Subscribe to Updates
Get the latest creative news from FooBar about art, design and business.
- ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡು ಸಿಎಂ ಕರ್ನಾಟಕ ಭೇಟಿ ಮುಂದೂಡಿಕೆ
- ಬೀದರ್: ಬಸವಕಲ್ಯಾಣದಲ್ಲಿ ಕೆರೆಯಂತಾದ ರಸ್ತೆಗಳು; ಗುಂಡಿಗಳಲ್ಲಿ ಈಜಾಡಿದ ಮಕ್ಕಳು!
- ಸರಗೂರು: ತಾಯಿ ಚಿಕ್ಕದೇವಮ್ಮ ಬೆಟ್ಟದಲ್ಲಿ ಮೂರನೇ ಆಷಾಢ ಶುಕ್ರವಾರದ ಸಂಭ್ರಮ; ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ
- ಸರಗೂರು: ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ಅಹಮದ್ ಖಾನ್ ಸೆರ್
- ತಿಪಟೂರು: ಆ.12ರಿಂದ ಭೀಮನ ಅಮಾವಾಸ್ಯೆ ಮಹೋತ್ಸವ
- ಆ.3 ರಿಂದ ಕೋಟೆ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವ
- ತುಮಕೂರು: ಆ.3ರಿಂದ ಕೊಲ್ಲಾಪುರದಮ್ಮ, ಕರುಗಳಮ್ಮ ಜಾತ್ರಾ ಮಹೋತ್ಸವ
- ಪಾವಗಡ: ವಸತಿ ಶಾಲೆಯಿಂದ ಓಡಿ ಹೋಗಿದ್ದ ವಿದ್ಯಾರ್ಥಿಗಳು ಪತ್ತೆ
Author: admin
ತುಮಕೂರು: ತುಮಕೂರಿನ ಪರಿವಿಕ್ಷಣ ಮಂದಿರದಲ್ಲಿ ನೂತನ ಕಚೇರಿಯನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅದ್ದೂರಿಯಾಗಿ ಉದ್ಘಾಟನೆ ಮಾಡಿದರು. ಇಂದು ಇದರೊಂದಿಗೆ ಜನಸಂಪರ್ಕ ಸಭೆಯನ್ನು ಕೂಡ ನಡೆಸಿದರು. ಜನಸಂಪರ್ಕ ಸಭೆಯಲ್ಲಿ ಪ್ರತಿ ತಾಲೂಕಿನಿಂದಲೂ ನೂರಾರು ಕಾರ್ಯಕರ್ತರು ಆಗಮಿಸಿದ್ದರು. ಕೈಯಲ್ಲಿ ಹೂ ಗುಚ್ಚ ಹಿಡಿದು ಆಗಮಿಸಿದ ನೂರಾರು ಕಾರ್ಯಕರ್ತರು. ಅವರನ್ನು ನೂತನ ಕಚೇರಿಗೆ ಭರ್ಜರಿಯಾಗಿ ಸ್ವಾಗತಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು: ಸಿದ್ದರಾಮಯ್ಯ ನುರಿತ ರಾಜಕಾರಣಿ. ಇಂತಹ ಸಂದರ್ಭದಲ್ಲಿ ಅವರ ಪಕ್ಷ ಹೇಳಬೇಕಾಗುತ್ತೆ. ರಾಜೀನಾಮೆ ಬಗ್ಗೆ ನಾವು ತೀರ್ಮಾನ ಮಾಡಲು ಆಗಲ್ಲ. ಪಕ್ಷ ತೀರ್ಮಾನ ಮಾಡಬೇಕು. ಆಗ ಸಿದ್ದರಾಮಯ್ಯರ ವರ್ಚಸ್ಸು ಹೆಚ್ಚಾಗುತ್ತೆ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸೂಚನೆ ನೀಡಿರೋದು ಕಾನೂನಿ ಅಡಿಯಲ್ಲಿ ಇರೋದ್ರಿಂದ ಕಾನೂನು ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕಿರೋದು ಅನುಭವಿ ರಾಜಕಾರಣಿ ಸಿದ್ದರಾಮಯ್ಯ ಅವರ ಕರ್ತವ್ಯ ಎಂದರು. ಅದನ್ನ ಮಾಡಲಿ ಎನ್ನೋದು ನನ್ನ ಆಗ್ರಹ. ಸಿದ್ದರಾಮಯ್ಯನವರು ಎಂದೂ ಕೂಡ ದುಡುಕೋದು ಮಾಡ್ತಾರಾ ಮತ್ತೊಂದು ಮಾಡ್ತಾರ ಗೊತ್ತಿಲ್ಲ ಎಂದರು. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ 125 ವರ್ಷ ಇತಿಹಾಸ ಇರುವ ಪಕ್ಷ. ನಾವು ಬಿಜೆಪಿಯವರು ಹೇಗೆ ನಡೆದುಕೊಂಡಿದ್ದೀವಿ ಅಂತಾ ಅರ್ಥಮಾಡಿಕೊಂಡು ಅವರು ತೀರ್ಮಾನ ತೆಗೆದುಕೊಂಡರೆ ಮುಂದಿನ ಪೀಳಿಗೆಗೆ ರಾಜಕೀಯ ಬಗ್ಗೆ ಗೌರವ ಇರುತ್ತೆ ಎಂದರು. ಅದನ್ನ ಮಾಡಬೇಕಾಗಿರೊದು ಆ ಪಕ್ಷ ಹಾಗೂ ಸಿದ್ದರಾಮಯ್ಯ. ತುಮಕೂರು ಕ್ಷೇತ್ರ ಸಂಬಂದಿಸಿದಂತೆ ರಾಜಕಾರಣ ಮಾಡಲು ಹೋಗಲ್ಲ…
ಗೋಕಾಕ್: ಉತ್ತರ ಕರ್ನಾಟಕ ಭಾಗದಲ್ಲಿ ಆಗಾಗ್ಗೆ ತಲೆದೋರುವ ಪ್ರಕೃತಿ ವೈಪರೀತ್ಯಗಳಿಗೆ ಸ್ಪಂದಿಸಿ ಸಹಸ್ರಾರು ಜನರಿಗೆ ಸಹಾಯಹಸ್ತವನ್ನು ನೀಡುತ್ತಿರುವ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರಿಗೆ ಗೋಕಾಕ್ ನಗರದ ಹಾಗೂ ಈ ಭಾಗದ ಪರವಾಗಿ ಧನ್ಯವಾದವನ್ನು ಸಮರ್ಪಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ಗೋಕಾಕ್ ನಗರದ ಮಧ್ಯಭಾಗದಲ್ಲಿರುವ ವಾಲ್ಮೀಕಿ ಕ್ರೀಡಾಂಗಣದಲ್ಲಿ ಪ್ರವಾಹ ಪೀಡಿತರಿಗೆ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾಮಿ ಜಪಾನಂದಜೀ ಅವರ ಬಗ್ಗೆ ಈಗಾಗಲೇ ಅನೇಕ ವಿಚಾರಗಳನ್ನು ಕೇಳ್ಪಟ್ಟಿದ್ದು, ಇಂದು ಅವರ ನೇರ ದರ್ಶನವನ್ನು ಪಡೆದು ಆಶೀರ್ವಾದ ಪಡೆದುದಕ್ಕೆ ಸಂತೋಷವಾಗಿದೆ ಎಂದರು. ಇದೇ ವೇಳೆ ಸ್ವಾಮೀಜಿಗೆ ಗೌರವ ಸಲ್ಲಿಸಿ, ಪುಷ್ಪಮಾಲೆಯನ್ನು ಸಲ್ಲಿಸಿದರು. ಸ್ವಾಮಿ ಜಪಾನಂದಜೀ ಮಹಾರಾಜ್ ಮಾತನಾಡಿ, ನಮ್ಮ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್ ರವರ ಸಹಕಾರದಿಂದ ಕಳೆದ 30 ವರ್ಷದಿಂದ ಏಕಪ್ರಕಾರವಾಗಿ ಆರು ರಾಜ್ಯಗಳಲ್ಲಿ ನಿರಂತರವಾದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದೇವೆ. ಇದೀಗ ಎರಡು ದಿನಗಳ ಹಿಂದೆ ಕೇರಳದ ವಯನಾಡಿನಲ್ಲಿ ನಡೆದ ಭೂಕುಸಿತ ಹಾಗೂ ಪ್ರವಾಹದ ಸಂತ್ರಸ್ತರಿಗೂ ಪರಿಹಾರವನ್ನು ನಡೆಸುತ್ತಿದ್ದೇವೆ…
ಒಮ್ಮೆ ಸತ್ಯಪುರ ರಾಜ್ಯಕ್ಕೆ ಸೇರಿದ ಸಿರಿವನ ಎಂಬ ಅರಣ್ಯದಲ್ಲಿ ಪ್ರಖ್ಯಾತ ಗುರು ಪ್ರಭುಶಿಖಿರ ಎಂಬುವರ ಗುರುಕುಲದಲ್ಲಿ ಸರ್ವವಿದ್ಯಾ ಪರಂಗತರಾಗಿದ್ದ ಜ್ಞಾನದೇವ, ಸತ್ಯದೇವ ಮತ್ತು ಅಮರದೇವಗಳೆಂಬ ಮೂವರು ಪಂಡಿತರು ರಾಜ ವೀರಬಲ್ಲಾಳನ ಆಸ್ಥಾನಕ್ಕೆ ಬಂದರು. ಅವರ ಮುಖದ ವರ್ಚಸ್ಸನ್ನು ನೋಡಿ ಎದ್ದು ನಿಂತು ಗೌರವಿಸಿ ನಂತರ ರಾಜ ಪಂಡಿತರುಗಳೇ ನನ್ನಿಂದ ನಿಮಗೆ ಏನಾಗಬೇಕು ಎಂದಾಗ ಮೂವರೂ ತಮ್ಮ ತಮ್ಮ ಪರಿಚಯ ಮಾಡಿಕೊಂಡ ನಂತರ ಅಮರದೇವನು ರಾಜರೇ ನಮಗೆ ನಿಮ್ಮ ಆಸ್ಥಾನದಲ್ಲಿ ನಮಗೆ ರಾಜಗುರು ಸ್ಥಾನಬೇಕು ನೀಡುವಿರಾ ಎಂದಾಗ ಹರ್ಷಿತನಾದ ರಾಜನು ಆಗಬಹುದು, ಆದರೆ ರಾಜಗುರು ಸ್ಥಾನ ಕೇವಲ ಒಬ್ಬರಿಗೆ ಮಾತ್ರ ದೊರಕುವುದು ಎಂದಾಗ ಸತ್ಯದೇವನು ಮುಂದೆ ಬಂದು ಇವರಿಬ್ಬರಿಗಿಂತ ನನಗೆ ಹೆಚ್ಚು ಜ್ಞಾನ ನನಗೆ ನೀಡಬೇಕು ಎಂದಾಗ ಅವರಿಬ್ಬರಲ್ಲಿ ಮಾತಿನ ವೈಮನಸ್ಯ ಉಂಟಾಯಿತು. ನಂತರ ಸುಮ್ಮನೆ ನಿಂತಿದ್ದ ಜ್ಞಾನದೇವನನ್ನು ಕುರಿತು ರಾಜ ನೀವು ಏನು ಹೇಳುವಿರಿ ಎಂದಾಗ ಜ್ಞಾನದೇವನು ಮಹಾರಾಜರೇ ತಮ್ಮ ತೀರ್ಮಾನವೇ ಅಂತಿಮ ನಾನು ಹೇಳುವುದು ಏನೂ ಇಲ್ಲ ಎಂದಾಗ ರಾಜನು…
ತುಮಕೂರು: ತುಮಕೂರು ಹಾಗೂ ನೆಲಮಂಗಲ ನಡುವಿನ ಅಡಕಮಾರನಹಳ್ಳಿ ಬೆಂಗಳೂರು ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ ಮಾಡುತ್ತಿದ್ದ ಎರಡು ಬೈಕ್ ಗಳನ್ನು ತಡೆದು ಸಾರ್ವಜನಿಕರು ಬಿಸಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರು ತೀವ್ರ ಕಿರಿಕಿರಿ ಉಂಟು ಮಾಡಿದ್ದರು. ಹೀಗಾಗಿ ಸಾರ್ವಜನಿಕರೇ ಬೈಕ್ ಗಳನ್ನು ಯುವಕರಿಂದ ಕಿತ್ತುಕೊಂಡು ಪುಡಿಗಟ್ಟಿದ್ದಾರೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಪಾವಗಡ: ಭಾರತೀಯ ವಿದ್ಯಾರ್ಥಿ ಸಂಘ–BVS ತುಮಕೂರು ಜಿಲ್ಲೆ ವತಿಯಿಂದ ಪಾವಗಡ ತಾಲ್ಲೂಕು, ನಿಡಗಲ್ಲು ಹೋಬಳಿ, ಚಿಕ್ಕತಿಮ್ಮನಹಟ್ಟಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡ ಕಾಪಿ ಪುಸ್ತಕ ಮತ್ತು English Cursive Copy Writing ಜೊತೆಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ನರಸಿಂಹಮೂರ್ತಿ ಹಾಗೂ ಸಹ ಶಿಕ್ಷಕರಾದ ದೇವರಾಜ್, ನಾಗಮಣಿ, ಹಾಗೂ ತುಮಕೂರು BVS ಜಿಲ್ಲಾ ಸಂಯೋಜಕರಾದ ಚಿಕ್ಕತಿಮ್ಮನಹಟ್ಟಿ ಗ್ರಾಮದ ಎಚ್.ಕೆಂಚರಾಯ, ಮಾಜಿ SDMC ಅಧ್ಯಕ್ಷರಾದ ಪೂಲಪ್ಪ ಹಾಗೂ ಬಿವಿಎಸ್ ಸಂಘಟನೆಗೆ ಬೆಂಬಲಿಸುತ್ತಿರುವ ರಾಜಕುಮಾರ್, ಹಾಗೂ ನಾಗೇಶ್, JCB ಓಬಳೇಶ್ ಉಪಸ್ಥಿತರಿದ್ದರು. ವಿಶೇಷವಾಗಿ ಮಕ್ಕಳಿಗೆ ವಿತರಿಸಲು ಬೇಕಾದ ಕಲಿಕಾ ಸಾಮಗ್ರಿಗಳನ್ನು ನಂಜನಗೂಡು ತಾಲೂಕಿನ ಮುಳ್ಳೂರು ಗ್ರಾಮದ BVSನ ರಾಘವೇಂದ್ರ ಅವರು ಕೊಡುಗೆಯಾಗಿ ನೀಡಿದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ತುಮಕೂರು :ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದ್ರೆ ನನ್ನಷ್ಟು ಖುಷಿ ಪಡೋರು ಯಾರೂ ಇಲ್ಲ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಮತ್ತು ಜಲಶಕ್ತಿ ಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯನವರು ನುರಿತ ರಾಜಕಾರಣಿಯಾಗಿದ್ದಾರೆ. ಕೆಲವು ಸಂದರ್ಭದಲ್ಲಿ ಕಾನೂನಿಗಿಂತ ಯಾರು ದೊಡ್ಡವರಲ್ಲ. ಕಾನೂನಿನ ಕೆಲಸ ಕಾನೂನು ಮಾಡುತ್ತೆ ಎಂದರು. ಸಿದ್ದರಾಮಯ್ಯ ಸಾಹೆಬ್ರು ಸಹ ಅವರೇನು ಮಾಡ್ಬೇಕು ಮಾಡ್ತಾರೆ. ಒಂದು ಸತ್ಯ, ಕಾನೂನಿಗಿಂತ ನಾವ್ಯಾರು ದೊಡ್ಡವರಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ದೂರದೃಷ್ಟಿಯ ಬ್ರಹ್ಮಾಸ್ತ್ರ ಏನಿದೆ ಎಂದರು. ಅದು ಯಾರ್ಯಾರಿಗೆ ಏನಾಗಿದೆ ಅನ್ನೊದಕ್ಕಿಂತ ಹೆಚ್ಚಾಗಿ ಕಾನೂನು ತನ್ನ ಕೆಲಸವನ್ನ ತಾನು ಮಾಡುತ್ತದೆ ಎಂದರು. ನನಗೂ 45 ವರ್ಷ ರಾಜಕೀಯ ಅನುಭವ ಇದೆ. ಒತ್ತಾಯ ಮಾಡೋದು, ಮತ್ತೊಂದು ಮಾಡೋದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಸಾಹೇಬ್ರು ನುರಿತ ರಾಜಕಾರಣಿ, ಬುದ್ದಿವಂತರಿದ್ದಾರೆ. ನಾನು ಅವರು ಬಹಳ ಆತ್ಮೀಯರಾಗಿ ಕೆಲಸ ಮಾಡಿದ್ದೇವೆ ನಿನ್ನೆನೂ ಸಹ ಅವರ ಜೊತೆ ಮಾತನಾಡಿದಾಗ, ಅವರು ಮಾತನಾಡಿದ್ದನ್ನ ನಾನು ಬಹಳ ಆನಂದದಿಂದ…
ಪಾವಗಡ: ದೇವರ ದರ್ಶನ ಪಡೆದು ಬೈಕ್ ನಲ್ಲಿ ಹಿಂದಿರುಗುತ್ತಿದ್ದ ಯುವಕನೋರ್ವ ರಸ್ತೆ ಅಪಘಾತಕ್ಕೆ ಬಲಿಯಾದ ಘಟನೆ ಪಾವಗಡ ತಾಲ್ಲೂಕಿನ ನಿಡಗಲ್ ಹೋಬಳಿಯ ಕರೆಕ್ಯಾತನಹಳ್ಳಿ ಸ್ವಾರಮ್ಮ ದೇವಸ್ಥಾನದ ಸಮೀಪದ ಶಿರಾ ಮುಖ್ಯ ರಸ್ತೆಯಲ್ಲಿ ನಡೆದಿದೆ. ಮೃತರನ್ನು ಪಾವಗಡ ತಾಲ್ಲೂಕಿನ ಅರಸೀಕೆರೆ ಗ್ರಾಮದ 28 ವರ್ಷದ ಕುಮಾರ್ ಎಂದು ಗುರುತಿಸಲಾಗಿದೆ. ಮೃತರು ವೃತ್ತಿಯಲ್ಲಿ ಜೆಸಿಬಿ ಡ್ರೈವರ್ ಆಗಿದ್ದರು ಎನ್ನಲಾಗಿದೆ. ಇವರು ಶ್ರಾವಣ ಶನಿವಾರದ ಪ್ರಯುಕ್ತ ಪಾವಗಡದ ಶನಿಮಹಾತ್ಮ ಸ್ವಾಮಿ ದರ್ಶನ ಪಡೆದು ಬೈಕ್ ನಲ್ಲಿ ವಾಪಸ್ ಹಿಂದಿರುಗುತಿದ್ದಾಗ ದ್ವಿಚಕ್ರ ವಾಹನದ ಚಕ್ರ ಪಂಕ್ಚರ್ ಆಗಿ ರಸ್ತೆಗೆ ಬಿದ್ದಿದ್ದಾರೆ. ಆದೇ ಸಮಯದಲ್ಲಿ ಹಿಂಬದಿಯಿಂದ ಬಂದ ದೊಡ್ಡ ವಾಹನ ಅವರ ತಲೆ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಘಟನೆಯ ಮಾಹಿತಿ ಪಡೆದ ಅರಸೀಕೆರೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಾರಾಸಿಂಗ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ…
‘ಬ್ಯಾಚುಲರ್ಸ್ ಪಾರ್ಟಿ’ ಸಿನಿಮಾದಲ್ಲಿ ಅನುಮತಿ ಪಡೆಯದೇ ಎರಡು ಹಾಡುಗಳನ್ನು ಬಳಕೆ ಮಾಡಿದ್ದಕ್ಕಾಗಿ ಎಂಆರ್ ಟಿ ಮ್ಯೂಸಿಕ್ ಸಂಸ್ಥೆಯು ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ದೆಹಲಿ ಹೈಕೋರ್ಟ್ ರಕ್ಷಿತ್ ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಗೆ 20 ಲಕ್ಷ ರೂಪಾಯಿ ಠೇವಣಿ ಇಡುವಂತೆ ನಿರ್ದೇಶನ ನೀಡಿದೆ. ರಕ್ಷಿತ್ ಶೆಟ್ಟಿ ಅವರ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಎಂಆರ್‌ಟಿ ಹಕ್ಕು ಹೊಂದಿರೋ ನ್ಯಾಯ ಎಲ್ಲಿದೆ ಮತ್ತು ‘ಒಮ್ಮೆ ನಿನ್ನನ್ನು’ ಹಾಡು ಬಳಕೆ ಮಾಡಿದ್ದರು. ಹಾಡು ಬಳಕೆ ಮಾಡುವಂತೆ ಕೇಳಿಕೊಂಡಿದ್ದೆ, ಆದರೆ ಅವರು ಬೇಡಿಕೆ ಹೆಚ್ಚು ಮಾಡಿದ್ದರು. ನಮ್ಮ ಭಾಷೆಯ ಹಾಡುಗಳನ್ನು ನಾವು ಬಳಸಲು ಅನುಮತಿ ಕೇಳಬೇಕೆ. ಈ ಬಗ್ಗೆ ಕೋರ್ಟ್‌ನಲ್ಲಿ ನೋಡಿಕೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು. ರಕ್ಷಿತ್ ಶೆಟ್ಟಿ ಮತ್ತು ಪರಂವಾಗೆ ಹೈಕೋರ್ಟ್ ನೋಟಿಸ್ ನೀಡಿತ್ತು. ಈ ನೋಟಿಸ್ ಗೆ ರಕ್ಷಿತ್ ಶೆಟ್ಟಿ ಕೋರ್ಟಿಗೆ ಹಾಜರಾಗದ ಕಾರಣದಿಂದಾಗಿ ಸೋಷಿಯಲ್ ಮೀಡಿಯಾ ಸೇರಿದಂತೆ, ಹಾಡುಗಳು ಬಳಕೆಯಾದ ಕಡೆಯಲ್ಲಿ ತೆಗೆದುಹಾಕಬೇಕು ಮತ್ತು 20 ಲಕ್ಷ ರೂಪಾಯಿ ಠೇವಣಿ ಇಡಬೇಕು ಎಂದು…
ಪ್ರಪಂಚದಾದ್ಯಂತ ಜನರು ವಿಭಿನ್ನ ಆಚರಣೆಗಳು ಮತ್ತು ಸಂಪ್ರದಾಯಗಳ ಪ್ರಕಾರ ಮದುವೆಯಾಗುತ್ತಾರೆ. ಅದೇ ರೀತಿ, ಹಿಂದೂ ಸನಾತನ ಧರ್ಮದಲ್ಲಿ, ಮದುವೆಯನ್ನು ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧವೆಂದಷ್ಟೇ ಪರಿಗಣಿಸಲಾಗುವುದಿಲ್ಲ; ಆದರೆ ಅದು ಎರಡು ಕುಟುಂಬಗಳ ಒಕ್ಕೂಟವಾಗಿಯೂ ಪರಿಗಣಿಸಲಾಗಿದೆ. ಹಿಂದೂ ಧರ್ಮದಲ್ಲಿ ವಿವಾಹ ಸಂಬಂಧಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಜಗತ್ತಿನ ಮೊದಲ ಮದುವೆ ಯಾವಾಗ ಮತ್ತು ಎಲ್ಲಿ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ವಿಶ್ವದ ಮೊದಲ ಮದುವೆ ನಡೆದ ಸ್ಥಳವೆಂದರೆ ಅದು ಭಾರತದ ಶಿವನ ದೇವಾಲಯವಾಗಿದೆ. ದಕ್ಷೇಶ್ವರ ಮಹಾದೇವ ದೇವಸ್ಥಾನದ ಪ್ರಧಾನ ಅರ್ಚಕ ಮಹಾಂತ ದಿಗಂಬರ ಸ್ವಾಮಿ ವಿಶ್ವೇಶ್ವರ ಪುರಿ ಮಹಾರಾಜ್ ಹೇಳುವಂತೆ ಜಗತ್ತಿನ ಮೊದಲ ಮದುವೆ ಶಿವ-ಸತಿದೇವಿ ಜೋಡಿಯದ್ದು. ಸೃಷ್ಟಿ ಪ್ರಾರಂಭವಾದಾಗ ಶಿವ ಮತ್ತು ಸತಿ ವಿವಾಹವಾದರು ಎಂದು ಅವರು ಹೇಳುತ್ತಾರೆ. ಆ ಮದುವೆಯ ರಾತ್ರಿಯನ್ನು ಶಿವನ ಮದುವೆ ರಾತ್ರಿ ಅಥವಾ ಶಿವರಾತ್ರಿ ಎಂದು ಕರೆಯಲಾಗುತ್ತದೆ. ಉತ್ತರಾಖಂಡದ ಹರಿದ್ವಾರ ಹಿಂದೂಗಳಿಗೆ ಪವಿತ್ರ ನಗರವಾಗಿದೆ. ಹಿಂದೂ ನಂಬಿಕೆಯ ಪ್ರಮುಖ ಕೇಂದ್ರ. ದಕ್ಷೇಶ್ವರ ಮಹಾದೇವ ದೇವಾಲಯವು ಹರಿದ್ವಾರದ…