ತುಮಕೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಬರುವ ಹಾಗೂ ನಗರದಲ್ಲಿ ಓಡಾಡುವಂತಹ ಮಹಿಳೆಯರ ಮೈ ಮೇಲಿನ ಚಿನ್ನಾಭರಣಗಳನ್ನು ದೋಚಲು ಹೊಂಚು ಹಾಕುವ ಕಳ್ಳ ಕಾಕರ ಮೇಲೆ ಹದ್ದಿನ ಕಣ್ಣು ಇರಿಸುವ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಖುದ್ದು ತುಮಕೂರು ನಗರದ ರಸ್ತೆಗಳಲ್ಲಿ ತಮ್ಮ ಅಧಿಕಾರಿಗಳು ತಂಡದೊಂದಿಗೆ ಸಂಚರಿಸಿದರು.
ಸಂಜೆಯ 6:30 ರಿಂದ ನಗರದ ಬದಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರೊಂದಿಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ ಚಂದ್ರಶೇಖರ್, ಸೇರಿದಂತೆ ಸಬ್ ಇನ್ಸ್ ಪೆಕ್ಟರ್ ಗಳು ,ಇನ್ಸ್ಪೆಕ್ಟರ್ ಗಳು ಕಾಲ್ನಡಿಗೆಯಲ್ಲಿ ಸಾಗಿದರು.
ಬಿ.ಹೆಚ್. ರಸ್ತೆಯಲ್ಲಿರುವ ಮಹಾಲಕ್ಷ್ಮಿ ದೇಗುಲ ಸೇರಿದಂತೆ ವಿವಿಧ ದೇವಸ್ಥಾನಗಳ ಬಳಿ ಕಾಲ್ನಡಿಗೆಯಲ್ಲಿ ಸಾಗಿದ ಪೊಲೀಸ್ ವರಿಷ್ಠಾಧಿಕಾರಿ ಮಹಿಳೆಯರ ಚಿನ್ನಾಭರಣ ದೋಚುವ ಕಳ್ಳ ಕಾಕರಿಗೆ ಪರೋಕ್ಷವಾಗಿ ಬಿಸಿಮುಟ್ಟಿಸಿದರು.
ವಿವಿಧ ದೇಗುಲಗಳ ಬಳಿ ತೆರಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ, ಚಿನ್ನಾಭರಣವನ್ನು ಹಾಕಿಕೊಂಡು ಓಡಾಡುತ್ತಿದ್ದ ಮಹಿಳೆಯರನ್ನು ಕರೆಸಿ ಜಾಗ್ರತೆಯಿಂದ ಇರುವಂತೆ ಸೂಚಿಸಿದರು.
ಇನ್ನು ಸಂಚಾರಿ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಕಂಡ ಅವರು ಸ್ಥಳದಲ್ಲಿಯೇ ಇದ್ದ ಸಂಚಾರಿ ಪೊಲೀಸರಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದರು.
ಇನ್ನು ರಸ್ತೆಗಳಲ್ಲಿ ಗುಂಡಿಗಳು ಇರುವುದನ್ನು ಗಮನಿಸಿದ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ರಸ್ತೆ ದುರಸ್ತಿ ಪಡಿಸುವಂತೆ ಮನವಿ ಮಾಡಿಕೊಳ್ಳಬೇಕೆಂದು ಸಂಚಾರಿ ಪೊಲೀಸರಿಗೆ ಸೂಚನೆ ನೀಡಿದರು.ಅಲ್ಲದೆ ಭದ್ರಮ್ಮ ಚೌಲ್ಟ್ರಿ ವೃತ್ತದ ಬಳಿ ಜೀಬ್ರಾ ಕ್ರಾಸ್ ಸಂಚಾರಿ ಪೊಲೀಸರಿಗೆ ತಕ್ಷಣ ಸೂಚಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q