Author: admin

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತೊಡರನಾಳು ಗ್ರಾಮದಲ್ಲಿ ಸುರಿದ ಭಾರೀ ಮಳೆಗೆ ಗ್ರಾಮದ ಮಹಾಂತೇಶ ಎನ್ನುವ ರೈತರ ಜಮೀನಿನಲ್ಲಿ ಬೆಳೆದು ನಿಂತಿದ್ದ ರಾಗಿ ಬೆಳೆಗೆ ಹಾನಿಯಾಗಿದೆ. ಊರು ಪಕ್ಕಾದಲ್ಲಿ ಹರಿಯುವ ಒಂದು ಹಳ್ಳದ ನೀರನ್ನು, ಪಕ್ಕದ ಜಮೀನಿನ ಮಾಲೀಕರು ಸ್ವಾಭಾವಿಕ ವಾಗಿ ಹರಿಯುತ್ತಿದ್ದ ಹಳ್ಳವನ್ನು ಮಾರ್ಗ ಬದಲಾವಣೆ ಮಾಡಿ ಹಾನಿಯಾಗಿರುವ ಜಮೀನಿನ ನೇರಕ್ಕೆ ಹಳ್ಳ ತೊಡಿಸಿರುವುದೇ ಈ ಅನಾಹುತಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಗೂಳೂರು ಗ್ರಾಮ ಪಂಚಾಯತ್ ನಲ್ಲಿ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ ದಿನವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ SSLC—PUC ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಶೇಷವಾಗಿ ತರಕಾರಿಯಲ್ಲಿ ಮಾಡಲಾದ ಭಾರತ ದೇಶ ಮತ್ತೆ ಬಾವುಟದ ಕಲಾಕೃತಿ ಜನ ಮನ ಸೆಳೆಯಿತು. ಸಮಾರಂಭದಲ್ಲಿ ಅಧ್ಯಕ್ಷರಾದ ರೇಣುಕಮ್ಮ ಮತ್ತು ಉಪಾಧ್ಯಕ್ಷರಾದ ನವೀನಗೌಡ ಹಾಗೂ ಸರ್ವ ಸದಸ್ಯರು ಹಾಗೂ ಗ್ರಾಮದ ಮುಖಂಡರು, ಸಾರ್ವಜನಿಕರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಆದ ಡಿ.ಷoಷೀರ್ ರವರು ಹಾಜರಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ರಕ್ಷಾಬಂಧನ ಹಬ್ಬವನ್ನು ಶ್ರಾವಣ ಹುಣ್ಣಿಮೆಯಂದು ಆಚರಿಸಲಾಗುತ್ತದೆ. 2024ರಲ್ಲಿ ರಕ್ಷಾಬಂಧನವನ್ನು ಸೋಮವಾರ, ಆಗಸ್ಟ್ 19ರಂದು ಆಚರಿಸಲಾಗುವುದು. ಈ ದಿನ ಸಹೋದರಿಯರು ತಮ್ಮ ಸಹೋದರರ ಆರತಿ ಬೆಳಗಿ, ಪ್ರೀತಿಯ ಪ್ರತೀಕವೆಂದು ರಾಖಿಯನ್ನು ಕಟ್ಟುತ್ತಾರೆ. ಸಹೋದರರು ಏನಾದರೂ ಒಂದು ವಸ್ತುವನ್ನು ಉಡುಗೊರೆಯಾಗಿ ನೀಡಿ ಆಶೀರ್ವಾದವನ್ನೂ ನೀಡುತ್ತಾರೆ. ಇದರ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಉದ್ದೇಶವಿರುತ್ತದೆ. ರಕ್ಷಾಬಂಧನದಿಂದ ಸಹೋದರ–ಸಹೋದರಿಯರ ನಡುವೆ ಪ್ರೀತಿ ಹೆಚ್ಚಾಗುವುದರೊಂದಿಗೆ ಅವರ ನಡುವೆ ಇರುವ ಕೊಡು–ಕೊಳ್ಳುವ ಲೆಕ್ಕಾಚಾರ ಕಡಿಮೆಯಾಗುತ್ತದೆ. ಈ ಹಬ್ಬವು ಇಬ್ಬರಿಗೂ ಈಶ್ವರನತ್ತ ಪ್ರಯಾಣಿಸುವ ಅವಕಾಶ ಒದಗಿಸುತ್ತದೆ. ಇತಿಹಾಸದ ಪುಟಗಳಲ್ಲಿ ರಕ್ಷಾಬಂಧನ: 1. ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡಳು ಮತ್ತು ನಾರಾಯಣನನ್ನು ಮುಕ್ತಗೊಳಿಸಿದಳು. ಆ ದಿನ ಶ್ರಾವಣ ಹುಣ್ಣಿಮೆ ಇತ್ತು. 2. ಇಂದ್ರ ಮತ್ತು ದೈತ್ಯರ ನಡುವೆ 12 ವರ್ಷಗಳಿಂದ ಘೋರ ಯುದ್ಧ ನಡೆದಿತ್ತು. ದೈತ್ಯರು ಗೆಲ್ಲುತ್ತಿದ್ದರು, ಇಂದ್ರನ ಶಕ್ತಿ ಕುಸಿಯುತ್ತಿತ್ತು. ಇಂದ್ರನು ಯುದ್ಧದಿಂದ ಹಿಂದೆ ಸರಿದು…

Read More

ತುಮಕೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಬರುವ ಹಾಗೂ ನಗರದಲ್ಲಿ ಓಡಾಡುವಂತಹ ಮಹಿಳೆಯರ ಮೈ ಮೇಲಿನ ಚಿನ್ನಾಭರಣಗಳನ್ನು ದೋಚಲು ಹೊಂಚು ಹಾಕುವ ಕಳ್ಳ ಕಾಕರ ಮೇಲೆ ಹದ್ದಿನ ಕಣ್ಣು ಇರಿಸುವ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಖುದ್ದು ತುಮಕೂರು ನಗರದ ರಸ್ತೆಗಳಲ್ಲಿ ತಮ್ಮ ಅಧಿಕಾರಿಗಳು ತಂಡದೊಂದಿಗೆ ಸಂಚರಿಸಿದರು. ಸಂಜೆಯ 6:30 ರಿಂದ ನಗರದ ಬದಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರೊಂದಿಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ ಚಂದ್ರಶೇಖರ್, ಸೇರಿದಂತೆ ಸಬ್ ಇನ್ಸ್ ಪೆಕ್ಟರ್ ಗಳು ,ಇನ್ಸ್ಪೆಕ್ಟರ್ ಗಳು ಕಾಲ್ನಡಿಗೆಯಲ್ಲಿ ಸಾಗಿದರು. ಬಿ.ಹೆಚ್. ರಸ್ತೆಯಲ್ಲಿರುವ ಮಹಾಲಕ್ಷ್ಮಿ ದೇಗುಲ ಸೇರಿದಂತೆ ವಿವಿಧ ದೇವಸ್ಥಾನಗಳ ಬಳಿ ಕಾಲ್ನಡಿಗೆಯಲ್ಲಿ ಸಾಗಿದ ಪೊಲೀಸ್ ವರಿಷ್ಠಾಧಿಕಾರಿ ಮಹಿಳೆಯರ ಚಿನ್ನಾಭರಣ ದೋಚುವ ಕಳ್ಳ ಕಾಕರಿಗೆ ಪರೋಕ್ಷವಾಗಿ ಬಿಸಿಮುಟ್ಟಿಸಿದರು. ವಿವಿಧ ದೇಗುಲಗಳ ಬಳಿ ತೆರಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ, ಚಿನ್ನಾಭರಣವನ್ನು ಹಾಕಿಕೊಂಡು ಓಡಾಡುತ್ತಿದ್ದ ಮಹಿಳೆಯರನ್ನು ಕರೆಸಿ ಜಾಗ್ರತೆಯಿಂದ ಇರುವಂತೆ ಸೂಚಿಸಿದರು. ಇನ್ನು ಸಂಚಾರಿ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದ ದ್ವಿಚಕ್ರ ವಾಹನ…

Read More

ತುಮಕೂರು: ನಗರದ ಸರಕಾರಿ ಪ್ರವಾಸಿ ಮಂದಿರದಲ್ಲಿ ಸಂಸದ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಕಚೇರಿ ಉಪಯೋಗಕ್ಕೆ ನೀಡಿ ಹೊರಡಿಸಲಾಗಿದ್ದ ಆದೇಶವನ್ನು ಹಿಂಪಡೆದಿರುವುದರಲ್ಲಿ ರಾಜಕೀಯ ಕೈವಾಡವಿದೆ ಎಂದು ವಿಧಾನಸಭೆ ಜೆಡಿಎಸ್ ವಿರೋಧಪಕ್ಷದ ನಾಯಕ ಸುರೇಶ್ ಬಾಬು ಅನುಮಾನ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಆದೇಶ ವಾಪಸ್ ಪಡೆದಿರುವುದರಲ್ಲಿ ರಾಜಕೀಯ ಅಡಗಿದೆಯೇ, ಅಥವಾ ಕಚೇರಿಯನ್ನು ಕೊಟ್ಟು ಅದನ್ನು ವಾಪಸ್ ಪಡೆಯುವುದು ಒಂದು ದಂಧೆಯಾಗಿದೆಯೇ ಎಂದು ಅನುಮಾನ ವ್ಯಕ್ತವಾಗಿದೆ. ಸರಕಾರ ಒಂದು ನಿಯಮ ಇಟ್ಟುಕೊಂಡಿರಬೇಕು, ಇದ್ರಲ್ಲಿ ಕೈವಾಡವಿದೆಯೆ ಎಂದು ಅನುಮಾನ ಮೂಡಿದೆ. ಇದ್ರಲ್ಲಿ ರಾಜಕೀಯ ಬೆರೆಸದೆ ಗೌರವಯುತವಾಗಿ ಸರಕಾರ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸಂಸದರು ಮತ್ತು ಸಚಿವರಾಗಿರುವ ವಿ.ಸೋಮಣ್ಣ ಸರಕಾರದ ಒಂದು ಅಂಗವಾಗಿದ್ದಾರೆ. ಈ ಸ್ಥಳವು ಸಂಸದರ ಕಚೇರಿಗೆ ಸಹಕಾರಿಯಾಗಿತ್ತು. ಸರಕಾರಿ ಐಬಿ ಬಳಕೆಯಲ್ಲಿರಲಿಲ್ಲ. ಏನೂ ಕೂಡ ಉಪಯೋಗ ಆಗುತ್ತಿರಲಿಲ್ಲ. ಶಿಥಿಲಗೊಂಡಿತ್ತು. ಜಿಲ್ಲಾಧಿಕಾರಿಗಳು ಗುರುತಿಸಿ, ಸರಕಾರದ ಆದೇಶದ ಮೇರೆಗೆ ಲೋಕಸಭೆ ಸದಸ್ಯರು ಮತ್ತು ಕೇಂದ್ರದ ಸಚಿವರಿಗೆ ಕಚೇರಿಗೆ ಉಪಯೋಗಿಸಲು ಆದೇಶ ಹೊರಡಿಸಲಾಗಿತ್ತು…

Read More

ತುಮಕೂರು: ಕೋಲ್ಕತ್ತಾದಲ್ಲಿ ನಡೆದ ವೈದ್ಯೆಯ ಮೇಲೆ ಅತ್ಯಾಚಾರ ಕೊಲೆ ಪ್ರಕರಣವನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆ ತುಮಕೂರು ಜಿಲ್ಲೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ಓಪಿಡಿ ಬಂದ್ ತುರ್ತು ಚಿಕಿತ್ಸೆ ಸೇವೆ ಮಾತ್ರ ನೀಡಲು ನಿರ್ಧಾರಿಸಲಾಗಿದೆ. ಭಾರತಿಯ ವೈದ್ಯಕೀಯ ಸಂಘದಿಂದ ಓಪಿಡಿ ಬಂದ್ ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ಓಪಿಡಿ ಬಂದ್ ಮಾಡಿ ಮುಷ್ಕರಕ್ಕೆ ಬೆಂಬಲ ನೀಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಕೊರಟಗೆರೆ: ಮಾಜಿ ಮುಖ್ಯಮಂತ್ರಿ ದಿವಗಂತ ಡಿ.ದೇವರಾಜ ಅರಸುರವರ 109ನೇ ಜನ್ಮ ದಿನಾಚರಣೆಯನ್ನು ತಾಲ್ಲೂಕು ಮಟ್ಟದಲ್ಲಿ ಆಚರಿಸಲು ಪೂರ್ವ ಭಾವಿ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಗುತ್ತು. ದಿನಾಂಕ : 20.08.2024 ರಂದು ಕೊರಟಗೆರೆ ತಾಲ್ಲೂಕು ಕಛೇರಿಯ ನ್ಯಾಯಾಲಯದ ಸಭಾಂಗಣದಲ್ಲಿ ಬೆಳಿಗ್ಗೆ 9:30 ಗಂಟೆಗೆ ಶ್ರೀ ದಿವಂಗತ ಡಿ.ದೇವರಾಜ ಅರಸು ರವರ ಜನ್ಮ ದಿನಾಚರಣೆಯನ್ನು ಆಚರಿಸಲು ತೀರ್ಮಾನಿಸಲಾಗಿದೆ. ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ಸಂಘ ಸಂಸ್ಥೆಯ ಮುಖ್ಯಸ್ಥರುಗಳು, ಜನಾಂಗದ ಮುಖ್ಯಸ್ಥರುಗಳು ಮತ್ತು ಪತ್ರಿಕಾ/ಮಾಧ್ಯಮ ವರದಿಗಾರರು ಹಾಗೂ ಸಾರ್ವಜನಿಕರು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೊರಟಗೆರೆ ತಹಶೀಲ್ದಾರ್ ಮಂಜುನಾಥ್ ಕೆ. ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅನಂತ ರಾಜು ಆರ್ ಪತ್ರಿಕಾ ಪ್ರಕಟಣೆಯಲ್ಲಿ ಆಹ್ವಾನಿಸಿದ್ದಾರೆ. ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಈ ಬಾರಿ ಕನ್ನಡ ಚಿತ್ರರಂಗಕ್ಕೆ ಹಲವು ಪ್ರಶಸ್ತಿಗಳು ಅರಸಿ ಬಂದಿದೆ. ಕಾಂತಾರ ನಟ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದ್ರೆ, ಅತ್ಯುತ್ತಮ ಕನ್ನಡ ಚಿತ್ರದ ರಾಷ್ಟ್ರೀಯ ಪ್ರಶಸ್ತಿ ಕೆಜಿಎಫ್​-2ಗೆ ಲಭಿಸಿದೆ. ಕೇಂದ್ರ ಸರ್ಕಾರದ ವಾರ್ತಾ, ಪ್ರಸಾರ ಇಲಾಖೆಯಿಂದ ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾಗಿದೆ. 2022ರ ಜನವರಿ 1 ರಿಂದ ಡಿಸೆಂಬರ್ 31ರವರೆಗೆ ಬಿಡುಗಡೆಯಾದ ಚಲನ ಚಿತ್ರಗಳಿಗೆ ಇಂದು ಪ್ರಶಸ್ತಿಗಳನ್ನು ಘೋಷಿಸಿದ್ದು, ಈ ಬಾರಿಯೂ ಸಹ ದಕ್ಷಿಣ ಭಾರತ ಚಿತ್ರರಂಗವೇ ಮೇಲುಗೈ ಸಾಧಿಸಿದೆ. ಹಲವು ಪ್ರಮುಖ ಪ್ರಶಸ್ತಿಗಳನ್ನು ದಕ್ಷಿಣ ಭಾರತ ಚಿತ್ರರಂಗ ಬಾಚಿಕೊಂಡಿದೆ. ಅತ್ಯುತ್ತಮ ನಟ ಮತ್ತು ನಟಿ, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶಕ ಅಂಥಹಾ ಪ್ರಮುಖ ಪ್ರಶಸ್ತಿಗಳು ದಕ್ಷಿಣ ಭಾರತ ಚಿತ್ರರಂಗದ ಪಾಲಾಗಿವೆ. ಫೀಚರ್ ಫಿಲಂ ಕ್ಯಾಟಗರಿಯಲ್ಲಿ ಬರೋಬ್ಬರಿ 32 ಭಾಷೆಗಳ 309 ಸಿನಿಮಾಗಳು ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದವು. ಫೀಚರ್ ಸಿನಿಮಾ ಕ್ಯಾಟಗರಿಯಲ್ಲಿ 27 ಪ್ರಶಸ್ತಿಗಳನ್ನು ನೀಡಲಾಗಿದ್ದು, ಪ್ರತಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸಿನಿಮಾ,…

Read More

ಕೊಲ್ಕತ್ತಾದಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಇಂದು(ಆಗಸ್ಟ್ 17) ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪ್ರತಿಭಟನೆಗೆ ಕರೆ ಕೊಟ್ಟಿದೆ. ಐಎಂಎ ಕೊಟ್ಟಿರುವ ಕರೆಗೆ ಸರ್ಕಾರಿ ವೈಧ್ಯಾದಿಕಾರಿಗಳ ಸಂಘ, ಖಾಸಗಿ ಆಸ್ಪತ್ರೆ ಗಳ ಒಕ್ಕೂಟ ಮತ್ತು ಹಲವು ವೈದ್ಯಕೀಯ ಅಸೋಸಿಯೇಷನ್​​​ಗಳು ಬೆಂಬಲ ಕೊಟ್ಟಿದ್ದು, ಶನಿವಾರ ಕರ್ನಾಟಕದಲ್ಲಿ ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೂ ಆಸ್ಪತ್ರೆ ಓಪಿಡಿ ಬಂದ್ ಆಗಲಿದೆ. ಅಂದರೆ 24 ಗಂಟೆಗಳ ಕಾಲ ಓಪಿಡಿ ಸೇವೆ ಸ್ಥಗಿತವಾಗಲಿದೆ. ಇದರಿಂದ ಮಕ್ಕಳು, ವಯಸ್ಸಾದವರಿಗೂ ಓಪಿಡಿ ಸೇವೆ ಇರುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಿಬೇಕಾಗಿದೆ. ಮುಷ್ಕರಕ್ಕೆ ಯಾರೆಲ್ಲ ಬೆಂಬಲ..! IMA ವ್ಯಾಪ್ತಿಯ ವೈದ್ಯರ ಬೆಂಬಲ ಫನಾ ಬೆಂಬಲ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಸರ್ಕಾರಿ ವೈದ್ಯಾಧಿಕಾರಿಗಳ ಅಸೋಸಿಯೇಷನ್ ಮಕ್ಕಳ ವೈದ್ಯರ ಅಸೋಸಿಯೇಷನ್ ಅರ್ಥೋಪಿಟಿಕ್ ಅಸೋಸಿಯೇಷನ್ ಮೆಡಿಕಲ್ ಕಾಲೇಜ್ ವೈದ್ಯರ ಅಸೋಸಿಯೇಷನ್ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಕೊಲ್ಕತ್ತಾದ ಮೃತ ವೈದ್ಯೆಯ ಸಾವಿಗೆ ನ್ಯಾಯ ಒದಗಿಸಬೇಕು. ಹಿಂಸಾಚಾರದ ವಿರುದ್ಧ ವೈದ್ಯರಿಗೆ ರಕ್ಷಣೆ ಒದಗಿಸಬೇಕು.…

Read More

ಕೇಂದ್ರ ಕುಟುಂಬ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಕಲ್ಯಾಣದ ಸಮೀಕ್ಷೆಯು ಭಾರತದ ರಾಜ್ಯಗಳಲ್ಲಿ ಮದ್ಯ ಬಳಕೆದಾರರ ಸಂಖ್ಯೆಯ ಬಗ್ಗೆ ಹಲವಾರು ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಿದೆ. ಈ ಅಧ್ಯಯನದಲ್ಲಿ, ಆಲ್ಕೋಹಾಲ್ ಸೇವಿಸುವ ಜನರನ್ನು ಪುರುಷರು ಮತ್ತು ಮಹಿಳೆಯರು ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಆಶ್ಚರ್ಯಕರವಾಗಿ, ಭಾರತದಲ್ಲಿ, ನಗರಗಳಲ್ಲಿ ವಾಸಿಸುವವರಿಗಿಂತ ಹಳ್ಳಿಗಳಲ್ಲಿ ವಾಸಿಸುವ ಜನರು ಹೆಚ್ಚು ಮದ್ಯ ಸೇವಿಸುತ್ತಾರೆ. ಭಾರತದಲ್ಲಿ, 15 ವರ್ಷಕ್ಕಿಂತ ಮೇಲ್ಪಟ್ಟ 18.7% ಪುರುಷರು ಮತ್ತು 1.3% ಮಹಿಳೆಯರು ಮದ್ಯವ್ಯಸನಿಗಳು, ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಾಗಿ ವಿಂಗಡಿಸಿದರೆ, ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಮಹಿಳೆಯರಲ್ಲಿ 1.6% ಮದ್ಯವ್ಯಸನಿಗಳು ಮತ್ತು 0.6% ನಗರ ಮಹಿಳೆಯರು ಮದ್ಯವ್ಯಸನಿಗಳು. . ಪುರುಷರಿಗೆ ಸಂಬಂಧಿಸಿದಂತೆ, ನಗರ ಪುರುಷರಲ್ಲಿ 16.5% ಮತ್ತು ಗ್ರಾಮೀಣ ಪುರುಷರಲ್ಲಿ 19.9% ಮದ್ಯಪಾನ ಮಾಡುತ್ತಾರೆ. ರಾಜ್ಯಗಳಾಗಿ ವಿಂಗಡಿಸಿದಾಗ ಅರುಣಾಚಲ ಪ್ರದೇಶವು ಭಾರತದಲ್ಲಿ ಅತಿ ಹೆಚ್ಚು ಪುರುಷ ಕುಡುಕರನ್ನು ಹೊಂದಿರುವ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಶೇ.52.6ರಷ್ಟು ಪುರುಷರು ಮದ್ಯವ್ಯಸನಿಗಳಾಗಿದ್ದಾರೆ. ನಂತರದ ಸ್ಥಾನದಲ್ಲಿ…

Read More