರೋ ಈ ಪ್ರವಾಸಿಗರ ಜೊತೆಗೆ ಹೋಗಿ, ಅಲ್ಲಿನ ವಿಶೇಷತೆಯನ್ನು ಪ್ರವಾಸಿಗರಿಗೆ ತೋರಿಸುತ್ತಾರೆ. ವಿಜಯನಗರದಲ್ಲಿ ಡಾಕ್ಟರ್ ಬ್ರೋ, ಗೋ ಪ್ರವಾಸ (gopravasa) ಹೆಸರಿನ…
ಬೆಂಗಳೂರು: ಚೇತನ ಫೌಂಡೇಷನ್ ಕರ್ನಾಟಕ, ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ವತಿಯಿಂದ ರಾಜ್ಯ ಸಂಪನ್ಮೂಲ ವ್ಯಕ್ತಿ, ಸಮಾಜ ಸೇವಕ ಪಾವಗಡ ನವೀನ್ ಕಿಲಾರ್ಲಹಳ್ಳಿ ಅವರಿಗೆ ಭಾನುವಾರ ನಗರದ ಕನ್ನಡ ಸಾಹಿತ್ಯ ಪರಿಷತ್ ಕುವೆಂಪು ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾರತ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪಾವಗಡದ ಗಡಿನಾಡಿನ ಯುವಕ ಕಳೆದ 20 ವರ್ಷಗಳಿಂದ ಸಮಾಜಕ್ಕೆ ಸೇವೆ ಸಲ್ಲಿಸುತ್ತಾ ಮನೆ ಮಾತಾಗಿರುವ ನವೀನ್ ಕಿಲಾರ್ಲಹಳ್ಳಿಗೆ ಸಂದಿರುವ ಗೌರವ ಇದಾಗಿದೆ. ಇತ್ತೀಚಿಗೆ ಶಿಕ್ಷಣ ಕ್ಷೇತ್ರದಲ್ಲಿನ ಶಾಲಾ ಕಾಲೇಜು ಮಕ್ಕಳಿಗೆ ನೈತಿಕ ಮೌಲ್ಯಗಳ ಅರಿವನ್ನು ರಾಜ್ಯ ವ್ಯಾಪಿ ತಮ್ಮ ಸ್ವಂತ ಖರ್ಚಿನಲ್ಲಿ ಮೂಡಿಸುತ್ತಿರುವುದು ಸಾಮಾಜಿಕವಾಗಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಶಸ್ತಿಗೆ ಭಾಜನರಾದ ಪಾವಗಡ ನವೀನ್ ಕಿಲಾರ್ಲಹಳ್ಳಿಯವರಿಗೆ ನೆಟ್ಟಿಗರು, ಗಣ್ಯರು ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ನಾಗೇಂದ್ರಪ್ರಸಾದ್ , ಸಂಗೀತ ನಿರ್ದೇಶಕ ಮಹೇಶ್ ಮಹಾದೇವ್, ಗಾಯಕಿ ಡಾ.ಪ್ರಿಯದರ್ಶನಿ, ರೈತ ಕವಿ ಶಂಕರಪ್ಪ ಬಳ್ಳೇಕಟ್ಟೆ, ಚಂದ್ರಶೇಖರ್ ಮಾಡಲಗೆರೆ ಸೇರಿದಂತೆ ಹಲವರು…
ಬೀದರ್: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿ ಸಂಸದ ಸಾಗರ ಖಂಡ್ರೆ ನೇತೃತ್ವದಲ್ಲಿ ಬೀದರ್ ನಲ್ಲಿ ಪ್ರತಿಭಟನೆ ನಡೆಯಿತು. ರಾಜಕೀಯ ದ್ವೇಷ ಹಾಗೂ ಕೇಂದ್ರ ಸರ್ಕಾರದ ಒತ್ತಡದಿಂದಾಗಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ರಾಜ್ಯಪಾಲರ ನಡೆಯನ್ನು ಖಂಡಿಸಿದರು. ಜನಪರ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಹಣಿಯಲು ಆಗದಿರುವ ಕಾರಣ ರಾಜಭವನವನ್ನು ದುರುಪಯೋಗ ಮಾಡಿಕೊಂಡು ಮುಖ್ಯಮಂತ್ರಿಗಳ ಹೆಸರಿಗೆ ಕಳಂಕ ತರುವ ಕೆಲಸ ಬಿಜೆಪಿ ಅವರು ಹಾಗೂ ಕೇಂದ್ರ ಸರ್ಕಾರದವರು ಮಾಡುತ್ತಿದ್ದಾರೆ ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನದ ಮುಖ್ಯಸ್ಥರಾಗಿ ಹೀಗೆ ಅಸಂವಿಧಾನಿಕ ನಡೆಯನ್ನು ಅನುಸರಿಸುತ್ತಿರುವ ಕರ್ನಾಟಕದ ರಾಜ್ಯಪಾಲರನ್ನು ರಾಷ್ಟ್ರಪತಿಗಳು ಕೂಡಲೇ ವಾಪಾಸ್ ಕರೆಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…
ಬೀದರ್: ಕ್ರೀಡೆಯಲ್ಲಿ ತೊಡಗಿಸಿಕೊಂಡವರಿಗೆ ಯಾವುದೇ ರೋಗಗಳು ಬಾಧಿಸುವುದಿಲ್ಲ. ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ಕ್ರೀಡೆಗಳು ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ಓದಿನೊಂದಿಗೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ವಿಶೇಷವಾಗಿ ದೇಶೀಯ ಆಟಗಳನ್ನು ಆಡಬೇಕೆಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಬೀದರ ಹಾಗೂ ಪತ್ರಿಸ್ವಾಮಿ ಪದವಿ ಪೂರ್ವ ಕಾಲೇಜು ಔರಾದ(ಬಿ) ಸಂಯುಕ್ತಾಶ್ರಯದಲ್ಲಿ ಆ.16ರಂದು ಔರಾದ(ಬಿ) ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2024–25ನೇ ಸಾಲಿನ ತಾಲ್ಲೂಕು ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲ್ಲೂಕು, ಜಿಲ್ಲಾ ಮತ್ತು ವಿಭಾಗ ಮಟ್ಟದಲ್ಲಿ ಜಯಿಸಿ ರಾಜ್ಯಮಟ್ಟಕ್ಕೆ ಹೋಗುವ ತಂಡಕ್ಕೆ 31,000 ಬಹುಮಾನ ಮತ್ತು ಟೀ ಶರ್ಟ್ಗಳನ್ನು ನೀಡಲಾಗುವುದೆಂದು ಘೋಷಿಸಿದರು. ವಿದ್ಯಾರ್ಥಿಗಳು ಕ್ರೀಡಾ ಭಾವನೆಯಿಂದ ಹುಮ್ಮಸ್ಸಿನಿಂದ ಆಟವಾಡಬೇಕು. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಜಯಿಸಿ ತಾಲ್ಲೂಕಿನ ಹೆಸರನ್ನು ಎತ್ತರಕ್ಕೇರಿಸಬೇಕು. ಶಿಕ್ಷಣದ ಅಭಿವೃದ್ಧಿಗೆ ನಾನು ಸದಾ ಬದ್ಧನಾಗಿದ್ದು, ಐಎಎಸ್, ಐಪಿಎಸ್, ಕೆಎಎಸ್ ನಂತಹ ಹುದ್ದೆಗಳಿಗೆ ಏರಲು ಪ್ರಯತ್ನ ವಹಿಸಬೇಕು.…